Tag: ಉಪ್ಪೇನಾ

  • ಸ್ಟಾರ್ ನಟನ ಪುತ್ರನಿಂದ ಟಾರ್ಚರ್, ಈ ಸುದ್ದಿ ನಿಜಾನಾ? ಕೃತಿ ಶೆಟ್ಟಿ ಸ್ಪಷ್ಟನೆ

    ಸ್ಟಾರ್ ನಟನ ಪುತ್ರನಿಂದ ಟಾರ್ಚರ್, ಈ ಸುದ್ದಿ ನಿಜಾನಾ? ಕೃತಿ ಶೆಟ್ಟಿ ಸ್ಪಷ್ಟನೆ

    ‘ಉಪ್ಪೇನಾ’ (Uppena Film) ಸಿನಿಮಾದ ಸುಂದರಿ ಕೃತಿ ಶೆಟ್ಟಿ ಅವರು ಮೂಲತಃ ಮಂಗಳೂರಿನವರು. ತುಳುನಾಡಿನ ಈ ಬೆಡಗಿ ಕೃತಿ ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಹೀಗಿರುವಾಗ ಈಗ ವಿಷ್ಯವಾಗಿ ಕೃತಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡ್ತಿದ್ದಾನೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಚರ್ಚೆಗೆ ಗ್ರಾಸವಾಗಿತ್ತು. ಈ ಸುದ್ದಿ ನಿಜಾನಾ? ಸ್ವತಃ ಕೃತಿ ಶೆಟ್ಟಿ (Krithi Shetty) ಅವರೇ ಸ್ಪಷ್ಟನೆ ನೀಡಿದ್ದಾರೆ.

    ತೆಲುಗಿನ ‘ಉಪ್ಪೇನಾ’ ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ಆದ ಯುವನಟಿ ಕೃತಿ ಶೆಟ್ಟಿ ಅವರು ಸಾಕಷ್ಟು ಸ್ಟಾರ್ ನಟರ ಸಿನಿಮಾ ಅವಕಾಶಗಳನ್ನ ಬಾಚಿಕೊಂಡರು. ಆದರೆ ಹೇಳಿಕೊಳ್ಳುವಂತಹ ಬಿಗ್ ಬ್ರೇಕ್ ಸಿಗಲಿಲ್ಲ. ಇತ್ತೀಚಿಗೆ ನಾಗಚೈತನ್ಯ ಜೊತೆ ‘ಕಸ್ಟಡಿ’ (Custody) ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸಿನಿಮಾ ಕಡೆ ಗಮನ ಕೊಡ್ತಿರೋ ಬ್ಯೂಟಿಗೆ ತನ್ನ ವಿಚಾರ ಸಖತ್ ಚರ್ಚೆಯಾಗ್ತಿರೋದು ಗಮನಕ್ಕೆ ಬಂದಿದೆ. ಇದನ್ನೂ ಓದಿ:ಸಿಂಗಲ್ ಸೇವಂತಿ ಐಟಂ ಸಾಂಗ್ ರಿಲೀಸ್

    ಈಗ ಮುಂಚಿನ ಹಾಗೇ ಕೃತಿಗೆ ಹೇಳಿಕೊಳ್ಳುವಂತಹ ಚಾನ್ಸ್ ಸಿಗುತ್ತಿಲ್ಲ. ಅದರಲ್ಲೂ ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಎಂಟ್ರಿಯಿಂದ ಕೃತಿಗೂ ಎಫೆಕ್ಟ್ ಆಗಿದೆ. ಶ್ರೀಲೀಲಾ ಸ್ಟಾರ್‌ಡಂನಿಂದ ಕೃತಿ ಶೆಟ್ಟಿಗೆ ಅವಕಾಶ ಕಮ್ಮಿಯಾಗ್ತಿದೆ. ಕೃತಿಗೆ ಡಿಮ್ಯಾಂಡ್ ಕಮ್ಮಿಯಾಗಿದ್ದರ ನಡುವೆ ಸ್ಟಾರ್ ನಟನ ಪುತ್ರನಿಂದ ಕಿರುಕುಳ ಕೊಡ್ತಿದ್ದಾನೆ ಎಂಬ ಸುದ್ದಿ ಟಿಟೌನ್ ಅಡ್ಡಾದಲ್ಲಿ ಗಿರಿಕಿ ಹೊಡೆದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಕೃತಿ ಹಂಚಿಕೊಂಡಿದ್ದಾರೆ ಎನ್ನಲಾಗ್ತಿತ್ತು. ಕೃತಿ ಶೆಟ್ಟಿ ಜೊತೆ ಸ್ನೇಹ ಸಂಪಾದಿಸಲು ಸ್ಟಾರ್ ನಟನ ಮಗನೊಬ್ಬ ಪ್ರಯತ್ನಿಸುತ್ತಿದ್ದಾನಂತೆ. ಇದೇ ಕಾರಣಕ್ಕೆ ಪದೇ ಪದೇ ಫೋನ್ ಮಾಡಿ ಆತ ನಟಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಚರ್ಚೆ ಶುರುವಾಗಿತ್ತು. ಪ್ರತಿ ಈವೆಂಟ್‌ನಲ್ಲೂ ಆಕೆಯ ಸುತ್ತಾಮುತ್ತಾ ತಿರುಗಾಡುತ್ತಾ ತೊಂದರೆ ಕೊಡುತ್ತಿದ್ದಾನೆ ಎನ್ನಲಾಗ್ತಿತ್ತು. ಇದೆಲ್ಲಾ ಶುದ್ಧ ಸುಳ್ಳು ಎಂದು ನಟಿ ಉತ್ತರಿಸಿದ್ದಾರೆ.

