Tag: ಉಯ್ಯಾಲೆ

  • ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ದುರ್ಮರಣ

    ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ದುರ್ಮರಣ

    ಮಂಗಳೂರು: ಮನೆಯಲ್ಲಿ ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕನೊಬ್ಬ ದುರ್ಮರಣಕ್ಕೀಡಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ದಿಡುಪೆಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಶ್ರೀಷಾ(14) ಎಂದು ಗುರುತಿಸಲಾಗಿದ್ದು, ಈತ 8 ನೇ ತರಗತಿಯಲ್ಲಿ ಓದುತ್ತಿದ್ದನು. ಭಾನುವಾರ ರಜೆ ಇದ್ದಿದ್ದರಿಂದ ಬಾಲಕ ಮನೆ ಅಂಗಳದಲ್ಲಿ ಸೀರೆಯಲ್ಲಿ ಮಾಡಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದನು. ಇದನ್ನೂ ಓದಿ: ಕೊಪ್ಪಳದಲ್ಲಿ ಪೋಲಿ ಹುಡುಗರ ಹಾವಳಿ- ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ಅಶ್ಲೀಲ ಬರಹ

    ಹೀಗೆ ಆಟವಾಡುತ್ತಿದ್ದಾಗ ಸೀರೆ ಆಕಸ್ಮಿಕವಾಗಿ ಶ್ರೀಷಾ ಕುತ್ತಿಗೆಗೆ ಬಿಗಿದಿದೆ. ಪರಿಣಾಮ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮಲೀಲಾ ಜಾತ್ರೆಯಲ್ಲಿ ಉಯ್ಯಾಲೆ ಮುರಿದು 5 ಮಂದಿಗೆ ಗಾಯ

    ರಾಮಲೀಲಾ ಜಾತ್ರೆಯಲ್ಲಿ ಉಯ್ಯಾಲೆ ಮುರಿದು 5 ಮಂದಿಗೆ ಗಾಯ

    ಲಕ್ನೋ: ಗಾಜಿಯಾಬಾದ್‍ನಲ್ಲಿ (Ghaziabad) ನಡೆದ ರಾಮಲೀಲಾ ಜಾತ್ರೆಯಲ್ಲಿ (Ramleela Fair) ಉಯ್ಯಾಲೆ ಮುರಿದು ಬಿದ್ದು, ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಐವರು ಗಾಯಗೊಂಡಿದ್ದಾರೆ.

    ಬ್ರೇಕ್ ಡ್ಯಾನ್ಸ್ (Break Dance)ಎಂದು ಕರೆಯಲಾಗುವ ಉಯ್ಯಾಲೆಯೊಂದು ಮುರಿದು ದಾರಿ ಮಧ್ಯೆ ಪಲ್ಟಿಯಾದ ಪರಿಣಾಮ ಈ ಘಟನೆ ಜರುಗಿದೆ. ಘಟನೆ ವೇಳೆ ಸುಮಾರು 10 ಜನರು ಉಯ್ಯಾಲೆಯಲ್ಲಿ ಸವಾರಿ ಮಾಡುತ್ತಿದ್ದರು. ಇದನ್ನೂ ಓದಿ: ಎಣ್ಣೆ ನಶೆಯಲ್ಲಿ ಕಾರ್‌ ಚಾಲಕನ ಅವಾಂತರ – ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಭೂಪ

    ವೀಡಿಯೋದಲ್ಲಿ ಸ್ವಿಂಗ್ ಜೋರಾಗಿ ಸುತ್ತುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಒಂದು ಉಯ್ಯಾಲೆ ಮುರಿದು ಕೆಳಗುರುಳಿ ಬಿದ್ದಿದೆ. ಈ ವೇಳೆ ಉಯ್ಯಾಲೆಯಲ್ಲಿದ್ದ ಕೆಲವರು ಕೆಳಗೆ ಬಿದ್ದಿರುವುದನ್ನು ಕಾಣಬಹುದಾಗಿದೆ. ಇದರಿಂದ ಜಾತ್ರೆಯಲ್ಲಿ ನೂಕುನುಗ್ಗಲು ಉಂಟಾಯಿತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

    ಗಾಜಿಯಾಬಾದ್ ಆಡಳಿತ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ನಗರದ ಮ್ಯಾಜಿಸ್ಟ್ರೇಟ್ ಪ್ರಕಾರ, ಮನರಂಜನಾ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ತನಿಖೆಯ ನಂತರ ಜಾತ್ರೆಯಲ್ಲಿ ಉಯ್ಯಾಲೆ ನಡೆಸಲು ಅನುಮತಿ ನೀಡಿವೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ಇದು ಕಾಂಗ್ರೆಸ್‍ನ ಕೊನೆಯ ಯಾತ್ರೆ: ಆನಂದ್ ಸಿಂಗ್ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

  • ಉಯ್ಯಾಲೆ ಹಗ್ಗಕ್ಕೆ ಸಿಲುಕಿ 8ರ ಬಾಲಕ ಸಾವು

    ಉಯ್ಯಾಲೆ ಹಗ್ಗಕ್ಕೆ ಸಿಲುಕಿ 8ರ ಬಾಲಕ ಸಾವು

    ಲಕ್ನೋ: ಉಯ್ಯಾಲೆಯ ಹಗ್ಗಕ್ಕೆ ಸಿಲುಕಿ ಎಂಟು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಸ್ರೇಹಿ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಅರ್ಜುನ್ ಎಂದು ಗುರುತಿಸಲಾಗಿದೆ. ಅರ್ಜುನ್ ಮನೆಯ ಕೊಠಡಿಯೊಂದರಲ್ಲಿ ಹಗ್ಗದಲ್ಲಿ ಉಯ್ಯಾಲೆ ಮಾಡಿಕೊಂಡು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಎಸ್‍ಎಚ್‍ಒ ಉಮಾಕಾಂತ್ ಓಜಾ ತಿಳಿಸಿದ್ದಾರೆ. ಇದನ್ನೂ ಓದಿ: ತಲೆ ಮೇಲೆ ಮದ್ಯದ ಬಾಟಲಿ ಹಿಡಿದು ನಡುರಸ್ತೆಯಲ್ಲಿ ಆಂಟಿ ಡ್ಯಾನ್ಸ್..!

    crime

    ಅರ್ಜುನ್ ಕೊಠಡಿಯಲ್ಲಿ ಕೆಲವು ಗೋಧಿ ಚೀಲಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ನಂತರ ಅದರ ಮೇಲೆ ನಿಂತು ಫ್ಯಾನ್‍ಗೆ ಹಗ್ಗವನ್ನು ನೇತು ಹಾಕಿದ್ದಾನೆ. ಬಳಿಕ ತೂಗಾಡಲು ಆರಂಭಿಸಿದಾಗ, ಕೆಳಗೆ ಇದ್ದ ಗೋಣಿಚೀಲಗಳು ಚೆಲ್ಲಾಪಿಲ್ಲಿಯಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಾಲಕನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

    ನಂತರ ನೇಣು ಬಿಗಿದಂತೆ ಪತ್ತೆಯಾದ ಬಾಲಕನನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದೀಗ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಇದನ್ನೂ ಓದಿ: 20 ವರ್ಷದ ಹುಡುಗಿ ಅಂತ 50ರ ಆಂಟಿ ತುಂಟಾಟ – ಚಾಟ್ ಮಾಡಿ ಮೋಸ ಹೋದ ಯುವಕ

  • ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Photoshoot

    ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ ಸ್ಟೈಲ್ ಮಾಡಿಸಿಕೊಂಡು ತೂಗಾಡುವ ಉಯ್ಯಾಲೆಯ ಮೇಲೆ ಕುಳಿತುಕೊಂಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪ್ರಾಕೃತಿಕ ವಿಕೋಪಕ್ಕೆ ಚೆನ್ನೈ ತತ್ತರ – ಹಿಂದಿಗಿಂತ 5.5 ಪಟ್ಟು ಹೆಚ್ಚು ಮಳೆ

    ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.

  • ಸೀರೆ ಉಯ್ಯಾಲೆ ತಂದ ಆಪತ್ತು- ಬಾಲಕಿ ಸಾವು, ಮತ್ತೋರ್ವಳ ಸ್ಥಿತಿ ಗಂಭೀರ

    ಸೀರೆ ಉಯ್ಯಾಲೆ ತಂದ ಆಪತ್ತು- ಬಾಲಕಿ ಸಾವು, ಮತ್ತೋರ್ವಳ ಸ್ಥಿತಿ ಗಂಭೀರ

    ಕೋಲಾರ: ಸೀರೆಯಲ್ಲಿ ಉಯ್ಯಾಲೆ ಮಾಡಿಕೊಂಡು ಆಡುತ್ತಿದ್ದ ಇಬ್ಬರು ಬಾಲಕಿಯರು ಸೀರೆ ಊಯ್ಯಾಲೆ ಸುತ್ಯಿಕೊಂಡು ಒಬ್ಬಳು ಸಾವನ್ನಪ್ಪಿ, ಮತ್ತೊಬ್ಬಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಮೇಘನಾ (12) ಮೃತಳಾಗಿದ್ದಾಳೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಪೆದ್ದೂರು ಗ್ರಾಮದಲ್ಲಿಂದು ಸಂಜೆ ಈ ಘಟನೆ ನಡೆದಿದ್ದು, ಇನ್ನೊಬ್ಬ ಬಾಲಕಿಯನ್ನು ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ದೇವಿಶ್ರೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಪೆದ್ದೂರು ಗ್ರಾಮದ ಮೃತ ಮೇಘನಾ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ಸೋಮಪ್ಪ ಎಂಬುವವರ ಮಗಳಾದ ದೇವಿಶ್ರೀ ಪೆದ್ದೂರು ಗ್ರಾಮದ ತಮ್ಮ ತಾತ ಚಂಗಲರಾಯಪ್ಪ ಮತ್ತು ಅಜ್ಜಿ ಲಕ್ಷ್ಮಮ್ಮ ಮನೆಯಲ್ಲಿ ಇದ್ದುಕೊಂಡು ನಂಗಲಿ ಆರ್.ಎಂ.ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆರನೆಯ ತರಗತಿ ಓದುತ್ತಿದ್ದರು. ಕೊರೊನಾ ಲಾಕ್‍ಡೌನ್ ನಿಂದ ಶಾಲೆ ಇಲ್ಲದ ಹಿನ್ನೆಲೆ ಮೇಘನಾ ಮನೆಯ ಚಾವಣಿಯ ಕಬ್ಬಿಣದ ಕೊಂಡಿಗಳಿಗೆ ಎರಡು ಸೀರೆಗಳನ್ನು ಪಕ್ಕ ಪಕ್ಕದಲ್ಲಿ ಉಯ್ಯಾಲೆಯಾಗಿ ಮಾಡಿಕೊಂಡು ಆಡುತ್ತಿದ್ದಾಗ ಎರಡೂ ಸೀರೆಗಳು ಆಕಸ್ಮಿಕವಾಗಿ ಒಂದಾಗಿ ಎರಡೂ ಒಂದರಲ್ಲಿ ಸುತ್ತಿಕೊಂಡಿವೆ. ಇದನ್ನೂ ಓದಿ: ಎಎಪಿ ಮಾನಸಿಕ ಕಿರುಕುಳ ನೀಡುತ್ತಿದೆ- ಕಟ್ಟಡ ಮಾಲೀಕ ಆರೋಪ

    ಒಂದು ಸೀರೆಯ ಉಯ್ಯಾಲೆಯಲ್ಲಿದ್ದ ಮೇಘನಾ ಕತ್ತಿಗೆ ಗಟ್ಟಿಯಾಗಿ ಸುತ್ತಿಕೊಂಡು ಉಸಿರು ಕಟ್ಟಿಕೊಂಡು ಸಾವನ್ನಪ್ಪಿದ್ದಾಳೆ. ಮತ್ತೊಂದು ಸೀರೆಯಲ್ಲಿ ದೇವಿಶ್ರೀ ಕತ್ತಿಗೆ ಸೀರೆ ಸುತ್ತಿಕೊಂಡು ಕಿರುಚಾಡುತ್ತಿದ್ದಾಗ ಮನೆಯಲ್ಲಿದ್ದ ಅಜ್ಜಿ ಮತ್ತು ತಾತಾ ಬಂದು ಸೀರೆಯನ್ನು ಬಿಡಿಸಿದ್ದಾರೆ. ದೇವಿಶ್ರೀ ಉಸಿರಾಟದಲ್ಲಿ ತೊಂದರೆಯಾಗಿ ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ. ಮೇಘನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ಜೋಕಾಲಿ ಆಡಲು ಹೋಗಿ ಬಾಲಕಿ ದುರ್ಮರಣ

    ಜೋಕಾಲಿ ಆಡಲು ಹೋಗಿ ಬಾಲಕಿ ದುರ್ಮರಣ

    ಚಿಕ್ಕಮಗಳೂರು: ಜೋಕಾಲಿ ಆಡಲು ಹೋಗಿ ಬಾಲಕಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ನಡೆದಿದೆ.

    ನಿಸರ್ಗ (9) ಮೃತ ಬಾಲಕಿ. ನಿಸರ್ಗ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದಳು. ಸಂಜೆ ವೇಳೆ ಸೀರೆಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಡುವಾಡುತ್ತಿದ್ದಳು.

    ಈ ವೇಳೆ ಬಾಲಕಿಯ ಕತ್ತಿಗೆ ಸೀರೆ ಸುತ್ತಿಕೊಂಡಿದೆ. ಪರಿಣಾಮ ನಿಸರ್ಗ ಕುತ್ತಿಗೆ ಬಿಗಿದು ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ತಕ್ಷಣ ಮನೆಯವರು ಸೀರೆ ಬಿಡಿಸಲು ಮುಂದಾಗಿದ್ದು, ಬಾಲಕಿಯನ್ನು ಕಾಪಾಡಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು.

    ಈ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಉಯ್ಯಾಲೆ ಆಡುತ್ತಿದ್ದಾಗ ಹಗ್ಗಕ್ಕೆ ಬಾಲಕನ ಕುತ್ತಿಗೆ ಸಿಕ್ಕಿಕೊಂಡು ಸಾವು!

    ಉಯ್ಯಾಲೆ ಆಡುತ್ತಿದ್ದಾಗ ಹಗ್ಗಕ್ಕೆ ಬಾಲಕನ ಕುತ್ತಿಗೆ ಸಿಕ್ಕಿಕೊಂಡು ಸಾವು!

    ಮಡಿಕೇರಿ: ಉಯ್ಯಾಲೆ ಆಡುತ್ತಿದ್ದ ವೇಳೆ ಕುತ್ತಿಗೆ ಹಗ್ಗ ಸಿಕ್ಕಿಹಾಕಿಕೊಂಡು ಬಾಲಕನೊಬ್ಬನ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಉಲುಗುಲಿ ತೋಟದಲ್ಲಿ ನಡೆದಿದೆ.

    ಉಲುಗುಲಿ ತೋಟದಲ್ಲಿರುವ ಶೇಖರ್ ಎನ್ನುವವರ ಮಗ ಪ್ರವೀಣ್ (11) ಮೃತ ದುರ್ದೈವಿ. ಪ್ರವೀಣ್ ಗದ್ದೆಹಳ್ಳ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಶಾಲೆಗೆ ಹೋಗದೇ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ. ಸಂಜೆ 4.30ರ ವೇಳೆಗೆ ಮನೆಯ ಮುಂದಿನ ಸೀಬೆಕಾಯಿ ಮರಕ್ಕೆ ಕಟ್ಟಿದ್ದ ಉಯ್ಯಾಲೆಯಲ್ಲಿ ಆಡುತ್ತಿದ್ದನು.

    ಆಡುತ್ತಿದ್ದಾಗ ಹೇಗೋ ಉಯ್ಯಾಲೆ ಹಗ್ಗಕ್ಕೆ ಕುತ್ತಿಗೆ ಸಿಲುಕಿಕೊಂಡಿದೆ. ಪರಿಣಾಮ ಬಾಲಕ ಹಗ್ಗದಿಂದ ಹೊರಬರಲಾಗದೇ ಉಸಿರುಗಟ್ಟಿ ಪ್ರವೀಣ್ ಮೃತಪಟ್ಟಿದ್ದಾನೆ. ತೋಟದ ಕೆಲಸ ಮುಗಿಸಿ, ಪೋಷಕರು ಮನೆಗೆ ಮರಳಿದಾಗ ಪ್ರವೀಣ್ ನೋಡಿದಾಗಲೇ ವಿಚಾರ ಗೊತ್ತಾಗಿದೆ.

    ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸುಂಟಿಕೊಪ್ಪ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯ ಹೊರಬಂದಿದ್ದು, ಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv