Tag: ಉಸ್ತುವಾರಿ ಸಚಿವ

  • ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

    ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

    – ಆನಂದ್ ಸಿಂಗ್ ಹೈ ಪ್ರೊಫೈಲ್ ರಾಜಕಾರಣಿ

    ಬಳ್ಳಾರಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದರು.

    ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೊಂದು ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳೂ ನಡೆದಿದ್ದು, ಸಿಎಂ ಬೊಮ್ಮಾಯಿ ಅವರನ್ನೂ ಸಹ ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಮಾಜ್ ಮಾಡಲು ಅವಕಾಶ ನೀಡಲ್ಲ – ಹರ್ಯಾಣ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

    ಒಂದು ವೇಳೆ ಉಸ್ತುವಾರಿ ಸಚಿವ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ. ಸಚಿವ ಆನಂದ್ ಸಿಂಗ್ ಹೈ ಪ್ರೊಫೈಲ್ ರಾಜಕಾರಣಿ. ಅವರು ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ಶ್ರೀರಾಮುಲು ಅವರು ಲೋಫೈ ರಾಜಕಾರಣಿ. ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ಕೊಡಬೇಕು ಎಂದು ಕುಹಕವಾಡಿದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗೆಯ ವಿಚಾರವೇ ನಡೆದಿಲ್ಲ. ಸಿಎಂ ಬದಲಾಗುವುದಿಲ್ಲ, ಅರಾಮಾಗಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದರು.

    ಎಂಎಲ್‍ಸಿ ಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿಯಾಗಲಿದೆ. ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೆಡ್ಡಿ, ನನ್ನ ಹಣೆಯಲ್ಲಿ ನಾನು ಮಂತ್ರಿ ಆಗಬೇಕು ಅಂತಾ ಬರೆದಿದ್ರೆ ಅದನ್ನು ಯಾರು ತಪ್ಪಿಸುವುದಕ್ಕೆ ಆಗಲ್ಲ. ನನಗೆ ಸಚಿವ ಸ್ಥಾನ ನೀಡುವುದು ದೇವರಿಗೆ ಬಿಟ್ಟ ವಿಚಾರ ಎಂದು ಮಂತ್ರಿಮಂಡಲ ವಿಸ್ತರಣೆ ಬಗ್ಗೆಯೂ ವಿವರಿಸಿದರು. ಇದನ್ನೂ ಓದಿ: ಕಾರಿನ ಬಿಡಿ ಭಾಗಗಳಿಂದ ಹೆಲಿಕಾಪ್ಟರ್ ರೆಡಿ – ವೀಡಿಯೋ ವೈರಲ್

    Bommai

    ಮತಾಂತರ ಕಾಯ್ದೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಬಲವಂತವಾಗಿ ಮತಾಂತರ ಮಾಡಬಾರದು. ಇದಕ್ಕೆ ನನ್ನ ವಿರೋಧವಿದೆ. ಪ್ರೀತಿಸಿ, ನಂಬಿಸಿ ಮತಾಂತರ ಮಾಡುವುದು ಸರಿಯಲ್ಲ. ಲವ್ ಜಿಹಾದ್ ತಡೆ ಕಾಯ್ದೆ ಜಾರಿ ಆಗಬೇಕು. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದಕ್ಕೆ ನನ್ನ ಬೆಂಬಲವಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರೋಧದ ಕುರಿತು ಮಾತನಾಡಿದ ಅವರು, ವೋಟ್ ಬ್ಯಾಂಕ್ ವಿಭಜನೆ ಆಗುತ್ತೆ ಅಂತಾ ಸಿದ್ದರಾಮಯ್ಯ ಅವರು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡ್ತಿದ್ದಾರೆ. ಆದ್ರೆ ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು ಎಂದು ತಿಳಿಸಿದರು.

  • ಮೈಸೂರಿನ ಉಸ್ತುವಾರಿ ಬಂದು ಇಲ್ಲಿನ ಜೋಡಿ ರಸ್ತೆಯಲ್ಲಿ ಜಾಲಿ ರೈಡ್ ಮಾಡಿ ಹೋಗ್ತಾರೆ: ವಾಟಾಳ್

    ಮೈಸೂರಿನ ಉಸ್ತುವಾರಿ ಬಂದು ಇಲ್ಲಿನ ಜೋಡಿ ರಸ್ತೆಯಲ್ಲಿ ಜಾಲಿ ರೈಡ್ ಮಾಡಿ ಹೋಗ್ತಾರೆ: ವಾಟಾಳ್

    ಚಾಮರಾಜನಗರ: ಜಿಲ್ಲೆಗೆ ಖಾಯಂ ಉಸ್ತುವಾರಿ ಸಚಿವರು ಇಲ್ಲ. ಮೈಸೂರಿನ ಉಸ್ತುವಾರಿ ಇಲ್ಲಿಗೆ ಬಂದೂ ಜೋಡಿ ರಸ್ತೆಯಲ್ಲಿ ಜಾಲಿ ರೈಡ್ ಮಾಡಿ ಹೋಗ್ತಾರೆ. ಹೀಗಾಗಿ ಖಾಯಂ ಉಸ್ತುವಾರಿ ಸಚಿವರ ನೇಮಕ ಮಾಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ 36 ಮಂದಿ ಸತ್ತರು. ಘಟನೆಗೆ ಸಂಬಂಧಿಸಿದಂತೆ ಒಬ್ಬರನ್ನಾದರೂ ಜೈಲಿಗೆ ಕಳಿಸಿದ್ದಾರಾ?. ಡಿಸಿ, ಡೀನ್ ಯಾರನ್ನೂ ಕೂಡ ಜೈಲಿಗೆ ಕಳಿಸಿಲ್ಲ. ಸತ್ತವರ ಕುಟುಂಬದವರ ಕಷ್ಟ ಕೇಳೋರು ಯಾರು ಎಂದು ಅವರು ಪ್ರಶ್ನಿಸಿದರು. ಅಲ್ಲದೆ ನಾನೇದ್ರೂ ಸದನದಲ್ಲಿ ಇದ್ದಿದ್ರೆ 24 ಗಂಟೆಯೊಳಗೆ ಘಟನೆಗೆ ಕಾರಣರಾದವರನ್ನು ಜೈಲಿಗೆ ಕಳುಹಿಸುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

    ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಮೊದಲನೇ ವೋಟು ಅನ್ನೋ ನನಗೆ ಕೊಡಿ. ನೀವೂ ಮತ್ತೊಂದು ವೋಟು ಯಾರಿಗಾದರೂ ಕೊಡಿ. ಪ್ರಜಾಪ್ರಭುತ್ವದಲ್ಲಿ ನಿಮ್ಮ ಮತ ಅಮೂಲ್ಯವಾಗಿದೆ ಎಂದು ಹೇಳುತ್ತಾ, ತಮ್ಮ ಪರ ಮತ ಚಲಾಯಿಸುವಂತೆ ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡರು.

  • ನಾಪತ್ತೆಯಾಗಿರುವ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ಅಂತಿದ್ದಾರೆ ಯಾದಗಿರಿ ಮಂದಿ

    ನಾಪತ್ತೆಯಾಗಿರುವ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ಅಂತಿದ್ದಾರೆ ಯಾದಗಿರಿ ಮಂದಿ

    ಯಾದಗಿರಿ: ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡರು ಕೂಡ ಜಿಲ್ಲೆಗೆ ಇನ್ನೂ ಬಾರದ ಉಸ್ತುವಾರಿ ಸಚಿವ ಆರ್ ಶಂಕರ್ ವಿರುದ್ಧ ಜಿಲ್ಲೆಯ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಜೂನ್ 28 ರಂದು ತನ್ನ ಇಡೀ ಕುಟುಂಬದೊಂದಿಗೆ ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿಯಲ್ಲಿ ರೈತ ಭೀಮರಾಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡು 15 ದಿನ ಕಳೆದರು ಜಿಲ್ಲೆಗೆ ಮಾತ್ರ ಸಚಿವ ಆರ್ ಶಂಕರ್ ಇನ್ನೂ ಬಂದಿಲ್ಲ. ಮಾನವೀಯತೆಗಾದ್ರೂ ಕನಿಷ್ಠ ಪಕ್ಷ ಒಂದು ಸಾಂತ್ವನ ಮಾತು ಸಹ ಹೇಳಿಲ್ಲ. ಇಂದು ಜಿಲ್ಲೆಯ ಜನ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾಲಭಾದೆಯಿಂದ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದರು. ಇತ್ತ ಪೊಲೀಸ್ ಇಲಾಖೆಯಿಂದಲೂ ತನಿಖೆಗೆ ನಿರ್ಲಕ್ಷ್ಯವಾಗುತ್ತಿದೆ. ರೈತನ ಆತ್ಮಹತ್ಯೆಗೆ ಸಾಲಗಾರರ ಬೆದರಿಕೆ ಮುಖ್ಯ ಕಾರಣವಾಗಿದ್ದರು. ಸಾಲಗಾರರ ಬಂಧನವಿರಲಿ, ವಿಚಾರಣೆ ಸಹವಾಗಿಲ್ಲ. ಪೊಲೀಸ್ ಇಲಾಖೆ ಕಾಟಾಚಾರಕ್ಕೆ ತನಿಖೆ ನಡೆಸುತ್ತಿದೆ. ಈ ಕಾರಣಗಳಿಂದ ಆಕ್ರೋಶಗೊಂಡ ಯಾದಗಿರಿ ಜನರು ಯಾದಗಿರಿ ಉಸ್ತುವಾರಿ ಸಚಿವರ ನಾಪತ್ತೆತಾಗಿದ್ದು, ಎಲ್ಲಿದ್ದಿರಿ ಯಾದಗಿರಿ ಉಸ್ತುವಾರಿ ಸಚಿವ ಆರ್ ಶಂಕರ್ ರವರೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಆರು ಮಂದಿ ಆತ್ಮಹತ್ಯೆ ಪ್ರಕರಣ- ಹೊಂಡಕ್ಕೆ ಹಾರಿ ಶವಗಳನ್ನು ತೆಗೆದು ಸಹಾಯ ಮಾಡಿದ ವ್ಯಕ್ತಿಗೆ ಗೌರವ

  • ಕರ್ತವ್ಯದ ಕೇಂದ್ರ ಸ್ಥಾನದಲ್ಲಿಯೇ ಮನೆ, ಕಚೇರಿ ಮಾಡಿ ಬೋರ್ಡ್ ಹಾಕಿಕೊಳ್ಳಬೇಕು: ಅಧಿಕಾರಿಗಳಿಗೆ ಡಿಕೆಶಿ ಸೂಚನೆ

    ಕರ್ತವ್ಯದ ಕೇಂದ್ರ ಸ್ಥಾನದಲ್ಲಿಯೇ ಮನೆ, ಕಚೇರಿ ಮಾಡಿ ಬೋರ್ಡ್ ಹಾಕಿಕೊಳ್ಳಬೇಕು: ಅಧಿಕಾರಿಗಳಿಗೆ ಡಿಕೆಶಿ ಸೂಚನೆ

    ಬಳ್ಳಾರಿ: ಅಧಿಕಾರಿಗಳು ತಾವು ನಿರ್ವಹಿಸುವ ಕೇಂದ್ರದ ಸ್ಥಾನದಲ್ಲಿಯೇ ಮನೆ ಹಾಗೂ ಕಚೇರಿ ಮಾಡಿ ಬೋರ್ಡ್ ಹಾಕಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿರಾದ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

    ಜಿಲ್ಲೆಗೆ ಪ್ರಪ್ರಥಮಬಾರಿ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಅಭಿವೃದ್ಧಿಶೀಲ ಜಿಲ್ಲೆಯಾಗಿದೆ. ಮಲೆನಾಡಿನಿಂದ ಹರಿದು ಬರುವ ಪವಿತ್ರ ತುಂಗಭದ್ರ ನದಿಯು ಜಿಲ್ಲೆಯ ಜೀವನಾಡಿಯಾಗಿದ್ದಾಳೆ. ಇದರಿಂದ ರೈತರು ಶಿಸ್ತುಬದ್ಧವಾದ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ನೀರು ಮತ್ತು ವಿದ್ಯುತ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜನರ ನಡುವೆ ಅಧಿಕಾರಿಗಳಿರಬೇಕು. ಹೀಗಾಗಿ ಎಲ್ಲಾ ಅಧಿಕಾರಿಗಳು ಏನು ಮಾಡುತ್ತಿರೋ ಗೊತ್ತಿಲ್ಲ, ಇನ್ನು ಎರಡು ತಿಂಗಳ ಒಳಗಾಗಿ ನೀವು ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲೇ ಜನರಿಗೆ ಸಿಗುವಂತಾಗಬೇಕು. ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿಯೇ ವಾಸ ಮಾಡಬೇಕು, ನೀವು ಬಾಡಿಗೆ ಮನೆ ಮಾಡ್ತಿರೋ, ಕ್ವಾರ್ಟರ್ಸ್ ನಲ್ಲಿ ಇರುತ್ತಿರೋ ಗೊತ್ತಿಲ್ಲ ಎಂದು ಖಡಕ್ ಆಗಿ ತಿಳಿಸಿದರು.

    ಎಲ್ಲಾ ಹಂತಗಳಲ್ಲಿನ ಯಾವುದೇ ಕಾಮಗಾರಿ ನಡೆದರೂ ಅದು ಪಾರದರ್ಶಕವಾಗಿರಬೇಕು. ಎಲ್ಲದಕ್ಕೂ ಬಿಲ್ ಇರಬೇಕು, ಜಿಪಿಎಸ್ ಮೂಲಕ ಕೆಲಸ ಮಾಡಬೇಕು. ಎಲ್ಲಾ ಅಧಿಕಾರಿಗಳು ಎಲ್ಲಿದ್ದಾರೆ? ಎಲ್ಲಿ ಹೋಗುತ್ತಿದ್ದಾರೆ ಅನ್ನುವ ಮಾಹಿತಿ ಮೇಲಾಧಿಕಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಗೊತ್ತಾಗಬೇಕು ಎಂಬುದು ನನ್ನ ಆಡಳಿತ ವೈಖರಿಯ ಮೊದಲ ಹೆಜ್ಜೆಯಾಗಿದೆ. ಯಾವುದೇ ಇಲಾಖೆಯಲ್ಲಿ ಸರ್ಕಾರದ ಹಣ ಎಷ್ಟೇ ಖರ್ಚಾದರೂ ಅದಕ್ಕೆ ದಾಖಲೆ ಇರಬೇಕು. ಅಲ್ಲದೇ ಎಲ್ಲಾ ಇಲಾಖೆಗಳಲ್ಲೂ ಪರಿಚಯ ಪುಸ್ತಕ ಹೊಂದಿರಬೇಕು. ಈಗಾಗಲೇ ನಾನು ಜಿಪಿಎಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇನೆ ಎಂದು ಹೇಳಿದರು.

    ನಾನು ಬಳ್ಳಾರಿಗೆ ಬಂದು ಎರಡು ನಿಮಿಷ ಆಗಿದೆ. ಒಮ್ಮೆಲೆ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಆದರೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕಾರ್ಯಕ್ಷೇತ್ರಕ್ಕೆ ಅಲ್ಲಾಡಿಸುವ ಕೆಲಸ ಮಾಡುತ್ತೇನೆ. ಜನಪ್ರತಿನಿಧಿಗಳು ಕೆಡಿಪಿ ಹಾಗೂ ತಾಪಂ ಸಭೆಗೆ ಹಾಗೂ ಇನ್ನಿತರ ಸಭೆಗಳಿಗೆ ಹಾಜರಾಗುವುದಿಲ್ಲವೆಂಬ ಗಂಭೀರ ಆರೋಪ ಇದೆ. ಇದನ್ನು ಸರಿ ಪಡಿಸುವ ಕೆಲಸ ಮಾಡುತ್ತೇನೆ ಎಂದರು.

    ಈ ವೇಳೆ ಎಸ್ ಆರ್ ಹಿರೇಮಠರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಬದಲು, ಚುನಾವಣೆ ನಿಂತು ಆಯ್ಕೆಯಾಗಿ ಸದನದಲ್ಲಿ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲಿ. ಆಗ ಬೇಕಾದರೇ ತಪ್ಪು ಮಾಡಿದವರನ್ನು ಗಲ್ಲಿಗೆ ಹಾಕಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

    ಸುಪ್ರೀಂ ತೀರ್ಪು ಬರುವ ಮುನ್ನವೇ ಯಡಿಯೂರಪ್ಪನವರಿಗೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ. ತೀರ್ಪಿನ ಬಗ್ಗೆ ನಮ್ಮ ಪಕ್ಷದ ಕೆಲ ಸಚಿವರು ಸಮಾಧಾನಪಟ್ಟಿರಬಹುದು. ಆದರೆ ನಾನು ಈ ರೀತಿ ತೀರ್ಪು ಬರುತ್ತದೆಂದು ನಿರೀಕ್ಷೆ ಸಹ ಮಾಡಿರಲಿಲ್ಲ. ಮಹದಾಯಿ ನ್ಯಾಯಾಧಿಕರಣಕ್ಕೆ ಮತ್ತೆ ಮೇಲ್ಮನವಿ ಸಲ್ಲಿಸುತ್ತೇವೆ. ರಾಜ್ಯದ ನೀರಾವರಿ ಸಚಿವನಾಗಿದ್ದುಕೊಂಡು ಒಂದು ಹನಿ ನೀರನ್ನೂ ನಾನು ಬಿಡೋದಿಲ್ಲ, ನಮಗೆ ಸೇರಬೇಕಾದ ನೀರು ನಮಗೆ ಸೇರಲೇಬೇಕು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಡಿಕೆ, ಪರಮೇಶ್ವರ್ ಎದುರು ಶಾಸಕರು ಅಸಮಾಧಾನ!

    ಎಚ್‍ಡಿಕೆ, ಪರಮೇಶ್ವರ್ ಎದುರು ಶಾಸಕರು ಅಸಮಾಧಾನ!

    ಬೆಂಗಳೂರು: ಉಸ್ತುವಾರಿ ಸಚಿವರ ನೇಮಕ ವಿಳಂಬಕ್ಕೆ ಸಂಬಂಧಿಸಿದಂತೆ ಸಿಎಂ ಎಚ್‍ಡಿಕೆ, ಡಿಸಿಎಂ ಪರಮೇಶ್ವರ್ ಎದುರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಂಪುಟ ವಿಸ್ತರಣೆ ಮಾಡದಿದ್ದರೂ ಪರವಾಗಿಲ್ಲ, ಜಿಲ್ಲೆಗೆ ಉಸ್ತುವಾರಿ ಸಚಿವರನ್ನ ನೇಮಕ ಮಾಡಿ ಅಂತ ಶಾಸಕರು ಒತ್ತಾಯಿಸುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಎಲ್ಲದಕ್ಕೂ ಆಷಾಢ ಅಂತೀರಾ, ಆದ್ರೆ ನಮ್ಮ ಜಿಲ್ಲೆಯಲ್ಲಿ ನಮ್ಮನ್ನ ಕೇಳೋರೇ ಇಲ್ಲದಾಗಿದೆ. ನಮ್ಮ ಜಿಲ್ಲೆಗಳಲ್ಲಿ ಮಳೆ ಹೆಚ್ಚಿದೆ. ಹಾನಿ ಪ್ರಮಾಣವೂ ಕೂಡ ಅಷ್ಟೇ ಇದೆ. ಉಸ್ತುವಾರಿ ಸಚಿವರಿಲ್ಲದೇ ಯಾವ ಕೆಲಸವೂ ಆಗಲ್ಲ, ಅಧಿಕಾರಿಗಳು ಕೆಲಸ ಮಾಡಲ್ಲ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಜಿಲ್ಲೆಗೆ ಉಸ್ತುವಾರಿ ಸಚಿವರು ಬೇಕು. ಹೀಗಾಗಿ ಕೂಡಲೇ ಉಸ್ತುವಾರಿ ಸಚಿವರ ನೇಮಿಸಿ ಅಂತಾ ಕೆಲ ಶಾಸಕರ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಶಾಸಕರ ಒತ್ತಡದ ಮೇರೆಗಾದ್ರೂ ಆಷಾಢದ ನೆಪ ಹೇಳದೇ ಈ ತಿಂಗಳಲ್ಲೇ ಜಿಲ್ಲಾ ಉಸ್ತುವಾರಿಗಳ ನೇಮಕ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

  • ಕಲುಷಿತ ಕೃಷ್ಣೆಯಿಂದ ಚರ್ಮರೋಗ: ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸ್ಪಂದನೆ

    ಕಲುಷಿತ ಕೃಷ್ಣೆಯಿಂದ ಚರ್ಮರೋಗ: ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸ್ಪಂದನೆ

    -ನಾಲ್ಕು ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ

    -ಗ್ರಾಮಸ್ಥರ ಆರೋಗ್ಯ ಪರಿಶೀಲಿಸಿ ಚಿಕಿತ್ಸೆ ನೀಡಲು ಇಲಾಖೆಗೆ ಆದೇಶ

    ರಾಯಚೂರು: ಕೃಷ್ಣಾ ನದಿ ನೀರನ್ನ ಬಳಸಿ ಚರ್ಮರೋಗಕ್ಕೆ ತುತ್ತಾಗಿರುವ ರಾಯಚೂರಿನ ನಾಲ್ಕು ಗ್ರಾಮಗಳ ಜನರ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಸ್ಪಂದಿಸಿದ್ದಾರೆ. ನದಿಯ ಕಲುಷಿತ ನೀರಿನಿಂದ ಚರ್ಮರೋಗ ಉಲ್ಬಣಗೊಂಡಿರುವ ಆತ್ಕೂರು, ಸರ್ಜಾಪೂರ, ರಾಂಪುರ, ಬೂರ್ದಿಪಾಡ ಗ್ರಾಮಗಳಿಗೆ ಶುದ್ಧ ನೀರನ್ನ ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

    ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವರದಿಯನ್ನ ಸಲ್ಲಿಸಲು ಹಾಗೂ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ಸಚಿವರು, ನದಿ ತಟದ ಗ್ರಾಮಗಳ ಜನರ ಸಮಸ್ಯೆಗೆ ಪರಿಹಾರ ಕಂಡುಕೊಡುವುದಾಗಿ ಹೇಳಿದ್ದಾರೆ.

    ಈ ಗ್ರಾಮಗಳಲ್ಲಿನ ಜನ ನದಿಯಲ್ಲಿ ನಿಂತ ಕಲುಷಿತ ನೀರನ್ನ ಕುಡಿಯುತ್ತಿರುವುದರಿಂದ ಪಾಚಿ ಹಾಗೂ ಫಂಗಸ್ ಹೆಚ್ಚಾಗಿ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ. ಮೊದಲೇ ಅಂಟುರೋಗವಾಗಿರುವುದರಿಂದ ಬೇಸಿಗೆಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಸೂಕ್ಷ್ಮಜೀವಿಗಳು ಔಷಧಿ ನಿರೋಧಕ ಶಕ್ತಿಯನ್ನ ಹೆಚ್ಚಿಕೊಂಡಿರುವುದರಿಂದ ಬೇಗ ಗುಣಮುಖವಾಗುತ್ತಿಲ್ಲ. ಚರ್ಮರೋಗದಿಂದ ಸಂಪೂರ್ಣ ಗುಣಮುಖರಾಗಲು ಕನಿಷ್ಠ ಮೂರು ತಿಂಗಳ ಚಿಕಿತ್ಸೆ ಬೇಕು. ಆದ್ರೆ ನೀರಿನ ಪರ್ಯಾಯ ಮೂಲವಿಲ್ಲದೆ ರೋಗಕ್ಕೆ ಮದ್ದಿಲ್ಲ ಅಂತ ಚರ್ಮರೋಗ ತಜ್ಞ ಡಾ. ಕಲ್ಲಪ್ಪ ಹೇಳಿದ್ದಾರೆ.

    ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಕುಡಿದು ಚರ್ಮ ರೋಗಕ್ಕೆ ತುತ್ತಾದ ಗ್ರಾಮಸ್ಥರು

    ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿರುವ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಕೇವಲ ನಾಲ್ಕು ಗ್ರಾಮಗಳು ಮಾತ್ರವಲ್ಲ ನದಿ ತಟದ 32 ಹಳ್ಳಿಗಳಲ್ಲಿ ಸಮಸ್ಯೆಯಿದೆ. ಆರ್‍ಟಿಪಿಎಸ್, ವೈಟಿಪಿಎಸ್ ಹಾಗೂ ಖಾಸಗಿ ಕಾರ್ಖಾನೆಗಳೇ ಇದಕ್ಕೆ ಕಾರಣ. ಎಷ್ಟು ಬಾರಿ ಮನವಿ ಮಾಡಿದ್ರೂ ಸರ್ಕಾರ ಸ್ಪಂದಿಸುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಕಲುಷಿತ ನೀರಿನಿಂದ ರೋಗಗಳಿಗೆ ತುತ್ತಾಗಿರುವ ಗ್ರಾಮಗಳಿಗೆ ಶುದ್ಧ ನೀರನ್ನ ಸರಬರಾಜು ಮಾಡಲು ಕೂಡಲೇ ಕ್ರಮಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.