Tag: ಊಟ

  • ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕ ಸಾವು

    ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕ ಸಾವು

    ಕಾರವಾರ: ಊಟ ಮಾಡುತ್ತಿದ್ದ ವೇಳೆ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕ ಸಾವನ್ನಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಬಿಣಗಾದಲ್ಲಿ ನಡೆದಿದೆ.

    ಬಿಣಗಾ ಮಾಳಸವಾಡ ನಿವಾಸಿ ಅಮಿತ್ ಮಾಳಸೇರ್ (38) ಮೃತ ದುರ್ದೈವಿ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಅಮಿತ್, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆಯನ್ನು ಸಹ ಪಡೆಯುತ್ತಿದ್ದರು. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ

    ಅಮಿತ್ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅನ್ನದ ಅಗಳೊಂದು ಗಂಟಲಲ್ಲಿ ಸಿಲುಕಿತ್ತು. ತಕ್ಷಣ ಮನೆಯವರು ಅಮಿತ್‌ಗೆ ನೀರು ಕುಡಿಸಿದ್ದು, ಆತ ಅಲ್ಲೇ ಕುಸಿದು ಬಿದಿದ್ದ. ಕೂಡಲೇ ಆತನನ್ನು ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ವೈದ್ಯರು ಪರೀಕ್ಷಿಸಿದಾಗ ಗಂಟಲಲ್ಲಿ ಅನ್ನದ ಅಗಳು ಸಿಲುಕಿ ಅಮಿತ್ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಹಾಸ್ಯನಟ ಚಿಕ್ಕಣ್ಣ ಮದ್ವೆ ನಿಶ್ಚಯ

    ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ!

    ಮೀನಿನ ಊಟ ಮಾಡುತ್ತಿರುವಾಗಲೇ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ!

    ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ (Om Prakash) ಮೀನಿನ ಊಟ ಮಾಡುತ್ತಿದ್ದಾಗಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಹೌದು. ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ (ಹೊಸೂರು ಸರ್ಜಾಪುರ ಲೇಔಟ್‌) ನಿವಾಸದಲ್ಲಿ ಮಧ್ಯಾಹ್ನ ಊಟಕ್ಕೆ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್‌ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ.

    ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ (Murder)‌ ಮಾಡಿದ ನಂತರ ಮೇಲಿನ ಮಹಡಿಯ ಕೋಣೆಗಳಿಗೆ ಹೋಗಿದ್ದ ತಾಯಿ, ಮಗಳು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಪೊಲೀಸರು (Police) ಮೊದಲು ಕೊಲೆಯಾದ ಜಾಗಕ್ಕೆ ಬಂದಾಗ ಕೃತಿ ರಂಪಾಟ ಮಾಡಿದ್ದಾಳೆ. ಪೊಲೀಸರು ಬಂದಾಗ ಬಾಗಿಲು ತೆಗೆಯದೇ ಲಾಕ್‌ ಮಾಡಿದ್ದಳು. ಕೊಲೆ ಮಾಡಿದವರು ಯಾರು ಎಂದು ಪ್ರಶ್ನೆ ಮಾಡಿದಾಗ ಪತ್ನಿ ಪಲ್ಲವಿ ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಮನೆಯ ಮೇಲಿದ್ದ ಕೃತಿ ಹೊರಗಡೆ ಬಾರದೇ ಇದ್ದಾಗ ಪೊಲೀಸರು ಬಾಗಿಲು ಒಡೆದು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

     

    ಕ್ರೈಂ ಸೀನ್ ಪರಿಶೀಲನೆ ವೇಳೆ ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಕೇವಲ ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಓಂ ಪ್ರಕಾಶ್ ಮೃತದೇಹದ ಪಕ್ಕದಲಲ್ಲೇ ಒಡೆದ ಬಿಯರ್ ಬಾಟಲ್ ಕೂಡ ಪತ್ತೆಯಾಗಿದೆ.

