Tag: ಉಮರ್ ಷರೀಫ್

  • ಶಾಲೆಯಲ್ಲಿ ಗಣೇಶನ ಕೂರಿಸ್ಬೇಡಿ ಅಂದಿಲ್ಲ- ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ: BC ನಾಗೇಶ್

    ಶಾಲೆಯಲ್ಲಿ ಗಣೇಶನ ಕೂರಿಸ್ಬೇಡಿ ಅಂದಿಲ್ಲ- ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ: BC ನಾಗೇಶ್

    ಬೆಂಗಳೂರು: ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶಮೂರ್ತಿಯನ್ನ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಆದ್ರೆ ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಯಾವುದೇ ಮಾರ್ಗಸೂಚಿ, ಅನುಮತಿಯನ್ನು ಕೊಟ್ಟಿಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಿಸಿದ್ರೆ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ನೀಡಿ

    ಹಿಂದೆ ಯಾವ ನಿಯಮಗಳು ಇದ್ದವೋ ಅದೇ ನಿಯಮ ಈಗಲೂ ಇವೆ. ಗಣೇಶ ಹಬ್ಬ ಬಿಜೆಪಿ ಸರ್ಕಾರ ಬಂದಾಗಿನಿಂದ ಮಾಡಿದ್ದು ಅಲ್ಲ. ಬ್ರಿಟಿಷರ ಕಾಲದಿಂದಲೂ ಗಣೇಶೋತ್ಸವ ಮಾಡಿಕೊಂಡು ಬರಲಾಗ್ತಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

    ಈಗ ಇರೋ ನಿಯಮಗಳೇ ಮುಂದೆಯೂ ಇರಲಿದೆ. ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಹೊಸ ಸಂಪ್ರದಾಯ ಹುಟ್ಟುಹಾಕೋಕೆ ಅವಕಾಶ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ

    ಮುಸ್ಲಿಂ ಮುಖಂಡ ಉಮರ್ ಷರೀಫ್ ಸಹ ಈ ಬಗ್ಗೆ ಮಾತನಾಡಿದ್ದು, ಗಣಪ ಓಕೆ ಹಿಜಬ್‌ಗೂ ಹೀಗೆ ಅವಕಾಶ ಕೊಡಿ. ಒಂದು ಧರ್ಮಕ್ಕೆ ನ್ಯಾಯ ಇನ್ನೊಂದು ಧರ್ಮಕ್ಕೆ ಅನ್ಯಾಯ ಯಾಕೆ ಅಂತಾ ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಬೆಂಗಳೂರು: ವಿಗ್ರಹ ಮಾಡೋದು ಹರಾಮ್ ಆದರೆ ಜೀವನೋಪಾಯಕ್ಕೆ ಅದು ಅನಿವಾರ್ಯವಾಗಿದೆ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿದರು.

    ಮುಸ್ಲಿಮರು ತಯಾರಿಸುವ ವಿಗ್ರಹವನ್ನು ಹಿಂದೂಗಳು ಪ್ರತಿಷ್ಠಾಪನೆ ಮಾಡಬಾರದು ಎಂಬ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ವಿಗ್ರಹ ಆರಾಧನೆ ಒಪ್ಪಲ್ಲ. ವಿಗ್ರಹ ತಯಾರಿಸುವುದು ಕೂಡ ನಮ್ಮ ಧರ್ಮದ ಪ್ರಕಾರ ಹರಾಮ್. ಆದರೆ ಹೊಟ್ಟೆಪಾಡಿನ ವಿಚಾರಕ್ಕೆ ಬಂದರೆ ಸಂವಿಧಾನ ಪ್ರತಿಯೊಬ್ಬನಿಗೂ ದುಡಿದು ತಿನ್ನುವ ಹಕ್ಕು ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

    ಪ್ರತಿಯೊಂದು ವಿಚಾರಕ್ಕೂ ಧರ್ಮ ತರೋದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜೀವನಕ್ಕೆ ಮತ್ತೆ ಮುಸ್ಲಿಮರು ಏನು ಮಾಡಬೇಕು? ಈ ಅಭಿಯಾನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ಸರ್ಕಾರ ನಮ್ಮ ಕೈಯಲ್ಲಿ ಗನ್ ಕೊಟ್ರೆ ಅಲ್ ಖೈದಾ ಉಗ್ರರನ್ನು ಒದ್ದೋಡಿಸುತ್ತೇವೆ: ಉಮರ್ ಷರೀಫ್

    ಸರ್ಕಾರ ನಮ್ಮ ಕೈಯಲ್ಲಿ ಗನ್ ಕೊಟ್ರೆ ಅಲ್ ಖೈದಾ ಉಗ್ರರನ್ನು ಒದ್ದೋಡಿಸುತ್ತೇವೆ: ಉಮರ್ ಷರೀಫ್

    ಬೆಂಗಳೂರು: ಅಲ್‍ಖೈದಾ ಅಂತಹ ಉಗ್ರ ಸಂಘಟನೆಗಳ ಸಪೋರ್ಟ್ ನಮಗೆ ಬೇಡ. ಅವರು ಈ ವಿಚಾರಕ್ಕೆ ಎಂಟ್ರಿಯಾದರೆ ನಮ್ಮ ಕೈಗೆ ಸರ್ಕಾರ ಗನ್ ಕೊಡಲಿ ನಾವೇ ಅವರನ್ನು ಒದ್ದೋಡಿಸುತ್ತೇವೆ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ತಿಳಿಸಿದರು.

    ಹಿಜಬ್ ವಿಚಾರವಾಗಿ ಅಲ್‍ಕೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಬೆಂಬಲದ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಲ್ ಖೈದಾ ಭಯೋತ್ಪಾದಕರು ವಿಷದ ಕ್ರಿಮಿಗಳು. ಉಗ್ರರ ಹೋರಾಟ ನಮಗೆ ಬೇಕಾಗಿಲ್ಲ. ಮುಸ್ಲಿಮ್ ಭಯೋತ್ಪಾದಕರನ್ನು ಸೈತಾನಿಗಳು ಎನ್ನುತ್ತೇವೆ. ಹಿಜಬ್ ವಿಚಾರದಲ್ಲಿ ಯಾರೂ ನಮಗೆ ಸಪೋರ್ಟ್ ಮಾಡುವುದು ಬೇಕಾಗಿಲ್ಲ. ನಮ್ಮ ದೇಶದ ಆಂತರಿಕ ವಿಷಯದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದರು.

    ಧ್ವನಿವರ್ಧಕದ ಬಗ್ಗೆ ಪ್ರಮೋದ್ ಮುತಾಲಿಕ್ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿ, ಮುತಾಲಿಕ್ ಕರ್ನಾಟಕದ ಸಿಎಂ ಅಲ್ಲ. ಬೊಮ್ಮಾಯಿ ಕರ್ನಾಟಕದ ಸಿಎಂ. ಅಜಾನ್ ನಿಲ್ಲಿಸೋಕೆ ಹೇಳೋಕೆ ಇವರು ಯಾರು. ನಿರ್ದಿಷ್ಟ ಡೆಸಿಬಲ್ ಮೀರಿದರೆ ಕ್ರಮ ಕೈಗೊಳ್ಳಲಿ. ಸರ್ಕಾರದ ಜೊತೆಗೆ ನಾವಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ಮಾವಿನ ವ್ಯಾಪಾರದಲ್ಲೂ ಧರ್ಮದ ವಿಚಾರ ತಂದಿದ್ದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನಿಜವಾದ ಹಿಂದೂಗಳು ಈ ರೀತಿಯಲ್ಲಿ ಧರ್ಮ ರಾಜಕಾರಣ ಮಾಡಲ್ಲ. ಇದು ಸಂವಿಧಾನ ವಿರೋಧವಾಗಿದೆ. ಹಿಂದೂಗಳ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ನೀವು ವ್ಯಾಪಾರ ಮಾಡಿ ನಾವು ವ್ಯಾಪಾರ ಮಾಡುತ್ತೇವೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಉರ್ದು ವಿಚಾರಕ್ಕೆ ಚಂದ್ರು ಕೊಲೆ ನಡೆದಿಲ್ಲ – ಅರ್ಧ ಗಂಟೆಯಲ್ಲೇ ಉಲ್ಟಾ ಹೊಡೆದ ಆರಗ

  • ಧ್ವನಿವರ್ಧಕ ಬ್ಯಾನ್ ಮಾಡೋದಾದ್ರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ: ಉಮರ್ ಷರೀಫ್

    ಧ್ವನಿವರ್ಧಕ ಬ್ಯಾನ್ ಮಾಡೋದಾದ್ರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ: ಉಮರ್ ಷರೀಫ್

    ಬೆಂಗಳೂರು: ಮಸೀದಿಯಲ್ಲಿ ಧ್ವನಿವರ್ಧಕ ಬ್ಯಾನ್ ಮಾಡುವುದಾದರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಆಗ್ರಹಿಸಿದ್ದಾರೆ.

    ಮಸೀದಿ ಮೇಲಿನ ಧ್ವನಿವರ್ಧಕ ನಿಷೇಧಿಸಲು ಹಿಂದೂ ಸಂಘಟನೆಗಳು ಅಭಿಯಾನ ನಡೆಸಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಧ್ವನಿ ವರ್ಧಕ ಬ್ಯಾನ್ ಮಾಡುವುದಾದರೆ, ಚರ್ಚ್, ದೇವಾಲಯಗಳಲ್ಲೂ ಬ್ಯಾನ್ ಮಾಡಿ. ಯಾವುದೇ ಹಬ್ಬಕ್ಕೂ ರಸ್ತೆಯಲ್ಲಿ ಸೌಂಡ್ ಕೇಳಬಾರದು. ಯಾವುದೇ ಮೆರವಣಿಗೆಯಲ್ಲೂ ಧ್ವನಿ ವರ್ಧಕಕ್ಕೆ ಅವಕಾಶ ನೀಡಬಾರದು. ಎಲ್ಲರಿಗೂ ಸಮಾನತೆ ಇರಲಿ. ಈ ನಿರ್ಧಾರ ತೆಗೆದುಕೊಂಡರೆ ಎಲ್ಲರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

    ಕೇವಲ ಮಸೀದಿಗೆ ಮಾತ್ರ ಈ ನಿರ್ಧಾರ ಅಂದರೆ ಇದು ಅನ್ಯಾಯ. ಅನ್ಯಾಯ ಮಾಡಬೇಡಿ, ಒಂದೇ ನ್ಯಾಯ ಆದರೆ ನಾನು ಅವರ ಜೊತೆ ಕೈ ಜೋಡಿಸುತ್ತೇನೆ. ಹಿಜಬ್ ವಿಚಾರದಲ್ಲೂ ಹೀಗೆ ಆಯಿತು. ಕೈಸ್ತ ಮಹಿಳೆ ಒಂದು ಶಾಲೆಗೆ ಬಂದರೆ, ತಲೆ ಮೇಲೆ ಹಾಕಿರುವ ಬಟ್ಟೆಯನ್ನು ತೆಗೆಸುತ್ತೀರಾ? ಅದನ್ನ ತೆಗೆಸುವುದಕ್ಕೆ ಯಾರಿಗಾದರೂ ಧೈರ್ಯ ಇದೆಯಾ? ಆದರೆ ನಮಗೆ ಹಿಜಬ್ ತೆಗೆಯುವುದಕ್ಕೆ ಹೇಳುತ್ತೀರಾ. ಮಾಡುವುದಾದರೆ ಎಲ್ಲರಿಗೂ ಒಂದೇ ರೂಲ್ಸ್ ಮಾಡಿ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

    HIJAB 2

    ಹಿಜಬ್ ಚರ್ಚೆಯಂತೆ ನಾಮ ಹಾಕಿಕೊಂಡು ಬರಬೇಕಾ ಎನ್ನುವ ಬಗ್ಗೆ ಕೂಡ ಚರ್ಚೆ ನಡೆಯಲಿ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹ ತಲೆಗೆ ಸೆರಗು ಹಾಕಿಕೊಂಡು ಬರುತ್ತಿದ್ದರು. ನಾವು ಅವರನ್ನು ಹಾಕಬೇಡಿ ಅಂತ ಹೇಳಿ ಬ್ಯಾನ್ ಮಾಡಿದ್ವಾ? ನಮಗೆ ಏಕೆ ಅನ್ಯಾಯ, ನಮ್ಮನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ಲೌಡ್ ಸ್ಪೀಕರ್ ಮಸೀದಿಯಲ್ಲಿ ಇರುವುದು ಮಸೀದಿಯಲ್ಲಿ ಮಾತ್ರನಾ? ಗಣೇಶ ಹಬ್ಬಕ್ಕೆ ರಸ್ತೆಗಳನ್ನು ಕ್ಲೋಸ್ ಮಾಡಿ ಲೌಡ್ ಸ್ಪೀಕರ್ ಹಾಕುತ್ತಾರೆ. ಕೆಲವು ಕಡೆ ಮಸೀದಿ ಮುಂದೆಯೇ ಕೆಲವರು ಪ್ರಚೋದನೆ ಮಾಡಲೆಂದೇ ಹಾಕುತ್ತಾರೆ. ಕೋಮುವಾದ, ರಾಜಕೀಯ ಬೆಳೆಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ರೂಲ್ಸ್ ಜಾರಿಯಾದರೆ ನಾವು ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

    ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಂತಹ ಚರ್ಚೆಗಳಿಂದ ಸಮಯ ವ್ಯರ್ಥವಾಗುತ್ತಿದೆ. ಹಲಾಲ್ ಬೇಕಿದ್ದರೆ ಹಲಾಲ್, ಜಟ್ಕಾ ಬೇಕಿದ್ದರೆ ಜಟ್ಕಾ ಏನಾದರೂ ತಿನ್ನಿ. ಸಮುದಾಯದಲ್ಲಿ ಬೇಕಾದ ವಿಚಾರ ಮಾತಾಡಿ. ಆದರೆ ಧರ್ಮವನ್ನು ರಾಜಕೀಯ ಬಳಕೆ ಮಾಡಬೇಡಿ. ಕೋಮುವಾದದಿಂದ ಏನು ಮಾಡುವುದಕ್ಕೆ ಆಗುವುದಿಲ್ಲ. ಕೋಮುವಾದ ಬಿಟ್ಟು ಎಲ್ಲರು ಒಟ್ಟಾಗಿ ಬಾಳಬೇಕಿದೆ ಎಂದು ತಿಳಿಸಿದ್ದಾರೆ.

  • ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದು ಸಮವಸ್ತ್ರ ಕಡ್ಡಾಯ ಮಾಡಿ: ಉಮರ್ ಷರೀಫ್

    ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದು ಸಮವಸ್ತ್ರ ಕಡ್ಡಾಯ ಮಾಡಿ: ಉಮರ್ ಷರೀಫ್

    ಬೆಂಗಳೂರು: ಕಾಲೇಜು ಯೂನಿಫಾರ್ಮ್ ವ್ಯವಸ್ಥೆ ಕಡ್ಡಾಯ ಮಾಡುವ ಮೊದಲು ಮುಸ್ಲಿಂ ಮುಖಂಡರ ಅಭಿಪ್ರಾಯ ಕೇಳಬೇಕು ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಟೈಟಾಗಿರುವ ಬಟ್ಟೆಗಳನ್ನು ಹೆಣ್ಣುಮಕ್ಕಳು ತೊಡುವುದಕ್ಕೆ ನಾವು ಬಿಡಲ್ಲ. ಲೂಸಾಗಿರುವ ಯೂನಿಫಾರ್ಮ್ ಬಟ್ಟೆ ಹಾಗೂ ತಲೆಯನ್ನು ಕವರ್ ಮಾಡಲು ಹಿಜಬ್ ಬೇಕು. ಇದು ನಮ್ಮ ಪರಂಪರೆ. ಯೂನಿಫಾರ್ಮ್ ನಿಯಮ ತರಲಿ ಆದರೆ ಅದರಲ್ಲಿ ಹಿಜಬ್ ಇರಲಿ ಎಂದು ಉಮರ್ ಷರೀಫ್ ಕಾಲೇಜು ವಸ್ತ್ರ ಸಂಹಿತೆ ಬಗೆಗಿನ ಗೊಂದಲದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಪ್ರತಿಭಟಿಸಿದರೆ ಎಫ್‌ಐಆರ್‌ – ಹಿಜಬ್‌ ವಿದ್ಯಾರ್ಥಿನಿಯರ ಪೋಷಕರಿಗೆ ಎಚ್ಚರಿಕೆ

    ಬ್ರಾಹ್ಮಣ ಹುಡುಗರು ತರಗತಿಗಳಿಗೆ ಜುಟ್ಟನ್ನು ಕಟ್ಟಿಕೊಂಡು ಬರುವುದಿಲ್ಲವಾ? ಅದಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸುತ್ತಾರಾ? ಹಿಜಬ್ ಧರಿಸುವುದರಿಂದ ತಪ್ಪೇನಿದೆ? ಅದು ಅವರವರ ಧರ್ಮ ಎಂದಿದ್ದಾರೆ.

    ಹಿಜಬ್ ಹೆಣ್ಣಿಗೆ ಕೆಟ್ಟ ದೃಷ್ಟಿಗಳಿಂದ ರಕ್ಷಿಸುತ್ತದೆ. ಬೇಕಾದರೆ ಹಿಂದು ಹುಡುಗರು ಕೇಸರಿ ಶಾಲು ಧರಿಸಿ ಶಾಲೆಗೆ ಬರಲಿ. ಮುಸ್ಲಿಂ ಮುಖಂಡನಾಗಿ ನಾನೇ ಕೇಸರಿ ಶಾಲು ತೊಡುವೆ. ಅದರಿಂದ ನಮಗೇನೂ ತೊಂದರೆ ಇಲ್ಲ. ಇದು ರಾಜಕೀಯವಾಗಿ ಬಣ್ಣ ತೆಗೆದುಕೊಂಡಿದೆ. ಯೂನಿಫಾರ್ಮ್ ವಿಚಾರದ ಬಗ್ಗೆ ಮುಸ್ಲಿಂ ಮುಖಂಡರ ಜೊತೆಯೂ ಸರ್ಕಾರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸುವುದು ಮೂಲಭೂತ ಹಕ್ಕು: ಸಿದ್ದರಾಮಯ್ಯ

    ನಮ್ಮ ಹೆಣ್ಣು ಮಕ್ಕಳು ಹಿಜಬ್ ಧರಿಸಿ ಬರುತ್ತಿದ್ದಾರೆ ಅಷ್ಟೇ. ಅವರು ಗನ್ ಹಿಡಿದುಕೊಂಡು ಬರುತ್ತಿಲ್ಲ ಎಂದು ಉಮರ್ ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.