Tag: ಊಟ

  • ನೀವು ಯಾರು..? ನಾನು ಯಾಕೆ ಇಲ್ಲಿದ್ದೇನೆ..? ಜೈಲು ಸಿಬ್ಬಂದಿಗೆ ರವಿ ಬೆಳಗೆರೆ ಪ್ರಶ್ನೆ

    ನೀವು ಯಾರು..? ನಾನು ಯಾಕೆ ಇಲ್ಲಿದ್ದೇನೆ..? ಜೈಲು ಸಿಬ್ಬಂದಿಗೆ ರವಿ ಬೆಳಗೆರೆ ಪ್ರಶ್ನೆ

    ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣದಲ್ಲಿ 14 ದಿನಗಳ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆ ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದಿದ್ದಾರೆ. ಜೈಲು ಸಿಬ್ಬಂದಿ ಬಳಿ ನೀವು ಯಾರು..ನಾನು ಯಾಕೆ ಇಲ್ಲಿದ್ದೇನೆ ಅಂತಾ ರವಿ ಬೆಳಗೆರೆ ಪ್ರಶ್ನಿಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ.

    ರವಿ ಬೆಳಗೆರೆ ಅವರಿಗೆ 12785 ಕೈದಿ ನಂಬರ್ ಕೊಡಲಾಗಿದ್ದು, 3ನೇ ಬ್ಯಾರಕ್ ನ ಒಂದನೇ ಕೊಠಡಿಯನ್ನು ನೀಡಲಾಗಿದೆ. ಆದರೆ ರವಿ ಬೆಳಗೆರೆ ಬಿಪಿ, ಶುಗರ್‍ನಿಂದ ಬಳಲುತ್ತಿದ್ದು, ಅವರನ್ನು ಪರಪ್ಪನ ಅಗ್ರಹಾರದ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿ ಬೆಳಗೆರೆಯವರಿಗೆ ಮನೆಯಿಂದ ಊಟ ತರಿಸಲು ಅವಕಾಶ ನೀಡಲಾಗಿದೆ. ಸೋಮವಾರ ರಾತ್ರಿ ಮನೆಯಿಂದಲೇ ತಂದಿದ್ದ ರಾಗಿ ಮುದ್ದೆ, ತರಕಾರಿ ಸಾಂಬಾರ್ ನೀಡಲಾಗಿತ್ತು. ಸುರಕ್ಷತೆ ಹಾಗೂ ಭದ್ರತೆ ದೃಷ್ಠಿಯಿಂದ ಮುನ್ನೆಚ್ಚರಿಕೆಯಾಗಿ ಬ್ಯಾರಕ್ ನ ಸುತ್ತಮುತ್ತ ಬಂದೋಬಸ್ತ್ ಮಾಡಲಾಗಿದೆ.

    ಇನ್ನು ಕಳೆದ ರಾತ್ರಿ ಪುತ್ರಿ ಚೇತನ ಬೆಳಗೆರೆ ಮಾತ್ರೆ ಹಾಗೂ ಔಷಧಿ ನೀಡಿ ಮನೆಗೆ ತೆರಳಿದ್ದಾರೆ. ಆದ್ರೆ ಪರಪ್ಪನ ಅಗ್ರಹಾರ ಸೇರಿದ ಬಳಿಕ ರವಿ ಬೆಳಗೆರೆ ಡಿಪ್ರೆಶನ್‍ಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ರವಿ ಬೆಳಗೆರೆ ಜಾಮೀನಿಗೆ ಅರ್ಜಿ ಸಲ್ಲಿಸೋದಾಗಿ ವಕೀಲ ದಿವಾಕರ್ ಹೇಳಿದ್ದಾರೆ.

    ಇದನ್ನೂ ಓದಿ: ರವಿ ಬೆಳಗೆರೆಗೆ ಜಾಮೀನು ಮಂಜೂರು ಮಾಡದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ನೀಡಿದ 10 ಕಾರಣಗಳು ಇಲ್ಲಿವೆ…