  • ಹಾಲು ಹಾಕ್ಕೊಂಡು ಊಟ ಮಾಡ್ಬೇಡ ಎಂದಿದ್ದಕ್ಕೆ ಜಗಳ- ತಂದೆಯಿಂದ್ಲೇ ಮಗನ ಕೊಲೆ

    ಹಾಲು ಹಾಕ್ಕೊಂಡು ಊಟ ಮಾಡ್ಬೇಡ ಎಂದಿದ್ದಕ್ಕೆ ಜಗಳ- ತಂದೆಯಿಂದ್ಲೇ ಮಗನ ಕೊಲೆ

    ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕ್ಲುಲ್ಲಕ ಕಾರಣಗಳಿಗೆ ನಡೆಯುವ ಜಗಳ ಕೊಲೆಯಲ್ಲಿ ಅಂತ್ಯವಾಗುತ್ತಿವೆ. ಕೆಲವೊಮ್ಮೆ ಈ ಘಟನೆಗಳು ಅಚ್ಚರಿ ಮೂಡಿಸುತ್ತವೆ. ಬರೀ ಇಷ್ಟಕ್ಕೆ ಕೊಲೆ ಮಾಡಬೇಕಾ ಅಂತಾ ಅನಿಸೋದು ಸಹಜ. ಇದೀಗ ಅಂಥದ್ದೇ ಒಂದು ಘಟನೆ ಬಾಗಲಕೋಟೆಯಲ್ಲಿ (Bagalkote) ನಡೆದಿದೆ.

    ಹೌದು. ಹಾಲು ಹಾಕಿಕೊಂಡು ಊಟ ಮಾಡಬೇಡ ಎಂದು ತನ್ನೆತ್ತರಕ್ಕೆ ಬೆಳೆದ ಮಗನಿಗೆ ಬುದ್ಧಿ ಹೇಳಿದ್ದಾರೆ. ಆದರೆ ತಂದೆಗೆ ಇದು ಬುದ್ಧಿ ಮಾತು ಅನಿಸಿರೂ ಇಬ್ಬರ ಮಧ್ಯೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ತಂದೆ ಮಗನ ಕೊಲೆ ಮಾಡಲು ಸ್ಕೆಚ್‌ ಹಾಕುತ್ತಾನೆ.

    ಮಗ ಮಲಗಿದ್ದಾಗ ಕಂಠಪೂರ್ತಿ ಕುಡಿದು ಬಂದ ತಂದೆ, ಕೊಡಲಿಯಿಂದ ಮುಖ ಹಾಗೂ ಕತ್ತಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ.

    ಕರಿಯಪ್ಪ ಬೀಳಗಿ (21) ನನ್ನು ತಂದೆ ಡೊಂಗರೆಪ್ಪ ಬೀಳಗಿಯಿಂದ ಹತ್ಯೆ ಮಾಡಿದ್ದಾನೆ. ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ತಂದೆ!

  • ಕಳ್ಳತನಕ್ಕೆ ಬಂದು ಹಣ, ಬಂಗಾರ ದೋಚಿದ್ದಲ್ಲದೇ ಊಟ ಮಾಡಿ ಹೋದ ಕಳ್ಳರು!

    ಕಳ್ಳತನಕ್ಕೆ ಬಂದು ಹಣ, ಬಂಗಾರ ದೋಚಿದ್ದಲ್ಲದೇ ಊಟ ಮಾಡಿ ಹೋದ ಕಳ್ಳರು!

    ಹಾವೇರಿ: ಮನೆಯೊಂದರಲ್ಲಿ ಕಳ್ಳತನಕ್ಕೆ (Theft) ಬಂದು ಚಿನ್ನಾಭರಣವನ್ನು ದೋಚಿದ್ದಲ್ಲದೇ ಅದೇ ಮನೆಯಲ್ಲಿ ಊಟವನ್ನೂ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೇಬೆನ್ನೂರು (Ranebennur) ತಾಲೂಕಿನ ಚೌಡಯ್ಯದಾನಪುರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪರಸಪ್ಪ ಎರೆಸೀಮೆ ಅವರ ಮನೆಯಲ್ಲಿ 10 ಗ್ರಾಂ ಬೆಳ್ಳಿಯ ಆಭರಣ, 10 ಗ್ರಾಂ ಚಿನ್ನದ ಆಭರಣ ಜೊತೆಗೆ 50 ಸಾವಿರ ರೂ. ಹಣ ದೊಚಿ ಕಳ್ಳರು (Thieves) ಪರಾರಿಯಾಗಿದ್ದಾರೆ. ಮನೆಯ ಸದಸ್ಯರು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಮನೆಯ ಬಾಗಿಲನ್ನು ಗುದ್ದಲಿಯಿಂದ ಒಡೆದು, ಮನೆಯೊಳಗೆ ನುಗ್ಗಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಚಿನ್ನಾಭರಣವನ್ನು ಕದ್ದಿದ್ದಲ್ಲದೇ ಮನೆಯಲ್ಲಿ ತಯಾರಿಸಿಟ್ಟಿದ್ದ ಊಟವನ್ನು ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: KPSC ಬೋರ್ಡ್ ಮುಂದೆ ನೂರಾರು ಪತ್ರಗಳನ್ನು ಚೆಲ್ಲಿ ಅಭ್ಯರ್ಥಿ ಹೈಡ್ರಾಮಾ

    ಕಷ್ಟಪಟ್ಟು ದುಡಿದು ಮುಂದಿನ ಜೀವನಕ್ಕಾಗಿ ಇಟ್ಟುಕೊಂಡಿದ್ದ ಹಣ, ಒಡವೆಯನ್ನು ಖತರ್ನಾಕ್ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಕಳ್ಳರ ಚಲನವಲನಗಳು ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ನಾಪತ್ತೆ ಪ್ರಕರಣ – ಕಾರು ಪತ್ತೆ, ಕಿಡ್ನ್ಯಾಪ್ ಶಂಕೆಗೆ ಪುಷ್ಠಿ ನೀಡಿದ ರಕ್ತದ ಕಲೆ!

  • ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ನವದೆಹಲಿ: ಜಿ20 ಶೃಂಗಸಭೆಗೆ (G20 Summit) ಭಾರತ ಸಂಪೂರ್ಣ ಸಿದ್ಧವಾಗಿದೆ. ವಿದೇಶಿ ಗಣ್ಯರ ವಾಸ್ತವ್ಯಕ್ಕೆ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದ್ದು, ಇಲ್ಲಿ ಭೋಜನದ (Dinner) ವೇಳೆ ವಿಶೇಷ ಅನುಭೂತಿ ನೀಡಲು ಚಿನ್ನ (Gold) ಲೇಪಿತ ತಟ್ಟೆ (Plate), ಬೆಳ್ಳಿ (Silver) ಲೋಟಗಳಲ್ಲಿ (Glass) ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

    ಇದಕ್ಕಾಗಿ ಐಕಾನಿಕ್ ಐಟಿಸಿ ತಾಜ್ ಸೇರಿದಂತೆ 11 ಹೋಟೆಲ್‌ಗಳಿಗೆ ತಟ್ಟೆ ಮತ್ತು ಲೋಟಗಳನ್ನು ಸರಬರಾಜು ಮಾಡುವ ಕ್ರೋಕರಿ ಕಂಪನಿಗೆ ಚಿನ್ನ ಮತ್ತು ಬೆಳ್ಳಿ ಲೇಪಿತ ಅಗತ್ಯಗಳನ್ನು ಪೂರೈಕೆ ಮಾಡಲು ಜವಾಬ್ದಾರಿ ನೀಡಲಾಗಿದೆ. ಪಾತ್ರೆಗಳ ಮೇಲೆ ಜೈಪುರ, ಉದಯಪುರ, ವಾರಣಾಸಿ ಮತ್ತು ಕರ್ನಾಟಕದ ಸಂಕೀರ್ಣ ಕಲಾತ್ಮಕತೆ ಇರಲಿದ್ದು, ಇದು ಭಾರತದ ವೈವಿಧ್ಯಮಯ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

     

