Tag: ಉರುಳು ಸೇವೆ

  • ಹೆಂಡತಿ ಗೆಲ್ಲಲು ಉರುಳು ಸೇವೆ ಮಾಡಿದ ನಟ ಶರತ್ ಕುಮಾರ್

    ಹೆಂಡತಿ ಗೆಲ್ಲಲು ಉರುಳು ಸೇವೆ ಮಾಡಿದ ನಟ ಶರತ್ ಕುಮಾರ್

    ತಮಿಳಿನ ಹೆಸರಾಂತ ನಟ ಶರತ್ ಕುಮಾರ್ (Radhika SarathKumar) ಪತ್ನಿ, ನಟಿ ರಾಧಿಕಾ ಶರತ್ ಕುಮಾರ್ ಈ ಬಾರಿ ತಮಿಳು ನಾಡಿನ ವಿರುದುನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ (Election) ಸ್ಪರ್ಧಿಸಿದ್ದಾರೆ. ಇಂದು ಚುನಾವಣೆ ಫಲಿತಾಂಶ ಘೋಷಣೆ ಆಗಲಿದ್ದು, ಅದಕ್ಕೂ ಮುನ್ನ ನಟ ಶರತ್ ಕುಮಾರ್ ತನ್ನ ಪತ್ನಿ ಗೆಲ್ಲಲಿ ಎಂದು ಉರುಳು ಸೇವೆ ಮಾಡಿದ್ದಾರೆ.

     

    ವಿರುದುನಗರದ ಪರಾಶಕ್ತಿ ಮಾರಿಯಮ್ಮ ದೇವಸ್ಥಾನಕ್ಕೆ ನಿನ್ನೆ ಆಗಮಿಸಿದ್ದ ಶರತ್ ಕುಮಾರ್ (Sarath Kumar) , ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಪ್ರದಕ್ಷಣೆ ಹಾಕಿದರು. ಆಮೇಲೆ ಉರುಳು ಸೇವೆ ಮಾಡಿದ್ದಾರೆ. ತಮ್ಮ ಪತ್ನಿಯ ಗೆಲುವಿಗೆ ಪ್ರಾರ್ಥನೆ ಮಾಡಿದ್ದಾರೆ. ವಿರುದುನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ.

     

    ರಾಧಿಕಾ ಶರತ್‌ಕುಮಾರ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರೆ, ಇತ್ತೀಚೆಗಷ್ಟೇ ನಿಧನರಾದ ಕ್ಯಾಪ್ಟನ್ ವಿಜಯಕಾಂತ್ ಅವರ ಪುತ್ರ ವಿಜಯ್ ಪ್ರಭಾಕರನ್ ಎಐಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಮಾಣಿಕಂ ಟ್ಯಾಗೋರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

  • ಲೋಕಕಲ್ಯಾಣಕ್ಕಾಗಿ 220 ಕಿ.ಮೀ. ಉರುಳು ಸೇವೆ ಮಾಡಿದ ಪಂಡರಪುರದ ವಿಠ್ಠಲನ ಭಕ್ತ

    ಲೋಕಕಲ್ಯಾಣಕ್ಕಾಗಿ 220 ಕಿ.ಮೀ. ಉರುಳು ಸೇವೆ ಮಾಡಿದ ಪಂಡರಪುರದ ವಿಠ್ಠಲನ ಭಕ್ತ

    ಚಿಕ್ಕೋಡಿ: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡೋದನ್ನ ಕೇಳಿದ್ದೀವಿ, ನೋಡಿದ್ದೀವಿ‌. ಅಷ್ಟೆ ಯಾಕೆ ಪಾದಯಾತ್ರೆ ಮೂಲಕ ತಮ್ಮ ಮನೆದೇವರ ಹರಕೆ ತೀರಿಸಿದವರನ್ನೂ ಸಹ ನೋಡಿರ್ತೀವಿ. ಆದರೆ ಇಲ್ಲೊಬ್ಬ ವಿಠ್ಠಲನ ಭಕ್ತ ಲೋಕಕಲ್ಯಾಣಕ್ಕಾಗಿ ಸುಮಾರು 220 ಕಿ.ಮೀ. ಉರುಳು ಸೇವೆ ಮಾಡಿ ಪಂಡರಪುರದ ವಿಠ್ಠಲನ ಕೃಪೆಗೆ ಪಾತ್ರನಾಗಿದ್ದಾ‌ನೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದ ನಿವಾಸಿ ಶಹಾಜೀ ಜಾಧವ್ ಉರುಳು ಸೇವೆ ಸಲ್ಲಿಸಿದ ಭಕ್ತ. ಶಹಾಜೀ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಿಂದ ಮಹಾರಾಷ್ಟ್ರದ ಪಂಡರಪುರದವರೆಗೂ ಉರುಳು ಸೇವೆ ಮಾಡಿದ್ದಾರೆ‌‌‌.‌ ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್

    ಕೋವಿಡ್, ನೆರೆ ತೊಲಗಿಸಿ ಇಡೀ ಮನುಕುಲದ ಒಳಿತಿಗಾಗಿ ವಿಠ್ಠಲನ ಬಳಿ ಪ್ರಾರ್ಥಿಸಿ ಶಹಾಜೀ ಹರಕೆ ತೀರಿಸಿದ್ದಾರೆ. ದಿನಕ್ಕೆ ನಾಲ್ಕು ಕಿ.ಮೀ. ಉರುಳು ಸೇವೆ ಮಾಡಿ ಶಹಾಜೀ ಪಂಡರಪುರ ತಲುಪಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ದೇವರು ಮತ್ತು ಭಕ್ತಿ ಎಂಬ ನಂಬಿಕೆಗಳು ಜನರ ಮನಸ್ಸಿನಲ್ಲಿ ಇನ್ನೂ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಜೆಡಿಎಸ್‍ನಿಂದ ಉರುಳು ಸೇವೆ

    ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಜೆಡಿಎಸ್‍ನಿಂದ ಉರುಳು ಸೇವೆ

    ದಾವಣಗೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಶಾಸಕರು ರಾಜೀನಾಮೆ ನೀಡುತ್ತಿದ್ದು, ಇತ್ತ ಮೈತ್ರಿ ಸರ್ಕಾರ ಉಳಿಯಬೇಕು ಎಂಬ ಬೇಡಿಕೆಯನ್ನಿಟ್ಟು ಕಾರ್ಯಕರ್ತರು ಉರುಳು ಸೇವೆ ಮಾಡಿದ್ದಾರೆ.

    ಹಳೇ ದಾವಣಗೆರೆಯಲ್ಲಿರುವ ನಗರ ದೇವತೆ ದುಗ್ಗಮ್ಮ ದೇವಸ್ಥಾನದಲ್ಲಿ ಜೆಡಿಎಸ್ ಕಾರ್ಯಕರ್ತರು ಉರುಳು ಸೇವೆ ಮಾಡಿದ್ದಾರೆ. ಮೊದಲು ದುಗ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು, ನಂತರ ಜೆಡಿಎಸ್ ಪಕ್ಷದ ಬ್ಯಾನರ್ ಹಿಡಿದು ಉರುಳು ಸೇವೆ ಕೈಗೊಂಡರು.

    ಮುಖ್ಯಮಂತ್ರಿಯವರು ಮುಂದುವರಿಯಬೇಕು. ಹಾಗೆಯೇ ರಾಜ್ಯ ರಾಜಕಾರಣದಲ್ಲಿ ಇರುವ ಗೊಂದಲ ನಿವಾರಣೆಯಾಗಲಿ ಎಂದು ಕಾರ್ಯಕರ್ತರು ಈ ವೇಳೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
    * ಎಚ್ ವಿಶ್ವನಾಥ್- ಹುಣಸೂರು
    * ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
    * ನಾರಾಯಣ ಗೌಡ- ಕೆ. ಆರ್ ಪೇಟೆ

    ರಾಜೀನಾಮೆ ಕೊಟ್ಟ ಕೈ ಶಾಸಕರು:
    * ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
    * ರಮೇಶ್ ಜಾರಕಿಹೊಳಿ- ಗೋಕಾಕ್
    * ಎಸ್.ಟಿ ಸೋಮಶೇಖರ್- ಯಶವಂತಪುರ
    * ಪ್ರತಾಪ್ ಗೌಡ ಪಾಟೀಲ್- ಮಸ್ಕಿ
    * ಬಿ.ಸಿ ಪಾಟೀಲ್- ಹಿರೇಕೆರೂರು
    * ಮಹೇಶ್ ಕುಮಟಳ್ಳಿ- ಅಥಣಿ

    * ಭೈರತಿ ಬಸವರಾಜ್- ಕೆ.ಆರ್ ಪುರಂ
    * ಶಿವರಾಂ ಹೆಬ್ಬಾರ್- ಯಲ್ಲಾಪುರ
    * ಮುನಿರತ್ನ- ರಾಜರಾಜೇಶ್ವರಿ ನಗರ
    * ರೋಷನ್ ಬೇಗ್- ಶಿವಾಜಿನಗರ

    ಪಕ್ಷೇತರ ಶಾಸಕರು:
    ಎಚ್. ನಾಗೇಶ್ – ಮುಳಬಾಗಿಲು
    ಆರ್. ಶಂಕರ್ – ರಾಣೆಬೆನ್ನೂರು

    ಒಟ್ಟಿನಲ್ಲಿ ಇಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ(ಸಿಎಲ್‍ಪಿ) ನಡೆದಿದ್ದು, ಈ ವೇಳೆ ಶಾಸಕರಾದ, ಎಂಟಿಬಿ ನಾಗರಾಜ್, ಸುಧಾಕರ್ ಹಾಗೂ ತುಕಾರಾಂ ಅನಾರೋಗ್ಯದ ಕಾರಣ ನೀಡಿ ಸಭೆಗೆ ಗೈರಾದರೆ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಅವರ ನಡೆ ತೀವ್ರ ಕುತೂಹಲಕ್ಕೀಡು ಮಾಡಿದೆ.

  • ಮಾನವ ಕುಲದ ಏಕತೆ, ವಿಶ್ವಶಾಂತಿಗಾಗಿ ವ್ಯಕ್ತಿಯಿಂದ 40 ಕಿ.ಮೀ ಉರುಳು ಸೇವೆ

    ಮಾನವ ಕುಲದ ಏಕತೆ, ವಿಶ್ವಶಾಂತಿಗಾಗಿ ವ್ಯಕ್ತಿಯಿಂದ 40 ಕಿ.ಮೀ ಉರುಳು ಸೇವೆ

    ಧಾರವಾಡ: ಮಾನವ ಕುಲದ ಏಕತೆ ಹಾಗೂ ವಿಶ್ವಶಾಂತಿಗಾಗಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಮಾರು 40 ಕಿಲೋ ಮೀಟರ್ ಉರುಳು ಸೇವೆಯನ್ನ ಆರಂಭಿಸಿದ್ದಾರೆ.

    ಜಿಲ್ಲೆಯ ಕಲಘಟಗಿ ತಾಲೂಕಿನ ಎಮ್ಮೇಟ್ಟಿ ಗ್ರಾಮದ ಈಶ್ವರ ತೋರಣಕಟ್ಟಿ ಅವರೇ ಈ ಉರುಳು ಸೇವೆಯನ್ನ ಆರಂಭಿಸಿದ್ದಾರೆ. ಧಾರವಾಡ ನಗರದ ಗಾಂಧಿಚೌಕದಿಂದ ತಮ್ಮ ಸೇವೆಯನ್ನ ಆರಂಭಿಸಿರುವ ಇವರು, ಮೂರು ದಿನಗಳ ನಂತರ ಎಮ್ಮೇಟ್ಟಿ ಗ್ರಾಮಕ್ಕೆ ತಲುಪಲಿದ್ದಾರೆ.

    ನಗರದ ರಸ್ತೆಗಳಲ್ಲೇ ಉರುಳು ಸೇವೆಯನ್ನ ಆರಂಭಿಸಿರುವ ಇವರು, ಸೆಪ್ಟೆಂಬರ್ 2 ರಂದು ತಮ್ಮ ಗ್ರಾಮಕ್ಕೆ ತಲುಪಲಿದ್ದಾರೆ. ಕಳೆದ 19 ವರ್ಷಗಳಿಂದ ಇವರು ಇದೇ ರೀತಿ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಉರುಳು ಸೇವೆ ಮಾಡುತ್ತಿರುವ ಇವರಿಗೆ ಅನೇಕರು ಸಾಥ್ ನೀಡಿದ್ದಾರೆ. ತಮ್ಮ ಉರುಳು ಸೇವೆಯ ನಂತರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡಾ ಇವರು ಇಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv