Tag: ಉಪ್ಪು ನೀರು

  • ಬಿಸಿಲು, ಗಾಳಿ ಇಲ್ಲದೆ ಉಪ್ಪುನೀರಿಂದ ವಿದ್ಯುತ್ ಉತ್ಪಾದಿಸಿದ ಜಪಾನ್!

    ಬಿಸಿಲು, ಗಾಳಿ ಇಲ್ಲದೆ ಉಪ್ಪುನೀರಿಂದ ವಿದ್ಯುತ್ ಉತ್ಪಾದಿಸಿದ ಜಪಾನ್!

    ಷ್ಟೋ ವರ್ಷಗಳಿಂದ ಜಾಗತಿಕ ಪಾರಂಪರಿಕ ಶುದ್ಧ ಶಕ್ತಿಗಳಾದ ಹೊಂದಿರುವ ಸೂರ್ಯಶಕ್ತಿ, ಗಾಳಿಶಕ್ತಿಯ ಮೇಲೆ ಅವಲಂಬಿತವಾಗಿದ್ದೇವೆ. ಜಪಾನ್‌ನಲ್ಲಿ ಇತ್ತೀಚೆಗೆ ಉದ್ಭವಿಸಿರುವ ಉಪ್ಪು ನೀರು ಬಳಸಿ ಆಸ್ಮೋಟಿಕ್ ಶಕ್ತಿ (Osmotic Power) ಎಂಬ ಹೊಸ ಅಲೆಯನ್ನೇ ಸೃಷ್ಟಿಸುತ್ತದೆ.

    ಈ ಹೊಸ ವಿಧಾನವು ಗಾಳಿಯಿಲ್ಲದೆ, ಬೆಳಕಿಲ್ಲದೆ, ನೀರಿನ ರೂಪಾಂತರದಿಂದ ಮಾತ್ರ ಶಕ್ತಿ ಉತ್ಪಾದನೆಯನ್ನು ಮಾಡುತ್ತದೆ. ಇತ್ತೀಚೆಗೆ ಭಾರತದಲ್ಲಿ ಸೌರ ಶಕ್ತಿಯ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆದರೆ ಜಪಾನ್ (Japan) ದೇಶವು ಇವೆಲ್ಲವನ್ನು ಬಿಟ್ಟು ಉಪ್ಪು ನೀರಿನಿಂದ ವಿದ್ಯುತ್ ಅನ್ನ ಉತ್ಪಾದಿಸುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಇದನ್ನು ಸಾಗರ ಶಕ್ತಿ ಎಂದೂ ಸಹ ಕರೆಯಲಾಗುತ್ತದೆ.

    ಈ ಆಸ್ಮೋಟಿಕ್ ಶಕ್ತಿ ಅನ್ನು ಜಪಾನ್‌ನ ಫುಕೋಓಕಾ ನಗರದಲ್ಲಿ 2025ರಲ್ಲೇ ಪ್ರಾರಂಭ ಮಾಡಲಾಗಿದೆ. ಇದು ಏಷ್ಯಾದಲ್ಲಿ ಮೊದಲ ಜಗತ್ತಿನಲ್ಲಿ ಎರಡನೇ ಆಸ್ಮೋಟಿಕ್ ಶಕ್ತಿ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶವಾಗಿದೆ.

    ಸಾಗರ ಶಕ್ತಿಯ ಉತ್ಪಾದನೆ ಹೇಗೆ?
    ಫಿಲ್ಟರ್ ಮಾಡಿದ ಸಿಹಿ ನೀರು ಮತ್ತು ಸಮುದ್ರದ ನೀರನ್ನು ಬಿಡಲಾಗುತ್ತದೆ. ಮೆಂಬರೇನ್ ಮಾಡ್ಯೂಲ್‌ಗಳನ್ನು ಪ್ರವೇಶಿಸುವ ಮೊದಲು ಸಮುದ್ರದ ನೀರನ್ನು ಸರಿಸುಮಾರು ಅರ್ಧದಷ್ಟು ಆಸ್ಮೋಟಿಕ್ ಒತ್ತಡಕ್ಕೆ ಒಳಪಡಿಸಲಾಗುತ್ತದೆ.

    ಸಿಹಿ ನೀರನ್ನು ಮತ್ತು ಉಪ್ಪು ನೀರನ್ನು ಬೇರೆ ಬೇರೆಯಾಗಿ ಹಾಕಲಾಗುತ್ತದೆ. ಈ ಮೂರನೇ ಒಂದು ಭಾಗವನ್ನು ಜಲವಿದ್ಯುತ್ ಟರ್ಬೈನ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಉಳಿದ ಭಾಗವು ಒಳಬರುವ ಸಮುದ್ರದ ನೀರನ್ನು ಒತ್ತಡಕ್ಕೆ ಒಳಪಡಿಸಲು ಒತ್ತಡ ವಿನಿಮಯಕಾರಕದ ಮೂಲಕ ಹಾದುಹೋಗುತ್ತದೆ.

    ಶಕ್ತಿ ಉತ್ಪಾದನಾ ಸಾಮರ್ಥ್ಯ
    ವರ್ಷಕ್ಕೆ ಸುಮಾರು 8,80,000 ಕಿಲೋವಾಟ್‌-ಗಂಟೆ (kWh) ಶಕ್ತಿ ಉತ್ಪನೆಯಾಗುತ್ತದೆ. ಇದು ಸುಮಾರು 220ರಿಂದ 290 ಮನೆಗಳಿಗೆ ಸಮನಾದ ಶಕ್ತಿಯನ್ನು ಒದಗಿಸಲು ಯೋಗ್ಯವಾಗಿದೆ.

