Tag: ಉಸ್ತುವಾರಿ

  • ಉಸ್ತುವಾರಿ ಬದಲಾವಣೆ ಮಾಡಿ ಎಂದು ಕೇಳಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

    ಉಸ್ತುವಾರಿ ಬದಲಾವಣೆ ಮಾಡಿ ಎಂದು ಕೇಳಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

    ಮಂಗಳೂರು: ಉಸ್ತುವಾರಿ ಬದಲಾವಣೆ ಮಾಡಿ ಎಂದು ನಾನು ಕೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ (Mangaluru) ನಿನ್ನೆ, ಮೊನ್ನೆ ಎಲ್ಲಾ ಭೇಟಿ ಕೊಟ್ಟು ಸಾಕಷ್ಟು ಕಾನೂನಿನ ಕ್ರಮ ಕೈಗೊಂಡಿದ್ದೇವೆ. ಅನೇಕ ಬದಲಾವಣೆ ಮಾಡಿದ್ದೇವೆ. ಕಾನೂನು ಕ್ರಮ ಚುರುಕಿಗೆ ಗೃಹ ಸಚಿವರು ಸೂಚಿಸಿದ್ದಾರೆ. ಉಸ್ತುವಾರಿ ಬದಲಾವಣೆ ಮಾಡಿ ಎಂದು ಹೇಳಿಲ್ಲ, ಅವೆಲ್ಲ ಸುಮ್ಮನೆ. ಅದು ಎಲ್ಲಿಂದ ಬಂತೋ ಗೊತ್ತಿಲ್ಲ, ಯಾರು ಹೇಳಿದ್ದು ಗೊತ್ತಿಲ್ಲ. ಜವಾಬ್ದಾರಿ ಇದ್ದಾಗ ಒಂದೊಂದು ಸಂದರ್ಭದಲ್ಲಿ ಎಲ್ಲಾ ಎದುರಿಸಬೇಕಾಗುತ್ತದೆ. ನಾನು ಅಷ್ಟೇ ಉತ್ಸಾಹದಲ್ಲಿದ್ದೇನೆ. ನನ್ನ ಉಸ್ತುವಾರಿ ಭೇಟಿ ಬಗ್ಗೆ ಎಲ್ಲರಿಗೂ ಗಮನದಲ್ಲಿ ಇದೆ. ಯಾರೋ ಒಬ್ಬರು ಇಬ್ಬರು ಹೇಳಿಕೆ ಕೊಟ್ಟಿರಬಹುದು. ವಿನಾಕಾರಣ ರಾಜಕಾರಣ ಮಾಡಬಾರದು ಎಂದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆ – 17,544 ಕ್ಯೂಸೆಕ್ ಒಳಹರಿವು

    ಮುಖ್ಯಮಂತ್ರಿಗಳು ಡಿಸಿ, ಸಿಇಓಗಳ ಸಭೆಯಲ್ಲಿ ದ್ವೇಷ ಭಾಷಣ ಪ್ರಚೋದನೆ ಮಾಡುವುದನ್ನು ದಮನ ಮಾಡಬೇಕು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಾಂತಿಯ ಮರುಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲರು ಸೇರಿ ಭಾಗವಹಿಸಬೇಕು, ಭ್ರಾತೃತ್ವ ವಾತಾವರಣ ನಿರ್ಮಾಣ ಆಗಬೇಕು. 95% ಜನರಿಗೆ ಇದು ಬೇಕಾಗಿಲ್ಲ, ಕೆಲವೇ ಕೆಲವು ಜನ ಹಾಗೂ ಸಂಘಟನೆಗಳು ಇದಕ್ಕೆ ಪ್ರಚೋದನೆ ಮಾಡುತ್ತಿವೆ. ಜನ ಸುವ್ಯವಸ್ಥೆ, ಶಾಂತಿ ಬಯಸುತ್ತಿದ್ದಾರೆ. ಸುಮ್ಮನಿದ್ದರೆ ಇಂತಹ ಧ್ವನಿಗಳು ಹೆಚ್ಚಾಗುತ್ತವೆ. ಎರಡೂ ಕಡೆ ಸಂಘಟನೆ ಹಾಗೂ ಪ್ರಚೋದನೆ ಮಾಡುತ್ತಿದ್ದಾರೆ. ನಾನು ಹಿಂದೂ, ಮುಸ್ಲಿಂ ಅನ್ನಲ್ಲ, ಎರಡೂ ಕಡೆ ಇದೆ. ಅದರ ವಿರುದ್ಧ ವಿಶೇಷ ಕ್ರಮ ಆಗಬೇಕು. ಸದ್ಯದಲ್ಲೇ ಆಂಟಿ ಕಮ್ಯೂನಲ್ ಫೋರ್ಸ್ ಕಾರ್ಯೋನ್ಮುಖ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: PUBLiC TV Impact – ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ BMTC ಬಸ್ ಡ್ರೈವರ್ ಅಮಾನತು