  • ಮೇಲ್ಜಾತಿಯ ನಾಯಕರು ತಟ್ಟೆಯಲ್ಲಿ, ದಲಿತ ಬಿಜೆಪಿ ಎಂಎಲ್‍ಎ ಎಲೆಯಲ್ಲಿ ಊಟ- ಫೋಟೋ ವೈರಲ್

    ಮೇಲ್ಜಾತಿಯ ನಾಯಕರು ತಟ್ಟೆಯಲ್ಲಿ, ದಲಿತ ಬಿಜೆಪಿ ಎಂಎಲ್‍ಎ ಎಲೆಯಲ್ಲಿ ಊಟ- ಫೋಟೋ ವೈರಲ್

    ಭೋಪಾಲ್: ಮಧ್ಯಪ್ರದೇಶದಲ್ಲಿ ರವಿವಾರ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಂವಲನವನ್ನೇ ಉಂಟು ಮಾಡಿದೆ. ಕಾರ್ಯಕ್ರಮದಲ್ಲಿ ಮೇಲು ಜಾತಿಯ ನಾಯಕರು ಸ್ಟೀಲ್ ತಟ್ಟೆಯಲ್ಲಿ ಊಟ ಮಾಡುತ್ತಿದ್ದರೆ, ಪಕ್ಕದಲ್ಲಿಯೇ ಬಿಜೆಪಿಯ ದಲಿತ ಶಾಸಕರೊಬ್ಬರು ಎಲೆಯಲ್ಲಿ ಊಟ ಮಾಡುತ್ತಿದ್ದಾರೆ.

    ಫೋಟೋದಲ್ಲಿ ಏನಿದೆ?: ವೈರಲ್ ಫೋಟೋದಲ್ಲಿ ಮಧ್ಯಪ್ರದೇಶ ಸಾರಿಗೆ ಸಚಿವ ಭೂಪೇಂದ್ರ ಸಿಂಗ್ ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ತೋರಣ್ ಸಿಂಗ್ ಇಬ್ಬರೂ ಸ್ಟೀಲ್ ತಟ್ಟೆಯಲ್ಲಿ ಭೋಜನ ಸೇವಿಸುತ್ತಿದ್ದಾರೆ. ಇತ್ತ ಇವರ ಪಕ್ಕವೇ ಕುಳಿತ ಶಾಸಕ ಗೋಪಿಲಾಲ್ ಎಲೆಯಲ್ಲಿ ಊಟ ಮಾಡುತ್ತಿದ್ದಾರೆ.

    ಎಲೆಯಲ್ಲಿ ಊಟ ಮಾಡಿದ ಬಿಜೆಪಿ ದಲಿತ ಶಾಸಕ ಗೋಪಿಲಾಲ್ ಜಟವಾ, ಫೋಟೋ ವೈರಲ್ ಆಗಿರುವುದು ‘ರಾಜಕೀಯ ಕುತಂತ್ರ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಕಾರ್ಯಕರ್ತರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ದಿಢೀರ್ ಅಂತಾ ತೋರಣ್ ಸಿಂಗ್ ಆಗಮಿಸಿದರು. ಊಟಕ್ಕೆ ಕುಳಿತಾಗ ಆಯೋಜಕರು ಕೇವಲ ಎರಡು ತಟ್ಟೆಗಳನ್ನು ಇರಿಸಿದ್ರು. ತೋರಣ್ ಸಿಂಗ್ ನಮಗೆ ಅತಿಥಿಯಾಗಿದ್ದರಿಂದ ನನ್ನ ತಟ್ಟೆಯನ್ನು ಅವರಿಗೆ ನೀಡಿ, ನಾನು ಎಲೆಯಲ್ಲಿ ಊಟ ಮಾಡಿದೆ. ಎಲೆಯಲ್ಲಿ ಕೇವಲ ನಾನೊಬ್ಬನೇ ಅಲ್ಲ, ಎಲ್ಲ ಕಾರ್ಯಕರ್ತರು ಮತ್ತು ಅಧಿಕಾರಿಗಳು ಊಟ ಮಾಡಿದ್ದಾರೆ ಎಂದು ಗೋಪಿಲಾಲ್ ಸ್ಪಷ್ಟನೆ ನೀಡಿದ್ದಾರೆ.

    ನಮ್ಮ ಪಕ್ಷ ಮತ್ತು ಆರ್‍ಎಸ್‍ಎಸ್ ಸಂಘಟನೆ ನಮಗೆ ‘ಅತಿಥಿ ದೇವೋ ಭವಃ’ ಎಂದು ಕಲಿಸಿದೆ. ಹಾಗಾಗಿ ಅತಿಥಿಯಾಗಿ ಬಂದ ತೋರಣ್ ಸಿಂಗ್ ಅವರಿಗೆ ತಟ್ಟೆ ನೀಡಬೇಕಾಯಿತು ಎಂದು ಗೋಪಿಲಾಲ್ ಹೇಳಿದ್ದಾರೆ.

  • ದಿ. ಶಾಸಕ ಚಿಕ್ಕಮಾದು ಶ್ರದ್ಧಾಂಜಲಿಗೆ ಮಾಡಿದ್ದ ಊಟ ಕೊಳೆತು ವ್ಯರ್ಥ – ಮೈಸೂರಲ್ಲಿ 3 ದಿನದಿಂದ ದುರ್ವಾಸನೆ

    ದಿ. ಶಾಸಕ ಚಿಕ್ಕಮಾದು ಶ್ರದ್ಧಾಂಜಲಿಗೆ ಮಾಡಿದ್ದ ಊಟ ಕೊಳೆತು ವ್ಯರ್ಥ – ಮೈಸೂರಲ್ಲಿ 3 ದಿನದಿಂದ ದುರ್ವಾಸನೆ

    ಮೈಸೂರು: ದಿವಂಗತ ಶಾಸಕ ಚಿಕ್ಕಮಾದು ಶ್ರದ್ಧಾಂಜಲಿ ಆಚರಣೆಯಲ್ಲಿ ಆಯೋಜಕರು ಎಡವಟ್ಟು ಮಾಡಿದ್ದಾರೆ. ನಾಯಕನ ನೆನಪಿಗೆ ಭರ್ಜರಿ ಊಟ ತಯಾರಿಸಿದ್ದ ಆಯೋಜಕರು ಉಳಿದ ಅನ್ನವನ್ನ ಯಾರಿಗೂ ನೀಡದೆ ಗಬ್ಬೆದ್ದು ನಾರುವಂತೆ ಮಾಡಿದ್ದಾರೆ.

    ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನ.28 ರಂದು ಶ್ರದ್ಧಾಂಜಲಿ ಸಭೆ ನಡೆದಿತ್ತು. ಇದಕ್ಕಾಗಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ನಿರೀಕ್ಷೆಯಂತೆ ಅಭಿಮಾನಿಗಳು ಬಾರದ ಹಿನ್ನೆಲೆಯಲ್ಲಿ ಮಾಡಿದ ಅಡುಗೆಯೆಲ್ಲ ಹಾಗೆ ಉಳಿದಿತ್ತು. ಉಳಿದ ಊಟವನ್ನ ಆಯೋಜಕರು ಸಮುದಾಯ ಭವನವದಲ್ಲೆ ಬಿಟ್ಟು ಹೋಗಿದ್ದು, ಇದೀಗ ಸಮುದಾಯ ಭವನವೆಲ್ಲ ಹಳಸಿದ ಆಹಾರದಿಂದ ದುರ್ವಾಸನೆ ಬೀರುತ್ತಿದೆ.

    ಎರಡು ಮೂರು ದಿನದಿಂದ ಊಟವೆಲ್ಲ ಕೊಳೆತು ದುರ್ವಾಸನೆ ಬರುತ್ತಿದ್ದು, ಸಮುದಾಯ ಭವನದ ಸುತ್ತ ಜನ ಮೂಗುಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮುಖಂಡರು ಈವರೆಗೂ ಆಹಾರ ತೆರವುಗೊಳಿಸಿಲ್ಲ.

  • ಊಟ ತಡವಾಗಿ ತಂದ ಪತ್ನಿಯನ್ನ ಗಡಾರಿಯಿಂದ ಇರಿದು ಕೊಂದೇ ಬಿಟ್ಟ!

    ಊಟ ತಡವಾಗಿ ತಂದ ಪತ್ನಿಯನ್ನ ಗಡಾರಿಯಿಂದ ಇರಿದು ಕೊಂದೇ ಬಿಟ್ಟ!

    ಚಿಕ್ಕಬಳ್ಳಾಪುರ: ಹಳೆಯ ಮನೆಯನ್ನ ಕೆಡವುತ್ತಿದ್ದ ವೇಳೆ ಊಟ ತಡವಾಗಿ ತಂದಿದ್ದಕ್ಕೆ ಕೈಯಲ್ಲಿದ್ದ ಕಬ್ಬಿಣ ಗಡಾರಿಯಿಂದಲೇ ಕುತ್ತಿಗೆಗೆ ಇರಿದು ಗಂಡನೇ ಹೆಂಡತಿಯನ್ನ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಮ್ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    26 ವರ್ಷದ ಅಮೃತಾ ಕೊಲೆಯಾದ ಮಹಿಳೆ. 30 ವರ್ಷದ ನಾಗರಾಜ್ ಕೊಲೆ ಮಾಡಿದ ಪಾಪಿ ಪತಿ. ಅಮೃತಾಳನ್ನ ಪ್ರೀತಿಸಿ ಮದುವೆಯಾಗಿದ್ದ ನಾಗರಾಜ್ ಪತ್ನಿಯ ಮನೆಯಲ್ಲೇ ವಾಸವಾಗಿದ್ದನು. ಇನ್ನೂ ಇಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿ 6 ವರ್ಷದ ಹೆಣ್ಣು ಮಗಳು ಹಾಗೂ 3 ವರ್ಷದ ಗಂಡು ಮಗನಿದ್ದಾನೆ.

    ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ನಾಗರಾಜ್ ಸಣ್ಣ ಪುಟ್ಟ ವಿಚಾರಕ್ಕೂ ಪದೇ ಪದೇ ಕ್ಯಾತೆ ತೆಗೆದು ಅಮೃತಾ ಜೊತೆ ಜಗಳ ಮಾಡುತ್ತಿದ್ದನು. ಇಂದು ಸರ್ಕಾರದಿಂದ ನೂತನ ಮನೆ ನಿರ್ಮಾಣಕ್ಕೆ ಹಣ ಮಂಜೂರಾದ ಕಾರಣ ಹಳೆಯ ಮನೆ ಕೆಡವಿ ಅದನ್ನ ಸ್ಬಚ್ಛಗೊಳಿಸಿ ಹೊಸ ಮನೆ ಕಟ್ಟಲು ನಿವೇಶನ ಅಣಿಗೊಳಿಸುತ್ತಿದ್ದನು. ಆದರೆ ಮನೆಯಿಂದ ಪತ್ನಿ ಅಮೃತಾ ಊಟ ತರೋದು ಸ್ವಲ್ಪ ತಡವಾಗಿದೆ.

    ಊಟ ತಡವಾಗಿ ತಂದಿದ್ದು ಯಾಕೆ ಅಮೃತ ನಾಗರಾಜ್ ಜೊತೆ ಜಗಳ ಆರಂಭಿಸಿದ್ದಾನೆ. ಕೊನೆಗೆ ಕೈಯಲ್ಲಿದ್ದ ಗಡಾರಿಯಿಂದಲೇ ಅಮೃತಾರ ಕುತ್ತಿಗೆಗೆ ಇರಿದಿದ್ದಾನೆ. ಅಮೃತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಬಳಿಕ ಪತಿ ನಾಗರಾಜ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಆರೋಪಿ ನಾಗರಾಜ್ ನ ಬಲೆಗಾಗಿ ವಿಶೇಷ ಬಲೆ ಬೀಸಿದ್ದಾರೆ.

  • ಊಟ ಚೆನ್ನಾಗಿಲ್ಲ ಎಂದು ದೂರಿದ್ದಕ್ಕೆ ಮುಖದ ಮೇಲೆ ಬಿಸಿ ಎಣ್ಣೆ ಎರಚಿದ

    ಊಟ ಚೆನ್ನಾಗಿಲ್ಲ ಎಂದು ದೂರಿದ್ದಕ್ಕೆ ಮುಖದ ಮೇಲೆ ಬಿಸಿ ಎಣ್ಣೆ ಎರಚಿದ

    ಮುಂಬೈ: ಚೈನೀಸ್ ಉಪಹಾರ ಗೃಹದಲ್ಲಿ ನೀಡಿದ ಊಟದ ರುಚಿ ಹಾಗೂ ಅದರ ಬೆಲೆಯ ವಿಚಾರವಾಗಿ ಮಾಲೀಕ ಮತ್ತು ಗ್ರಾಹಕನ ನಡುವೆ ವಾಗ್ವಾದ ನಡೆದು, ಅಲ್ಲಿನ ಸಿಬ್ಬಂದಿ ಗ್ರಾಹಕನ ಸಹೋದರನ ಮೇಲೆ ಬಿಸಿ ಎಣ್ಣೆ ಎರಚಿರುವ ಘಟನೆ ಮುಂಬೈನ ಉಲ್ಲಾಸ್‍ನಗರದ ವೀನಸ್ ಚೌಕ್‍ನಲ್ಲಿ ನಡೆದಿದೆ.

    ಇಲ್ಲಿನ ಮನೋಜ್ ಕೋಳಿವಾಡಾ ಚೈನೀಸ್ ಕಾರ್ನರ್ ಸಿಬ್ಬಂದಿ ದೀಪಕ್ ಎಂಬವರ ಮೇಲೆ ಬಿಸಿಯಾದ ಎಣ್ಣೆ ಎರಚಿದ್ದಾರೆ. ಪರಿಣಾಮ ದೀಪಕ್‍ಗೆ ಸುಟ್ಟ ಗಾಯಗಳಾಗಿವೆ.

    ಏನಿದು ಘಟನೆ: ಮಂಗಳವಾರ ರಾತ್ರಿ ಸುಮಾರು 11.30ರ ವೇಳೆಯಲ್ಲಿ ವಿಕ್ಕಿ ಮಾಸ್ಕೆ ತನ್ನ ಮೂವರು ಸ್ನೇಹಿತರೊಂದಿಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿದ ನಂತರ ವಿಕ್ಕಿ ಮೊದಲು ಊಟದ ರುಚಿಯ ಬಗ್ಗೆ ಮಾಲೀಕನಿಗೆ ದೂರಿದ್ದರು. ನಂತರ ಬಿಲ್ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ವಿಕ್ಕಿ ತನ್ನ ಸಹೋದರ ದೀಪಕ್ ಮಾಸ್ಕೆಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಯೊಬ್ಬ ದೀಪಕ್ ಮುಖದ ಮೇಲೆ ಬಿಸಿ ಎಣೆ ಎರಚಿದ್ದಾನೆ. ದೀಪಕ್ ಸ್ನೇಹಿತ ವಿಜಯ್ ಪಗಾರೆ ಎಂಬವರಿಗೂ ಹೊಟ್ಟೆಯ ಮೇಲೆ ಸುಟ್ಟ ಗಾಯಗಳಾಗಿದೆ. ಕೂಡಲೇ ಇಬ್ಬರನ್ನೂ ಉಲ್ಲಾಸ್‍ನಗರದ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಠಲ್‍ವಾಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಉಪಹಾರ ಗೃಹದ ಮಾಲೀಕನ ವಿರುದ್ಧ ಹಾಗೂ ಸಿಬ್ಬಂದಿಯ ವಿರುದ್ಧ ಐಪಿಸಿ ಸೆಕ್ಷನ್ 323, 324, 504 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದೇವೆ. ಸಂತ್ರಸ್ತ ವ್ಯಕ್ತಿಯ ಮೇಲೆ ಬಿಸಿ ಎಣ್ಣೆ ಎರಚಿರುವುದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಪೊಲೀಸರು ಹೇಳಿದ್ದಾರೆ.

  • ಬಿಬಿಎಂಪಿ ಸ್ಥಾಯಿಸಮಿತಿ ಚುನಾವಣೆ ರದ್ದು – 3 ಲಕ್ಷ ರೂ. ಭರ್ಜರಿ ಊಟ ವೇಸ್ಟ್

    ಬಿಬಿಎಂಪಿ ಸ್ಥಾಯಿಸಮಿತಿ ಚುನಾವಣೆ ರದ್ದು – 3 ಲಕ್ಷ ರೂ. ಭರ್ಜರಿ ಊಟ ವೇಸ್ಟ್

    ಬೆಂಗಳೂರು: ನಿಗಧಿಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ರದ್ದಾಗಿದ್ದು, ಚುನಾವಣೆಗಾಗಿ ಮಾಡಿಸಿದ್ದ 3 ಲಕ್ಷ ರೂ. ಊಟ ವೇಸ್ಟ್ ಆಗಿದೆ.

    ಬಿಜೆಪಿ ಸದಸ್ಯರು ಚುನಾವಣೆಗೆ ಹಾಜರಾಗಿಲ್ಲ ಅನ್ನೋ ಕಾರಣ ನೀಡಿ ಚುನಾವಣೆ ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಊಟ ಮಾಡೋಕೆ ಯಾರೂ ಇಲ್ಲದೆ ಊಟ ವೇಸ್ಟ್ ಆಗಿದೆ. ವಾಸ್ತವವಾಗಿ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಇನ್ನೂ ಒಮ್ಮತಕ್ಕೆ ಬಂದಿಲ್ಲ ಎನ್ನಲಾಗಿದೆ. ಇದರ ನಡುವೆ ಎಲೆಕ್ಷನ್‍ಗಾಗಿ ಬಿಬಿಎಂಪಿ ಮೂರು ಲಕ್ಷ ರೂ. ವ್ಯರ್ಥ ಮಾಡಿದೆ.

     

    ಚುನಾವಣೆಗಾಗಿ ಬಿಬಿಎಂಪಿ ಪೊಲೀಸ್ ಬಂದೋಬಸ್ತ್ ಸಹ ಪಡೆದಿತ್ತು. ಆದ್ರೆ ಚುನಾವಣೆಗೆ ಪೂರ್ವ ತಯಾರಿ ನಡೆಸದೆ ಸರ್ವಾಜನಿಕರ ಹಣ ಪೋಲು ಮಾಡಿದೆ.

    ಚುನಾವಣೆಗಾಗಿ 200 ಜನ ಬಾಣಸಿಗರಿಂದ ಭರ್ಜರಿ ಊಟ ತಯಾರು ಮಾಡಿಸಲಾಗಿತ್ತು. ವಾಂಗಿಬಾತ್, ಅನ್ನ, ಸಾಂಬರ್, ಅಕ್ಕಿರೊಟ್ಟಿ, ಬದನೆ ಕಾಯಿ ಎಣ್ಣೇಗಾಯಿ, ಮೊಸರನ್ನ, ಮೆಣಿಸಿನಕಾಯಿ ಬಜ್ಜಿ, ಹಪ್ಪಳ, ಪಾಯಸ ಹೀಗೆ ತರಾವರಿ ಅಡುಗೆ ಮಾಡಿಸಲಾಗಿತ್ತು.

