Tag: ಉಪ್ಪೇನಾ ಸಿನಿಮಾ

  • ಸತತ ಸೋಲುಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕೃತಿ ಶೆಟ್ಟಿ

    ಸತತ ಸೋಲುಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕೃತಿ ಶೆಟ್ಟಿ

    ರಾವಳಿ ನಟಿ ಕೃತಿ ಶೆಟ್ಟಿ (Krithi Shetty) ಸತತ ಸೋಲುಗಳ ನಂತರ ಮತ್ತೆ ತೆಲುಗಿನ ಸಿನಿಮಾಗೆ ಮರಳಿದ್ದಾರೆ. ಒಂದೊಳ್ಳೆ ಕಥೆಯ ಮೂಲಕ ಮತ್ತೆ ತೆಲುಗು ಪ್ರೇಕ್ಷಕರ ಮನ ಗೆಲ್ಲಲು ನಟಿ ಕೃತಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಉಪ್ಪೇನಾ, ಬಂಗಾರರಾಜು ಸಿನಿಮಾಗಳ ನಂತರ ನಟಿಸಿದ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಉಪ್ಪೇನಾ (Uppena Film) ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿ ಮೆರೆದವರು ಕೃತಿ ಶೆಟ್ಟಿಗೆ ಇತ್ತೀಚಿನ ದಿನಗಳಲ್ಲಿ ಲಕ್ ಕೈ ಕೊಟ್ಟಿತ್ತು. ಹಾಗಾಗಿ ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ನಟಿ ಬ್ಯುಸಿಯಾಗಿದ್ದರು. ಇದನ್ನೂ ಓದಿ:ಕಿಚ್ಚನ ಕುಟುಂಬದ ಜೊತೆ ಊಟ ಸವಿದ ವಿನಯ್ ಗೌಡ

    ‘ಮನಮೆ’ (Maname Film) ಸಿನಿಮಾದ ಮೂಲಕ ಶರ್ವಾನಂದ್‌ಗೆ (Sharwanand) ನಾಯಕಿಯಾಗಿ ಕೃತಿ ಮತ್ತೆ ಮೋಡಿ ಮಾಡಿದ್ದಾರೆ. ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು, ಇಬ್ಬರ ಪ್ರೇಮ ಕಹಾನಿ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ಕೂಡ ಅದ್ಧೂರಿಯಾಗಿ ಮೂಡಿ ಬಂದಿದೆ. ಶರ್ವಾನಂದ್- ಕೃತಿ ನಟನೆಯ ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ.

    ಕೃತಿ ಶೆಟ್ಟಿ ಲುಕ್ ಮತ್ತು ನಟನೆಯ ಝಲಕ್ ಟೀಸರ್‌ನಲ್ಲಿ ನೋಡಿ ಅಭಿಮಾನಿಗಳಿಗೆ ‘ಮನಮೆ’ ಸಿನಿಮಾದ ಮೇಲೆ ಭರವಸೆ ಮೂಡಿದೆ. ಶ್ರೀಲೀಲಾ (Sreeleela) ಹವಾ ಕಮ್ಮಿಯಾದ್ಮೇಲೆ ಕೃತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಕರಾವಳಿ ಬ್ಯೂಟಿ ಗೆಲ್ತಾರಾ? ಕಾದುನೋಡಬೇಕಿದೆ.

  • ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಪುತ್ರನಿಂದ ಟಾರ್ಚರ್

    ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಪುತ್ರನಿಂದ ಟಾರ್ಚರ್

    ‘ಉಪ್ಪೇನಾ’ ಸಿನಿಮಾದ ಸುಂದರಿ ಕೃತಿ ಶೆಟ್ಟಿ (Krithi Shetty) ಅವರು ಮೂಲತಃ ಮಂಗಳೂರಿನವರು. ತುಳುನಾಡಿನ ಈ ಬೆಡಗಿ ಕೃತಿ ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಹೀಗಿರುವಾಗ ಈಗ ವಿಷ್ಯವಾಗಿ ಕೃತಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡ್ತಿದ್ದಾನೆ ಎಂದು ಸುದ್ದಿ ವೈರಲ್ ಆಗಿದೆ. ಇದರಿಂದ ಕೃತಿಗೆ ಆ ನಟನಿಂದ ಸಂಕಷ್ಟ ಎದುರಾಗಿದೆಯಂತೆ.

    ತೆಲುಗಿನ ‘ಉಪ್ಪೇನಾ’ (Uppena) ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ಆದ ಯುವನಟಿ ಕೃತಿ ಶೆಟ್ಟಿ ಅವರು ಸಾಕಷ್ಟು ಸ್ಟಾರ್ ನಟರ ಸಿನಿಮಾ ಅವಕಾಶಗಳನ್ನ ಬಾಚಿಕೊಂಡರು. ಆದರೆ ಹೇಳಿಕೊಳ್ಳುವಂತಹ ಬಿಗ್ ಬ್ರೇಕ್ ಸಿಗಲಿಲ್ಲ. ಇತ್ತೀಚಿಗೆ ನಾಗಚೈತನ್ಯ ಜೊತೆ ‘ಕಸ್ಟಡಿ’ (Custody) ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.

