Tag: ಉರ್ದು ಶಾಲೆ

  • ಹಿಂದೂ – ಮುಸ್ಲಿಂ ಭಾವೈಕ್ಯತೆ | ಉರ್ದು ಶಾಲೆಯಲ್ಲಿ ಕೃಷ್ಣ – ರಾಧೆಯರ ವೇಷದಲ್ಲಿ ಮಿಂಚಿದ ಮಕ್ಕಳು

    ಹಿಂದೂ – ಮುಸ್ಲಿಂ ಭಾವೈಕ್ಯತೆ | ಉರ್ದು ಶಾಲೆಯಲ್ಲಿ ಕೃಷ್ಣ – ರಾಧೆಯರ ವೇಷದಲ್ಲಿ ಮಿಂಚಿದ ಮಕ್ಕಳು

    ಬಳ್ಳಾರಿ: ಹಿಂದೂ, ಮುಸ್ಲಿಂ (Hindu Muslim) ಪರಸ್ಪರ ಭಾವೈಕ್ಯತೆಯಿಂದ ರಾಷ್ಟ್ರೀಯ ಏಕತೆಯನ್ನು ಸಾರಲು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ (Shri Krishna Janmashtami) ಆಚರಣೆ ಮಾಡಿದ್ದಾರೆ.

    ಕೋಮು ಸೌಹಾರ್ದತೆಯಿಂದ ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಂಡು ರಾಷ್ಟ್ರೀಯ ಏಕತೆ ಮೂಡಿಸುವ ಜೊತೆಗೆ ಪರಸ್ಪರ ಭಾವೈಕ್ಯತೆಯಿಂದ ದೇಶದ ಪ್ರಗತಿಯ ಸಾಧಿಸುವ ದೃಷ್ಟಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಮುಸ್ಲಿಮ್‌ (Muslim) ಕುಟುಂಬದ ಮಕ್ಕಳು ಕೃಷ್ಣ ರಾಧೆಯರ (Krishna and Radha) ವೇಷ ತೊಟ್ಟು ಸಂಭ್ರಮಿಸುವ ಮೂಲಕ ಭಾವೈಕ್ಯತೆ ಸಾರಿದರು.

    ಶಿಕ್ಷಕ ರವಿಕುಮಾರ ಸಕ್ರಹಳ್ಳಿ ಮಾತನಾಡಿ ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದತೆ, ಭಾವೈಕ್ಯತೆಯನ್ನು ಮೂಡಿಸಲು ಪಾಲಕರ ಸಹಕಾರದಿಂದ ಉರ್ದು ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. 160 ಮಕ್ಕಳು ಓದುವ ಈ ಶಾಲೆಯಲ್ಲಿ ಗಣೇಶ ಹಬ್ಬ ರಕ್ಷಾ ಬಂಧನ ಶ್ರೀ ಕೃಷ್ಣ ಜನ್ಮಾಷ್ಟಮಿ, ಹಲವಾರು ಸಾಧಕರ ಜಯಂತಿಗಳು ಮುಂತಾದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಸಡಗರದಿಂದ ಆಚರಿಸುತ್ತೇವೆ ಎಂದರು.  ಇದನ್ನೂ ಓದಿ: ಎಸ್‌ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡ್ಬೇಕು, ಇಲ್ಲದಿದ್ರೆ ಸದನದಲ್ಲಿ ಹೋರಾಟ: ಆರ್.ಅಶೋಕ್

    ಮುಸ್ಲಿಂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಉರ್ದು ಶಾಲೆಯಲ್ಲಿ ನೂರಕ್ಕೂ ಅಧಿಕ ಮಕ್ಕಳು ಕೃಷ್ಣ ಮತ್ತು ರಾಧೆಯರ ವೇಷಭೂಷಣ ಧರಿಸಿ ಭಾವೈಕ್ಯತೆ ಸಾಧಿಸಲು ಮುಂದಾಗಿದ್ದು ವಿಶೇಷವಾಗಿತ್ತು.

  • ಶಿಕ್ಷಣ ಇಲಾಖೆ ಎಡವಟ್ಟು – 17 ವರ್ಷಗಳಿಂದ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಶಾಲೆ ಉರ್ದು ಶಾಲೆಗೆ ಸ್ಥಳಾಂತರ

    ಶಿಕ್ಷಣ ಇಲಾಖೆ ಎಡವಟ್ಟು – 17 ವರ್ಷಗಳಿಂದ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಶಾಲೆ ಉರ್ದು ಶಾಲೆಗೆ ಸ್ಥಳಾಂತರ

    – 67 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ
    – ಶಾಲೆಗೆ ಬಂದು ವಾಪಸ್‌ ಹೋಗ್ತಿರೋ ಶಿಕ್ಷಕರು

    ಯಾದಗಿರಿ: ಇಲ್ಲಿನ ವಾಲ್ಮೀಕಿ ನಗರದಲ್ಲಿ ಕಳೆದ 17 ವರ್ಷಗಳಿಂದ ಸರ್ಕಾರಿ ಶಾಲೆಯೊಂದು ಸಮುದಾಯ ಭವನದಲ್ಲಿ ನಡೆಯುತ್ತಿದೆ. ಸಾವಿರಾರು ಮಕ್ಕಳು ಸಮುದಾಯ ಭವನದಲ್ಲಿ (Community Bhawan) ನಡೆಯುತ್ತಿದ್ದ ಶಾಲೆಯಲ್ಲೇ ವಿದ್ಯೆ ಕಲಿತ್ತಿದ್ದಾರೆ. ಆದರೀಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದಲ್ಲಿದ್ದ ಶಾಲೆಯನ್ನ ಉರ್ದು ಸರ್ಕಾರಿ ಶಾಲೆಯ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಕಳೆದ ಒಂದು ತಿಂಗಳಿನಿಂದ ಹತ್ತಾರು ಮಕ್ಕಳು ಶಾಲೆಗೆ ಹೋಗೋದನ್ನೇ ನಿಲ್ಲಿಸಿದ್ದಾರೆ. ಉರ್ದು ಶಾಲೆಗೆ (Urdu school) ಶಿಫ್ಟ್‌ ಮಾಡಿದ್ರೆ ನಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

    ಕಳೆದ 17 ವರ್ಷಗಳ ಹಿಂದೆ ಅಂದ್ರೆ 2006-07ನೇ ಸಾಲಿನಲ್ಲಿ ಈ ಬಡಾವಣೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನ ಶಿಕ್ಷಣ ಇಲಾಖೆ (Education Department) ಮಂಜೂರು ಮಾಡಿತ್ತು. ಆರಂಭದಲ್ಲಿ ಜಾಗ ಮತ್ತು ಶಾಲೆಗೆ ಕಟ್ಟಡ ಇಲ್ಲದ ಕಾರಣಕ್ಕೆ ಬಡಾವಣೆಯ ಮಶಮ್ಮ ದೇವಸ್ಥಾನದ ಆವರಣದಲ್ಲಿ ಶೆಡ್​​​ ಹಾಕಿಕೊಂಡು ಶಾಲೆಯನ್ನ ನಡೆಸಲಾಗುತ್ತಿತ್ತು. ಆದ್ರೆ ಕೆಲ ವರ್ಷಗಳ ನಂತರ ಇದೇ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣವಾಗಿದೆ. ಹೀಗಾಗಿ ಶಾಲೆಯನ್ನ ಶೆಡ್‌ನಿಂದ ಸಮುದಾಯ ಭವನಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ 17 ವರ್ಷಗಳಿಂದಲೂ ಕಿರಿಯ ಪ್ರಾಥಮಿಕ ಶಾಲೆಯನ್ನ ಇದೇ ಸಮುದಾಯ ಭವನದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಇದನ್ನೂ ಓದಿ: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಹಲವು ವರ್ಗಕ್ಕೆ ಶಕ್ತಿ ತುಂಬುವ ಕೆಲಸ: ಹೆಚ್‌ಡಿಕೆ ಬಣ್ಣನೆ

    ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮುದಾಯ ಭವನದ ಪಕ್ಕದ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಶಾಲೆಯನ್ನ ಸ್ಥಳಾಂತರಗೊಳಿಸಿದ ಬಳಿಕ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯನ್ನ ಸ್ಥಳಾಂತರ ಮಾಡುವ ನೆಪದಲ್ಲಿ ಬೇರೆ ಶಾಲೆಯೊಟ್ಟಿಗೆ ವಿಲೀನ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ ಅಂತ ಪೋಷಕರು ಆರೋಪಿಸಿದ್ದಾರೆ. ಈಗಿರುವ ಶಾಲೆಗೆ ಮಕ್ಕಳು ಮುಖ್ಯ ರಸ್ತೆಯನ್ನ ದಾಟಿ ಹೋಗಬೇಕು. ಮುಖ್ಯ ರಸ್ತೆ ಮೇಲೆ ಭಾರೀ ವಾಹನಗಳು ಓಡಾಡುತ್ತವೆ. ರಸ್ತೆ ದಾಟುವಾಗ ಏನಾದ್ರು ಹೆಚ್ಚು-ಕಮ್ಮಿ ಆದ್ರೆ ಯಾರು ಜವಾಬ್ದಾರಿ? ನಾವು ಕೂಲಿ ಮಾಡುವ ಜನ ಮಕ್ಕಳನ್ನ ಶಾಲೆಗೆ ಬಿಡೋದಕ್ಕೆ ಆಗಲ್ಲ. ಹೀಗಾಗಿ ಸಮುದಾಯ ಭವನದಲ್ಲೇ ಶಾಲೆ ನಡೆಸಿ ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದತಿಗೆ ಕಾಂಗ್ರೆಸ್‍ನಲ್ಲಿ ಚರ್ಚೆ, ಬಾಲಕೃಷ್ಣರಿಂದ ಬಯಲು: ಹೆಚ್‍ಡಿಕೆ

    ಶಾಲೆ ಸ್ಥಳಾಂತರಗೊಳಿಸಿದ ಬಳಿಕ ಪೋಷಕರ ಒತ್ತಾಯಕ್ಕೆ ಅಧಿಕಾರಿಗಳು ಕಿವಿಗೊಡದಿದ್ದರಿಂದ ಪೋಷಕರು ಮಕ್ಕಳನ್ನ ಶಾಲೆಗ ಕಳುಹಿಸೋದಕ್ಕೆ ಹಿಂದೇಟು ಹಾಕಿದ್ದಾರೆ. ಕಳೆದ 1 ತಿಂಗಳಿನಿಂದ 1 ರಿಂದ 5ನೇ ತರಗತಿವರೆಗೆ ಇರುವ ಈ ಶಾಲೆಯ ಸುಮಾರು 60ಕ್ಕೂ ಅಧಿಕ ಮಕ್ಕಳು ಶಾಲೆ ಮುಖ ನೋಡದೇ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಬಾರದ ಕಾರಣಕ್ಕೆ ಶಾಲೆಯ ಮೂರು ಜನ ಶಿಕ್ಷಕಿಯರು ಕಳೆದ 1 ತಿಂಗಳಿನಿಂದ ಶಾಲೆಗೆ ಬಂದು ಕುಳಿತುಕೊಂಡು ವಾಪಸ್ ಹೋಗುತ್ತಿದ್ದಾರೆ. ಅಧಿಕಾರಿಗಳು ಮುಂದೇನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮೋದಿ ಹೊಡೆತಕ್ಕೆ ಎಲ್ಲಿ ಸಿಲುಕಿ ಸಾಯೋಣ ಎಂದು ಮಂತ್ರಿಯೊಬ್ಬರು ಹೇಳ್ತಿದ್ರು: ಬೊಮ್ಮಾಯಿ

  • ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ – ರಾಷ್ಟ್ರ ಪ್ರೇಮಿಗಳ ಆಕ್ರೋಶ

    ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ – ರಾಷ್ಟ್ರ ಪ್ರೇಮಿಗಳ ಆಕ್ರೋಶ

    ಬೆಳಗಾವಿ: ಸ್ವಾತಂತ್ರ್ಯ ದಿನದಂದೇ (Independence Day) ಉರ್ದು ಶಾಲೆಯಲ್ಲಿ ತ್ರಿವರ್ಣ ಧ್ವಜವನ್ನು (Tricolour Flag) ಉಲ್ಟಾ ಹಾರಿಸಿ ಅಪಮಾನ ಎಸಗಿದ್ದು, ರಾಷ್ಟ್ರಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ (Mudalagi) ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ನಡೆದಿದೆ.

    ಸ್ವಾತಂತ್ರ್ಯೋತ್ಸವದ ದಿನವೇ ಅದ್ವಾನಕ್ಕೆ ಉರ್ದು ಶಾಲೆ ಕಾರಣವಾಗಿದ್ದು, ಶಿಕ್ಷಕರು ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ಅಪಮಾನ ಎಸಗಿದ್ದಾರೆ. ಲಕ್ಷ್ಮೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ಬಣ್ಣವನ್ನು ಮೇಲೆ ಮಾಡಿ ಧ್ವಜಾರೋಹಣವನ್ನು ಮಾಡಿದ್ದಾರೆ. ಶಿಕ್ಷಕರ ಅದ್ವಾನಕ್ಕೆ ರಾಷ್ಟ್ರ ಪ್ರೇಮಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿಯ ಯಡವಟ್ಟು – ಧ್ವಜಾರೋಹಣ ವೇಳೆ ಅಂಬೇಡ್ಕರ್ ಪೋಟೋ ಇಡದ್ದಕ್ಕೆ ಆಕ್ರೋಶ

    ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜದ ಫೋಟೋ ಎಲ್ಲೆಡೆ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪರೇಡ್ ವೇಳೆ ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಜಬ್‌ ನಮಗೆ ಮುಖ್ಯ – ಕಲಬುರಗಿ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು

    ಹಿಜಬ್‌ ನಮಗೆ ಮುಖ್ಯ – ಕಲಬುರಗಿ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು

    ಕಲಬುರಗಿ: ಹಿಜಬ್‌ ಧರಿಸಲು ಅವಕಾಶ ನೀಡದ ಕಾರಣ ಹೈಸ್ಕೂಲ್ ವಿದ್ಯಾರ್ಥಿನಿಯರು ಉರ್ದು ಶಾಲೆಗೆ ಗೈರಾಗಿದ್ದಾರೆ.

    ಕಲಬುರಗಿ ನಗರದ ಜಗತ್ ಬಳಿಯಿರುವ ಉರ್ದು ಶಾಲೆಯ 8, 9, 10ನೇ ತರಗತಿಯಲ್ಲಿ ಓದುತ್ತಿದ್ದ 80ಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿಲ್ಲ. ಉರ್ದು ಶಾಲೆಯ ತರಗತಿಗಳು ಖಾಲಿಯಾಗಿದ್ದು ಶಿಕ್ಷಕರು ಮಾತ್ರ ಎಂದಿನಂತೆ ಶಾಲೆಗೆ ಆಗಮಿಸಿದ್ದಾರೆ.

    ಸೋಮವಾರ ಹೈಕೋರ್ಟ್ ಆದೇಶವನ್ನು ಧಿಕ್ಕರಸಿ ಜೇವರ್ಗಿಯ ಉರ್ದು ಶಾಲೆಯ ವಿದ್ಯಾರ್ಥಿನಿಯರು ಶಾಲೆಗೆ ಹಿಜಬ್ ಧರಿಸಿ ಆಗಮಿಸಿದ್ದರು.

    ವಿದ್ಯಾರ್ಥಿಗಳು ಹಿಜಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಭಾವನೆಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ ಅಂತ ಹೈಕೋರ್ಟ್ ಸೂಚಿಸಿದ್ದರೂ ಸಮವಸ್ತ್ರ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರಗೊಂಡಿತ್ತು. ಇದನ್ನೂ ಓದಿ: ಕೊಪ್ಪಳದಲ್ಲಿ ಶಾಲೆಗೆ ಹಿಜಬ್ ಹಾಕಿಕೊಂಡೇ ಬಂದ ವಿದ್ಯಾರ್ಥಿನಿಯರು

    ಸುದ್ದಿ ಪ್ರಸಾರವಾದ ಬೆನ್ನಲ್ಲೇ ಶಿಕ್ಷಕರು ಮಕ್ಕಳಿಗೆ ತಿಳಿ ಹೇಳಿ ಹಿಜಬ್ ತೆಗೆಯುವಂತೆ ಸೂಚಿಸಿದ್ದರು. ಶಿಕ್ಷಕರ ಮಾತಿಗೆ ಬೆಲೆ ಕೊಟ್ಟು ವಿದ್ಯಾರ್ಥಿಗಳು ಹಿಜಬ್ ತೆಗೆದು ಈಗ ಪಾಠ ಕೇಳಿ ಮನೆಗೆ ತೆರಳಿದ್ದರು.

    ಈ ಬಗ್ಗೆ ಸೋಮವಾರ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ್ದ ಶಿಕ್ಷಕ, ನಾವು ವಿದ್ಯಾರ್ಥಿನಿಯರಿಗೆ ಹೈಕೋರ್ಟ್‌ ಆದೇಶದ ಬಗ್ಗೆ ಮೊದಲೇ ತಿಳಿಸಿದ್ದೆವು. ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಳ್ಳಿಯಿಂದ ಬರುತ್ತಾರೆ. ಅವರಿಗೆ ನಿಯಮಗಳ ಬಗ್ಗೆ ಹೆಚ್ಚಾಗಿ ತಿಳಿದಿರದ ಕಾರಣ ಹಿಜಬ್ ಧರಿಸಿಯೇ ಶಾಲೆಯ ಆವರಣ ಪ್ರವೇಶಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಕೆಸಿಆರ್‌ಗೆ ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಪುರಾವೆ ನೀಡಿದ ಅಸ್ಸಾಂ ಸಿಎಂ

    ಈ ವಿದ್ಯಾ ಸಂಸ್ಥೆಗೆ ಬರುವ ಎಲ್ಲಾ ವಿದ್ಯಾರ್ಥಿನಿಯರೂ ಮುಸ್ಲಿಂ ಸಮುದಾಯದವರು. ನಾವು 2-3 ದಿನಗಳ ಹಿಂದೆಯೇ ಸರ್ಕಾರದ ಆದೇಶದ ಬಗ್ಗೆ ಅವರಿಗೆ ಸೂಚನೆ ನೀಡಿದ್ದೆವು. ಅವರು ತರಗತಿ ಸಮಯಕ್ಕಿಂತ ಮೊದಲೇ ಶಾಲಾ ಆವರಣ ಪ್ರವೇಶಿಸಿದ್ದರಿಂದ ಎಚ್ಚರಿಕೆ ನೀಡುವಲ್ಲಿ ವಿಳಂಬವಾಗಿತ್ತು ಎಂದು ಹೇಳಿದ್ದರು.

  • ಸರ್ಕಾರಿ ಉರ್ದು ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ರು ದಾವಣಗೆರೆ ಶಿಕ್ಷಕ ಸೋಯದ್

    ಸರ್ಕಾರಿ ಉರ್ದು ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ರು ದಾವಣಗೆರೆ ಶಿಕ್ಷಕ ಸೋಯದ್

    ದಾವಣಗೆರೆ: ಇದು ರಾಜ್ಯದಲ್ಲೇ ಅತಿದೊಡ್ಡ ಇಂಟರ್ ಆಕ್ಟೀವ್ ಬೋರ್ಡ್ ಹೊಂದಿರುವ ಉರ್ದು ಶಾಲೆ. ದಾವಣಗೆರೆಯ ಈ ಶಾಲೆ ಸಂಪೂರ್ಣ ಹೈಟೆಕ್ ಆಗಿದ್ದು, ಇದೀಗ ಜಿಲ್ಲೆಯ ಗಮನ ಸೆಳೆದಿದೆ.

    ಹೌದು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಉರ್ದು ಶಾಲೆಯ ಗಣಿತ ಶಿಕ್ಷಕ ಸೋಯದ್ ಬೇಗ್ ಪರಿಶ್ರಮದಿಂದ ಈ ಶಾಲೆ ಈಗ ಕೇಂದ್ರಬಿಂದುವಾಗಿದೆ. ತರಗತಿಯಲ್ಲಿ ಪಾಠ ಕೇಳುವ ಮಕ್ಕಳಿಗೆ ಹೈಟೆಕ್ ಲ್ಯಾಬ್‍ನಲ್ಲಿ ಪ್ರತ್ಯಕ್ಷವಾಗಿ ಪ್ರಯೋಗ ಮಾಡುವುದರಿಂದ ಮಕ್ಕಳ ಗ್ರಹಿಕೆ ಉತ್ತಮವಾಗಿದೆ ಅಂತ ಶಿಕ್ಷಕ ಸೋಯದ್ ಬೇಗ್ ಹೇಳ್ತಾರೆ.

    ರಾಜ್ಯದಲ್ಲಿ ಎರಡನೇ ಅತ್ಯಂತ ದೊಡ್ಡ ಇಂಟರ್ ಆಕ್ಟಿವ್ ಬೋರ್ಡ್ ಹೊಂದಿರುವ ಉರ್ದು ಶಾಲೆ ಎಂಬ ಖ್ಯಾತಿಗೆ ಈ ಶಾಲೆ ಭಾಜನವಾಗಿದೆ. ಸೋಯದ್ ಅವರಿಗೆ ಸಹಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರ ಸಾಥ್ ಸಿಕ್ಕಿದೆ.

    ಸರ್ಕಾರಿ ಶಾಲೆ ಅಂದ್ರೆ ಹೀಗೂ ಇರುತ್ತೆ ಅಥವಾ ಇರಿಸಬಹುದು ಅನ್ನೋದನ್ನ ಋಜುವಾತು ಮಾಡಿದ್ದಾರೆ ಕೆರೆಬಿಳಚಿ ಶಾಲೆಯ ಮೇಷ್ಟ್ರು ಸೋಯದ್ ಬೇಗ್.

    https://www.youtube.com/watch?v=zYA3oc4tfAA