Tag: ಉಷ್ಣಾಂಶ

  • ರಾಜ್ಯದ ನಗರಗಳ ಹವಾಮಾನ ವರದಿ: 03-03-2020

    ರಾಜ್ಯದ ನಗರಗಳ ಹವಾಮಾನ ವರದಿ: 03-03-2020

    ರಾಜ್ಯದ ಹಲವು ಭಾಗಗಳಲ್ಲಿ ನಾಳೆ ಮೋಡ ಕವಿದ ವಾತಾವರಣ ಆಗುವ ಸಾಧ್ಯತೆಗಳಿವೆ. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಟಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
    ಬೆಂಗಳೂರು: 30- 22
    ಮೈಸೂರು: 31 – 23
    ಮಂಗಳೂರು: 31 – 27
    ಶಿವಮೊಗ್ಗ: 33 – 23
    ಬೆಳಗಾವಿ: 33 – 21

    ಮಂಡ್ಯ: 32 – 24
    ರಾಮನಗರ: 32 – 24
    ಮಡಿಕೇರಿ: 26 – 19
    ಹಾಸನ: 29 – 22
    ಚಾಮರಾಜನಗರ: 31 – 24

    ಚಿಕ್ಕಬಳ್ಳಾಪುರ: 29 – 22
    ಕೋಲಾರ: 31 – 23
    ತುಮಕೂರು: 31 – 24
    ಉಡುಪಿ: 32 – 27
    ಕಾರವಾರ: 32 – 27

    ಚಿಕ್ಕಮಗಳೂರು: 28 – 19
    ದಾವಣಗೆರೆ: 34 – 23
    ಚಿತ್ರದುರ್ಗ: 33 – 23
    ಹಾವೇರಿ: 34 – 22
    ಬಳ್ಳಾರಿ: 34 – 26

    ಧಾರವಾಡ: 33 – 22
    ಗದಗ: 34 – 23
    ಕೊಪ್ಪಳ: 34 – 25
    ರಾಯಚೂರು: 35 – 27
    ಯಾದಗಿರಿ: 34 – 26

    ವಿಜಯಪುರ: 30 – 23
    ಬೀದರ್: 32 – 23
    ಕಲಬುರಗಿ: 35 – 26
    ಬಾಗಲಕೋಟೆ: 35 – 24

  • ರಾಜ್ಯದ ನಗರಗಳ ಹವಾಮಾನ ವರದಿ 14-02-2020

    ರಾಜ್ಯದ ನಗರಗಳ ಹವಾಮಾನ ವರದಿ 14-02-2020

    ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಕಾಲ ಉಷ್ಣಾಂಶ ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, 21 ಕನಿಷ್ಠ ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದರೆ 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ.

    ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ
    ಬೆಂಗಳೂರು: 31 – 21
    ಮೈಸೂರು: 33 – 22
    ಮಂಗಳೂರು: 33 – 26
    ಶಿವಮೊಗ್ಗ: 34 – 22
    ಬೆಳಗಾವಿ: 33 – 22

    ಮಂಡ್ಯ: 33 – 23
    ರಾಮನಗರ: 23 – 14
    ಮಡಿಕೇರಿ: 30 – 18
    ಹಾಸನ: 31 – 20
    ಚಾಮರಾಜನಗರ: 33 – 22

    ಚಿಕ್ಕಬಳ್ಳಾಪುರ: 29 – 19
    ಕೋಲಾರ: 31 – 19
    ತುಮಕೂರು: 32 – 22
    ಉಡುಪಿ: 33 – 26
    ಕಾರವಾರ: 33 – 27

    ಚಿಕ್ಕಮಗಳೂರು: 31 – 18
    ದಾವಣಗೆರೆ: 33 – 22
    ಚಿತ್ರದುರ್ಗ: 32 – 21
    ಹಾವೇರಿ: 34 – 22
    ಬಳ್ಳಾರಿ: 34 – 22

    ಧಾರವಾಡ: 33 – 21
    ಗದಗ: 33 – 22
    ಕೊಪ್ಪಳ: 33 – 22
    ರಾಯಚೂರು: 34 – 21
    ಯಾದಗಿರಿ: 34 – 22

    ವಿಜಯಪುರ: 33 – 23
    ಬೀದರ್: 32 – 21
    ಕಲಬುರಗಿ: 34 – 22
    ಬಾಗಲಕೋಟೆ: 34 – 22

  • ರಾಜ್ಯದ ಪ್ರಮುಖ ನಗರಗಳ ಹವಾಮಾನ ವರದಿ 13-02-2020

    ರಾಜ್ಯದ ಪ್ರಮುಖ ನಗರಗಳ ಹವಾಮಾನ ವರದಿ 13-02-2020

    ಮುಂದಿನ ಒಂದು ವಾರ ಕಾಲ ರಾಜ್ಯದಲ್ಲಿ ಉಷ್ಣಾಂಶ ಇಳಿಕೆಯಾಗಲಿದೆ, ಚಳಿ ಸ್ವಲ್ಪ ಜಾಸ್ತಿಯಾಗಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದರೆ 24 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ.

    ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ
    ಬೆಂಗಳೂರು: 30 – 21
    ಮೈಸೂರು: 32 – 22
    ಮಂಗಳೂರು: 34 – 26
    ಶಿವಮೊಗ್ಗ: 34 – 23
    ಬೆಳಗಾವಿ: 32 – 23

    ಮಂಡ್ಯ: 32 – 23
    ರಾಮನಗರ: 32 – 22
    ಮಡಿಕೇರಿ: 29 – 18
    ಹಾಸನ: 31 – 21
    ಚಾಮರಾಜನಗರ: 32 – 23

    ಚಿಕ್ಕಬಳ್ಳಾಪುರ: 28 – 19
    ಕೋಲಾರ: 29 – 19
    ತುಮಕೂರು: 31 – 22
    ಉಡುಪಿ: 33 – 26
    ಕಾರವಾರ: 29 – 19

    ಚಿಕ್ಕಮಗಳೂರು: 31 – 19
    ದಾವಣಗೆರೆ: 33 – 23
    ಚಿತ್ರದುರ್ಗ: 31 – 22
    ಹಾವೇರಿ: 33 – 23
    ಬಳ್ಳಾರಿ: 33 – 24

    ಧಾರವಾಡ: 33 – 23
    ಗದಗ: 32 – 24
    ಕೊಪ್ಪಳ: 32 – 24
    ರಾಯಚೂರು: 33 – 24
    ಯಾದಗಿರಿ: 33 – 23

    ವಿಜಯಪುರ: 32 – 25
    ಬೀದರ್: 31 – 21
    ಕಲಬುರಗಿ: 34 – 24
    ಬಾಗಲಕೋಟೆ: 33 – 24

  • ಭಾರತದ ಅತಿ ಹೆಚ್ಚು ಬಿಸಿಲು ಹೊಂದಿರುವ 15 ನಗರಗಳ ಪಟ್ಟಿ ಬಿಡುಗಡೆ

    ಭಾರತದ ಅತಿ ಹೆಚ್ಚು ಬಿಸಿಲು ಹೊಂದಿರುವ 15 ನಗರಗಳ ಪಟ್ಟಿ ಬಿಡುಗಡೆ

    ನವದೆಹಲಿ: ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ಹೊಡೆತದಿಂದಾಗಿ ಜನರು ಮನೆಯಿಂದ ಹೊರ ಬರಲು ನೂರು ಬಾರಿ ಯೋಚಿಸುವಂತಾಗಿದೆ. ಶುಕ್ರವಾರ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 15 ನಗರಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ. ಶುಕ್ರವಾರ ಸಂಜೆ 7.30ರ ತಾಪಮಾನವನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ‘El Dordo’ ವೆಬ್‍ಸೈಟ್ ಈ ಪಟ್ಟಿಯನ್ನು ಪ್ರಕಟಿಸಿದೆ.

    ಇಎಲ್ ಡೊರಡೋ ವೆಬ್‍ಸೈಟ್ ಜಗತ್ತಿನ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ 15 ನಗರಗಳು ಭಾರತದಲ್ಲಿದೆ ಎಂದು ಹೇಳಿದೆ. ಈ 15 ನಗರಗಳು ಮಧ್ಯ ಭಾರತ ಮತ್ತು ಆಸುಪಾಸಿನಲ್ಲಿವೆ. ಮೊದಲ ಸ್ಥಾನವನ್ನು ಮಧ್ಯ ಪ್ರದೇಶದ ಖರಗೋನ್ ನಗರ ಪಡೆದಿದೆ. ಇಲ್ಲಿ 46.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

    15 ನಗರಗಳು ಎಲ್ಲಿವೆ?
    15 ನಗರಗಳ ಪೈಕಿ 9 ಮಹಾರಾಷ್ಟ್ರ, 3 ಮಧ್ಯ ಪ್ರದೇಶ, 2 ಉತ್ತರ ಪ್ರದೇಶ ಮತ್ತು ಒಂದು ನಗರ ತೆಲಂಗಾಣದಲ್ಲಿದೆ. ಮಧ್ಯ ಪ್ರದೇಶದ ಖರಗೋನ್ (46.6), ಮಹಾರಾಷ್ಟ್ರದ ಅಕೋಲಾ (46.6), ಬ್ರಹ್ಮಪುರಿ (45.8), ಪರ್ಭಾನಿ (45.7) ಮತ್ತು ವಾರ್ಧಾ (45.7) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ.

    ಮಹಾರಾಷ್ಟ್ರದ ಚಂದ್ರಾಪುರದ ವೈಲ್ಡ್ ಲೈಫ್ ಎನ್‍ಜಿಓ (Habitat Conservation Society) ಪ್ರಕಾರ, ನಗರದ 15 ಕಿ.ಮೀ. ಅಸುಪಾಸಿನಲ್ಲಿ ಸುಮಾರು ಬಿಸಿಲಿನ ಝಳಕ್ಕೆ 9 ಪಕ್ಷಿಗಳು ಮೃತಪಟ್ಟಿವೆ. ಕಲ್ಲಿದ್ದಲು ಗಣಿಗಾರಿಕೆ, ಶಾಖೋತ್ಪನ್ನ ಘಟಕ ಹಾಗೂ ಇತರೆ ಕೈಗಾರಿಕೆಗಳು ಇಲ್ಲಿ ಕೇಂದ್ರಿಕೃತವಾಗಿದ್ದರಿಂದ ತಾಪಮಾನದ ಹೆಚ್ಚಳವಾಗಲು ಕಾರಣವಾಗಿದೆ. ಇದೆಲ್ಲದರ ನೇರ ಪರಿಣಾಮ ಪಕ್ಷಿಗಳ ಮೇಲೆ ಉಂಟಾಗುತ್ತಿದೆ ಎಂದು ತಿಳಿಸಿದೆ.

    ಅಕೋಲಾ, ಅಮರಾವತಿ, ಚಂದ್ರಾಪುರ, ನಾಗ್ಪುರ, ಯವತ್ಮಾಲ ಮತ್ತು ವಾರ್ಧಾ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿಗಾಳಿ ಬೀಸಲಿದೆ. ಈ ಜಿಲ್ಲೆಗಳಲ್ಲಿ ಅಂದಾಜು 45-47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಭಾರತದ ಹವಾಮಾನ ಇಲಾಖೆ (India Meteorological Department) ತಿಳಿಸಿದೆ.

  • ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ನಾಗ್ಪುರ: 2015ರಲ್ಲಿ ಸಂಭವಿಸಿದಂತೆ ಈ ವರ್ಷ ಕೂಡ ದೇಶದಲ್ಲಿ ಮಾರಣಾಂತಿಕ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಇಂಟರ್  ಗವರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಹೇಳಿದೆ.

    ಐಪಿಸಿಸಿ ವರದಿ ಜಾಗತಿಕ ಮಟ್ಟದ ಅತಿ ದೊಡ್ಡ ಅವಲೋಕನ ವರದಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕೈಗಾರಿಕಾ ಕ್ರಾಂತಿ ಅವಧಿಯ ಹಿಂದಿನ ಮಟ್ಟ (ಪ್ರಿ ಇಂಡಸ್ಟ್ರಿಯಲ್ ಲೆವಲ್) ಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾದರೆ ಭಾರತಕ್ಕೆ ಭಾರೀ ಅಪಾಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಕೋಲ್ಕತಾ ಮತ್ತು ಕರಾಚಿಗೆ ಉಷ್ಣ ಅಲೆಗಳ ಅಪಾಯ ಹೆಚ್ಚಿದೆ. 2015ರಲ್ಲಿ ಸಂಭವಿಸಿದ ಮಾರಣಾಂತಿಕ ಬಿಸಿಗಾಳಿಯಂತೆ ಇಲ್ಲೂ ಮರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಿಶೇಷವಾಗಿ ತನ್ನ ವರದಿಯಲ್ಲಿ ಐಪಿಸಿ ಹೇಳಿದೆ.

    ಸೋಮವಾರ ಈ ವರದಿ ಬಿಡುಗಡೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಪೋಲೆಂಡ್‍ನಲ್ಲಿ ನಡೆಯಲಿರುವ ಕಟೋವೈಸ್ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಈ ಜಾಗತಿಕ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

    2015ರಲ್ಲಿ ದೇಶವನ್ನು ಬಾಧಿಸಿದ್ದ ಬಿಸಿಗಾಳಿ ಕನಿಷ್ಠ 2,500 ಜನರನ್ನು ಬಲಿ ತೆಗೆದುಕೊಡಿತ್ತು. ಒಂದು ವೇಳೆ ಇದೇ ರೀತಿಯಲ್ಲಿ ಉಷ್ಣಾಂಶ ಹೆಚ್ಚಾದರೆ 2030- 2052ರೊಳಗೆ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ತಲುಪುವ ಅಪಾಯವಿದೆ ಎಂದು ಹೇಳಿದೆ. 1.5 ಡಿಗ್ರಿ ಹೆಚ್ಚಾದರೆ ಮೆಕ್ಕೆಜೋಳ, ಭತ್ತ, ಗೋಧಿ ಇನ್ನಿತರ ಆಹಾರ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತದೆ.

    ಸಾವಿರಾರು ವಿಜ್ಞಾನಿಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಿದ್ದು ಈ ತಂಡದಲ್ಲಿ ಕೆಲಸ ಮಾಡಿದ್ದ ಜೊಯಾಶ್ರೀ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಜಾಗತಿಕ ತಾಪಮಾನದ ಬಿಸಿ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರಿಗೆ ತಟ್ಟಿದೆ. ಹವಾಮಾನ ಬದಲಾವಣೆ ಭಾರತಕ್ಕೆ ತಟ್ಟಿದ್ದು, ಕೇದರನಾಥ, ಶ್ರೀನಗರ, ಚೆನ್ನೈ, ಇತ್ತೀಚಿನ ಕೇರಳವೇ ಇದಕ್ಕೆ ಉದಾಹರಣೆ. ಈಗಾಗಲೇ ಹಲವು ಕಡೆ ಬರ ಬಂದಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಭಾರೀ ಅಪಾಯವಿದೆ ಎಂದು ಹೇಳಿದ್ದಾರೆ.

    ಕಳೆದ ಹಣಕಾಸು ವರ್ಷದಲ್ಲಿ ಉಷ್ಣ ವಿದ್ಯುತ್ ಘಟಕದಿಂದ ಭಾರತ ವಾರ್ಷಿಕವಾಗಿ 929 ದಶಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಹೊರ ಬಿಟ್ಟಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಪೈಕಿ 79% ವಿದ್ಯುತ್ ಉಷ್ಣ ವಿದ್ಯುತ್ ಸ್ಥಾವರಿಂದಲೇ ಉತ್ಪಾದನೆಯಾಗುತ್ತದೆ.

    ಉಷ್ಣಾಂಶ ಹೆಚ್ಚಾದ್ರೆ ಏನಾಗುತ್ತೆ?
    ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದ್ರೆ ಭಾರತದಲ್ಲಿ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿದ್ರೆ, ಭಾರತದಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಜಾಸ್ತಿ ಆಗಲಿದೆ. ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಹೆಚ್ಚಾದ್ರೆ ಬೇಸಿಗೆಯಲ್ಲಿ ಆರ್ಕ್ಟಿಕ್ ಮಹಾಸಾಗರದಲ್ಲಿ ಮಂಜುಗಡ್ಡೆ ಕರಗುತ್ತದೆ. ಅಷ್ಟೇ ಅಲ್ಲದೇ ಹವಳ ದ್ವೀಪಗಳೇ ಇರುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಸಿಲಿನ ತಾಪ ಹೆಚ್ಚಾಗಿದ್ದಕ್ಕೆ ವಿಮಾನ ಹಾರಾಟವೇ ರದ್ದಾಯ್ತು!

    ಬಿಸಿಲಿನ ತಾಪ ಹೆಚ್ಚಾಗಿದ್ದಕ್ಕೆ ವಿಮಾನ ಹಾರಾಟವೇ ರದ್ದಾಯ್ತು!

    ವಾಷಿಂಗ್ಟನ್: ನಿಲ್ದಾಣಗಳಲ್ಲಿ ಮಂಜು ಹೆಚ್ಚಿದ್ದರೆ ವಿಮಾನಗಳು ಲ್ಯಾಂಡ್ ಆಗದೇ ಇರುವುದನ್ನು ನೀವು ಈ ಹಿಂದೆ ಓದಿರಬಹುದು. ಆದರೆ ಈಗ ಬಿಸಿಲು ಜಾಸ್ತಿಯಾದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಅಮೆರಿಕದಲ್ಲಿ ರದ್ದುಮಾಡಲಾಗಿದೆ.

    ಹೌದು, ಅಮೆರಿಕ ದೇಶದ ರಾಜ್ಯವಾದ ಅರಿಜೋನಾದ ರಾಜಧಾನಿ ಫೀನಿಕ್ಸ್ ನಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

    ಫಿನಿಕ್ಸ್ ನಲ್ಲಿ ಮಂಗಳವಾರ 49 ಡಿಗ್ರಿ ಸೆಲ್ಸಿಯಸ್ ದಾಖಲಾದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪೆನಿಗಳು ಹಾರಾಟವನ್ನು ಸ್ಥಗಿತಗೊಳಿಸಿದೆ. ಬಂಬಾರ್ಡಿಯರ್ ಸಿಆರ್‍ಜಿ ವಿಮಾನಗಳು ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಸಂಸ್ಥೆಯ 40 ವಿಮಾನಗಳ ಹಾರಾಟ ರದ್ದಾಗಿದೆ.

    ದೊಡ್ಡ ವಿಮಾನಗಳಾದ ಬೋಯಿಂಗ್ 747 ಮತ್ತು ಏರ್‍ಬಸ್ ಎ320 ಗಳು ಗರಿಷ್ಠ 52 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಇರುವ ಕಾರಣ ಈ ವಿಮಾನಗಳು ಈ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿವೆ.

    ಯಾಕೆ ವಿಮಾನ ಹಾರಲ್ಲ:
    ವಾತಾವರಣದ ಉಷ್ಣಾಂಶ ಸಾಧಾರಣವಾಗಿದ್ದರೆ ವಿಮಾನಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಎತ್ತರದಲ್ಲಿ ಹಾರಾಟ ನಡೆಸುವುದರಿಂದ ಬಿಸಿಲಿನ ತಾಪ ಮತ್ತು ಎಂಜಿನ್ ನಿಂದ ಉತ್ಪಾದನೆಯಾಗುವ ಶಾಖವನ್ನು ವಿಮಾನ ತಡೆದುಕೊಳ್ಳಬೇಕಾಗುತ್ತದೆ. ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಸೆಲ್ಸಿಯಸ್ ಇದ್ದರೆ ಎಂಜಿನ್ ಮತ್ತು ವಾತಾವರಣದ ಉಷ್ಣತೆ ಎರಡನ್ನೂ ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದರಲ್ಲೂ ಫುಲ್ ಟ್ಯಾಂಕ್ ಇಂಧನ ತುಂಬಿದ್ದರೆ ವಿಮಾನಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

    https://twitter.com/VanessaR12News/status/877341854101929985

    https://twitter.com/BiologistDan/status/877215847407902721