Tag: ಉಸಿರಾಟದ ತೊಂದರೆ

  • ಅಸ್ತಮಾ, ಉಸಿರಾಟದ ತೊಂದರೆ ಇದೆಯೇ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ

    ಅಸ್ತಮಾ, ಉಸಿರಾಟದ ತೊಂದರೆ ಇದೆಯೇ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ

    ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಅಸ್ತಮಾ (Asthma) ಸಮಸ್ಯೆ ಕಾಡುತ್ತದೆ. ಕಲುಷಿತ ವಾತಾವರಣ ಹಾಗೂ ಗಾಳಿಯಿಂದ ಹಬ್ಬುವ ಕಾಯಿಲೆ ಇದಾಗಿದೆ. ಅಸ್ತಮಾ, ಉಸಿರಾಟದ ತೊಂದರೆ (breathing problems) ಇರುವವರು, ಅದರ ನಿವಾರಣೆಗೆ ನಾನಾ ಕಸರತ್ತು ಮಾಡಿರುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಿರುವುದಿಲ್ಲ.

    ಅಸ್ತಮಾ, ಉಸಿರಾಟದ ತೊಂದರೆ ಇರುವವರು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಕೆಲವು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಮ್ಮ ಶ್ವಾಸಕೋಶವನ್ನು ಅನಾರೋಗ್ಯದಿಂದ ಕಾಪಾಡಬಹುದು. ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸಬಹುದು. ಪ್ರತಿದಿನ ಈ ವ್ಯಾಯಾಮಗಳನ್ನು ಮಾಡಿದರೆ ಖಂಡಿತ ಅಸ್ತಮಾ, ಉಸಿರಾಟದ ಸಮಸ್ಯೆ ದೂರವಾಗುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    1) ಭ್ರಮರಿ ಪ್ರಾಣಾಯಾಮ
    ಈ ಪ್ರಾಣಾಯಾಮ ಉಸಿರಾಟದ ವ್ಯವಸ್ಥೆಯನ್ನು ವೃದ್ಧಿಸುವ ಯೋಗಾಭ್ಯಾಸವಾಗಿದೆ. ನೈಟ್ರಿಕ್‌ ಆಕ್ಸೈಡ್‌ ಅಂಶವನ್ನು ಬಿಡುಗಡೆ ಮಾಡುವ ಮೂಲಕ ಶ್ವಾಸಕೋಶದ ಸೋಂಕನ್ನು ದೂರ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬಹಳ ವೇಗವಾಗಿ ವೈರಸ್‌ ಸೋಂಕಿನ ಸಂತತಿಯನ್ನು ತಗ್ಗಿಸುತ್ತದೆ. ನಿತ್ಯ 2ರಿಂದ 3 ಬಾರಿ ಸುಮಾರು ಹತ್ತು ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡುವುದು ಒಳ್ಳೆಯದು.

    2) ಸೂರ್ಯ ನಾಡಿ ಶೋಧನ
    ಪ್ರಾಚೀನ ಯೋಗ ತಂತ್ರವಾಗಿರುವ ಇದು, ನಮ್ಮ ದೇಹದಲ್ಲಿರುವ ಸೂರ್ಯ ನಾಡಿಯನ್ನು ಸಕ್ರಿಯವಾಗಿರುಸುತ್ತದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಸೂರ್ಯ ನಾಡಿ ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಇದು ದೇಹದ ಆಂತರಿಕ ವ್ಯವಸ್ಥೆಯನ್ನು ಉತ್ತೇಜಿಸುವ ಉಸಿರಾಟದ ಅಭ್ಯಾಸಗಳನ್ನು ಒಳಗೊಳ್ಳುತ್ತದೆ. ಸೂರ್ಯ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಈ ಯೋಗಾಭ್ಯಾಸ ಸಹಾಯ ಮಾಡುತ್ತದೆ.

    3) ಚಂದ್ರ ನಾಡಿ ಶೋಧನ
    ಚಂದ್ರ ನಾಡಿ ಶೋಧನ ಯೋಗಾಭ್ಯಾಸವು ನಮ್ಮ ದೇಹದ ಎಡಭಾಗದಲ್ಲಿ ಹಾದುಹೋಗುವ ಚಂದ್ರ ನಾಡಿಯನ್ನು ಸಕ್ರಿಯಗೊಳಿಸಲು ಸಹಕಾರಿಯಾಗಿದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಚಂದ್ರ ನಾಡಿಯು ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಈ ಯೋಗಾಭ್ಯಾಸ ಮಾಡುವುದರಿಂದ ಚಂದ್ರ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಸಹಾಯವಾಗುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    4) ಭಸ್ತ್ರಿಕಾ ಪ್ರಾಣಾಯಾಮ
    ಈ ಪ್ರಾಣಾಯಾಮ ಅಭ್ಯಾಸದಿಂದ ಮೂಗಿನ ಹೊಳ್ಳೆಗಳು ಶುದ್ಧಗೊಳ್ಳುತ್ತವೆ. ನಾಭಿಯ ಅವಯವಗಳು ಉತ್ತೇಜನಗೊಳ್ಳುತ್ತವೆ. ಮೆದುಳಿನ ಭಾಗ ಮತ್ತು ನರಮಂಡಲಗಳು ಚುರುಕುಗೊಳ್ಳುತ್ತವೆ. ಕಿವಿ, ಮೂಗು, ಕಣ್ಣಿನ ದೋಷ ಇರುವವರು ಮತ್ತು ಗರ್ಭಿಣಿಯರು ಈ ಪ್ರಾಣಾಯಾಮ ಮಾಡಬಾರದು.

    5) ಕಪಾಲಬಾತಿ ಪ್ರಾಣಾಯಾಮ
    ಅನ್ನನಾಳ, ಶ್ವಾಸನಾಳಗಳನ್ನು ಶುಚಿಗೊಳಿಸಿ ಶ್ವಾಸಕ್ಕೆ ಸಂಬಂಧಿಸಿದ ರೋಗಗಳನ್ನು ನಿರ್ಮೂಲಗೊಳಿಸುತ್ತದೆ. ಮೂಗಿಗೆ ಸಂಬಂಧಿಸಿದ ಸಮಸ್ಯೆಗಳು, ಉದರಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ. ಗಂಟಲು ಶುದ್ಧಿಯಾಗುತ್ತದೆ. ಶರೀರದ ಶಾಖ ಹೆಚ್ಚಾಗಿ ಶೀತಕ್ಕೆ ಸಂಬಂಧಿಸಿದ ರೋಗಗಳೂ ಗುಣವಾಗುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

    ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

    – ಆರೋಗ್ಯ ಇಲಾಖೆಗೆ ತಲೆನೋವಾದ ಪೇದೆ ಪ್ರಕರಣ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆಯ ಸಾವು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು ತಂದಿದೆ.

    ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ಮುಖ್ಯ ಪೇದೆ ಗೌರಿಹಳ್ಳಿ ರವಿ (44) ಇಂದು ಮುಂಜಾನೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆದರೆ ರವಿ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋವಿಡ್ ಸೆಂಟರ್ ನಲ್ಲಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅವರನ್ನು ಇದೇ ತಿಂಗಳು 17ರಂದು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

    ಇದಾದ ಬಳಿಕ ಮನೆಯಲ್ಲಿ ಇದ್ದ ರವಿ ಹೋಂ ಕ್ವಾರೆಂಟೈನ್ ಆಗಿದ್ದರು. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಅವರನ್ನು ಮತ್ತೆ ಪರೀಕ್ಷೆ ಮಾಡಿದಾಗಲೂ ಕೊರೊನಾ ಸೋಂಕು ಇರಲಿಲ್ಲ. ಹೀಗಾಗಿ ಅವರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನಗಳ ಬಳಿಕ ಮತ್ತೆ ರವಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಮೃತಪಟ್ಟಿದ್ದಾರೆ. ಹೀಗಾಗಿ ಈ ಸಾವು ಅರೋಗ್ಯ ಇಲಾಖೆಗೆ ಸವಾಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖ ಆದ ಬಳಿಕವೂ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.

     

    ಈಗ ಆರೋಗ್ಯದ ಇಲಾಖೆ ರವಿ ಶವದ ಸ್ವಾಬ್ ಟೆಸ್ಟ್ ಕಲೆಕ್ಟ್ ಮಾಡಿದ್ದು, ಮತ್ತೊಂದು ಬಾರಿ ಕೋವಿಡ್ ಪರೀಕ್ಷೆ ಮಾಡಲು ಮುಂದಾಗಿದೆ.

  • ಮಧ್ಯಾಹ್ನ ಚೆನ್ನಾಗಿದ್ದ ಚಿರು ಸಂಜೆಯ ವೇಳೆ ಚಿರನಿದ್ರೆಗೆ ಜಾರಿದ್ರು!

    ಮಧ್ಯಾಹ್ನ ಚೆನ್ನಾಗಿದ್ದ ಚಿರು ಸಂಜೆಯ ವೇಳೆ ಚಿರನಿದ್ರೆಗೆ ಜಾರಿದ್ರು!

    ಬೆಂಗಳೂರು: ಇಂದು ಮಧ್ಯಾಹ್ನ ಚೆನ್ನಾಗಿದ್ದ ನಟ ಜಿರಂಜೀವಿ ಸರ್ಜಾ ಅವರು ಹೃದಯಾಘತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸ್ಯಾಂಡಲ್‍ವುಡ್‍ಗೆ ತುಂಬಲಾರದ ನಷ್ಟ ಉಂಟಾಗಿದೆ.

    ಇಂದು ಸುಮಾರು 3.30ರ ವೇಳಗೆ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಹೃದಯಾಘತದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ನಾಲ್ಕು ತಿಂಗಳ ಗರ್ಭಿಣಿ ಪತ್ನಿ ಮೇಘನಾ ರಾಜ್ ಅವರನ್ನು ಮತ್ತು ಸರ್ಜಾ ಕುಟುಂಬವನ್ನು ಅಗಲಿದ್ದಾರೆ. ಕೇವಲ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ ಚಿರುವಿಗೆ ಚಂದನವದ ತಾರೆಯರು ಕಂಬನಿ ಮಿಡಿದಿದ್ದಾರೆ.

    ಇಂದು ಹೇಗಿದ್ರು?
    ಇಂದು ಮಧ್ಯಾಹ್ನದ ವೇಳೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿದೆ. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾರೆ. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ.

    ಚಿರು ಅವರ ಸಾವಿನ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಜೊತೆಗೆ ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಗಣೇಶ್, ನಟಿ ಅಮೂಲ್ಯ ಮುಂತಾದ ಕಲಾವಿದರ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನೂ ನಟಿ ತರಾ, ಸೃಜನ್ ಲೊಕೇಶ್, ಕಿಚ್ಚ ಸುದೀಪ್ ಅವರು ಆಸ್ಪತ್ರೆಗೆ ಬಂದು ಚಿರುವಿನ ಅಂತಿಮ ದರ್ಶನ ಪಡೆದಿದ್ದಾರೆ. ಚಿರು ಅವರ ಹುಟ್ಟೂರು ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

  • ಉಸಿರಾಟದ ತೊಂದರೆಯಿಂದ ಮಂಗಳೂರಿನ ಯುವಕ ಸಾವು

    ಉಸಿರಾಟದ ತೊಂದರೆಯಿಂದ ಮಂಗಳೂರಿನ ಯುವಕ ಸಾವು

    ಮಂಗಳೂರು: ಉಸಿರಾಟದ ತೊಂದರೆಯಿಂದ ಮಂಗಳೂರು ಹೊರ ವಲಯದ ಸುರತ್ಕಲನ ಯುವಕ ಸಾವನ್ನಪ್ಪಿದ್ದು, ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ.

    ಯುವಕನನ್ನು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸುವಾಗ ಸಾವನ್ನಪ್ಪಿದ್ದಾನೆ. ಕೊರೊನಾ ವೈರಸ್ ಶಂಕೆಯ ಹಿನ್ನೆಲೆ ಮೃತ ಯುವಕನ ಗಂಟಲಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಅಂತ್ಯಕ್ರಿಯೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.

    ವರದಿಯಲ್ಲಿ ಕೊರೊನಾ ಸೋಂಕು ತಗುಲಿದ್ರೆ ಕೋವಿಡ್-19 ನಿಯಮಗಳಿನುಸಾರವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವೇ ಅಂತ್ಯಕ್ರಿಯೆ ನಡೆಸಲಿದೆ. ವರದಿ ನೆಗೆಟಿವ್ ಬಂದ್ರೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮೃತ ಯುವಕ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು ಎಂಬ ಮಾಹಿತಿ ಲಭ್ಯವಾಗಿದ್ದು, ಆತನ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.