Tag: ಉಷಾ ಶಿವಕುಮಾರ್

  • ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ

    ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ

    ಬೆಂಗಳೂರು: ಚುನಾವಣಾ ಪ್ರಚಾರಕ್ಕೆ (Election Campaign) ಇನ್ನೊಂದೇ ದಿನ ಬಾಕಿಯಿದ್ದು, ಪ್ರಚಾರದ ಭರಾಟೆ ಜೋರಾಗಿ ನಡೆದಿದೆ.

    ಇದರಿಂದಾಗಿ ಕೆಪಿಸಿಸಿ (KPCC) ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಶಿವಕುಮಾರ್‌ (DK Shivakumar) ಪರ ಪತ್ನಿ ಉಷಾ ಶಿವಕುಮಾರ್‌ (Usha Shivakumar) ಹಾಗೂ ಪುತ್ರ ಆಕಾಶ್‌ ಕೆಂಪೇಗೌಡ ಕನಕಪುರ ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಭಾರತದಿಂದ ಬೇರೆ ಮಾಡುವ ಹುನ್ನಾರ ನಡೆಸಿದೆ ಕಾಂಗ್ರೆಸ್ – ಮೋದಿ ವಾಗ್ದಾಳಿ

    ಕನಕಪುರದ ಕೋಡಿಹಳ್ಳಿ ಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರ ಆಕಾಶ್ ಕೆಂಪೇಗೌಡ ಅಪ್ಪನ ಪರ ಇದೇ ಮೊದಲ ಬಾರಿಗೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಚಾರ ಕಾರ್ಯದಲ್ಲಿ ಕೈ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಥ್‌ ನೀಡಿದ್ದಾರೆ. ಇದನ್ನೂ ಓದಿ: ಶ್ರೀಕಂಠೇಶ್ವರನ ದರ್ಶನ ಪಡೆದು ಚುನಾವಣಾ ಪ್ರಚಾರ ಮುಗಿಸಿದ ಮೋದಿ

    ಉಷಾ ಶಿವಕುಮಾರ್‌ ಕಳೆದ 15 ದಿನಗಳಿಂದಲೂ ಪತಿ ಡಿಕೆಶಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿ ಡಿಕೆಶಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ನಿಮ್ಮ ಕ್ಷೇತ್ರದ ಮಗ ಸಿಎಂ ಆಗಲು ನೀವು ಶಕ್ತಿ ತುಂಬಬೇಕು ಎಂದು ಮನೆಮನೆಗೆ ತಿರುಗಿ ಪತಿ ಡಿ.ಕೆ.ಶಿವಕುಮಾರ್‌ಗೆ ಮತ ನೀಡುವಂತೆ ಉಷಾ ಶಿವಕುಮಾರ್ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಿರುವ ಮತದಾರರು ಆರತಿ ಸಹಿತ ಸ್ವಾಗತಕೋರಿದ್ದಾರೆ.

  • ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ – ಕನಕಪುರದ ಹಲವೆಡೆ ಪ್ರಚಾರ

    ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ – ಕನಕಪುರದ ಹಲವೆಡೆ ಪ್ರಚಾರ

    ರಾಮನಗರ: ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ಪತ್ನಿ ಉಷಾ ಶಿವಕುಮಾರ್ (Usha Shivakumar) ತನ್ನ ಪತಿಯ ಪರವಾಗಿ ಮಂಗಳವಾರ ಕನಕಪುರದ (Kanakapura) ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದರು.

    ಈ ಬಾರಿ ಡಿಕೆಶಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ನಿಮ್ಮ  ಕ್ಷೇತ್ರದ ಮಗ ಸಿಎಂ ಆಗಲು ನೀವು ಶಕ್ತಿ ತುಂಬಬೇಕು ಎಂದು ಮನೆಮನೆಗೆ ತಿರುಗಿ ಪತಿ ಡಿ.ಕೆ.ಶಿವಕುಮಾರ್‌ಗೆ ಮತ ನೀಡುವಂತೆ ಉಷಾ ಶಿವಕುಮಾರ್ ಮನವಿ ಮಾಡಿದರು. ಈ ವೇಳೆ ಕನಕಪುರದ ಜನತೆ ಉಷಾ ಅವರನ್ನು ಕಂಡು ಮಾತನಾಡಿಸಿ ಶುಭ ಹಾರೈಸಿದರು. ಇದನ್ನೂ ಓದಿ: ಹೊಳಲ್ಕೆರೆ ಅಖಾಡ ಹೇಗಿದೆ? ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ

    ಈ ವೇಳೆ ಮಾತನಾಡಿದ ಉಷಾ, ನಾನು ವೋಟಿಂಗ್ (Voting) ಮುಗಿಯುವವರೆಗೂ ಕ್ಯಾಂಪೇನ್ ಮಾಡುತ್ತೇನೆ. ನಾನು ವೋಟ್ ಕೇಳುವುದೇ ಬೇಕಿಲ್ಲ. ಜನರೇ ಮತ ಕೊಡುತ್ತಾರೆ. ನಾನು ಪ್ರತೀ ಚುನಾವಣೆಯಲ್ಲೂ (Election) ನನ್ನ ಪತಿಯ ಪರ ಪ್ರಚಾರ ಮಾಡುತ್ತೇನೆ. ಈ ಬಾರಿಯೂ ಜನ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ

  • ಜೈಲಿಂದ ಹೊರಬಂದ್ರೂ ಡಿಕೆಶಿಗೆ ತಪ್ಪಿಲ್ಲ ಸಂಕಷ್ಟ – ಇಡಿಯಿಂದ ಪಾರಾಗ್ತಾರಾ ತಾಯಿ, ಪತ್ನಿ?

    ಜೈಲಿಂದ ಹೊರಬಂದ್ರೂ ಡಿಕೆಶಿಗೆ ತಪ್ಪಿಲ್ಲ ಸಂಕಷ್ಟ – ಇಡಿಯಿಂದ ಪಾರಾಗ್ತಾರಾ ತಾಯಿ, ಪತ್ನಿ?

    ನವದೆಹಲಿ: ಜಾಮೀನು ಪಡೆದು ಹೊರ ಬಂದರೂ ಕನಕಪುರದ ಬಂಡೆಗೆ ಟೆನ್ಶನ್ ಮಾತ್ರ ತಪ್ಪಿಲ್ಲ. ತಾವೇನೋ ಹರಸಾಹಸ ಪಟ್ಟು 50 ದಿನಗಳ ಬಳಿಕ ಇಡಿ ಬಲೆಯಿಂದ ಹೊರ ಬಂದರು. ಆದರೆ ಈಗ ಜಾರಿ ನಿರ್ದೇಶನಾಲಯ(ಇಡಿ) ಡಿಕೆಶಿ ಪತ್ನಿ ಹಾಗೂ ತಾಯಿಗೆ ಬಲೆ ಬೀಸಿದೆ. ಇಡಿ ನೀಡಿರುವ ಸಮನ್ಸ್ ಸಂಬಂಧ ಇಂದು ದಿಲ್ಲಿ ಹೈಕೋರ್ಟಿನಿಂದ ಮಧ್ಯಂತರ ತೀರ್ಪು ಬರುವ ಸಾಧ್ಯತೆಗಳಿವೆ.

    ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಜಾಲ ಕುಟುಂಬಕ್ಕೆ ವಿಸ್ತರಣೆ ಆಗಿದೆ. ಈಗಾಗಲೇ ಸಹೋದರ ಡಿ.ಕೆ ಸುರೇಶ್ ಮತ್ತು ಪುತ್ರಿ ಐಶ್ವರ್ಯ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ಈಗ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮಗೆ ಎರಡನೇ ಬಾರಿ ಸಮನ್ಸ್ ನೀಡಿದ್ದಾರೆ.

    ಈ ಹಿಂದೆ ಅಕ್ಟೋಬರ್ 17 ಕ್ಕೆ ವಿಚಾರಣೆ ಬರುವಂತೆ ಡಿಕೆ ತಾಯಿ ಮತ್ತು ಮಡದಿಗೆ ಇಡಿಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ರದ್ದು ಮಾಡಬೇಕು, ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಅಂತ ಕೋರಿ ಡಿಕೆಶಿ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿತ್ತು. ಅಲ್ಲದೆ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿಗೆ ಸೂಚನೆ ನೀಡಿತ್ತು. ಈಗಾಗಲೇ 7 ದಿನ ಕಳೆದಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆ ಬನ್ನಿ ಅಂತ ಡಿಕೆ ತಾಯಿ ಮತ್ತು ಮಡದಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ನಡುವೆ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಗೌರಮ್ಮ ಮತ್ತು ಉಷಾ ಸಲ್ಲಿಸಿದ್ದ ಅರ್ಜಿ ಕೂಡ ಇಂದೇ ವಿಚಾರಣೆಗೆ ಬರಲಿದೆ.

    ಐಟಿ ಪ್ರಕಣರದಲ್ಲಿ ಅನಾವಶ್ಯಕವಾಗಿ ಇಡಿ ಮೂಗು ತೂರಿಸಿದ್ದು ಇಡೀ ಕುಟುಂಬಸ್ಥರ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಅಂತ ದೆಹಲಿ ಹೈಕೋರ್ಟಿನಲ್ಲಿ ಡಿಕೆಶಿ ಪರ ವಕೀಲರು ವಾದ ಮಂಡಿಸಿದರು. ಒಂದು ವೇಳೆ ವಿಚಾರಣೆ ಅತ್ಯವಶ್ಯಕ ಅನ್ನೋದಾದರೆ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ದೆಹಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಡಿಕೆಶಿ ಪತ್ನಿ ಉಷಾರನ್ನು ಒಳಗೊಂಡು ಗೌರಮ್ಮರನ್ನು ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡಿಸಲು ಇಡಿಗೆ ಸೂಚಿಸುವಂತೆ ಹೈಕೋರ್ಟಿಗೆ ಮನವಿ ಮಾಡಿದರು.

    ಈ ಸಂಬಂಧ ಇಂದು ಕೂಡ ವಾದ ಪ್ರತಿ-ವಾದ ಮುಂದುವರಿಯಲಿದ್ದು, ಬಳಿಕ ಮಧ್ಯಂತರ ತೀರ್ಪು ಬರುವ ಸಾಧ್ಯತೆಗಳಿವೆ. ಇಡಿ ವಿಚಾರಣೆಗೆ ಹೈಕೋರ್ಟ್ ಬ್ರೇಕ್ ಹಾಕುತ್ತಾ ಅಥವಾ ವಯಸ್ಸಿನ ಕಾರಣಗಳಿಂದ ಬೆಂಗಳೂರಿನಲ್ಲಿಯೇ ವಿಚಾರಣೆಗೆ ನಿರ್ದೇಶನ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕು.