Tag: ಉಸಿರಾಟ

  • ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ನವದೆಹಲಿ: ಇಡೀ ವಿಶ್ವದಲ್ಲೇ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದೆಹಲಿ (Delhi Air Pollution), ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನ ಉಸಿರಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು (CAQM) ಮಾಲಿನ್ಯ ನಿಯಂತ್ರಣಕ್ಕೆ 3ನೇ ಹಂತದ ಕ್ರಮ (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP-III) ಜಾರಿಗೆ ಮುಂದಾಗಿದೆ. ನವೆಂಬರ್‌ 15ರ ಶುಕ್ರವಾರದಿಂದಲೇ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿವೆ.

    ಏನೇನು ಕ್ರಮ ?
    ಜಿಆರ್‌ಎಪಿ-3 (GRAP-III) ಜಾರಿಯಲ್ಲಿರುವವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. BS-3 ಪೆಟ್ರೋಲ್ ಡಿಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗುತ್ತದೆ. ಸಿಎನ್‌ಜಿ, ಇವಿ ಸೇರಿದಂತೆ ಅಂತರರಾಜ್ಯಗಳ BS4 ಡಿಸೇಲ್ ಬಸ್‌ಗಳಿಗೆ ಮಾತ್ರ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ತುರ್ತು ಅಲ್ಲದ ನಿರ್ಮಾಣ ಮತ್ತು ಕಟ್ಟಡ ತೆರವು ಕಾರ್ಯಕ್ಕೆ ತಡೆ ನೀಡಲಾಗಿದ್ದು, ಸರ್ಕಾರಿ ಕಾಮಗಾರಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಗೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ಚಿಮುಕಿಸುವುದನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ ಎನ್‌ಸಿಎಆರ್‌ನಲ್ಲಿ 5ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಮುಖ್ಯವಾಗಿ ದೆಹಲಿ ನಿವಾಸಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ.

    ಅಪಾಯ ಮಟ್ಟ ಮೀರಿದ ಮಾಲಿನ್ಯ:
    ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ. ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಎಕ್ಯೂಐ ಮಟ್ಟವು ಶೂನ್ಯದಿಂದ 50 ರಷ್ಟಿದ್ದರೆ ಉಸಿರಾಟಕ್ಕೆ ಯೋಗ್ಯ ಗಾಳಿ, 51 ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ, 401 ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.

    300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ:
    ಗುರುವಾರ (ನ.14) ಬೆಳಿಗ್ಗೆ ದಟ್ಟನೆಯ ಮಂಜು ಆವರಿಸಿದ್ದನ್ನು ಕಂಡು ದೆಹಲಿಯ ಜನ ಕಂಗಾಲಾಗಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIQ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದೆ. ಮುಂಜಾನೆ AQI 452ರ ಗಡಿ ದಾಟಿದೆ. ಇದರಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದ್ದು, 300 ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ತಿಳಿಸಿದೆ.

  • ಸಾಲು ಮರದ ತಿಮ್ಮಕ್ಕನಿಗೆ ಐಸಿಯುನಲ್ಲಿ ಚಿಕಿತ್ಸೆ

    ಸಾಲು ಮರದ ತಿಮ್ಮಕ್ಕನಿಗೆ ಐಸಿಯುನಲ್ಲಿ ಚಿಕಿತ್ಸೆ

    ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿರುವ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ (Saalu Marada Thimmakka) ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯನಗರದ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದರು. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

    ಕಳೆದ ಮೂರು ತಿಂಗಳ ಹಿಂದೆಯಷ್ಟೇ ವೃಕ್ಷ ಮಾತೆಯವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ನಂತರ ದತ್ತು ಪುತ್ರ ಬಳ್ಳೂರು ಗ್ರಾಮದ ಉಮೇಶ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸೆ. 26 ರಂದು ಉಸಿರಾಟದಲ್ಲಿ ಏರು ಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಸೋಮವಾರ ರಾತ್ರಿ ಉಸಿರಾಟದಲ್ಲಿ ತೀವ್ರ ಏರು ಪೇರಾಗಿದ್ದರಿಂದ ಮಂಗಳವಾರ ಬೆಂಗಳೂರಿಗೆ ತೆರಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ

    ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ

    ನವದೆಹಲಿ: ದೆಹಲಿ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿಯಲ್ಲಿ ಉಸಿರಾಡಲು ತಾಜಾ ಗಾಳಿ ಸಿಗಲಿದೆ. ಕನ್ನಾಟ್ ಪ್ಲೇಸ್‍ನಲ್ಲಿನ ಹೊಂಜು ಗೋಪುರ ಪ್ರಯೋಗ ಪೂರ್ಣಗೊಂಡಿದೆ ಮತ್ತು ಅಕ್ಟೋಬರ್ 1ರಿಂದ ಕಾರ್ಯನಿರ್ವಹಿಸಲಿದೆ ಎಂದು ಬುಧವಾರ ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.

    smog tower

    ಈ ಕುರಿತಂತೆ ಹೆಚ್ಚಿನ ವಿವರಗಳನ್ನು ನೀಡಿದ ಅವರು, ಐಐಟಿ-ಬಾಂಬೆ ಮತ್ತು ಐಐಟು-ದೆಹಲಿಯಿಂದ ವಿಜ್ಞಾನಿಗಳ ತಂಡವನ್ನು ರಚಿಸಲಾಗಿದ್ದು, ಅದರ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ತಂಡಗಳನ್ನು ರಚಿಸಲಾಗಿದೆ ಮತ್ತು ಐಐಟಿ-ಬಾಂಬೆಯಿಂದ ಐವರು ತಜ್ಞರು ಮತ್ತು ಐಐಟಿ ದೆಹಲಿಯ ಒಬ್ಬರು ಪರಿಣತರನ್ನು ಹೊಂದಿರುತ್ತಾರೆ. ಈ ಮುನ್ನ ಆಗಸ್ಟ್ 24ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 24 ಮೀಟರ್ ಹೊಂಜು ಗೋಪುರವನ್ನು ಉದ್ಘಾಟಿಸಿದ್ದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    ಹೊಂಜು ಗೋಪುರದ 40 ಫ್ಯಾನ್‍ಗಳನ್ನು ಮತ್ತು 10,000 ಫಿಲ್ಟರ್‌ಗಳನ್ನು ಮಿನ್ನೇಸೋಟ ವಿಶ್ವವಿದ್ಯಾಲಯದ ತಜ್ಞರು ಅಭಿವೃದ್ಧಿಪಡಿಸಿದ್ದು, ಇದು ಚೀನಾದ ಕ್ಸಿಯಾನ್‍ನಲ್ಲಿ 100 ಮೀಟರ್ ಎತ್ತರದ ಹೊಂಜು ಗೋಪುರವನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದೆ. ಇದನ್ನೂ ಓದಿ: ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

  • ಉಸಿರಾಟ ತೊಂದರೆ- ಹರ್ಯಾಣ ಗೃಹ ಸಚಿವ ಆಸ್ಪತ್ರೆಗೆ ದಾಖಲು

    ಉಸಿರಾಟ ತೊಂದರೆ- ಹರ್ಯಾಣ ಗೃಹ ಸಚಿವ ಆಸ್ಪತ್ರೆಗೆ ದಾಖಲು

    ಚಂಡೀಗಢ: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದೀಗ ಅನಿಲ್ ವಿಜ್‍ರವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಅಲ್ಲದೇ ಅನಿಲ್ ವಿಜ್ ಆರೋಗ್ಯ ದೃಷ್ಟಿಯಿಂದ ಶನಿವಾರ ಅವರು ಹಾಜರಾಗಬೇಕಿದ್ದ ಜನತಾ ದರ್ಬಾರ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ:ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ- ಇಬ್ಬರು ಸಾವು

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನಿಲ್ ವಿಜ್ ಕೋವಿಡ್-19 ಸೋಂಕಿಗೆ ಒಳಗಾಗಿದ್ದರು. ಭಾರತ್ ಬಯೋಟಿಕ್ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಅವರು, ಲಸಿಕೆ ಸ್ವೀಕರಿಸಿದ ಬಳಿಕ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದಾದ ಮೂರು ವಾರಗಳ ಬಳಿಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಇದನ್ನೂ ಓದಿ:ಅಫ್ಘಾನ್‍ನಲ್ಲಿ ತಾಲಿಬಾನಿಗಳ ಅಟ್ಟಹಾಸ- ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆ

  • ಆಕ್ಸಿಜನ್ ಸಮಸ್ಯೆಯಿಂದ ಬೀದರ್‌ನಲ್ಲಿ ವ್ಯಕ್ತಿ ಸಾವು

    ಆಕ್ಸಿಜನ್ ಸಮಸ್ಯೆಯಿಂದ ಬೀದರ್‌ನಲ್ಲಿ ವ್ಯಕ್ತಿ ಸಾವು

    ಬೀದರ್: ಖಾಸಗಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಅಬ್ದುಲ್ ಮನ್ನಾನ್ ಸೇಠ್(63) ಆಕ್ಸಿಜನ ಸಿಗದೆ ಇಂದು ಸಾವನ್ನಪ್ಪಿದ್ದಾರೆ. ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಬಿಬಿಎಸ್ ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಮುಗಿದರು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯ ಮಹಾ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ.

     

    ವಿಷಯ ತಿಳಿದು ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಆಕ್ಸಿಜನ್ ವ್ಯವಸ್ಥೆಮಾಡಿ 13 ಜನರ ಪ್ರಾಣ ಉಳಿದಿದ್ದು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ಆದರೆ ಅಬ್ದುಲ್ ಮನ್ನಾನ್‍ಗೆ ಕೊರೊನಾ ಸೋಂಕು ಇಲ್ಲದೆ ಇದ್ದರೂ ಆಕ್ಸಿಜನ್ ಸಿಗದೆ ಉಸಿರಾಟದ ತೀವ್ರ ಸಮಸ್ಯೆಯಾಗಿ ಬ್ರೀಮ್ಸ್‍ಗೆ ದಾಖಲಾಗಿದ್ದರು, ಇಂದು ಸಾವನ್ನಪ್ಪಿದ್ದಾರೆ.

    ಆಕ್ಸಿಜನ್ ಸಮಸ್ಯೆಯೇ ನನ್ನ ಸಹೋದರನ ಸಾವಿಗೆ ಕಾರಣ ಎಂದು ಆಕ್ಸಿಜನ್ ಸಮಸ್ಯೆಯಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದರ್‌ನಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗುತ್ತಿದ್ದು ಜಿಲ್ಲಾಡಳಿತ ಇಗಲೇ ಎಚ್ಚರಗೊಳ್ಳಬೇಕಿದೆ. ಇಲ್ಲವಾದರೆ ಚಾಮರಾಜನಗರದ ಪರಿಸ್ಥಿತಿ ಗಡಿ ಜಿಲ್ಲೆಯಲ್ಲಿ ಸಂಭವಿಸಿದರೂ ಆಶ್ಚರ್ಯವಿಲ್ಲಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

  • ಗೋರಿಯ ಚಾದರ್‌ನಲ್ಲಿ ಉಸಿರಾಟದ ಸುದ್ದಿ – ದರ್ಗಾದತ್ತ ಜನರು

    ಗೋರಿಯ ಚಾದರ್‌ನಲ್ಲಿ ಉಸಿರಾಟದ ಸುದ್ದಿ – ದರ್ಗಾದತ್ತ ಜನರು

    ಶಿವಮೊಗ್ಗ: ದರ್ಗಾದ ಗೋರಿಗೆ ಹೊದಿಸಿರುವ ಚಾದರ್‍ನಲ್ಲಿ ಉಸಿರಾಟದ ಅನುಭವವಾಗಿದೆ ಎನ್ನಲಾದ ಸುದ್ದಿಯೊಂದು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಹರಿದಾಡಿದೆ. ಈ ಸುದ್ದಿ ಗ್ರಾಮದಲ್ಲಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಶಿರಾಳಕೊಪ್ಪದ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾಕ್ಕೆ ದೌಡಾಯಿಸಿದ್ದಾರೆ.

