Tag: ಉರಗ ರಕ್ಷಕ

  • ಕುತ್ತಿಗೆಗೆ ಸುತ್ತಿಕೊಂಡು ಓಡಾಡ್ತಿದ್ದ ವೇಳೆ ಉರಗ ರಕ್ಷಕನನ್ನೇ ಕಚ್ಚಿ ಕೊಂದ ಹಾವು

    ಕುತ್ತಿಗೆಗೆ ಸುತ್ತಿಕೊಂಡು ಓಡಾಡ್ತಿದ್ದ ವೇಳೆ ಉರಗ ರಕ್ಷಕನನ್ನೇ ಕಚ್ಚಿ ಕೊಂದ ಹಾವು

    ಲಕ್ನೋ: ಹಾವನ್ನು ರಕ್ಷಿಸಿದ ನಂತರ ಕುತ್ತಿಗೆಗೆ ಸುತ್ತಿಕೊಂಡು ಊರೆಲ್ಲಾ ಓಡಾಡುತ್ತಿದ್ದ ಉರಗ ರಕ್ಷಕನನ್ನು ಕಚ್ಚಿ ಕೊಂದಿರುವ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

    SNAKE
    ಸಾಂದರ್ಭಿಕ ಚಿತ್ರ

    ಮೃತ ವ್ಯಕ್ತಿಯನ್ನು ಉರಗ ರಕ್ಷಕ ದೇವೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ನೆರೆಹೊರೆಯಲ್ಲಿ ಹಾವನ್ನು ಹಿಡಿಯುತ್ತಾ ಫೇಮಸ್ ಆಗಿದ್ದ. ಹಾಗೆಯೇ ಅತ್ಯಂತ ವಿಷಕಾರಿ ಹಾವನ್ನು ಇಂದು ರಕ್ಷಿಸಿದ್ದಾನೆ. ಬಳಿಕ ಕುತ್ತಿಗೆಗೆ ಸುತ್ತಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿದ್ದಾನೆ. ಇದೇ ವೇಳೆ ಹಾವು ಕಚ್ಚಿದೆ. ಇದನ್ನೂ ಓದಿ: ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ PSI ಆಂಜಪ್ಪ ಅಮಾನತು

    ಹಿಡಿದು ಸುಮಾರು 2 ಗಂಟೆಗಳಾದ ನಂತರ ಹಾವು ಕಚ್ಚಿದೆ. ಆದರೆ ಉರಗ ರಕ್ಷಕ ಆಸ್ಪತ್ರೆಗೆ ಹೋಗುವ ಬದಲಾಗಿ ಗಿಡಮೂಲಿಕೆಗಳಿಂದ ಚಿಕಿತ್ಸೆ ಪಡೆದಿದ್ದಾನೆ. ನಂತರ ಏನೂ ಆಗಿಲ್ಲವೆಂದು ಭಾವಿಸಿ ಸುಮ್ಮನಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಗರಹಾವಿನ ಜೊತೆ ಉರಗ ರಕ್ಷಕನ ಚೆಲ್ಲಾಟ

    ನಾಗರಹಾವಿನ ಜೊತೆ ಉರಗ ರಕ್ಷಕನ ಚೆಲ್ಲಾಟ

    ಬೆಂಗಳೂರು/ನೆಲಮಂಗಲ: ನಾಗರಹಾವು ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಉರಗದ ಜೊತೆಗೆ ಜನರನ್ನು ಮೆಚ್ಚಿಸಲು ಹೋಗಿ ಉರಗ ರಕ್ಷಕ ಚೆಲ್ಲಾಟವಾಡಿರುವ ವೀಡಿಯೋ ವ್ಯಾಪಕ ಖಂಡನೆಗೆ ಕಾರಣವಾಗಿದೆ.

    Snake Catcher

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಉರಗ ರಕ್ಷಕರೊಬ್ಬರು ವಿಷಪೂರಿತ ನಾಗರಹಾವಿನ ಜೊತೆಗೆ ಚೆಲ್ಲಾಟ ಆಡಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶುಕ್ರವಾರ ಗಣೇಶನ ಹಬ್ಬದ ವೇಳೆ ನೆಲಮಂಗಲ ನಗರದ ವಿಜಯನಗರದ ಪರಮಣ್ಣನವರ ಮನೆಯ ಬಳಿ ನಾಗರಹಾವು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಸ್ನೇಕ್ ಅರುಣ್ ರಾಜ್‍ಗೆ ವಿಚಾರ ಮುಟ್ಟಿಸಿ ರಕ್ಷಣೆ ಮಾಡುವಂತೆ ಕರೆ ಮಾಡಿದ್ದಾರೆ. ಇದನ್ನೂ ಓದಿ:  ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

    Snake Catcher

    ಸ್ಥಳಕ್ಕೆ ಬಂದ ಸ್ನೇಕ್ ಅರುಣ್ ರಾಜ್ ಆ ನಾಗರಹಾವನ್ನು ರಕ್ಷಣೆ ಮಾಡಿ, ಹಾವಿನ್ನು ಕೈಯಲ್ಲಿ ಹಿಡಿದುಕೊಂಡು ಬೈಕ್ ಮೇಲೆ ಕುಳಿತು ಜನರಿಗೆ ಜಾಗೃತಿ ಮೂಡಿಸುವ ಬರದಲ್ಲಿ ಚೆಲ್ಲಾಟವಾಡಿರುವ ಬಂಗಿ ಆತಂಕಕ್ಕೆ ಕಾರಣವಾಗಿದೆ. ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಹಾವುಗಳ ಜೊತೆಗೆ ಇಂತಹ ವರ್ತನೆ ಅಪಾಯಕಾರಿ, ಸಲ್ಪ ಯಾಮಾರಿದರೂ, ತಮ್ಮ ಪ್ರಾಣವನ್ನು ಪಣಕ್ಕೆ ಇಡಬೇಕಾಗುತ್ತೆ, ಹಾಗಾಗಿ ಇನ್ನಾದರೂ ಜಾಗೃತಿ ವಹಿಸಿ ಹಾವುಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ

  • ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

    ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

    ಬಾಗಲಕೋಟೆ: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿದಿದ್ದ ಉರಗ ರಕ್ಷರೊಬ್ಬರು ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಮೀಪ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.

    30 ವರ್ಷ ಪ್ರಾಯದ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿ. ಬುಧವಾರ ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು. ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಕಚ್ಚಿತ್ತು. ಬಳಿಕ ಸದಾಶಿವ ಅವರು ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಹಾವಿನ ವಿಷ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಸದಾಶಿವ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕೆಲಸದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾಶಿವ ಅವರ ತಂದೆಯೂ ಹಾವು ಹಿಡಿಯುದರಲ್ಲಿ ನಿಸ್ಸಿಮರಾಗಿದ್ದರು. ಹೀಗಾಗಿ ತಂದೆಯಂತೆ ಮಗ ಸದಾಶಿವ ಅವರು ಕೂಡ ಊರಿಗೆ, ಕೆಲ ಮನೆಗಳಿಗೆ ಆಗಮಿಸುತ್ತಿದ್ದ ನಾನಾ ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಗರಹಾವಿಗೆ ಮುತ್ತಿಡಲು ಹೋಗಿ 100 ವಿಷಕಾರಿ ಹಾವು ಹಿಡಿದ ಉರಗ ರಕ್ಷಕ ಸಾವು!

    ಮುಂಬೈ: ಅನೇಕ ಸಂದಂರ್ಭಗಳಲ್ಲಿ ಹಾವು ಕಾಣಿಸಿಕೊಂಡಾಗ ಉರಗ ತಜ್ಞರು ಬಂದು ಬೇರೆಯವರ ಪ್ರಾಣ ಕಾಪಾಡಿದ್ದಾರೆ. ಆದ್ರೆ ಮುಂಬೈನಲ್ಲಿ ಉರಗ ರಕ್ಷಕರೊಬ್ಬರು ತಾವೇ ರಕ್ಷಿಸಿದ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

    ಫೆಬ್ರವರಿ 1ರಂದು ಮುಂಬೈನ ಉರಗ ರಕ್ಷಕ ಸೋಮನಾಥ್ ನಾಗರಹಾವೊಂದನ್ನು ರಕ್ಷಿಸಿದ್ದರು. ಹವಿನೊಂದಿಗೆ ಫೋಟೋ ತೆಗಿಸಿಕೊಳ್ಳುವಾಗ ಅದರ ನೆತ್ತಿಗೆ ಮುತ್ತು ಕೊಡಲು ಮುಂದಾಗಿದ್ದರು. ಈ ವೇಳೆ ಹಾವು ಹಿಂದೆ ತಿರುಗಿ ಸೋಮನಾಥ್‍ಗೆ ಕಚ್ಚಿ ಸಾವನ್ನಪ್ಪಿದ್ದಾರೆ.

    ನವೀ ಮುಂಬೈನ ಸಿಬಿಡಿ ಬಲೇಪುರ್ ನಿವಾಸಿಯಾದ ಸೋಮನಾಥ್, ಅಂದು ಕಾರ್‍ವೊಂದರಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ರಕ್ಷಿಸಲು ಹೋಗಿದ್ದರು. ಕಾರಿನಿಂದ ಹಾವನ್ನು ರಕ್ಷಿಸಿ ಬೇರೆಡೆಗೆ ಅದನ್ನು ತೆಗೆದುಕಂಡು ಹೋಗಿದ್ದರು. ಅಲ್ಲಿ ಸೋಮನಾಥ್ ಹಾವಿನ ನೆತ್ತಿಗೆ ಮುತ್ತು ಕೊಡಲು ಪ್ರಯತ್ನಿಸಿದ್ದರು. ಆದ್ರೆ ಇದ್ದಕ್ಕಿದ್ದಂತೆ ಹಾವು ಹಿಂದೆ ತಿರುಗಿ ಸೋಮನಾಥ್ ಅವರ ಎದೆಗೆ ಕಚ್ಚಿತ್ತು. ನಂತರ ಅವರನ್ನು 5 ದಿನಗಳವರೆಗೆ ನವೀ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆಂದು ಮತ್ತೊಬ್ಬ ಉರಗ ರಕ್ಷಕರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಸೋಮನಾಥ್ ಈ ಹಿಂದೆ ಸುಮಾರು 100 ವಿಷಕಾರಿ ಹಾವುಗಳನ್ನ ರಕ್ಷಿಸಿದ್ದರು.

    ಕಳೆದ 12 ವರ್ಷಗಳಲ್ಲಿ ಹಾವಿಗೆ ಮುತ್ತು ಕೊಡುವ ಸ್ಟಂಟ್ ಮಾಡಲು ಹೋಗಿ ಸತ್ತವರಲ್ಲಿ ಸೋಮನಾಥ್ 31ನೇ ಯವರು ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಾಗರಹಾವಿನಿಂದ ಕಚ್ಚಿಸಿಕೊಂಡು ಈವರೆಗೆ 22 ಉರಗ ರಕ್ಷಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.