  • 25.6 ಅಡಿ ಉದ್ದದ ಹೆಬ್ಬಾವನ್ನು ಕೊಂದು ಇಡೀ ಗ್ರಾಮದವರೇ ತಿಂದು ತೇಗಿದ್ರು!

    25.6 ಅಡಿ ಉದ್ದದ ಹೆಬ್ಬಾವನ್ನು ಕೊಂದು ಇಡೀ ಗ್ರಾಮದವರೇ ತಿಂದು ತೇಗಿದ್ರು!

    ಜಕರ್ತಾ: 25. 6 ಅಡಿ ಉದ್ದದ ಸತ್ತ ಹೆಬ್ಬಾವೊಂದನ್ನು ಇಡೀ ಗ್ರಾಮದವರು ತಿಂದಿರುವ ಅಚ್ಚರಿಯ ಘಟನೆ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ.

    ಬುಧವಾರ 37 ವರ್ಷದ ಸೆಕ್ಯೂರಿಟಿ ಗಾರ್ಡ್ ಹೆಬ್ಬಾವಿನೊಂದಿಗೆ ಸೆಣಸಾಡಿ ಅದನ್ನು ಕೊಂದಿದ್ದರು. ನಂತರ ಗ್ರಾಮಸ್ಥರು ಸತ್ತು ಬಿದ್ದಿದ್ದ ಹೆಬ್ಬಾವನ್ನು ಬಟ್ಟೆ ಒಣಗಲು ಹಾಕಲು ಕಟ್ಟುವ ತಂತಿಯಂತೆ ಕಟ್ಟಿದ್ದರು.

    ಅಷ್ಟೇ ಅಲ್ಲದೇ ಮಕ್ಕಳು ಹಾವಿನ ಬಾಲವನ್ನು ಹಿಡಿದು, ಅದರ ಮೇಲೆ ಕುಳಿತುಕೊಂಡು ಆಟವಾಡಿದ್ದರು. ಇದಾದ ಬಳಿಕ ಕೋಪಗೊಂಡಿದ್ದ ಗ್ರಾಮಸ್ಥರು ಹೆಬ್ಬಾವನ್ನು ಕತ್ತರಿಸಿ ಬಾಡೂಟ ಮಾಡಿ ತಿಂದು ತೇಗಿದ್ದಾರೆ.

    ನಂಬಲಾಗದಷ್ಟು ದೊಡ್ಡದಾದ ಹಾವನ್ನು ಸೆಕ್ಯೂರಿಟಿ ಗಾರ್ಡ್ ನಬಾಬನ್ ಅವರು ಕೊಂದಿದ್ದರು. ಹಾವಿನ ಜೊತೆ ಸೆಣಸಾಡುವಾಗ ಅವರ ಕೈಗಳನ್ನು ಹಾವು ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ಗ್ರಾಮಸ್ಥರು ನಬಾಬನಿಗೆ ಕಚ್ಚಿದ್ದಕ್ಕೆ ಕೋಪಗೊಂಡು ಈ ರೀತಿ ಅಡುಗೆ ಮಾಡಿಕೊಂಡು ತಿಂದಿದ್ದಾರೆ. ನಬಾಬನು ಕೂಡ ಹಾವನ್ನು ಕೊಂದು ತಿನ್ನಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಹೆಬ್ಬಾವಿನ ಜೊತೆಗಿನ ಕಾಳಗದಿಂದಾಗಿ ಆತ ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • 30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ

    30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ

    ಧಾರವಾಡ: 86 ವರ್ಷದ ಅಜ್ಜಿ ಸಾವಮ್ಮ ಕಳೆದ 30 ವರ್ಷಗಳಿಂದ ಉಚಿತವಾಗಿ ತಮ್ಮೂರು ಜಿರ್ಗವಾಡದ ಶಾಲೆಯ ಶಿಕ್ಷಕರಿಗೆ ಪ್ರತಿದಿನ ಉಚಿತವಾಗಿ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕಬೆಳ್ಳಿಕಟ್ಟಿಯವರಾದ ಸಾವಮ್ಮ ಮದುವೆಯಾದ ಮೇಲೆ ಧಾರವಾಡ ತಾಲೂಕಿನ ಜಿರ್ಗವಾಡ ಗ್ರಾಮಕ್ಕೆ ಬಂದಿದ್ದಾರೆ. ಸದ್ಯ 86 ವರ್ಷ ವಯಸ್ಸಾದರೂ ಉತ್ಸಾಹ ಕಡಿಮೆಯಾಗಿಲ್ಲ. ಶಿಕ್ಷಕರು ಅಂದರೆ ಬಹುವಾಗಿ ಗೌರವಿಸುವ ಸಾವಮ್ಮಜ್ಜಿ ಮೊದಲಿಗೆ ಈ ಶಾಲೆಯ ಶಿಕ್ಷಕರಿಗೆ ಊಟ ಕಳಿಸಿಯೇ ಮುಂದಿನ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತಾವೇ ಶಾಲೆಗೆ ಹೋಗಿ ಶಿಕ್ಷಕರಿಗೆ ಊಟ ಬಡಿಸಿ ಬರುತ್ತಾರೆ.

    ಶಿಕ್ಷಕರು ಎಂದರೆ ಮಕ್ಕಳು ಎನ್ನುವ ಅಜ್ಜಿ, ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಮೊದಲ ಬೆಳೆಯನ್ನ ಶಿಕ್ಷಕರಿಗೆ ನೀಡುತ್ತಾರೆ. ಅಜ್ಜಿ ಬಗ್ಗೆ ಶಾಲೆಯ ಶಿಕ್ಷಕರಿಗೂ ಅಷ್ಟೇ ಗೌರವ. ಮನೆಯಿಂದ ಊಟ ತಂದರೂ ಅಜ್ಜಿಯ ಕೈತುತ್ತು ತಿಂದರೆ ಸಮಾಧಾನ. ಅಜ್ಜಿ ನಿಜಕ್ಕೂ ಅನ್ನಪೂರ್ಣೇಶ್ವರಿ ಅಂತ ಶಾಲೆಯ ಶಿಕ್ಷಕರು ಹೊಗಳುತ್ತಾರೆ.

    ಅಜ್ಜಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ನಿಧನರಾಗಿದ್ದಾರೆ. ಮತ್ತೊಬ್ಬ ಮಗ ಕೃಷಿಕರಾಗಿದ್ದಾರೆ. ಮನೆಯಲ್ಲಿ ಪ್ರತಿ ದಿನ ಶಿಕ್ಷಕರಿಗೆ ಅಡುಗೆ ಮಾಡುವ ಸೊಸೆಯಂದಿರೂ ಕೂಡಾ ಯಾವತ್ತೂ ಊಟ ಕಳಿಸೋಕೆ ಬೇಸರ ಮಾಡಿಕೊಂಡಿಲ್ಲ.

     

  • 2 ರೂ.ಗೆ ಟೀ, ಕಾಫಿ,-5 ರೂ.ಗೆ ತಿಂಡಿ, ಊಟ-ಇದು ಸ್ವಾಮಿ ಕ್ಯಾಂಟೀನ್ ಸ್ಪೆಷಲ್

    2 ರೂ.ಗೆ ಟೀ, ಕಾಫಿ,-5 ರೂ.ಗೆ ತಿಂಡಿ, ಊಟ-ಇದು ಸ್ವಾಮಿ ಕ್ಯಾಂಟೀನ್ ಸ್ಪೆಷಲ್

    ಕೋಲಾರ: ರಾಜ್ಯದಲ್ಲಿ ಕ್ಯಾಂಟೀನ್ ಪೊಲಿಟಿಕ್ಸ್ ಭಾರೀ ಜೋರಾಗಿದೆ. ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್ ಇತರೆ ಕಾಂಗ್ರೆಸ್ ಶಾಸಕರಿಗೂ ಪ್ರೇರಣೆಯಾಗಿದೆ.

    ಜಿಲ್ಲೆಯ ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇಂದು ಬಂಗಾರಪೇಟೆಯ ಕೆ.ಸಿ.ರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಎಸ್.ಎನ್.ಕಾಂಟೀನ್ ಪ್ರಾರಂಭಿಸಿದ್ದಾರೆ. ಕ್ಯಾಂಟೀನ್ ನಲ್ಲಿ 2 ರೂ. ಗೆ ಟೀ, ಕಾಪೀ, 5 ರೂ. ಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

    ಬಂಗಾರಪೇಟೆಯಲ್ಲಿ ಇರುವ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದಾಗಿರೋದ್ರಿಂದ ಗಡಿ ಗ್ರಾಮಗಳಿಂದ ಬೆಳಗ್ಗೆಯೇ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅವರಿಗೆ ತಿಂಡಿ ಹಾಗೂ ಊಟಕ್ಕೆ ತೊಂದರೆಯಾಗದಂತೆ ಶಾಸಕನಾಗಿ ಕ್ರಮ ಕೈಗೊಂಡಿದ್ದೇನೆ. ಕಾಲೇಜಿನಲ್ಲಿ ಸುಮಾರು 1200 ಪದವಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕ್ಯಾಂಟೀನ್ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳುತ್ತಾರೆ.

    ರಾಜ್ಯದಲ್ಲಿ ಕ್ಯಾಂಟೀನ್ ಪಾಲೀಟಿಕ್ಸ್ ಸದ್ದು ಜೋರಾಗಿದೆ. ಮತದಾರರನ್ನ ಸೆಳೆಯಲು ಕಾಂಗ್ರೆಸ್‍ನಿಂದ ಇಂದಿರಾ ಕ್ಯಾಂಟೀನ್, ಜೆಡಿಎಸ್‍ನಿಂದ ಅಪ್ಪಾಜಿ ಕ್ಯಾಂಟೀನ್, ಕೋಲಾರದಲ್ಲಿ ಬಿಜೆಪಿಯಿಂದ ಶೆಟ್ಟಿ ಕ್ಯಾಂಟೀನ್ ಕೂಡ ಆಯ್ತು. ಈಗ ಮತ್ತೆ ಕಾಂಗ್ರೆಸ್ ಶಾಸಕರರಿಂದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಎಸ್.ಎನ್.ಕಾಂಟೀನ್ ಪ್ರಾರಂಭಿಸಿದ್ದಾರೆ.

  • ವಿಡಿಯೋ: ಕಾದು ಕಾದು ಸುಸ್ತಾಗಿ ತಾನೇ ಅಡುಗೆಮನೆಗೆ ಹೋಗಿ ಸೌಟ್ ಹಿಡಿದ ಡೆಲಿವರಿ ಬಾಯ್

    ವಿಡಿಯೋ: ಕಾದು ಕಾದು ಸುಸ್ತಾಗಿ ತಾನೇ ಅಡುಗೆಮನೆಗೆ ಹೋಗಿ ಸೌಟ್ ಹಿಡಿದ ಡೆಲಿವರಿ ಬಾಯ್

    ಬೀಜಿಂಗ್: ಹೊರಗಡೆಯಿಂದ ಊಟ ಆರ್ಡರ್ ಮಾಡಿದಾಗ ಡೆಲಿವರಿ ಸರಿಯಾದ ಸಮಯಕ್ಕೆ ಬರಲಿಲ್ಲವೆಂದ್ರೆ ತಾಳ್ಮೆ ಕಳೆದುಕೊಳ್ತೀವಿ. ಹಾಗೇ ನಗರದ ಟ್ರಾಫಿಕ್‍ನ ಮಧ್ಯೆಯೂ ಸರಿಯಾದ ಸಮಯಕ್ಕೆ ಡೆಲಿವರಿ ಮಾಡೋದು ಕಷ್ಟದ ಕೆಲಸವೇ. ಇನ್ನು ಬಾಣಸಿಗರು ಅಡುಗೆ ತಯಾರು ಮಾಡೋದಕ್ಕೇ ಹೆಚ್ಚಿನ ಸಮಯ ತೆಗೆದುಕೊಂಡ್ರೆ ಹೇಗಾಗ್ಬೇಡ. ಹೀಗೆ ಗ್ರಾಹಕರೊಬ್ಬರು ಆರ್ಡರ್ ಮಾಡಿದ ಊಟ ತಯಾರಾಗೋಕೆ ಕಾದು ಕಾದು ಸುಸ್ತಾದ ಚೀನಾದ ಡೆಲಿವರಿ ಬಾಯ್ ತಾನೇ ಅಡುಗೆಮನೆಗೆ ಹೋಗಿ ಕೈಲಿ ಸೌಟು ಹಿಡಿದಿದ್ದಾನೆ.

    ಅಡುಗೆ ಮನೆಗೆ ಪ್ರವೇಶಿಸಿ ಡೆಲಿವರಿ ಬಾಯ್ ತಾನೇ ಅಡುಗೆ ತಯಾರಿಸಿದ್ದಾನೆ. ಸರಿಯಾದ ಸಮಯಕ್ಕೆ ಊಟ ಡೆಲಿವರಿ ಮಾಡಬೇಕೆಂಬ ಒತ್ತಡವಿದ್ದಿದ್ರಿಂದ ಆತನೇ ಅಡುಗೆ ಮನೆಗೆ ಎಂಟ್ರಿ ಕೊಡಬೇಕಾಯ್ತು ಅಂತ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

     

    ಹಳದಿ ಬಣ್ಣದ ಸಮವಸ್ತ್ರ ಹಾಗೂ ಹಳದಿ ಹೆಲ್ಮೆಟ್ ಧರಿಸಿರೋ ಡೆಲಿವರಿ ಬಾಯ್ ಇತರೆ ಬಾಣಸಿಗರೊಂದಿಗೆ ಅಡುಗೆ ತಯಾರು ಮಾಡ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.