    ಶಿರಾಳಕೊಪ್ಪದ ಸಂತೆ ಮಾರುಕಟ್ಟೆ ಬಳಿ ಇರುವ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಈ ವಿಸ್ಮಯ ನಡೆದಿದೆ ಎನ್ನಲಾಗಿದೆ. ಗೋರಿಯ ಮೇಲೆ ಹೊದಿಸಿರುವ ಚಾದರ್‌ನಲ್ಲಿ ಉಸಿರಾಟದ ಅನುಭವವಾಗಿದೆ ಅಂತ ಕೆಲವರು ಹೇಳಿದನ್ನ ಕೇಳಿ ಇದನ್ನು ವೀಕ್ಷಿಸಲು ದರ್ಗಾಗೆ ಜನರು ಭೇಟಿ ನೀಡುತ್ತಿದ್ದಾರೆ.

    ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಕಾರಣದಿಂದ ದರ್ಗಾದ ಬಳಿ ಸಾರ್ವಜನಿಕರು ಬಾರದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಹಜ್ರತ್ ಸೈಯದ್ ಶಾಹಿದ್ ಅಲಿ ಶಾ, ಖಾದ್ರಿ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ವಿಸ್ಮಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿ ಸಾವು

    ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿ ಸಾವು

    ವಿಜಯಪುರ: ಜಿಲ್ಲೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿಯೊಬ್ಬರು ನರಳಾಡಿ ಪ್ರಾಣ ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

    ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ ರೋಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಕಂಡು ಬಂದ ಕೂಡಲೇ ತಡ ರಾತ್ರೀ ವಿಜಯಪುರ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಈ ವೇಳೆ ಖಾಸಗಿ ಹಾಗೂ ಸರ್ಕಾರಿ ವೈದ್ಯರು ವ್ಯಕ್ತಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು.

    ರಾತ್ರಿ ಇಡೀ ಅಲೆದು ಕೊನೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ರೋಗಿ ಸಮೇತ ಪೋಷಕರು ಆಗಮಿಸಿದ್ದರು. ಕೊನೆಗೆ ಜಿಲ್ಲಾಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ತಡ ರಾತ್ರಿ ರೋಗಿ ಮೃತಪಟ್ಟಿದ್ದಾರೆ.

  • ಕೊರೊನಾದಿಂದ್ಲೇ ಚಿಕ್ಕಬಳ್ಳಾಪುರದ ಮಹಿಳೆ ಸಾವು- ಶ್ರೀರಾಮುಲು ದೃಢ

    ಕೊರೊನಾದಿಂದ್ಲೇ ಚಿಕ್ಕಬಳ್ಳಾಪುರದ ಮಹಿಳೆ ಸಾವು- ಶ್ರೀರಾಮುಲು ದೃಢ

    ಬೆಂಗಳೂರು: ಹೋಂ ಕ್ವಾರಂಟೈನ್ ನಲ್ಲಿದ್ದ ಚಿಕ್ಕಬಳ್ಳಾಪು ಜಿಲ್ಲೆಯ ಗೌರಿ ಬಿದನೂರಿನ ಮಹಿಳೆ ಕೊರೊನಾ ವೈರಸ್ ನಿಂದಲೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

    ಮೂಲತಃ ಆಂಧ್ರದ ಹಿಂದೂಪುರ ಮೂಲದ 70 ವರ್ಷದ ಮಹಿಳೆ ಮೆಕ್ಕಾ ಪ್ರವಾಸ ಕೈಗೊಂಡು ಕಳೆದ 9 ದಿನಗಳಿಂದ ಮಗನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದರು. ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು

    ಪಬ್ಲಿಕ್ ಟಿವಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪ್ರತಿಕ್ರಿಯಿಸಿ, ಮೆಕ್ಕಾ ಪ್ರವಾಸದಿಂದ ವಾಪಾಸ್ಸಾಗಿ ಮಗನ ಮನೆಯಲ್ಲಿ ಕ್ವಾರಂಟೈನ್ ಗೆ ಓಳಗಾಗಿದ್ದರು. 70 ವರ್ಷದ ಮಹಿಳೆಗೆ ರಕ್ತದೊತ್ತಡ ಇತ್ತು. ಅಷ್ಟೇ ಅಲ್ಲದೇ ಕಾಲಿಗೆ ಬೇರೆ ಗಾಯ ಮಾಡಿಕೊಂಡಿದ್ದರು. ಇದರ ಜೊತೆ ಹೃದಯದ ಸಮಸ್ಯೆ ಸಹ ಇತ್ತು. ಮಂಗಳವಾರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು ಎಮದು ತಿಳಿಸಿದ್ದರು.

  • ಹೋಂ ಕ್ವಾರಂಟೈನ್​ನಲ್ಲಿದ್ದ ಚಿಕ್ಕಬಳ್ಳಾಪುರದ ಮಹಿಳೆ ಸಾವು

    ಹೋಂ ಕ್ವಾರಂಟೈನ್​ನಲ್ಲಿದ್ದ ಚಿಕ್ಕಬಳ್ಳಾಪುರದ ಮಹಿಳೆ ಸಾವು

    ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಶಂಕಿತ ಮಹಿಳೆಯೊಬ್ಬರು ಗೌರಿಬಿದನೂರು ನಗರದ ಮನೆಯಲ್ಲಿ ಮೃತಪಟ್ಟಿದ್ದಾರೆ.

    ಮೂಲತಃ ಆಂಧ್ರದ ಹಿಂದೂಪುರ ಮೂಲದ 70 ವರ್ಷದ ಮಹಿಳೆ ಮೆಕ್ಕಾ ಪ್ರವಾಸ ಕೈಗೊಂಡು ಕಳೆದ 9 ದಿನಗಳಿಂದ ಮಗನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದರು.

    ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.

    ಆಸ್ಪತ್ರೆಗೆ ದಾಖಲಾದ ನಂತರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಮಾದರಿ ಪರೀಕ್ಷೆಗೆ ಸ್ಯಾಂಪಲ್ ಗಳನ್ನ ಕಲೆಕ್ಟ್ ಮಾಡಿಕೊಂಡಿದ್ದು. ವರದಿ ನಂತರವಷ್ಟೇ ಕೊರೊನಾ ಸೋಂಕು ದೃಢಪಡಲಿದೆ.

    ಪಬ್ಲಿಕ್ ಟಿವಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪ್ರತಿಕ್ರಿಯಿಸಿ, ಮೆಕ್ಕಾ ಪ್ರವಾಸದಿಂದ ಮರಳಿ ಮಗನ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. 70 ವರ್ಷದ ಮಹಿಳೆಗೆ ರಕ್ತದೊತ್ತಡ ಇತ್ತು. ಅಷ್ಟೇ ಅಲ್ಲದೇ ಕಾಲಿಗೆ ಬೇರೆ ಗಾಯ ಮಾಡಿಕೊಂಡಿದ್ದರು. ಇದರ ಜೊತೆ ಹೃದಯದ ಸಮಸ್ಯೆ ಸಹ ಇತ್ತು. ನಿನ್ನೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು. ಮಹಿಳೆ ಮೃತಪಡಲು ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಆಕೆಗೆ ಕೊರೊನಾ ಸೋಂಕು ಇರುವುದು ಇನ್ನೂ ದೃಢಪಟ್ಟಿಲ್ಲ. ಆದರೂಐ ನಾವು ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ತಿಳಿಸಿದರು.

  • 4 ಗಂಟೆಗೂ ಅಧಿಕ ಕಾರೊಳಗೆ ಬಾಲಕ- ಶಾಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಕಂದಮ್ಮ ಬಲಿ

    4 ಗಂಟೆಗೂ ಅಧಿಕ ಕಾರೊಳಗೆ ಬಾಲಕ- ಶಾಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಕಂದಮ್ಮ ಬಲಿ

    ಭೋಪಾಲ್: ಶಾಲಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಹೋಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ನೈತಿಕ್ ಗೌರ್ ಎಂದು ಗುರುತಿಸಲಾಗಿದೆ. ಈತ ಹೋಶಂಗಾಬಾದ್ ನಲ್ಲಿರೋ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದನು. ಈ ಘಟನೆ ಮಾರ್ಚ್ 19ರಂದು ನಡೆದಿದ್ದು, ಬಾಲಕ ಭಾನುವಾರ ಮೃತಪಟ್ಟಿದ್ದಾನೆ.

    ಏನಿದು ಘಟನೆ?: ಶಾಲೆಯ ಅಧಿಕಾರಿಗಳು ಬಾಲಕನನ್ನು ಕಾರೊಳಗೆ ಲಾಕ್ ಮಾಡಿ ಹೋಗಿದ್ದಾರೆ. ಹೀಗಾಗಿ ಬರೋಬ್ಬರಿ 4 ಗಂಟೆಗೂ ಅಧಿಕ ಕಾಲ ಕಾರೊಳಗಿದ್ದರಿಂದ ಬಾಲಕನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ.

    ಶಾಲೆಯ ಅಧಿಕಾರಿಗಳು ನೈತಿಕ್ ನನ್ನು 4 ಗಂಟೆಗೂ ಅಧಿಕ ಕಾರೊಳಗೆ ಕೂಡಿ ಹಾಕಿದ್ದರಿಂದ ಆತ ಉಸಿರಾಟದ ತೊಂದರೆ ಅನುಭವಿಸಿದ್ದಾನೆ. ಅಲ್ಲದೇ ಘಟನೆಯಿಂದ ಆತ ಶಾಕ್ ಗೊಳಗಾಗಿದ್ದಾನೆ ಅಂತ ವೈದ್ಯರು ತಿಳಿಸಿದ್ದರು. ಶಾಲೆಯ ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಅಂತ ನೈತಿಕ್ ಪೋಷಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣವನ್ನು ಸಿಬಿಐ ತನಿಖೆ ಮಾಡುವಂತೆ ಬಾಲಕನ ಪೋಷಕರು ಒತ್ತಾಯಿಸಿದ್ದಾರೆ.

    ಕಾರಿನಿಂದಿಳಿಯಲು ನಿರಾಕರಣೆ: ಶಾಲೆಯ ನಿರ್ದೇಶಕ ಹಾಗೂ ಕೆಲ ಶಿಕ್ಷಕರ ಜೊತೆ ನೈತಿಕ್ ನನ್ನು ಕಾರಿನಲ್ಲಿ ಶಾಲೆಗೆ ಕಳುಹಿಸಿಕೊಡಲಾಗಿತ್ತು. ಶಾಲೆಗೆ ತಲುಪಿದ ಬಳಿಕ ನೈತಿಕ್ ಕಾರಿನಿಂದ ಇಳಿಯಲು ನಿರಾಕರಿಸಿದ್ದಾನೆ. ಹೀಗಾಗಿ ಶಾಲಾ ನಿರ್ದೇಶಕರು ಆತನನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿ ಹೋಗಿದ್ದಾರೆ. ನಂತರ ಶಿಕ್ಷಕಿಯೊಬ್ಬರಲ್ಲಿ ಬಾಲಕನನ್ನು ಕಾರಿನಿಂದಿಳಿಸಿ ಕರೆತರುವಂತೆ ಹೇಳಿದ್ದಾರೆ. ಆದ್ರೆ ಶಿಕ್ಷಕಿ ಇದನ್ನು ಮರೆತಿದ್ದು, ಹೀಗಾಗಿ ಬಾಲಕ ಬರೋಬ್ಬರಿ 4 ಗಂಟೆಗೂ ಅಧಿಕ ಕಾರಿನೊಳಗಡೆಯೇ ಇದ್ದನು. ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗದೇ ತೊಂದರೆ ಅನುಭವಿಸಿದ್ದ ಎಂದು ಅಂತ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಘಟನೆ ಸಂಬಂಧ ಹೋಶಂಗಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.