    ಬಂಟ್ವಾಳ ಮೃತನ ಮನೆಗೆ ಹೋದೆ. ಆತ ಎಲ್ಲರ ಜೊತೆಯೂ ಚೆನ್ನಾಗಿದ್ದ. ಹಿಂದೂಗಳ ಜೊತೆಯೂ ಚೆನ್ನಾಗಿದ್ದ. ಪಾಪ ಅವನನ್ನು ಸಾಯಿಸಿಬಿಟ್ಟರು. ನಾನು ಸ್ಥಳೀಯ ಅಲ್ಲ ಹೊರಗಿನವನೇ. ಆದರೆ ಎಲ್ಲರೂ ನನಗೆ ಸಹಕಾರ ಕೊಟ್ಟರು ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಸೋಂಕು – ಮಂಡ್ಯದಲ್ಲೂ ಮೊದಲ ಕೇಸ್‌ ಪತ್ತೆ

  • ಮಂಡ್ಯ ಉಸ್ತುವಾರಿ ನೇಮಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ: ಅಶ್ವಥ್ ನಾರಾಯಣ್

    ಮಂಡ್ಯ ಉಸ್ತುವಾರಿ ನೇಮಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ: ಅಶ್ವಥ್ ನಾರಾಯಣ್

    ಮಂಡ್ಯ: ಯಾವುದೇ ಜಿಲ್ಲೆಯ ಉಸ್ತುವಾರಿ ನಿಶ್ಚಯ ಮಾಡುವುದು ಸಿಎಂ. ಮಂಡ್ಯ ಉಸ್ತುವಾರಿ ನೇಮಕ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ (Ashwath Narayan) ಹೇಳಿಕೆಯನ್ನು ನೀಡಿದ್ದಾರೆ.

    ಇಲ್ಲಿನ ಸಾತನೂರಿನ ಕಂಬದ ನರಸಿಂಹ ದೇವಸ್ಥಾನದ ಬಳಿ ನಡೆದ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಸಚಿವರು, ಮಂಡ್ಯ ಉಸ್ತುವಾರಿ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ. ಎಲ್ಲವನ್ನು ಸಿಎಂ ನೋಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಉಸ್ತುವಾರಿ ವಹಿಸಿಕೊಳ್ಳಲು ಹಿಂದೆ ಸರಿದಿದ್ದಾರೆ.

    ಮಂಡ್ಯ ಜಿಲ್ಲೆಯ ಮೇಲೆ ನನಗೆ ಪ್ರೀತಿ ಬಾಂಧವ್ಯ ಇರುವುದು ಒಂದು ಭಾಗವಾದರೇ ಜವಾಬ್ದಾರಿ ಮತ್ತು ಆಡಳಿತ ಇನ್ನೊಂದು ಭಾಗ. ಇವತ್ತು ಪಕ್ಷದ ಕಾರ್ಯಕ್ರಮ ಇರುವುದರಿಂದ ಇಲ್ಲಿಗೆ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಇಲ್ಲಿದ್ದೇನೆ ಎಂದು ಹೇಳಿದರು.

    ಖಾಲಿ ಇರುವ ಉಸ್ತುವಾರಿಯನ್ನು ಸದ್ಯ ಸಿಎಂ ನಿರ್ವಹಣೆ ಮಾಡುತ್ತಿದ್ದಾರೆ. ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಸಿಎಂ ನಿಶ್ಚಯ ಮಾಡುತ್ತಾರೆ. ಸಿಎಂ ಯಾರನ್ನು ನಿಶ್ಚಯ ಮಾಡುತ್ತಾರೋ ಅವರು ಕೆಲಸ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಪಕ್ಷಕ್ಕೆ ಸರ್ಕಾರ ಸಹಕಾರ ನೀಡುತ್ತದೆ. ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಮ್ಮ ಪಕ್ಷದಲ್ಲಿ ಸಾಕಷ್ಟು ಜನರಿದ್ದಾರೆ. ಯಾರಿಗೆ ಜವಾಬ್ದಾರಿ ನೀಡಿದರೂ ಮಾಡುತ್ತಾರೆ ಎಂದರು.

    ನನಗೆ ಉಸ್ತುವಾರಿ ನೀಡುವ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸೂಕ್ತ ಎನಿಸಿದವರಿಗೆ ಕೊಡುತ್ತಾರೆ. ಅದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಯಾವ ಕಾಲದಲ್ಲಿ ಸಿಎಂ ಜವಾಬ್ದಾರಿಯನ್ನು ನೀಡುತ್ತಾರೋ ಅದನ್ನು ನಿರ್ವಹಿಸುವುದು ನಮ್ಮ ಕೆಲಸ ಎಂದು ನುಡಿದರು. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು

    ಪ್ರವೀಣ್ (Praveen Nettaru) ಹತ್ಯೆ ಆರೋಪಿಯನ್ನ ಅಭ್ಯರ್ಥಿಯನ್ನಾಗಿಸುವ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಯಾವುದೇ ಒಬ್ಬ ವ್ಯಕ್ತಿಗೆ ಚಾರ್ಜ್ ಶೀಟ್ ಹಾಕಿಯೂ ಕಾನೂನಿನಲ್ಲಿ ಅವಕಾಶ ಇದ್ದರೆ ಇರುತ್ತದೆ ಅಷ್ಟೆ. ಕಾನೂನಿನ ಚೌಕಟ್ಟಿನಲ್ಲಿ ಅವರು ಸ್ಪರ್ಧೆ ಮಾಡುತ್ತಾರೆ. ಯಾವ ಪಕ್ಷದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂದು ನಾವು ನಿಶ್ಚಯ ಮಾಡುವುದಿಲ್ಲ. ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ. ಟಿಕೆಟ್ ಪಟ್ಟಿ ಬಿಡುಗಡೆ ವಿಚಾರವಾಗಿ ಚುನಾವಣೆ ಘೋಷಣೆಯಾದ ಮೇಲೆ ಟಿಕೆಟ್ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಹೇಳಿಕೆಯನ್ನು ನೀಡಿದರು.

    ರಾಮನಗರದಲ್ಲಿ ಬಿಜೆಪಿ (Ramanagar BJP) ಚುನಾವಣೆ ಸ್ಟಾಟರ್ಜಿ ವಿಚಾರವಾಗಿ ಮಾತನಾಡಿದ, ಅವರು ಜನರ ವಿಶ್ವಾಸಗಳಿಸುವುದೇ ಒಂದು ಸ್ಟಾಟರ್ಜಿ. ಯಾರೇ ಸವಾಲು ಹಾಕಿದರು ಬನ್ನಿ ಎಂದು ಕರೆಯುತ್ತೇನೆ. ರಾಮನಗರದಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಲಾಗಿದೆ. ಆರೋಗ್ಯ, ಶೈಕ್ಷಣಿಕ, ಕೌಶಲ್ಯ, ಉದ್ಯೋಗ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿದೆ. ನಮ್ಮ ಸಾಧನೆಗಳು ಹೇಗೆ ಏನು ಅನ್ನುವುದನ್ನು ತೋರಿಸಿದ್ದೇವೆ. ರಾಮನಗರದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದರು.

    ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಂ ಸೇರಿ ಹಲವರು ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯ ಉಸ್ತುವಾರಿಯಿಂದ ಔಟ್‌ – ಅಶೋಕ್‌ ಪತ್ರದಲ್ಲಿ ಏನಿದೆ?

    ಮಂಡ್ಯ ಉಸ್ತುವಾರಿಯಿಂದ ಔಟ್‌ – ಅಶೋಕ್‌ ಪತ್ರದಲ್ಲಿ ಏನಿದೆ?

    ಬೆಂಗಳೂರು: ಮಂಡ್ಯ (Mandya) ಉಸ್ತುವಾರಿಯಿಂದ ಸಚಿವ ಅಶೋಕ್ (R Ashok) ಔಟ್ ಆಗಿದ್ದಾರೆ. ಗೋಬ್ಯಾಕ್ ಅಭಿಯಾನ, ಹೊಂದಾಣಿಕೆ ರಾಜಕೀಯ ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಡ್ಯ ಉಸ್ತುವಾರಿ ಜವಾಬ್ದಾರಿಯಿಂದ ಮುಕ್ತಿಗೊಳಿಸುವಂತೆ ಸಿಎಂ ಬೊಮ್ಮಾಯಿಗೆ (CM Basavaraj Bommai) ಅಶೋಕ್ ಪತ್ರ ಬರೆದಿದ್ದರು.

    ಅಶೋಕ್ ಪತ್ರದ ಬೆನ್ನಲ್ಲೇ ಮಂಡ್ಯ ಉಸ್ತುವಾರಿ ಬದಲಾವಣೆಗೆ ಆದೇಶ ಹೊರಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ನೂತನ ಜಿಲ್ಲಾ ಉಸ್ತುವಾರಿಯಾಗಿ ಮತ್ತೆ ನಾರಾಯಣಗೌಡ ಅಥವಾ ಗೋಪಾಲಯ್ಯ ಪೈಕಿ ಯಾರಿಗೆ ಹೊಣೆ ನೀಡಲಾಗುತ್ತದೆ ಎಂಬ ಕುತೂಹಲ ಈಗ ಎದ್ದಿದೆ.

    ಚುನಾವಣೆಯ ಮುನ್ನ ಹಲವು ಕೆಲಸಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಮಂಡ್ಯ ಉಸ್ತುವಾರಿಯಿಂದ ಮುಕ್ತಿಗೊಳಿಸಬೇಕೆಂದು ಕೋರಿ ಅಶೋಕ್ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಇದನ್ನೂ ಓದಿ: ಸಿದ್ದು-ಡಿಕೆಶಿಯನ್ನೇ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಪಿಚ್ ರಿಪೋರ್ಟ್ ತಯಾರಿಸಿದ್ಯಾ?

    ಅಶೋಕ್‌ ಪತ್ರದಲ್ಲಿ ಏನಿತ್ತು?
    ಒಂದು ತಿಂಗಳಲ್ಲಿ ದಾವಣಗೆರೆಯ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕಿದೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು ಹತ್ತು ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ನಗರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಅದರ ಜವಬ್ದಾರಿ ನನ್ನ ಮೇಲಿದೆ.

    ಕಂದಾಯ ಇಲಾಖೆ ಆರಂಭಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜನಪ್ರಿಯವಾಗಿ ಹೊರಹೊಮ್ಮಿದೆ. ಪಕ್ಷದ ಶಾಸಕರು ಅವರ ಕ್ಷೇತ್ರಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಪಾಲ್ಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಎರಡರಿಂದ ಮೂರು ಜಿಲ್ಲೆಗಳಲ್ಲಿ ನಾನು ಪಾಲ್ಗೊಳ್ಳಬೇಕಿದೆ.

    ಬಸವಣ್ಣ ಹಾಗೂ ಕೆಂಪೇಗೌಡರ ಪುತ್ಥಳಿ ಸ್ಥಾಪಿಸುವ ಉಸ್ತುವಾರಿ ಸಮಿತಿಯಲ್ಲಿ ಅಧ್ಯಕ್ಷನಾಗಿರುವ ನಾನು ಒಂದು ತಿಂಗಳೊಳಗೆ ಕೆಲಸ ಪೂರ್ಣಗೊಳಿಸಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಬೇಕಿದೆ.

    14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷನಾಗಿರುವ ನಾನು ಮುಂದಿನ ಮಾರ್ಚ್ 23 ರಿಂದ 30 ರವರೆಗೆ ಚಿತ್ರ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಉಸ್ತುವಾರಿ ನೇಮಕ – ಭುಗಿಲೆದ್ದ ಭಿನ್ನಮತ

    ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಉಸ್ತುವಾರಿ ನೇಮಕ – ಭುಗಿಲೆದ್ದ ಭಿನ್ನಮತ

    ಚಿತ್ರದುರ್ಗ: ಮುರುಘಾ ಶ್ರೀ (Murugha Shree) ವಿರುದ್ಧ ಮತ್ತೊಂದು ಕೇಸ್ ದಾಖಲಾದಾಗಿನಿಂದ ಪೀಠಾಧಿಪತಿ ಬದಲಾವಣೆ ಕೂಗು ತಾರಕಕ್ಕೇರಿದೆ. ಹೀಗಾಗಿ ಅದಕ್ಕೆ ಬ್ರೇಕ್ ಹಾಕಲು ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಮುರುಘಾ ಶ್ರೀ ಆಪ್ತ ಶಿಷ್ಯ ಬಸವಪ್ರಭು ಶ್ರೀಗಳನ್ನು (Basavaprabhu Shree) ನೇಮಿಸಲಾಗಿದೆ. ಆದರೆ ಇದರಿಂದಾಗಿ ಮುರುಘಾ ಮಠದಲ್ಲಿ (Murugha Mutt) ಮತ್ತಷ್ಟು ಅಸಮಾಧಾನ ಭುಗಿಲೆದ್ದಿದೆ.

    ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠಕ್ಕೆ ತನ್ನದೇ ಆದ ಐತಿಹ್ಯವಿದೆ. ಶೂನ್ಯ ಪೀಠ ಪರಂಪರೆಯ ಮಠಕ್ಕೆ ಪೀಠಾಧಿಪತಿಯೇ ಸುಪ್ರಿಂ. ಆದರೆ ಪೋಕ್ಸೋ ಕೇಸ್‌ನಡಿ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಮಠದ ಆಡಳಿತ ಹಾಗೂ ಪೂಜಾ ಕೈಂಕರ್ಯಕ್ಕೆ ಅಡ್ಡಿಯಾಗಬಾರದೆಂಬ ನಿಟ್ಟಿನಲ್ಲಿ ಯೋಚಿಸಿದ್ದ ಮುರುಘಾ ಶ್ರೀ, ಮಠದ ಧಾರ್ಮಿಕ ಆಚರಣೆ ಹಾಗೂ ಶರಣ ಸಂಸ್ಕ್ರತಿ ಉತ್ಸವದ ಪ್ರಭಾರ ಉಸ್ತುವಾರಿಯಾಗಿರುವಂತೆ ಹೆಬ್ಬಾಳದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರನ್ನು ಮೌಖಿಕವಾಗಿಯಷ್ಟೇ ನೇಮಿಸಿದ್ದರು.

    ಮುರುಘಾ ಶ್ರೀ ವಿರುದ್ಧ ಮತ್ತೊದು ಕೇಸ್ ದಾಖಲಾದ ಬಳಿಕ ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಹೆಚ್. ಏಕಾಂತಯ್ಯ ನೇತೃತ್ವದ ಲಿಂಗಾಯತ ಸಮುದಾಯದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರದ ಗಮನ ಸೆಳೆದಿದ್ದರು. ಇದನ್ನೂ ಓದಿ: ಭಾರತ್ ಜೋಡೋ ವೇಳೆ ಕಾಂಗ್ರೆಸ್ ಹಾಕಿದ್ದ ಕಸ ಗುಡಿಸಿ ಸ್ವಚ್ಛಗೊಳಿಸಿದ ಶ್ರೀರಾಮುಲು

    ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತ ಮುರುಘಾ ಶ್ರೀ ಹಾಗೂ ಮಠದ ಆಡಳಿತ ಸಮಿತಿಯು, ಹೈಕೋರ್ಟ್‌ನಿಂದ ಅನುಮತಿ ಪಡೆದು, ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಯನ್ನು ಅಧಿಕೃತವಾಗಿ ನೇಮಿಸಿದ್ದಾರೆ.

    ಹೊಸ ಜವಾಬ್ದಾರಿ ವಹಿಸಿಕೊಂಡ ಬಸವಪ್ರಭು ಶ್ರೀ, ಮಠದಲ್ಲಿನ ಕರ್ತೃ ಗದ್ದುಗೆ ದರ್ಶನ ಪಡೆದು, ಮುರುಘಾ ಶ್ರೀ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ. ಈ ಸೇವೆಯನ್ನು ನಿಷ್ಠೆಯಿಂದ, ಭಕ್ತಿಯಿಂದ ಸಲ್ಲಿಸುತ್ತೇನೆ. ಈ ಜವಬ್ದಾರಿಯನ್ನು ಮುರುಘೇಶ, ಗುರು ಬಸವೇಶನ ಸೇವೆ ಎಂದು ಭಾವಿಸುತ್ತೇನೆ. ಮುರುಘಾ ಶ್ರೀ ಮಾರ್ಗದರ್ಶನದಲ್ಲಿ ಮಠದ ಸೇವೆ ಸಲ್ಲಿಸುತ್ತೇನೆ. ಹೀಗಾಗಿ ಭಕ್ತರು ಎಂದಿನಂತೆ ನಮಗೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಿರ್ಧಾರ

    ಮುರುಘಾ ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಬಸವಪ್ರಭು ಶ್ರೀಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುರುಘಾ ಮಠದಲ್ಲಿ ಬಿನ್ನಮತ ಭುಗಿಲೆದ್ದಿದೆ. ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೊಳಗಾದಾಗಿನಿಂದ ಎಲ್ಲಾ ಪೂಜಾ ಕೈಂಕರ್ಯದ ಜವಾಬ್ದಾರಿ ಹೊತ್ತಿದ್ದ ಹೆಬ್ಬಾಳದ ಮಹಂತ ರುದ್ರೇಶ್ವರ ಶ್ರೀ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಲಿಖಿತವಾಗಿ ಬಸವಪ್ರಭು ಶ್ರೀ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವ ಹಿನ್ನೆಲೆ ಬೇಸರಗೊಂಡಿರುವ ರುದ್ರೇಶ್ವರ ಸ್ವಾಮೀಜಿ ಶನಿವಾರ ಸಂಜೆ ಮುರುಘಾ ಮಠದಿಂದ ಹೆಬ್ಬಾಳಕ್ಕೆ ತೆರಳಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.

    ಮುರುಘಾ ಮಠದಲ್ಲಿ ಒಂದು ಸಮಸ್ಯೆ ಬಗೆಹರಿಯುತ್ತಿದ್ದಂತೆ ಮತ್ತೊಂದು ಸಮಸ್ಯೆ ತಲೆದೋರುತ್ತಿದೆ. ಪೀಠಾಧಿಪತಿ ಬದಲಾವಣೆ ಕೂಗಿಗೆ ಬ್ರೇಕ್ ಹಾಕಲು ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಬಸವಪ್ರಭು ಶ್ರೀಗಳನ್ನು ನೇಮಿಸಲಾಗಿದೆ. ಮುರುಘಾ ಶ್ರೀಗೆ ಬಸವಪ್ರಭು ಶ್ರೀಗಳು ಆಪ್ತ ಶಿಷ್ಯರೆಂಬ ಹಿನ್ನಲೆ ಈ ಉಸ್ತುವಾರಿ ಆಯ್ಕೆಗೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ಹಾಲಪ್ಪ ಆಚಾರ್​ಗೆ ಹೆಚ್ಚುವರಿ ಹೊರೆ

    ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ಹಾಲಪ್ಪ ಆಚಾರ್​ಗೆ ಹೆಚ್ಚುವರಿ ಹೊರೆ

    -ನಾಲ್ಕನೇ ಬಾರಿ ಉಸ್ತುವಾರಿ ಬದಲಾವಣೆ

    ರಾಯಚೂರು: ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ನಾಲ್ಕನೇ ಬಾರಿಗೆ ಉಸ್ತುವಾರಿ ಬದಲಾವಣೆಯಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರಿಗೆ ಇದೀಗ ಉಸ್ತುವಾರಿ ಕೊಡಲಾಗಿದೆ.

    ಸಚಿವ ವಿ.ಸೋಮಣ್ಣ ಅವರಿಗಿದ್ದ ಜವಾಬ್ದಾರಿಯನ್ನು ಹಾಲಪ್ಪ ಆಚಾರ್​ಗೆ ವಹಿಸಲಾಗಿದೆ. ಕೊಪ್ಪಳ ಜಿಲ್ಲೆಯ ಜೊತೆಗೆ ರಾಯಚೂರು ಜಿಲ್ಲೆಯ ಉಸ್ತುವಾರಿಯನ್ನೂ ನಿರ್ವಹಿಸಲು ಸರ್ಕಾರ ಸೂಚಿಸಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉಸ್ತುವಾರಿ ಬದಲಾವಣೆಯ ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ. ಪದೇ ಪದೇ ಉಸ್ತುವಾರಿ ಸಚಿವರು ಬದಲಾವಣೆಯಾಗುತ್ತಿರುವುದರಿಂದ ರಾಯಚೂರು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೇಶ-ಧರ್ಮದ ವಿಚಾರದಲ್ಲಿ ನಾನು ಸದಾ ಧ್ವನಿ ಎತ್ತುತ್ತೇನೆ: ಪ್ರತಾಪ್ ಸಿಂಹ

    ಜಿಲ್ಲೆಗೆ ನೇಮಕವಾಗುವ ಉಸ್ತುವಾರಿ ಸಚಿವರು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗುತ್ತಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದು, ಒಂದು ಸಭೆ ಬಳಿಕ ಸಚಿವರೇ ಬದಲಾಗಿರುತ್ತಾರೆ, ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶ್ರೀರಾಮುಲು, ನಂತರ ಲಕ್ಷ್ಮಣ ಸವದಿ ಸಿಎಂ ಬದಲಾವಣೆ ಬಳಿಕ ವಿ. ಸೋಮಣ್ಣ ಈಗ ನಾಲ್ಕನೇಯವರಾಗಿ ಹಾಲಪ್ಪ ಆಚಾರ್​ಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಪ್ರತೀ ಬಾರಿಯೂ ಹೊರಜಿಲ್ಲೆಯವರಿಗೆ ಉಸ್ತುವಾರಿ ಸ್ಥಾನ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯನ್ನು ಕಡೆಗಣಿಸಿದಂತಾಗಿದ್ದು, ಸ್ಥಳೀಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ Vs ಪ್ರೀತಂ ಗೌಡ – ಫೋಟೋ ಪಾಲಿಟಿಕ್ಸ್ ಜಟಾಪಟಿ ತಾರಕಕ್ಕೆ

  • ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ

    ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ

    ಬೆಂಗಳೂರು: ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರವಾಹ ಹಾಗೂ ಕೊರೊನಾ ಪರಿಸ್ಥಿತಿ ನಿರ್ವಹಣೆಗಾಗಿ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ನೂತನ 29 ಸಚಿವರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ.

    ಕೋವಿಡ್ ಮತ್ತು ನೆರೆ ಹಾವಳಿ ನಿರ್ವಹಣೆ ಸುಲಭವಾಗಲು ಇಂದು ಸಂಜೆಯೇ ಜಿಲ್ಲೆಗಳಿಗೆ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಬೆಂಗಳೂರು ನಗರದ ಹೊಣೆಯನ್ನು ಅಶೋಕ್‍ಗೆ ನೀಡಲಾಗಿದೆ. ಗೋವಿಂದ ಕಾರಜೋಳಗೆ ಬೆಳಗಾವಿ ಉಸ್ತುವಾರಿ ನೀಡಲಾಗಿದೆ. ವಿ.ಸೋಮಣ್ಣಗೆ ರಾಯಚೂರು, ಅರಗ ಜ್ಞಾನೇಂದ್ರಗೆ ಚಿಕ್ಕಮಗಳೂರು, ಅಶ್ವಥ್ ನಾರಾಯಣ್‍ಗೆ ರಾಮನಗರದ ಹೊಣೆಯನ್ನು ಸಿಎಂ ನೀಡಿದ್ದಾರೆ.

    ಮುನಿರತ್ನಗೆ ಕೋಲಾರ, ಬಿಸಿ ನಾಗೇಶ್‍ಗೆ ಯಾದಗಿರಿ, ಸುನೀಲ್‍ಕುಮಾರ್‍ಗೆ ಉಡುಪಿ, ಹಾಲಪ್ಪ ಆಚಾರ್‍ಗೆ ಕೊಪ್ಪಳ, ಶಂಕರ್ ಪಾಟೀಲ್ ಮುನೇನಕೊಪ್ಪಗೆ ಧಾರವಾಡದ ಉಸ್ತುವಾರಿ ನೀಡಲಾಗಿದೆ. ನಾಳೆಯಿಂದಲೇ ಪ್ರವಾಹಪೀಡಿತ ಭಾಗಗಳಿಗೆ ಹೋಗಲು ಹೊಸ ಸಚಿವರಿಗೆ ಸಿಎಂ ಸೂಚಿಸಿದ್ದಾರೆ.

    ಯಾವ ಸಚಿವರಿಗೆ ಯಾವ ಜಿಲ್ಲೆ?
    ಗೋವಿಂದಕಾರಜೋಳ -ಬೆಳಗಾವಿ, ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ, ಆರ್.ಅಶೋಕ್-ಬೆಂಗಳೂರು ನಗರ, ಶ್ರೀರಾಮುಲು-ಚಿತ್ರದುರ್ಗ, ವಿ.ಸೋಮಣ್ಣ-ರಾಯಚೂರು, ಉಮೇಶ್ ಕತ್ತಿ-ಬಾಗಲಕೋಟೆ, ಅಂಗಾರ- ದಕ್ಷಿಣ ಕನ್ನಡ, ಜೆ.ಸಿ.ಮಾಧುಸ್ವಾಮಿ-ತುಮಕೂರು, ಅರಗ ಜ್ಞಾನೇಂದ್ರ-ಚಿಕ್ಕಮಗಳೂರು, ಅಶ್ವಥನಾರಾಯಣ್-ರಾಮನಗರ, ಸಿ.ಸಿ.ಪಾಟೀಲ್-ಗದಗ, ಆನಂದ್ ಸಿಂಗ್-ಬಳ್ಳಾರಿ ಮತ್ತು ವಿಜಯನಗರ, ಪ್ರಭು ಬಿ ಚವ್ಹಾಣ್-ಬೀದರ್, ಕೋಟ ಶ್ರೀನಿವಾಸ್ ಪೂಜಾರಿ-ಕೊಡಗು, ಮುರುಗೇಶ್ ನಿರಾಣಿಯವರಿಗೆ ಕಲಬುರಗಿ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ.

    ಶಿವರಾಮ್ ಹೆಬ್ಬಾರ್-ಉತ್ತರ ಕನ್ನಡ, ಎಸ್.ಟಿ.ಸೋಮಶೇಖರ್-ಮೈಸೂರು ಮತ್ತು ಚಾಮರಾಜನಗರ, ಬಿ.ಸಿ.ಪಾಟೀಲ್-ಹಾವೇರಿ, ಭೈರತಿ ಬಸವರಾಜ್-ದಾವಣಗೆರೆ, ಸುಧಾಕರ್-ಚಿಕ್ಕಬಳ್ಳಾಪುರ, ಗೋಪಾಲಯ್ಯ-ಹಾಸನ, ಶಶಿಕಲಾ ಜೊಲ್ಲೆ-ವಿಜಯಪುರ, ಎಂಟಿಬಿ ನಾಗರಾಜ್-ಬೆಂಗಳೂರು ಗ್ರಾಮಾಂತರ, ನಾರಾಯಣಗೌಡ-ಮಂಡ್ಯ, ಬಿ.ಸಿ.ನಾಗೇಶ್-ಯಾದಗಿರಿ, ಸುನೀಲ್‍ಕುಮಾರ್-ಉಡುಪಿ, ಹಾಲಪ್ಪ ಆಚಾರ್-ಕೊಪ್ಪಳ, ಶಂಕರ್.ಬಿ.ಪಾಟೀಲ್ ಮುನೇನಕೊಪ್ಪ-ಧಾರವಾಡ, ಮುನಿರತ್ನ ಅವರಿಗೆ ಕೋಲಾರ ಉಸ್ತುವಾರಿ ವಹಿಸಲಾಗಿದೆ.

  • ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಬೆಂಗಳೂರನ್ನು ತನ್ನ ಬಳಿಯೇ ಇಟ್ಟುಕೊಂಡ ಸಿಎಂ

    ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಬೆಂಗಳೂರನ್ನು ತನ್ನ ಬಳಿಯೇ ಇಟ್ಟುಕೊಂಡ ಸಿಎಂ

    ಬೆಂಗಳೂರು: ಕೊನೆಗೂ ಸಿಎಂ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ವಿಶೇಷವಾಗಿ ಬೆಂಗಳೂರು ಉಸ್ತುವಾರಿಯನ್ನು ಬಿಎಸ್ ಯಡಿಯೂರಪ್ಪನವರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

    ಕಂದಾಯ ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಪೈಕಿ ಯಾರಿಗೆ ಉಸ್ತುವಾರಿ ಖಾತೆ ಸಿಗುತ್ತದೆ ಎನ್ನುವ ಕುತೂಹಲವಿತ್ತು. ಸರ್ಕಾರ ರಚನೆಯಾದ ಬಳಿಕ ಇಬ್ಬರಿಗೆ ಮನಸ್ತಾಪ ಉಂಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಬೆಂಗಳೂರು ಉಸ್ತುವಾರಿ ಯಾರಿಗೆ ಸಿಗಲಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಯಡಿಯೂರಪ್ಪನವರು ಯಾರಿಗೂ ಬೆಂಗಳೂರನ್ನು ಹಂಚಿಕೆ ಮಾಡದೇ ತಮ್ಮ ಬಳಿಯೇ  ಇಟ್ಟುಕೊಂಡಿದ್ದಾರೆ.

    ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಜೆಸಿ ಮಾಧುಸ್ವಾಮಿ, ಚಂದ್ರಕಾಂತ ಗೌಡ ಪಾಟೀಲ್, ವಿ. ಸೋಮಣ್ಣ, ಪ್ರಭು ಚೌಹಾಣ್ ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.

    ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
    ಬಿ.ಎಸ್. ಯಡಿಯೂರಪ್ಪ- ಬೆಂಗಳೂರು ನಗರ
    ಗೋವಿಂದ ಕಾರಜೋಳ – ಬಾಗಲಕೋಟೆ, ಕಲಬುರಗಿ
    ಅಶ್ವಥ್ ನಾರಾಯಣ – ರಾಮನಗರ, ಚಿಕ್ಕಬಳ್ಳಾಪುರ
    ಲಕ್ಷ್ಮಣ್ ಸವದಿ – ಬಳ್ಳಾರಿ, ಕೊಪ್ಪಳ
    ಈಶ್ವರಪ್ಪ – ಶಿವಮೊಗ್ಗ, ದಾವಣಗೆರೆ
    ಆರ್ ಅಶೋಕ್ – ಬೆಂಗಳೂರು ಗ್ರಾಮಾಂತರ, ಮಂಡ್ಯ


    ಜಗದೀಶ್ ಶೆಟ್ಟರ್ – ಹುಬ್ಬಳ್ಳಿ -ಧಾರವಾಡ, ಬೆಳಗಾವಿ
    ಶ್ರೀರಾಮುಲು – ರಾಯಚೂರು, ಚಿತ್ರದುರ್ಗ
    ಸುರೇಶ್ ಕುಮಾರ್ – ಚಾಮರಾಜನಗರ
    ವಿ ಸೋಮಣ್ಣ – ಮೈಸೂರು, ಕೊಡಗು
    ಸಿಟಿ ರವಿ – ಚಿಕ್ಕಮಗಳೂರು
    ಬಸವರಾಜ ಬೊಮ್ಮಾಯಿ – ಉಡುಪಿ, ಹಾವೇರಿ
    ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣಕನ್ನಡ
    ಜೆಸಿ ಮಾಧುಸ್ವಾಮಿ – ತುಮಕೂರು, ಹಾಸನ
    ಚಂದ್ರಕಾಂತ ಗೌಡ ಪಾಟೀಲ್ – ಗದಗ, ವಿಜಯಪುರ
    ಎಚ್ ನಾಗೇಶ್ – ಕೋಲಾರ
    ಪ್ರಭು ಚೌಹಾಣ್ – ಬೀದರ್, ಯಾದಗಿರಿ
    ಶಶಿಕಲಾ ಜೊಲ್ಲೆ- ಉತ್ತರ ಕನ್ನಡ