Tag: ಉಪ ಚುನಾವಣೆ ಫಲಿತಾಂಶ
-

ಬಿಜೆಪಿ ಗೆಲುವನ್ನ ವ್ಯಾಖ್ಯಾನಿಸಿದ ಹೆಚ್‍ಡಿಕೆ
ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ. ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 2 ಕ್ಷೇತ್ರದಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಜನರು ರಾಜ್ಯ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ: ಸಿಎಂ

ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ ಎಂದು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಇದನ್ನೂ ಓದಿ: ಲೀಡರ್, ವರ್ಕರ್ ಪ್ರಾಬ್ಲಂ ಇಲ್ಲ, ವಿ ಹ್ಯಾವ್ ಫೇಲ್ : ಡಿಕೆಶಿ
-

ಬೈ ಎಲೆಕ್ಷನ್ ರಿಸಲ್ಟ್- ಆರ್.ಆರ್. ನಗರದಲ್ಲಿ ನಾಳೆ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ
– ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ
ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಮತ ಎಣಿಕೆಗೆ ಸಿದ್ಧತೆ ಮುಕ್ತಾಯವಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರತಿಷ್ಠೆಯ ಕಣವಾಗಿರೋ ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬಿಜೆಪಿಯ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ ಹಾಗೂ ಜೆಡಿಎಸ್‍ನ ಕೃಷ್ಣಮೂರ್ತಿ ಭವಿಷ್ಯ ನಾಳೆ ಪ್ರಕಟವಾಗಲಿದೆ.

ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮತ ಎಣಿಕೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಇಡೀ ಕ್ಷೇತ್ರ ವ್ಯಾಪಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ನಿರ್ಬಂಧ ಹಾಕಲಾಗಿದೆ. ಪೊಲೀಸರ ಹದ್ದಿನ ಕಣ್ಣಿನಲ್ಲಿ ಮತ ಎಣಿಕೆ ನಡೆಯಲಿದೆ.

ಆರ್.ಆರ್.ನಗರದಲ್ಲಿ 25 ಸುತ್ತು ಮತ ಎಣಿಕೆ: ಆರ್.ಆರ್.ನಗರ ಮಿನಿ ಕದನದಲ್ಲಿ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಸೇರಿ ಕಣದಲ್ಲಿ ಒಟ್ಟು 16 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದಲ್ಲಿ 412 ಅಂಚೆ ಹಾಗೂ 04 ಇಟಿಪಿಬಿಎಸ್ ಸೇರಿದಂತೆ 2,09,828 ಮತ ಚಲಾವಣೆ ಆಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಹಾಗೂ ಇಟಿಪಿಬಿಎಸ್ ಮತಗಳನ್ನ ಎಣಿಕೆ ಹಾಕಲಾಗುವುದು. ಇವಿಎಂ ಮತ ಎಣಿಕೆ ಬೆಳಗ್ಗೆ 8.30 ಕ್ಕೆ ಪ್ರಾರಂಭವಾಗಲಿದೆ. ಒಟ್ಟು 25 ಸುತ್ತು ಮತ ಎಣಿಕೆ ಇರಲಿದೆ.

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಪ್ರತಿ ಸುತ್ತಿನಲ್ಲಿ 28 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಕೊಠಡಿಯಲ್ಲಿ 7 ಎಣಿಕಾ ಟೇಬಲ್ ಗಳಂತೆ ಒಟ್ಟು 4 ಕೊಠಡಿಯಲ್ಲಿ 28 ಎಣಿಕಾ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಸಹಾಯಕ ಚುನಾವಣೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 250 ಸಿಬ್ಬಂದಿ ನೇಮಕ ಮಾಡಲಾಗಿದ್ದು, 2 ಹಂತದ ತರಬೇತಿ ನೀಡಲಾಗಿದೆ. ಚುನಾವಣೆ ಸಿಬ್ಬಂದಿಗೆ ನಾಳೆ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಸಿಬ್ಬಂದಿ ಸೇರಿದಂತೆ ಎಣಿಕೆ ಕೇಂದ್ರದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಸರ್ಪಗಾವಲು: ಮತ ಎಣಿಕೆ ಕಾರ್ಯ ಪೊಲೀಸ್ ಭದ್ರತೆಯಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರ ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಸುಮಾರು 1,800 ಪೊಲೀಸರ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 4 ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧವಿದ್ದು, ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3 ಜನ ಡಿಸಿಪಿ, ಎಸಿಪಿ ಸೇರಿ 900 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 36 ಕೆ.ಎಸ್.ಆರ್.ಪಿ/ಸಿ.ಎ.ಆರ್ ಫೋರ್ಸ್, ಒಂದು ಅಗ್ನಿಶಾಮಕ ದಳ, ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ. ಕೋವಿಡ್ ಇರುವ ಕಾರಣ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಸೇರುವಂತಿಲ್ಲ. ಮತ ಕೇಂದ್ರದ ಬಳಿ ಸಂಭ್ರಮಾಚರಣೆ, ಪಟಾಕಿ ಹಚ್ಚುವ ಹಾಗಿಲ್ಲ. ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಇರುವುದಿಲ್ಲ. ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಹೈವೋಲ್ಟೇಜ್ ಮತ ಎಣಿಕೆ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ ಮಧ್ಯಾಹ್ನ 1 ಗಂಟೆ ಒಳಗೆ ವಿಜಯಲಕ್ಷ್ಮಿ ಯಾರಿಗೆ ಅನ್ನೋದು ತಿಳಿಯಲಿದ್ದು, ಶಾಂತಿಯುತ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
-

