Tag: ಉಮಾಪತಿ ಶ್ರೀನಿವಾಸ್

  • ದರ್ಶನ್ ಪ್ರಕರಣ: ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ಕೊಡಲಿ- ಉಮಾಪತಿ ಶ್ರೀನಿವಾಸ್

    ದರ್ಶನ್ ಪ್ರಕರಣ: ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ಕೊಡಲಿ- ಉಮಾಪತಿ ಶ್ರೀನಿವಾಸ್

    ರಾಬರ್ಟ್ (Robert), ಉಪಾಧ್ಯಕ್ಷ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇದೀಗ ರೇಣುಕಾಸ್ವಾಮಿ ಪ್ರಕರಣದ (Renukaswamy Murder Case) ಕುರಿತು ರಿಯಾಕ್ಟ್ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ನೀಡಲಿ. ತಪ್ಪು ಮಾಡಿಲ್ಲ ಅಂದರೆ ಪ್ರಕರಣದಿಂದ ಆಚೆ ಬರಲಿ ಎಂದು ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೂ ಮುನ್ನ ದಯನೀಯ ಸ್ಥಿತಿಯ ಫೋಟೊ ರಿವೀಲ್‌ – ಕಣ್ಣೀರಿಡುತ್ತ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಿರುವ ಸ್ವಾಮಿ

    ಸುದ್ದಿಗೋಷ್ಠಿಯೊಂದರಲ್ಲಿ ದರ್ಶನ್  ಬಗ್ಗೆ ಉಮಾಪತಿ (Umapathy Srinivas) ಪ್ರತಿಕ್ರಿಯಿಸಿ, ಮಾನವೀಯತೆಯಿಂದ ನೋಡೋದಾದ್ರೆ ಮಾಡಿದ್ದು ಖಂಡಿತಾ ತಪ್ಪು. ದರ್ಶನ್ (Darshan) ಪ್ರಕರಣದ ಕುರಿತು ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದೆ ಸತ್ಯಾಸತ್ಯತೆ ಆಚೆ ಬರುತ್ತದೆ. ಇನ್ನೂ ನಾನು ಯಾರ ಶೋಲ್ಡರ್ ಮೇಲೂ ಗನ್ ಇಟ್ಟು ಹೊಡಿಯೋಕೆ ಹೋಗಲ್ಲ. ಏನೇ ಇದ್ದರೂ ನೇರಾನೇರ ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ‘ಫೈರ್’ ಸಂಸ್ಥೆ

    ನನಗೆ ಬಗ್ಗೆ ಯಾರೋ ಕಾಮೆಂಟ್ ಮಾಡಿದರು. ನಾನು ಹೋಗಿ ದೂರು ಕೊಟ್ಟೆ ಅಷ್ಟೇ. ಒಂದು ಹಾಳೆ ಪೆನ್‌ನಲ್ಲಿ ಆಗುವ ಕೆಲಸವಿದು. ನಾನು ಸಾಧಿಸೋಕೆ ಅಂತ ಹುಟ್ಟಿದ್ದೀವಿ ಸಾಯೋದಕ್ಕೆ ಅಲ್ಲ. ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದಿದ್ದೇನೆ. ಚಾಮುಂಡೇಶ್ವರಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ ಮಾಡಿಲ್ಲ ಅಂದರೆ ಆಚೆ ಬರಲಿ. ಕಾಮೆಂಟ್ ಮಾಡಿದ ಅನ್ನೋ ವಿಚಾರಕ್ಕೆ ಹೀಗೆ ಕ್ರೌರ್ಯ ಮಾಡಿರೋದ್ರಿಂದ ಎಷ್ಟು ಕುಟುಂಬ ಇಂದು ಅನಾಥವಾಗಿದೆ. ದರ್ಶನ್ ನನಗೆ ವೈರಿಯಂತಲ್ಲ. ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದರು.

    ಈ ವೇಳೆ, ಮೀಟೂ ಪ್ರಕರಣದ ಬಗ್ಗೆ ಉಮಾಪತಿ ಮಾತನಾಡಿ, ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ಮಾಡಿದ್ದೀವಿ. ಯಾರನ್ನ ಬೇಕಾದ್ರೂ ವಿಚಾರಿಸಬಹುದು. ಯಾರ ಮನೆಯ ಹೆಣ್ಮಕ್ಕಳು ಆದ್ರೂ ನಮ್ಮ ಮನೆಯ ಹೆಣ್ಮಕ್ಕಳು ಇದ್ದಂತೆ ನೋಡಿಕೊಂಡಿದ್ವಿ. ಹೆಣ್ಮಕ್ಕಳಿಗೆ ನಮ್ಮ ಸೆಟ್‌ನಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದ್ದೇವೆ ಎಂದರು. ಇನ್ನೂ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರೂ ಹಾಗೆ ಇರುವುದಿಲ್ಲ. ಕೆಲವರಿಗೆ ಬದುಕಿನ ಬುತ್ತಿಯೇ ಇಂಡಸ್ಟ್ರಿ ಆಗಿದೆ. ಕೇರಳದ ಹೇಮಾ ತರದ ಕಮಿಟಿ ಬೇಕು ಬೇಡ ಅಂತ ಹೇಳುವುದಲ್ಲ. ಇದರಲ್ಲಿ ಪಬ್ಲಿಸಿಟಿ ಮಾಡಿಕೊಳ್ಳಬಾರದು. ಇದು ಕಾರ್ಯ ರೂಪಕ್ಕೆ ಬರಬೇಕು ಎಂದಿದ್ದಾರೆ.

  • ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಇರಬಾರದು- ದರ್ಶನ್‌ಗೆ ಉಮಾಪತಿ ಟಾಂಗ್

    ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಇರಬಾರದು- ದರ್ಶನ್‌ಗೆ ಉಮಾಪತಿ ಟಾಂಗ್

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ತಾವು ಕಂಡಂತೆ ದರ್ಶನ್ ಹೇಗೆ? ಎಂಬುದನ್ನು ನಿರ್ಮಾಪಕ ಉಮಾಪತಿ ವಿವರಿಸಿದ್ದಾರೆ. 6 ಗಂಟೆ ನಂತರ ದರ್ಶನ್ ಬ್ಯಾಡ್ ಮ್ಯಾನ್ ಎಂದು ಉಮಾಪತಿ ಕುಟುಕಿದ್ದಾರೆ. ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಆಗಬಾರದು ಎಂದು ದರ್ಶನ್‌ಗೆ (Darshan) ಉಮಾಪತಿ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್ ಕುಳಿತರೆ ಜುಟ್ಟು, ನಿಂತರೆ ಕಾಲು- ಗುಮ್ಮಿದ ಉಮಾಪತಿ

    ನಾನು ಅವರು ಸ್ನೇಹಿತರಾಗಿರುವರೆಗೂ ದರ್ಶನ್ ಒಳ್ಳೆಯ ವ್ಯಕ್ತಿನೇ. 6 ಗಂಟೆ ನಂತರ ಬ್ಯಾಡ್ ಮ್ಯಾನ್, 6ರ ಮುಂಚೆ ಗುಡ್ ಮ್ಯಾನ್ ಅಂತ. ಅವರವರ ಹವ್ಯಾಸ, ಚಟ ಅವರನ್ನು ಹಾಳು ಮಾಡುತ್ತೆ. ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂದು ದರ್ಶನ್ ಕುರಿತು ಉಮಾಪತಿ ಮಾತನಾಡಿದ್ದಾರೆ.

    ಅವತ್ತೂ ಈ ಪ್ರಕರಣದ ಬಗ್ಗೆ ಮಾತನಾಡಿದಾಗ, ಮನೆಯಲ್ಲಿ ಅವರದ್ದು ಏನೋ ಕೆಟ್ಟ ಸಮಯ. ಆ ತರಹ ನೀನು ಮಾತನಾಡಬಾರದು ಎಂದು ನನ್ನ ತಾಯಿ ಮತ್ತು ಪತ್ನಿ ನನಗೆ ತಿದ್ದಿದರು. ಹಾಗೇ ನಾವು ಕುಟುಂಬವನ್ನು ಇಟ್ಟುಕೊಂಡಿದ್ದೇವೆ. ಎಷ್ಟೇ ಬೆಳೆದರೂ ಕೂಡ ಮನುಷ್ಯ ತಗ್ಗಿ ಬಗ್ಗಿ ನಡೆಯಬೇಕಾಗುತ್ತದೆ ಎಂದು ಉಮಾಪತಿ ಮಾತನಾಡಿದ್ದಾರೆ.

    ನಾನು ನೋಡಿದ ಹಾಗೆ ದರ್ಶನ್ ಒಳ್ಳೆಯ ಮನುಷ್ಯನೇ. ನನಗಂತೂ ಅವರು ಅನ್ಯಾಯ ಮಾಡಿಲ್ಲ. ಆದರೆ ಆ ಮೈಸೂರು ಕೇಸ್ ನಂತರ ಅವರ ನಡವಳಿಕೆ ಬದಲಾಯ್ತು. ಅವರ ಸಹವಾಸ ಕೂಡ ಬದಲಾಯಿತು ಎಂದು ಮಾತನಾಡಿದ್ದಾರೆ. ಇವತ್ತಿಗೂ ಹೇಳ್ತೀನಿ ಆ ಕಾಟೇರ ಟೈಟಲ್ ಅವರೇ ಕೊಟ್ಟಿರಬಹುದು. ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು, ಅದಕ್ಕೆ ದುಡ್ಡು ಕೊಟ್ಟಿದ್ದು ನಾನೇ ಎಂದಿದ್ದಾರೆ. ಸಿನಿಮಾದಿಂದ ನಾನು ದುಡ್ಡು ಮಾಡಿದ್ದಲ್ಲ. ಸಿನಿಮಾ ಮಾಡುವ ದುಡ್ಡಿನಲ್ಲಿ ನಾನು ವ್ಯಾಪಾರ ಮಾಡಿದ್ರೆ ಡಬಲ್ ದುಡಿಯುತ್ತೇನೆ. ಇವತ್ತು ಇಷ್ಟು ಗೌರವ, ಸ್ಥಾನಮಾನ ಸಿಕ್ಕಿದೆ ಅಂದರೆ ಅದು ಸಿನಿಮಾದಿಂದ ಎಂದು ಉಮಾಪತಿ ಮಾತನಾಡಿದ್ದಾರೆ.

    ಅಂದಹಾಗೆ, ದರ್ಶನ್ ನಟನೆಯ ‘ರಾಬರ್ಟ್’ (Robert Film) ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. 2021ರಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

  • ದೇವರಂಥ ಮನುಷ್ಯ, ನಾಯಿಯಂತ ಬುದ್ಧಿ- ದರ್ಶನ್‌ಗೆ ತಿವಿದ ಉಮಾಪತಿ

    ದೇವರಂಥ ಮನುಷ್ಯ, ನಾಯಿಯಂತ ಬುದ್ಧಿ- ದರ್ಶನ್‌ಗೆ ತಿವಿದ ಉಮಾಪತಿ

    ನ್ನಡದ ಖ್ಯಾತ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಅರೆಸ್ಟ್ ಆಗಿದ್ದಾರೆ. ಈ ವಿಚಾರಕ್ಕೆ ‘ರಾಬರ್ಟ್’ ನಿರ್ಮಾಪಕ ಉಮಾಪತಿ (Umapathy) ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಮಾಡುವುದು ಅಕ್ಷಮ್ಯ ಅಪರಾಧ. ಅದು ಯಾರೇ ಮಾಡಿದ್ರೂ ತಕ್ಕ ಶಿಕ್ಷೆಯಾಗಬೇಕು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ

    ಕೊಲೆ ಮಾಡುವುವು ಅಕ್ಷಮ್ಯ ಅಪರಾಧ. ಯಾರೇ ಅಪರಾಧ ಮಾಡಿದ್ರು ತಪ್ಪು ತಪ್ಪೇ ಅದು. ನಾನು ಕೆಲವೊಂದು ಕೇಳಿರೋದು. ರೇಣುಕಾಸ್ವಾಮಿ ಬಿಡಿ ಎಂದೂ ಎಷ್ಟೇ ಬೇಡಿಕೊಂಡರು ಬಿಡಲಿಲ್ಲ ಅಂತ. ಮೆಗ್ಗಾರ್‌ನಲ್ಲಿ ತರಿಸಿ ಹೊಡೆದಿರೋದು. ಹಾಗಾದ್ರೆ ಅವರನ್ನು ಸಾಯಿಸಬೇಕು ಅಂತ ಯೋಚಿಸಿಯೇ ಹೀಗೆ ಮಾಡಿದ್ರಾ? ಗೊತ್ತಿಲ್ಲ ಎಂದು ಉಮಾಪತಿ ಮಾತನಾಡಿದ್ದಾರೆ.

    ನನ್ನ ತಂದೆ ತೀರಿಕೊಂಡು 12 ವರ್ಷವಾಗಿದೆ. ನನ್ನ ತಂದೆ ನಮಗೆ ದಾರಿ ತೋರಿಸಿದರು ಕೂಡ ನಮಗೆ ಕಷ್ಟ ಇತ್ತು. ಆದರೆ ಯಾವ ದಾರಿ ಹುಡುಕಬೇಕು ಎಂದು ಗೊತ್ತಾಗಲಿಲ್ಲ. ಇನ್ನೂ ಈಗ ಹುಟ್ಟಲಿರುವ ಮಗುವಿಗೆ ನಿಮ್ಮ ಅಪ್ಪ ಹೀಗೆ ಸತ್ತ ಅಂತ ಗೊತ್ತಾದರೆ ಎಷ್ಟು ನೋವಾಗುತ್ತದೆ ಎಂದಿದ್ದಾರೆ. ರೇಣುಕಾಸ್ವಾಮಿಗೆ ಪತ್ನಿಗೆ ಈ ಘಟನೆಯಿಂದ ಮಾತನಾಡೋಕು ಬರುತ್ತಿಲ್ಲ. ಅವರೆಲ್ಲಾ ಮುಗ್ಧ ಜನ. ಹೀಗೆ ಆಗುತ್ತೆ ಅಂತ ಮೊದಲೇ ಗೊತ್ತಿದ್ರೆ ರೇಣುಕಾಸ್ವಾಮಿ ಹೀಗೆ ಮಾಡ್ತಿದ್ನಾ? ದರ್ಶನ್ ಮೇಲಿನ ಪ್ರೀತಿ ಅಭಿಮಾನಕ್ಕೆ ಹೀಗೆ ಮಾಡಿದ್ದಾನೆ ಅಲ್ವಾ? ಎಂದು ಉಮಾಪತಿ ಪ್ರಶ್ನಿಸಿದ್ದಾರೆ.

    ಈಗೀನ ದಿನಗಳಲ್ಲಿ ಕೆಲ ಅಭಿಮಾನಿಗಳು ಎದೆಯ ಮೇಲೆ ಹಚ್ಚೆ ಹಾಕಿಕೊಂಡು ನಾನು ಎದೆ ಬಗೆದು ತೋರಿಸಿ ಬಿಡ್ತೀನಿ ಅನ್ನೋಕೆ ಶ್ರೀರಾಮನ ತೋರಿಸುವಂತಹ ಆಂಜನೇಯ ಈಗ ಇಲ್ಲ. ಭಕ್ತಿ ತೋರಿಸುವ ಕಾಲ ಇದಲ್ಲ ಎಂದಿದ್ದಾರೆ. ನೀನು ಬದುಕು ನಾನು ಬದುಕುತ್ತೀನಿ ಅಂತಿರಬೇಕು ದೇವರಂಥ ಮನುಷ್ಯ ನಾಯಿಯಂತ ಬುದ್ಧಿ ಎಂದು ಮಾತು ಹೇಳುವ ಮೂಲಕ ದರ್ಶನ್‌ಗೆ ಟಾಂಗ್ ಕೊಟ್ಟಿದ್ದಾರೆ ಉಮಾಪತಿ.

    ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ `ರಾಬರ್ಟ್’ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.

  • Darshan Case: ಸೆಲೆಬ್ರಿಟಿ ಅಂತಲ್ಲ, ತಪ್ಪು ಯಾರೇ ಮಾಡಿದ್ರು ತಪ್ಪೇ- ಉಮಾಪತಿ ರಿಯಾಕ್ಷನ್

    Darshan Case: ಸೆಲೆಬ್ರಿಟಿ ಅಂತಲ್ಲ, ತಪ್ಪು ಯಾರೇ ಮಾಡಿದ್ರು ತಪ್ಪೇ- ಉಮಾಪತಿ ರಿಯಾಕ್ಷನ್

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ವಿಷ್ಯವಾಗಿ ಅರೆಸ್ಟ್ ಆಗಿದ್ದಾರೆ. ದರ್ಶನ್ & ಗ್ಯಾಂಗ್ ಸದ್ಯ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಪ್ರಕರಣದ ಬಗ್ಗೆ ಉಮಾಪತಿ ರಿಯಾಕ್ಟ್ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಏನಾಗಬೇಕು ಆಗುತ್ತಿದೆ ಎಂದು ಮಾತನಾಡಿದ್ದಾರೆ.

    ದರ್ಶನ್ ಪ್ರಕರಣದ ಬಗ್ಗೆ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೇ ಬೇಡ ಎಂದಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ಶಿಕ್ಷೆ ಸಿಗಲಿದೆ. ಈಗಾಗಲೇ ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಅದು ನಡೆಯುತ್ತಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಹನಿ ರೋಸ್ ನಟನೆ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್

    ಪೊಲೀಸ್ ಇಲಾಖೆ ಕೂಡ ಒಳ್ಳೆಯ ರೀತಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಸೆಲೆಬ್ರಿಟಿ ಅಂತಲ್ಲ, ತಪ್ಪು ಯಾರೇ ಮಾಡಿದ್ರೂ ತಪ್ಪೇ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ವಿಚಾರ ಕೇಳಿದೆ, ಸಾಕಷ್ಟು ಪ್ರಭಾವಿಗಳು ಕರೆ ಮಾಡಿ ದರ್ಶನ್‌ರನ್ನು ಬಿಡಿಸಲು ಪ್ರಯತ್ನಪಟ್ಟಿದ್ದಾರೆ ಅಂತ. ಈಗ ಇವರುಗಳ ಮನೆಯಲ್ಲೇ ಕೊಲೆ ಆದರೆ ಬಿಡಿಸುತ್ತಾರಾ? ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ.

    ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ ‘ರಾಬರ್ಟ್’ (Robert Film) ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.

  • ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಟೆಂಪಲ್‌ ರನ್‌ – ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಕೆ

    ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಟೆಂಪಲ್‌ ರನ್‌ – ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಕೆ

    ಮಂಗಳೂರು: ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ (Umapathy Srinivas) ಅವರು ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ವಿವಿಧ ಕಡೆ ಕುಟುಂಬ ಸಮೇತರಾಗಿ ಉಮಾಪತಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜೊತೆ ಮಾತುಕತೆ ನಡೆಸಿದರು. ಬಳಿಕ ಉಮಾಪತಿ ಕುಟುಂಬ ಹೊರನಾಡು, ಶೃಂಗೇರಿ ಕಡೆ ತಲುಪಿತು. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

    ‘ರಾಬರ್ಟ್‌’ ಸಿನಿಮಾಗಾಗಿ ದರ್ಶನ್‌, ಉಮಾಪತಿ ಶ್ರೀನಿವಾಸ್‌ ಜೊತೆ ಕೈಜೋಡಿಸಿದ್ದರು. ದರ್ಶನ್‌ ನಟನೆಯ ರಾಬರ್ಟ್‌ ಚಿತ್ರವನ್ನು ಉಮಾಪತಿ ನಿರ್ಮಿಸಿದ್ದರು. ಆನಂತರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು.

    ‘ಕಾಟೇರ’ ಚಿತ್ರದ ಸಕ್ಸಸ್‌ ವೇಳೆ, ಸಿನಿಮಾದ ಟೈಟಲ್‌ ವಿಚಾರಕ್ಕೆ ಮತ್ತೆ ದರ್ಶನ್‌ ಹಾಗೂ ಉಮಾಪತಿ ನಡುವೆ ವಾಕ್ಸಮರ ನಡೆದಿತ್ತು. ‘ಅಯ್ಯೋ ತಗಡೇ.. ಗುಮ್ಮುಸ್ಕೋಬೇಡ’ ಎಂಬ ಪದ ಪ್ರಯೋಗ ಪರಸ್ಪರರ ನಡುವೆ ಆಗ ಆಗಿತ್ತು. ಇದನ್ನೂ ಓದಿ: ದರ್ಶನ್‍ಗೆ ಮತ್ತಷ್ಟು ಸಂಕಷ್ಟ- ಸ್ವಾಮಿ ಹತ್ಯೆ ದಿನ ಧರಿಸಿದ್ದ ಬಟ್ಟೆ, ಶೂ ಸೀಜ್

  • ದರ್ಶನ್ ಎದುರು ಹಾಕಿಕೊಂಡು ನಾವು ಬದುಕೋಕೆ ಆಗುತ್ತಾ- ಉಮಾಪತಿ

    ದರ್ಶನ್ ಎದುರು ಹಾಕಿಕೊಂಡು ನಾವು ಬದುಕೋಕೆ ಆಗುತ್ತಾ- ಉಮಾಪತಿ

    ‘ಕಾಟೇರ’ (Kaatera) ಸಕ್ಸಸ್ ಮೀಟ್‌ನಲ್ಲಿ ದರ್ಶನ್ ಅವರು ರಾಬರ್ಟ್ ನಿರ್ಮಾಪಕ ಉಮಾಪತಿಗೆ ಟಾಂಗ್ ಕೊಟ್ಟಿದ್ದರು. ‘ಕಾಟೇರ’ ಟೈಟಲ್ ನಾನೇ ಕೊಟ್ಟಿದ್ದು ಎಂದ ಉಮಾಪತಿಗೆ ದರ್ಶನ್ (Darshan) ಕೌಂಟರ್ ಕೊಟ್ಟಿದ್ದರು. ದರ್ಶನ್ ಹೇಳಿಕೆಗೆ ಈಗ ಉಮಾಪತಿ ಉತ್ತರ ನೀಡಿದ್ದಾರೆ.

    ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಬಿಡಿ ಹೇಳಿಕೊಂಡು ಓಡಾಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಮಾತನಾಡಿದ್ದಾರೆ. ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ‘ಬೆಂಗಳೂರು ಡೇಸ್’ ನಿರ್ದೇಶಕಿ- ಸಾಥ್ ನೀಡಿದ ‘ಕೆಆರ್‌ಜಿ’ ಸಂಸ್ಥೆ

    ‘ಕಾಟೇರ’ ಐಡಿಯಾ ಕೊಟ್ಟಿದ್ದು ದರ್ಶನ್ ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು ಉಮಾಪತಿ ಉತ್ತರ ಕೊಟ್ಟಿದ್ದಾರೆ.

    ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Kaatera) ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ನಟಿ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಇಂದು (ಫೆ.20) ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಉಮಾಪತಿ ಆರೋಪಕ್ಕೆಲ್ಲಾ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

    ಅಯ್ಯೋ ತಗಡೆ ಅಂದು ‘ರಾಬರ್ಟ್’ ಕತೆ ಕೊಟ್ಟಿದ್ದೆ ನಾವು. ಆದರೂ ಬುದ್ಧಿ ಕಲಿಯುತ್ತಿಲ್ಲ ಅಂದರೆ ಏನು ಹೇಳೋಣ. ಕಾಟೇರ ಎಂತಹ ಒಳ್ಳೆಯ ಕಥೆ ಯಾಕೆ ಈ ಸಿನಿಮಾ ಬಿಟ್ಟೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಬಳಿಕ ‘ಕಾಟೇರ’ ಟೈಟಲ್ ಹೇಳಿದ್ದು ಕೂಡ ನಾನು ಎಂದು ದರ್ಶನ್ ಮಾತನಾಡಿದ್ದಾರೆ. ಅಂದು ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸುವಂತೆ ತರುಣ್ ಸುಧೀರ್‌ಗೆ ಹೇಳಿದ್ದೆ ಎಂದರು. ಬಳಿಕ ತರುಣ್ ಬಳಿಯೇ ದರ್ಶನ್ ಸ್ಪಷ್ಟನೆ ಕೊಡಿಸಿದ್ದರು.

    ಯಾಕಪ್ಪ, ಯಾವಾಗಲೂ ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ? ಅಂತ ಉಮಾಪತಿಗೆ ದರ್ಶನ್ ಕುಟುಕಿದ್ದರು. ಈಗ ಎಲ್ಲೋ ಇದ್ದೀಯಾ ಚೆನ್ನಾಗಿ ಇರು. ತಪ್ಪು ಇದು ಅಂತ ದರ್ಶನ್ ಹೇಳಿದರು.

    ಹಲವು ಸಂದರ್ಶನಗಳಲ್ಲಿ ದರ್ಶನ್ ಚಿತ್ರಕ್ಕೆ ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದು ಉಮಾಪತಿ ಹೇಳಿದ್ದರು. ಇದಕ್ಕೆಲ್ಲ ಈಗ ದರ್ಶನ್ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.

  • `ಸಿಂಧೂರ ಲಕ್ಷ್ಮಣ’ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ

    `ಸಿಂಧೂರ ಲಕ್ಷ್ಮಣ’ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ

    ನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ `ಸಿಂಧೂರ ಲಕ್ಷ್ಮಣ'(Sindhura Lakshmana) ಸದ್ಯದಲ್ಲೇ ಸೆಟ್ಟೇರುತ್ತಿರುವ ವಿಷ್ಯ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ನಟ ರಾಕ್ಷಸ ಡಾಲಿ(Dhannanjay) ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ನಿರ್ಮಾಪಕ ಉಮಾಪತಿ(Producer Umapathy) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇತ್ತೀಚೆಗೆ ಡಾಲಿ ನಟಿಸಿರುವ ಸಲಗ, ರತ್ನನ್ ಪ್ರಪಂಚ, ಬೈರಾಗಿ, ಪುಷ್ಪ, ಹೆಡ್‌ಬುಷ್, ಅಷ್ಟು ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. `ಹೆಡ್‌ಬುಷ್’ ನಂತರ ಸ್ಟಾರ್ ನಿರ್ಮಾಪಕ ಉಮಾಪತಿ ನಿರ್ಮಾಣದ ಚಿತ್ರಕ್ಕೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹೋರಾಟಗಾರ `ವೀರ ಸಿಂಧೂರ ಲಕ್ಷ್ಮಣ’ನಾಗಿ ಡಾಲಿ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಈ ವಿಷ್ಯಕ್ಕೆ ಟ್ವಿಸ್ಟ್ ಸಿಕ್ಕಿದೆ. ನಿರ್ಮಾಪಕ ಉಮಾಪತಿ ಈ ಚಿತ್ರದ ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್

    `ಸಿಂಧೂರ ಲಕ್ಷ್ಮಣ ಚಿತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಇಬ್ಬರೂ ಹೀರೋ ಇದ್ದಾರೆ. ಅವರೊಂದಿಗೆ ಮಾತುಕತೆ ಆಗಿ ಅಫಿಷಿಯಲ್ ಆಗಿ ಅಡ್ವಾನ್ಸ್ ಕೊಡುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲವೂ ಓಕೆ ಆದ ಮೇಲೆ ನಾನು ಅಧಿಕೃತವಾಗಿ ತಿಳಿಸುತ್ತೇನೆ. ಸದ್ಯಕ್ಕೆ ನಾನು ಚುನಾವಣೆ ಕಡೆ ಗಮನ ಹರಿಸುತ್ತೇನೆ. ಫೆಬ್ರವರಿ ಸಮಯದಲ್ಲಿ ಈ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಅಲ್ಲಿಯವರೆಗೂ ಎಲ್ಲರಿಗೂ ಸೀಕ್ರೆಟ್ ಆಗಿರುತ್ತದೆ ಎಂದು `ರಾಬರ್ಟ್’ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.

    ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣನನ್ನು ಅಗಾಧವಾಗಿ ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಶೈಲಿಯಲ್ಲಿ ಸಿಂಧೂರ ಲಕ್ಷ್ಮಣಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರ ನಿದ್ದೆಗೆಡಿಸಿದ್ದ ಈ ಸಿಂಧೂರ ಲಕ್ಷ್ಮಣ, ಇದೀಗ ಈ ಪಾತ್ರಕ್ಕೆ ಡಾಲಿ ಜೀವತುಂಬಲಿದ್ದಾರೆ. ಈಗಾಗಲೇ ಸ್ಕ್ರೀಪ್ಟ್ ವರ್ಕ್ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್‌ಡೇಟ್ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿ ಖರ್ಚು ಕಡಿಮೆ ಮಾಡಿದ ದರ್ಶನ್

    ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿ ಖರ್ಚು ಕಡಿಮೆ ಮಾಡಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಪಲ್ ಬಟ್ಟೆ ಧರಿಸುತ್ತಾರೆ ಎಂಬುದು ಗೊತ್ತಿರುವ ವಿಚಾರ. ಹೆಚ್ಚು ಬೆಲೆಯ ಬಟ್ಟೆ ಧರಿಸುವುದಿಲ್ಲ ಎಂದು ಕೆಲವು ಬಾರಿ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಧರಿಸುವ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.ಗಳದ್ದಾಗಿದೆ ಎಂಬುದು ಇದೀಗ ರಿವೀಲ್ ಆಗಿದೆ.

    ಡಿ ಬಾಸ್ 50 ಸಾವಿರದಿಂದ 1 ಲಕ್ಷದ ವರೆಗಿನ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಆದರೆ ತಮಗಾಗಿಯಲ್ಲ, ಬದಲಿಗೆ ಸಿನಿಮಾಗಾಗಿ. ಬಹುನಿರೀಕ್ಷಿತ ರಾಬರ್ಟ್ ಸಿನಿಮಾದಲ್ಲಿ ಇಷ್ಟು ಬೆಲೆಯ ಪ್ಯಾಂಟ್‍ನ್ನು ಡಿ ಬಾಸ್ ಧರಿಸಿದ್ದರು. ಅಲ್ಲದೆ ಇನ್ನೂ ಹೆಚ್ಚಿನ ಹಣವನ್ನು ಡಿ ಬಾಸ್ ನಿರ್ಮಾಪಕರಿಗೆ ಉಳಿತಾಯ ಮಾಡಿದ್ದರಂತೆ.

    ಇತ್ತೀಚಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ದರ್ಶನ್ ಕುರಿತ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನು ಟ್ರು ರಿಲಿಜಿಯನ್ಸ್ ಬ್ರ್ಯಾಂಡ್‍ನ ಜೀನ್ಸ್ ಪ್ಯಾಂಟ್ ಹಾಕ್ತೀನಿ. ರಾಬರ್ಟ್ ಸಿನಿಮಾಕ್ಕೆ ಇದೇ ರೀತಿಯ 15-20 ಜೀನ್ಸ್ ಬೇಕಾಗಿತ್ತು. ಇದಕ್ಕೆ ಒಟ್ಟಾರೆಯಾಗಿ 20 ಲಕ್ಷ ರೂಪಾಯಿ ಆಗುತ್ತದೆ. ಇದನ್ನು ಕಂಡ ದರ್ಶನ್, 4-5 ಜೀನ್ಸ್ ತಗೊಂಡು ಬನ್ನಿ ಸಾಕು. ಇನ್ನೂ ಹಾಕಿಕೊಳ್ಳದೇ ಇರುವ ಕೆಲ ಜೀನ್ಸ್ ನನ್ನ ಬಳಿ ಇವೆ. ಅವನ್ನೇ ಹಾಕಿಕೊಳ್ಳುತ್ತೇನೆ, ಇದರಿಂದ ಪ್ರೊಡಕ್ಷನ್ ಹಣ ಉಳಿತಾಯವಾಗುತ್ತದೆ. ಸುಮ್ಮನೆ ಯಾಕೆ ದುಡ್ಡು ಹಾಳು ಮಾಡುವುದು ಎಂದು ಡಿ ಬಾಸ್ ಹಣ ಉಳಿತಾಯ ಮಾಡಿದ ಪ್ರಸಂಗವನ್ನು ವಿವರಿಸಿದ್ದಾರೆ.

    ಲೈಟ್ ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದ ಡಿ ಬಾಸ್ ಅಂದು 150 ರೂ. ಸಂಬಳ ಪಡೆಯುತ್ತಿದ್ದರು. ಇಂದು ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿಯೆಸ್ಟ್ ನಟ. ಇದೀಗ ಲಕ್ಷಗಟ್ಟಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ವಾರಾಣಸಿಗೆ ಶೂಟಿಂಗ್‍ಗೆ ತೆರಳಿದ್ದ ವೇಳೆ ಅಲ್ಲಿ ದರ್ಶನ್ ಸಿನಿಮಾ ನೋಡಿದ್ದರು, ಅಲ್ಲಿನ ಅಭಿಮಾನಿಗಳು ಸಹ ದಾಸನನ್ನು ನೋಡಲು ಮುಗಿಬಿದ್ದಿದ್ದರಂತೆ. ಅಷ್ಟು ಫ್ಯಾನ್ಸ್ ಹೊಂದಿದ್ದಾರೆ. ಆದರೂ ದರ್ಶನ್ ಹೆಚ್ಚು ಬೆಲೆಯ ಬಟ್ಟೆ ಖರೀದಿಸುವುದಿಲ್ಲ.

    ಅಷ್ಟೇ ಅಲ್ಲ ಫಾರ್ಮ್ ಹೌಸ್, ಪ್ರಾಣಿ ಪ್ರೀತಿ, ಬಡವರಿಗೆ ಸಹಾಯ ಮಾಡುವುದು ಹಾಗೂ ಸಿನಿಮಾ ರಂಗದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದು ದರ್ಶನ್ ಅವರ ಗುಣ. ಅಲ್ಲದೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಭಿಮಾನಿಗಳು ಸಹ ಅಂದು ಹೂವು, ಹಾರ, ಕೇಕ್ ತರದೆ ಆಹಾರ ಧಾನ್ಯಗಳನ್ನು ತರುವಂತೆ ಸೂಚಿಸಿದ್ದರು. ಬಂದ ಧಾನ್ಯಗಳನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದಾನ ನೀಡುತ್ತಾರೆ ಎಂಬುದು ತಿಳಿದೇ ಇದೆ.

    ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಕಿಲ್ಲರ್ ವೆಂಕಟೇಶ್‍ಗೆ 1 ಲಕ್ಷ ರೂಪಾಯಿ ನೀಡಿದ್ದು. ಡಿ ಬಾಸ್‍ಗೆ ಊಟದಲ್ಲಿ ಮಾತ್ರ ಆಸಕ್ತಿ, ರುಚಿಯಾದ ನಾನ್‍ವೆಜ್ ಅಡುಗೆ ಎಲ್ಲಿಂದ ತಂದರೂ ಓಕೆ. ಅಲ್ಲದೆ ತನ್ನ ಜೊತೆ ದುಡಿಯುವವರಿಗೆ ಸರಿಯಾದ ಸಂಬಳ ಕಾಲಕಾಲಕ್ಕೆ ಸಿಗದಿದ್ದರೆ ದರ್ಶನ್ ಸಹಿಸುವುದಿಲ್ಲ. ಶೂಟಿಂಗ್ ಸೆಟ್‍ನಲ್ಲಿ ಪ್ರತಿನಿತ್ಯ ಭರ್ಜರಿ ಊಟ ಇರಲೇಬೇಕು ಎಂಬುದು ದಚ್ಚು ಕಂಡೀಶನ್.