Tag: ಉಮೇಶ್ ಕತ್ತಿ

  • ಎಂಟು ಬಾರಿ ಶಾಸಕನಾದವನು, ಸಿಎಂ ಆಗುವ ಯೋಗ್ಯತೆ ನನಗಿದೆ: ಸಚಿವ ಕತ್ತಿ

    ಎಂಟು ಬಾರಿ ಶಾಸಕನಾದವನು, ಸಿಎಂ ಆಗುವ ಯೋಗ್ಯತೆ ನನಗಿದೆ: ಸಚಿವ ಕತ್ತಿ

    ಧಾರವಾಡ: ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆದಲ್ಲಿ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಲಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅರವಿಂದ್ ಬೆಲ್ಲದ್, ಯತ್ನಾಳ್, ಮುರಗೇಶ್ ನಿರಾಣಿ ಹಾಗೂ ನಾನು ಸೇರಿದಂತೆ ಈ ನಾಲ್ವರಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು ಎಂದರು.

    ನಾನು 8 ಸಲ ಎಂಎಲ್‍ಎ ಆದವನು, 6 ಇಲಾಖೆ ನಿರ್ವಹಿಸಿದವನು, ನನಗೆ ಅನುಭವ ಚೆನ್ನಾಗಿದೆ, ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ, ಕಳಂಕ ರಹಿತ ಶಾಸಕನಾಗಿದ್ದೆನೆ ಎಂದರು. ಇದನ್ನೂ ಓದಿ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

    ಪಕ್ಷ ತೀರ್ಮಾನ ಮಾಡಿದರೆ ಸಿಎಂ ಆಗುವ ಆಸೆ ಇದೆ, ಸಿಎಂ ಆದ ಮೇಲೆ ಪ್ರಧಾನಿಯಾಗುವ ಅಸೆಯೂ ಇರುತ್ತದೆ ಎನ್ನುವ ಮೂಲಕ ತಾವು ಸಿಎಂ ಆಗಬೇಕು ಎನ್ನುವುದನ್ನು ಪುನರುಚ್ಛರಿಸಿದ ಅವರು, ಈಗ ಸದ್ಯಕ್ಕೆ ನಾವು ಅಖಂಡ ಕರ್ನಾಟಕದಲ್ಲಿ ಬದುಕಿದ್ದೇನೆ, ಹೀಗಾಗಿ ನಾನು ಅಖಂಡ ಕರ್ನಾಟಕ ಸಿಎಂ ಆಗುತ್ತೇನೆ. ಏನಾದರೂ ಉತ್ತರ ಕರ್ನಾಟಕ ತೊಂದರೆ ಆದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವೆ, ಉತ್ತರ ಕರ್ನಾಟಕಕ್ಕೆ ಆಗುವ ತೊಂದರೆ ಮುಂದುವರಿದರೆ ನಾನು ಮತ್ತೆ ಧ್ವನಿ ಎತ್ತುವೆ ಎಂದರು.

    ದಿನಾ ಬೆಳಗ್ಗೆ ಎದ್ದ ತಕ್ಷಣ ಉತ್ತರ ಕರ್ನಾಟಕ ಒಡೆಯಲು ಆಗುವುದಿಲ್ಲ. ತೊಂದರೆ ಆದಾಗ ಕೂಗು ಎಬ್ಬಿಸಬೇಕಾಗುತ್ತದೆ ಎಂದ ಅವರು, ಉತ್ತರ ಕರ್ನಾಟಕ ಒಡೆಯುವ ಉದ್ದೇಶ ನನಗಿಲ್ಲ. ಅಖಂಡ ಕರ್ನಾಟಕದಲ್ಲಿ ಬದುಕಬೇಕು, ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಸುಮಲತಾ ಬೇಬಿ ಬೆಟ್ಟಕ್ಕೆ ಬನ್ನಿ ಅಂದ್ರೆ ಬರುತ್ತೇನೆ: ಪುಟ್ಟರಾಜು

    ಅರವಿಂದ್ ಬೆಲ್ಲದ್ ಯಾಕೆ ಸಿಎಂ ಆಗಬಾರದು, ಅವರ ತಂದೆ ಶಾಸಕರಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಬೆಲ್ಲದ್ ಎರಡು ಸಲ ಶಾಸಕರಾಗಿದ್ದಾರೆ ಎಂದು ಉಮೇಶ್ ಕತ್ತಿ ಹೇಳಿದರು.

  • ಕೆರೆಗಳ ರಕ್ಷಣೆ ಮಾಡಿದರೆ, ಬಂಜರು ಜಮೀನು ಹಸಿರಿನಿಂದ ಕಂಗೊಳಿಸಲಿವೆ:ಉಮೇಶ್ ಕತ್ತಿ

    ಕೆರೆಗಳ ರಕ್ಷಣೆ ಮಾಡಿದರೆ, ಬಂಜರು ಜಮೀನು ಹಸಿರಿನಿಂದ ಕಂಗೊಳಿಸಲಿವೆ:ಉಮೇಶ್ ಕತ್ತಿ

    – ಪ್ರತಿ ರವಿವಾರ ತಪ್ಪದೇ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ

    ಚಿಕ್ಕೋಡಿ: ಕೆರೆಗಳ ಅಭಿವೃಧ್ಧಿ ಮಾಡಿದರೇ ಮಾತ್ರ ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಬಂಜರು ಜಮೀನು ಹಸಿರಿನಿಂದ ಕಂಗೊಳಿಸಲಿವೆ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

    ಕೆರೆಗಳ ಅಭಿವೃದ್ಧಿ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿ ಮತ ಕ್ಷೇತ್ರದ 28 ಕೆರೆಗಳನ್ನ ಅಭಿವೃದ್ದಿ ಪಡಿಸಿದ್ದಾರೆ. ಅಷ್ಟೆ ಅಲ್ಲದೇ ಪ್ರತಿ ರವಿವಾರ ತಮ್ಮ ಎಲ್ಲ ಕಾರ್ಯಗಳನ್ನು ಬದಿಗಿಟ್ಟು 14 ಕೆರೆಗಳ ವೀಕ್ಷಣೆ ಮಾಡುತ್ತಾರೆ.

