Tag: ಉಮೇಶ್ ಕತ್ತಿ

  • ಹುಕ್ಕೇರಿ ಕ್ಷೇತ್ರದಲ್ಲಿ ನಿರ್ಣಯವಾಗದ ಉಮೇಶ್ ಕತ್ತಿ ಉತ್ತರಾಧಿಕಾರಿ: ಕುಟುಂಬದಲ್ಲಿ ಬಿರುಕಿಲ್ಲ ಎಂದು ಕಣ್ಣೀರಿಟ್ಟ ಕತ್ತಿ ಪುತ್ರ

    ಹುಕ್ಕೇರಿ ಕ್ಷೇತ್ರದಲ್ಲಿ ನಿರ್ಣಯವಾಗದ ಉಮೇಶ್ ಕತ್ತಿ ಉತ್ತರಾಧಿಕಾರಿ: ಕುಟುಂಬದಲ್ಲಿ ಬಿರುಕಿಲ್ಲ ಎಂದು ಕಣ್ಣೀರಿಟ್ಟ ಕತ್ತಿ ಪುತ್ರ

    ಚಿಕ್ಕೋಡಿ: ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ಹುಕ್ಕೇರಿ ಮತಕ್ಷೇತ್ರದ ದಿ.ಉಮೇಶ್ ಕತ್ತಿ (Umesh Katti) ಅವರ ಉತ್ತರಾಧಿಕಾರಿ ಯಾರು ಎನ್ನುವ ಬಹು ದೊಡ್ಡ ಪ್ರಶ್ನೆ ಕ್ಷೇತ್ರದ ಜನರನ್ನು ಕಾಡುತ್ತಿದೆ. ಅಲ್ಲದೇ ಕ್ಷೇತ್ರದ ಜನರ ಜೊತೆಗೆ ಬಿಜೆಪಿ ವರಿಷ್ಠರಿಗೂ ಹುಕ್ಕೇರಿಯಲ್ಲಿ (Hukkeri) ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿದೆ.

    ಕೆಲ ತಿಂಗಳುಗಳ ಹಿಂದೆ ನಿಧನರಾದ ಸಚಿವ ಉಮೇಶ್ ಕತ್ತಿ ನಂತರ ಹುಕ್ಕೇರಿ ಕ್ಷೇತ್ರ ಯಾರಿಗೆ ಎನ್ನುವ ಕುತೂಹಲ ಜನರಲ್ಲಿದೆ. ಒಂದು ಕಡೆ ಕತ್ತಿ ಸಹೋದರ ರಮೇಶ್ ಕತ್ತಿ (Ramesh Katti) ರೇಸ್‍ನಲ್ಲಿದ್ದರೆ ಮತ್ತೊಂದೆಡೆ ಕತ್ತಿಯವರ ಪುತ್ರ ನಿಖೀಲ್ ಕತ್ತಿ (Nikhil Katti) ಸಹ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಇಬ್ಬರೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕಾರಣ ಸಹಜವಾಗಿ ಬಿಜೆಪಿ ವರಿಷ್ಠರಲ್ಲಿ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಗೊಂದಲ ನಿರ್ಮಾಣವಾಗಿದೆ. ಇದನ್ನೂ ಓದಿ: ಟಿಕೆಟ್ ಹಂಚಿಕೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಹೇಶ ಕುಮಟಳ್ಳಿ

    ಇದರ ಮಧ್ಯೆ ಕತ್ತಿ ಮನೆತನದಲ್ಲಿ ಟಿಕೆಟ್‍ಗಾಗಿ ಒಡಕು ಏರ್ಪಟ್ಟಿದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಯಾವುದೇ ಒಡಕು ಕುಟುಂಬದಲ್ಲಿ ಇಲ್ಲ ಎನ್ನುವ ಸಂದೇಶ ಸಾರುವ ಕಾರ್ಯವನ್ನು ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮಾಡುತ್ತಿದ್ದಾರೆ.

    ಟಿಕೆಟ್‍ಗಾಗಿ ಚಿಕ್ಕಪ್ಪ ಹಾಗೂ ಪುತ್ರನ ನಡುವೆ ಫೈಟ್ ನಡೆದಿದೆ ಎನ್ನುವ ಸುದ್ದಿಗಳು ಕ್ಷೇತ್ರದಲ್ಲಿ ಹರಿದಾಡುತ್ತಿರುವುದಕ್ಕೆ ಉಮೇಶ್ ಕತ್ತಿ ಪುತ್ರ ಕೂಡ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯಿಂದ (BJP) ಯಾರಿಗೆ ಟಿಕೆಟ್ ನೀಡಿದರೂ ಕತ್ತಿ ಮನೆತನ ಅವರ ಪರ ಕೆಲಸ ಮಾಡುತ್ತದೆ. ನಮ್ಮ ಮನೆಯಲ್ಲಿ ಯಾವುದೇ ಬಿರುಕು ಇಲ್ಲ ಎಂದು ನಿಖಿಲ್ ಕತ್ತಿ ಕಣ್ಣೀರು ಹಾಕಿದ್ದಾರೆ.

    ಕ್ಷೇತ್ರದಲ್ಲಿ ಇದುವರೆಗೂ ಯಾರು ಅಭ್ಯರ್ಥಿ ಎನ್ನುವ ನಿರ್ಣಯವಾಗದ ಕಾರಣ ಕತ್ತಿ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದನ್ನೂ ಓದಿ: ಕೈ ನಾಯಕರು ಕುಡಿದು ಪಂಚಮಸಾಲಿ ಶ್ರೀಗಳಿಗೆ ಕರೆ ಮಾಡಿ ಕಿರುಕುಳ- ಸಿ.ಸಿ. ಪಾಟೀಲ್ ಗಂಭೀರ ಆರೋಪ

  • ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ

    ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ

    – ಕೊನೆಗೂ ಈಡೇರಲಿಲ್ಲ ಮಾಮನಿ ಕನಸು
    – ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ

    ಬೆಳಗಾವಿ: ಒಂದೂವರೆ ವರ್ಷದ ಅವಧಿಯಲ್ಲಿ ಬೆಳಗಾವಿಯ ಮೂವರು ಪ್ರಭಾವಿ ಬಿಜೆಪಿ (BJP) ನಾಯಕರ ಅಕಾಲಿಕವಾಗಿ ನಿಧನರಾಗಿದ್ದು ಚುನಾವಣೆ ವರ್ಷದಲ್ಲೇ ಬೆಳಗಾವಿ (Belagavi) ಜಿಲ್ಲಾ ಬಿಜೆಪಿಗೆ ದೊಡ್ಡ ಆಘಾತವೇ ಎದುರಾಗಿದ್ದು ಒಂದೆಡೆಯಾದರೆ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಐತಿಹಾಸಿಕ ಕಿತ್ತೂರು ಉತ್ಸವ (Kittur Utsav) ದ ಮೇಲೆ ಸೂತಕದ ಛಾಯೆ ಬಿದ್ದಿದೆ.

    ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ವಿಧಿವಶರಾಗಿದ್ದಾರೆ. ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದ ದಿ. ಕೇಂದ್ರ ಸಚಿವ ಸುರೇಶ್ ಅಂಗಡಿ (Suresh Angadi), ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಬಳಿಕ ಈಗ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ (Anand Mamani) ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿ (Corona Virus) ಗೆ ತುತ್ತಾಗಿದ್ದ ಸುರೇಶ್ ಅಂಗಡಿ ಚಿಕಿತ್ಸೆ ಫಲಿಸದೇ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ಸಾವನ್ನಪ್ಪಿದರು. ಇದೀಗ ಲೀವರ್ (Liver Problem) ಸಮಸ್ಯೆಯಿಂದ ಬಳಲುತ್ತಿದ್ದ ಆನಂದ ಮಾಮನಿ ಕೂಡ ಚಿಕಿತ್ಸೆ ಫಲಿಸದೇ ನಿನ್ನೆ ನಿಧನರಾಗಿದ್ದಾರೆ. ಚುನಾವಣೆ ವರ್ಷ ಇದ್ದಂತಹ ಸಂದರ್ಭದಲ್ಲಿ ಮೂವರು ಬಿಜೆಪಿ ಪ್ರಭಾವಿ ನಾಯಕರು ಸಾವು ಬಿಜೆಪಿಗೆ ಬರಸಿಡಿಲು ಬಡಿದಂತಾಗಿದೆ.

    ಡೆಪ್ಯೂಟಿ ಸ್ಪೀಕರ್ (Deputy Speaker) ಆಗಿದ್ದಾಗಲೇ ಅಂದು ತಂದೆ, ಇಂದು ಪುತ್ರ ಸಾವು: ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರ ತಂದೆ ಚಂದ್ರಶೇಖರ ಮಾಮನಿ ಸಹ ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ಮೃತಪಟ್ಟಿದ್ರು. 1995-1999 ಅವಧಿಯಲ್ಲಿ ಉಪಸಭಾಧ್ಯಕ್ಷ ಸ್ಥಾನ ನಿಭಾಯಿಸಿದ್ದಾಗ ಸಾವನ್ನಪ್ಪಿದ್ದರು. ಇದೀಗ ಅದೇ ಗತ್ತಿನಲ್ಲೇ ಉಪಸಭಾಧ್ಯಕ್ಷನ ಹುದ್ದೆ ನಿಭಾಯಿಸುತ್ತಿದ್ದ ಆನಂದ ಮಾಮನಿ ಕೂಡ ಉಪಸಭಾಧ್ಯಕ್ಷರಾಗಿದ್ದಾಗಲೇ ಕಾಕತಾಳೀಯ ಎಂಬಂತೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ

    ಕೊನೆಗೂ ಈಡೇರಲಿಲ್ಲ ಸಚಿವರಾಗಬೇಕೆಂಬ ಕನಸು: ಬೆಳಗಾವಿ ಜಿಲ್ಲೆಯ ಹಿರಿಯ ಲಿಂಗಾಯತ ಪಂಚಮಸಾಲಿ ನಾಯಕರಾಗಿದ್ದ ಆನಂದ ಮಾಮನಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಬಿಎಸ್‍ವೈ ಸಿಎಂ ಆಗಿದ್ದಾಗಲೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅವರಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಿ ಹಿಂದಿನ ಮುಖ್ಯಮಂತ್ರಿ ಬಿಎಸ್‍ವೈ ಸಮಾಧಾನಪಡಿಸಿದ್ದರು. ಇದೀಗ ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಆಗಿದ್ದಾಗಲೂ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಆನಂದ ಮಾಮನಿ ಮಂತ್ರಿ ಸ್ಥಾನ ಕೊಡದಿದ್ರೆ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿಯೂ ಆನಂದ ಮಾಮನಿ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಮನವೊಲಿಸಿದ್ದರು. ಇದನ್ನೂ ಓದಿ: ಶೀಘ್ರದಲ್ಲೇ ಜನಸೇವೆಗೆ ಬರುತ್ತೇನೆ- ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಮಾಮನಿ!

    ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಛಾಯೆ: ಸವದತ್ತಿ ಬಿಜೆಪಿ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ(56) ನಿಧನ ಹಿನ್ನೆಲೆ ಐತಿಹಾಸಿಕ ಕಿತ್ತೂರು ಉತ್ಸವ ಮೇಲೆ ಸೂತಕದ ಕರಿಛಾಯೆ ಬಿದ್ದಿದೆ. ಐತಿಹಾಸಿಕ ಕಿತ್ತೂರು ಉತ್ಸವ ರದ್ದಾಗುತ್ತಾ? ಮುಂದೂಡಲಾಗುತ್ತಾ? ಎಂಬ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ. ಇದೇ ಮೊದಲ ಬಾರಿಗೆ ಇಂದಿನಿಂದ ಮೂರು ದಿನಗಳ ಕಾಲ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಅದರಂತೆ ಇಂದು ಸಂಜೆ ನಡೆಯುವ ಕಿತ್ತೂರು ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದರು. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ಶಾಸಕ ಆನಂದ ಮಾಮನಿ ವಿಧಿವಶ ಹಿನ್ನೆಲೆ ಕಿತ್ತೂರು ಉತ್ಸವ ಆಚರಣೆ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರಿಗೆ ಗೌರವ ಕೊಡದೇ ಯಾವ ದೇವಸ್ಥಾನಕ್ಕೂ ಹೋದರೂ ದೇವರು ಒಲಿಯುವುದಿಲ್ಲ: ಹುಕ್ಕೇರಿ ಶ್ರೀ

    ಮಹಿಳೆಯರಿಗೆ ಗೌರವ ಕೊಡದೇ ಯಾವ ದೇವಸ್ಥಾನಕ್ಕೂ ಹೋದರೂ ದೇವರು ಒಲಿಯುವುದಿಲ್ಲ: ಹುಕ್ಕೇರಿ ಶ್ರೀ

    ಚಿಕ್ಕೋಡಿ: ಮಹಿಳೆಯರಿಗೆ (Womens) ಗೌರವ ಕೊಡದೇ ಯಾವ ದೇವಸ್ಥಾನಕ್ಕೂ ಹೋದರೂ ದೇವರು ಒಲಿಯುವುದಿಲ್ಲ. ದೇವಿಯ ಅವತಾರವಾಗಿರುವ ಮನೆಯಲ್ಲಿನ ಹೆಣ್ಣುಮಕ್ಕಳನ್ನು ಗೌರವಿಸಿದರೆ ಮಾತ್ರ ದೇವರು ಒಲಿಯುತ್ತಾನೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು (Chandrashekhar Shivacharya Mahaswamiji) ಹೇಳಿದರು.

    ಪ್ರತಿವರ್ಷ ಅತ್ಯಂತ ಅದ್ಧೂರಿಯಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆಯುತ್ತಿದ್ದ ಹಿರೇಮಠದ ದಸರಾ (Dasara) ಉತ್ಸವ ಈ ಬಾರಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸರಳಾ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, 9 ದಿನಗಳ ಕಾಲ ನಡೆಯುತ್ತಿದ್ದ ಹಿರೇಮಠ ದಸರಾ ಉತ್ಸವವನ್ನು ಕ್ಷೇತ್ರದ ಶಾಸಕ ಹಾಗೂ ಹಿರಿಯ ಸಚಿವ ಉಮೇಶ್ ಕತ್ತಿ ನಿಧನದಿಂದ ಸರಳವಾಗಿ ಆಚರಣೆ ನಡೆಸಲು ನಿರ್ಧರಿಸಲಾಗಿದೆ. ಶ್ರೀಮಠದ ಹಿಂದೆ ಹಾಕಿರುವ ಸರಳ ವೇದಿಕೆಯಲ್ಲಿ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಚಂಡಿಕಾ ಯಾಗ ಮಾಡಿ ಆಚರಣೆ ಮಾಡಲಾಗುತ್ತಿದೆ. ಪ್ರತಿವರ್ಷ ಒಬ್ಬ ಸಾಧಕರ ಸಾಧನೆಯನ್ನು ಗುರುತಿಸಿ ಅವರಿಗೆ ಶ್ರೀಮಠದಿಂದ ರೇಣುಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಬಾರಿ ಉಮೇಶ್ ಕತ್ತಿಯವರ (Umesh Katti) ಅಕಾಲಿಕ ನಿಧನದಿಂದ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಹಾಗೂ ಲೋಕ ಕಲ್ಯಾಣಕ್ಕಾಗಿ 9 ದಿನಗಳ ಕಾಲ ಚಂಡಿಕಾ ಯಾಗ ಆಯೋಜಿಸಲಾಗಿದೆ ಎಂದರು. ಇದನ್ನೂ ಓದಿ: ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ RSS : ಭಾಸ್ಕರ್ ಪ್ರಸಾದ್