    ಇದೀಗ ಈ ಪೋಸ್ಟ್‌ಗೆ ಕೃತಿ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡುವುದನ್ನು ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಿ. ಇದು ಜಾಲತಾಣದಲ್ಲಿ ಕಾಣಿಸಿಕೊಂಡಾಗಿನಿಂದ ಇದೊಂದು ಆಧಾರವಿಲ್ಲದ ವದಂತಿ, ನಿರ್ಲಕ್ಷಿಸುವುದು ಸರಿ ಎಂದು ಚಿಂತಿಸಿದ್ದೆ ಆದರೆ, ಇದು ಹೆಚ್ಚು ಸುದ್ದಿಯಾಗಿ ಎಲ್ಲೆ ಮೀರಿ ಹೋಗಿದ್ದರಿಂದ ನಾನು ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಹೇಳಿದ್ದಾರೆ. ಸ್ಟಾರ್ ಹೀರೋ ಮಗನಿಂದ ತನಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಕೃತಿ ಕ್ಲ್ಯಾರಿಟಿ ನೀಡಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೂ ನಟಿ ಬ್ರೇಕ್ ಹಾಕಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಲ್ಡನ್ ಲೆಗ್ ಕೃತಿ ಶೆಟ್ಟಿಗೆ ಸೋಲಿನ ಬಗ್ಗೆ ಟೀಕೆ

    ಗೋಲ್ಡನ್ ಲೆಗ್ ಕೃತಿ ಶೆಟ್ಟಿಗೆ ಸೋಲಿನ ಬಗ್ಗೆ ಟೀಕೆ

    ರಾವಳಿ ಬ್ಯೂಟಿ ಕೃತಿ ಶೆಟ್ಟಿ, ಕೆರಿಯರ್ ಹೊಸತರಲ್ಲೇ ಸೂಪರ್ ಸಕ್ಸಸ್ ಕಂಡಿರುವ ನಟಿ. ಆದರೆ ಇತ್ತೀಚೆಗೆ ಕೃತಿ ನಟಿಸಿರುವ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಗೋಲ್ಡನ್ ಲೆಗ್ ನಟಿ ಎಂದು ಕರೆದ ನೆಟ್ಟಿಗರೇ ಈಗ ಐರೆನ್ ಲೆಗ್ ನಾಯಕಿ ಅಂತಾ ಕರೆಯುತ್ತಿದ್ದಾರೆ.

    `ಸೂಪರ್ 30′ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ತೆರೆಹಂಚಿಕೊಂಡ ಬ್ಯೂಟಿ ಕೃತಿ ಶೆಟ್ಟಿ, ಬಳಿಕ `ಉಪ್ಪೇನಾ’ ಚಿತ್ರದ ಯಶಸ್ಸಿನ ನಂತರ ಸೌತ್‌ನ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಹಿಟ್ ನಟಿ ಎನಿಸಿಕೊಂಡ್ರು. ಈಗ ಇತ್ತೀಚೆಗೆ ಕೃತಿ ನಟಿಸಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಹಾಗಾಗಿ ನಟಿಯ ಚಿತ್ರಗಳ ಸೋಲಿಗೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಸೋನು ಶ್ರೀನಿವಾಸ್ ಗೌಡಗೆ ಟ್ರೋಲ್ ಆಗಿ ಫೇಮಸ್ ಆಗುವ ಆಸೆ: ಉದಯ್ ಸೂರ್ಯ

    ಕೃತಿ ಶೆಟ್ಟಿ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಲೇ `ಗೋಲ್ಡನ್ ಲೆಗ್’ ಅನ್ನೋ ಪಟ್ಟ ಕೊಟ್ಟಿದ್ದರು. ಆದ್ರೀಗ ಈ ನಟಿ `ಗೋಲ್ಡನ್ ಲೆಗ್’ ಅನ್ನೋ ಚಾರ್ಮ್ ಅನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಸಿನಿಮಾಗಳು. ರಾಮ್ ಪೋತಿನೇನಿ ಅಭಿನಯದ `ದಿ ವಾರಿಯರ್’ ಹಾಗೂ ನಿತಿನ್ ಜೊತೆ ನಟಿಸಿದ್ದ `ಮಾಚೆರ್ಲಾ ನಿಯೊಜಕವರ್ಗಂ’ ಸಿನಿಮಾಗಳು ಬಾಕ್ಸಾಫೀಸ್ ಮೋಡಿ ಮಾಡಲು ಸೋತಿವೆ. ಈ ಕಾರಣಕ್ಕೆ ಕೃತಿ ಶೆಟ್ಟಿಯನ್ನು ಟೀಕೆ ಮಾಡಲು ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]