    ರವಿವಾರ ಬೆಳಿಗ್ಗೆ 6 ಗಂಟೆಗೆ ಅಧಿಕಾರಿಗಳೊಂದಿಗೆ ವಿವಿಧ ಗ್ರಾಮಗಳಿಗೆ ತೆರಳಿ ಕೆರೆ ತುಂಬುವ ಯೋಜನೆ ಹಾಗೂ ಕೆರೆಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆಯುವದಷ್ಟೇ ಅಲ್ಲದೇ ಕೆರೆಗಳ ಅಭಿವೃದ್ಧಿಯಲ್ಲಿ ಯಾವುದೇ ಕುಂಠಿತವಾಗದಂತೆ ನಿಗಾವಹಿಸುತ್ತಾರೆ. ಹೀರಣ್ಯಕೇಶಿ ನದಿಯಿಂದ ಬೃಹತ್ ಪೈಪ್ ಲೈನ್ ಮೂಲಕ ಕರೆಗಳಿಗೆ ನೀರು ತುಂಬಿಸುವ ಯೋಜನೆಯನ್ನ ಯಶಸ್ವಿಯಾಗಿ ಕಾರ್ಯಗತಗೊಳಿಸಿ ಕೆರಗಳಿಗೆ ನೀರು ತುಂಬಿಸಲಾಗುತ್ತಿದೆ. ಸದ್ಯ ಈಗ ಕೆರೆಗಳ ಸುತ್ತ ವನ ನಿರ್ಮಾಣ ಮಾಡಲು ಮುಂದಾಗಿರುವ ಸಚಿವ ಉಮೇಶ ಕತ್ತಿ ಕೆರಗಳ ಸುತ್ತ ಮರಗಳನ್ನ ನೆಡುಸುತ್ತಿದ್ದಾರೆ. ಇದನ್ನೂ ಓದಿ:  ಕಸದಿಂದ ರಸ-ಮೊಟ್ಟೆ ಮೇಲೆ ವರ್ಣರಂಜಿತ ಚಿತ್ರ ಬಿಡಿಸಿದ ಬಾಲಕ

    ಇಂದು ಕೂಡ ಹುಕ್ಕೇರಿ ಮತ ಕ್ಷೇತ್ರದ ಕೆರೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೆರೆಗಳ ಅಭಿವೃಧ್ಧಿ ಮಾಡಿದರೇ ಮಾತ್ರ ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಹೀಗಾಗಿ ಕೆರೆಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈಗಾಗಲೇ ಹುಕ್ಕೇರಿ ಮತಕ್ಷೇತ್ರದಲ್ಲಿ 28 ಬೃಹತ್ ಕೆರೆಗಳನ್ನ ಅಭಿವೃದ್ದಿಪಡಿಸಲಾಗಿದೆ. ಕೆರೆಗಳ ರಕ್ಷಣೆ ಮಾಡಿದರೆ ರೈತರಿಗೆ ಸಾಕಷ್ಟು ಅನಕೂಲವಾಗುವದರ ಜೊತೆಗೆ ಬಂಜರು ಜಮೀನಿಗಳು ಹಸಿರಿನಿಂದ ಕಂಗೊಳಿಸಲಿವೆ ಎಂದಿದ್ದಾರೆ.

    ಹೀರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ವ್ಯತ್ಯಯ ಆಗದಂತೆ ನಿಗಾವಹಿಸಲು ಅಧಿಕಾರಿಗಳಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳಾದ ರಾಜಶೇಖರ ಪಾಟೀಲ್, ಸಿಪಿಐ ರಮೇಶ್ ಚಾಯಾಗೋಳ ಸೇರಿದಂತೆ ಸಣ್ಣ ನೀರಾವರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಚಿವ ಉಮೇಶ್ ಕತ್ತಿ

    ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಚಿವ ಉಮೇಶ್ ಕತ್ತಿ

    ವಿಜಯಪುರ: ನಾನು ಯಾಕೆ ಸಿಎಂ ಆಗಬಾರದು ಎಂದು ಹೇಳುವ ಮೂಲಕ ಸಚಿವ ಉಮೇಶ್ ಕತ್ತಿ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಆಲಮಟ್ಟಿಗೆ ಭೇಟಿ ನೀಡಿದ್ದ ವೇಳೆ ಸಚಿವರು ಮಾಧ್ಯಮಗಳ ಮುಂದೆ ಸಿಎಂ ಆಗುವ ಇಚ್ಚೆ ಹಂಚಿಕೊಂಡರು. ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗುವ ಅರ್ಹತೆ ಇದೆ.ಆದ್ರೆ ಸಿಎಂ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದರು.

    ಕುರ್ಚಿ ಖಾಲಿಯಾದ ಮೇಲೆ ನೋಡೋಣ. ಇನ್ನೂ ಎರಡು ವರ್ಷ ಯಡಿಯೂರಪ್ಪರವರೇ ಸಿಎಂ. ದೇವರ ಆಶೀರ್ವಾದ, ಈ ಭಾಗದ ಜನರ ಆಶೀರ್ವಾದ ಇದ್ದರೆ ಸಿಎಂ ಆಗ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಯು.ಟಿ.ಖಾದರ್

    ಕಾಂಗ್ರೆಸ್ಸಿನಲ್ಲಿ ಸಿಎಂ ಯಾರು? ಅನ್ನೋ ಚರ್ಚೆ ವಿಚಾgದ ಕುರಿತು ಮಾತನಾಡಿ, ಕಾಂಗ್ರೆಸ್ಸಿಗರು ಸಿಎಂ ಯಾರು ಅನ್ನೋ ಚರ್ಚೆ ಬಿಟ್ಟು ಮೊದಲು ಚುನಾವಣೆಯಲ್ಲಿ ಮೆಜಾರಿಟಿ ಪಡೆಯಲಿ. ಮುಂದಿನ 2 ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಈಗಲೇ ಸಿಎಂ ಚರ್ಚೆ ಮಾಡ್ತಾ ಇದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲ ಎಂದು ಕತ್ತಿ ವ್ಯಂಗ್ಯವಾಡಿದರು.

  • ಪ್ರಸಂಗ ಬಂದರೆ ಜಾರಕಿಹೊಳಿ ಮಂತ್ರಿ ಆಗ್ತಾರೆ: ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ

    ಪ್ರಸಂಗ ಬಂದರೆ ಜಾರಕಿಹೊಳಿ ಮಂತ್ರಿ ಆಗ್ತಾರೆ: ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ

    ಬಾಗಲಕೋಟೆ: ಪ್ರಸಂಗ ಬಂದರೆ ರಮೇಶ್ ಜಾರಕಿಹೊಳಿ ಮಂತ್ರಿ ಆಗುತ್ತಾರೆ. ನಮ್ಮೆಲ್ಲಾ ಮಂತ್ರಿ ಮಂಡಳದ ಪ್ರಯತ್ನ ಅದೇ ಆಗಿರುತ್ತೆ ಎಂದು ಬಾಗಲಕೋಟೆಯಲ್ಲಿ ಸಚಿವ ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    34 ಮಂತ್ರಿ ಬಿಟ್ಟು ಮಾಡುವುದಕ್ಕೆ ಆಗುವುದಿಲ್ಲ. ಅದರಲ್ಲಿ ಫಿಟ್ ಮಾಡುವ ಪ್ರಯತ್ನ ಮಾಡುತ್ತೇವೆ. ಇನ್ನೂ ಎರಡು ವರ್ಷ ರಮೇಶ್ ಜಾರಕಿಹೊಳಿ ಶಾಸಕರಾಗಿರುತ್ತಾರೆ. ಪ್ರಸಂಗ ಬಂದರೆ ಮಂತ್ರಿ ಆಗುತ್ತಾರೆ ಎಂದು ಉಮೇಶ್ ಕತ್ತಿ ಭವಿಷ್ಯ ನುಡಿದರು.

    ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಸಂಗವೇ ಬರಲ್ಲ. ನನ್ನಷ್ಟೇ ವಯಸ್ಸಿನವರಿದ್ದಾರೆ. ನನ್ನ ಆತ್ಮೀಯ ಸ್ನೇಹಿತ, ಅವರೊಂದಿಗೆ ಮಾತನಾಡುತ್ತಿರುತ್ತೇನೆ. ಮತ್ತೆ ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡುವುದು ಸಿಎಂಗೆ ಬಿಟ್ಟಿದ್ದು. ನಾನು ರಮೇಶ್ ಒಂದೇ ಜಿಲ್ಲೆಯವರು, ಆತ್ಮೀಯರು. ಕ್ಯಾಸೆಟ್ ಗಳನ್ನ ನಿರ್ಮಾಣ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಗೆ ಆ ಕ್ರೀಯೇಟ್ ಕ್ಯಾಸೆಟ್ ನಿಂದ ನೋವಾಗಿದೆ. ಅವರು ಬಹಳ ಸರಳ ವ್ಯಕ್ತಿ. ಕ್ರಿಯೆಟ್ ಕ್ಯಾಸೆಟ್ ಗಳಿಂದ ದುಃಖವಾಗಿದ್ದು ನಿಜವೆಂದರು.

    ಶಾಲೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದು, ಆಗ ಯಾವ ರೀತಿ ಇರಬೇಕೆಂದು ಹೇಳಿದ್ದಾರೆ. ಈ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ತೀರ್ಮಾನ ತೆಗೆದುಕೊಳ್ಳುತ್ತಾರೆ. ಜುಲೈಯೊಳಗೆ ಶಾಲೆಗಳು ಆರಂಭವಾಗಬಹುದು. ಮೂರನೇ ಅಲೆ ಇದೆ, ಒಂದು ಎರಡು ಬಂದು ಹೋಯ್ತು. ಮೂರನೇ ಅಲೆ ಯಾವಾಗ ಎಲ್ಲಿ ಬರುತ್ತೆ ಗೊತ್ತಿಲ್ಲ. ಈ ಅಲೆ ಬರುತ್ತಾನೆ ಇರುತ್ತವೆ. ಒಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸವೂ ನಡೆಯಬೇಕು. ವ್ಯಾಪಾರ ಉದ್ಯೋಗವೂ ನಡೆಯಬೇಕು. ಈ ಅಲ್ಲದೇ ಇದರ ಜೊತೆ ನಾವು ಹೇಗೆ ಬದುಕಬೇಕು ಎಂದು ನಾವು ನೀವು ನಿರ್ಧರಿಸಬೇಕು. ಶಾಲಾರಂಭ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಉಮೇಶ್ ಕತ್ತಿ ಸುಳಿವು ಕೊಟ್ಟರು.

    ದೇಗುಲ ಆರಂಭ ವಿಚಾರಕ್ಕೆ ಬಹುತೇಕ ರಾಜ್ಯವೇ ಅನ್ ಲಾಕ್ ಆಗಿದೆ. ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಾರೆ. ದೇಗುಲಗಳು ಬಹಳ ದಿನಗಳಿಂದ ಲಾಕ್ ಇವೆ. ಒಮ್ಮೆಲೆ ದೇಗುಲ ಬಾಗಿಲು ತೆರೆದರೆ ಜನ ದಟ್ಟಣೆ ಆಗಬಾರದೆಂದು ಕ್ರಮೇಣ ಮಾಡುತ್ತಾರೆ. ಎಲ್ಲವನ್ನೂ ಹಂತ ಹಂತವಾಗಿ ಸರ್ಕಾರ ಮಾಡುತ್ತದೆ. ಇನ್ನೂ ಎಂಟು ಹತ್ತು ದಿನಗಳಲ್ಲಿ ದೇಗುಲ ಓಪನ್ ಆಗಲಿದೆ ಎಂದರು.

    ಮೊದಲು ಕಾಂಗ್ರೆಸ್ ನಲ್ಲಿ ಸರಿಮಾಡಿ. ಆಮೇಲೆ ಬಿಜೆಪಿಯೊಳಗೆ ಕೈ ಹಾಕಿ ಎಂದು ಎಸ್.ಆರ್ ಪಾಟೀಲ್ ಗೆ ಕತ್ತಿ ತಿರುಗೇಟು ನೀಡಿದ್ದು, ನೀವು ವಿರೋಧ ಪಕ್ಷದ ನಾಯಕರಾಗಿ. ಸಿದ್ದರಾಮಯ್ಯಯೋ, ಡಿಕೆಶಿಯೋ, ದಲಿತ ಮುಖ್ಯಮಂತ್ರಿ ಎಂದು ಮೊದಲು ತೀರ್ಮಾನ ಮಾಡಿ ಎಂದು ಬಿಜೆಪಿಯಲ್ಲಿ ಸಿಎಂ ಬದಲಾವಣೆ ಕಚ್ಚಾಟಕ್ಕೆ ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಹೇಳಿಕೆಗೆ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ.  ಇದನ್ನೂ ಓದಿ: ಸೋಮಣ್ಣ ಪ್ರತಿಷ್ಠಾನದಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

  • ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ನಮಗೆ ಗೊತ್ತಾಗಿದೆ: ಉಮೇಶ್ ಕತ್ತಿ

    ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ನಮಗೆ ಗೊತ್ತಾಗಿದೆ: ಉಮೇಶ್ ಕತ್ತಿ

    ಚಿಕ್ಕೋಡಿ: ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ಏನೇಂಬುದು ನಮಗೆ ಗೊತ್ತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

    ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಉಮೇಶ್ ಕತ್ತಿ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಸಿ ನೆಟ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಡನ್ನು ಬೆಳೆಸಿದರೆ ವಾಯುಮಾಲಿನ್ಯ ನಿರ್ಮೂಲನೆ ಆಗುವುದರ ಜೊತೆಗೆ ಆಕ್ಸಿಜನ್ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ: ಶಶಿಕಲಾ ಜೊಲ್ಲೆ

    ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ಏನೇಂಬುದು ನಮಗೆ ಗೊತ್ತಾಗಿದೆ. ಜೀವ ವಾಯು ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಕಾಡನ್ನ ಉಳಿಸಿ ಬೆಳೆಸಬೇಕಾಗುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಪ್ರತಿಯೊಬ್ಬರು ಮರಗಳನ್ನ ನೆಟ್ಟು ಪರಿಸರವನ್ನ ರಕ್ಷಿಸಬೇಕು. ಪರಿಸರ ನಾಶದಿಂದ ಭೂಮಿ ವಿನಾಶದತ್ತ ತೆರಳುತ್ತಿದೆ. ಹೀಗಾಗಿ ಮರಗಳನ್ನ ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹುಕ್ಕೇರಿ ತಹಶೀಲ್ದಾರ ಡಿ.ಎಂ.ಹೂಗಾರ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಪಿ ಎಸ್ ಐ ಸಿದ್ದರಾಮಪ್ಪ ಉನ್ನದ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

  • ಬಡವರ ಅಕ್ಕಿಗೆ ಕತ್ತರಿ ಹಾಕಿದರೆ ಕ್ರಿಮಿನಲ್ ಕೇಸ್, ಲೈಸೆನ್ಸ್ ರದ್ದು- ಕತ್ತಿ ಎಚ್ಚರಿಕೆ

    ಬಡವರ ಅಕ್ಕಿಗೆ ಕತ್ತರಿ ಹಾಕಿದರೆ ಕ್ರಿಮಿನಲ್ ಕೇಸ್, ಲೈಸೆನ್ಸ್ ರದ್ದು- ಕತ್ತಿ ಎಚ್ಚರಿಕೆ

    ಚಿಕ್ಕೋಡಿ/ಬೆಳಗಾವಿ: ಬಡವರ ಅಕ್ಕಿಗೆ ಕತ್ತರಿ ಹಾಕಿದರೆ ಪಡಿತರ ಅಂಗಡಿಕಾರರ ವಿರುದ್ಧ ಕ್ರಿಮಿನಲ್ ಪ್ರಕರಣದ ಜೊತೆಗೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪೊಲಿಸರು ಆಯೋಜಿಸಿದ್ದ ಕೊರೊನಾ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಪಡಿತರ ಅಂಗಡಿಗಳಲ್ಲಿ ಕಾರ್ಡುದಾರರಿಗೆ ಅಕ್ಕಿ ಕಡಿಮೆ ನೀಡುವ ವಿಚಾರವಾಗಿ ಎಲ್ಲ ಜಿಲ್ಲೆಗಳಲ್ಲೂ ವೀಚಕ್ಷಣಾ ದಳದಿಂದ ನಿಗಾ ಇರಿಸಲಾಗಿದೆ. ಬಡವರಿಗೆ ಅಕ್ಕಿ ಮುಟ್ಟಿಸುವುದು ಸರ್ಕಾರದ ಆದ್ಯತೆಯಾಗಿದೆ. ಕೊವಿಡ್ ಸಂದರ್ಭದಲ್ಲಿ ಅಕ್ಕಿ ಕಳ್ಳ ಸಾಗಾಟ ಆಗಬಾರದು. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಯಾರೇ ಇರಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಜಿಲ್ಲಾಧಿಕಾರಿಗಳೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಿಗೆ ಜಿಲ್ಲಾಧಿಕಾರಿಗಳ ಸಭೆ ನಡೆಸುವ ಅವಕಾಶ ಇದೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಹಾಗೆ ಸಭೆ ಮಾಡಲು ಆಗುವುದಿಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯಲಿ. ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡಲಿ. ರಾಜಕೀಯ ಮಾಡುವುದನ್ನು ಬಿಟ್ಟು ಕೋವಿಡ್ ಮಹಾಮಾರಿ ವಿರುದ್ಧ ಎಲ್ಲರೂ ಸೇರಿ ಹೋರಾಡಬೇಕಿದೆ ಎಂದರು.

    ಲಾಕ್‍ಡೌನ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ತಜ್ಞರೊಂದಿಗೆ ಸಭೆ ನಡೆಸುತ್ತಿದ್ದು, ಈ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವದು ಎಂದರು. ಈ ವೇಳೆ ಹುಕ್ಕೇರಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ಸಿಪಿಐ ರಮೇಶ್ ಛಾಯಾಗೋಳ, ಡಿವೈಎಸ್‍ಪಿ ಜಾವೇದ, ಹುಕ್ಕೇರಿ ಪಿಎಸ್‍ಐ ಸಿದ್ದರಾಮಪ್ಪ ಉನ್ನದ, ಸಂಕೇಶ್ವರ ಪಿಎಸ್‍ಐ ಗಣಪತಿ ಕುಗನೊಳ್ಳಿ, ಮುಖ್ಯಾಧಿಕಾರಿ ಮೋಹನ್ ಜಾಧವ್, ಮೋಹನ್ ದಂಡಿನ, ಭೀಮಪ್ಪ ಲಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಹಾರ್ಟ್ ಅಟ್ಯಾಕ್, ಶುಗರ್ ಇರೋವವರು ಸತ್ರೆ ಏನು ಮಾಡೋದಕ್ಕೆ ಆಗುತ್ತೆ – ಉಮೇಶ್ ಕತ್ತಿ

    ಹಾರ್ಟ್ ಅಟ್ಯಾಕ್, ಶುಗರ್ ಇರೋವವರು ಸತ್ರೆ ಏನು ಮಾಡೋದಕ್ಕೆ ಆಗುತ್ತೆ – ಉಮೇಶ್ ಕತ್ತಿ

    ಬಾಗಲಕೋಟೆ: ಹಾರ್ಟ್ ಅಟ್ಯಾಕ್ ಶುಗರ್ ಇರುತ್ತದೆ ಅಂತಹ ಕೊರೊನಾ ಸೋಂಕಿತರು ಸತ್ತರೆ ಏನು ಮಾಡುದಕ್ಕೆ ಆಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಮತ್ತೆ ಉಡಾಫೆ ಮಾತನಾಡಿ ಸುದ್ದಿಯಾಗಿದ್ದಾರೆ.

    ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಕೋವಿಡ್ ನಲ್ಲಿ ಸಾಕಷ್ಟು ಜನ ಸಾಯುತ್ತಿದ್ದಾರೆ. ನಾನು ಯಾರು ಸಾಯಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಾಯುವವರು ಯಾಕೆ ಸತ್ತರೂ ಅಂತ ಅನ್ನೋದಕ್ಕೆ ಲೆಕ್ಕ ಇಲ್ಲ. ಕೋವಿಡ್ ಆದ ಸಂದರ್ಭದಲ್ಲಿ ತೊಂದರೆಯಾಗುತ್ತಿವೆ. ರೆಮ್‍ಡಿಸಿವರ್ ಕೊಟ್ಟರೂ ಜನ ಸಾಯುತ್ತಿದ್ದಾರೆ. ಅದಕ್ಕೆ ಏನು ಮಾಡೋಕಾಗುತ್ತದೆ. ಅವರಿಗೆ ಹಾರ್ಟ್ ಅಟ್ಯಾಕ್ ಶುಗರ್ ಇರುತ್ತದೆ. ಅಂತವರು ಸತ್ತರೆ ಏನು ಮಾಡೋದಕ್ಕೆ ಆಗುತ್ತೆ. ಅಂತವರಿಗೆ ಪಂಪ್ ಹೊಡೆದು ಧೈರ್ಯ ತುಂಬೋದಕ್ಕೆ ಆಗುತ್ತಾ? ಧೈರ್ಯ ಕಳೆದುಕೊಂಡವರು ಸಾಯುತ್ತಿದ್ದಾರೆ ಎಂದು ಉಡಾಫೆ ಮಾತನಾಡಿದ್ದಾರೆ.

    ಮಾಧ್ಯಮದಲ್ಲಿ ಹೆಣ, ಆಂಬುಲೆನ್ಸ್, ಹೆಣ ಸುಡೋದು ತೋರಿಸಿ ಭಯ ಹುಟ್ಟಿಸಲಾಗುತ್ತಿದೆ. ದಯವಿಟ್ಟು ಹಾಗೆ ತೋರಿಸಬೇಡಿ. ಸ್ವಲ್ಪ ಹಾಡು ಹಾಕಿ ಬೇರೆ ಬೇರೆ ಕಾರ್ಯಕ್ರಮ ಹಾಕಿ. ಮಾಧ್ಯಮ ನೋಡ್ತಿರೋರಿಗೆ ಮಾನಸಿಕ ಆಗುತ್ತಿದೆ. ಹಾಗಾಗಿ ತಾವೂ ಸಹಕಾರ ಮಾಡಿ ಅಂತಾ ವಿನಂತಿ ಮಾಡುತ್ತಿದ್ದೇನೆ ಎಂದರು.

    ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಯಾರು ಯಾಕೆ ಸತ್ತರು ಅಂತ ಗೊತ್ತಿಲ್ಲ. ಬುಲೆಟಿನ್ ನಲ್ಲಿ ತಪ್ಪು ಆಗಿರಬಹುದು. ನಾವು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳುತ್ತಿಲ್ಲ. ತಪ್ಪಾಗಿದ್ದರೆ ತಿಳಿಸಿ. ಈ ಬಗ್ಗೆ ಡಿಸಿ ಅವರು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಸಾಯುತ್ತಿರುವವರ ರೇಷಿಯೋ ಹೆಚ್ಚಾಗುತ್ತಿದೆ ಒಪ್ಪುತ್ತೇವೆ. ಆದರೆ ಮೆಡಿಸನ್, ಆಕ್ಸಿಜನ್, ಇಂಜೆಕ್ಷನ್ ಕೊಟ್ಟ ಮೇಲೂ ಧೈರ್ಯ ಕಳೆದುಕೊಂಡು ಸಾಯುವವರು ಇದ್ದಾರೆ. ಅದಕ್ಕೆ ಪರಿಹಾರ ಏನು ಇಲ್ಲ. ಆದ್ರೂ ಸಾಯಬಾರದು ಅಂತಾ ದೇವರಲ್ಲಿ ಪ್ರಾರ್ಥಿಸೋಣ, ಎಲ್ಲರೂ ಕೂಡಿ ಬದುಕಿಸೋಣ ಎಂದು ನುಡಿದರು.

  • ಕೊರೊನಾ ಮೂರನೇ ಅಲೆ ಬರುತ್ತೆ ನೀವು ಉಳೀತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು: ಉಮೇಶ್ ಕತ್ತಿ

    ಕೊರೊನಾ ಮೂರನೇ ಅಲೆ ಬರುತ್ತೆ ನೀವು ಉಳೀತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು: ಉಮೇಶ್ ಕತ್ತಿ

    ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈ ನಡುವೆ ಕೊರೊನಾ ಮೂರನೇ ಅಲೆ ಬರುತ್ತದೆ. ನಾವು, ನೀವು ಎಲ್ಲರು ಉಳಿಯಬೇಕು. ನೀವು ಉಳಿಯುತ್ತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಸಚಿವ ಉಮೇಶ್ ಕತ್ತಿ ಹಾರಿಸಿದ ಹಾಸ್ಯ ಚಟಾಕಿ ಇದೀಗ ವಿವಾದಿತ ಹೇಳಿಕೆಯಾಗಿದೆ.

    ಜಿಲ್ಲೆಯ ಬನಹಟ್ಟಿ ನಗರದಲ್ಲಿ ಕೋವಿಡ್ ವಿಚಾರವಾಗಿ ಅಧಿಕಾರಿಗಳು ಮತ್ತು ವೈದ್ಯರ ಸಭೆ ನಡೆಸಿದ ಉಮೇಶ್ ಕತ್ತಿ, ಕೊರೊನಾ ಎರಡನೇ ಅಲೆ ಬಳಿಕ ಮೂರನೇ ಅಲೆ ಬರುತ್ತೆ ನಾವು-ನೀವು ಉಳಿಯಬೇಕು ಎನ್ನುವುದು ನನ್ನ ಆಶಯ ನೀವು ಉಳಿತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದರು. ಕತ್ತಿ ಮಾತು ಕೇಳಿ ಸಂಸದ ಪಿ.ಸಿ.ಗದ್ದಿಗೌಡರ ಹಣೆ ಚಚ್ಚಿಕೊಂಡರು. ಬಳಿಕ ಸ್ಥಳೀಯರು ಜಿಲ್ಲಾಡಳಿತಕ್ಕೆ ಒಂದು ಆಕ್ಸಿಜನ್ ಕಿಟ್ ದೇಣಿಗೆ ನೀಡಿದರು. ಆಗ ಇಂತಹ ಮಷೀನ್‍ಗಳನ್ನು ಸರ್ಕಾರದಿಂದ ಹೆಚ್ಚೆಚ್ಚು ಒದಗಿಸುವಂತೆ ಸಭೆಯಲ್ಲಿ ಸಲಹೆ ತೂರಿ ಬಂತು. ಆಗ ಉಮೇಶ್ ಕತ್ತಿ ಮೂರನೇ ಅಲೆಗೆ ವ್ಯವಸ್ಥೆ ಮಾಡೋಣ ಎಂದು ಉಡಾಫೆ ಉತ್ತರ ನೀಡಿದರು.

    ಸಭೆಯಲ್ಲಿ ಆಕ್ಸಿಜನ್ ಕೊರತೆ ಆಗುತ್ತಿದೆ ಎಂದು ಖಾಸಗಿ ವೈದ್ಯರು ದೂರು ತೊಡಿಕೊಂಡರು. ಸಮಸ್ಯೆ ಇಲ್ಲ, ಅಗತ್ಯ ಇರುವಲ್ಲಿ ಸಿಲಿಂಡರ್ ಕಳುಹಿಸುವುದಾಗಿ ಎಸ್ಪಿ ಲೋಕೇಶ್ ಜಗಲಾಸರ್ ಭರವಸೆ ನೀಡಿದರು. ನಂತರ ಬನಹಟ್ಟಿ ಕೋವಿಡ್ ಸೆಂಟರ್‍ ಗೆ ಕತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಇತರೆ ಸೋಂಕಿತರಿಗೆ ಬೆಡ್ ಗಳ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಡಿಸಿ ಮತ್ತು ಎಸ್ಪಿ ಭಾಗವಹಿಸಿದ್ದರು.

  • ಸತ್ತರೆ ಒಳ್ಳೆಯದು ಎಂಬ ಉಮೇಶ್ ಕತ್ತಿ ಹೇಳಿಕೆಯನ್ನ ಸಮರ್ಥಿಸಿಕೊಂಡ ಬೆಂಬಲಿಗರು

    ಸತ್ತರೆ ಒಳ್ಳೆಯದು ಎಂಬ ಉಮೇಶ್ ಕತ್ತಿ ಹೇಳಿಕೆಯನ್ನ ಸಮರ್ಥಿಸಿಕೊಂಡ ಬೆಂಬಲಿಗರು

    – ಡಿಕೆಶಿ ಹಾಗೂ ಕುಮಾರಸ್ವಾಮಿ ವಿರುದ್ದ ಹರಿಹಾಯ್ದ ಕತ್ತಿ ಅಭಿಮಾನಿಗಳು

    ಚಿಕ್ಕೋಡಿ: ಸತ್ತರೆ ಒಳ್ಳೆಯದು ಎನ್ನುವ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ಅವರ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಸಚಿವರ ಹೇಳಿಕೆಗೆ ವ್ಯಾಪಕ ವಿರೋಧದ ನಡುವೆಯೇ ಸಚಿವ ಉಮೇಶ್ ಕತ್ತಿ ಬೆಂಬಲಕ್ಕೆ ಅವರ ಅಭಿಮಾನಿಗಳು ನಿಂತಿದ್ದು ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ಕರೆದು ಉಮೇಶ್ ಕತ್ತಿ ಅವರ ಬೆಂಬಲಿಗರು, ಉಮೇಶ್ ಕತ್ತಿಯವರು ಜನಪರ ಕಾಳಜಿಯಿಂದಲೇ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಮೇಶ್ ಕತ್ತಿ ಅವರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗಿಲ್ಲ ಎಂದು ಕತ್ತಿ ಅಭಿಮಾನಿಗಳು ಕಿಡಿಕಾರಿದ್ದಾರೆ.


    ಉಮೇಶ್ ಕತ್ತಿ ವಿರುದ್ದ ಮಾತನಾಡುವ ಮುನ್ನ ಯೋಚನೆಯಿಂದ ಮಾತನಾಡಿ ಡಿಕೆಶಿ ಅವರು ಜನರಿಗೆ ಧಮಕಿ ಹಾಕಿ ಶಾಸಕರಾಗಿದ್ದು, ನಮಗೂ ಗೊತ್ತಿದೆ ಎಂದು ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಉಮೇಶ್ ಕತ್ತಿಯವರು ಆಹಾರ ಸಚಿವರಾದ ನಂತರ ಅನೇಕ ಮಹತ್ತರ ಜನಪರ ಯೋಜನೆಗಳನ್ನು ಆಹಾರ ಇಲಾಖೆಯಲ್ಲಿ ಜಾರಿಗೆ ತಂದಿದ್ದಾರೆ. ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗಬಾರದು ಎನ್ನುವ ನಿಟ್ಟಿನಲ್ಲಿ ಆಹಾರ ಪದ್ದತಿ ಅನುಗುಣವಾಗಿ ಉತ್ತರ ಕರ್ನಾಟಕದ ಜನರಿಗೆ ಅಕ್ಕಿ ಬದಲು ಜೋಳ, ದಕ್ಷಿಣ ಕರ್ನಾಟಕದ ಜನರಿಗೆ ರಾಗಿ ಹಾಗೂ ಕರಾವಳಿ ಜನರಿಗೆ ಕುಚಲಕ್ಕಿ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಅವರ ಬಡವರ ಬಗೆಗಿನ ಕಾಳಜಿಯಿಂದಲೇ ಅವರು 8 ಬಾರಿ ಶಾಸಕರಾಗಿದ್ದಾರೆ. ಉಮೇಶ ಕತ್ತಿ ಅವರು ಸ್ವಲ್ಪ ಒರಟು ಸ್ವಭಾವದವರು ಹಿನ್ನೆಲೆಯಲ್ಲಿ ಸಿಟ್ಟಿನಿಂದ ಫೋನ್‍ನಲ್ಲಿ ಹಾಗೆ ಮಾತನಾಡಿರಬಹದು. ಆದರೇ ಅವರು ಎಂದೆಂದೂ ಬಡವರ ಪರವಾಗಿ ಇದ್ದಾರೆ ಎಂದು ಕತ್ತಿ ಬೆಂಬಲಿಗರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಕತ್ತಿ ಬೆಂಬಲಿಗರಾದ ರವೀಂದ್ರ ಹಿಡಕಲ್, ಮಹಾದೇವ ಪಾಟೀಲ, ಅಶೋಕ ಚೌಗಲಾ, ಚಿದಾನಂದ ಗೌಡಾಡಿ, ಸಂಜಯ ಕಲ್ಲಣ್ಣವರ, ರಾಜು ಯಮಕನಮರಡಿ, ಕೆ ಎಲ್ ಜಿನರಾಳೆ, ಶಿವಾನಂದ ಜಿನರಾಳೆ ಸೇರಿದಂತೆ ಹುಕ್ಕೇರಿ ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರು ಉಪಸ್ಥಿತರಿದ್ದರು.

  • ಕ್ಲಾಸ್ ಬಳಿಕ ಕ್ಷಮೆಯಾಚಿಸಿದ ಉಡಾಫೆ ಮಂತ್ರಿ ಉಮೇಶ್ ಕತ್ತಿ

    ಕ್ಲಾಸ್ ಬಳಿಕ ಕ್ಷಮೆಯಾಚಿಸಿದ ಉಡಾಫೆ ಮಂತ್ರಿ ಉಮೇಶ್ ಕತ್ತಿ

    ಬೆಂಗಳೂರು: ರೈತನ ಜೊತೆಗೆ ಬಾಯಿಗೆ ಬಂದಂತೆ ಮಾತನಾಡಿ ಟೀಕೆಗೆ ಗುರಿಯಾಗಿದ್ದ ಉಮೇಶ್ ಕತ್ತಿ ಈಗ ಕ್ಷಮೆಯಾಚಿಸಿದ್ದಾರೆ.

    ರೈತನ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ವಿಚಾರ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಲಾಸ್ ತೆಗೆದುಕೊಂಡ ಬಳಿಕ ಇದೀಗ ಉಮೇಶ್ ಕತ್ತಿ ಅವರು ಹೇಳಿಕೆ ವಿಚಾರವಾಗಿ ಕ್ಷಮೆಯಾಚಿಸಿದ್ದಾರೆ.

    ಆಡಿಯೋ ವೈರಲ್ ಆಗುತ್ತಿದ್ದಂತೆ ಉಮೇಶ್ ಕತ್ತಿ ವಿರುದ್ಧ ಸಿಎಂ ಯಡಿಯೂರಪ್ಪ ಅಸಮಾಧಾನ ಹೊರಹಾಕಿದರು. ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಖಾತೆ ಸಚಿವರು, ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.

    ಬಳಿಕ ಎಚ್ಚೆತ್ತುಕೊಂಡ ಉಮೇಶ್ ಕತ್ತಿ ಇದೀಗ ತನ್ನ ಹೇಳಿಕೆ ಕುರಿತಾಗಿ ಕ್ಷೆಮೆಯಾಚಿಸಿದ್ದಾರೆ. ಈ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನ ಪಟ್ಟಿದ್ದಾರೆ.

    ಆಗಿದ್ದೇನು..?
    ರೈತ ಸಂಘ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯರ ಅವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಈಶ್ವರ ಅವರು ಪಡಿತರ ಅಕ್ಕಿ ಕಡಿತಗೊಳಿಸಿರುವುದರ ಸಂಬಂಧ ಸಚಿವರನ್ನು ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡ್ತೀವಿ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಕತ್ತಿ ಉತ್ತರಿಸಿದ್ದಾರೆ.

    ಈ ವೇಳೆ ಮಾತು ಮುಂದುವರಿಸಿದ ಈಶ್ವರ, ಲಾಕ್‍ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಮರುಪ್ರಶ್ನೆ ಹಾಕಿದ್ದಾರೆ. ಆಗ ಸಚಿವರು, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತಾಡಿದ್ದಾರೆ. ಅಲ್ಲದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದರು.