ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಉಳ್ಳಾಲ, ಬಂಟ್ವಾಳ, ಕಡಬ (Ullala, Bantwala, Kadaba) ತಾಲೂಕಿನ ಶಾಲೆಗಳಿಗೆ ರಜೆ (Holiday) ಘೋಷಣೆ ಮಾಡಲಾಗಿದೆ.
ಮಂಗಳೂರು: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಿರುದ್ಧ ಉಳ್ಳಾಲ (Ullala) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 9ರಂದು ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಸೂಲಿಬೆಲೆ ಅವರು ಅನ್ಯ ಸಮಾಜದವರನ್ನು ಪ್ರೀತಿಸಿ ಮದುವೆಯಾಗಿ ಎಂದು ಭಾಷಣ ಮಾಡಿದ್ದರು.
ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೂಲಿಬೆಲೆ ಹೇಳಿದ್ದು ಏನು?
ಮತಾಂತರ ಎಂದು ಬಡಿದಾಡಿದ್ದು ಸಾಕು. ಈಗ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡೋ ಬಗ್ಗೆ ಮಾತಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು? ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ ಅಂತ ನಮ್ಮ ಗಂಡು ಮಕ್ಕಳಿಗೆ ಕೇಳೋಣ. ಬೇರೆ ಧರ್ಮದ ಹುಡುಗಿಯರನ್ನೂ ನೋಡು ಅಂತ ಹೇಳಬೇಕು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹಿಂದೂ ಯುವಕರಿಗೆ ಕರೆ ನೀಡಿದ್ದರು.
ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಲ್ಲ ಅನ್ನೋವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಯಿದೆ ಎಂದು ಧೈರ್ಯ ತುಂಬಿ. ನಾವು ಆಕ್ರಮಣಕಾರಿಯಾಗಿ ಆಡಬೇಕು, ರಕ್ಷಣಾತ್ಮಕವಾಗಿ ಆಡಿದ್ದು ಸಾಕು. ಟೆಸ್ಟ್ ಮ್ಯಾಚ್‌ಗಳು ನಿಂತು ಹೋಯ್ತು. ಈಗ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡೋ ಸಮಯ ಬಂದಾಗಿದೆ. ಇರುವ ಇಪ್ಪತ್ತು ಓವರ್‌ನಲ್ಲಿ ಬಡಿಬೇಕು ಅಷ್ಟೇ. ಘರ್ ವಾಪ್ಸಿ ಹೇಗೆ ಮಾಡೋದು ಅನ್ನೋದರ ಬಗ್ಗೆ ರೀಲ್ಸ್ ಮಾಡಿ. ಹಿಂದೂ ಧರ್ಮದಿಂದ ಹೋಗಿರುವವರನ್ನ ಮೊದಲು ವಾಪಸ್ ತರೋಣ ಎಂದು ಕರೆ ನೀಡಿದ್ದರು.
ಬೆಂಗಳೂರು: ಸೆಂಟ್ರಿಂಗ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನ ಉಳ್ಳಾಲ (Ullal) ಮುಖ್ಯ ರಸ್ತೆಯಲ್ಲಿ ನಡೆದಿದೆ.
ರಾತ್ರಿ 7:30ಕ್ಕೆ ಮಾಲೀಕ ಗೋಡೌನ್ ಬಂದ್ ಮಾಡಿ, ತೆರಳಿದ್ದರು. ಬಳಿಕ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಮರದ ಸೆಂಟ್ರಿಂಗ್ ವಸ್ತುಗಳು, ಒಂದು ಟಾಟಾ ಏಸ್ ವಾಹನ ಬೆಂಕಿಗಾಹುತಿಯಾಗಿದೆ.
ಮಂಗಳೂರು: ಎದುರಾಳಿ ತಂಡದ ವಿರುದ್ಧ ಸಂಚು ರೂಪಿಸುತ್ತಿದ್ದಾಗಲೇ ನಟೋರಿಯಸ್ ರೌಡಿಶೀಟರ್ ಒಬ್ಬನನ್ನು ಸಿಸಿಬಿ ಪೊಲೀಸರು (Police) ಬಂಧಿಸಿದ ಘಟನೆ ಉಳ್ಳಾಲದಲ್ಲಿ (Ullal) ನಡೆದಿದೆ.
ಬಂಧಿತ ಆರೊಪಿಯನ್ನು, ದಾವುದ್ (43) ಎಂದು ಗುರುತಿಸಲಾಗಿದೆ. ಆರೋಪಿ ಉಳ್ಳಾಲದ ಧರ್ಮನಗರದ ಆತನ ಮನೆಯಲ್ಲಿ ಎದುರಾಳಿ ತಂಡದ ವಿರುದ್ಧ ಸಂಚು ಮಾಡುತ್ತಿದ್ದ. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಸಿಸಿಬಿ ಪೊಲೀಸರ ಮೇಲೆ ಆರೋಪಿ ಮಚ್ಚಿನಿಂದ ದಾಳಿ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವುದ್ ವಿರುದ್ಧ ಟಾರ್ಗೆಟ್ ಇಲ್ಯಾಸ್ ಕೊಲೆ ಸೇರಿದಂತೆ 10 ಪ್ರಕರಣಗಳಿವೆ.
ಮಂಗಳೂರು: ಬಣ ಸಂಘರ್ಷದಿಂದ ತುಳುನಾಡಿನ ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನದ (Pilichamundi Daivasthana) ನಿರ್ಮಾಣ ಹಂತದ ಕಟ್ಟಡವನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ (Muzrai Department) ಸೇರುವ ಕೊಂಡಾಣ ದೈವಸ್ಥಾನ, ಸದ್ಯ ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಭಂಡಾರ ಮನೆಯಲ್ಲಿ ಕ್ಷೇತ್ರದ ದೈವಗಳ 15 ಕೋಟಿ ರೂ. ಮೌಲ್ಯಕ್ಕೂ ಮೀರಿದ ಬೆಲೆಬಾಳುವ ಒಡವೆಗಳಿವೆ. ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಯತ್ನಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಖಾಸಗಿ ಭಂಡಾರಮನೆಯವರು ಸಮ್ಮತಿ ನೀಡಿರಲಿಲ್ಲ.
ಈ ಹಿನ್ನಲೆ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣಕ್ಕೆ ವ್ಯವಸ್ಥಾಪನಾ ಸಮಿತಿ ಮುಂದಾಗಿತ್ತು. ದೈವಸ್ಥಾನದ ಪಕ್ಕದ ಜಾಗದಲ್ಲಿ ಕಳೆದ ಜ.8 ರಂದು ಆಗಿನ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ನೇತೃತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ 80% ಕಾಮಗಾರಿ ಪೂರ್ಣಗೊಂಡಿತ್ತು. ಇದರ ನಡುವೆ ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದ ಹಿನ್ನೆಲೆ, ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಎರಡು ದಿನಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು.
ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆ ನೆಲಸಮ ಮಾಡಿದ್ದಾರೆ. ಘಟನೆ ಬೆನ್ನಲ್ಲೇ ಎರಡು ಬಣಗಳ ನಡುವೆ ಸಂಘರ್ಷ ತಾರಕಕ್ಕೆ ಏರಿದೆ. ನೂರಾರು ವರ್ಷಗಳಿಂದ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಇರುವ ಒಡವೆಗಳು, ಕಾರ್ಣಿಕ ದೈವದ ಕೋಟ್ಯಂತರ ರೂ. ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ಶುರುವಾಗಿದೆ. ದೈವಗಳ ಸಮ್ಮುಖದಲ್ಲಿ ಬಗೆಹರಿಯಬೇಕಾದ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೈವಸ್ಥಾನದ ಭಕ್ತರ ಜಮಾವಣೆ ಹಿನ್ನೆಲೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಉಳ್ಳಾಲ ಪೊಲೀಸರು ಸೇರಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.
ಮಂಗಳೂರು: ಶಾಲೆಯ (School) ಮುಂದೆ ಬಿಯರ್ ಬಾಟಲಿಯನ್ನು (Beer Bottle) ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಉಳ್ಳಾಲದ (Ullala) ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ನಡೆದಿದೆ.
ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿಯ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕ. ಬುಧವಾರ ತಡರಾತ್ರಿ ದುಷ್ಕರ್ಮಿಗಳಾದ ಸೂರಜ್ ಮತ್ತು ರವಿರಾಜ್ ಶಾಲೆ ಎದುರು ಇದ್ದ ಕಟ್ಟೆಯೊಂದರಲ್ಲಿ ಕುಳಿತು ಬಿಯರ್ ಕುಡಿದಿದ್ದಾರೆ. ನಂತರ ಬಾಟಲಿಯನ್ನು ರಸ್ತೆಗೆ ಎಸೆದಿದ್ದಾರೆ. ಇದನ್ನು ಕಂಡ ವರುಣ್ ಹಾಗೂ ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದರಿಂದ ರೊಚ್ಚಿಗೆದ್ದ ಸೂರಜ್ ಹಾಗೂ ರವಿರಾಜ್ ವರುಣ್ ಹಾಗೂ ಅಕ್ಷಯ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ ಆರೋಪಿಗಳು ಹರಿತವಾದ ಆಯುಧದಿಂದ ವರುಣ್ ಬೆನ್ನಿಗೆ ಇರಿದಿದ್ದಾರೆ. ಇದನ್ನೂ ಓದಿ: ಬಿಎಂಟಿಸಿಗೆ ಗೃಹಿಣಿ ಬಲಿ – ಬಸ್ ಚಾಲಕ, ನಿರ್ವಾಹಕ ಎಸ್ಕೇಪ್
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಅದೇ ಸ್ಥಿತಿಯಲ್ಲಿ ತನ್ನ ಮನೆ ಕಡೆ ನಡೆದುಕೊಂಡೇ ಹೋಗಿದ್ದಾನೆ. ಆತ ನಡೆದ ದಾರಿಯುದ್ದಕ್ಕೂ ರಕ್ತ ಹರಿದಿದೆ. ತಕ್ಷಣ ವರುಣ್ ಕುಟುಂಬಸ್ಥರು ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅದೇ ಸಾರಸ್ವತ ಕಾಲೋನಿ ನಿವಾಸಿಗಳಾಗಿರುವ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ಮಂಗಳೂರು ಮೂಡಾದ ಕಮಿಷನರ್ ವಾಹನ ಚಾಲಕನಾಗಿದ್ದ. ಇದೀಗ ವರುಣ್ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ
ಮಂಗಳೂರು: ಶಿವಮೊಗ್ಗ ರಾಗಿಗುಡ್ಡದಂತೆಯೇ ಮಂಗಳೂರಿನ ಉಳ್ಳಾಲದಲ್ಲಿಯೂ ಈದ್ ಮಿಲಾದ್ ಮೆರವಣಿಗೆಯ (Eid Milad Procession) ನೆಪದಲ್ಲಿ ಯುವಕರು ಪುಂಡಾಟ ಮೆರೆದಿದ್ದು, ಇದೀಗ ಯುವಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ನಡೆಸಿದ ನೂರಾರು ಯುವಕರ ತಂಡ ಉಳ್ಳಾಲದ ಅಬ್ಬಕ್ಕ ಸರ್ಕಲ್ ಬಳಿ ರಸ್ತೆ ಬಂದ್ ಮಾಡಿ ಅಬ್ಬಕ್ಕ ವೃತ್ತವನ್ನೇರಿ ಹಸಿರು ಬಾವುಟ ಪ್ರದರ್ಶಿಸಿ ಚೀರಾಡುತ್ತಾ, ಸೈಲೆನ್ಸರ್ ಶಬ್ಧ ಮಾಡಿ, ಬೈಕ್ ಹಾರ್ನ್ ಹಾಕಿಕೊಂಡು ಪುಂಡಾಟ ಮೆರೆದಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವಮೊಗ್ಗ (Shivamogga) ಘಟನೆಯ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಪುಂಡಾಟ ಮೆರೆದ ಯುವಕರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ
ಉಳ್ಳಾಲ ಪೊಲೀಸರು (Ullala Police Staion) ವೀಡಿಯೋ ಆಧರಿಸಿ ಯುವಕರ ಪತ್ತೆ ಮಾಡಿದ್ದಾರೆ. ಉಳ್ಳಾಲ, ಮಂಜನಾಡಿ, ಮದಕ, ಕೋಣಾಜೆ, ದೇರಳಕಟ್ಟೆ, ಬಂಟ್ವಾಳ ಹಾಗೂ ಬೆಳ್ತಂಗಡಿ ಭಾಗದ ಯುವಕರು ಎಂದು ತಿಳಿದು ಬಂದಿದೆ. ಈ ಎಲ್ಲಾ ಯುವಕರಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಮಂಗಳೂರು: ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟ ಬೆನ್ನಲ್ಲೇ ಮಂಗಳೂರಿನ (Mangaluru) ಉಳ್ಳಾಲ (Ullala) ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿದ್ದು, ಮಾಲೀಕ ಬಿಲ್ ನೋಡಿ ಶಾಕ್ ಆಗಿದ್ದಾರೆ.
ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು 3,000 ವಿದ್ಯುತ್ ಬಿಲ್ ಬರುತ್ತಿತ್ತು. ಇದೀಗ ಮೇ ತಿಂಗಳ ಹೊಸ ಬಿಲ್ ಬಂದಿದ್ದು, ಅದರಲ್ಲಿ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7,71,072 ರೂ. ಕಟ್ಟಬೇಕು ಎಂದು ಬಿಲ್ ನೀಡಲಾಗಿದೆ. ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಈ ಬಗ್ಗೆ ಕೇಳಿದ್ದಾರೆ. ಆಗ ಬಿಲ್ ರೀಡರ್ ಅದನ್ನೆಲ್ಲಾ ಮೆಸ್ಕಾಂ (MESCOM) ಕಚೇರಿಯಲ್ಲಿ ಕೇಳಿ ಎಂದಿದ್ದಾರೆ. ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ; ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ – ಸಿ.ಟಿ ರವಿಗೆ ಗುಂಡೂರಾವ್ ತಿರುಗೇಟು
ಈ ಕುರಿತು ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ್ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್ ಮಾಡಿಸಿ ಬಿಲ್ ನೀಡಲಾಗುತ್ತದೆ. ಬಿಲ್‌ಗಳಲ್ಲಿ ಲೋಪ ಕಂಡುಬಂದರೆ ಅಂತಹದ್ದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಸಿಬ್ಬಂದಿ ತಿಳಿಯದೇ ಬಿಲ್ ಅನ್ನು ಕೊಟ್ಟಿದ್ದಾರೆ. ವಿಚಾರ ತಿಳಿದ ತಕ್ಷಣ ತಪ್ಪನ್ನು ಸರಿಪಡಿಸಿ ಪರಿಷ್ಕೃತ ಬಿಲ್ ಅನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್ ತೀರದಲ್ಲಿಅಲ್ಲೋಲ ಕಲ್ಲೋಲ
ಮಂಗಳೂರು: ಪತ್ನಿಗೆ (Wife) ಅನೈತಿಕ ಸಂಬಂಧ ಇದೆ ಎಂದು ಅನುಮಾನ ಹೊಂದಿದ್ದ ಪತಿ (Husband) ಆಕೆಯನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಉಳ್ಳಾಲ (Ullal) ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಪಿಲಾರ್‌ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಶೋಭಾ (46) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ಪೋಷಕರಾದ ಶೋಭಾ ಹಾಗೂ ಶಿವಾನಂದ (55) ದಂಪತಿಯ ನಡುವೆ ಮದುವೆಯಾದಾಗಿನಿಂದಲೂ ವಿರಸವಿತ್ತು. ಪತ್ನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ಶಿವಾನಂದನನ್ನು ಎಂದಿಗೂ ಕಾಡುತ್ತಿತ್ತು.
ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದ ಶೋಭಾ ಹಾಗೂ ಶಿವಾನಂದ ದಂಪತಿ ತಮ್ಮ ಪುತ್ರನ ಜೊತೆಯಲ್ಲಿ ಮನೆಯಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಪುತ್ರ ಕಾರ್ತಿಕ್ ಕೆಲಸಕ್ಕೆ ತೆರಳಿದ ಬಳಿಕ ಘನಘೋರ ದುರಂತವೊಂದು ಸಂಭವಿಸಿದೆ. ಪತ್ನಿಯ ಜೊತೆ ಬೆಳ್ಳಂಬೆಳಗ್ಗೆ ಜಗಳ ಶುರುವಿಟ್ಟುಕೊಂಡಿದ್ದ ಶಿವಾನಂದ, ಈ ಜಗಳ ವಿಕೋಪಕ್ಕೆ ತಿರುಗಿದ್ದೇ ತಡ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಸಂಬಂಧಿಕರಿಗೆ ಕರೆ ಮಾಡಿ, ನಾನು ಸಾಯುತ್ತೇನೆ. ನನ್ನ ಶವಕ್ಕೆ ಮುಡಿಸಲು ಹೂವು ತನ್ನಿ ಎಂದು ಹೇಳಿ ಕಾಲ್ ಇಟ್ಟವನೇ ಅಲ್ಲೇ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ರಸಗುಲ್ಲ ಖಾಲಿಯಾಗಿದ್ದಕ್ಕೆ ವಧು-ವರನ ಕುಟುಂಬದ ಮಧ್ಯೆ ಡಿಶುಂ ಡಿಶುಂ – ಯುವಕ ಸಾವು
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತ ದಂಪತಿಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಮಕ್ಕಳ ಪ್ರಗತಿಯನ್ನು ನೋಡುತ್ತಾ ಜೊತೆಯಾಗಿ ಬಾಳಬೇಕಿದ್ದ ದಂಪತಿ ಈ ರೀತಿ ದಾರುಣ ಅಂತ್ಯ ಕಂಡಿದ್ದು ದುರಂತವೇ ಸರಿ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ
Live Tv
[brid partner=56869869 player=32851 video=960834 autoplay=true]
ಮಂಗಳೂರು: ಕುಡಿತದ ಅಮಲಿನಲ್ಲಿ ಬೋಟ್ ಚಲಾಯಿಸಿದ ಪರಿಣಾಮ ಸಮುದ್ರ ಮಧ್ಯೆ ಮೀನುಗಾರಿಕಾ ಬೋಟ್ ಅವಘಡಕ್ಕೀಡಾದ ಘಟನೆ ಮಂಗಳೂರು ಉಳ್ಳಾಲ ಕೋಡಿ ಕಡಲ ತೀರದಲ್ಲಿ ನಡೆದಿದೆ.
ಮಂಗಳೂರಿನ ಉಳ್ಳಾಲದ ಅಶ್ರಫ್ ಎಂಬವರ ‘ಅಝಾನ್’ ಹೆಸರಿನ ಬೋಟ್ ನಸುಕಿನ ಜಾವ ರಾತ್ರಿ 1:30 ಸುಮಾರಿಗೆ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆಂದು ತೆರಳಿತ್ತು.
ಈ ಬೋಟ್ ನಲ್ಲಿ 10 ಮಂದಿ ತಮಿಳುನಾಡು ಮೂಲದ ಮೀನುಗಾರರಿದ್ದು ಅದರಲ್ಲಿ ಚಾಲಕ ಸೇರಿ ಐವರು ಕುಡಿತದ ಮತ್ತಿನಲ್ಲಿದ್ದರು. ಸಮುದ್ರ ಮಧ್ಯೆ ಕುಡಿತದ ಅಮಲಿನಲ್ಲಿ ಚಾಲಕ ಬೋಟನ್ನು ಇನ್ನೋರ್ವ ಮೀನುಗಾರನಿಗೆ ಚಲಾಯಿಸಲು ಕೊಟ್ಟಿದ್ದು ಅವಘಡಕ್ಕೆ ಕಾರಣವಾಗಿದೆ.
ಬೋಟ್ ದಡಕ್ಕೆ ಬಂದು ಅಪ್ಪಳಿಸಿದ್ದು ಸ್ಥಳೀಯರು ಇಂದು ಬೆಳಗ್ಗಿನ ಜಾವ ಎಲ್ಲಾ 10 ಮಂದಿ ಮೀನುಗಾರರನ್ನೂ ರಕ್ಷಣೆ ಮಾಡಿದ್ದಾರೆ. ಈ ವೇಳೆ ಮೀನುಗಾರರು ವಾಂತಿ ಮಾಡುತ್ತಿದ್ದ ಕಾರಣ ಕುಡಿದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.