    ಈಗ ಮುಂಚಿನ ಹಾಗೇ ಕೃತಿಗೆ ಹೇಳಿಕೊಳ್ಳುವಂತಹ ಚಾನ್ಸ್ ಸಿಗುತ್ತಿಲ್ಲ. ನಿಧಾನಕ್ಕೆ ಕಾಲಿವುಡ್ ಚಿತ್ರಗಳತ್ತ ನಟಿ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಎಂಟ್ರಿಯಿಂದ ಕೃತಿಗೂ ಎಫೆಕ್ಟ್ ಆಗಿದೆ. ಶ್ರೀಲೀಲಾ ಸ್ಟಾರ್‌ಡಂನಿಂದ ಕೃತಿ ಶೆಟ್ಟಿಗೆ ಅವಕಾಶ ಕಮ್ಮಿಯಾಗ್ತಿದೆ. ಕೃತಿಗೆ ಸಿನಿಮಾರಂಗದಲ್ಲಿ ಡಿಮ್ಯಾಂಡ್ ಕಮ್ಮಿಯಾಗಿರುವ ಬೆನ್ನಲ್ಲೇ ಸ್ಟಾರ್ ನಟನ ಪುತ್ರನಿಂದ ಕಿರುಕುಳ ಶುರುವಾಗಿದೆ ಎಂಬ ಸುದ್ದಿ ಟಿಟೌನ್ ಅಡ್ಡಾದಲ್ಲಿ ಗಿರಿಕಿ ಹೊಡೆಯುತ್ತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಕೃತಿ ಹಂಚಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ:ರೂಪೇಶ್ ಶೆಟ್ಟಿ ‘ಸರ್ಕಸ್’ಗೆ ಬಿಗ್ ಬಾಸ್ ಟೀಮ್ ಸಾಥ್

    ಕೃತಿ ಶೆಟ್ಟಿ ಜೊತೆ ಸ್ನೇಹ ಸಂಪಾದಿಸಲು ಸ್ಟಾರ್ ನಟನ ಮಗನೊಬ್ಬ ಪ್ರಯತ್ನಿಸುತ್ತಿದ್ದಾನಂತೆ. ಇದೇ ಕಾರಣಕ್ಕೆ ಪದೇ ಪದೇ ಫೋನ್ ಮಾಡಿ ಆತ ನಟಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಚರ್ಚೆ ಶುರುವಾಗಿದೆ. ಪ್ರತಿ ಈವೆಂಟ್‌ನಲ್ಲೂ ಆಕೆಯ ಸುತ್ತಾಮುತ್ತಾ ತಿರುಗಾಡುತ್ತಾ ತೊಂದರೆ ಕೊಡುತ್ತಿದ್ದಾನೆ ಎನ್ನಲಾಗ್ತಿದೆ. ಆದರೆ ಆ ವ್ಯಕ್ತಿ ಯಾರು ಎಂಬುದು ಎಲ್ಲೂ ರಿವೀಲ್ ಆಗಿಲ್ಲ.

    ಇತ್ತೀಚೆಗೆ ಕೃತಿ ಶೆಟ್ಟಿ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರಂತೆ. ಶೂಟಿಂಗ್ ಬಿಟ್ಟು ನನ್ನ ಬರ್ತ್‌ಡೇ ಪಾರ್ಟಿಗೆ ಬಾ, ನಿನಗೆ ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಎಂದು ಆತ ಫೋನ್ ಮಾಡಿ ಕಿರುಕುಳ ನೀಡಿದ್ದಾಗಿ ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ. ಆತ ಯಾರು ಅನ್ನೋದು ಮಾತ್ರ ಆಕೆ ರಿವೀಲ್ ಮಾಡಿಲ್ಲವಂತೆ. ಕೃತಿ ಶೆಟ್ಟಿ ನಾನು ಯಾವುದೇ ಪಾರ್ಟಿಗೆ ಬರಲ್ಲ, ನನಗೆ ಪಾರ್ಟಿಗೆ ಬರೋದು ಇಷ್ಟ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಸದ್ಯ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟಾಕ್ಕಿದೆ. ಆತ ಯಾರು? ಯಾವ ಸ್ಟಾರ್ ನಟನ ಮಗ? ಅನ್ನೋದು ಗೊತ್ತಾಗಿಲ್ಲ. ಆತ ತಮಿಳು ಸ್ಟಾರ್ ನಟನ ಮಗನಾ ಅಥವಾ ತೆಲುಗು ನಟನ ಮಗನಾ? ಅಂತೆಲ್ಲಾ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]