    ಈ ವಸ್ತುಗಳು ತಯಾರಾದ ಬಳಿಕ ಪ್ರತಿ ವಸ್ತುವನ್ನು R&D ಲ್ಯಾಬ್‌ನಲ್ಲಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪಾತ್ರೆಗಳ ವಿನ್ಯಾಸವು ಪ್ರತಿ ಹೋಟೆಲ್‌ನ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತದೆ. ಉದಾಹರಣೆಗೆ ‘ಮಹಾರಾಜ ಥಾಲಿ’ ಸೆಟ್, ಉಪ್ಪು ಮತ್ತು ಮೆಣಸಿನಕಾಯಿಗಾಗಿ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಗಳು ಮತ್ತು 5-6 ಬೌಲ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲವನ್ನೂ ಹೋಟೆಲ್‌ನ ಮೆನು ಮತ್ತು ಶೈಲಿಗೆ ಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

    ಕ್ರೋಕರಿ ಕಂಪನಿಯು ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ವಿನ್ಯಾಸದಲ್ಲಿ ಅಳವಡಿಸಿಕೊಂಡಿದೆ. ಇದು ಈ ಹಿಂದೆ ಅತಿಥಿಗಳಿಂದ ಮೆಚ್ಚುಗೆಯನ್ನು ಗಳಿಸಿತ್ತು. ಮಹಾರಾಜ ಥಾಲಿ ಜೊತೆಗೆ, ದಕ್ಷಿಣ ಭಾರತದ ವಿನ್ಯಾಸಗಳನ್ನು ಸಹ ಸಂಗ್ರಹದಲ್ಲಿ ಒಳಗೊಳಿಸಲಾಗುತ್ತಿದೆ. ಕಂಪನಿಯ ಮಾಲೀಕ ರಾಜೀವ್, ಮಾಜಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ವಿಶೇಷ ಊಟದ ಸೆಟ್‌ಗಳನ್ನು ಪ್ರಸ್ತುತಪಡಿಸಿದ್ದರು. ಇವುಗಳನ್ನು ಕಂಡು ಒಬಾಮಾ ತುಂಬಾ ಪ್ರಭಾವಿತರಾಗಿ ತಮ್ಮೊಂದಿಗೆ ಊಟದ ಸೆಟ್ ಅನ್ನು ಕೊಂಡೊಯ್ದಿದ್ದರು. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು

    ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು

    ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದು ನಟ ಡಾಲಿ ಧನಂಜಯ್ (Dhananjay) ಫ್ಯಾನ್ಸ್ ಜೊತೆ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ ನಿನ್ನೆ ಮಧ್ಯರಾತ್ರಿಯಿಂದಲೇ ಸಮಯವನ್ನು ಮೀಸಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ‘ಡಾಲಿ ಉತ್ಸವ’ ಹೆಸರಿನಲ್ಲಿ ಕಾರ್ಯಕ್ರಮವನ್ನೇ ಆಯೋಜನೆ ಮಾಡಿದ್ದಾರೆ.

    ಎರಡು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದು, ಬಂದಿದ್ದ ಅಭಿಮಾನಿಗಳಿಗಾಗಿಯೇ ಉತ್ತರ ಕರ್ನಾಟಕ (North Karnataka) ಮತ್ತು ಸೌತ್ ಇಂಡಿಯನ್ ಶೈಲಿಯಲ್ಲಿ ಊಟವನ್ನು (lunch) ಆಯೋಜನೆ ಮಾಡಲಾಗಿದೆ. ಅದರಲ್ಲೂ ರಾಯಚೂರು, ಸಿಂಧನೂರಿನ ಅಭಿಮಾನಿಗಳು ಖಡಕ್ ರೊಟ್ಟಿ, ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ , ಮೆಣಸಿನಕಾಯಿ ಒಳಗೊಂಡ ಊಟದ ವ್ಯವಸ್ಥೆ ಮಾಡಿದ್ದಾರೆ. ಡಾಲಿ ಅಭಿಮಾನಿಯಾದ ಶಿವರಾಜ್ ಪಾಟೀಲ್ ಗುಂಜಳ್ಳಿ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಮಾಡಿದ್ದು ವಿಶೇಷ. ಇದನ್ನೂ ಓದಿ:ನ್ಯೂಯಾರ್ಕ್‌ನ 41ನೇ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾದ ಸಮಂತಾ

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ್, ‘ನಾನು ಹುಟ್ಟು ಹಬ್ಬ ಸೆಲೆಬ್ರೇಶನ್ ಮಾಡ್ಕೊಂಡು ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ 3-4 ವರ್ಷಗಳಿಂದ ಮಾಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಣೆ ಮಾಡಿದ್ದು ತುಂಬಾ ಖುಷಿಯಾಗಿದೆ. ಉತ್ತರಕಾಂಡ ಸಿನಿಮಾದ ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2 ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದೀವಿ’ ಎಂದರು.