    ದಸರಾ ಉತ್ಸವಕ್ಕೆ ಬೆಂಗಳೂರಿನ ವಿಭೂತಿಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ಚಾಮೀಜಿ, ಹುಕ್ಕೇರಿ ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ ಹಾಗೂ ಸಿಪಿಐ ಮೊಹಮ್ಮದ್‌ ರಫೀಕ್ ಚಾಲನೆ ನೀಡಿದರು. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ದಸರಾ ಉತ್ಸವ ನಡೆಯಲಿದೆ. ಇದನ್ನೂ ಓದಿ: ಮೋದಿ ಹೋದ ಕಡೆಯಲ್ಲಿ ಬಿಜೆಪಿ ಸೋತಿದೆ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಉಮೇಶ್ ಕತ್ತಿ ನಿಧನ ಹಿನ್ನೆಲೆ ಅದ್ದೂರಿ ದಸರಾ ಆಚರಣೆ ಇಲ್ಲ : ಹುಕ್ಕೇರಿ ಹಿರೇಮಠ ಶ್ರೀ

    ಉಮೇಶ್ ಕತ್ತಿ ನಿಧನ ಹಿನ್ನೆಲೆ ಅದ್ದೂರಿ ದಸರಾ ಆಚರಣೆ ಇಲ್ಲ : ಹುಕ್ಕೇರಿ ಹಿರೇಮಠ ಶ್ರೀ

    ಚಿಕ್ಕೋಡಿ: ಹುಕ್ಕೇರಿ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾಗಿದ್ದ ಉಮೇಶ್ ಕತ್ತಿ (Umesh Katthi) ಅವರು ಅಕಾಲಿಕ ನಿಧನರಾದ ಹಿನ್ನೆಲೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ (Hukkeri Hiremath) ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (Chandrasekhar Shivacharya Mahaswami) ತಿಳಿಸಿದರು.

    ಹುಕ್ಕೇರಿ ಹಿರೇಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು (Mysuru) ನಂತರದಲ್ಲಿ ಹುಕ್ಕೇರಿ ಹಿರೇಮಠ ದಸರಾ ಉತ್ಸವ ಉತ್ತರ ಕರ್ನಾಟಕ (UttarKarnataka) ಭಾಗದಲ್ಲಿ ಹೆಸರಾಗಿದೆ. ಪ್ರತಿ ವರ್ಷ ವಿಭಿನ್ನವಾದ ಕಾರ್ಯಕ್ರಮದ ಮೂಲಕ ಹಿರೇಮಠದ ದಸರಾ ಉತ್ಸವ ವೈಶಿಷ್ಟ್ಯ ಹಾಗೂ ಅದ್ದೂರಿಯಾಗಿ ನಡೆದು ಬಂದಿತ್ತು. ದಿವಂಗತ ಉಮೇಶ್ ಕತ್ತಿ ಅವರು ಹಿರೇಮಠದ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಅವರ ನಿಧನದ ಹಿನ್ನೆಲೆ ಸರಳವಾಗಿ ದಸರಾ ಆಚರಣೆಗೆ (Dasara celebration) ನಿರ್ಧರಿಸಲಾಗಿದೆ. ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ ಪತ್ನಿ

    ಧಾರ್ಮಿಕವಾಗಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರ ನವರಾತ್ರಿ ಉತ್ಸವ ಸರಳವಾಗಿ ಜರುಗಲಿದೆ. ಶ್ರೀ ಮಠದಲ್ಲಿ 108 ವಟುಗಳು, ಪುರೋಹಿತರು ಹಾಗೂ ಭಕ್ತರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿ, ವಿಧಾನಗಳು ಜರುಗಲಿವೆ. ವಿಶೇಷವಾಗಿ ಬ್ರಾಹ್ಮಣ ಹಾಗೂ ವೀರಶೈವ ಪುರೋಹಿತರು ಸೇರಿಕೊಂಡು ಒಂಭತ್ತು ದಿನಗಳ ಕಾಲ ಚಂಡಿಕಾಯಾಗ ನಡೆಸಲಿದ್ದಾರೆ ಎಂದರು. ಇದನ್ನೂ ಓದಿ: ವಿವಾಹಿತ ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರೂ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ದಿವಂಗತ ಉಮೇಶ್ ಕತ್ತಿ ನಿವಾಸಕ್ಕೆ ಈಶ್ವರ ಖಂಡ್ರೆ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ದಿವಂಗತ ಉಮೇಶ್ ಕತ್ತಿ ನಿವಾಸಕ್ಕೆ ಈಶ್ವರ ಖಂಡ್ರೆ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ

    ಚಿಕ್ಕೋಡಿ: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಅರಣ್ಯ ಸಚಿವ ದಿವಂಗತ ಉಮೇಶ್ ಕತ್ತಿ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ದಿ. ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿದ ಅವರು, ಸಹೋದರ ರಮೇಶ್ ಕತ್ತಿ ಅವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಉಮೇಶ್ ಕತ್ತಿ ಜೊತೆಗಿನ ಒಡನಾಟ ಹಾಗೂ ಅವರ ನೇರ ವ್ಯಕ್ತಿತ್ವದ ಕುರಿತು ನೆನಪಿಸಿಕೊಂಡರು.  ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರಲ್ಲ: ಎಸ್.ಟಿ.ಸೋಮಶೇಖರ್

    ಉಮೇಶ್ ಕತ್ತಿ ಒಬ್ಬ ಸರಳ ವ್ಯಕ್ತಿತ್ವದ ಮನುಷ್ಯ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಅವರು ಯಾವತ್ತೂ ಬದಲಾಗಲಿಲ್ಲ. ಎಲ್ಲರ ಜೊತೆಗೆ ಸ್ನೇಹದಿಂದ ಇರುತ್ತಿದ್ದರು. ಯಾವುದೇ ಸಂಕಷ್ಟದ ಪರಿಸ್ಥಿತಿ ಬಂದರೂ, ಹಾಸ್ಯದ ಮೂಲಕ ಅದನ್ನು ತಿಳಿಗೊಳಿಸುವ ಶಕ್ತಿ ಇವರಿಗಿತ್ತು. ಉತ್ತರ ಕರ್ನಾಟಕದ ಗಟ್ಟಿ ಧ್ವನಿ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನೋವಿನ ಸಂಗತಿ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಥಗಿತಗೊಳಿಸಿದ ಟೋಯಿಂಗ್ ವ್ಯವಸ್ಥೆ ಪುನಃ ಜಾರಿ ಇಲ್ಲ: ಆರಗ ಜ್ಞಾನೇಂದ್ರ

    ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಆನಂದ ನ್ಯಾಮಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉಮೇಶ್‌ ಕತ್ತಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಆಗ್ರಹ

    ಉಮೇಶ್‌ ಕತ್ತಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಆಗ್ರಹ

    ಚಿಕ್ಕೋಡಿ: ದಿವಂಗತ ಉಮೇಶ್ ಕತ್ತಿ (Umesh Katti) ಅವರ ಕುಟುಂಬಕ್ಕೆ (Family) ಸಚಿವ ಸ್ಥಾನ (Minister Post) ನೀಡಬೇಕು ಎನ್ನುವ ಆಗ್ರಹವನ್ನು ಕತ್ತಿ ಕುಟುಂಬದ ಅಭಿಮಾನಿಗಳು ಹೊರಹಾಕಿದ್ದಾರೆ.

    ಇತ್ತೀಚೆಗಷ್ಟೆ ಹೃದಯಾಘಾತದಿಂದ ನಿಧನರಾದ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವರಾಗಿದ್ದ ಉಮೇಶ್ ಕತ್ತಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಬೇಕು ಎನ್ನುವ ಒಕ್ಕೊರಲಿನ ಆಗ್ರಹವನ್ನು ಅವರ ಅಭಿಮಾನಿಗಳು ಮಾಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಯಮಕನಮರಡಿ ಗ್ರಾಮದಲ್ಲಿ ಅಗಲಿದ ನಾಯಕ ಉಮೇಶ್ ಕತ್ತಿ ಅವರಿಗೆ ದೀಪ ನಮನ ಸಲ್ಲಿಸಿದ ಅವರ ಅಭಿಮಾನಿಗಳು ಅವರ ಕುಟುಂಬಕ್ಕೆ ಬಿಜೆಪಿ (BJP) ಹೈಕಮಾಂಡ್ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

    ಈ ಸಂದರ್ಭದಲ್ಲಿ ಮಾತನಾಡಿದ ಕತ್ತಿ ಕುಟುಂಬದ ಅಭಿಮಾನಿ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ್, ಉತ್ತರ ಕರ್ನಾಟಕದ ಧ್ವನಿಯಾಗಿದ್ದ ಉಮೇಶ್ ಕತ್ತಿ ಅವರನ್ನು ಕಳೆದುಕೊಂಡಿದ್ದು ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕ್ಷೇತ್ರದ ಅಭಿವೃದ್ಧಿಗಾಗಿ ಕಂಡಿದ್ದ ಕನಸುಗಳನ್ನು ನನಸು ಮಾಡಲು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವಿ ಹಂಜಿ ಸೇರಿದಂತೆ ನೂರಾರು ಕತ್ತಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

    Live Tv
    [brid partner=56869869 player=32851 video=960834 autoplay=true]

  • ವಿಧಾನಸಭೆ ಕಲಾಪ: ಉಮೇಶ್ ಕತ್ತಿ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ- ಸಿಎಂ

    ವಿಧಾನಸಭೆ ಕಲಾಪ: ಉಮೇಶ್ ಕತ್ತಿ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ- ಸಿಎಂ

    ಬೆಂಗಳೂರು: ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನ (Session) ಇಂದು ಆರಂಭಗೊಂಡಿದ್ದು, ರಾಜಕೀಯ ನಾಯಕರು ಇತ್ತೀಚೆಗೆ ಅಗಲಿದ ಸಚಿವ ಉಮೇಶ್ ಕತ್ತಿ (Umesh Katti) ಅವರನ್ನು ನೆನಪಿಸಿಕೊಂಡರು. ವಂದೇ ಮಾತರಂ ಗೀತೆಯ ಮೂಲಕ ಮೊದಲ ದಿನದ ಕಲಾಪ ಆರಂಭದಲ್ಲಿ ಸಚಿವ ಉಮೇಶ್ ಕತ್ತಿ, ಮಾಜಿ ಸಚಿವ ಪ್ರಭಾಕರ್ ರಾಣೆ, ಮಾಜಿ ಶಾಸಕ ಎ ಕೆಂಪೇಗೌಡ, ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಮಾಜಿ ಶಾಸಕ ದೇಸಾಯಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

    ಸ್ಪೀಕರ್ ಕಾಗೇರಿಯವರು ಮೊದಲಿಗೆ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಕ ಪ್ರಸ್ತಾವ ಮಂಡಿಸಿದರು. ನಂತರ ಉಳಿದ ಗಣ್ಯರು ಹಾಗೂ ಇಂಗ್ಲೆಂಡ್ ರಾಣಿ ಎಲಿಜಬೆತ್ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಇದನ್ನೂ ಓದಿ: ನನ್ನಿಷ್ಟದಂತೆ ಬದುಕದಿದ್ದರೆ ಏಕೆ ಇರಬೇಕು? – ಫಿಲ್ಟರ್ ಇಟ್ಕೊಂಡು ಬದುಕುವ ಮಗ ನಾನಲ್ಲ ಎಂದಿದ್ದರು ಉಮೇಶ್ ಕತ್ತಿ

    ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai), ಕತ್ತಿ ಹಿಡಿದ ಕೆಲಸ ಮುಗಿಸದೇ ಬಿಡ್ತಿರ್ಲಿಲ್ಲ. ಬಹಳ ಹಾಸ್ಯ ಪ್ರವೃತ್ತಿ ಇತ್ತು. ಬಹಳ ಸಲ ಪಕ್ಷ ಬದಲಾಯಿಸಿದ್ರೂ ಗೆಲ್ಲುತ್ತಿದ್ದರು. ಪಕ್ಷ ಬದಲಾವಣೆ ಮಾಡುತ್ತಿದರೂ ಜನ ಅವರನ್ನು ಜನ ಕೈ ಬಿಟ್ಟಿರಲಿಲ್ಲ. ಶ್ರೀಮಂತಿಕೆ ಇದ್ದರೂ ಜನಸಾಮಾನ್ಯರ ನೆಂಟಸ್ತಿಕೆ ಬಿಡುತ್ತಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡ್ರು (HD Devegowda) ಸಿಎಂ ಆಗಿದ್ದಾಗ ಕತ್ತಿಯವರಿಗೆ ಸಚಿವ ಸ್ಥಾನ ಕೊಟ್ಟಿದ್ರು. ದೇವೇಗೌಡ್ರು ಮೊದಲ ಸಂಪುಟ ವಿಸ್ತರಣೆ ವೇಳೆ ಕತ್ತಿ ಅವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಈ ಬಗ್ಗೆ ಕತ್ತಿ ಅವರಿಗೆ ಬೇಸರ ಇದ್ದರೂ ಸ್ಪೋರ್ಟಿವ್ ಆಗಿ ಸ್ವೀಕರಿಸಿದರು ಎಂದರು.

    ಉಮೇಶ್ ಕತ್ತಿ ಕ್ರಿಯಾಶೀಲ ವರ್ಣರಂಜಿತ ರಾಜಕಾರಣಿ. ತೀಕ್ಷ್ಣವಾದ ಸಾಮಾನ್ಯ ಜ್ಞಾನ ಬುದ್ಧಿವಂತಿಕೆ ಹೊಂದಿದವರಾಗಿದ್ದರು. ಶಾಸಕರಾದ ಮೇಲೆ ಸಣ್ಣ ವಯಸ್ಸಿನಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಸ್ ಆರ್ ಬೊಮ್ಮಾಯಿಗೆ ಹತ್ತಿರವಾಗಿದ್ದರು. ಮುಕ್ತವಾದ ಮನಸ್ಸು ಮಾತು ಹೊಂದಿದ್ದರು. ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಎಲ್ಲ ಪಾರ್ಟಿ ಬಿ ಫಾರಂ ನನ್ನ ಜೇಬಿನಲ್ಲಿ ಇದೆ ಎಂದು ತಮಾಷೆಗೆ ಹೇಳುತ್ತಿದ್ದರು. ಜನರ ಮಧ್ಯೆ ಇದ್ದು ಬೆಳೆದ ರಾಜಕಾರಣಿ. ಸ್ನೇಹಮಯ ಸ್ವಭಾವ ಹೊಂದಿದ್ದರು. ಕತ್ತಿ ಬಂಧಿಖಾನೆ, ತೋಟಗಾರಿಕೆ ಸಚಿವರಾಗಿದ್ದರು. ಒಮ್ಮೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಡಲು ಹೋಗಿದ್ದರು. ಆದರೆ ಎಸ್ ಆರ್ ಬೊಮ್ಮಾಯಿ ಅವರು ಸಮಾಧಾನ ಮಾಡಿದ್ದರು. ನಂತರ ಅವರಿಗೆ ಪಿಡಬ್ಯುಡಿ (PWD) ಖಾತೆ ಸಿಕ್ಕಿತು ಎಂದರು.

    ಇದೇ ವೇಳೆ ಕತ್ತಿಯವರ ಪ್ರತ್ಯೇಕ ರಾಜ್ಯ ಹೇಳಿಕೆಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ, ಕತ್ತಿ ಬೆಳಗಾವಿ (Belagavi Politics) ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಎರಡು ದಶಕಗಳಿಂದ ಬೆಳಗಾವಿ ರಾಜಕಾರಣಲ್ಲಿ ಪ್ರಮುಖ ಪಾತ್ರ. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಕತ್ತಿ ಆಗಾಗ್ಗೆ ಮಾತಾಡ್ತಿದ್ರು. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂಬ ಕಳಕಳಿಯಿಂದ ಆ ಮಾತು ಹೇಳ್ತಿದ್ರು. ಕರ್ನಾಟಕ ವಿಭಜನೆ ಉದ್ದೇಶ ಅವರಿಗೆ ಇರಲಿಲ್ಲ. ಅವರಿಗೆ ಅಭಿವೃದ್ಧಿ ಆಗಬೇಕೆಂಬ ದೂರದೃಷ್ಟಿ ಇತ್ತು ಎಂದು ಹೇಳಿದರು. ಇದನ್ನೂ ಓದಿ: 6 ಪಕ್ಷ, 8 ಬಾರಿ ಶಾಸಕ – ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಸಿಎಂ ಕನಸು ಕಂಡಿದ್ದ ಕತ್ತಿ

    ಕತ್ತಿ ನಿಧನದಿಂದ ಸರ್ಕಾರಕ್ಕೆ, ಪಕ್ಷಕ್ಕೆ ಹಾನಿಯಾಗಿದೆ. ವೈಯಕ್ತಿಕವಾಗಿ ನನಗೆ ಹಾನಿ ತಂದಿದೆ. ಮೊನ್ನೆಯ ಸಂಪುಟ ಸಭೆಯಲ್ಲಿ ಹಿಡಕಲ್ ಡ್ಯಾಮ್ ಅನ್ನು ಟೂರಿಸ್ಟ್ ಕೇಂದ್ರ, ಉದ್ಯಾನವನ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದ್ರು. ಅದಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡ್ತಿದ್ದ ಪರಿಹಾರದ ಮೊತ್ತ 50 ಲಕ್ಷ ರೂ. ಗೆ ಏರಿಕೆ: ಸಿಎಂ ಘೋಷಣೆ

    ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡ್ತಿದ್ದ ಪರಿಹಾರದ ಮೊತ್ತ 50 ಲಕ್ಷ ರೂ. ಗೆ ಏರಿಕೆ: ಸಿಎಂ ಘೋಷಣೆ

    ಬೆಂಗಳೂರು: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರದ ಮೊತ್ತ 30 ಲಕ್ಷದಿಂದ 50 ಲಕ್ಷ ರೂ. ಗೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೊಷಿಸಿದ್ದಾರೆ.

    ಅರಣ್ಯ ಇಲಾಖೆ ಕಟ್ಟಡದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತಾತ್ಮ ಅರಣ್ಯ ಇಲಾಖೆ ಸಿಬ್ಬಂದಿಗೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ದಿವಂಗತ ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಸ್ಮರಿಸಿಕೊಂಡರು.

    ಮನುಷ್ಯ ಪ್ರಾಣಿ ಸಂಘರ್ಷ ಕಮ್ಮಿ ಮಾಡಬೇಕಿದೆ. ಮನುಷ್ಯ ಕಾಡಲ್ಲಿ ಹೆಚ್ಚು ಇದ್ದಷ್ಟೂ ಪ್ರಾಣಿಗಳು ಹೊರಗೆ ಬರುತ್ತವೆ. ಅರಣ್ಯ ಇಲಾಖೆ ಈ ಸಂಘರ್ಷ ಕಮ್ಮಿ ಮಾಡುವತ್ತ ಗಮನ ಕೊಡಬೇಕು. ಆನೆ (Elephant) -ಮಾನವ ಸಂಘರ್ಷ ಹೆಚ್ಚಿದೆ. ಇದನ್ನು ತಡೆಯಲು ಹೊಸ ವಿಧಾನಗಳ ಅಳವಡಿಕೆ ಅಗತ್ಯ ಇದೆ. ಆನೆಗಳು ಜಮೀನಿಗೆ ಬಾರದಂತೆ ತಡೆಯಲು ಹೊಸ ವಿಧಾನಗಳ ಅಳವಡಿಕೆಗೆ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಉಮೇಶ್ ಕತ್ತಿಯವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.  ಇದನ್ನೂ ಓದಿ: ‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ

    ಬಂಡೀಪುರ (Bandipura) ದಲ್ಲಿ ಕತ್ತಿಯವರು ಹೊಸ ವಿಧಾನಕ್ಕೆ ಚಾಲನೆ ಕೊಟ್ಟಿದ್ರು. ಇತ್ತೀಚಿನ ದಿನಗಳಲ್ಲಿ ಇಡೀ ಫಾರೆಸ್ಟ್ ರೇಂಜ್ ಓಡಾಡಿದ ಸಚಿವರು ಅಂದ್ರೆ ಅದು ಉಮೇಶ್ ಕತ್ತಿ. ಕತ್ತಿಯವರು ಅರಣ್ಯಾಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕ್ತಿರಲಿಲ್ಲ. ಕತ್ತಿಯವರು ಇನ್ನಷ್ಟು ವರ್ಷ ನಮ್ಮ ಜೊತೆ ಇರಬೇಕಿತ್ತು, ಜನಸೇವೆ ಮಾಡಬೇಕಿತ್ತು ಎಂದು ಸ್ಮರಿಸಿದರು.

