Tag: ಉಮೇಶ್ ಬಣಕಾರ್

  • ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ: ಉಮೇಶ್ ಬಣಕಾರ್

    ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ: ಉಮೇಶ್ ಬಣಕಾರ್

    ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ (Darshan) ಅವರ ರಾಜಾತಿಥ್ಯ ವಿವಾದದ ಬಗ್ಗೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ರಿಯಾಕ್ಷನ್ ಕೊಟ್ಟಿದ್ದಾರೆ. ಜೈಲಿನಲ್ಲಿ ದರ್ಶನ್ ಸಿಗರೇಟ್ ಸೇದಿದ್ದು ಸರಿ ಅಂತ ಸಮರ್ಥನೆ ಮಾಡಿಕೊಳ್ತಿಲ್ಲ. ಆದರೆ ಮೂಲ ವ್ಯವಸ್ಥೆಯನ್ನೇ ಸರಿ ಮಾಡಬೇಕಿತ್ತು ಎಂದು ಉಮೇಶ್ ಬಣಕಾರ್ ಮಾತನಾಡಿದ್ದಾರೆ. ಇದನ್ನೂ ಓದಿ:ಸುದೀಪ್‌ರನ್ನು ಭೇಟಿಯಾದ ನ್ಯಾಚುರಲ್‌ ಸ್ಟಾರ್‌ ನಾನಿ

    ದರ್ಶನ್ ಈಗ ಆರೋಪಿ, ಅಪರಾಧಿಯಲ್ಲ. ಇನ್ನೂ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರಕ್ಕೆ ಬಂದರೆ ಟೀ ಕುಡಿಯುತ್ತಿದ್ದರು. ಸಿಗರೇಟ್ ಸೇದುತ್ತಿದ್ದರು. ರೌಡಿಗಳ ಜೊತೆ ಕುಳಿತಿದ್ದರು ಎನ್ನುವ ಕಾರಣಕ್ಕೆ ಸ್ಥಳಾಂತರ ಮಾಡ್ತಿದ್ದಾರೆ ಅಂದರೆ ಅದು ತಪ್ಪು ಎಂದಿದ್ದಾರೆ. ರಾಜಾತಿಥ್ಯ ಈಗಷ್ಟೇ ಅಲ್ಲ, ಈ ಮೊದಲು ಕೂಡ ಹಲವು ವಿಐಪಿಗಳು ಜೈಲು ಸೇರಿದಾಗ ನಡೆದಿದೆ. ದರ್ಶನ್ ಒಳಗಡೆ ಸಿಗರೇಟ್ ಸೇದಿದ್ದು, ಸರಿ ಅಂತ ಸಮರ್ಥನೆ ಮಾಡಿಕೊಳ್ತಿಲ್ಲ. ಆದರೆ ಮೂಲ ವ್ಯವಸ್ಥೆಯನ್ನೇ ಸರಿ ಮಾಡಬೇಕಿತ್ತು ಎಂದರು.

    ಸೆಲೆಬ್ರಿಟಿ ಅಂತಾ ಅಂದಾಗ ಅಲ್ಲಿರೋರು ಬಂದು ಅವರನ್ನು ಮಾತನಾಡಿಸ್ತಾ ಇರುತ್ತಾರೆ. ಆದರೆ ರೌಡಿಗಳ ಜೊತೆ ಲಿಂಕ್ ಮಾಡೋದು ಸರಿಯಲ್ಲ. ದರ್ಶನ್ ಈಗ ಈ ಪರಿಸ್ಥಿತಿಯಲ್ಲಿದ್ದಾಗ ಯಾವ ರೀತಿ ಇರಬೇಕು ಅಂತ ಯೋಚನೆ ಮಾಡಬೇಕಿತ್ತು. ಇದನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದರೆ ದರ್ಶನ್‌ಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ. ಇನ್ನೂ ಮನಃ ಪರಿವರ್ತನೆ ಅನ್ನೋದು ಇಂತಿಷ್ಟು ದಿನದಲ್ಲಿ ಆಗುವಂತದ್ದಲ್ಲ. ಅದಕ್ಕೂ ಸಮಯ ಬೇಕಾಗುತ್ತದೆ. ದರ್ಶನ್ ಚಿತ್ರರಂಗದವರು ಅಂತ ವಹಿಸಿಕೊಂಡು ಮಾತನಾಡುತ್ತಿಲ್ಲ. ಪಶ್ಚಾತ್ತಾಪ ಭಾವನೆ ಒಂದು ಫೋಟೋ ನೋಡಿ ಹೇಳೋಕೆ ಆಗಲ್ಲ. ಮಾನಸಿಕವಾಗಿ ಪಶ್ಚಾತ್ತಾಪ ಆಗಿರಬಹುದು. ಬದಲಾವಣೆ ಜಗದ ನಿಯಮ ಕಾದುನೋಡೋಣ ಎಂದಿದ್ದಾರೆ.

    ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ. ಇನ್ನೂ ದರ್ಶನ್‌ಗೆ ದುಡ್ಡಿಲ್ಲದೇ ಇರುವ ದಿನಗಳನ್ನ ನಾವು ನೋಡಿದ್ದೀವಿ. ಇನ್ನೂ ದೈಹಿಕವಾಗಿ ಸೊರಗಿಲ್ಲ. ಆದರೆ ಕುಗ್ಗಿಲ್ಲ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ದರ್ಶನ್ ಕುರಿತು ಮಾತನಾಡಿದ್ದಾರೆ. ಇನ್ನೂ ರೇಣುಕಾಸ್ವಾಮಿ ಸ್ವಾಮಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಅವರಲ್ಲಿ ಕ್ಷಮೆ ಕೇಳಿ ಬಂದಿದ್ದೇವೆ. ಅವರ ಕುಟುಂಬಸ್ಥರನ್ನ ನೋಡಿದ್ರೆ ಬೇಸರ ಆಗುತ್ತದೆ ಎಂದಿದ್ದಾರೆ. ಇನ್ನೂ ಪವಿತ್ರಾ ಗೌಡ ವಿಚಾರದಲ್ಲಿ ಏನಾಗಿದೆ ಅನ್ನೋದನ್ನು ಕಾನೂನು ನೋಡಿಕೊಳ್ಳುತ್ತದೆ. ಇನ್ನೂ ಕೊಲೆ ಮಾಡಿ ಅಂತಾ ಪವಿತ್ರಾ ಹೇಳುವ ಮಟ್ಟಿಗೆ ಇರೋಲ್ಲ. ಏನೋ ಬುದ್ಧಿ ಕಲಿಸಿ ಅಂತ ಹೇಳಿರಬಹುದು. ಬುದ್ಧಿ ಕಲಿಸುವ ಆತುರದಲ್ಲಿ ಈ ಘಟನೆ ನಡೆದಿರಬಹುದು ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.

  • ನಿರ್ಮಾಪಕ ಕುಮಾರ್ ವಿರುದ್ದ ಸುದೀಪ್ ನೋಟಿಸ್: ನಿರ್ಮಾಪಕರ ಸಂಘದ ಪ್ರತಿಕ್ರಿಯೆ ಏನು?

    ನಿರ್ಮಾಪಕ ಕುಮಾರ್ ವಿರುದ್ದ ಸುದೀಪ್ ನೋಟಿಸ್: ನಿರ್ಮಾಪಕರ ಸಂಘದ ಪ್ರತಿಕ್ರಿಯೆ ಏನು?

    ಟ ಕಿಚ್ಚ ಸುದೀಪ್ (Sudeep) ತಮಗೆ ಕಾಲ್ ಶೀಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ನಿರ್ಮಾಪಕ ಎಮ್.ಎನ್. ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಅಡ್ವಾನ್ಸ್ ಪಡೆದುಕೊಂಡಿರುವ ಸುದೀಪ್, ಈವರೆಗೂ ನಮಗೆ ಕಾಲ್ ಶೀಟ್ ಕೊಡದೇ ಆಟವಾಡಿಸುತ್ತಿದ್ದಾರೆ. ಪರಭಾಷೆಯ ನಿರ್ಮಾಪಕರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕುಮಾರ್ ಆರೋಪ ಮಾಡಿದ್ದರು.

    ಈ ಆರೋಪಕ್ಕೆ ತಿರುಗೇಟು ನೀಡಿದ್ದ ಕಿಚ್ಚ ಸುದೀಪ್, ತಮ್ಮ ಮೇಲೆ ಆರೋ ಮಾಡಿದ ಕುಮಾರ್ ವಿರುದ್ಧ ಇಂದು ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ತಿಳಿಸಿದ್ದರು. ಲಾಯರ್ ನೋಟಿಸ್  (Notice)ಕೂಡ ನೀಡಿದ್ದರು. ಕುಮಾರ್ ಮೇಲೆ ಮಾತ್ರವಲ್ಲ, ಮತ್ತೋರ್ವ ನಿರ್ಮಾಪಕ ಎಮ್.ಎನ್ ಸುರೇಶ್  (M.N. Suresh)ಅವರಿಗೂ ಕಿಚ್ಚ ನೋಟಿಸ್ ಕಳುಹಿಸಿದ್ದರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ವಂಚನೆ ಆರೋಪ ಮಾಡಿದ್ದ ಇಬ್ಬರು ನಿರ್ಮಾಪಕರಿಗೆ ನೋಟಿಸ್ ನೀಡಿರೋ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘವು (Producers Association) ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಈ ಬಗ್ಗೆ ಈಗಾಗಲೇ ನಿರ್ಮಾಪಕ ಸಂಘಧ ಕಛೇರಿಯಲ್ಲಿ ಸಭೆ ನಡೆಯುತ್ತಿದ್ದು, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕರ್ (Umesh Bankar) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ನಿರ್ಮಾಪಕರ ಸಂಘದಲ್ಲಿ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ ಸುದೀಪ್ ವಿರುದ್ಧ ಆರೋಪ ಮಾಡಿದ್ದ ಎಂ.ಎನ್ ಕುಮಾರ್ (M.N. Kumar), ಎಂ.ಎನ್ ಸುರೇಶ್ ಕೂಡ ಭಾಗಿಯಾಗಿದ್ದಾರೆ. ತಮಗೆ ಸುದೀಪ್ ನೀಡಿರುವ ನೋಟಿಸ್ ಬಗ್ಗೆ ಸಭೆಯಲ್ಲಿ ಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ನಡೆ ಬಗ್ಗೆ ಸಭೆಯ ತೀರ್ಮಾನದ ಬಳಿಕ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಚೇತನ್ ವಿರುದ್ಧ ಸಿಡಿದೆದ್ದ ಚಿತ್ರರಂಗ : ಸರಿ ಹೋಗದಿದ್ದರೆ ಅಸಹಕಾರ

    ನಟ ಚೇತನ್ ವಿರುದ್ಧ ಸಿಡಿದೆದ್ದ ಚಿತ್ರರಂಗ : ಸರಿ ಹೋಗದಿದ್ದರೆ ಅಸಹಕಾರ

    ದಿನಗಳು ಖ್ಯಾತಿಯ ನಟ, ಸಾಮಾಜಿಕ ಹೋರಾಟಗಾರ ನಟ ಚೇತನ್ (Chetan) ವಿರುದ್ಧ ಚಿತ್ರರಂಗ ಸಿಡಿದೆದ್ದಿದೆ. ಚಿತ್ರರಂಗದ ವಿರುದ್ಧ ಮಾತನಾಡುತ್ತಾ ಬಂದಿರುವ ಚೇತನ್ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದೆ. ಈಗಾಗಲೇ ಹಲವಾರು ಬಾರಿ ಚಿತ್ರೋದ್ಯಮದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಚೇತನ್, ಆಗಾಗ್ಗೆ ಅದನ್ನು ಮುಂದುವರೆಸುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಅಂಬರೀಶ್ (Ambarish) ಸ್ಮಾರಕ ವಿಚಾರವಾಗಿ ವ್ಯಂಗ್ಯವಾಗಿ ಚೇತನ್ ಟ್ವೀಟ್ ಮಾಡಿದ್ದರು. ಈ ಹಿಂದೆಯೂ ಪುನೀತ್ ರಾಜ್ ಕುಮಾರ್ ಸ್ಮಾರಕ ವಿಚಾರವಾಗಿಯೂ ಅವರು ಮಾತನಾಡಿದ್ದರು.

    ಕಲಾವಿದರ ಸಂಘ ಸೇರಿದಂತೆ ಹಲವು ಅಂಗ ಸಂಸ್ಥೆಗಳು ಚೇತನ್ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿಯಲ್ಲಿ ಸುದ್ದಿಗೋಷ್ಠಿ ಆಯೋಜನೆಯಾಗಿತ್ತು. ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಚೇಂಬರ್ ಅಧ್ಯಕ್ಷ ಭಾಮ‌ ಹರೀಶ್ (Bha.Ma.Harish), ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (Umesh Bankar) ಹಾಗೂ ಪದಾಧಿಕಾರಿಗಳು ಚೇತನ್ ವಿರುದ್ಧದ ಕ್ರಮಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

    ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ. ಮಾ. ಹರೀಶ್ ಮಾತನಾಡಿ, ‘ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಟ್ಟು ಇತ್ತಿಚೆಗೆ ಉದ್ಘಾಟನೆ ಆಗಿದೆ. ಇದರ ವಿರುದ್ಧ ನಟ ಚೇತನ್ ಮಾತನಾಡಿದ್ದಾರೆ. ಉದ್ಘಾಟನೆ ಇಡೀ ಇಂಡಸ್ಟ್ರಿಯ ಒತ್ತಾಯ ಆಗಿತ್ತು. ಎಲ್ಲರೂ ಅದನ್ನು ಸುಲಲಿತವಾಗಿ ನಡೆಸಿಕೊಟ್ಟರು. ನಮ್ಮ ಕುಟುಂಬದಲ್ಲಿಯೇ ಆಗಾಗ ಗೊಂದಲ ಆಗುತ್ತೆ. ಚೇತನ್ ಮುಜುಗರವಾಗುವಂತ ಹೇಳಿಕೆ ನೀಡುತ್ತಾ ಇರುತ್ತಾರೆ. ಅಂಬರೀಶ್ ಅವರ ವಿಚಾರದಲ್ಲಿ ಸ್ಮಾರಕ ನಿರ್ಮಾಣ ಕುಟುಂಬದ ಒತ್ತಾಯ ಅಂತ ಚೇತನ್ ಆರೋಪ ಮಾಡ್ತಾರೆ. ಆದರೆ ಅದು ಕುಟುಂಬದ ಒತ್ತಾಯ ಅಲ್ಲ ಇಂಡಸ್ಟ್ರಿಯದ್ದು ಆಗಿತ್ತು ಎಂದು ಚೇತನ್ ಗೆ ಈ ಮೂಲಕ ಹೇಳಲು ಬಯಸುತ್ತೇನೆ. ಇದು ಸುಮಲತಾ ಒತ್ತಾಯ ಅಲ್ಲ’ ಎಂದರು.

    Actor chetan (1)

    ಉಮೇಶ್ ಬಣಕಾರ ಮಾತನಾಡಿ, ‘ನಮ್ಮ ಚಿತ್ರರಂಗದ ವಿಚಾರಕ್ಕೆ ಅಂಬರೀಶ್ ತುಂಬಾ ಸ್ಪಂದಿಸಿದ್ದಾರೆ. ನಮ್ಮ ಕುಟುಂಬದಲ್ಲಿಯೇ ಇದ್ದುಕೊಂಡು ಆರೋಪ ಮಾಡಿದರೆ ನೋವಾಗುತ್ತೆ. ಅಣ್ಣಾವ್ರದ್ದೇ ಆಗಲಿ, ಅಂಬರೀಶ್,  ಅಪ್ಪು ಅವರದ್ದಾಗಲಿ ಕುಟುಂಬದವರ ಒತ್ತಾಯವಲ್ಲ. ಚೇತನ್ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯಾರು ಕೇಳದೆ ಇದ್ದರು ಹೇಳಿಕೆ ಕೊಡುತ್ತಿದ್ದಾರೆ. ನಿನ್ನೆಯೆಲ್ಲಾ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಜೊತೆ, ಕಲಾವಿದರ ಸಂಘದಲ್ಲೂ ಚರ್ಚೆ ಮಾಡಿದ್ದೇವೆ. ಆತನೂ ನಮ್ಮ ಚಿತ್ರರಂಗದ ವ್ಯಕ್ತಿಯೇ. ಹೀಗಾಗಿ ತಿಳಿ ಹೇಳಿ ಎಂಬ ಮಾತುಗಳು ಕೇಳಿ ಬಂದಿದೆ. ಬುದ್ದಿ ಹೇಳಿದಾಗಲೂ ಸರಿ ಹೋಗಲಿಲ್ಲ ಎಂದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಡೀ ಇಂಡಸ್ಟ್ರಿ ಆತನ ವಿರುದ್ಧ ಅಸಹಕಾರದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಬೇಕು ಎಂದುಕೊಂಡಿದ್ದೇವೆ’ ಎಂದರು.

    ಈ ಕುರಿತಾಗಿ ಚೇತನ್ ಅವರನ್ನು ಸಂಪರ್ಕಿಸಿ ಎಲ್ಲರೂ ಕೂತು ಅವರ ಜೊತೆ ಮಾತನಾಡುತ್ತೇವೆ. ಮಾತು ಕೇಳದೆ ಹೋದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ಮತ್ತೆ ಕೂತು ತೀರ್ಮಾನ ಮಾಡುತ್ತೇವೆ. ಈ ಹಿಂದೆ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿದ್ರು. ಅದು ಕೋರ್ಟ್ ನಲ್ಲಿ ಸುಳ್ಳು ಆಗಿದೆ. ಅರ್ಜುನ್ ಸರ್ಜಾ ಪರ ಜಯ ಸಿಕ್ಕಿದೆ. ಅದರ ಹಿಂದೆ ಯಾರೆಲ್ಲ ಇದ್ದರೂ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಎನ್ನುವ ಮಾತುಗಳೂ ಸುದ್ದಿಗೋಷ್ಠಿಯಲ್ಲಿ ಕೇಳಿ ಬಂದವು.

  • ಬೆಳ್ಳಿಪರದೆ ಮೇಲೆ ಬರಲಿದೆ ‘ಕೊರೊನಾ’

    ಬೆಳ್ಳಿಪರದೆ ಮೇಲೆ ಬರಲಿದೆ ‘ಕೊರೊನಾ’

    ಬೆಂಗಳೂರು: ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್‍ಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಈ ನಡುವೆ ಎಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೊನಾ ಕುರಿತಾಗಿ ಕನ್ನಡದಲ್ಲಿ ಸಿನಿಮಾ ಮಾಡಲು ಚಿತ್ರತಂಡವೊಂದು ಸಜ್ಜಾಗಿದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೇ ‘ಕೊರೊನಾ’ ಹೆಸರನ್ನು ನೊಂದಾಯಿಸಲು ಅರ್ಜಿ ಸಲ್ಲಿಸಲಾಗಿದೆ. ಫಿಲ್ಮ್ ಛೇಂಬರ್‍ನ ಉಪಾಧ್ಯಕ್ಷ, ನಿರ್ಮಾಪಕ ಉಮೇಶ್ ಬಣಕಾರ್ ಅವರು ತಾವು ಮಾಡಲು ಹೊರಟಿರುವ ಸಿನಿಮಾಗೆ ‘ಕೊರೊನಾ’ ಟೈಟಲ್ ನೊಂದಣಿಗೆ ಅರ್ಜಿ ಸಲ್ಲಿಸಿದ್ದು, ಈ ಹೆಸರು ರಿಜಿಸ್ಟರ್ ಆಗುವುದು ಬಹತೇಕ ಖಚಿತ ಎನ್ನಲಾಗುತ್ತಿದೆ.

    ಉಮೇಶ್ ಬಣಕಾರ್ ಅವರು ಈ ಚಿತ್ರವನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ‘ಕೊರೊನಾ’ ಹಾಗೂ ಹಿಂದಿಯಲ್ಲಿ ‘ಡೆಡ್ಲಿ ಕೊರೊನಾ’ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈಗಾಗಲೇ ಚಿತ್ರಕಥೆ ಬಗ್ಗೆ ಸಿನಿಮಾ ತಂಡ ಕೆಲಸ ಆರಂಭಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕನ್ನಡದಲ್ಲಿ ‘ಬಿಸಿರಕ್ತ’ ಸಿನಿಮಾ ನಿರ್ದೇಶಿಸಿದ್ದ ಶಿವಕುಮಾರ್ ಅವರು ‘ಕೊರೊನಾ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ನಿರ್ದೇಶಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಂಡ ಬಳಿಕ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    ಸದ್ಯ ಚಿತ್ರದ ಹೆಸರು ನೊದಣಿಗೆ ಚಿತ್ರತಂಡ ಅರ್ಜಿ ಸಲ್ಲಿಸಿದ್ದು, ಇನ್ನೂ ಚಿತ್ರದ ನಾಯಕ-ನಾಯಕಿ ಉಳಿದ ತಾರಾಗಣದಲ್ಲಿ ಯಾರ್ಯಾರು ಇರಲಿದ್ದಾರೆ ಎನ್ನುವ ಬಗ್ಗೆ ಅಂತಿಮವಾಗಿಲ್ಲ. ಹೀಗಾಗಿ ಚಿತ್ರಕಥೆ ಹಾಗೂ ತಾರಾಗಣ ಫೈನಲ್ ಆದ ಬಳಿಕ ಸಿನಿಮಾ ಸೆಟ್ಟೇರಲಿದೆ.

    ಈ ಹಿಂದೆ ಕೇರಳದಲ್ಲಿ ಆತಂಕ ಸೃಷ್ಟಿಸಿದ ನಿಫಾ ವೈರಸ್ ಬಗ್ಗೆ ಮಲೆಯಾಳಂ ನಲ್ಲಿ ‘ವೈರಸ್’ ಎಂದು ಸಿನಿಮಾ ತೆರೆಕಂಡಿತ್ತು. ‘ವೈರಸ್’ ಸಿನಿಮಾ ಅಭಿಮಾನಿಗಳ ಮನ ಗೆದ್ದಿದ್ದಲ್ಲದೇ ಹಲವು ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿತ್ತು. ವೈರಸ್ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಪಾರ್ವತಿ ತಿರುವೊತ್ತು, ಟೋವಿನೋ ಥಾಮಸ್, ರೇವತಿ, ಆಸಿಫ್ ಅಲಿ ಇತರರು ಕಾಣಿಸಿಕೊಂಡಿದ್ದರು. 2019ರ ಜೂನ್ 7ರಂದು ಈ ಚಿತ್ರ ಬಿಡುಗಡೆಗೊಂಡಿತ್ತು. ಚಿತ್ರಕ್ಕೆ ಆಶಿಕ್ ಅಬು ಆಕ್ಷನ್ ಕಟ್ ಹೇಳಿದ್ದರು.