Tag: ಉರ್ದು

  • ಸರ್ಕಾರಿ ಶಾಲೆಯಲ್ಲಿ ಉರ್ದು ಪ್ರಾರ್ಥನೆ – ಪ್ರಾಂಶುಪಾಲ ಅಮಾನತು

    ಸರ್ಕಾರಿ ಶಾಲೆಯಲ್ಲಿ ಉರ್ದು ಪ್ರಾರ್ಥನೆ – ಪ್ರಾಂಶುಪಾಲ ಅಮಾನತು

    ಲಕ್ನೋ: ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಉರ್ದು ಪ್ರಾರ್ಥನೆಯನ್ನು (Urdu Prayer) ಹಾಡಿಸಿದ್ದಕ್ಕೆ ಶಿಕ್ಷಣ ಇಲಾಖೆ ಪ್ರಾಂಶುಪಾಲರನ್ನು (Principal) ಅಮಾನತುಗೊಳಿಸಿರುವ (Suspend) ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ನಡೆದಿದೆ.

    ವರದಿಗಳ ಪ್ರಕಾರ ಶಾಲಾ ಮಕ್ಕಳಿಗೆ ಬೆಳಗ್ಗೆ ಪ್ರಾರ್ಥನೆ ವೇಳೆ ಜನಪ್ರಿಯ ಉರ್ದು ಭಾಷೆಯ ಗೀತೆ ‘ಲಬ್ ಪೆ ಆತಿ ಹೆ ದುವಾ ಬನ್‌ಕೆ ತಮನ್ನಾ ಮೇರಿ’ ಹಾಡನ್ನು ಹಾಡಿಸಲಾಗಿದೆ. ಇದರ ವೀಡಿಯೋ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಉರ್ದು ಗೀತೆಯನ್ನು ಹಾಡಿಸಿದ್ದಕ್ಕಾಗಿ ಬಲಪಂಥೀಯ ಗುಂಪುಗಳು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದೆ.

    ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರೂ ಯಾರನ್ನೂ ಬಂಧಿಸಿಲ್ಲ. ಆದರೆ ಶಿಕ್ಷಣ ಇಲಾಖೆ ಶಾಲೆಯ ಪ್ರಾಂಶುಪಾಲನನ್ನು ಅಮಾನತುಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಕ್ಕಳಿಂದ ಹಾಡಿಸಲಾದ ಪ್ರಾರ್ಥನೆ ಸರ್ಕಾರಿ ಶಾಲೆಗಳ ದೈನಂದಿನ ಪ್ರಾರ್ಥನಾ ವೇಳಾಪಟ್ಟಿಯಲ್ಲಿ ಇಲ್ಲ. ಬದಲಿಗೆ ಅದು ಒಂದು ಧರ್ಮಕ್ಕೆ ಸಂಬಂಧಿಸಿರುವುದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮಾಸ್ಕ್‌ ಹಾಕಿದ್ರೆ ಮಾತ್ರ ಮೆಟ್ರೋ ಪ್ರವೇಶಕ್ಕೆ ಅನುಮತಿ

    ವಿವಾದ ಉಂಟು ಮಾಡಿರುವ ಉರ್ದು ಗೀತೆಯನ್ನು 1902ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ. ಅವರು ಪ್ರಸಿದ್ಧ ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ಹಾಡನ್ನೂ ಬರೆದವರಾಗಿದ್ದಾರೆ.

    2019ರಲ್ಲೂ ಫಿಲಿಭಿತ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದ ಉರ್ದು ಹಾಡನ್ನು ಹಾಡಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಸ್ಥಳೀಯ ಘಟಕದ ದೂರಿನ ಮೇರೆಗೆ ಅದಿಕಾರಿಗಳು ಕ್ರಮ ಕೈಗೊಂಡಿದ್ದರು. ಇದನ್ನೂ ಓದಿ: ಚೀನಾದಲ್ಲಿ ಪ್ರತಿ ದಿನ 10 ಲಕ್ಷ ಕೇಸ್, 5000 ಸೋಂಕಿತರ ಸಾವು

    Live Tv
    [brid partner=56869869 player=32851 video=960834 autoplay=true]

  • ಒಂದೇ ಬೋರ್ಡ್‍ನಲ್ಲಿ ಶಿಕ್ಷಕರಿಂದ ಹಿಂದಿ, ಉರ್ದು ಬೋಧನೆ – ವೀಡಿಯೋ ವೈರಲ್

    ಒಂದೇ ಬೋರ್ಡ್‍ನಲ್ಲಿ ಶಿಕ್ಷಕರಿಂದ ಹಿಂದಿ, ಉರ್ದು ಬೋಧನೆ – ವೀಡಿಯೋ ವೈರಲ್

    ಪಾಟ್ನಾ: ಬಿಹಾರದ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ಒಂದೇ ತರಗತಿಯ ಕೊಠಡಿಯಲ್ಲಿ ಏಕಕಾಲದಲ್ಲಿ ಮಕ್ಕಳಿಗೆ ಬೋರ್ಡ್ ಮೇಲೆ ಹಿಂದೂ ಹಾಗೂ ಉರ್ದು ಕಲಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತರಗತಿಯಲ್ಲಿ ಕೆಲವು ಮಕ್ಕಳು ಮಾತ್ರ ಪಾಠ ಕೇಳುತ್ತಿದ್ದರೆ. ಮತ್ತೆ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದು, ಬೋರ್ಡ್ ಎದುರು ಹಿರಿಯ ಶಿಕ್ಷಕಿಯೊಬ್ಬರು ಕುಳಿತುಕೊಂಡು ಮಕ್ಕಳನ್ನು ಗಲಾಟೆ ಮಾಡದಂತೆ ನೋಡಿಕೊಳ್ಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ – ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್

    ಈ ಕುರಿತಂತೆ ಪ್ರತಿಕ್ರಿಯಿಸಿದ ಹಿಂದಿ ಶಿಕ್ಷಕಿ ಪ್ರಿಯಾಂಕಾ ಅವರು, 2017ರಲ್ಲಿ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ನಮ್ಮ ಶಾಲೆಗೆ ಸ್ಥಳಾಂತರಿಸಿದೆ. ನಮ್ಮ ಶಾಲೆಯಲ್ಲಿ ಸಾಕಷ್ಟು ಕೊಠಡಿಗಳಿಲ್ಲದ ಕಾರಣ, ಒಂದೇ ಬೋರ್ಡ್‍ನನ್ನು ಎರಡು ಭಾಗ ಮಾಡಿಕೊಂಡು ಹಿಂದಿ ಹಾಗೂ ಉರ್ದು ಶಿಕ್ಷಕರು ಏಕಕಾಲದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಕೇಸ್‍ಗೆ ಟ್ವಿಸ್ಟ್ – ಮೊದಲು ಸಂಗೀತಾ ಹಲ್ಲೆ ಮಾಡಿದ್ದ ವೀಡಿಯೋ ವೈರಲ್

    ಬಿಹಾರದ ಕತಿಹಾರ್‍ನಲ್ಲಿರುವ ಆದರ್ಶ್ ಮಿಡಲ್ ಸ್ಕೂಲ್ ಪರಿಸ್ಥಿಯ ಬಗ್ಗೆ ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಅವರು, ಆದರ್ಶ ಮಿಡಲ್ ಸ್ಕೂಲ್‍ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಲಾಗುವುದು. ಎಲ್ಲ ಮಕ್ಕಳಿಗೂ ಒಂದೇ ಕೊಠಡಿಯಲ್ಲಿ ಒಂದೇ ಬೋರ್ಡ್‍ನಲ್ಲಿ ಪಾಠ ಮಾಡುವುದು ಒಳ್ಳೆಯದಲ್ಲಿ ಎಂದಿದ್ದಾರೆ.

  • ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    ಬೆಂಗಳೂರು: ಕನ್ನಡ ಗೊತ್ತಿಲ್ಲ ಉರ್ದುನಲ್ಲಿ ಮಾತನಾಡಿ ಎಂದಿದ್ದರು. ಬಳಿಕ ಚಾಕುವಿನಿಂದ ಇರಿದು ಚಂದ್ರುವನ್ನು ಕೊಲೆ ಮಾಡಿದ್ದಾರೆ ಎಂದು ಇದೀಗ ಸ್ನೇಹಿತ ಸೈಮನ್ ರಾಜ್ ತಿಳಿಸಿದ್ದಾರೆ.

    ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಹುಟ್ಟಹಬ್ಬ ಇತ್ತು. ನಾನು ಮತ್ತು ಚಂದ್ರು ಚಿಕನ್ ರೋಲ್ ತಿನ್ನಲು ಹಳೆಗುಡ್ಡದಹಳ್ಳಿಗೆ ಹೋಗಿದ್ದೆವು. ಆದರೆ ಚಿಕನ್ ರೋಲ್ ಅಂಗಡಿ ಕ್ಲೋಸ್ ಆಗಿತ್ತು. ಬಳಿಕ ಅಲ್ಲಿದ್ದ ಬೇಕರಿಗೆ ಹೋಗುವ ವೇಳೆ ಬೈಕ್ ಟಚ್ ಆದ ವಿಚಾರವಾಗಿ ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಆ ಬಳಿಕ ಮೂರು ಜನ ಬಂದು ಚಾಕು ತೆಗೆದಾಗ ನಾನು ಅವರನ್ನು ತಳ್ಳಿ ಓಡಿ ಹೋಗಿದ್ದೆ. ಚಂದ್ರುವನ್ನು ಓಡಲು ಹೇಳಿದ್ದೆ ಬಳಿಕ ಚಂದ್ರುಗೆ ಫೋನ್ ಮಾಡಿದಾಗ ಫೋನ್ ತೆಗೆದಿರಲಿಲ್ಲ. ನಂತರ ಘಟನಾ ಸ್ಥಳಕ್ಕೆ ವಾಪಸ್ ಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂತರ ಆಟೋದಲ್ಲಿ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದೆ ಅಷ್ಟೋತ್ತಿಗೆ ಆತ ಮೃತಪಟ್ಟಿದ್ದ ಎಂದು ದುಃಖಿತರಾದರು. ಇದನ್ನೂ ಓದಿ: ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ


    ಈ ಮೊದಲು ಕಮಿಷನರ್ ಕಮಲ್ ಪಂಥ್ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಹೇಳಿಲ್ಲ. ನಮ್ಮ ತನಿಖೆ ಪ್ರಕಾರ ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ. ಚಂದ್ರು ಕೊಲೆ ಪ್ರಕರಣದ ತನಿಖೆಯಲ್ಲಿ ಕಂಡುಕೊಂಡ ವಿಚಾರವನ್ನಷ್ಟೇ ಹೇಳಿದ್ದೇನೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜೊತೆಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ. ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಸೈಮನ್ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಮಾಡಿದ್ದ ಬಳಿಕ ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್

    ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಸೈಮನ್ ರಾಜ್ ಉರ್ದು ಮಾತನಾಡದ್ದಕ್ಕೆ ಕೊಲೆ ಆಗಿದೆ ಎಂದು ಹೇಳಿಕೆ ನೀಡಿರುವುದು ಮತ್ತು ಕೊಲೆಯಾದ ದಿನವೇ ಪೋಷಕರಿಂದಲೂ ಇದೇ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಲಾರಂಭಿಸಿದೆ. ಇದೀಗ ಚಂದ್ರು ಕೊಲೆ ಪ್ರಕರಣದಲ್ಲಿ ಟ್ವಿಸ್ಟ್ ಹಿನ್ನೆಲೆ ಪೊಲೀಸರಿಂದ ಮತ್ತೊಮ್ಮೆ ಸೈಮನ್ ರಾಜ್ ವಿಚಾರಣೆಗಾಗಿ ಜೆಜೆನಗರ ಪೊಲೀಸರು ಕರೆಸಿಕೊಂಡಿದ್ದಾರೆ.

  • ಉರ್ದು ಮಾತನಾಡಲು ಬರದಕ್ಕೆ ಚಂದ್ರು ಕೊಲೆ: ಆರಗ

    ಉರ್ದು ಮಾತನಾಡಲು ಬರದಕ್ಕೆ ಚಂದ್ರು ಕೊಲೆ: ಆರಗ

    ಬೆಂಗಳೂರು: ಚಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಉರ್ದು ಮಾತಾಡಲು ಬರಲಿಲ್ಲವೆಂದು ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

    ಮಂಗಳವಾರ ಯುವಕ ಚಂದ್ರುನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಹಿನ್ನೆಲೆ ಬುಧವಾರ ಆರಗ ಜ್ಞಾನೇಂದ್ರ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ್ದು, ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆರೋಪಿಗಳು ಉರ್ದು ಮಾತಾಡಲು ಹೇಳಿದ್ದಾರೆ. ಆದರೆ ಚಂದ್ರುವಿಗೆ ಉರ್ದು ಮಾತಾಡಲು ಬರಲಿಲ್ಲ ಎಂದು ವಿವರಿಸಿದರು. ಇದನ್ನೂ ಓದಿ: ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ

    ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚೂರಿಯಿಂದ ಚುಚ್ಚಿ-ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಕೆಲವರ ಬಂಧನ ಆಗಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

  • ಪಾಲಿಕೆ ಕಟ್ಟಡದಲ್ಲಿ ಉರ್ದು ಬೋರ್ಡ್ ಹಾಕಿ – ಮೇಯರ್ ಕಾರಿಗೆ ಮಸಿ ಎರಚಿ ಪ್ರತಿಭಟನಾಕಾರರ ಆಗ್ರಹ

    ಪಾಲಿಕೆ ಕಟ್ಟಡದಲ್ಲಿ ಉರ್ದು ಬೋರ್ಡ್ ಹಾಕಿ – ಮೇಯರ್ ಕಾರಿಗೆ ಮಸಿ ಎರಚಿ ಪ್ರತಿಭಟನಾಕಾರರ ಆಗ್ರಹ

    ಕಲಬುರಗಿ: ಜಿಲ್ಲೆಯ ನೂತನ ಪಾಲಿಕೆ ಕಟ್ಟಡದ ಮೇಲೆ ಉರ್ದು ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ.

    ಮುಸ್ಲಿಂಲಿಗ್ ವೆಲ್‍ಫೆರ್ ಸೊಸೈಟಿ ಸಂಘಟನೆ ಕಾರ್ಯಕರ್ತರು ಮೇಯರ್ ಶರಣು ಮೋದಿ ಅವರ ಕಾರಿನ ಮೇಲೆ ಕಪ್ಪುಬಣ್ಣ ಚೆಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಇಪ್ಪತ್ತಕ್ಕೂ ಅಧಿಕ ಕಾರ್ಯಕರ್ತರು ಮೇಯರ್ ಕಚೇರಿ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ನೂತನ ಕಟ್ಟಡದ ಮೇಲೆ ಉರ್ದು ನಾಮಫಲಕ ಹಾಕುವಂತೆ ಆಗ್ರಹಿಸಿ ಈ ಪ್ರತಿಭಟನೆ ನಡೆಸುತ್ತಿದ್ದು, ಒಂದು ವೇಳೆ ಉರ್ದು ನಾಮಫಲಕ ಹಾಕದಿದ್ರೆ ಕನ್ನಡ ಮತ್ತು ಇಂಗ್ಲಿಷ್ ನಾಮಫಲಕ ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ವೋಟ್ ಬ್ಯಾಂಕ್ ಪಾಲಿಟಿಕ್ಸ್?: ಕಲುಬುರಗಿ ಬಸ್ ಸ್ಟಾಪ್‍ ನಲ್ಲಿ ಉರ್ದು ನಾಮಫಲಕ