    ಈ ವರ್ಷ ಅರಣ್ಯ (Forest) ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನ ಇಲಾಖೆ ಮಾಡಿದೆ. 21% ಅರಣ್ಯವನ್ನ 30% ಗೆ ಹೆಚ್ಚಿಸೋದು ನಮ್ಮ ಗುರಿ. ಬಂಜರು ಭೂಮಿ, ಗುಡ್ಡಗಾಡುಗಳಲ್ಲಿ ಗಿಡಮರ ಬೆಳೆಸಲು ಇದೇ ವೇಳೆ ಸಿಎಂ ಮನವಿ ಮಾಡಿದರು. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ (National Forest Martyrs Day) ಯಲ್ಲಿ ಉಮೇಶ್ ಕತ್ತಿಯವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಉಮೇಶ್ ಕತ್ತಿ ರಾಜಕೀಯ ಜೀವನ ಪುಸ್ತಕವಾಗಬೇಕು: ಅರುಣ್ ಸಿಂಗ್

    ಉಮೇಶ್ ಕತ್ತಿ ರಾಜಕೀಯ ಜೀವನ ಪುಸ್ತಕವಾಗಬೇಕು: ಅರುಣ್ ಸಿಂಗ್

    ಚಿಕ್ಕೋಡಿ: ಉಮೇಶ್ ಕತ್ತಿ ಅವರ ರಾಜಕೀಯ ಜೀವನ ಪುಸ್ತಕವಾಗಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

    ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ದಿವಂಗತ ಉಮೇಶ್ ಕತ್ತಿಯವರ ನಿವಾಸಕ್ಕೆ ಭೇಟಿ ನೀಡಿದ ಅವರು, ಸಚಿವ ಉಮೇಶ್ ಕತ್ತಿ ನನ್ನ ವೈಯಕ್ತಿಕ ಮಿತ್ರ. ಬೆಳಗಾವಿ, ಬೆಂಗಳೂರು(Bengaluru), ದೆಹಲಿಯಲ್ಲಿ ಅನೇಕ ಸಲ ಕುಳಿತು ಮಾತನಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಉಮೇಶ್ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದಾಗಿ ಪಕ್ಷ ಹಾಗೂ ರಾಜ್ಯಕ್ಕೆ ನಷ್ಟ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    40 ವರ್ಷಗಳ ಕಾಲದಿಂದ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಈ 40 ವರ್ಷಗಳ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು. ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ಅವರ ದೂರದೃಷ್ಟಿ, ಅವರ ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ ಎಂದರು. ಇದನ್ನೂ ಓದಿ: ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

    ಬಳಿಕ ಮಾತನಾಡಿದ ಸಚಿವ ಕೆ. ಸುಧಾಕರ್(Sudhakar) ಅವರು, ಉಮೇಶ್ ಕತ್ತಿ(Umesh Katti) ಅವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ನೋವನ್ನುಂಟು ಮಾಡಿದೆ. ಅವರದ್ದು, ನನ್ನದು ದೀರ್ಘ ಕಾಲದ ಸ್ನೇಹ ಸಂಬಂಧ. ಉಮೇಶ್ ಕತ್ತಿ ಇದ್ದಲ್ಲಿ ನಗುವಿಗೆ ಬರ ಇರಲಿಲ್ಲ. ಅವರು ಇಲ್ಲದ ನಷ್ಟವನ್ನು ಎದುರಿಸುವಂತಹ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

    ಇದೇ ವೇಳೆ ಉಮೇಶ್ ಕತ್ತಿ ಭಾವಚಿತ್ರಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್(Arun Singh) ಪುಷ್ಪ ನಮನ ಸಲ್ಲಿಸಿದರು. ನಂತರ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಸಚಿವ ಡಾ. ಕೆ. ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್, ಸಚಿವ ಭೈರತಿ ಬಸವರಾಜ್ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

    ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

    ಚಿಕ್ಕೋಡಿ: ಹೃದಯಾಘಾತದಿಂದ ಸಾವನ್ನಪ್ಪಿದ ಉಮೇಶ್ ಕತ್ತಿ(Umesh Katti) ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಇಂದು ಪೂರೈಸಿದರು.

    ನಿನ್ನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಗದ್ದೆಯಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಅಂತ್ಯಕ್ರಿಯೆ ನಡೆದಿತ್ತು. ಸಮಾಧಿಗೆ ತೆರಳಿ ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು.

    ಸಮಾಧಿಗೆ ಪೂಜೆ ಮಾಡಿ ಸಮಾಧಿಯ ಮೇಲೆ ಅವರಿಷ್ಟದ ತಿಂಡಿ, ತಿನಿಸುಗಳನ್ನು ಇಡಲಾಯಿತು. ಜೊತೆಗೆ ಸಮಾಧಿ ಮೇಲೆ ಅವರಿಗೆ ಇಷ್ಟವಾದ ಗುಟ್ಕಾ ಪ್ಯಾಕೇಟ್ ಇಟ್ಟು ನಮನ ಸಲ್ಲಿಸಲಾಯಿತು. ಇಂದು ಕೂಡ ಅವರ ಮನೆಗೆ ಅಭಿಮಾನಿಗಳು ದಂಡೇ ಹರಿದು ಬರುತ್ತಿದೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

    ಮಂಗಳವಾರ ಹೃದಯ ಸ್ತಂಭನದಿಂದ ಆಸ್ಪತ್ರೆ ಸೇರಿದ್ದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಕೊನೆಯುಸಿರೆಳೆದಿದ್ದಾರೆ. ಸಚಿವರ ಅಗಲಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ. ಇದನ್ನೂ ಓದಿ: ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ: ಪೃಥ್ವಿ ಕತ್ತಿ ಕಣ್ಣೀರು

    Live Tv
    [brid partner=56869869 player=32851 video=960834 autoplay=true]