Tag: ಉಷಾ

  • ನಾನು ಸಸ್ಯಹಾರಿ, ನಾನ್ ವೆಜ್ ತಿನ್ನಲ್ಲ : ಡಿ.ಕೆ ಶಿವಕುಮಾರ್

    ನಾನು ಸಸ್ಯಹಾರಿ, ನಾನ್ ವೆಜ್ ತಿನ್ನಲ್ಲ : ಡಿ.ಕೆ ಶಿವಕುಮಾರ್

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಆಹಾರ ಕ್ರಮ ಮತ್ತು ತಮಗಿಷ್ಟವಾದ ಊಟದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಡಿಕೆಶಿ ಇದೀಗ ಅಪ್ಪಟ ಸಸ್ಯಹಾರಿಯಂತೆ. ಜೈಲಿನಿಂದ ಬಂದ ನಂತರ ನಾನ್ ವೆಜ್ (Non Veg) ತ್ಯೆಜಿಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಮಶ್ರೂಮ್ ಮತ್ತು ಕಡೆಲೆಕಾಯಿ ಅಂದರೆ ಡಿಕೆಶಿಗೆ ಪ್ರಾಣ ಎಂದು ಡಿಕೆಶಿ ಪತ್ನಿ ಉಷಾ (Usha) ತಿಳಿಸಿದ್ದಾರೆ.

    ಶಿಕ್ಷಣ ಮತ್ತು ರಾಜಕಾರಣದ ಬಗ್ಗೆಯೂ ಅವರು ಮಾತನಾಡಿದ್ದು, ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಈ ಶನಿವಾರ- ಭಾನುವಾರ ಪ್ರಸಾರವಾದರೆ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ (Weekend with Ramesh) ಮುಕ್ತಾಯವಾಗಲಿದೆ. ಈ ಬಾರಿ ಅತೀ ವೇಗದಲ್ಲಿ ಈ ಕಾರ್ಯಕ್ರಮವನ್ನು ಮುಗಿಸಿದೆ ಜೀ ಕನ್ನಡ ವಾಹಿನಿ. ಮೊದಲ ಸೀಸನ್ ನಿಂದ ಈ ಸೀಸನ್ ವರೆಗೂ ಒಟ್ಟು 100 ಸಾಧಕರು ವೀಕೆಂಡ್ ಕುರ್ಚಿ ಮೇಲೆ ಕೂತು ತಮ್ಮ ಸಾಧನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ವೀಕೆಂಡ್ ಟೆಂಟ್ ನಲ್ಲಿ ಕೂತು ತಮ್ಮ ಬದುಕನ್ನು ರಿವೈಂಡ್ ಮಾಡಿ ನೋಡಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಪಿಸೋಡ್ ಮೂಲಕ  ಈ ಸೀಸನ್ ಮುಗಿಯಲಿದೆ. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಡಿಕೆಶಿ ಅವರ ಎಪಿಸೋಡ್ ನ ಪ್ರೊಮೋನಲ್ಲೇ ‘ಗ್ರ್ಯಾಂಡ್ ಫಿನಾಲೆ’ (Grand Finale)ಎಂದು ಹಾಕಲಾಗಿದೆ.  ಸಾಧಕರ ಸೀಟಿನಲ್ಲಿ ಕುಳಿತಿರುವ ಡಿ.ಕೆ. ಶಿವಕುಮಾರ್ (D.K. Shivakumar) ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ನಟ ರಮೇಶ್ ಅರವಿಂದ್ (Ramesh Aravind) ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಮೇಲೆ ಕೂರಿಸಿಕೊಂಡು ಅವರ ಕಥೆ ಕೇಳಿದ್ದಾರೆ. ಡಿಕೆಶಿ ಕಥೆಯನ್ನು ಆಪ್ತರಿಂದ ಹೇಳಿಸಿದ್ದಾರೆ.

     

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.

  • ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

    ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಪತ್ನಿಗೆ ಉಷಾಗೆ ಇಡಿ ವಿಚಾರಣೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

    ಉಷಾ ಅವರು ನಾಳೆ ವಿಚಾರಣೆಗೆ ಹಾಜರಾಗಬೇಕೆಂದಿಲ್ಲ. ಹಾಗೆಯೇ ಗೌರಮ್ಮ ಅವರಿಗೆ ನೀಡಿದ್ದ ಸಮನ್ಸ್ ಕೂಡ ವಾಪಸ್ ಪಡೆದುಕೊಂಡಿದ್ದು, ಹೊಸದಾಗಿ ಸಮನ್ಸ್ ಕಳುಹಿಸುವುದಾಗಿ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟಿನಲ್ಲಿ ತಿಳಿಸಿದ್ದಾರೆ.

    ಡಿಕೆಶಿ ಪತ್ನಿ ಹಾಗೂ ತಾಯಿ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಉಷಾ, ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ನ್ ವಾದ ಮಂಡಿಸಿ, ಬೇರೆ ಕೋರ್ಟ್ ಗಳ ತೀರ್ಪು ಉಲ್ಲೇಖ ಮಾಡುವ ಮೂಲಕ ಒಂದೇ ಪ್ರಕರಣವನ್ನು ಇಡಿ ತಿರುಚಿ ಆರೋಪ ಮಾಡುತ್ತಿದೆ. ಒಂದೇ ಪ್ರಕರಣದಲ್ಲಿ ಡಿಕೆಶಿ ಪತ್ನಿ ಉಷಾ ಮತ್ತು ಗೌರಮ್ಮ ಅವರಿಗೆ ನೊಟೀಸ್ ನೀಡಿದೆ. ಬೇರೆ ಪ್ರಕರಣವೊಂದರಲ್ಲಿ ಗೌರಮ್ಮ ಅವರಿಂದ ಡಿ.ಕೆ ಸುರೇಶ್ ಗೆ ಜಮೀನು ವರ್ಗ ಮಾಡಿರುವ ಹಿನ್ನೆಲೆಯಲ್ಲಿ ನೊಟೀಸ್ ನೀಡಲಾಗಿದೆ. ವಿಚಾರಣೆಯಲ್ಲಿ ಮಹಿಳೆಯರಿಗೆ ವಿನಾಯಿತಿ ಇದೆ ಎಂದು ವಾದಿಸಿದರು.

    ಅಲ್ಲದೆ 15 ವರ್ಷಕ್ಕಿಂತ ಕೆಳಗಿರುವ ಮತ್ತು 85 ವರ್ಷದಕ್ಕಿಂತ ಮೇಲ್ಪಟ್ಟವರನ್ನು ಪೋಲೀಸ್ ಸ್ಟೇಷನ್ ಗೆ ವಿಚಾರಣೆಗೆ ಕರೆಯಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಗೌರಮ್ಮ ಮತ್ತು ಉಷಾ ಅವರಿಗೆ ನೊಟೀಸ್ ಕೊಡುವ ಅಗತ್ಯ ಇರಲಿಲ್ಲ ಎಂದು ಕೃಷ್ಣನ್ ವಾದಿಸಿದರು.

    ಇದೇ ವೇಳೆ ಎಷ್ಟು ದಿನ ವಿಚಾರಣೆ ಮಾಡುತ್ತೀರಿ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಡಿ ಪರ ವಕೀಲರು, ಎರಡು ಪ್ರಕರಣಗಳಿವೆ ಹೀಗಾಗಿ ವಿಚಾರಣೆ ಮಾಡಬೇಕಾಗುತ್ತದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ತನಿಖೆ ಮಾಡಬೇಕು. ಮುಂದಿನ ವಾರದಲ್ಲಿ ವಿಚಾರಣೆ ನಡೆಸುತ್ತೇವೆ. ಸಮನ್ಸ್ ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.

    ಮುಂದಿನ ವಾರ ಪ್ರಕರಣ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಮುಂದೂಡಿ, ನಾಳೆ ಉಷಾ ಶಿವಕುಮಾರ್ ಹಾಜರಾಗುವ ಅವಶ್ಯಕತೆ ಇಲ್ಲ. ಇಬ್ಬರಿಗೂ ತಾತ್ಕಾಲಿಕ ರಿಲೀಫ್ ನೀಡಲಾಗಿದೆ. ನಾಳೆ ವಿಚಾರಣೆ ಹಾಜರಾಗಬೇಕೆಂದಿಲ್ಲ. ಸಮನ್ಸ್ ವಾಪಸ್ ಪಡೆದು, ಹೊಸ ಸಮನ್ಸ್ ಜಾರಿ ಮಾಡುತ್ತೇವೆ. 7 ದಿನಗಳ ಬಳಿಕ ಸಮನ್ಸ್ ಬಳಿಕ ಹೊಸ ಸಮನ್ಸ್ ಜಾರಿ ಮಾಡುತ್ತೇವೆ ಎಂದು ಇಡಿ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಕರಣದ ವಿಸ್ತ್ರತ ವಿಚಾರಣೆಯನ್ನು ಕೋರ್ಟ್ ನಡೆಸಲಿದೆ.

  • ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು – ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ

    ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು – ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ

    ಬೆಂಗಳೂರು: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಅತ್ತೆ ಗೈರಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಇಡಿ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದು, ಅನಾರೋಗ್ಯದ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.

    ಇಂದು ವಿಚಾರಣೆಗೆ ಹಾಜರಾಗುವಂತೆ ಗೌರಮ್ಮಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಅನಾರೋಗ್ಯ ಹಿನ್ನೆಲೆ ದೆಹಲಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ಗೌರಮ್ಮ ಅವರು ಸಮನ್ಸ್ ಗೆ ಉತ್ತರ ನೀಡಿದ್ದಾರೆ. ಅಲ್ಲದೆ, ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ ಪತ್ನಿಯಿಂದಲೂ ಇದೇ ರೀತಿ ಮನವಿ ಮಾಡಲಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಅಕ್ಟೋಬರ್ 17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಉಷಾ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದೀಗ ಸಮನ್ಸ್ ಗೆ ಗೌರಮ್ಮ ಹಾಗೂ ಉಷಾ ಅವರು ಉತ್ತರಿಸಿದ್ದು, ಈ ಕುರಿತು ಇಡಿ ಅಧಿಕಾರಿಗಳು ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    ಅಕ್ರಮ ಹಣ ವರ್ಗಾವಣೆ ಪ್ರರಕಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತಷ್ಟು ವಿಚಾರಣೆಗೆ ನಡೆಸಿರುವ ಇಡಿ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

    ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಇಡಿ ಅಧಿಕಾರಿಗಳು ನಾಳೆಯೇ ವಿಚಾರಣೆ ಹಾಜರಾಗುವಂತೆ ಸೋಮವಾರ ತಾಯಿ ಗೌರಮ್ಮ ಅವರಿಗೆ ಸೂಚಿಸಿದ್ದರು. ಉಷಾ ಅವರಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಕುಟುಂಬ ಸದಸ್ಯರ ನಡುವೆ ನಡೆದಿರುವ ಹಣದ ವ್ಯವಹಾರವೇ ಕಾರಣ ಎನ್ನಲಾಗಿದ್ದು, ತಾಯಿ-ಮಗನಿಗೆ, ಮಗ-ತಾಯಿಗೆ, ಪತಿ-ಪತ್ನಿಗೆ, ಮಾವನಿಂದ ಸೊಸೆಗೆ ಸಾಲದ ವ್ಯವಹಾರ ನಡೆದಿರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಜ್ಜಿ-ಮೊಮ್ಮಗಳ ವ್ಯವಹಾರ: ಡಿಕೆಶಿ ಕುಟುಂಬದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ ಬಗ್ಗೆ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಡಿಕೆಶಿ ತಾಯಿ ಗೌರಮ್ಮ ಅವರು ಮೊಮ್ಮಗಳ ನಡುವೆ ಕೋಟಿ ರೂ. ವ್ಯವಹಾರ ನಡೆದಿದೆ. ಮೊದಲಿಗೆ ಮೊಮ್ಮಗಳು ಐಶ್ವರ್ಯ ಅವರ ಖಾತೆಗೆ 2018 ಜೂನ್ ತಿಂಗಳಿನಲ್ಲಿ ಅಜ್ಜಿ ಗೌರಮ್ಮ ಅವರು 3 ಕೋಟಿ ರೂ.ಗಳನ್ನು ಜಮೆ ಮಾಡಿದ್ದಾರೆ. ಅಲ್ಲದೇ ಐಶ್ವರ್ಯಾ ಹೆಸರಿಗೆ 2001 ರಲ್ಲಿ ಉತ್ತರಹಳ್ಳಿಯಲ್ಲಿದ್ದ 3 ಎಕ್ರೆ ಭೂಮಿಯನ್ನು ಗಿಫ್ಟ್ ನೀಡಿ ಬರೆದುಕೊಟ್ಟಿದ್ದರು. ಆ ಬಳಿಕ 2002ರಲ್ಲಿ ಹೊಸಕೆರೆಹಳ್ಳಿಯ 3 ಎಕರೆ ಭೂಮಿಯನ್ನು ಗಿಫ್ಟ್ ನೀಡಿದ್ದರು. ಇದರ ನಡುವೆಯೇ ಐಶ್ವರ್ಯಾಗೆ ಮೂರು ನಿವೇಶನಗಳನ್ನು ಗೌರಮ್ಮ ನೀಡಿದ್ದರು. ಒಟ್ಟು 193 ಕೋಟಿ ರೂ.ಗಳನ್ನು ಐಶ್ವರ್ಯಾ ಅವರ ಖಾತೆಗೆ ಜಮೆ ಮಾಡಿದ್ದರು.

    ಅಮ್ಮ-ಮಕ್ಕಳ ನಡುವಿನ ವ್ಯವಹಾರ: ಮೊಮ್ಮಗಳಿಗೆ ಭೂಮಿ ಹಾಗೂ ಹಣವನ್ನು ನೀಡಿದ್ದ ಗೌರಮ್ಮ ಅವರು ಪುತ್ರ ಡಿಕೆ ಶಿವಕುಮಾರ್ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ರೂ. ಹಾಗೂ 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಮತ್ತೆ ಡಿಕೆಶಿ ಅವರಿಗೆ 35 ಲಕ್ಷ ರೂ. ಗಳನ್ನು ಗೌರಮ್ಮ ಸಾಲ ನೀಡಿದ್ದಾರೆ. ಅಲ್ಲದೇ ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ರಿಂದ ಗೌರಮ್ಮ ಅವರಿಗೆ 4.89 ಕೋಟಿ ರೂ. ಸಾಲ ನೀಡಲಾಗಿದೆ.

    ಬೇನಾಮಿ ಆಸ್ತಿ ತನಿಖೆ: ಕುಟುಂಬದ ಸದಸ್ಯರ ನಡುವೆಯೇ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿದೆ. ಅಲ್ಲದೇ ಇಡಿ ಅಧಿಕಾರಿಗಳಿಗೆ ಗೌರಮ್ಮರ ಹೆಸರಲ್ಲಿ 273 ಕೋಟಿ ರೂ. ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ, ಡಿಕೆ ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋ. ರೂ. ಸಾಲ ವ್ಯವಹಾರ ನಡೆದಿದೆ. 2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ ರೂ. ಗಳಿಗೆ 4.9 ಗುಂಟೆ ಜಮೀನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಆದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿಗೆ.

    ಡಿಕೆಶಿ ಪತ್ನಿಗೆ ಸಮನ್ಸ್ ಯಾಕೆ?
    ಮೊಮ್ಮಗಳು ಹಾಗೂ ಇಬ್ಬರ ಪುತ್ರರ ನಡುವೆ ತಾಯಿ ಗೌರಮ್ಮ ಅವರು ನಡೆಸಿರುವ ವ್ಯವಹಾರದಂತೆಯೇ ಡಿಕೆಶಿ ಪತ್ನಿ ಉಷಾ ಅವರ ಹೆಸರಿನಲ್ಲೂ ಹಣದ ವ್ಯವಹಾರ ನಡೆದಿದೆ. ಪತಿ ಡಿಕೆ ಶಿವಕುಮಾರ್ ಅವರಿಗೆ ಪತ್ನಿ ಉಷಾ ಅವರು 2.60 ಕೋಟಿ ರೂ. ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ ರೂ. ಹಾಗೂ ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ.

    ಉಳಿದಂತೆ ಪುತ್ರಿ ಐಶ್ವರ್ಯಾ ಅವರಿಗೆ 2.70 ಕೋಟಿ ರೂ. ಹಾಗೂ ಪತಿಯ ಸಹೋದರ ಡಿಕೆ ಸುರೇಶ್‍ಗೆ 11 ಕೋಟಿ ಸಾಲ ನೀಡಿದ್ದಾರೆ. ಅಲ್ಲದೇ 13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಯನ್ನು ಉಷಾ ಅವರು ಮಾಡಿದ್ದು, ಶ್ರೀರಾಮ್ ಪ್ರಾಪರ್ಟೀಸ್‍ನಿಂದ ದಾಖಲೆ ಇಲ್ಲದ 5 ಕೋಟಿ ರೂ. ಹಣವನ್ನು ಸ್ವೀಕಾರ ಮಾಡಿದ್ದಾರೆ. ಶೋಭಾ ಡೆವಲಪರ್ಸ್, ಇಂದ್ರಪ್ರಸ್ತ ಡೆವಲಪರ್ಸ್ ನಲ್ಲಿ ಶೇ.40ರಷ್ಟು ಷೇರು ಖರೀದಿ ಸೇರಿದಂತೆ ಸಲಾರ್ಪುರಿಯಾ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಉಳಿದಂತೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮನೆ ನಿರ್ಮಾಣಕ್ಕೆ ಫೆಡರಲ್ ಬ್ಯಾಂಕ್‍ನಿಂದ 7.61 ಕೋಟಿ ರೂ. ಹಾಗೂ ಆರ್.ಟಿ.ನಗರ ಫೆಡರಲ್ ಬ್ಯಾಂಕ್‍ನಲ್ಲಿ 4 ಕೋಟಿ 25 ಲಕ್ಷ ಮನೆ ಸಾಲ. ಶೋಭಾ ಡೆವಲಪರ್ಸ್‍ನಿಂದ 8.48 ಕೋಟಿ ರೂ.ಗಳನ್ನು ಉಷಾ ಅವರು ಸಾಲ ಪಡೆದಿದ್ದಾರೆ. ಈ ಹಣಕಾಸಿನ ವ್ಯವಹಾರ ಬಗ್ಗೆಯೂ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.

  • ಡಿಕೆಶಿ ಕುಟುಂಬಕ್ಕೆ ಬಲೆ ಬೀಸಿದ ಇಡಿ- ಡಿಕೆಶಿ ಫ್ಯಾಮಿಲಿಯ ಹಣಕಾಸು ವ್ಯವಹಾರವೇ ಸೋಜಿಗ!

    ಡಿಕೆಶಿ ಕುಟುಂಬಕ್ಕೆ ಬಲೆ ಬೀಸಿದ ಇಡಿ- ಡಿಕೆಶಿ ಫ್ಯಾಮಿಲಿಯ ಹಣಕಾಸು ವ್ಯವಹಾರವೇ ಸೋಜಿಗ!

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರರಕಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತಷ್ಟು ವಿಚಾರಣೆಗೆ ನಡೆಸಿರುವ ಇಡಿ ಸದ್ಯ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೂ ನೋಟಿಸ್ ಜಾರಿ ಮಾಡಿದೆ.

    ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಇಡಿ ಅಧಿಕಾರಿಗಳು ನಾಳೆಯೇ ವಿಚಾರಣೆ ಹಾಜರಾಗುವಂತೆ ತಾಯಿ ಗೌರಮ್ಮ ಅವರಿಗೆ ಸೂಚಿಸಿದ್ದಾರೆ. ಉಷಾ ಅವರಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಕುಟುಂಬ ಸದಸ್ಯರ ನಡುವೆ ನಡೆದಿರುವ ಹಣದ ವ್ಯವಹಾರವೇ ಕಾರಣ ಎನ್ನಲಾಗಿದ್ದು, ತಾಯಿ-ಮಗನಿಗೆ, ಮಗ-ತಾಯಿಗೆ, ಪತಿ-ಪತ್ನಿಗೆ, ಮಾವನಿಂದ ಸೊಸೆಗೆ ಸಾಲದ ವ್ಯವಹಾರ ನಡೆದಿರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಜ್ಜಿ-ಮೊಮ್ಮಗಳ ವ್ಯವಹಾರ: ಡಿಕೆಶಿ ಕುಟುಂಬದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ ಬಗ್ಗೆ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಡಿಕೆಶಿ ತಾಯಿ ಗೌರಮ್ಮ ಅವರು ಮೊಮ್ಮಗಳ ನಡುವೆ ಕೋಟಿ ರೂ. ವ್ಯವಹಾರ ನಡೆದಿದೆ. ಮೊದಲಿಗೆ ಮೊಮ್ಮಗಳು ಐಶ್ವರ್ಯ ಅವರ ಖಾತೆಗೆ 2018 ಜೂನ್ ತಿಂಗಳಿನಲ್ಲಿ ಅಜ್ಜಿ ಗೌರಮ್ಮ ಅವರು 3 ಕೋಟಿ ರೂ.ಗಳನ್ನು ಜಮೆ ಮಾಡಿದ್ದಾರೆ. ಅಲ್ಲದೇ ಐಶ್ವರ್ಯಾ ಹೆಸರಿಗೆ 2001 ರಲ್ಲಿ ಉತ್ತರಹಳ್ಳಿಯಲ್ಲಿದ್ದ 3 ಎಕ್ರೆ ಭೂಮಿಯನ್ನು ಗಿಫ್ಟ್ ನೀಡಿ ಬರೆದುಕೊಟ್ಟಿದ್ದರು. ಆ ಬಳಿಕ 2002ರಲ್ಲಿ ಹೊಸಕೆರೆಹಳ್ಳಿಯ 3 ಎಕರೆ ಭೂಮಿಯನ್ನು ಗಿಫ್ಟ್ ನೀಡಿದ್ದರು. ಇದರ ನಡುವೆಯೇ ಐಶ್ವರ್ಯಾಗೆ ಮೂರು ನಿವೇಶನಗಳನ್ನ ಗೌರಮ್ಮ ನೀಡಿದ್ದರು. ಒಟ್ಟು 193 ಕೋಟಿ ರೂ.ಗಳನ್ನು ಐಶ್ವರ್ಯಾ ಅವರ ಖಾತೆಗೆ ಜಮೆ ಮಾಡಿದ್ದರು.

    ಅಮ್ಮ-ಮಕ್ಕಳ ನಡುವಿನ ವ್ಯವಹಾರ: ಮೊಮ್ಮಗಳಿಗೆ ಭೂಮಿ ಹಾಗೂ ಹಣವನ್ನು ನೀಡಿದ್ದ ಗೌರಮ್ಮ ಅವರು ಪುತ್ರ ಡಿಕೆ ಶಿವಕುಮಾರ್ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ರೂ. ಹಾಗೂ 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಮತ್ತೆ ಡಿಕೆಶಿ ಅವರಿಗೆ 35 ಲಕ್ಷ ರೂ. ಗಳನ್ನು ಗೌರಮ್ಮ ಸಾಲ ನೀಡಿದ್ದಾರೆ. ಅಲ್ಲದೇ ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ರಿಂದ ಗೌರಮ್ಮ ಅವರಿಗೆ 4.89 ಕೋಟಿ ರೂ. ಸಾಲ ನೀಡಲಾಗಿದೆ.

    ಬೇನಾಮಿ ಆಸ್ತಿ ತನಿಖೆ: ಕುಟುಂಬದ ಸದಸ್ಯರ ನಡುವೆಯೇ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿದಿದೆ. ಅಲ್ಲದೇ ಇಡಿ ಅಧಿಕಾರಿಗಳಿಗೆ ಗೌರಮ್ಮರ ಹೆಸರಲ್ಲಿ 273 ಕೋಟಿ ರೂ. ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ, ಡಿಕೆ ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋ. ರೂ. ಸಾಲ ವ್ಯವಹಾರ ನಡೆದಿದೆ. 2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ ರೂ. ಗಳಿಗೆ 4.9 ಗುಂಟೆ ಜಮೀನುನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಆದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿಗೆ.

    ಡಿಕೆಶಿ ಪತ್ನಿ ಉಷಾಗೆ ಸಮನ್ಸ್ ಯಾಕೆ?
    ಮೊಮ್ಮಗಳು ಹಾಗೂ ಇಬ್ಬರ ಪುತ್ರರ ನಡುವೆ ತಾಯಿ ಗೌರಮ್ಮ ಅವರು ನಡೆಸಿರುವ ವ್ಯವಹಾರದಂತೆಯೇ ಡಿಕೆಶಿ ಪತ್ನಿ ಉಷಾ ಅವರ ಹೆಸರಿನಲ್ಲೂ ಹಣದ ವ್ಯವಹಾರ ನಡೆದಿದೆ. ಪತಿ ಡಿಕೆ ಶಿವಕುಮಾರ್ ಅವರಿಗೆ ಪತ್ನಿ ಉಷಾ ಅವರು 2.60 ಕೋಟಿ ರೂ. ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ ರೂ. ಹಾಗೂ ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ.

    ಉಳಿದಂತೆ ಪುತ್ರಿ ಐಶ್ವರ್ಯಾ ಅವರಿಗೆ 2.70 ಕೋಟಿ ರೂ. ಹಾಗೂ ಪತಿಯ ಸಹೋದರ ಡಿಕೆ ಸುರೇಶ್‍ಗೆ 11 ಕೋಟಿ ಸಾಲ ನೀಡಿದ್ದಾರೆ. ಅಲ್ಲದೇ 13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಯನ್ನು ಉಷಾ ಅವರು ಮಾಡಿದ್ದು, ಶ್ರೀರಾಮ್ ಪ್ರಾಪರ್ಟೀಸ್‍ನಿಂದ ದಾಖಲೆ ಇಲ್ಲದ 5 ಕೋಟಿ ರೂ, ಹಣವನ್ನು ಸ್ವೀಕಾರ ಮಾಡಿದ್ದಾರೆ. ಶೋಭಾ ಡೆವಲಪರ್ಸ್, ಇಂದ್ರಪ್ರಸ್ತ ಡೆವಲಪರ್ಸ್ ನಲ್ಲಿ ಶೇ.40ರಷ್ಟು ಷೇರು ಖರೀದಿ ಸೇರಿದಂತೆ ಸಲಾರ್‍ಪುರಿಯಾ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಉಳಿದಂತೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮನೆ ನಿರ್ಮಾಣಕ್ಕೆ ಫೆಡರಲ್ ಬ್ಯಾಂಕ್‍ನಲ್ಲಿ 7.61 ಕೋಟಿ ರೂ. ಹಾಗೂ ಆರ್.ಟಿ.ನಗರ ಫೆಡರಲ್ ಬ್ಯಾಂಕ್‍ನಲ್ಲಿ 4 ಕೋಟಿ 25 ಲಕ್ಷ ಮನೆ ಸಾಲ. ಶೋಭಾ ಡೆವಲಪರ್ಸ್‍ನಿಂದ 8.48 ಕೋಟಿ ರೂ.ಗಳನ್ನು ಉಷಾ ಅವರು ಸಾಲ ಪಡೆದಿದ್ದಾರೆ. ಈ ಹಣಕಾಸಿನ ವ್ಯವಹಾರ ಬಗ್ಗೆಯೂ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.