Tag: ಉಮೇಶ್ ಕತ್ತಿ

  • ಎಚ್‍ಡಿಕೆ ಟೀಕಿಸೋ ಭರದಲ್ಲಿ ಪ್ರತ್ಯೇಕತೆಯ ಸುಳಿವು ನೀಡಿದ್ರು ಉಮೇಶ್ ಕತ್ತಿ

    ಎಚ್‍ಡಿಕೆ ಟೀಕಿಸೋ ಭರದಲ್ಲಿ ಪ್ರತ್ಯೇಕತೆಯ ಸುಳಿವು ನೀಡಿದ್ರು ಉಮೇಶ್ ಕತ್ತಿ

    ಬೆಳಗಾವಿ: ಪ್ರತ್ಯೇಕ ರಾಜ್ಯದ ಪರ ನಿಲ್ಬೇಡಿ ಅಂತಾ ಬಿಎಸ್‍ವೈ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಇಂದು ಸಿಎಂ ಕುಮಾರಸ್ವಾಮಿ ಟೀಕಿಸೋ ಭರದಲ್ಲಿ ಬಿಜೆಪಿಯ ಮಾಜಿ ಮಂತ್ರಿ ಹಾಗೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ಸುಳಿವು ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮಗೆ ರಾಜ್ಯ ಕಟ್ಟೋದು ಗೊತ್ತು ನೀವು ಹೇಳುವ ಅವಶ್ಯಕತೆಯಿಲ್ಲ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು. ಈ ಭಾಗದ ಅಭಿವೃದ್ಧಿ ಮಾಡದೇ ಇದ್ದಲ್ಲಿ ಪ್ರತ್ಯೇಕ ಹೋರಾಟ ಅನಿವಾರ್ಯ ಎಂದು ಬಹಿರಂಗವಾಗಿ ಹೇಳಿದ್ರು.

    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕೊಡುಗೆ ಉತ್ತರ ಕರ್ನಾಟಕಕ್ಕೆ ಅಪಾರ ಇದೆ. ಕೃಷ್ಣಾ ಯೋಜನೆ ಬಿ ಸ್ಕೀಮ್ ಅನುಷ್ಠಾನ ಆಗಬೇಕು. 177 ಟಿಎಂಸಿ ನೀರು ಸದ್ಬಳಕೆ ಆಗಬೇಕು. ಕುಮಾರಸ್ವಾಮಿ ಸರಕಾರ ಹಾಗೂ ಸಿದ್ದರಾಮಯ ಸರಕಾರ ನಿರ್ಲಕ್ಷ್ಯ ಮಾಡಿವೆ. ಭಾಗದ ಅಭಿವೃದ್ಧಿ ಹೋರಾಟ ಮಾಡದೇ ಇದ್ದಲ್ಲಿ ಪ್ರತ್ಯೇಕ ಹೋರಾಟ ಅನಿವಾರ್ಯ ಅಂತ ಹೇಳಿದ್ದಾರೆ.

  • ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುವವರು ಸ್ವಾರ್ಥಿಗಳು: ಮಾಜಿ ಸಿಎಂ

    ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುವವರು ಸ್ವಾರ್ಥಿಗಳು: ಮಾಜಿ ಸಿಎಂ

    ಮೈಸೂರು: ಅಖಂಡ ಕರ್ನಾಟಕದ ಹಿನ್ನೆಲೆ ತಿಳಿಯದೇ, ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವವರು ಸ್ವಾರ್ಥಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

    ಇಂದು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತಾ ಏನಿಲ್ಲ. ನಮ್ಮದು ಅಖಂಡ ಕರ್ನಾಟಕ. ಏಕೀಕರಣ ಮಹತ್ವ ತಿಳಿದಿಲ್ಲದವರು ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವ ಸ್ವಾರ್ಥಿಗಳು. ಕರ್ನಾಟಕ ಏಕೀಕರಣ ಏಕಾಯಿತು ಎಂಬುದು ತಿಳಿದಿಲ್ಲ. ಭಾಷಾವಾರು ಪ್ರಾಂತ್ಯ ಏಕಾಯಿತು ಎಂಬುದರ ಮಾಹಿತಿಯಿಲ್ಲದೇ ಹೇಳಿಕೆ ನೀಡುತ್ತಿರುವುದು ಬಾಲಿಶ ವಾದ ಎಂದು ಕಿಡಿಕಾರಿದರು.

    ನಾನೂ ಸಹ ಉತ್ತರ ಕರ್ನಾಟಕದ ಶಾಸಕನೇ, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅಭಿವೃದ್ಧಿಯ ವಿಚಾರವನ್ನು ನಾನು ಒಪ್ಪುತ್ತೇನೆ. ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣ ನೀಡಿದ್ದೇನೆ. ಅಲ್ಲದೇ ಪ್ರತ್ಯೇಕ ರಾಜ್ಯದ ಮಾತನಾಡುತ್ತಿರುವ ಶ್ರೀರಾಮುಲು, ಉಮೇಶ್ ಕತ್ತಿಯವರು ಉತ್ತರ ಕರ್ನಾಟಕ ಭಾಗಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೂನ್ಯ ಕೊಡುಗೆ ನೀಡಿದೆ ಎಂದು ಆರೋಪಿಸಿದರು.

  • ಆರು ತಿಂಗಳಲ್ಲಿ ಬಿಎಸ್‍ವೈ ಮತ್ತೆ ಸಿಎಂ : ಉಮೇಶ್ ಕತ್ತಿ

    ಆರು ತಿಂಗಳಲ್ಲಿ ಬಿಎಸ್‍ವೈ ಮತ್ತೆ ಸಿಎಂ : ಉಮೇಶ್ ಕತ್ತಿ

    ಚಿಕ್ಕೋಡಿ: 6 ತಿಂಗಳು ಒಳಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಮುಂದಿನ 6 ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತೆ ಕಾದು ನೋಡಿ ಎಂದು ಬಿಜೆಪಿ ಮುಖಂಡ ಹಾಗೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಹಿರಣ್ಯಕೇಶಿ ನದಿಯಿಂದ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಆಗುವುದು ಬಹು ದಿನ ಇಲ್ಲ. ಬಿಜೆಪಿಯವರು ಎಲ್ಲೂ ಹೋಗುವುದಿಲ್ಲ. ಇನ್ನು ಆರು ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ರಚನೆ ಮಾಡುತ್ತಾರೆ. ಬಿಜೆಪಿಯ ಯಾವುದೇ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇಲ್ಲ. ಸಚಿವ ರಮೇಶ ಜಾರಕಿಹೊಳಿ ಹಾಗೂ ಯಾವುದೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.

    ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಅಧಿವೇಶನದಲ್ಲಿ ರೈತರ ಬೆಳೆ ಸಾಲವನ್ನ ಮಾತ್ರ ಮನ್ನಾ ಮಾಡುವರಿದ್ದಾರೆ. ಈ ಬಾರಿಯೂ ವಚನ ಭ್ರಷ್ಟ ಆಗದೆ ನುಡಿದಂತೆ ಬೆಳೆ ಸಾಲದ ಜೊತೆಗೆ ಸಂಪೂರ್ಣ ಸಾಲ ಮಾಡಬೇಕು ಎಂದು ಉಮೇಶ್ ಕತ್ತಿ ಆಗ್ರಹಿಸಿದರು.

  • ಕಮಲಕ್ಕೆ ಆಪರೇಷನ್: ಜೆಡಿಎಸ್‍ಗೆ ಹಾರಲಿದ್ದಾರೆ 15 ಬಿಜೆಪಿ ಶಾಸಕರು!

    ಕಮಲಕ್ಕೆ ಆಪರೇಷನ್: ಜೆಡಿಎಸ್‍ಗೆ ಹಾರಲಿದ್ದಾರೆ 15 ಬಿಜೆಪಿ ಶಾಸಕರು!

    ಬೆಂಗಳೂರು: 2018 ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು 4 ತಿಂಗಳಷ್ಟೇ ಬಾಕಿ ಇದ್ದು ಉತ್ತರ ಕರ್ನಾಟಕ ಭಾಗದ ಬಿಜೆಪಿಯ 15 ನಾಯಕರು ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಗುಂಪೊಂದು ಜೆಡಿಎಸ್ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಯಾಗಲು ಯತ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಮಾಜಿ ಸಚಿವರುಗಳಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಆನಂದ್ ಅಸ್ನೋಟಿಕರ್ ನೇತೃತ್ವದ 15 ಜನರ ತಂಡ ಈ ಪ್ರಯತ್ನ ಆರಂಭಿಸಿದೆ. ಉಮೇಶ್ ಕತ್ತಿ ಬಿಜೆಪಿ ಬಿಡಲು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ತಮ್ಮ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೆ ಸಂಸದ ಪ್ರಕಾಶ್ ಹುಕ್ಕೇರಿ ಅಡ್ಡಿಯಾದ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಕಣ್ಣು ಜೆಡಿಎಸ್ ಮೇಲಿದೆ ಎನ್ನಲಾಗುತ್ತಿದೆ.

    2008 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಡಾಯದ ಬಾವುಟ ಹಾರಿಸಿದವರು ಬಾಲಚಂದ್ರ ಜಾರಕಿಹೊಳಿ ಅಂಡ್ ಟೀಂ. ಬಂಡಾಯ ಏಳಲು ಕಾರಣವಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಾಂದ್ಲಜೆಗೆ ಇವರ ಮೇಲೆ ಸಿಟ್ಟಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹೈಕಮಾಂಡೇ ಅಂತಿಮವಾಗಿ ಟಿಕೆಟ್ ನೀಡುವುದಾಗಿ ಹೇಳಿದ್ದರಿಂದ ಕಡೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಬಹುದು ಎನ್ನುವ ಅನುಮಾನ ಬಾಲಚಂದ್ರ ಜಾರಕಿ ಹೊಳಿ, ಆನಂದ್ ಆಸ್ನೋಟಿಕರ್ ಹಾಗೂ ಅಂದಿನ ಬಂಡಾಯ ಶಾಸಕರಾಗಿದ್ದ 13 ಜನರದ್ದು.

    ಈ ಕಾರಣದ ಜೊತೆ ಈ ಬಾರಿ ಯಾರಿಗೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇರುವುದರಿಂದ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

    ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ 15 ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಒಟ್ಟಾಗಿ ಜೆಡಿಎಸ್ ನಾಯಕರುಗಳ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಆದರೆ ಕೆಲ ನಾಯಕರಿಗೆ ಜಿಲ್ಲಾ ಮಟ್ಟದ ಪಾರಂಪರಿಕ ಶತ್ರುಗಳ ಅಡ್ಡಿಯಾದ ಹಿನ್ನೆಲೆಯಲ್ಲಿ ಯಾರನ್ನು ಸೇರ್ಪಡೆಗೊಳಿಸಬೇಕು? ಯಾರನ್ನು ಬಿಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಹೀಗಾಗಿ ಕೆಲವೇ ದಿನದಲ್ಲಿ ಯಾರು ಯಾವ ಪಕ್ಷಕ್ಕೆ ಹಾರಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ.

    https://youtu.be/fJkZXk_1G1A

  • ಬಿಜೆಪಿಯವರು ಹರಾಮ್‍ಕೋರರು ಎಂದು ಹೇಳಿ ನಂತ್ರ ಉಲ್ಟಾ ಹೊಡೆದ ಉಮೇಶ್ ಕತ್ತಿ

    ಬಿಜೆಪಿಯವರು ಹರಾಮ್‍ಕೋರರು ಎಂದು ಹೇಳಿ ನಂತ್ರ ಉಲ್ಟಾ ಹೊಡೆದ ಉಮೇಶ್ ಕತ್ತಿ

    ಬೆಂಗಳೂರು: ಬಿಜೆಪಿಯವರನ್ನು ಹರಾಮ್‍ಕೋರರು ಎಂದಿದ್ದ ಮಾಜಿ ಸಚಿವ, ಬೆಳಗಾವಿಯ ಹುಕ್ಕೇರಿಯ ಶಾಸಕ ಉಮೇಶ್ ಕತ್ತಿ ಉಲ್ಟಾ ಹೊಡೆದಿದ್ದು, ನಾನು ನನ್ನ ಆಪ್ತನಿಗೆ ಅಂದಿದ್ದು ಬಿಜೆಪಿ ಅವರಿಗೆ ಅಂದಿಲ್ಲ ಎಂದು ಹೇಳಿದ್ದಾರೆ.

    ಸಿಎಂ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತಾ ಬಿಜೆಪಿಯವರು ಹರಾಮ್‍ಕೋರರು ಎಂದು ಹೇಳಿದ್ದರು.

    ವಿವಾದ ಜೋರಾಗುತ್ತಿದ್ದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ನಾನು ಬಿಜೆಪಿ ಅವರಿಗೆ ಹೇಳಿಲ್ಲ. ಜಗದೀಶ್ ಶೆಟ್ಟರ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಹೋಗಬೇಡಿ ಎಂದು ಹೇಳಿದ್ದರು. ಲಿಂಗಾಯತ ವೀರಶೈವರನ್ನು ಒಡೆಯಲು ಎಂಬಿ ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ ಮುಂದಾಗಿದ್ದಾರೆ. ಆದರೆ ಇಗ ಬಸವರಾಜರಾಯರೆಡ್ಡಿ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ. ನಾನು ವೀರಶೈವ ಲಿಂಗಾಯತನಾಗಿದ್ದು ನನ್ನ ಧರ್ಮ ಹಿಂದೂ. ಎಂ.ಬಿ.ಪಾಟೀಲ್ ನಡೆಸಿದ ಸಮಾವೇಶಕ್ಕೆ ಹೋದರೆ ಲಿಂಗಾಯತನಾಗಲ್ಲ. ನಾನು ಹುಟ್ಟಿದಾಗಿನಿಂದಲೇ ಲಿಂಗಾಯತ. ಲಿಂಗಾಯತನಾಗಿಯೇ ಸಾಯುತ್ತೇನೆ ಎಂದು ಹೇಳಿದರು.

    ಇದೆ ವೇಳೆ ಬಿಜೆಪಿಯಿಂದ ನಿಮಗೆ ಟಿಕೆಟ್ ಸಿಗುತ್ತಾ ಎಂದು ಕೇಳಿದ್ದಕ್ಕೆ, ಇನ್ನೂ ನಿರ್ಧಾರವಾಗಿಲ್ಲ. ಖಂಡಿತವಾಗಿಯೂ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಒಂದು ವೇಳೆ ಟಿಕೆಟ್ ಸಿಗದೇ ಇದ್ದಲ್ಲಿ ಎನ್ನುವ ಮರು ಪ್ರಶ್ನೆಗೆ, ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    https://youtu.be/vdLowLrsQL0

     

     

  • ಶಾಸಕ ಉಮೇಶ್ ಕತ್ತಿ ಮಾಲೀಕತ್ವದ ಶಾಲಾ ಬಸ್ ಪಲ್ಟಿ- 8 ಮಕ್ಕಳಿಗೆ ಗಾಯ

    ಶಾಸಕ ಉಮೇಶ್ ಕತ್ತಿ ಮಾಲೀಕತ್ವದ ಶಾಲಾ ಬಸ್ ಪಲ್ಟಿ- 8 ಮಕ್ಕಳಿಗೆ ಗಾಯ

    ಚಿಕ್ಕೋಡಿ: ಶಾಸಕ ಉಮೇಶ ಕತ್ತಿ ಮಾಲೀಕತ್ವದ ಶಾಲಾ ಬಸ್ ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ ಗ್ರಾಮದಲ್ಲಿ ನಡೆದಿದೆ.

    20 ಮಕ್ಕಳನ್ನು ಕರೆದುಕೊಂಡು ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಬಸ್ ಈ ಅವಘಡಕ್ಕೆ ತುತ್ತಾಗಿದೆ. ಘಟನೆಯಿಂದ 8 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಬೆಲ್ಲದ ಬಾಗೇವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸ್ಥಳಕ್ಕೆ ಹುಕ್ಕೇರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.