Tag: ಉಮೇಶ್ ಕತ್ತಿ

  • ಆಪರೇಷನ್ ಕಮಲ ಸಕ್ಸಸ್ – ಹುಕ್ಕೇರಿ ಪುರಸಭೆ ಬಿಜೆಪಿ ಮಡಿಲಿಗೆ

    ಆಪರೇಷನ್ ಕಮಲ ಸಕ್ಸಸ್ – ಹುಕ್ಕೇರಿ ಪುರಸಭೆ ಬಿಜೆಪಿ ಮಡಿಲಿಗೆ

    – ಕತ್ತಿ ಬದ್ರರ್ಸ್ ಪ್ಲಾನ್ ಯಶಸ್ವಿ
    – 12 ರಲ್ಲಿ 11 ‘ಕೈ’ ಸದಸ್ಯರು ಬಿಜೆಪಿ ಸೇರ್ಪಡೆ

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಹುಕ್ಕೇರಿ ಪುರಸಭೆಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಸ್ಥಳೀಯ ಮಟ್ಟದಲ್ಲಿ ಆಪರೇಷನ್ ಕಮಲದ ಮೂಲಕ ಹುಕ್ಕೇರಿ ಪುರಸಭೆಯನ್ನ ಬಿಜೆಪಿ ವಶಕ್ಕೆ ಪಡೆದಿದೆ.

    ಹುಕ್ಕೇರಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯ ಬಲದ ಪುರಸಭೆಗೆ ಕಾಂಗ್ರೆಸ್ ನಿಂದ 12, ಬಿಜೆಪಿಯಿಂದ 8 ಹಾಗೂ 3 ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಚುನಾವಣೆ ಕೊನೆ ಗಳಿಗೆಯಲ್ಲಿ ಭಾರೀ ಹೈಡ್ರಾಮಾ ನಡದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಮಾಸ್ಟರ್ ಪ್ಲಾನ್ ಯಶಸ್ವಿಯಾಯಿತು.

    ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತೊರೆದು ನಾಲ್ಕು ಜನ ಪುರಸಭೆ ಸದಸ್ಯರು ಬಿಜೆಪಿ ಸೇರಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರ್ಪಡೆಯಾದರು.

    ಕಾಂಗ್ರೆಸ್ ತೊರೆದು ಬಂದ ಅಣ್ಣಪ್ಪಾ ಪಾಟೀಲರಿಗೆ ಅಧ್ಯಕ್ಷ ಸ್ಥಾನ, ಪಕ್ಷೇತರ ಅಭ್ಯರ್ಥಿ ಆನಂಸ್ ಗಂಧ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಅಣ್ಣಪ್ಪಾ ಪಾಟೀಲ್ ಅವರಿಗೆ 23 ಮತಗಳು ಚಲಾವಣೆಗೆಯಾಗುವ ಮೂಲಕ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಯಿತು. ಚುನಾವಣೆಯಲ್ಲಿ 12 ಜನ ಕಾಂಗ್ರೆಸ್ ಸದಸ್ಯರ ಪೈಕಿ 11 ಜನ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಎಲ್ಲರೂ ಬಿಜೆಪಿ ಸೇರ್ಪಡೆಯಾದರು.

    ಈ ವೇಳೆ ಮಾತನಾಡಿದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಉಮೇಶ್ ಕತ್ತಿ, ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ನ ನಾಲ್ವರು ಸದಸ್ಯರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಬಿಜೆಪಿ ಎಲ್ಲ ಸದಸ್ಯರು ಕೂಡಿಕೊಂಡು ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.

  • ಸುರೇಶ್ ಅಂಗಡಿ ಪತ್ನಿ ಸ್ಪರ್ಧೆಗೆ ಬೆಂಬಲ ನೀಡೋ ಬದಲು, ಅವಿರೋಧ ಆಯ್ಕೆಗೆ ಶ್ರಮಿಸಲಿ: ಕತ್ತಿ

    ಸುರೇಶ್ ಅಂಗಡಿ ಪತ್ನಿ ಸ್ಪರ್ಧೆಗೆ ಬೆಂಬಲ ನೀಡೋ ಬದಲು, ಅವಿರೋಧ ಆಯ್ಕೆಗೆ ಶ್ರಮಿಸಲಿ: ಕತ್ತಿ

    – ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಉಮೇಶ್ ಕತ್ತಿ ಟಾಂಗ್

    ಚಿಕ್ಕೋಡಿ: ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ಅವರಿಗೆ ಹುಕ್ಕೇರಿ ಮತಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ.

    ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಕತ್ತಿ, ಪ್ರಕಾಶ್ ಹುಕ್ಕೇರಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಬದಲು ಬೆಳಗಾವಿ ಲೋಕಸಭೆಗೆ ದಿವಂಗತ ಸುರೇಶ ಅಂಗಡಿ ಅವರ ಪತ್ನಿಯ ಅವಿರೋಧ ಆಯ್ಕೆಗೆ ಶ್ರಮಿಸಬೇಕಿದೆ. ಕೂಡಲೇ ಕಾಂಗ್ರೆಸ್ ಹೈ ಕಮಾಂಡ್ ಜೊತೆಗೆ ಪ್ರಕಾಶ್ ಹುಕ್ಕೇರಿ ಚರ್ಚಿಸಿ ಬೆಳಗಾವಿ ಲೋಕಸಭೆಗೆ ಅಭ್ಯರ್ಥಿಯನ್ನ ಹಾಕದಂತೆ ಮನವಿ ಮಾಡಲಿ ಎಂದು ಹೇಳಿದರು.

    ಮಾಜಿ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿಕೆಯಿಂದ ನನಗೆ ಸಂತೋಷವಾಗಿದೆ. ದಿವಂಗತ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಪತ್ನಿಯನ್ನ ಆಯ್ಕೆ ಮಾಡಿ ಎಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಟಿಸೋಣ. ನಾವು ಕೂಡ ಸುರೇಶ ಅಂಗಡಿ ಪತ್ನಿ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇವೆ. ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡದಂತೆ ಪ್ರಕಾಶ ಹುಕ್ಕೇರಿ ನೋಡಿಕೊಳ್ಳಲಿ. ಬೆಂಗಳೂರು ಹಾಗೂ ದೆಹಲಿಯ ಹೈ ಕಮಾಂಡ್ ಜೊತೆ ಚರ್ಚಿಸಿ ಆದಷ್ಟು ಬೇಗ ನಿರ್ಣಯ ಕೈಗೊಳ್ಳಲು ಉಮೇಶ್ ಕತ್ತಿ ಒತ್ತಾಯಿಸಿದರು.

    ಪ್ರಕಾಶ ಹುಕ್ಕೇರಿ ಬಿಜೆಪಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಉಮೇಶ್ ಕತ್ತಿ ಹೇಳಿದರು. ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ನೀಡಿದರೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಾನೇ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಇತ್ತಿಚೇಗೆ ಹೇಳಿಕೆ ನೀಡಿದ್ದರು.

  • ಸಿದ್ದರಾಮಯ್ಯ ಮನೆ ಮೇಲೆ ಏಕೆ ಸಿಬಿಐ ದಾಳಿ ಆಗಿಲ್ಲ?: ಉಮೇಶ್ ಕತ್ತಿ

    ಸಿದ್ದರಾಮಯ್ಯ ಮನೆ ಮೇಲೆ ಏಕೆ ಸಿಬಿಐ ದಾಳಿ ಆಗಿಲ್ಲ?: ಉಮೇಶ್ ಕತ್ತಿ

    ಚಿಕ್ಕೋಡಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ, ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ನಿವಾಸ ಮೇಲೆ ಸಿಬಿಐ ದಾಳಿ ಮಾಡುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬುವುದು ಸುಳ್ಳು. ರಾಜಕೀಯ ದುರದ್ದೇಶದಿಂದ ದಾಳಿ ಆಗಿದ್ದರೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಏಕೆ ದಾಳಿ ಆಗಿಲ್ಲ ಎಂದು ಮರುಪ್ರಶ್ನಿಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಭಯ ಪಡೋ ಅಗತ್ಯವಿಲ್ಲ: ಹೆಚ್‍ಡಿಕೆ

    ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಉಮೇಶ್ ಕತ್ತಿ ಅವರು, ಈಗಾಗಲೇ ನಾನು 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದು, ಯುವಕರಿಗೆ ಹೊಸಬರಿಗೆ ಅವಕಾಶ ನೀಡಿದರೆ ತಪ್ಪಿಲ್ಲ. ನನ್ನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೆ ಬಿಟ್ಟರೆ ತಪ್ಪಲ್ಲ. ನಾನು ಹಿರಿಯ ನಾಯಕನಾಗಿ, ಶಾಸಕ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ರಾಜಕೀಯ ಉದ್ದೇಶಕ್ಕಾಗಿ ಸಿಬಿಐ ಬಳಸಿಕೊಂಡಿದ್ದನ್ನು ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ: ನಳಿನ್

    ಇಂದು ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ಮಾಡುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇತ್ತ ಡಿಕೆ ಶಿವಕುಮಾರ್ ಮತ್ತು ಅಪ್ತರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಇತ್ತ ಸಿಬಿಐ ದಾಳಿ ವಿಚಾರದಲ್ಲಿ ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕರ ನಡುವಿನ ಕೆಸರೆರಚಾಟ ಜೋರಾಗಿದೆ.

  • ಇನ್ನೂ 20 ವರ್ಷ ರಾಜಕಾರಣದಲ್ಲಿದ್ದು, ಸಿಎಂ ಆಗಿಯೇ ಆಗ್ತೀನಿ: ಕತ್ತಿ

    ಇನ್ನೂ 20 ವರ್ಷ ರಾಜಕಾರಣದಲ್ಲಿದ್ದು, ಸಿಎಂ ಆಗಿಯೇ ಆಗ್ತೀನಿ: ಕತ್ತಿ

    ಚಿಕ್ಕೋಡಿ(ಬೆಳಗಾವಿ): ಇನ್ನೂ 20 ವರ್ಷ ನಾನು ರಾಜಕಾರಣದಲ್ಲಿ ಇರುತ್ತೇನೆ. ಈ 20 ವರ್ಷದ ಒಳಗೆ ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೆನೆ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಈಶ್ವರಲಿಂಗ ಸಮುದಾಯ ಭವನದ ಶೀಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಯಾವತ್ತೂ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಕೋವಿಡ್ ಸೇರಿದಂತೆ ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸುವ ಶಕ್ತಿ ದೇಶದಲ್ಲಿ ಯಡಿಯೂರಪ್ಪನವರಿಗೆ ಮಾತ್ರ ಇದೆ ಎಂದು ನುಡಿದರು.

    ದೇಶದಲ್ಲಿ ಬಿಜೆಪಿ ಸರ್ಕಾರ 10 ವರ್ಷಗಳ ಕಾಲ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದು, ಜನಪರ ಕಾರ್ಯ ಮಾಡಲಿದೆ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.

    ಒಂದು ವಾರ ಅಥವಾ 10 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಿದ ಅವರು, ಡಿಸಿಎಂ ಸವದಿ ಹಾಗೂ ಸಚಿವೆ ಜೊಲ್ಲೆ ತಮ್ಮ ಇಲಾಖೆಯ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ ಎಂದು ಕತ್ತಿ ತಿಳಿಸಿದರು. ಇದಕ್ಕೂ ಮೊದಲು ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಈರಣ್ಣ ಕಡಾಡಿ ಅವರಿಗೆ ಶಾಸಕ ಉಮೇಶ್ ಕತ್ತಿ ಅವರು ಈಶ್ವರಲಿಂಗ ದೇವಸ್ಥಾನ ಕಮೀಟಿ ವತಿಯಿಂದ ಸತ್ಕರಿಸಿದರು.

  • ಸಿಎಂ ಶ್ರಮಜೀವಿ ಅವರಿಗೆ ಎಲ್ಲರೂ ಬೆಂಬಲ ನೀಡಬೇಕು: ಶಾಸಕ ಉಮೇಶ್ ಕತ್ತಿ

    ಸಿಎಂ ಶ್ರಮಜೀವಿ ಅವರಿಗೆ ಎಲ್ಲರೂ ಬೆಂಬಲ ನೀಡಬೇಕು: ಶಾಸಕ ಉಮೇಶ್ ಕತ್ತಿ

    ಬೆಳಗಾವಿ/ಚಿಕ್ಕೋಡಿ: ಕೋವಿಡ್ ಸಂದರ್ಭದಲ್ಲಿ ಶ್ರಮಿಸುತ್ತಿರುವ ಸಿಎಂ ಯಡಿಯೂರಪ್ಪ ಶ್ರಮಜೀವಿ. ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹುಕ್ಕೇರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಯಡಿಯೂರಪ್ಪ ಪರ ಮಾತನಾಡಿದ್ದಾರೆ.

    ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರ್ಣಗೊಂಡ ನೆನಪಿನ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿ ಅವರು ಹುಕ್ಕೇರಿ ತಾಲೂಕಿನ ಪಂಚಾಯತಿ ಕಚೇರಿ ಆವರಣದಲ್ಲಿ ಸಸಿ ನೆಟ್ಟಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಸಿಎಂ ಯಡಿಯೂರಪ್ಪ ಅತ್ಯುತ್ತಮವಾಗಿ ಸರ್ಕಾರ ನಡೆಸಿದ್ದಾರೆ. ಅತಿವೃಷ್ಟಿ ಹಾಗೂ ಕೋವಿಡ್ ಸಂದರ್ಭದಲ್ಲೂ ಚೆನ್ನಾಗಿ ಆಡಳಿತ ನಡೆಸಿದ್ದಾರೆ ಎಂದು ಸಿಎಂ ಪರ ಮಾತನಾಡಿದರು.

    ವಿರೋಧ ಪಕ್ಷಗಳು ಅವ್ಯವಹಾರದ ಬಗ್ಗೆ ಸುಳ್ಳು ಆರೋಪ ಮಾಡುವುದನ್ನ ನಿಲ್ಲಿಸಬೇಕು. ಸಿದ್ದರಾಮಯ್ಯನವರು ಕೋವಿಡ್ ಸಂದರ್ಭದಲ್ಲಿ ಆರೋಪ ಮಾಡುವುದನ್ನ ಬಿಟ್ಟು ಸಹಕಾರ ನೀಡಬೇಕು. ಮುಂದಿನ ಮೂರು ವರ್ಷ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದರು.

    ಯಡಿಯೂರಪ್ಪನವರಿಗೆ ಪ್ರಧಾನಿ ಸೇರಿದಂತೆ ಎಲ್ಲ ಕೇಂದ್ರ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ನಿಗಮ ಮಂಡಳಿ ಆಯ್ಕೆ ಹಿನ್ನೆಲೆ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ನಿಗಮ ಮಂಡಳಿ ಆಯ್ಕೆ ಸಂದರ್ಭದಲ್ಲಿ ಕೆಲ ಗೊಂದಲಗಳಿರುತ್ತವೆ, ಅದು ಸ್ವಾಭಾವಿಕ. ಶಾಸಕ ತಿಪ್ಪಾರೆಡ್ಡಿ ನಾನು ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಇಬ್ಬರು ಸಚಿವರಾಗುವ ದಿನಗಳು ದೂರ ಇಲ್ಲ ಎಂದು  ಹೇಳಿದ್ದಾರೆ.

  • ಅಂತ್ಯಕ್ರಿಯೆಯಿಂದ ಜನರಿಗೆ ತೊಂದರೆಯಾದ್ರೆ ತಹಶೀಲ್ದಾರ್ ಮನೆ ಮುಂದೆ ಶವ ಇಡುತ್ತೇವೆ: ಕತ್ತಿ

    ಅಂತ್ಯಕ್ರಿಯೆಯಿಂದ ಜನರಿಗೆ ತೊಂದರೆಯಾದ್ರೆ ತಹಶೀಲ್ದಾರ್ ಮನೆ ಮುಂದೆ ಶವ ಇಡುತ್ತೇವೆ: ಕತ್ತಿ

    – ಸಚಿವನಾಗಿ ಮಾಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು

    ಚಿಕ್ಕೋಡಿ: ಅಂತ್ಯಕ್ರಿಯೆ ಮಾಡಲು ಜನರಿಗೆ ತೊಂದರೆ ಆಗಬಾರದು. ತೊಂದರೆ ಆದರೆ ತಹಶೀಲ್ದಾರ್ ಮನೆ ಮುಂದೆ ಶವ ತಂದು ಇಡುತ್ತೇವೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹುಕ್ಕೇರಿ ತಹಶೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಆಯೋಜಿಸಿದ್ದ ಕೊರೊನಾ ನಿಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಲು ಯಾವುದೇ ಸಮಸ್ಯೆ ಆಗಬಾರದು. ಸರ್ಕಾರಿ ಜಮೀನುಗಳಿದ್ದರೆ ಅವುಗಳನ್ನು ಸ್ಮಶಾನಗಳಿಗಾಗಿ ಮೀಸಲಿಡಬೇಕು ಎಂದು ಹೇಳಿದರು.

    ಜಮೀನುಗಳು ಇಲ್ಲದ ಗ್ರಾಮಗಳ ಅಧಿಕಾರಿಗಳು ಜಮೀನು ಖರೀದಿ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ಸ್ಮಶಾನ ಜಾಗ ಇಲ್ಲದೆ ಜನ ತೊಂದರೆ ಅನುಭವಿಸಬಾರದು ಎಂದು ಅಧಿಕಾರಿಗಳಿಗೆ ಉಮೇಶ ಕತ್ತಿ ಎಚ್ಚರಿಕೆ ನೀಡಿದರು. ಅಲ್ಲದೆ ಗ್ರಾಮಗಳನ್ನು ಬಿಟ್ಟು ತೋಟದಲ್ಲಿ ವಾಸಿಸುವ ಜನರಿಗೆ ರಸ್ತೆ ವ್ಯವಸ್ಥೆ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಉಮೇಶ ಕತ್ತಿ ಸೂಚಿಸಿದರು.

    ಸಭೆ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಉಮೇಶ ಕತ್ತಿ ಅವರು, ನನ್ನ ಮಂತ್ರಿ ಮಾಡೋದು ಬಿಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಚಿವನಾಗಿ ಮಾಡಿದರೆ ಸ್ವಾಗತ ಮಾಡುತ್ತೇನೆ ಸದ್ಯ ಶಾಸಕನಾಗಿ ಜನ ಸೇವೆ ಮಾಡುತ್ತಾ ಕ್ಷೇತ್ರದಲ್ಲಿದ್ದೇನೆ ಎಂದು ತಿಳಿಸಿದರು.

  • ನಮಾಜ್‍ಗೆ ಅವಕಾಶ ಕೇಳಿದ ಮುಸ್ಲಿಂ ಮುಖಂಡರ ವಿರುದ್ಧ ಉಮೇಶ್ ಕತ್ತಿ ಗರಂ

    ನಮಾಜ್‍ಗೆ ಅವಕಾಶ ಕೇಳಿದ ಮುಸ್ಲಿಂ ಮುಖಂಡರ ವಿರುದ್ಧ ಉಮೇಶ್ ಕತ್ತಿ ಗರಂ

    – ಸೋಮವಾರದಿಂದ ಒಂದು ವಾರ ಹುಕ್ಕೇರಿ ಲಾಕ್‍ಡೌನ್

    ಚಿಕ್ಕೋಡಿ(ಬೆಳಗಾವಿ): ನಮಾಜ್ ಮಾಡಲು ಅವಕಾಶ ಕೇಳಿದ ಮುಸ್ಲಿಂ ಮುಖಂಡರ ಮೇಲೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಗರಂ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ಅಭಿಪ್ರಾಯ ಸಂಗ್ರಹಿಸಿ ಒಂದು ವಾರ ಹುಕ್ಕೇರಿ ತಾಲೂಕು ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಯಿತು.

    ಈ ಸಂದರ್ಭದಲ್ಲಿ ಕೆಲ ಮುಸ್ಲಿಂ ಮುಖಂಡರು ನಮಾಜ್ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಮನವಿ ಮಾಡಿದವರ ಮೇಲೆ ಶಾಸಕರು ಗರಂ ಆಗಿದ್ದು, ಕೊರೊನಾ ಮಹಾಮಾರಿ ಮಧ್ಯೆ ಮಸೀದಿ ಆರಂಭ ಮಾಡಿ ಸಾಯಬೇಕಾ?, ಮಸೀದಿಗೆ ಹೋಗಿ ‘ಅಲ್ಲಾ.. ಅಲ್ಲಾ’ ಎಂದು ಪ್ರಾರ್ಥನೆ ಮಾಡಿದರೆ ನೀವೇನೂ ಉಳಿಯುವುದಿಲ್ಲ. ಎಲ್ಲರೂ ಒಂದು ದಿನ ಸಾಯೋದೇ. ನಾನು ಸಾಯಬೇಕು ನೀನು ಸಾಯಬೇಕು. ‘ಅಲ್ಲಾ.. ಅಲ್ಲಾ’ ಅನ್ನೋದನ್ನು ನಾಲ್ಕು ದಿನ ನಿಲ್ಲಿಸಿ ಲಾಕ್‍ಡೌನ್‍ಗೆ ಸಹಕಾರ ನೀಡಿ ಎಂದು ಮರು ಮನವಿ ಮಾಡಿಕೊಂಡರು.

    ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಲಾಕ್‍ಡೌನ್ ಗೆ ಸಹಕಾರ ನೀಡುವಂತೆ ಉಮೇಶ್ ಕತ್ತಿ ಮನವಿ ಮಾಡಿಕೊಂಡರು. ಮುಂದಿನ ಸೋಮವಾರ ಅಂದರೆ ಜುಲೈ 20ರಿಂದ ಜುಲೈ 27ರ ಸೋಮವಾರದವರೆಗೆ ಒಂದು ವಾರಗಳ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್‍ಡೌನ್ ಮಾಡುವಂತೆ ಅಧಿಕಾರಿಗಳಿಗೆ ಕತ್ತಿ ಸೂಚನೆ ನೀಡಿದರು. ಹೀಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕನ್ನು ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

  • ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಬಲನಿದ್ದೇನೆ: ಉಮೇಶ್ ಕತ್ತಿ

    ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಬಲನಿದ್ದೇನೆ: ಉಮೇಶ್ ಕತ್ತಿ

    ಬೆಳಗಾವಿ/ಚಿಕ್ಕೋಡಿ: ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಬಲನಿದ್ದೇನೆ ಎಂದು ಹೇಳುವ ಮೂಲಕ ಶಾಸಕ ಉಮೇಶ್ ಕತ್ತಿ ಮತ್ತೆ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಕೊರೊನಾ ವಾರಿಯರ್ಸ್ ಗೆ ಕಿಟ್ ವಿತರಣೆ ಸಮಾರಂಭದಲ್ಲಿ ಶಾಸಕ ಉಮೇಶ್ ಕತ್ತಿ ಭಾಗಿಯಾಗಿದ್ದರು. ಸಮಾರಂಭದ ವೇದಿಕೆಯಲ್ಲಿಯೇ ಸಿಎಂ ಆಗೋ ಆಸೆಯನ್ನು ಹೊರ ಹಾಕಿದ್ದಾರೆ. ಒಟ್ಟು ಎಂಟು ಬಾರಿ ಶಾಸಕನಾಗಿದ್ದೇನೆ. ಹಾಗೆ ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ಸಬಲನಿದ್ದೇನೆ. ಉತ್ತರ ಕರ್ನಾಟಕದ ಸುಪುತ್ರ ರಾಜ್ಯದ ಮುಖ್ಯಮಂತ್ರಿ ಆಗಿ ಬರಲಿ ಎನ್ನುವ ಹಾರೈಕೆ ನಿಮ್ಮದಾಗಿರಲಿ ಎಂದು ಹೇಳಿದರು.

    ವಿಶ್ವರಾಜ ಕತ್ತಿ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು. ಈ ಹಿಂದೆಯೂ ಹಲವು ಬಾರಿ ಉಮೇಶ್ ಕತ್ತಿ ಸಿಎಂ ಪಟ್ಟಕ್ಕೇರುವ ಇಂಗಿತ ವ್ಯಕ್ತಪಡಿಸಿದ್ದರು. ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಜೊತೆ ಸೇರಿ ಉತ್ತರ ಕರ್ನಾಟಕ ಭಾಗದ ಶಾಸಕರ ಬಣ ರಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  • ನಮ್ಮ ಸಹೋದರ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಲ್ಲ: ಉಮೇಶ್ ಕತ್ತಿ

    ನಮ್ಮ ಸಹೋದರ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಲ್ಲ: ಉಮೇಶ್ ಕತ್ತಿ

    ಚಿಕ್ಕೋಡಿ: ವಿಧಾನ ಪರಿಷತ್ ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಯಾವುದೇ ಪೈಪೋಟಿ ಇಲ್ಲ. ಪಕ್ಷದ ಹೈ ಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಹೈ ಕಮಾಂಡ್ ಹೇಳಿದವರಿಗೆ ನಾವು ವೋಟ್ ಹಾಕುತ್ತೇವೆ. ವಿಧಾನ ಪರಿಷತ್ ಚುನಾವಣಾ ಟಿಕೆಟಿಗಾಗಿ ಪೈಪೋಟಿ ನಡೆಸಿಲ್ಲ. ಸಹೋದರನಿಗೆ ರಾಜ್ಯ ಸಭಾ ಟಿಕೆಟ್ ಕೇಳಿದ್ದೆವು. ಆದರೆ ಹೈ ಕಮಾಂಡ್ ಒಳ್ಳೆಯ ಕಾರ್ಯಕರ್ತರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದೆ. ರಮೇಶ್ ಕತ್ತಿಗೆ ಲೋಕಸಭಾ ಟಿಕೆಟ್ ಸಿಕ್ಕರೆ ಸರಿ, ಇಲ್ಲವಾದಲ್ಲಿ ರಾಜ್ಯ ಸಭೆಗೆ ಪ್ರಯತ್ನ ಮಾಡುತ್ತೇವೆ. ವಿಧಾನ ಪರಿಷತ್‍ಗೆ ರಮೇಶ್ ಕತ್ತಿ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಆನ್‍ಲೈನ್ ಶಿಕ್ಷಣ ರದ್ದು ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. 7ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಪಾಲಕರು ಯಾರೂ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡಬೇಡಿ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಪಾಲಕರಲ್ಲಿ ವಿನಂತಿಸಿದ್ದಾರೆ.