     

    ಮುಂದುವರೆದು ಮಾತನಾಡಿದ ಡಾಲಿ, ‘ನಾನು ಬರಬೇಕಾದರೆ ತುಂಬಾ ಜನ ವಿಶ್ ಮಾಡಿದ್ರು. ಜನರು ಕೂಡ ನೀನು ಚೆನ್ನಾಗಿ ಬೆಳೀಬೇಕು ಅಂತ ಹಾರೈಸ್ತಿದಾರೆ. ಅದಕ್ಕಿಂತ ದೊಡ್ಡ ಸಂಪಾದನೆ ಯಾವುದು ಇಲ್ಲ. ಅದನ್ನ ಕಾಪಾಡಿಕೊಳ್ಳೋಕೆ ಕೆಲಸ ಮಾಡ್ತೀನಿ. ಜನರ ಪ್ರೀತಿಗೆ ನಾನ್ಯಾವತ್ತೂ ಬೆಲೆ ಕಟ್ಟೋದಕ್ಕೆ ಆಗಲ್ಲ. ಅಣ್ಣಾ ಫ್ರಮ್ ಮೆಕ್ಸಿಕೋ ಸಿನಿಮಾ ಬಹಳ ಡಿಫರೆಂಟ್ ಆಗಿದೆ. ಅಭಿಮಾನಿಗಳಿಗೆ ಇಷ್ಟವಾಗುವಂತಹ ಪಾತ್ರವನ್ನ ಕೊಡ್ತಾ ಇದೀನಿ. ಅಭಿಮಾನಿಗಳಿಗೆ ಪಾತ್ರಗಳಿಂದ ಒಂದಿಷ್ಟು ವಿಷಯಗಳನ್ನ ಹೇಳ್ತಾ ಇದೀನಿ’ ಎನ್ನುತ್ತಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಶಪಥ ಹೆದ್ದಾರಿ ಲೋಕಾರ್ಪಣೆ – ಜನರಿಗೆ ಸಿದ್ಧವಾಗ್ತಿದೆ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನ

    ದಶಪಥ ಹೆದ್ದಾರಿ ಲೋಕಾರ್ಪಣೆ – ಜನರಿಗೆ ಸಿದ್ಧವಾಗ್ತಿದೆ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನ

    ಮಂಡ್ಯ: ಬೆಂಗಳೂರು – ಮೈಸೂರು ದಶಪಥ ರಸ್ತೆಯ (Mysuru Bengaluru Expressway) ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ವೇದಿಕೆಯಿಂದ ಸ್ವಲ್ಪ ದೂರದ ವಿಶಾಲವಾದ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಬೆಂಗಳೂರು – ಮೈಸೂರು ದಶಪಥ ರಸ್ತೆಯ ಲೋಕಾರ್ಪಣೆ ಮಾಡಿ ಲಕ್ಷಾಂತರ ಜನರ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಕಾರ್ಯಕ್ರಮಕ್ಕೆ ಬರುವವರಿಗಾಗಿಯೇ ವಿಶೇಷವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಊಟವನ್ನು ಸಿದ್ಧಪಡಿಸಲು ಒಟ್ಟು 600 ಬಾಣಸಿಗರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರಿಗಾಗಿ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನವನ್ನು ಸಿದ್ಧಪಡಿಸಿದ್ದಾರೆ. 250 ಕ್ವಿಂಟಲ್ ಅಕ್ಕಿ 50 ಕ್ವಿಂಟಲ್ ತರಕಾರಿ ಬಳಕೆ ಮಾಡಲಾಗಿದೆ.

    ವೇದಿಕೆ ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟ ತಯಾರಿ ಮಾಡಿ ಬಡಿಸುವ ಜವಾಬ್ದಾರಿಯನ್ನು ಬೆಂಗಳೂರಿನ (Bengaluru) ದೇಸಿ ಮಸಾಲ ಕ್ಯಾಟರಿಂಗ್‌ನವರು ವಹಿಸಿಕೊಂಡಿದ್ದಾರೆ. 250 ಕೌಂಟರ್‌ನಲ್ಲಿ ಜನರಿಗೆ ಊಟ ಬಡಿಸಲಾಗುತ್ತದೆ. ಒಟ್ಟು ಮೂರೂವರೆ ಲಕ್ಷ ಜನರಿಗೆ ಊಟ ತಯಾರು ಮಾಡುವಷ್ಟು ಪದಾರ್ಥಗಳನ್ನು ಸ್ಥಳದಲ್ಲಿ ಇಟ್ಟುಕೊಳ್ಳಲಾಗಿದೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

    ಮೋದಿ ಮಿನಿ ಕಟೌಟ್‌: ದಶಪಥ ರಸ್ತೆಯ ಲೋಕಾರ್ಪಣೆಯ ವೇದಿಕೆ ಕಾರ್ಯಕ್ರಮಕ್ಕೆ ಬಂದವರ ಕೈಯಲ್ಲಿ ಪ್ರಧಾನಿ ಹಾಗೂ ಸಿಎಂ ಮಿನಿ ಕಟೌಟ್‌ಗಳು ರಾರಾಜಿಸಲಿವೆ. ಮೋದಿ ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai)  ಅವರ ಮಿನಿ ಕಟೌಟ್‌ಗಳನ್ನು ವೇದಿಕೆಯ ಕಾರ್ಯಕ್ರಮದ ಬಹುತೇಕ ಕುರ್ಚಿಗಳ ಮುಂದೆ ಇಡಲಾಗಿದೆ. ಜನರು ಮೋದಿ ಹಾಗೂ ಸಿಎಂ ಪರವಾಗಿ ಘೋಷಣೆ ಕೂಗುವಾಗ ಈ ಕಟೌಟ್‌ಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ 25 ಸಾವಿರಕ್ಕೂ ಹೆಚ್ಚು ಕಟೌಟ್‌ಗಳನ್ನು ಕುರ್ಚಿಗಳ ಮುಂದೆ ಇಡಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನ – ಮಂಡ್ಯ, ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

  • ಶಿಕ್ಷಕರು ಮೊಬೈಲ್‌ನಲ್ಲಿ ಮಗ್ನ – ವಿದ್ಯಾರ್ಥಿಗಳಿಗೆ ಪಾಠವೂ ಇಲ್ಲ, ಊಟವೂ ಇಲ್ಲ

    ಶಿಕ್ಷಕರು ಮೊಬೈಲ್‌ನಲ್ಲಿ ಮಗ್ನ – ವಿದ್ಯಾರ್ಥಿಗಳಿಗೆ ಪಾಠವೂ ಇಲ್ಲ, ಊಟವೂ ಇಲ್ಲ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ (Student) ಪಾಠವೂ ಇಲ್ಲ, ಶುಚಿಯಾದ ಬಿಸಿ ಊಟವೂ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಿ.ಕಣಬೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ (School) 1 ರಿಂದ 7ನೇ ತರಗತಿವರೆಗೆ 117 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲಾ ಅವಧಿಯಲ್ಲಿ ತರಗತಿಯೊಳಗೆ ಶಿಕ್ಷಕರು ಮೊಬೈಲ್‌ನಲ್ಲಿ ತಲ್ಲೀನರಾಗಿರುವ ವೀಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಶಾಲಾ ಅವಧಿಯಲ್ಲಿ ಪಾಠ ಕಲಿಸುವ ಬದಲು ಮೊಬೈಲ್‌ನಲ್ಲಿ ಮಗ್ನರಾಗಿರುವುದಕ್ಕೆ ಶಿಕ್ಷಕರ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

    ಶಾಲಾ ಅವಧಿಯಲ್ಲಿ ಶಿಕ್ಷಕರು ಮಾಡಿದ್ದೇ ಪಾಠ, ಮಕ್ಕಳು ಆಡಿದ್ದೇ ಆಟ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಠಡಿಯೊಳಗಡೆ ಮಕ್ಕಳು ಬೇಕಾಬಿಟ್ಟಿ ಗಲಾಟೆ ಮಾಡುತ್ತಿದ್ದರೂ ಕೂಡ, ಶಿಕ್ಷಕರಾದವರು ಮಕ್ಕಳ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬಿಸಿ ಊಟ ಇಲ್ಲ. ಹುಳ ಬಿದ್ದಿರುವ ಅಕ್ಕಿಯಲ್ಲಿ ಅನ್ನ ಮಾಡಿರುವ ವೀಡಿಯೋ ಕೂಡ ಸ್ಥಳೀಯರೇ ಸೆರೆ ಹಿಡಿದಿದ್ದು, ಸರ್ಕಾರ ಹಾಗೂ ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ಬಿಸಿ ಊಟ ಕಾರ್ಯಕರ್ತರು ಮಾತನಾಡಿ, ನಮಗೆ ಬರುವುದೇ 3 ಕಾಸು ಸಂಬಳ ನಾವು ಮನೆಯಿಂದ ತಂದು ಮಾಡಲು ಸಾಧ್ಯವೇ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಪೋಷಕರು ಇದು ಸರ್ಕಾರಿ ಶಾಲೆಯ ಅಥವಾ ಖಾಸಗಿ ಶಾಲೆಯ ಎಂದು ಶಾಲಾಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್‌ಗೆ ಟ್ವಿಸ್ಟ್ – ಸಾರ್ವಜನಿಕರು, ಸಿಸಿಟಿವಿ ದೃಶ್ಯಗಳಿಂದ ನಿಜ ಬಯಲಿಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

    ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

    ರಾಯ್ಪುರ್: ರಾತ್ರಿ ಊಟ (Dinner) ನೀಡಲು ನಿರಾಕರಿಸಿದ ಪತ್ನಿಯನ್ನು (Wife) ಕೊಡಲಿಯಿಂದ ಕೊಂದ ಘಟನೆ ಛತ್ತಿಸ್‍ಗಢದಲ್ಲಿ (Chhattisgarh) ನಡೆದಿದೆ.

    ಮಂಜೀತಾ ಶ್ರೀವಾಸ್ (32) ಮೃತ ಮಹಿಳೆ. ಈಕೆಯ ಪತಿ ಯೋಗೇಂದ್ರ ಶ್ರೀನಿವಾಸ್ (38) ಕೊರ್ಬಾದ ಖಾಸಗಿ ಕ್ಲಿನಿಕ್‍ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಯೋಗೇಂದ್ರ ರಾತ್ರಿ ಕೆಲಸ ಮುಗಿಸಿ ಹಿಂತಿರುಗಿ ಪುಸ್ತಕ ಓದುತ್ತಿದ್ದಾಗ ಪತ್ನಿಗೆ ಊಟ ಬಡಿಸುವಂತೆ ಕೇಳಿದ್ದ. ಆದರೆ ಮಂಜೀತಾ ಊಟ ನೀಡಲು ನಿರಾಕರಿಸಿದ್ದಾಳೆ.

    ಇದೇ ಕಾರಣಕ್ಕೆ ಯೋಗೇಂದ್ರ ಹಾಗೂ ಮಂಜೀತಾ ನಡುವೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ಯೋಗೇಂದ್ರ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಂಜೀತಾ ಜೋರಾಗಿ ಕಿರುಚಿದ್ದಾಳೆ. ತಾಯಿಯ ಕಿರುಚಾಟ ಕೇಳಿದ ಯೋಗೇಂದ್ರ ಹಾಗೂ ಮಂಜಿತಾ ಮಕ್ಕಳು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿರುವ ತಾಯಿಯನ್ನು ನೋಡಿದ್ದಾರೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಕೂಡಲೇ ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ಆರೋಪಿ ಯೋಗೇಂದ್ರನನ್ನು ಬಂಧಿಸಿದ್ದಾರೆ. ದಂಪತಿ ಆಗಾಗ್ಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಆರೋಪಿಯು ತನ್ನ ಹೆಂಡತಿಯ ವಾದದ ಸ್ವಭಾವದಿಂದ ತೀವ್ರ ಸಮಸ್ಯೆ ಹೊಂದಿದ್ದನು ಪೊಲೀಸ್‌ ಮೂಲಗಳು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್

    Live Tv
    [brid partner=56869869 player=32851 video=960834 autoplay=true]

  • ಬಿಸಾಕಿದ್ದ ಊಟ ತಿಂದು 10 ಕುರಿ ಸಾವು – 70 ಕುರಿಗಳು ಅಸ್ವಸ್ಥ

    ಬಿಸಾಕಿದ್ದ ಊಟ ತಿಂದು 10 ಕುರಿ ಸಾವು – 70 ಕುರಿಗಳು ಅಸ್ವಸ್ಥ

    ಬೆಳಗಾವಿ: ಬಿಸಾಕಿದ್ದ ಊಟ ತಿಂದು 10 ಕುರಿ (Sheep) ಸಾವನ್ನಪ್ಪಿದ ಘಟನೆ ಬೆಳಗಾವಿ ಸುವರ್ಣ ಸೌಧದ ಬಳಿಯ ಕೊಂಡಸಕೊಪ್ಪದ ಬಳಿ ನಡೆದಿದೆ. ನಿಂಗಪ್ಪ ದೆಮಣ್ಣವರ, ಸುನೀಲ್ ದೆಮಣ್ಣವರ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ.

    ಕಳೆದ ನಾಲ್ಕು ದಿನಗಳ ಹಿಂದೆ ಬಸ್ತವಾಡ ಗ್ರಾಮದ ಬಳಿ ನಡೆದಿದ್ದ‌ ಪಂಚಮಸಾಲಿ ಸಮಾವೇಶದಲ್ಲಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರು ಉಳಿದ ಅನ್ನ, ರೊಟ್ಟಿ ಸ್ಥಳದಲ್ಲೇ ಎಸೆದು ಹೋಗಿದ್ದರು. ಇದನ್ನೂ ಓದಿ: ಬಿಸ್ಕೆಟ್ ರೀತಿ ಜನರಿಗೆ ಬಿಂದಿಗೆ ಎಸೆದ ಜೆಡಿಎಸ್ ನಾಯಕರು

    ಕುರಿ ಮೇಯಲು ಹೋದಾಗ ಈ ಅನ್ನ ಹಾಗೂ ರೊಟ್ಟಿ ತಿಂದಿವೆ. ಊಟವನ್ನ ತಿಂದು 70 ಕುರಿಗಳು ಅಸ್ವಸ್ಥಗೊಂಡು ಅದರಲ್ಲಿ 10 ಕುರಿ ಸಾವನ್ನಪ್ಪಿವೆ. ಇನ್ನು ಎರಡು ಕುರಿಗಳ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕೆಕೆ ಕೊಪ್ಪದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಭೇಟಿ ನೀಡಿ, ಕುರಿಗಳಿಗೆ ಸಲೈನ್ ಹಚ್ಚಿ ಚಿಕಿತ್ಸೆ ನೀಡುತಿದ್ದು, ಇಂಜೆಕ್ಷನ್ ಕೂಡಾ ಕೊಟ್ಟು ಉಪಚಾರ ಮಾಡುತಿದ್ದಾರೆ‌.

    70 ಕುರಿ ಸದ್ಯಕ್ಕೆ ಬಚಾವ್ ಆಗಿವೆ. ಇನ್ನು 40 ಕುರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ವೈದ್ಯರು ಹೇಳುವಂತೆ ನಾಳೆ ಬೆಳಗಿನ ವರೆಗೆ ಚಿಕಿತ್ಸೆ ಮುಂದುವರಿಯಲಿದ್ದು, ಅದರ ನಂತರ ಕುರಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಎಂದಿದ್ದಾರೆ. ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    Live Tv
    [brid partner=56869869 player=32851 video=960834 autoplay=true]