ರಾಜ್ಯ ಉಸ್ತುವಾರಿ ನಾಯಕನ ಸ್ಥಾನಕ್ಕೆ ಕೆ.ಸಿ.ವೇಣುಗೋಪಾಲ್ ರಾಜೀನಾಮೆ?
ಬೆಂಗಳೂರು: ಉಪಚುನಾವಣೆಯ ಸೋಲಿನ ನೈತಿಕ ಹೊಣೆಹೊತ್ತು ರಾಜ್ಯ ಉಸ್ತುವಾರಿ ನಾಯಕನ ಸ್ಥಾನಕ್ಕೆ ಕೆ.ಸಿ.ವೇಣುಗೋಪಾಲ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಹುಣಸೂರು ಮತ್ತು ಶಿವಾಜಿನಗರದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರವೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಿಎಲ್‍ಪಿ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯರ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಗಾದಿ ತೊರೆದಿದ್ದರು. ಇಬ್ಬರ ನಡೆಯನ್ನ ಅನುಸರಿಸಿರುವ ವೇಣುಗೋಪಾಲ್ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ರವಾನಿಸಿ, ತಮ್ಮನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಎಐಸಿಸಿ ಡಿಸೆಂಬರ್ 14ರ ನಂತರ ರಾಜ್ಯ ಕಾಂಗ್ರೆಸ್ ಗೆ ನೂತನ ಸಾರಥಿಯನ್ನು ನೇಮಿಸುವ ಲೆಕ್ಕಾಚಾರದಲ್ಲಿದೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಬಲವಾಗಿ ಕೇಳಿ ಬಂದಿದೆ. ವಿಪಕ್ಷ ನಾಯಕನ ಸ್ಥಾನಕ್ಕಾಗಿ ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವ ಹೆಚ್.ಕೆ.ಪಾಟೀಲ್ ರೇಸ್ ನಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಮೂಲ ಕಾಂಗ್ರೆಸ್ ಗರಲ್ಲಿ ಪೈಪೋಟಿ ಏರ್ಪಟ್ಟಿದ್ದು, ದೆಹಲಿ ತಲುಪಿ ಲಾಬಿಗೆ ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ
-

ಉತ್ತರ ಪ್ರದೇಶ ಉಪಚುನಾವಣಾ ಫಲಿತಾಂಶ – ಕಮಲ ಕಿಲಕಿಲ
-11ರಲ್ಲಿ ಬಿಎಸ್‍ಪಿ, ಕಾಂಗ್ರೆಸ್ ಶೂನ್ಯ
ಲಕ್ನೋ: ಈ ಬಾರಿಯ ಉಪಚುನಾವಣೆ ಆಡಳಿತಾ ರೂಢ ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿತ್ತು. ಇತ್ತ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಾರ್ಟಿ (ಎಸ್‍ಪಿ) ಮತ್ತು ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಗೆ 2022ರ ಚುನಾವಣೆಗೆ ದಿಕ್ಸೂಚಿಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ನಾನಾ ಕಾರಣಗಳಿಂದ ತೆರವಾದ ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಹೊರ ಬಂದಿದ್ದು, 11 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಒಟ್ಟು 11 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. 7 ಬಿಜೆಪಿ, ಮೂರರಲ್ಲಿ ಸಮಾಜವಾದಿ ಪಾರ್ಟಿ ಮತ್ತು ಒಂದರಲ್ಲಿ ಅಪನಾ ದಳ ಗೆಲುವಿನ ನಗೆ ಬೀರಿದೆ. ಬಿಎಸ್‍ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಪ್ನಾ ದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದು, ಉತ್ತರ ಪ್ರದೇಶದ ಮಿಂಚಿನಂತೆ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಮುಖಭಂಗವಾಗಿದೆ. ಆಡಳಿತರೂಢ ಬಿಜೆಪಿ ಸರ್ಕಾರದ ಪ್ರಬಲ ಪೈಪೋಟಿಯ ನಡುವೆ ಪ್ರಾದೇಶಿಕ ಪಕ್ಷಗಳಾದ ಎಸ್‍ಪಿ ಮತ್ತು ಬಿಎಸ್‍ಪಿ ನೆಮ್ಮದಿಯ ಉಸಿರು ಬಿಡುವಂತಾಗಿದೆ. 11ರಲ್ಲಿ 8 ಕ್ಷೇತ್ರಗಳಲ್ಲಿ ಈ ಹಿಂದೆ ಬಿಜೆಪಿ ಶಾಸಕರಿದ್ದರು. ಎರಡರಲ್ಲಿ ಬಿಎಸ್‍ಪಿ, ಎಸ್‍ಪಿ ಮತ್ತು ಅಕಾಲಿದಳ ಒಂದರಲ್ಲಿತ್ತು.
1. ಗಂಗೋಹ: ಗೆಲುವು-ಬಿಜೆಪಿ
ಬಿಜೆಪಿ: ಕೀರ್ತನಪಾಲ್ ಸಿಂಗ್
ಎಸ್‍ಪಿ: ಇಂದ್ರಸೇನ್
ಬಿಎಸ್‍ಪಿ: ಇರ್ಶಾದ್ ಚೌಧರಿ
ಕಾಂಗ್ರೆಸ್: ನೋಮಾನ್ ಮಸೂದ್
ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು.2. ರಾಮಪುರ: ಗೆಲುವು- ಎಸ್‍ಪಿ
ಬಿಜೆಪಿ: ಭಾರತ್ ಭೂಷಣ್ ಗುಪ್ತಾ
ಎಸ್‍ಪಿ: ಡಾ.ತಂಜೀನ್ ಫಾತೀಮಾ
ಬಿಎಸ್‍ಪಿ: ಜುಬೇರ್ ಮಸೂದ್ ಖಾನ್
ಕಾಂಗ್ರೆಸ್: ಅರ್ಷದ್ ಅಲಿ ಖಾನ್
ಈ ಹಿಂದೆ ಎಸ್‍ಪಿ ಗೆಲುವು ಕಂಡಿತ್ತು3. ಇಗ್ಲಾಸ್: ಗೆಲುವು-ಬಿಜೆಪಿ
ಬಿಜೆಪಿ: ರಾಜಕುಮಾರ್ ಸಹಯೋಗಿ
ಎಸ್‍ಪಿ: ಸುಮನ್ ದಿವಾಕರ್ (ರಾಷ್ಟ್ರೀಯ ಲೋಕದಳ)
ಬಿಎಸ್‍ಪಿ: ಅಕ್ಷಯ್ ಕುಮಾರ್
ಕಾಂಗ್ರೆಸ್: ಉಮೇಶ್ ಕುಮಾರ್
ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು4. ಲಖ್ನೌ ಕೈಂಟ್: ಗೆಲುವು-ಬಿಜೆಪಿ
ಬಿಜೆಪಿ: ಸುರೇಶ್ ತಿವಾರಿ
ಎಸ್‍ಪಿ: ಮೇಜರ್ ಆಶೀಷ್ ಚತುರ್ವೇದಿ
ಬಿಎಸ್‍ಪಿ: ಅರುಣ್ ದ್ವಿವೇದಿ
ಕಾಂಗ್ರೆಸ್: ದಿಲ್‍ಪ್ರೀತ್ ಸಿಂಗ್
ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು5. ಗೋವಿಂದನಗರ: ಗೆಲುವು-ಬಿಜೆಪಿ
ಬಿಜೆಪಿ: ಸುರೇಂದ್ರ ಮೈಥಾನಿ
ಎಸ್‍ಪಿ: ಸಾಮ್ರಾಟ್ ವಿಕಾಸ್
ಬಿಎಸ್‍ಪಿ: ದೇವಿ ಪ್ರಸಾದ್ ತಿವಾರಿ
ಕಾಂಗ್ರೆಸ್: ಕರಿಶ್ಮಾ ಠಾಕೂರ್
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿತ್ತು6. ಮಾನಿಕಪುರ: ಗೆಲುವು-ಬಿಜೆಪಿ
ಬಿಜೆಪಿ: ಆನಂದ ಶುಕ್ಲಾ
ಎಸ್‍ಪಿ: ನಿರ್ಭಯ್ ಸಿಂಗ್ ಪಟೇಲ್
ಬಿಎಸ್‍ಪಿ: ರಾಜನಾರಾಯಣ್
ಕಾಂಗ್ರೆಸ್: ರಂಹನಾ ಪಾಂಡೆ
ಈ ಹಿಂದೆ ಬಿಜೆಪಿ ಇತ್ತು7. ಜೋಧಪುರ: ಗೆಲುವು-ಎಸ್‍ಪಿ
ಬಿಜೆಪಿ: ಅಂಬರೀಶ್ ರಾವತ್
ಎಸ್‍ಪಿ: ಗೌರವ್ ಕುಮಾರ್ ರಾವತ್
ಬಿಎಸ್‍ಪಿ: ಅಖಿಲೇಶ್ ಕುಮಾರ್ ಅಂಬೇಡ್ಕರ್
ಕಾಂಗ್ರೆಸ್: ತನುಜ್ ಪುನಿಯಾ
ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು8. ಜಲಾಲ್ಪುರ: ಗೆಲುವು-ಎಸ್‍ಪಿ
ಬಿಜೆಪಿ: ರಾಜೇಶ್ ಸಿಂಗ್
ಎಸ್‍ಪಿ: ಸುಭಾಷ್ ರಾಯ್
ಬಿಎಸ್‍ಪಿ: ಡಾ.ಛಾಯಾ ವರ್ಮಾ
ಕಾಂಗ್ರೆಸ್: ಸುನಿಲ್ ಮಿಶ್ರಾ
ಈ ಹಿಂದೆ ಬಿಎಸ್‍ಪಿ ಗೆಲುವು ಕಂಡಿತ್ತು8. ಬಾಲ್ಹಾ: ಗೆಲುವು-ಬಿಜೆಪಿ
ಬಿಜೆಪಿ: ಸರೋಜ್ ಸೋನಕರ್
ಎಸ್‍ಪಿ: ಕಿರಣ್ ಭಾರತಿ
ಬಿಎಸ್‍ಪಿ: ರಮೇಶ್ ಚಂದ್ರ
ಕಾಂಗ್ರೆಸ್: ಮನ್ನಾ ದೇವಿ
ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು9. ಘೋಸಿ: ಗೆಲುವು: ಬಿಜೆಪಿ
ಬಿಜೆಪಿ: ವಿಜಯ್ ರಾಜಭರ್
ಎಸ್‍ಪಿ: ಸುಧಾಕರ್ ಸಿಂಗ್
ಬಿಎಸ್‍ಪಿ: ಅಬ್ದುಲ್ ಕಯೂಮ್
ಕಾಂಗ್ರೆಸ್: ರಾಜಮಂಗಲ್ ಯಾದವ್
ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು10. ಪ್ರತಾಪ್‍ಗಢ: ಗೆಲುವು; ಅಪನಾ ದಳ
ಬಿಜೆಪಿ: ರಾಜಕುಮಾರ್ ಪಾಲ್ (ಅಪನಾ ದಳ)
ಎಸ್‍ಪಿ: ಬೃಜೇಶ್ ಸಿಂಗ್ ಪಟೇಲ್
ಬಿಎಸ್‍ಪಿ: ರಂಜಿತ್ ಸಿಂಗ್ ಪಟೇಲ್
ಕಾಂಗ್ರೆಸ್: ನೀರಜ್ ತ್ರಿಪಾಠಿ
ಈ ಹಿಂದೆ ಅಪನಾ ದಳ ಗೆಲುವು ಕಂಡಿತ್ತು -

ಪ್ರತಿಷ್ಠೆಯ ಕಣ ಶಿವಮೊಗ್ಗದಲ್ಲಿ ಯಾರಿಗೆ ವಿಜಯಮಾಲೆ..?
ಶಿವಮೊಗ್ಗ: ಉಪ ಚುನಾವಣ ಕಣ ಸಮರದಲ್ಲಿ ಶಿವಮೊಗ್ಗ ಗೆಲ್ಲಲು ತೀವ್ರ ಪೈಪೋಟಿ ನಡೆದಿದೆ. ಇಬ್ಬರು ಮಾಜಿ ಸಿಎಂ ಪುತ್ರರು ಗೆಲುವಿಗಾಗಿ ಹಣಾಹಣಿ ನಡೆಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಮತ್ತು ಮಾಜಿ ಸಿಎಂ ಎಸ್ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ನಡುವಿನ ನೇರ ಪೈಪೋಟಿಯ ಕಣವೇ ಶಿವಮೊಗ್ಗ. ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ನಿಲ್ಲಿಸದೇ ದೋಸ್ತಿ ಜೆಡಿಎಸ್ ಬೆನ್ನಿಗೆ ನಿಂತಿದೆ.
ಈ ಮೂಲಕ ಯಡಿಯೂರಪ್ಪ ತವರಲ್ಲೇ ಬಿಜೆಪಿ ಭದ್ರಕೋಟೆಯನ್ನೇ ಒಡೆದು ಹಾಕುವ ಮಹಾಯತ್ನದ ಪರೀಕ್ಷೆ ನಡೆಸಿದೆ ಮೈತ್ರಿಕೂಟ. ಮೈತ್ರಿ ಮತಗಳ ಕ್ರೋಢೀಕರಣ ಮತ್ತು ಬಂಗಾರಪ್ಪ ಮೇಲಿನ ಅಕ್ಕರೆಯ ಮಳೆಗೆರೆದು ಮತ ಸೆಳೆಯೋ ಪ್ರಯತ್ನವೂ ನಡೆದಿದೆ. ಆದರೆ ಅತೀ ಹೆಚ್ಚು ಶಾಸಕರನ್ನ ಹೊಂದಿರೋ ಕಾರಣ ನನ್ನ ಕೋಟೆಯಲ್ಲಿ ನನ್ನದೇ ಆಟ ಅನ್ನೋದು ಯಡಿಯೂರಪ್ಪ ವಾದ ನಿಜ ಆಗುತ್ತಾ..? ಎಂಬುತ್ತಾ ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.
* ಶಿವಮೊಗ್ಗದಲ್ಲಿ ಯಾರ ನಡುವೆ ಪೈಪೋಟಿ?
1. ಬಿ ವೈ ರಾಘವೇಂದ್ರ – ಬಿಜೆಪಿ
2. ಮಧು ಬಂಗಾರಪ್ಪ – ಕಾಂಗ್ರೆಸ್+ಜೆಡಿಎಸ್ ಮೈತ್ರಿಕೂಟ
ಶಿವಮೊಗ್ಗದಲ್ಲಿ ಕ್ಷೇತ್ರದ ಜಾತಿ ಚಿತ್ರಣ
ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ, 16,45,511 ಇದರಲ್ಲಿ ಪುರುಷರು 8,27,111 ಹಾಗೂ ಮಹಿಳೆಯರು 8,17,948 ಇದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಲಿಂಗಾಯಿತರು 2.7 ಲಕ್ಷ, ದಲಿತರು 2 ಲಕ್ಷ, ಈಡಿಗರು 2 ಲಕ್ಷ, ಬ್ರಾಹ್ಮಣರು 1.5 ಲಕ್ಷ, ಮುಸ್ಲಿಮರು 1.3 ಲಕ್ಷ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯಿತ, ದಲಿತರು ಹಾಗೂ ಈಡಿಗ ಸಮುದಾಯದ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸದ್ಯದ ಶಿವಮೊಗ್ಗದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 7ರಲ್ಲಿದ್ದರೆ, ಕಾಂಗ್ರೆಸ್ ಕೇವಲ 1 ಕ್ಷೇತ್ರವನ್ನು ವಶದಲ್ಲಿಟ್ಟುಕೊಂಡಿದೆ.2014ರ ಲೋಕಸಭಾ ಚುನಾವಣಾ ಫಲಿತಾಂಶ ಏನಾಗಿತ್ತು?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ತೊರೆದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ತರಲು ಪುನಃ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 6,06,216 ಮತಗಳನ್ನು ಪಡೆದು 3,63,305 ಮತಗಳ ಅಂತರದಿಂದ ಭಾರೀ ಜಯಭೇರಿಯನ್ನು ಬಾರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,42,611 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್ ನ ಗೀತಾ ಶಿವರಾಜ್ ಕುಮಾರ್ 2,40,636 ಮತಗಳನ್ನು ಗಳಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv




