Tag: ಊಟ

  • ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    ತಿರುವನಂತಪುರಂ: ಕೇರಳದ ವ್ಯಕ್ತಿಯೊಬ್ಬರು ಹಣ್ಣು ಮಾರಾಟ ಮಾಡಿ ಪ್ರತಿದಿನ 200 ಬಡ ಜನರಿಗೆ ಊಟ ಹಾಕುತ್ತಿದ್ದಾರೆ.

    ಜಿಲ್ಲೆಯ ವಡುಕಾರದಲ್ಲಿ ಹಲವು ವರ್ಷಗಳಿಂದ ಮುಚ್ಚಲಾಗಿರುವ ಬಸ್ ಶೆಲ್ಟರ್ ನಲ್ಲಿ ಮನೆ ಇಲ್ಲದೆ ಇರುವವರು ಹಾಗೂ ನಿರ್ಗತಿಕರಿಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಅಲ್ಲಿ ಊಟ ನೀಡಲಾಗುತ್ತದೆ. ಈ ಕೆಲಸವನ್ನು ಹಣ್ಣುಗಳನ್ನು ಮಾರಾಟ ಮಾಡುವ ಜೈಸನ್ ಪಾಲ್ ಅವರು ಪ್ರಾರಂಭಿಸಿದ್ದರು.

    ಮದರ್ ತೆರೇಸಾ ಅವರೇ ನನಗೆ ಈ ಕೆಲಸ ಮಾಡಲು ಸ್ಫೂರ್ತಿ ಎಂದು 37 ವರ್ಷದ ಜೈಸನ್ ತಿಳಿಸಿದ್ದಾರೆ. ಈಗ ಅವರ ಒಂದು ತಂಡವಿದ್ದು, ಆ ತಂಡ ಪ್ರತಿದಿನ ಜೈಸನ್ ಜೊತೆ ಸೇರಿ 175 ರಿಂದ 200 ಬಡ ಜನರಿಗೆ ಊಟ ನೀಡುತ್ತಿದ್ದಾರೆ. ಅಗತ್ಯವಿರುವವರಿಗೆ ಶುದ್ಧ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುವುದು ಅವರ ತಂಡದ ಉದ್ದೇಶವಾಗಿದೆ.

    ಜೈಸನ್ ಹೊರತುಪಡಿಸಿ ಈ ಕೆಲಸದಲ್ಲಿ ಅವರ ಪತ್ನಿ ಬೀನೂ ಮಾರಿಯಾ, ಆಟೋ ಡ್ರೈವರ್ ಶ್ರೀಜಿತ್, ಮಾಜಿ ಬಸ್ ಡ್ರೈವರ್ ಶೈನ್ ಜೇಮ್ಸ್ ಸೇರಿದಂತೆ ಹಲವು ಮಂದಿ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಎಲ್ಲರೂ ಈ ಕೆಲಸ ಮಾಡುತ್ತಿದ್ದಾರೆ. ಅವರ ಅಭಿಯಾನ ಸೋಮವಾರದಿಂದ ಶನಿವಾರದವರೆಗೂ ನಡೆಯುತ್ತದೆ.

    ಜೈಸನ್ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅಲ್ಲದೆ ಪ್ರತಿ ತಿಂಗಳು ಈ ಟ್ರಸ್ಟ್ ಗಾಗಿ ಹಣ ಉಳಿತಾಯ ಮಾಡುತ್ತಾರೆ. ಮೊದಲು ಜೈಸನ್ ಬಡಜನರಿಗೆ ಅನ್ನ ಮತ್ತು ಗಂಜಿ ಆಹಾರವಾಗಿ ನೀಡುತ್ತಿದ್ದರು. ಆದರೆ ಈಗ ಅವರು ಅನ್ನ-ಸಾಂಬಾರ್, ಫಿಶ್ ಕರಿ, ತರಕಾರಿಗಳು, ಉಪ್ಪಿನಕಾಯಿ ಹಾಗೂ ಸಲಾಡ್‍ಗಳನ್ನು ನೀಡುತ್ತಾರೆ.

    ಈ ತಂಡಕ್ಕೆ ಸಹಾಯ ಮಾಡಲು ಜನರು ದಾನ ಕೂಡ ಮಾಡುತ್ತಿದ್ದಾರೆ. ಕೆಲವರು ಹಣ ನೀಡಿದರೆ ಮತ್ತೆ ಕೆಲವರು, ಅಕ್ಕಿ, ಬೇಳೆ, ತರಕಾರಿ ನೀಡುತ್ತಾರೆ. ಆಹಾರವನ್ನು ವ್ಯರ್ಥ ಮಾಡಬಾರದು ಎಂಬುದು ತಂಡದ ಉದ್ದೇಶವಾಗಿದೆ. ಅಲ್ಲದೆ ಅವರು ಪ್ಲಾಸ್ಟಿಕ್ ಸಹ ಬಳಸುವುದಿಲ್ಲ. ಜೈಸನ್ ಜನರಿಗೆ ಬಾಳೆ ಎಲೆಗಳಲ್ಲಿ ಊಟ ಹಾಕುತ್ತಾರೆ.

  • ಗೃಹ ಪ್ರವೇಶದ ಆಹಾರ ಸೇವಿಸಿ 40 ಮಂದಿ ಅಸ್ವಸ್ಥ

    ಗೃಹ ಪ್ರವೇಶದ ಆಹಾರ ಸೇವಿಸಿ 40 ಮಂದಿ ಅಸ್ವಸ್ಥ

    ಹಾಸನ: ಜಿಲ್ಲೆಯ ಗುಡ್ಡೇನಹಳ್ಳಿಯಲ್ಲಿ ಭಾನುವಾರ ಗೃಹ ಪ್ರವೇಶ ಆಹಾರ ಸೇವಿಸಿ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

    ಭಾನುವಾರ ಗುಡ್ಡೇನಹಳ್ಳಿಯಲ್ಲಿ ಮನೆಯೊಂದರ ಗೃಹ ಪ್ರವೇಶವಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ 40 ಮಂದಿ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡಿದ ಬಳಿಕ ವಾಂತಿ, ಭೇದಿ ಶುರುವಾಗಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ 40 ಮಂದಿ ಅಸ್ವಸ್ಥಗೊಂಡಿದ್ದಾರೆ.

    40 ಮಂದಿ ಅಸ್ವಸ್ಥಗೊಳ್ಳುತ್ತಿದ್ದಂತೆ ತಕ್ಷಣ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ಜನರು ಅಸ್ವಸ್ಥರಾಗಿದ್ದಾರೆ ಎಂದು ಶಂಕಿಸಲಾಗಿದೆ. ಇಲ್ಲದಿದ್ದರೆ ಆಹಾರದಲ್ಲಿ ವ್ಯತ್ಯಾಸವಾಗಿ ಹೀಗಾಗಿರಬಹುದಾ? ಯಾರಾದರೂ ಆಹಾರದಲ್ಲಿ ಕಲಬೆರಕೆ ಮಾಡಿರಬಹುದಾ ಎಂಬ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.

  • ಕಾರ್ಮಿಕರ ಊಟದಲ್ಲಿ ಹಲ್ಲಿ ಬಿದ್ದ ವದಂತಿ – 25ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲು

    ಕಾರ್ಮಿಕರ ಊಟದಲ್ಲಿ ಹಲ್ಲಿ ಬಿದ್ದ ವದಂತಿ – 25ಕ್ಕೂ ಹೆಚ್ಚು ಆಸ್ಪತ್ರೆಗೆ ದಾಖಲು

    ರಾಮನಗರ: ಊಟದಲ್ಲಿ ಹಲ್ಲಿ ಬಿದ್ದ ವದಂತಿ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ಕಾರ್ಮಿಕರು ಹಾರೋಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾರೋಹಳ್ಳಿಯ ಸ್ಟವ್ ಕ್ರಾಫ್ಟ್ ಕಂಪನಿಯಲ್ಲಿ ನಡೆದಿದೆ.

    ಬೆಳಗ್ಗಿನ ಉಪಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ವದಂತಿ ಹಬ್ಬಿತ್ತು. ಈ ವಿಷಯ ತಿಳಿದು ಬೆಳಗ್ಗಿನ ಉಪಹಾರ ತಿಂದಿದ್ದ ಕಾರ್ಮಿಕರಲ್ಲಿ ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮೀಕರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

    ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರ ಸೂಚನೆ ಮೇರೆಗೆ ಒಬ್ಬೊಬ್ಬರಂತೆ ಡಿಸ್ಚಾರ್ಜ್ ಆದರು. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕರಿಗೆ ಧೈರ್ಯ ತುಂಬಿದರು. ಅಲ್ಲದೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.

    ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮತ್ತೆ ಜೈಲಿಗೆ ಹೋಗೋ ಆಸೆಯಿಂದ ಸಿಸಿಟಿವಿಯಲ್ಲಿ ಮುಖ ಕಾಣುವಂತೆ ಬೈಕ್ ಕದ್ದ

    ಮತ್ತೆ ಜೈಲಿಗೆ ಹೋಗೋ ಆಸೆಯಿಂದ ಸಿಸಿಟಿವಿಯಲ್ಲಿ ಮುಖ ಕಾಣುವಂತೆ ಬೈಕ್ ಕದ್ದ

    ಚೆನ್ನೈ: ಸಾಮಾನ್ಯವಾಗಿ ಒಮ್ಮೆ ಜೈಲಿಗೆ ಹೋಗಿ ಶಿಕ್ಷೆಗೆ ಒಳಪಟ್ಟು ಬಂದ ಮೇಲೆ ಮತ್ತೆ ಆರೋಪಿ ಅಪರಾಧ ಮಾಡಲು ಇಷ್ಟಪಡುವುದಿಲ್ಲ. ಆದರೆ ಇಲ್ಲೊಬ್ಬ ಆರೋಪಿ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜೈಲಿಗೆ ಹೋಗಬೇಕೆಂದು ಬೈಕ್ ಕದ್ದಿದ್ದಾನೆ.

    ಚೆನ್ನೈನ ಜ್ಞಾನಪ್ರಕಾಶಂ ಎಂಬಾತ ಮತ್ತೆ ಜೈಲಿಗೆ ಹೋಗಬೇಕೆಂಬ ಆಸೆಯಿಂದ ಮುಖ ಕಾಣುವಂತೆ ಬೈಕ್ ಕದ್ದಿದ್ದಾನೆ. ಈ ಮೂಲಕ ಮತ್ತೆ ಜೈಲುವಾಸ ಅನುಭವಿಸಲು ರೆಡಿಯಾಗಿದ್ದಾನೆ.

    ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದನು. ಜೈಲಿನಲ್ಲಿ ಸಿಗುತ್ತಿದ್ದ ಊಟ, ಸ್ನೇಹಿತರು, ಆರಾಮದಾಯಕ ಜೀವನವನ್ನು ಮತ್ತೆ ಅನುಭವಿಸಬೇಕೆಂದು ಕೈಲಾಸಪುರಂನ ರಸ್ತೆಯಲ್ಲಿದ್ದ ಬೈಕೊಂದನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆರೋಪಿ ಸಿಸಿಟಿವಿ ಕ್ಯಾಮೆರಾದಲ್ಲಿ ತನ್ನ ಮುಖ ಸರಿಯಾಗಿ ಕಾಣುವಂತೆ ಬೈಕ್ ಕದ್ದಿದ್ದನು.

    ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ ಜೈಲು ಜೀವನವನ್ನು ಎಂಜಾಯ್ ಮಾಡಲು ಬೈಕ್ ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೈಲಿನಲ್ಲಿ ಇದ್ದರೆ ಸರಿಯಾದ ಸಮಯಕ್ಕೆ ಊಟ-ತಿಂಡಿ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಸೋಮಾರಿ ಎಂದು ಬೈಯುವ ರೀತಿ ಜೈಲಿನಲ್ಲಿ ಯಾರೂ ಬೈಯುವುದಿಲ್ಲ. ಸಮಯ ಕಳೆಯಲು ತನ್ನ ಹಳೆಯ ಸ್ನೇಹಿತರು ಸಿಗುತ್ತಾರೆ. ಅವರೊಂದಿಗೆ ಮಾತನಾಡಿಕೊಂಡು ಎಂಜಾಯ್ ಮಾಡಬಹುದು. ಅದಕ್ಕಾಗಿ ಬೈಕ್ ಕಳ್ಳತನ ಮಾಡಿದೆ ಎಂದು ಜ್ಞಾನಪ್ರಕಾಶಂ ಹೇಳಿದ್ದಾನೆ ಎಂದು ಎಸಿಪಿ ಪಿ.ಅಶೋಕನ್ ಹೇಳಿದರು.

    ಆರೋಪಿ ಜ್ಞಾನಪ್ರಕಾಶಂ ಪೆರುಂಗಲತ್ತೂರು ನಿವಾಸಿಯಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಕಳ್ಳತನ ಮಾಡಿ ಬಂಧಿತನಾಗಿದ್ದನು. ಈ ಪ್ರಕರಣದಲ್ಲಿ ಆತ ಮೂರು ತಿಂಗಳು ವಿಚಾರಣಾಧೀನ ಕೈದಿಯಾಗಿ ಪುಝಲ್ ಜೈಲಿನಲಿದ್ದನು. ನಂತರ ಜೂನ್ 29ರಂದು ಬಿಡುಗಡೆಯಾಗಿದ್ದನು. ಆದರೆ ಈತ ಜೈಲಿನಿಂದ ಹೊರಬಂದ ಬಳಿಕ ಮನೆಯಲ್ಲಿ ಈತನ ಪತ್ನಿ ಮತ್ತು ಮಕ್ಕಳು ಪ್ರತಿದಿನ ನಿಂದಿಸುತ್ತಿದ್ದರು.

    ಹೀಗಾಗಿ ಮನೆಯಲ್ಲಿ ನಿಂದಿಸುತ್ತಾರೆ ಎಂದು ಮತ್ತೆ ಜೈಲಿಗೆ ಹೋಗಿ ಆರಾಮದಾಯಕ ಜೀವನ ನಡೆಸಬಹುದೆಂದು ಬೈಕ್ ಕದ್ದು ನಗರದಲ್ಲೆಲ್ಲಾ ಸುತ್ತಾಡಿದ್ದಾನೆ. ಜೊತೆಗೆ ತಂಬರಂನಲ್ಲಿ ಮತ್ತೊಂದು ಬೈಕ್‍ನಿಂದ ಪೆಟ್ರೋಲ್ ಕದ್ದಿದ್ದಾನೆ. ಆಗ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಕೂಡ ಬೈಕ್ ಕದ್ದು ತಂದಿದ್ದು ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

  • ತಿಪ್ಪೆಯಲ್ಲಿ ಬಿದ್ದ ಆಹಾರವನ್ನು ತಿಂದ ಚಿಂದಿ ಆಯುವ ವ್ಯಕ್ತಿ

    ತಿಪ್ಪೆಯಲ್ಲಿ ಬಿದ್ದ ಆಹಾರವನ್ನು ತಿಂದ ಚಿಂದಿ ಆಯುವ ವ್ಯಕ್ತಿ

    ಕೊಪ್ಪಳ: ಒಂದು ತುತ್ತು ಅನ್ನಕ್ಕಾಗಿ ಅನೇಕರು ನಿತ್ಯವೂ ಹೋರಾಡುತ್ತಾರೆ. ಚಿಂದಿ ಆಯುವ ವ್ಯಕ್ತಿಯೊಬ್ಬ ಹಸಿವಿನಿಂದ ತಿಪ್ಪೆಯಲ್ಲಿ ಬಿದ್ದ ಆಹಾರವನ್ನು ತಿಂದ ಮನಕುಲುಕವ ಪ್ರಸಂಗ ಗಂಗಾವತಿ ನಗರದಲ್ಲಿ ನಡೆದಿದೆ.

    ಗಂಗಾವತಿ ನಗರದ ಹೃದಯಭಾಗ ಬಸವಣ್ಣ ಸರ್ಕಲ್ ಬಳಿಯ ತಿಪ್ಪೆಯಲ್ಲಿ ಊಟದ ಎಲೆಗಳನ್ನು ಎಸೆಯಲಾಗಿತ್ತು. ಇದನ್ನು ನೋಡಿದ ಚಿಂದಿ ಆಯುವ ವೃದ್ಧನೊಬ್ಬ, ಅದರಲ್ಲಿ ಉಳಿದ ಆಹಾರವನ್ನ ತಿಂದಿದ್ದಾನೆ. ವ್ಯಕ್ತಿ ತಿಪ್ಪೆಯಲ್ಲಿ ಬಿದ್ದ ಆಹಾರ ತಿನ್ನೋದನ್ನು ನೋಡಿದ ಸ್ಥಳೀಯರು ಊಟ ಕೊಡಿಸುತ್ತೇವೆ ಎಂದು ಹೇಳಿದ್ರೂ ಆತ ಅಲ್ಲಿರೋದನ್ನ ತಿಂದಿದ್ದಾನೆ.

    ವ್ಯಕ್ತಿ ನಗರದಲ್ಲಿ ಪ್ಲಾಸ್ಟಿಕ್ ಆಯುವ ಕೆಲಸ ಮಾಡಿಕೊಂಡಿದ್ದು, ಅಸ್ವಸ್ಥನಲ್ಲಿ ಎಂದು ತಿಳಿದು ಬಂದಿದೆ. ಯಾಕೆ ಆ ರೀತಿ ಎಂಜಲು ಎಲೆಗಳಲ್ಲಿಯ ಆಹಾರ ಸೇವಿಸಿದ ಎಂಬುವುದು ತಿಳಿದು ಬಂದಿಲ್ಲ. ಸ್ಥಳೀಯರ ಪ್ರಕಾರ, ತೀವ್ರ ಹಸಿವಿನಿಂದ ಈ ರೀತಿ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.

  • ಕಾಂಗ್ರೆಸ್ ಉಚ್ಛಾಟಿತ ಮುಖಂಡನ ಮನೆಯಲ್ಲಿ ದರ್ಶನ್ ಭೋಜನ

    ಕಾಂಗ್ರೆಸ್ ಉಚ್ಛಾಟಿತ ಮುಖಂಡನ ಮನೆಯಲ್ಲಿ ದರ್ಶನ್ ಭೋಜನ

    ಮಂಡ್ಯ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡ, ಹಿಂಡವಾಳು ಸಚ್ಚಿದಾನಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ಇದೀಗ ಇಂದು ನಟ ದರ್ಶನ್ ಅವರ ಮನೆಯಲ್ಲಿ ಭೋಜನ ಸೇವಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಹಿನ್ನೆಲೆ ಹಾಗೂ ಅಂಬರೀಶ್ ಜನ್ಮದಿನದ ಅಂಗವಾಗಿ ಮಂಡ್ಯದಲ್ಲಿ ಅಭಿಮಾನ ಸಮಾವೇಶ ಆಯೋಜನೆಗೊಂಡಿದ್ದು, ಕಾರ್ಯಕ್ರಮಕ್ಕೆ ನಟ ದರ್ಶನ್ ಮಂಡ್ಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಧ್ಯಾಹ್ನದ ಊಟವನ್ನು ಕಾಂಗ್ರೆಸ್ ಉಚ್ಛಾಟಿತ ಮುಖಂಡನ ಸಚ್ಚಿದಾನಂದ ಮನೆಯಲ್ಲಿ ಭರ್ಜರಿ ಬಾಡೂಟ ಸೇವಿಸಿದ್ದಾರೆ. ನಟ ದರ್ಶನ್ ಜೊತೆ ನಟ ಪ್ರೇಮ್, ಸಚ್ಚಿದಾನಂದ ಮತ್ತು ಆಪ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ನನ್ನಂತೆ ಸುಮಲತಾರಿಗೆ ಬೆಂಬಲಿಸುವ ಕಾರ್ಯಕರ್ತರನ್ನು ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಹಾಕ್ತೀರಾ: ಸಚ್ಚಿದಾನಂದ ವಾಗ್ದಾಳಿ

    ಸಚ್ಚಿದಾನಂದ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿಯಾಗಿ ಸುಮಲತಾ ಅಂಬರೀಶ್ ಅವರಿಗೆ ಸಹ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿತ್ತು. ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಹಿಂಡವಾಳು ಸಚ್ಚಿದಾನಂದ ಅಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಸೋದರ ವಾತ್ಸಲ್ಯ: 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಊಟ ಮಾಡ್ತೀರೋ ಅಣ್ಣ-ತಮ್ಮ

    ಸೋದರ ವಾತ್ಸಲ್ಯ: 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಊಟ ಮಾಡ್ತೀರೋ ಅಣ್ಣ-ತಮ್ಮ

    ಮುಂಬೈ: ಸೋದರರಿಬ್ಬರು ಕಳೆದ 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಜೊತೆಯಾಗಿ ಊಟ ಮಾಡಿಕೊಂಡು ಬರುತ್ತಿದ್ದಾರೆ. ಮೊದಲಿಗೆ ಐದು ಜನ ಸೋದರರು ಜೊತೆಯಾಗಿಯೇ ಊಟ ಮಾಡುತ್ತಿದ್ದರು. ಐವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಪ್ರತಿನಿತ್ಯ ಜೊತೆಯಾಗಿ ಊಟ ಮಾಡುತ್ತಿದ್ದಾರೆ.

    ಮುಂಬೈ ನಗರದ ವ್ಯಾಪಾಗಳಾದ ಪ್ರಕಾಶ್ ಚಂದ್ (70) ಮತ್ತು ಪುಷ್ಪರಾಜ್ ಚಂದ್ (66) ಜೊತೆಯಾಗಿ ಊಟ ಮಾಡಿಕೊಂಡು ಬರುವ ಪದ್ಧತಿಯನ್ನು ಇಂದಿಗೂ ಜೀವಂತವಾಗಿರಿಸುವ ಮೂಲಕ ಸೋದರ ವಾತ್ಸಲ್ಯಕ್ಕೆ ತಾಜಾ ಉದಾಹರಣೆಯಾಗಿದ್ದಾರೆ.

    ಮೂಲತಃ ರಾಜಸ್ಥಾನದ ಬಿಸಲಾಪುರದ ನಿವಾಸಿಯಾದ ರಾಮ್‍ಲಾಲ್ ಜೈನ್ 1962ರಲ್ಲಿ ವ್ಯಾಪಾರ ನಿಮಿತ್ತ ಮುಂಬೈ ನಗರಕ್ಕೆ ಆಗಮಿಸಿದ್ದರು. ಸಣ್ಣ-ಪುಟ್ಟ ಕೆಲಸದ ಜೊತೆಗೆ ತಮ್ಮದೇ ಸ್ವಂತ ಟ್ರಾನ್ಸ್ ಪೋರ್ಟ್ ಸಂಸ್ಥೆ ಆರಂಭಿಸಿದ್ದರು. ವ್ಯವಹಾರದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಸೋದರರಿಬ್ಬರನ್ನು ಮುಂಬೈಗೆ ಕರೆಸಿಕೊಳ್ಳುತ್ತಾರೆ. ಹಾಗೆ ರಾಮ್‍ಲಾಲ್ ತಮ್ಮ ಕೊನೆಯ ಸೋದರರನ್ನು ಕರೆಸಿಕೊಳ್ಳುತ್ತಾರೆ. ಹೀಗೆ ಸೋದರರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಅಂದಿನಿಂದ ಐವರು ಸದಸ್ಯರು ಪ್ರತಿನಿತ್ಯ ಜೊತೆಯಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡೋದನ್ನು ರೂಡಿಸಿಕೊಳ್ಳುತ್ತಾರೆ. ಮೂವರು ಸೋದರರು ಸಾವನ್ನಪ್ಪಿದ ಬಳಿಕವೂ ಪ್ರಕಾಶ್ ಮತ್ತು ಪುಷ್ಪರಾಜ್ ಊಟದ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

    ಮಧ್ಯಾಹ್ನದ ಊಟವನ್ನು ಪ್ರಕಾಶ್ ಚಂದ್ ಮನೆಯಲ್ಲಿ, ರಾತ್ರಿ ನನ್ನ ನಿವಾಸದಲ್ಲಿ ನಾವು ಊಟ ಮಾಡುತ್ತೇವೆ. ಕೆಲಸದ ನಿಮಿತ್ತ ಇಬ್ಬರಲ್ಲಿ ಒಬ್ಬರು ಬರೋದು ತಡವಾದ್ರೆ ಒಬ್ಬರಿಗೊಬ್ಬರು ಕಾದು ಕೊನೆಗೆ ಜೊತೆಯಾಗಿಯೇ ಆಹಾರ ಸೇವಿಸುತ್ತೇವೆ ಎಂದು ಪುಷ್ಪರಾಜ್ ಹೇಳುತ್ತಾರೆ.

    ಪುಷ್ಪರಾಜ್ ಕಳೆದ 9 ವರ್ಷಗಳಿಂದ ವಾರದಲ್ಲಿ ಕೆಲವು ದಿನ ಉಪವಾಸ ಕೈಗೊಳ್ಳುತ್ತಾರೆ. ಉಪವಾಸದ ಮರುದಿನ ಸೋದರ ಬರೋವರೆಗೂ ಊಟ ಮಾಡಲ್ಲ ಎಂದು ಪುಷ್ಪರಾಜ್ ಪತ್ನಿ ಪವನಬೆನ್ ತಿಳಿಸುತ್ತಾರೆ.

  • ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

    ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

    ಹೈದರಾಬಾದ್: ವ್ಯಕ್ತಿಯೊಬ್ಬರು ತನ್ನ ಕೈಯಾರೆ ದಿನಕ್ಕೆ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ವಿಶ್ವ ದಾಖಲೆ ಮಾಡಿದ್ದಾರೆ.

    ಹೈದರಾಬಾದ್ ಮೂಲದ ಸರ್ಕಾರೇತರ ಸಂಸ್ಥೆ “ಸರ್ವ್ ನೀಡಿ” ಸ್ಥಾಪಕ ಗೌತಮ್ ಕುಮಾರ್ ಒಂದೇ ದಿನದಲ್ಲಿ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ.

    ಗೌತಮ್ ಭಾನುವಾರ ಮೂರು ಸ್ಥಳಗಳಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದಾರೆ. ಗೌತಮ್ ಮೊದಲು ಗಾಂಧಿ ಆಸ್ಪತ್ರೆ, ರಾಜೇಂದ್ರ ನಗರ ಹಾಗೂ ಚೌತುಪಾಲ್‍ನ ಅಮ್ಮ-ನಾನಾ ವೃದ್ಧಶ್ರಮದಲ್ಲಿ ಇದ್ದ ಜನರಿಗೆ ಊಟ ಮಾಡಿಸಿದ್ದಾರೆ. ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕೆ.ವಿ ರಮಣ ರಾವ್ ಹಾಗೂ ತೆಲಂಗಾಣವನ್ನು ಪ್ರತಿನಿಧಿಸುವ ಟಿ.ಎಂ ಶ್ರೀಲತಾ ಅವರು ಗೌತಮ್ ಕುಮಾರ್ ಅವರಿಗೆ ಈ ಪ್ರಶಸ್ತಿ ಪತ್ರವನ್ನು ನೀಡಿದ್ದಾರೆ.

    ನಾನು ಸರ್ವ್ ನೀಡಿ ಸಂಸ್ಥೆಯನ್ನು 2014ರಲ್ಲಿ ಶುರು ಮಾಡಿದೆ. ಈಗ ಈ ಸಂಸ್ಥೆಯಲ್ಲಿ 140ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. 2014ರಿಂದ ನಾವು ಈ ರೀತಿಯ ಸಮಾಜ ಸೇವೆ ಕೆಲಸಗಳು ಮಾಡುತ್ತಿದ್ದೇವೆ. ಆದರೆ ಈಗ ನಾನು 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದೇನೆ. ಹಾಗಾಗಿ ಇದು ವಿಶ್ವ ದಾಖಲೆ ಆಗಿದೆ. “ಯಾರೂ ಅನಾಥರಂತೆ ಸಾಯಬಾರದು, ಯಾರು ಕೂಡ ಹಸಿವಿನಿಂದ ಸಾಯಬಾರದು” ಇದು ನನ್ನ ಸಂಸ್ಥೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

  • ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

    ದಲಿತ ಯುವಕ ಮೇಲ್ವರ್ಗದವರ ಮುಂದೆ ಊಟ ಮಾಡಿದ್ದೇ ತಪ್ಪಾಯ್ತು!

    ಡೆಹ್ರಾಡೂನ್: 23 ವರ್ಷದ ದಲಿತ ಯುವಕನೊಬ್ಬ ಮೇಲ್ವರ್ಗದ ಜನರ ಮುಂದೆ ಊಟ ಮಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಮಾನವೀಯ ಘಟನೆಯೊಂದು ಉತ್ತರಾಖಂಡ್ ನ ಥೆರಿ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ಜಿತೇಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಏಪ್ರಿಲ್ 26ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜೀತೆಂದ್ರ ಭಾನುವಾರ ಥೆರಿ ಜಿಲ್ಲೆಯ ಶ್ರಿಕೋಟ್ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೇಲ್ವರ್ಗದವರ ಮುಂದೆ ಕುರ್ಚಿಯಲ್ಲಿ ಕುಳಿತುಕೊಂಡು ತನ್ನ ಪಾಡಿಗೆ ತಾನು ಊಟ ಮಾಡಿಕೊಂಡಿದ್ದನು. ಈ ವೇಳೆ ಏಳು ಮಂದಿ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ 7 ಮಂದಿ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಜಿತೇಂದ್ರ ಮೇಲ್ವರ್ಗದ ಜನರ ಮುಂದೆ ಕುಳಿತು ಊಟ ಮಾಡುತ್ತಿದ್ದುದರಿಂದ ತಾಳ್ಮೆ ಕಳೆದುಕೊಂಡು ಅವರು ಆತನಿಗೆ ಥಳಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಹಿರಿಯ ಪೊಲೀಸ್ ಅಧಿಕಾರಿ ಉತ್ತಮ್ ಸಿಂಗ್ ಜಿಮ್ ವಾಲಾ ಹೇಳಿದ್ದಾರೆ.

    ಯುವಕನ ಮೇಲೆ ಹಲ್ಲೆ ನಡೆದ ಪರಿಣಾಮ ಗಂಭೀರ ಗಾಯಗೊಂಡು ಡೆಹ್ರಾಡೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ 9 ದಿನಗಳ ನಂತರ ಆತ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅವರು ವಿವರಿಸಿದ್ದಾರೆ.

    ಘಟನೆ ಸಂಬಂಧ ಮೃತನ ತಂಗಿ ನೀಡಿದ ದೂರಿನಂತೆ ಗಜೇಂದ್ರ ಸಿಂಗ್, ಸೊಬಾನ್ ಸಿಂಗ್, ಕುಶಲ್ ಸಿಂಗ್, ಗಬ್ಬರ್ ಸಿಂಗ್, ಗಂಭೀರ್ ಸಿಂಗ್, ಹರ್ಬಿರ್ ಸಿಂಗ್ ಹಾಗೂ ಹುಕುಮ್ ಸಿಂಗ್ ಎಂಬ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಮದುವೆ ಊಟ ಸೇವಿಸಿ 25ಕ್ಕೂ ಹೆಚ್ಚು ಜನ ಅಸ್ವಸ್ಥ

    ಮದುವೆ ಊಟ ಸೇವಿಸಿ 25ಕ್ಕೂ ಹೆಚ್ಚು ಜನ ಅಸ್ವಸ್ಥ

    ದಾವಣಗೆರೆ: ಮದುವೆ ಊಟ ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಚನ್ನಗಿರಿ ತಾಲೂಕಿನ ಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಹಟ್ಟಿ ಗ್ರಾಮದ ನಿಸಾರ್ ಅಹ್ಮದ್ ಎಂಬವರ ಮದುವೆಗೆ ಸಂಬಂಧಿಕರು, ಸ್ಥಳೀಯರು ಆಗಮಿಸಿ ವಧು-ವರರನ್ನು ಹಾರೈಸಿದರು. ಬಳಿಕ ಮದುವೆಯಲ್ಲಿ ಲಾಡು, ಅನ್ನ ಹಾಗೂ ಸಾಂಬಾರ್ ಊಟ ಮಾಡಿದ್ದಾರೆ. ಆದರೆ ಸಂಜೆಯಾಗುತ್ತಿದ್ದಂತೆ 25ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡು ಬೀಳಲು ಪ್ರಾರಂಭಿಸಿದರು. ತಕ್ಷಣವೇ ಅವರನ್ನು ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

    ಕೆಲವರ ಸ್ಥಿತಿ ಗಂಭೀರವಾಗಿದ್ದು, ಅಂಥವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.