  • ಸರ್ಕಾರದಿಂದ ವೋಟ್ ಬ್ಯಾಂಕ್ ಪಾಲಿಟಿಕ್ಸ್?: ಕಲುಬುರಗಿ ಬಸ್ ಸ್ಟಾಪ್‍ ನಲ್ಲಿ ಉರ್ದು ನಾಮಫಲಕ

    ಸರ್ಕಾರದಿಂದ ವೋಟ್ ಬ್ಯಾಂಕ್ ಪಾಲಿಟಿಕ್ಸ್?: ಕಲುಬುರಗಿ ಬಸ್ ಸ್ಟಾಪ್‍ ನಲ್ಲಿ ಉರ್ದು ನಾಮಫಲಕ

    ಕಲಬುರಗಿ: ಇತ್ತೀಚೆಗೆ ಬೆಂಗಳೂರಿನ ಮೇಟ್ರೋದಲ್ಲಿ ಹಿಂದಿ ನಾಮಫಲಕ ತೆಗಿಸಿ ಸಿಎಂ ಸಿದ್ದರಾಮಯ್ಯ ಅಪ್ಪಟ ಕನ್ನಡಿಗ ಎನಿಸಿಕೊಂಡಿದ್ದರು. ಆದರೆ ಇದೀಗ ಅವರದೇ ಪಕ್ಷದ ಮುಖಂಡ ಸಿಎಂಗೇ ಸೆಡ್ಡು ಹೊಡೆದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೇಲೆ ಉರ್ದು ನಾಮಫಲಕ ಹಾಕಿಸಿದ್ದಾರೆ.

     

    ಕಲಬುರಗಿಯಲ್ಲಿ ಒಂದೆಡೆ ಬಹುಮನಿ ಉತ್ಸವ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇನ್ನೊಂದೆಡೆ ಅವರದೇ ಪಕ್ಷದ ಮುಖಂಡ ಹಾಗು ಎನ್‍ಇಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷ ಇಲಿಯಾಸ್ ಸೇಠ್ ಕಲಬುರಗಿಯ ಬಸ್ ನಿಲ್ದಾಣದ ಮೇಲೆ ಉರ್ದು ಭಾಷೆಯ ನಾಮಫಲಕ ಹಾಕಿಸಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾರ ಮತ ಬ್ಯಾಂಕ್ ಗಾಗಿ ಕೈ ಪಕ್ಷದ ನಾಯಕರು ಈ ನಾಮಫಲಕ ಹಾಕಿಸಿದ್ದಾರೆ ಎಂದು ಕಲಬುರಗಿ ಜಿಲ್ಲೆಯ ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಕಲಬುರಗಿಯ ಬಸ್ ನಿಲ್ದಾಣದಲ್ಲಿ ಈ ಹಿಂದೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಾಮಫಲಕವಿತ್ತು. ಆದ್ರೆ ಯಾವಾಗ ಇಲಿಯಾಸ್ ಸೇಠ್ ಅವರನ್ನು ಈ ಮಂಡಳಿಯ ಅಧ್ಯಕ್ಷರಾಗಿ ಮಾಡಲಾಯಿತೋ ಆಗ ಅವರು ಅಧಿಕಾರಿಗಳ ವಿಶೇಷ ಸಭೆ ಕರೆದು ಬಸ್ ನಿಲ್ದಾಣದ ಮೇಲೆ ಉರ್ದು ನಾಮಫಲಕ ಹಾಕಿಸಿದ್ದಾರೆ. ಈ ಕುರಿತು ಈಶಾನ್ಯ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ ಮಾಧ್ಯಮದವರ ಕೈಗೆ ಆದೇಶ ಪ್ರತಿ ನೀಡಿ ನುಣಚಿಕೊಳ್ಳುತ್ತಿದ್ದಾರೆ.

    ನಿರ್ದಿಷ್ಟ ಭಾಷಿಕರು ಹೆಚ್ಚು ಇರುವ ಕಡೆ ಆಯಾ ಭಾಷೆಯಲ್ಲಿ ನಾಮ ಫಲಕವನ್ನು ಬರೆಯಿಸುವುದು ಸೂಕ್ತವೆಂದು ಸದಸ್ಯರು ಅಭಿಪ್ರಾಯಪಟ್ಟರು. ಹೀಗಾಗಿ ಸಭೆಯಲ್ಲಿ ಇದಕ್ಕೆ ಒಮ್ಮತದ ಅಭಿಪ್ರಾಯ ಬಂದಿದ್ದು, ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಜೊತೆಗೆ ಉರ್ದು ನಾಮಫಲಕ ಸಹ ಹಾಕಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಹೇಳಲಾಗಿದೆ.

  • ಇನ್ನಾದ್ರೂ ಕನ್ನಡ ಕಲಿಯಮ್ಮ – ಮಹಿಳೆಗೆ ಕನ್ನಡ ಕಲಿಯಲು ಹೈಕೋರ್ಟ್ ಜಡ್ಜ್ ಸಲಹೆ

    ಇನ್ನಾದ್ರೂ ಕನ್ನಡ ಕಲಿಯಮ್ಮ – ಮಹಿಳೆಗೆ ಕನ್ನಡ ಕಲಿಯಲು ಹೈಕೋರ್ಟ್ ಜಡ್ಜ್ ಸಲಹೆ

    ಬೆಂಗಳೂರು: ಇಲ್ಲೇ ಹುಟ್ಟಿ, ಬೆಳೆದು ಕನ್ನಡ ಕಲಿಯದ ಮುಸ್ಲಿಂ ಮಹಿಳೆಯೊಬ್ಬರಿಗೆ ಕನ್ನಡ ಕಲಿಯುವಂತೆ ಹೈಕೋರ್ಟ್ ನ್ಯಾಯಮೂರ್ತಿ ಸಲಹೆ ನೀಡಿದ್ದಾರೆ.

    ಕೌಟುಂಬಿಕ ಪ್ರಕರಣ ಸಂಬಂಧ ವಿಚಾರಣೆ ವೇಳೆ ಮಹಿಳೆ ಉರ್ದುವಿನಲ್ಲೇ ಉತ್ತರಿಸುತ್ತಿದ್ದರಿಂದ ಬೇಸರ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್, `ಕಳೆದ 30 ವರ್ಷಗಳಿಂದ ಕರ್ನಾಟಕದಲ್ಲಿಯೇ ನೆಲೆಸಿದ್ರೂ ಕನ್ನಡ ಭಾಷೆ ಯಾಕೆ ಮಾತನಾಡೋದಿಲ್ಲ..? ಬೇರೆ ರಾಜ್ಯಗಳಿಗೆ ಹೋಗುವ ಕರ್ನಾಟಕದ ಜನ ಅಲ್ಲಿನ ಭಾಷೆ ಕಲಿಯುತ್ತಾರೆ ಅಂತ ವಿಷಾದ ವ್ಯಕ್ತಪಡಿಸಿದರು.

    ಏನಿದು ಪ್ರಕರಣ?: ಬ್ಯಾಟರಾಯನಪುರ ನಿವಾಸಿ ಸಬಿಹಾಬಾನು ಎಂಬವರು ತನ್ನ ಪತಿ ಮತ್ತು ಆತನ ಸಂಬಂಧಿಕರು ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಅಂತ ಕಳೆದ ಮೇ 8ರಂದು ದೂರು ನೀಡಿದ್ದರು. ಮಹಿಳೆಯ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    ಆದ್ರೆ ಸಬಿಹಾಬಾನು ಅವರ ಪತಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಎಫ್‍ಐಆರ್ ರದ್ದು ಪಡಿಸಲು ಕೋರಿದ್ದರು. ಅಂತೆಯೇ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಸಬಿಹಾಬಾನು ಪರ ವಕೀಲ ಬೈರೇಶ್ ಮತ್ತು ಆಕೆಯ ಪತಿ ಪರ ವಕೀಲ ಲಕ್ಷ್ಮೀಕಾಂತ್ ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಿ, ದಂಪತಿ ನಡುವಿನ ಕಲಹ ಬಗೆಹರಿದಿದ್ದು, ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ದೂರು ನೀಡಿದ್ದ ಸಬಿಹಾಬಾನು ದೂರು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಆದ್ದರಿಂದ ಪತಿ ವಿರುದ್ಧದ ಎಫ್‍ಐಆರ್ ಮತ್ತು ಹೈಕೋರ್ಟ್ ನಲ್ಲಿ ನಡೆಯೋ ವಿಚಾರಣೆ ರದ್ದುಪಡಿಸುವಂತೆ ಮನವಿ ಮಾಡಿದ್ರು.

    ಅಂತೆಯೇ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್, ಕೋರ್ಟ್‍ನಲ್ಲಿ ಹಾಜರಿದ್ದ ಸಬಿಹಾಬಾನು ಅವರನ್ನು ಕರೆದು, ಪತಿ ಹಾಗೂ ಸಂಬಂಧಿಕರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುತ್ತೀರಾ ಎಂದು ಕನ್ನಡದಲ್ಲಿ ಪ್ರಶ್ನಿಸಿದ್ರು. ಈ ವೇಳೆ ಮಹಿಳೆ ಮರು ಮಾತನಾಡದೆ ಸುಮ್ಮನಿದ್ದರು. ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ ಎಂದು ಮತ್ತೆ ಹಿಂದಿಯಲ್ಲಿ ಪ್ರಶ್ನಿಸಿದ್ರು. ಈ ಸಂದರ್ಭದಲ್ಲಿಯೂ ಮಹಿಳೆ ಸುಮ್ಮನಾಗಿರೋದನ್ನು ಕಂಡ ಜಡ್ಜ್, ನಿಮಗೆ ಯಾವ ಭಾಷೆ ಬರುತ್ತದೆ ಎಂದು ಮತ್ತೂಮ್ಮೆ ಪ್ರಶ್ನಿಸಿದಾಗ ಉರ್ದು ಮಾತ್ರ ಬರುವುದಾಗಿ ಉತ್ತರಿಸಿದ್ರು.

    ಇದರಿಂದ ಬೇಸರಗೊಂಡ ಜಡ್ಜ್, ನೀವು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು ಕನ್ನಡ ಯಾಕೆ ಕಲಿತಿಲ್ಲ ಅಂತ ಪ್ರಶ್ನಿಸಿದ್ರು. ಈ ವೇಳೆ ಉರ್ದು ತಿಳಿದ ವಕೀಲರೊಬ್ಬರು ನ್ಯಾಯಾಮೂರ್ತಿಗಳು ಏನು ಹೇಳಿದ್ದಾರೆ ಎನ್ನುವುದನ್ನು ಆಕೆಗೆ ತಿಳಿಸಿದರು. ಪ್ರಶ್ನೆಗೆ ಉತ್ತರಿಸಿದ ಮಹಿಳೆ, ನನಗೆ ಕನ್ನಡ ಮಾತನಾಡಲು ಬರೋದಿಲ್ಲ, ಉರ್ದು ಮಾತ್ರ ಬರುತ್ತೆ ಅಂತ ಉರ್ದುವಿನಲ್ಲಿ ಉತ್ತರಿಸಿದ್ದಾರೆ.

    ಕೊನೆಗೆ ನ್ಯಾಯಮೂರ್ತಿ ಅವರು ಮುಸ್ಲಿಂ ಮಹಿಳೆಗೆ ಇನ್ನಾದರೂ ಕನ್ನಡ ಕಲಿಯುವಂತೆ ಮೌಖಿಕ ಸೂಚನೆ ನೀಡಿ ಪ್ರಕರಣವನ್ನು ವಿಲೇವಾರಿ ಮಾಡಿದರು.