Tag: ಉಲ್ಲಾಸ ಉತ್ಸಾಹ

  • ಗುಡ್ ನ್ಯೂಸ್ ಕೊಟ್ಟ ‘ಉಲ್ಲಾಸ ಉತ್ಸಾಹ’ ನಟಿ ಯಾಮಿ ಗೌತಮ್

    ಗುಡ್ ನ್ಯೂಸ್ ಕೊಟ್ಟ ‘ಉಲ್ಲಾಸ ಉತ್ಸಾಹ’ ನಟಿ ಯಾಮಿ ಗೌತಮ್

    ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಉಲ್ಲಾಸ ಉತ್ಸಾಹ’ (Ullasa Utsaha)‌ ಚಿತ್ರದಲ್ಲಿ ನಟಿಸಿದ್ದ ಯಾಮಿ ಗೌತಮ್ (Yami Goutham) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನಟಿ ಯಾಮಿ ಅವರು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    ಫೆ.23ರಂದು ರಿಲೀಸ್‌ಗೆ ರೆಡಿಯಾಗಿರುವ ‘ಆರ್ಟಿಕಲ್ 370’ (Article 370) ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಆದಿತ್ಯ ಧಾರ್- ಯಾಮಿ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ತಿಳಿಸಿದ್ದಾರೆ. ಯಾಮಿ ಐದೂವರೆ ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ.

    ಮದುವೆಯಾಗಿ 3 ವರ್ಷಗಳ ನಂತರ ಯಾಮಿ-ಆದಿತ್ಯ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದು, ಇದೀಗ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.‌ ಇದನ್ನೂ ಓದಿ:ಈ ಸಿನಿಮಾದ ಕಥಾನಾಯಕ ಬದುಕಿದ್ದಾರೆ, ಸಿನಿಮಾ ನೋಡೋಕೆ ಬರ್ತಾರೆ

    2019ರಲ್ಲಿ ‘ಉರಿ’ ಸಿನಿಮಾ ವೇಳೆ, ನಿರ್ದೇಶಕ ಆದಿತ್ಯಾ ಧಾರ್ ಮತ್ತು ಯಾಮಿ ಪರಿಚಯವಾಯ್ತು.  2 ವರ್ಷಗಳ ಡೇಟಿಂಗ್ ನಂತರ 2021ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಯಾಮಿ-ಆದಿತ್ಯ ಧಾರ್ ಮದುವೆಯಾದರು. ಈಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ ಯಾಮಿ ದಂಪತಿ.‌

  • ಉಲ್ಲಾಸ ಉತ್ಸಾಹ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕಿಯಾಗಲು ಸಾಧ್ಯವಾಗಿದೆ: ಯಾಮಿ ಗೌತಮ್

    ಉಲ್ಲಾಸ ಉತ್ಸಾಹ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕಿಯಾಗಲು ಸಾಧ್ಯವಾಗಿದೆ: ಯಾಮಿ ಗೌತಮ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ ‘ಉಲ್ಲಾಸ ಉತ್ಸಾಹ’ ಚಿತ್ರದಿಂದ ನಾನು ಪೂರ್ಣ ಪ್ರಮಾಣದ ನಾಯಕಿಯಾಗಲು ಸಾಧ್ಯವಾಗಿದೆ ಎಂದು ಬಾಲಿವುಡ್ ನಟಿ ಯಾಮಿ ಗೌತಮ್ ಹೇಳಿದ್ದಾರೆ.

    ಇತ್ತೀಚೆಗೆ ಯಾಮಿ ಗೌತಮ್ ಬೆಂಗಳೂರಿನಲ್ಲಿ ನಡೆದ ಬ್ಲೆಂಡರ್ಸ್ ಪ್ರೈಡ್ ಮ್ಯಾಜಿಕಲ್ ನೈಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಅವರು, “ಉಲ್ಲಾಸ ಉತ್ಸಾಹ ಚಿತ್ರ ಇದು ನನಗೆ ಒಳ್ಳೆಯ ಅನುಭವ. ಈ ಚಿತ್ರದಲ್ಲಿ ಗಣೇಶ್ ನಾಯಕರಾಗಿದ್ದರು. ಅವರು ಎಷ್ಟು ದೊಡ್ಡ ಸ್ಟಾರ್ ಎಂಬುದು ನನಗೆ ಆಗ ಗೊತ್ತಿರಲಿಲ್ಲ. ಅವರು ನನಗೆ ಯಾವಾಗಲೂ ಬೆಂಬಲಿಸುತ್ತಿದ್ದರು. ಅವರು ಸ್ವಲ್ಪವೂ ಬದಲಾಗಿಲ್ಲ. ಈಗಲೂ ಹಾಗೆಯೇ ಇದ್ದಾರೆ” ಎಂದು ಹೇಳಿದ್ದಾರೆ.

    ಅಲ್ಲದೇ ಒಳ್ಳೆಯ ಕಥೆ ಸಿಕ್ಕರೆ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತೇನೆ. ಬಾಲಿವುಡ್‍ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಕನ್ನಡ ಚಿತ್ರ ನನ್ನ ವೃತ್ತಿಯ ಮೊದಲ ಮೆಟ್ಟಿಲು. ನನಗೆ ಈಗಲೂ ನೆನಪಿದೆ ನನ್ನ ಉಲ್ಲಾಸ ಉತ್ಸಾಹ ಚಿತ್ರ ಬಿಡುಗಡೆ ಆಗಿದ್ದಾಗ ನನ್ನ ತಾಯಿಯ ಜೊತೆ ಬೆಂಗಳೂರಿನಲ್ಲಿ ಸಿನಿಮಾ ನೋಡಿದೆ. ಮೊದಲ ಬಾರಿಗೆ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ನಾನು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡೆ. ಈ ಚಿತ್ರದಿಂದ ನಾನು ಪೂರ್ಣ ಪ್ರಮಾಣದ ನಾಯಕಿಯಾಗಲು ಸಾಧ್ಯವಾಗಿದೆ ಎಂದರು.

    ಇದಾದ ಬಳಿಕ, “ಉರಿ- ದಿ ಸರ್ಜಿಕಲ್ ಸ್ಟ್ರೈಕ್” ಮಾತನಾಡಿದ ಯಾಮಿ, “ಉರಿ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನಿರೀಕ್ಷಿತವಲ್ಲ. ಏಕೆಂದರೆ ಆ ಚಿತ್ರದಲ್ಲಿ ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ. ವಿಶ್ವಾದ್ಯಂತ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲರು ಪ್ರೀತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ 50 ದಿನ ಆದರೂ ಮೆಸೇಜ್ ಹಾಗೂ ಟ್ವೀಟ್ ಬರುವುದು ಕಡಿಮೆ ಆಗಿಲ್ಲ” ಎಂದು ಚಿತ್ರದ ಯಶಸ್ಸಿನ ಸಂತಸವನ್ನು ಹಂಚಿಕೊಂಡರು.

    ಅಲ್ಲದೇ ಉರಿ ಚಿತ್ರ ನನಗೆ ಗೌರವ ತಂದುಕೊಟ್ಟಿದೆ. ಅಲ್ಲದೇ ವಿಭಿನ್ನವಾಗಿದ್ದ ಈ ಚಿತ್ರದಲ್ಲಿ ನಟಿಸಲು ನನಗೆ ಸವಾಲಾಗಿತ್ತು. ಚಿತ್ರದಲ್ಲಿ ನಟಿಸಿದ ನಂತರ ಒಂದು ಒಳ್ಳೆಯ ಅನುಭವ ಸಿಕ್ಕಿದೆ. ಈ ಚಿತ್ರ ಬಿಡುಗಡೆ ಆದ ನಂತರ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಯಾಮಿ ಗೌತಮ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv