Tag: ಊಟ

  • ಅಂಬಿ ಕುಟೀರ ತಲುಪಿದ ಆಪ್ತಮಿತ್ರನ ಮನೆಯ ಊಟ

    ಅಂಬಿ ಕುಟೀರ ತಲುಪಿದ ಆಪ್ತಮಿತ್ರನ ಮನೆಯ ಊಟ

    ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಮನೆಯಿಂದ ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದವರಿಗೆ ಊಟ ಕಳುಹಿಸಲಾಗಿದೆ.

    ಸೋಮವಾರ ಅಂಬರೀಶ್ ಅವರ ಅಂತ್ಯಕ್ರಿಯೆ ಆಗಿದ್ದು, ಇಂದು ಮನೆಯಲ್ಲಿ ಯಾರೂ ಅಡುಗೆ ಮಾಡುವುದಿಲ್ಲ. ಇದನ್ನು ತಿಳಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ತಮ್ಮ ಪಿಎಯಿಂದ ಅಂಬರೀಶ್ ಮನೆಯವರಿಗೆ ಊಟ ಕಳುಹಿಸಿಕೊಟ್ಟಿದ್ದಾರೆ.

    ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರ ಕುಟುಂಬದವರು ತುಂಬಾ ಆತ್ಮೀಯರಾಗಿದ್ದಾರೆ. ಈ ಸಮಯದಲ್ಲಿ ಸುಮಲತಾ ಹಾಗೂ ಅಭಿಷೇಕ್ ಊಟ ಮಾಡುವುದಿಲ್ಲ ಎಂಬುದನ್ನು ತಿಳಿದ ಭಾರತಿ ವಿಷ್ಣುವರ್ಧನ್ ಅವರು 2 ಕ್ಯಾರಿಯರ್‍ನಲ್ಲಿ ತಮ್ಮ ಮನೆಯಿಂದ ಊಟ ಪಾರ್ಸಲ್ ಕಳುಹಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಯಿಗೆ ಹಾಕಿದಂಗೆ ಮಕ್ಕಳಿಗೆ ಊಟ ಬಡಿಸಿದ ಆಯಾ!

    ನಾಯಿಗೆ ಹಾಕಿದಂಗೆ ಮಕ್ಕಳಿಗೆ ಊಟ ಬಡಿಸಿದ ಆಯಾ!

    ಮೈಸೂರು: ನಾಯಿಗೆ ಊಟ ಬಡಿಸುವ ರೀತಿಯಲ್ಲಿ ಅಂಗನವಾಡಿಗೆ ಬರುವ ಪುಟ್ಟ ಮಕ್ಕಳಿಗೆ ಆಯಾ ಊಟ ಬಡಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.

    ಭೀಮನಹಳ್ಳಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಆಯಾ ಲಲಿತಮ್ಮ ಈ ರೀತಿ ಮಾನವೀಯತೆ ಇಲ್ಲದೇ ನಡೆದುಕೊಂಡಿದ್ದಾಳೆ. ಅಂಗನವಾಡಿ ಸಹಾಯಕಿ ಲಲಿತಮ್ಮ ಮಕ್ಕಳನ್ನು ಸಾಲಾಗಿ ಕೂರಿಸಿ ತಟ್ಟೆಗೆ ಅನ್ನ ಹಾಕಿ ನಾಯಿಗಳ ಮುಂದೆ ತಟ್ಟೆ ತಳ್ಳುವಂತೆ ಮಕ್ಕಳ ಮುಂದೆ ತಳ್ಳುತ್ತಿದ್ದಾರೆ.

    ಲಲಿತಮ್ಮ ಊಟ ಬಡಿಸುವ ಅಮಾನವೀಯ ವೈಖರಿಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಲಲಿತಮ್ಮಳ ಈ ರೀತಿ ಕೆಲಸ ಕಂಡರೂ ಆಕೆಗೆ ಹೆದರಿ ಗ್ರಾಮಸ್ಥರು ಕೂಡ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಈ ವೀಡಿಯೋ ನೋಡಿಯಾದರೂ ಅಧಿಕಾರಿಗಳು ಲಲಿತಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜೈಲಿನ ಊಟ ಧಿಕ್ಕರಿಸಿ, ಪುಂಡಾಟ ಮೆರೆದ ದುನಿಯಾ ವಿಜಿ!

    ಜೈಲಿನ ಊಟ ಧಿಕ್ಕರಿಸಿ, ಪುಂಡಾಟ ಮೆರೆದ ದುನಿಯಾ ವಿಜಿ!

    ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿ, ಮತ್ತೆ ತನ್ನ ಮೊಂಡಾಟವನ್ನು ಪ್ರದರ್ಶಿಸಿದ್ದಾರೆ.

    ಹೌದು, ನಾನೇನು ಮಾಡಿದರೂ ಸರಿ, ನಾನೇ ಬಾಸು ನಂದೆ ದುನಿಯಾ ಎನ್ನುತಿದ್ದ ಕರಿಚಿರತೆ ಈಗ ಕಂಬಿ ಹಿಂದೆ ಸೆರೆಯಾಗಿದೆ. ಸಣ್ಣದೊಂದು ಗಲಾಟೆಗೆ ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿದ್ದಲ್ಲದೇ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಿ ಜೈಲು ಸೇರಿದ್ದಾರೆ.

    ಮಗನಿಗೆ ಸಣ್ಣ ಮಾತನ್ನು ಹೇಳಿದಕ್ಕೆ ಕುಪಿತಕೊಂಡ ದುನಿಯಾ ವಿಜಿ ತನ್ನ ಪಟಾಲವನ್ನೇ ಕರೆದು ಜಗಳಕ್ಕೆ ಮಾಡಿಕೊಂಡಿದ್ದರು. ಭಾನುವಾರ ಜೈಲಿನ ಕೈದಿ ನಂಬರ್ ನೀಡುವ ಸಿಬ್ಬಂದಿ ಗೈರಾಗಿದ್ದರಿಂದ ಸ್ಲಂ ಬಾಲನಿಗೆ ಕೈದಿ ನಂಬರ್ ಸಿಕ್ಕಿರಲಿಲ್ಲ. ಇಂದು ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿದ ಬಳಿಕ ಕೈದಿ ನಂಬರ್ ನೀಡಲಾಗುತ್ತದೆ. ಭಾನುವಾರ ನಡೆದ ಬೆಳವಣಿಗೆಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ವಿಜಿಯವರನ್ನು ಜೈಲಿಗೆ ಕಳುಹಿಸುವ ವೇಳೆಗೆ ರಾತ್ರಿ 10 ಗಂಟೆಯಾಗಿತ್ತು. ರಾತ್ರಿಯಾಗಿದ್ದರಿಂದ ಜೈಲಿನಲ್ಲಿ ಸಿಬ್ಬಂದಿ ಊಟ ನೀಡಿದರು ದುನಿಯಾ ವಿಜಿ ಹಾಗೂ ಅವರ ತಂಡ ಊಟ ನಿರಾಕರಿಸಿ, ಮತ್ತೊಮ್ಮೆ ತಮ್ಮ ಮೊಂಡಾಟವನ್ನು ತೋರಿಸಿದ್ದಾರೆ.

    ಇದಲ್ಲದೇ ವಿಜಿ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಮಾರುತಿ ಗೌಡ ಕುಟುಂಬ ಡಿಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಿಜಿಗೆ ಬೇಲ್ ಸಿಗುತ್ತಾ, ಇಲ್ಲಾ ಜೈಲೇ ಗತಿಯೇ ಎನ್ನುವ ವಿಷಯ ಗೊತ್ತಾಗಲಿದೆ.

    ರಾಜಾರೋಷವಾಗಿ ಹೊಡೆದು ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ದುನಿಯಾ ವಿಜಿಗೆ ಭಾನುವಾರ ಕರಾಳ ದಿನವಾಗಿತ್ತು. ಬಚಾವಾಗೋ ಕೇಸಿನಲ್ಲೂ ತಪ್ಪಿಸಿಕೊಳ್ಳಲಾಗದೇ ಠಾಣೆಯಲ್ಲೇ ಕುಳಿತು ಊಟ ಸೇವಿಸಿದ್ದರು. ಅಲ್ಲದೇ ನಾನು ಎಷ್ಟೇ ಚೀರಾಡಿದರೂ ಉಪಯೋಗವಿಲ್ಲವೆಂದು, ಸ್ಟೇಷನ್ ನಲ್ಲಿಯೇ ಗಾಢಾ ನಿದ್ರೆಗೆ ಜಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತ್ ಬಂದ್- ಊಟ ಸಿಗದೆ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನೆದು ಕುಡುಕರ ರಂಪಾಟ

    ಭಾರತ್ ಬಂದ್- ಊಟ ಸಿಗದೆ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನೆದು ಕುಡುಕರ ರಂಪಾಟ

    ಉಡುಪಿ: ಭಾರತ್ ಬಂದ್ ಆಗಿರುವುದರಿಂದ ಊಟ ಸಿಗದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕುಡುಕರು ರಂಪಾಟ ಮಾಡಿದ್ದಾರೆ. ಊಟ ಇಲ್ಲ ಅಂತ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಕಿ ಹೋಟೆಲ್ ಎಲ್ಲಾ ಬಂದ್ ಆಗಿದೆ. ಸಿಟಿ ಬಸ್ ನಿಲ್ದಾಣ ಸಮೀಪ ಐದಾರು ಕುಡುಕರು ಹೊಟ್ಟೆ ಹಸಿವಿನಿಂದ ಗೋಳಾಡಿದ್ದಾರೆ. ಕುಡುಕರಿಗೆ ಬಂದ್ ಎಫೆಕ್ಟ್ ನೇರವಾಗಿ ತಟ್ಟಿದೆ. ಹಸಿವು, ಹಸಿವು ಅಂತ ಗೋಳಾಟ ಮಾಡಿದ ಜನ, ಹೊಟೇಲ್ ಓಪನ್ ಮಾಡಿ ಅಂತ ರಂಪಾಟ ಮಾಡಿದರು.

    ಹೊಟೇಲ್, ಅಂಗಡಿ ಓಪನ್ ಮಾಡಿ. ಊಟ ಕೊಡಿ ಅಂತ ಅಂಗಲಾಚಿದರು. ಉಡುಪಿ ಬಸ್ ಸಮೀಪ ಹೈಡ್ರಾಮಾ ನಡೆಸಿದರು. ರಸ್ತೆ ಮಧ್ಯದಲ್ಲಿ ಮಾಧ್ಯಮಗಳ ಕಾಲಿಗೆ ಬಿದ್ದು ಊಟ ಬೇಕು ಅಂತ ಕೇಳಿಕೊಂಡರು. ನಮ್ಮ ಬಂಗಾರಪ್ಪನವರ ಕಾಲದಲ್ಲಿ ಹೀಗೆ ಇರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರನ್ನು ನೆನಪಿಸಿಕೊಂಡರು.

    ನಮ್ಮ ಬಂಗಾರಪ್ಪನವರು ಅಧಿಕಾರದಲ್ಲಿದ್ದಾಗ ಹೀಗೆಲ್ಲ ಇರಲಿಲ್ಲ. ರಾಜ್ಯ ಸುಗಮವಾಗಿ ಸಾಗುತ್ತಿತ್ತು ಅಂತ ಬೇಸರ ವ್ಯಕ್ತಪಡಿಸಿದರು. ನಿನ್ನೆಯಿಂದ ಊಟವೇ ಮಾಡಿಲ್ಲ ಅಂತ ಗುರುವಪ್ಪ ಕುಡಿದ ಮತ್ತಿನಲ್ಲಿತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆ- ಗರ್ಭಿಣಿ, ಮಕ್ಕಳಿಂದ ಬಯಲಲ್ಲೇ ಊಟ!

    ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆ- ಗರ್ಭಿಣಿ, ಮಕ್ಕಳಿಂದ ಬಯಲಲ್ಲೇ ಊಟ!

    ಬೆಂಗಳೂರು: ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆಯಿಂದಾಗಿ ಗರ್ಭಿಣಿ ಮತ್ತು ಮಕ್ಕಳು ಬಯಲಲ್ಲೇ ಊಟ ಮಾಡುತ್ತಿರುವ ಶೋಚನಿಯ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪುಟ್ಟೇಗೌಡನಪಾಳ್ಯದಲ್ಲಿ ವರದಿಯಾಗಿದೆ.

    ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಪುಟ್ಟೇಗೌಡನಪಾಳ್ಯದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಮಾತೃ ಪೂರ್ಣ ಯೋಜನೆ ಊಟ ವಿತರಣೆಯು ಅವ್ಯವಸ್ಥೆಯ ಆಗರವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ನೀಡುವ ಮಾತೃಪೂರ್ಣ ಯೋಜನೆಯ ಊಟಕ್ಕಾಗಿ ಗರ್ಭಿಣಿ ಮತ್ತು ಮಕ್ಕಳು ಪರಿಪಾಟಲು ನಡೆಸುತ್ತಿದ್ದಾರೆ.

    ಗ್ರಾಮದಲ್ಲಿ ಸಾಕಷ್ಟು ವರ್ಷದಿಂದ ಸೂಕ್ತ ಸೂರಿಲ್ಲದೆ ಗರ್ಭಿಣಿ ಮತ್ತು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಗರ್ಭಿಣಿಯರಿಗೆ ಹಾಗೂ ಪುಟಾಣಿ ಮಕ್ಕಳಿಗೆ ನೇರವಾಗಿ ಮನೆಗೆ ಧವಸ-ಧಾನ್ಯ ನೀಡುತಿದ್ದರು. ಆದರೆ ಈಗ ಮಾತೃ ಪೂರ್ಣ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರದಲ್ಲಿ ಊಟ ನೀಡುವ ವ್ಯವಸ್ಥೆಯಿಂದಾಗಿ ಅವ್ಯವಸ್ಥೆಗೆ ಕಾರಣವಾಗಿದೆ.

    ಜೆಡಿಎಸ್ ಶಾಸಕ ಆಯ್ಕೆಯಾಗಿರುವ ಕ್ಷೇತ್ರದಲ್ಲಿ ಬಯಲಲ್ಲಿ ಊಟ ಮಾಡುವ ಪರಿಸ್ಥಿತಿ ಎದುರಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿಮಗೆ ಮತ ನೀಡಿರುವ ಕ್ಷೇತ್ರದ ದುಸ್ಥಿತಿ ಹಾಗೂ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿಯವರು ಇತ್ತ ಕಡೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಮನವಿಮಾಡಿಕೊಂಡಿದ್ದಾರೆ.

  • ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

    ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

    ಮಂಡ್ಯ: ಆಷಾಢ ಮಾಸ ಅಂದರೆ ಆದಿ ಶಕ್ತಿ, ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೈವ ಆರಾಧಿಸುವುದು ವಿಶೇಷ. ಆದರೆ ಜಿಲ್ಲೆಯ ಆಬಲವಾಡಿಯಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ ಇಲ್ಲಿ ಹರಿಸೇವೆ ಮಾಡುತ್ತಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿರೋ ತಿಮ್ಮಪ್ಪ ದೇವರಿಗೆ ಆಷಾಢ ಮಾಸದ ಮೊದಲ ಶನಿವಾರ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸೇರಿದಂತೆ ದೇವರ ಮನೆತನದವರು ಮಾಡಿಕೊಂಡು ಬರುತ್ತಿದ್ದಾರೆ. ಈ ವಿಶೇಷ ಪೂಜೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯೂ ಶನಿವಾರ ರಾತ್ರಿಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರಂಭಗೊಂಡು, ಶನಿವಾರ ರಾತ್ರಿಯೆಲ್ಲಾ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

    ಈ ತಿಮ್ಮಪ್ಪನ ಆರಾಧಕರು ಉತ್ಸವ ಮೂರ್ತಿಯನ್ನು ಒತ್ತು ಮೆರವಣಿಗೆ ಮಾಡಿ ಹರಕೆ ತೀರಿಸಿದರು. ನಂತರ ಮುಂಜಾನೆಯೇ ಇಲ್ಲಿ ಬಂದ ಭಕ್ತರಿಗೆ ವಿಶೇಷವಾಗಿ ಪ್ರಸಾದವನ್ನು ನೀಡಲಾಯಿತು. ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಈ ಬಾರಿ ಪ್ರಸಾದ ಸೇವಿಸುವ ಭಕ್ತರಿಗೆ ಸ್ವಯಂ ಸೇವಕರಿಂದ ಸ್ಟೀಲ್ ಲೋಟದಲ್ಲಿ ನೀರು ನೀಡಲಾಯಿತು.

    ದೇವರ ಉತ್ಸವ ಆರಂಭ ಆಗುತ್ತಿದ್ದಂತೆ ಟನ್ ಗಟ್ಟಲೆ ಅನ್ನವನ್ನು ಬೇಯಿಸುವ ಜೊತೆಗೆ ಕೊಪ್ಪರಿಕೆಗಳಲ್ಲಿ ಸಾಂಬಾರು ಮಾಡಿ ಸಿದ್ಧ ಮಾಡಿಕೊಳ್ಳಲಾಗುತ್ತದೆ. ನಂತರ ದೇವರ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಸುತ್ತ ಭಕ್ತರಿಗೆ ಪ್ರಸಾದದ ಹಂಚಿಕೆ ಕಾರ್ಯ ಆರಂಭ ಆಗುತ್ತದೆ. ಇಲ್ಲೆಗೆ ಬಂದ ಭಕ್ತರಿಗೆ ತಾವರೆ ಎಲೆಯಲ್ಲಿ ಪ್ರಸಾದ ಹಂಚಿಕೆ ಮಾಡೋದು ಇಲ್ಲಿನ ವಿಶೇಷ. ಎಲ್ಲರನ್ನೂ ಸರಥಿ ಸಾಲಿನಲ್ಲಿ ಕೂರಿಸಿ, ತಾವರೆ ಎಲೆಯನ್ನು ಮೊದಲು ಕೊಡಲಾಗುತ್ತದೆ. ನಂತರ ದೊಡ್ಡದೊಡ್ಡ ಪಾತ್ರೆಗಳಲ್ಲಿ ಒಮ್ಮೆ ಮಾತ್ರ ಅನ್ನವನ್ನು ಎಲೆಗೆ ಬಡಿಸಲಾಗುತ್ತದೆ. ಹಿಂದೆಯಿಂದಲೇ ಸಾಂಬರು ಹಾಕಲಾಗುತ್ತದೆ. ಮತ್ತೊಂದು ವಿಚಾರ ಅಂದರೆ ಇಲ್ಲಿ ಎಲ್ಲರಿಗೂ ಹಿಡಿ ಅನ್ನ ಹಾಕೋದು. ಒಮ್ಮೆ ಹಾಕಿದರೆ ಇಡೀ ತಾವರೆ ಎಲೆಯ ತುಂಬೆಲ್ಲಾ ಈ ಹಿಡಿ ಅನ್ನ ಹರಡಿಕೊಳ್ಳುತ್ತದೆ ಎಂದು ಅರ್ಚಕ ಹರಿಪ್ರಸಾದ್ ಹೇಳಿದ್ದಾರೆ.

    ಈ ಉತ್ಸವದಲ್ಲಿ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಪಾಲ್ಗೊಂಡಿದ್ದರು. ಈ ದೇವರ ಮನೆತನದವರು ಪ್ರತಿ ವರ್ಷ ಬಂದು ತಾವರೆ ಎಲೆ ಊಟ ಮಾಡಿ, ಪೂಜೆ ಸಲ್ಲಿಸಿದರೆ ಹರಕೆ ತೀರಿಸಿದಂತೆ ಎಂಬ ಪ್ರತೀತಿಯಿದ್ದು, ಈ ವರ್ಷವೂ ತೋಪಿನ ತಿಮ್ಮಪ್ಪನ ಹರಿಸೇವೆ ಅದ್ಧೂರಿಯಾಗಿ ನಡೆದಿದೆ.

  • ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

    ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

    ಮುಂಬೈ: ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಆಕಾಶದಿಂದ ಬಲೂನ್ ಟ್ರೇಗಳ ಮೂಲಕ ಊಟ ಬರುವ ವ್ಯವಸ್ಥೆ ಮಾಡಲಾಗಿತ್ತು.

    ಗುರುವಾರ ಮುಂಬೈನಲ್ಲಿ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮಹ್ತಾ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ನಿಶ್ಚಿತಾರ್ಥದಲ್ಲಿ ವರ್ಣ ರಂಜಿತವಾದ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ಇದು ಎಲ್ಲರ ಕಣ್ಮನವನ್ನು ಸೆಳೆಯುತ್ತಿತ್ತು. ಇದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ಬಲೂನ್ ಗಳ ಮೂಲಕ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಅವರ ಕೈಗೆ ಸೇರುತ್ತಿದ್ದವು.

    ಈ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಬೀಳುತ್ತಿದ್ದ ವಿಡಿಯೋ ಬೆಳಕಿಗೆ ಬಂದಿದ್ದು, ಈಗ ವಿಡಿಯೋ ವೈರಲ್ ಆಗಿದೆ. ನಿಶ್ಚಿತಾರ್ಥದಲ್ಲಿ ಫ್ರೆಂಚ್ ಐಷಾರಾಮಿ ಆಹಾರದ ಬ್ರಾಂಡ್ `ಲಡುರೀ’ ಯನ್ನು ಪಾರ್ಟಿಯಲ್ಲಿದ್ದ ಅತಿಥಿಗಳಿಗೆ ನೀಡಲಾಯಿತು.

    ಇನ್ನು ನಿಶ್ಚಿತಾರ್ಥ ನಡೆದ ವೇದಿಕೆಯನ್ನು ವಿವಿಧ ರೀತಿಯ ವರ್ಣ ರಂಜಿತವಾದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಿಶ್ಚಿತಾರ್ಥದ ಕೇಕ್ ಕೂಡ ಆಕರ್ಷಕವಾಗಿ ವಿನ್ಯಾಸ ಮಾಡಿಸಲಾಗಿತ್ತು. ಪಾರ್ಟಿಯಲ್ಲಿ ಎಲ್ಲೆಲ್ಲೂ ಹೂಗಳಿಂದ ಅಲಂಕೃತಗೊಂಡಿತ್ತು.

    ಆಕಾಶ್ ಹಾಗೂ ಶ್ಲೋಕಾ ನಿಶ್ಚಿತಾರ್ಥ ಮುಕೇಶ್ ಅಂಬಾನಿ ನಿಶ್ಚಿತಾರ್ಥದಲ್ಲಿ ಬಾಲಿವುಡ್ ತಾರೆಯರು, ಕ್ರಿಕೆಟರ್ ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಭಾಗಿಯಾಗಿದ್ದರು. ಇನ್ನೂ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಪ್ರಿಯಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಪತ್ನಿ ಐಶ್ಚರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯಳೊಂದಿಗೆ ಆಗಮಿಸಿದ್ದರು. ಅಮೀರ್ ಖಾನ್, ಕಿರಣ್ ರಾವ್, ಹಿರಿಯ ನಟಿ ರೇಖಾ, ಪರಿಣೀತಿ ಚೋಪ್ರಾ, ಆದಿತ್ಯ ರಾಯ್ ಕಪೂರ್, ಸಿದ್ದಾರ್ಥ್ ಮತ್ತು ಶ್ರದ್ಧಾ ಕಪೂರ್ ಇನ್ನು ಅನೇಕ ಇನ್ನು ಗಣ್ಯರು ಪಾಲ್ಗೊಂಡಿದ್ದರು.

    ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಕೂಡ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಜೊತೆ ಮೇ ತಿಂಗಳಲ್ಲಿ ನಡೆದಿತ್ತು. ಸದ್ಯ ಈಗ ಆಕಾಶ್- ಶ್ಲೋಕಾ, ಇಶಾ ಹಾಗೂ ಆನಂದ್ ಮದುವೆ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    https://www.youtube.com/watch?v=opEIKlOe6CM

  • ಬಡ ವೃದ್ಧೆಯ ಮನೆಗೆ ತೆರಳಿ ಊಟ ಮಾಡಿದ ಜಿಲ್ಲಾಧಿಕಾರಿ

    ಬಡ ವೃದ್ಧೆಯ ಮನೆಗೆ ತೆರಳಿ ಊಟ ಮಾಡಿದ ಜಿಲ್ಲಾಧಿಕಾರಿ

    ಚೆನ್ನೈ: ಜಿಲ್ಲಾಧಿಕಾರಿಯೊಬ್ಬರು ಬಡ ವೃದ್ಧೆಯ ಮನೆಗೆ ತೆರಳಿ ಊಟ ಮಾಡಿದ್ದಾರೆ. ಹಸಿವಿನಿಂದ ಅಜ್ಜಿ ಬಳಲುತ್ತಿರುವ ವಿಷಯ ಕೇಳಿದ ಜಿಲ್ಲಾಧಿಕಾರಿಗಳು ತಮ್ಮ ಮನೆಯಿಂದ ಊಟ ಕಟ್ಟಿಸಿಕೊಂಡು ವೃದ್ಧೆಗೂ ನೀಡಿ ತಾವು ಅಲ್ಲಿಯೇ ಭೋಜನ ಮಾಡಿದ್ದಾರೆ. ಈ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

    ತಮಿಳುನಾಡು ರಾಜ್ಯದ ಕರೂರು ಜಿಲ್ಲೆಯ ಚಿನ್ನಮಾಲನಿಕಿಕೆನ್ ಪಟ್ಟಿ 82 ವರ್ಷದ ವೃದ್ಧೆಯ ಮನೆಗೆ ಜಿಲ್ಲಾಧಿಕಾರಿ ಟಿ.ಅಂಬಾಜಗೇನ್ ದಿಢೀರ್ ಅಂತಾ ತೆರಳಿದ್ದರು. ತನ್ನ ಮನೆಗೆ ಜಿಲ್ಲಾಧಿಕಾರಿಗಳು ಬರುತ್ತಿದ್ದಂತೆ ಅಜ್ಜಿ ಆಶ್ಚರ್ಯ ಚಕಿತರಾಗಿದ್ದಾರೆ. ಮನೆಯಿಂದ ತಂದಿದ್ದ ಊಟವನ್ನು ಬಾಳೆ ಎಲೆಯಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿಗಳು ನೆಲದ ಮೇಲೆಯೇ ಕುಳಿತು ಊಟ ಮಾಡಿದ್ದಾರೆ. ಸ್ಥಳದಲ್ಲಿಯೇ ಅಜ್ಜಿಗೆ 1 ಸಾವಿರ ರೂ. ವೃದ್ಧಾಪ್ಯವೇತನ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

    ಜನರ ಸಮಸ್ಯೆ ಆಲಿಸುವ ವೇಳೆ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯಲ್ಲಿ ವೃದ್ಧೆಯೊಬ್ಬರು ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ ಎಂಬ ವಿಷಯ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಂಬಾಜಗೇನ್ ಅಜ್ಜಿಯ ವಿಳಾಸ ಪಡೆದು ಮನೆಗೆ ತೆರಳಿ ವಸ್ತು ಸ್ಥಿತಿ ಅವಲೋಕಿಸಿ ವೃದ್ಧಾಪ್ಯವೇತನ ನೀಡಲು ಸೂಚಿಸಿದ್ದಾರೆ.

    ಕೆಲಸ ಮಾಡಲು ಅಶಕ್ತರಿಗೆ ಸರ್ಕಾರ ಅಂತಹವರಿಗಾಗಿ ವೃದ್ಧಾಪ್ಯವೇತನ ನೀಡುತ್ತಿದೆ. ಅದು ಎಲ್ಲ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಸಿಗುವಂತಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಶಕ್ತ ಬಡವೃದ್ಧರು ಪ್ರತಿಯೊಬ್ಬರಿಗೆ ವೃದ್ಧಾಪ್ಯವೇತನ ಸಿಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಅಂಬಾಜಗೇಏನ್ ತಿಳಿಸಿದ್ದಾರೆ.

  • ಮುಂಬೈ ಜೈಲಿನಲ್ಲಿ ತನಗೆ ಚಿಕನ್ ನೀಡ್ತಿಲ್ಲ – ಪೋರ್ಚುಗೀಸ್ ಅಧಿಕಾರಿಗಳಿಗೆ ಗ್ಯಾಂಗ್‍ಸ್ಟರ್ ಅಬು ಸಲೇಂ ದೂರು

    ಮುಂಬೈ ಜೈಲಿನಲ್ಲಿ ತನಗೆ ಚಿಕನ್ ನೀಡ್ತಿಲ್ಲ – ಪೋರ್ಚುಗೀಸ್ ಅಧಿಕಾರಿಗಳಿಗೆ ಗ್ಯಾಂಗ್‍ಸ್ಟರ್ ಅಬು ಸಲೇಂ ದೂರು

    ಮುಂಬೈ: ಕುಖ್ಯಾತ ಗ್ಯಾಂಗ್‍ಸ್ಟರ್ ಅಬು ಸಲೇಂ ತನಗೆ ಮುಂಬೈ ಜೈಲಿನಲ್ಲಿ ಚಿಕನ್ ನೀಡುತ್ತಿಲ್ಲ ಎಂದು ಪೋರ್ಚುಗೀಸ್ ವಿದೇಶಾಂಗ ಅಧಿಕಾರಿಗಳಿಗೆ ದೂರು ನೀಡಿದ್ದು, ಮಂಗಳವಾರ ಅಧಿಕಾರಿಗಳು ಮುಂಬೈನ ಜೈಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಮುಂಬೈನ ತಲೋಜ ಜೈಲಿನಲ್ಲಿ ಇರುವ ಸಲೀಂ ತಮಗೇ ಉತ್ತಮ ಊಟ ಹಾಗೂ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ತನ್ನ ವಕೀಲರ ಮೂಲಕ ದೂರು ನೀಡಿದ್ದ. ಈ ದೂರಿನ ಅನ್ವಯ ಅಧಿಕಾರಿಗಳು ಹಾಗೂ ವೈದ್ಯರ ತಂಡ ಪರಿಶೀಲನೆ ನಡೆಸಿದ್ದು, ಸಲೀಂ ನನ್ನು ಸಸ್ಯಾಹಾರಿ ಊಟ ಸೇವಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಅಬು ಸಲೇಂ ನೀಡುತ್ತಿರುವ ವ್ಯವಸ್ಥೆ ಕುರಿತು ಮಾಹಿತಿ ನೀಡಿದರುವ ಸಲೇಂ ಪರ ವಕೀಲ ಸಬ ಖುರೇಷಿ, ಸಲೇಂಗೆ ನೀಡುತ್ತಿರುವ ಆಹಾರ ಗುಣಮಟ್ಟ ತೀರ ಕೆಟ್ಟದಾಗಿದೆ. ಅವರು ಸಸ್ಯಾಹಾರ ಸೇವನೆ ಮಾಡುವುದಿಲ್ಲ. ಅಲ್ಲದೇ ಆತನ ಕೋಣೆಗೆ ಸರಿಯಾಗಿ ಸೂರ್ಯನ ಬೆಳಕು ಬರುವುದಿಲ್ಲ. ಕೋಣೆಯ ಶೌಚಾಲಯ ಚಿಕ್ಕದಾಗಿದ್ದು, ಉತ್ತಮ ಸ್ಥಿತಿಯಲ್ಲಿ ಇಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಅನಾರೋಗ್ಯ ಕಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

    ಸಲೇಂ ಈಗಾಗಲೇ ಕಣ್ಣಿನ ದೃಷ್ಟಿ ಹಾಗೂ ಮಂಡಿ ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ವೈದ್ಯಕೀಯ ಸೇವೆ ಅವಶ್ಯಕತೆ ಇದ್ದು, ಪೊಲೀಸರು ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

    ಈ ಪ್ರತಿಕ್ರಿಯೆ ನೀಡಿರುವ ಜೈಲು ಅಧಿಕಾರಿ ಎಸ್ಪಿ ಸದಾನಂದ್ ಗೈಕ್ವಾಡ್, ಅಪರಾಧಿಗೆ ಮಾಂಸಹಾರ ಪೂರೈಸಲು ಸಾಧ್ಯವಿಲ್ಲ. ವೈದ್ಯರು ಕೇವಲ ಮೊಟ್ಟೆ ನೀಡಲು ತಿಳಿಸಿದ್ದಾರೆ. ಅದನ್ನು ನೀಡಿದ್ದೇವೆ. ಅಲದೇ ಜೈಲಿನ ಕ್ಯಾಂಟೀನ್ ನಲ್ಲಿ ಆತ ಮೊಟ್ಟೆ ಖರೀಸಬಹುದು. ಇನ್ನು ಎಲ್ಲ ಕೈದಿಗಳು ಸಹ ಅಂತಹ ಕೋಣೆಗಳಲ್ಲೇ ಇದ್ದು, ಪ್ರತ್ಯೇಕ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆತ ಯಾವಾಗಲು ಆರೋಗ್ಯ ಕುರಿತು ದೂರು ನೀಡುತ್ತಾನೆ, ಆದರೆ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಎಂದು ತಿಳಿಸಿದ್ದಾರೆ. ಆತನ ಆಧಾರ ರಹಿತ ಮಾಡುತ್ತಾನೆ ಎಂದು ಹೇಳಿದ್ದಾರೆ.

    ವಕೀಲ ಖುರೇಷಿ ಅವರ ಪ್ರಕಾರ ಸಲೇಂ ಜೀವಾವಾಧಿ ಶಿಕ್ಷೆ ಯನ್ನು ಪಡೆದಿದ್ದು, ಭಾರತ ಪೋರ್ಚುಗಿಸ್‍ನೊಂದಿಗೆ ಮಾಡಿಕೊಂಡಿರುವ ಒಪ್ಪಂದವನು ಉಲ್ಲಂಘಿಸಿದೆ. ನಿಯಮಗಳ ಅನ್ವಯ ಸಲೇಂ ಪೋರ್ಚುಗೀಸ್ ದೇಶದ ಪ್ರಜೆಯಾಗಿದ್ದು, ಇಂತಹ ಅವರಿಗೆ 25 ವರ್ಷ ಮೇಲ್ಪಟ್ಟು ಶಿಕ್ಷೆ ನೀಡುವಂತಿಲ್ಲ ಎಂದು ಹೇಳಿದ್ದಾರೆ.

    ಭೂಗತ ಪಾತಕಿ ಮುಂಬೈ ಬಾಂಬ್ ಸ್ಫೋಟಕ ಸಂಚುಕೋರ ದಾವೂದ್ ಡಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಬು ಸಲೇಂ 2002 ರಲ್ಲಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 5 ಕೋಟಿ ರೂ. ಬೇಡಿಕೆ ಇಟ್ಟ ಆರೋಪದಲ್ಲಿ 7 ವರ್ಷ ಶಿಕ್ಷೆಗೆ ಗುರಿಯಾಗಿದ್ದ.

  • ಸೊಸೆ ಚೆನ್ನಾಗಿ ಅಡುಗೆ ಮಾಡಿಲ್ಲವೆಂದು ಮಗನನ್ನೇ ಕೊಂದ ಪಾಪಿ ತಂದೆ!

    ಸೊಸೆ ಚೆನ್ನಾಗಿ ಅಡುಗೆ ಮಾಡಿಲ್ಲವೆಂದು ಮಗನನ್ನೇ ಕೊಂದ ಪಾಪಿ ತಂದೆ!

    ಮುಂಬೈ: ಸೊಸೆ ಚೆನ್ನಾಗಿ ಅಡುಗೆ ಮಾಡಿ ಹಾಕಿಲ್ಲವೆಂದು ಸಿಟ್ಟುಗೊಂಡ ತಂದೆಯೊಬ್ಬ ತನ್ನ ಮಗನನ್ನೇ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    19 ವರ್ಷದ ಸೊಸೆ ರೇಖಾ ತರಕಾರಿ ಸಾರು ಚೆನ್ನಾಗಿ ಮಾಡಲಿಲ್ಲವೆಂದು ಸಿಟ್ಟಿಗೆದ್ದ 50 ವರ್ಷದ ಶಾಂತರಾಮ್ ಉಜ್ಜೈಂಕಾರ್ ತನ್ನ ಮಗ 24 ವರ್ಷದ ಕೃಷ್ಣನನ್ನೇ ಕೊಲೆಗೈದಿದ್ದಾನೆ.

    ಏನಿದು ಪ್ರಕರಣ?: ಸೊಸೆ ರೇಖಾ ತರಕಾರಿ ಸಾರು ಮಾಡಿದ್ದರು. ಮಾವ ಊಟಕ್ಕೆಂದು ಬಂದು ಕುಳಿತಿದ್ದ ವೇಳೆ ಸೊಸೆ ಊಟ ಬಡಿಸಿದಳು. ಆದ್ರೆ ಸಾರು ಚೆನ್ನಾಗಿಲ್ಲವೆಂದು ಸಿಟ್ಟಿಗೆದ್ದ ಮಾವ ಅನ್ನದ ಬಟ್ಟಲನ್ನೇ ಹೊರಗೆ ಬಿಸಾಡಿದ್ದಾನೆ.

    ಮಾವನ ವರ್ತನೆಯಿಂದ ರೇಖಾ ಸಹಜವಾಗಿಯೇ ಬೇಸರಗೊಂಡಿದ್ದರು. ಮಾವ ಸಿಟ್ಟುಗೊಂಡ ವೇಳೆಯಲ್ಲಿ ರೇಖಾ ಪತಿ ಮನೆಯಲ್ಲಿರಲಿಲ್ಲ. ಕೆಲಸದ ನಿಮಿತ್ತ ಕೃಷ್ಣ ಹೊರಗಡೆ ತೆರಳಿದ್ದ. ಪತಿ ಮನೆಗೆ ಬಂದ ಕೂಡಲೇ ಮಾವ ಸಿಟ್ಟುಗೊಂಡಿರೋ ವಿಚಾರವನ್ನು ತಿಳಿಸಿದ್ದಾಳೆ. ಇದನ್ನು ಕೇಳಿದ ಪತಿ ಕೃಷ್ಣ, ರೇಖಾಳನ್ನೇ ನಿಂದಿಸಿ ಊಟ ಮಾಡಿ ವಾಕ್ ಮಾಡಲೆಂದು ಹೊರಗಡೆ ತೆರಳಿದ್ದಾನೆ.

    ಪತಿ ಹೊರಗಡೆ ಹೀಗುತ್ತಿದ್ದಂತೆಯೇ ಮಾವ ಮತ್ತೆ ಸೊಸೆ ರೇಖಾ ಜೊತೆ ಜಗಳವಾಡಿದ್ದಾನೆ. ಅಲ್ಲದೇ ಸೊಸೆಯ ಹೊಟ್ಟೆಗೆ ಹೊಡೆದಿದ್ದಾನೆ. ಇದನ್ನರಿತ ಪತಿ ಮನೆಗೆ ವಾಪಸ್ಸಾಗಿದ್ದಾನೆ. ಅಲ್ಲದೇ ತನ್ನ ಪತ್ನಿಯ ಮೇಲೆ ಕೈ ಮಾಡುತ್ತಿರುವ ತಂದೆಯ ವರ್ತನೆಯ ಬಗ್ಗೆ ಪ್ರಶ್ನಿಸಿದ್ದಾನೆ.

    ಪತ್ನಿ ಮೇಲೆ ಕೈ ಮಾಡದಂತೆ ತಂದೆಗೆ ಕೃಷ್ಣ ಹೇಳಿದ್ದಾನೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ತಂದೆ ಮಗನ ಮೇಲೆ ಹಲ್ಲೆಗೈದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.