    ಇದರ ಪ್ರಯೋಜನಗಳೇನು?
    ನವೀಕರಿಸಬಹುದಾದ ಶಕ್ತಿ:
    ತರಂಗ ಶಕ್ತಿ ಮತ್ತು ಉಬ್ಬರವಿಳಿತದ ಶಕ್ತಿ ಎರಡೂ ಹೇರಳವಾದ ಸಾಗರದ ನೈಸರ್ಗಿಕ ಚಲನಶೀಲತೆಯನ್ನು ಬಳಸುತ್ತವೆ. ಅಲ್ಲದೆ ಇದು ವಿದ್ಯುತ್ ಉತ್ಪಾದಿಸಲು ಯಾವುದೇ ನವೀಕರಿಸಲಾಗದ ಇಂಧನಗಳನ್ನು ಬಳಸುವುದಿಲ್ಲ.

    ತ್ಯಾಜ್ಯಗಳನ್ನು ಉತ್ಪಾದಿಸಲ್ಲ:
    ಅವು ಕಾರ್ಯನಿರ್ವಹಿಸುವಾಗ ಹಸಿರುಮನೆ ಅನಿಲಗಳು ಅಥವಾ ಇತರ ಮಾಲಿನ್ಯವನ್ನು ಉತ್ಪಾದಿಸುವುದಿಲ್ಲ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಸಾಗರ ವಿದ್ಯುತ್ ಉತ್ಪಾದನೆಯಿಂದ ಯಾವುದೇ ತ್ಯಾಜ್ಯ ಉತ್ಪನ್ನಗಳು ಸೃಷ್ಟಿಯಾಗುವುದಿಲ್ಲ.

    ಕಡಲತೀರದ ದೇಶಗಳಿಗೆ ಹೆಚ್ಚು ಉಪಯುಕ್ತ:
    ಕರಾವಳಿ ತೀರಗಳಲ್ಲಿ ಅಲೆ ಮತ್ತು ಉಬ್ಬರವಿಳಿತದ ವಿದ್ಯುತ್ ಉತ್ಪಾದಕಗಳನ್ನು ನಿರ್ಮಿಸಲಾಗಿರುವುದರಿಂದ, ವಿಶೇಷವಾಗಿ ಉದ್ದವಾದ ಕರಾವಳಿಗಳನ್ನು ಹೊಂದಿರುವ ದೇಶಗಳಲ್ಲಿ ಅಪಾರ ಸಾಮರ್ಥ್ಯವಿದೆ.

    ಕಡಿಮೆ ವೆಚ್ಚಗಳು:
    ಸಾಗರ ಇಂಧನ ಸ್ಥಾವರವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ಅದರ ಚಾಲನಾ ವೆಚ್ಚವು ಸಾಕಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ತೈಲ ಮತ್ತು ಕಲ್ಲಿದ್ದಲು ಸ್ಥಾವರಗಳು ಹಾಗೂ ಪರಮಾಣು ವಿದ್ಯುತ್‌ನಂತಹ ಹೆಚ್ಚು ಪ್ರಬಲವಾದ ವಿದ್ಯುತ್ ಉತ್ಪಾದನೆಗೆ ಹೋಲಿಸಿದರೆ ಇದರ ವೆಚ್ಚ ಕಡಿಮೆ ಎನ್ನಲಾಗುತ್ತಿದೆ.

  • ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ನವದೆಹಲಿ: ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರದ ತಳಭಾಗದಲ್ಲಿ ಡೆಡ್ಲಿ ಪೂಲ್ (ಮಾರಣಾಂತಿಕ ಕೊಳ) ಪತ್ತೆಯಾಗಿದ್ದು, ಇದು ಪೂಲ್‌ನಲ್ಲಿ ಈಜುವ ಜೀವಿಯನ್ನು ಕೊಲ್ಲುತ್ತದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ವಿಜ್ಞಾನಿಗಳು ತಮ್ಮ ರಿಮೋಟ್ ಚಾಲಿತ ವಾಹನ ಬಳಸಿಕೊಂಡು ಕೆಂಪು ಸಮುದ್ರದ ತಳಭಾಗದಲ್ಲಿ 1.7 ಕಿ.ಮೀ ನಷ್ಟು ಉಪ್ಪು ನೀರಿನ ಡೆಡ್ಲಿ ಪೂಲ್ ಅನ್ನು ಕಂಡು ಹಿಡಿದ್ದಾರೆ. 10 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಯ 5 ನಿಮಿಷ ಇರುವಾಗ ಈ ಕೊಳವನ್ನು ಕಂಡುಹಿಡಿದಿದ್ದಾರೆ. ಈ ಪೂಲ್ ಅತಿಹೆಚ್ಚು ಉಪ್ಪು ನೀರಿನ ಕೇಂದ್ರೀಕೃತವಾಗಿದೆ. ಜೊತೆಗೆ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಸುತ್ತಮುತ್ತಲಿನ ಎಲ್ಲ ಸಾಗರಗಳಿಗಿಂತಲೂ ಹೆಚ್ಚು ಉಪ್ಪು ನೀರನ್ನು ಹೊಂದಿದೆ ಎಂದು ಸಂಶೋಧಕರು ವಿವರಿದ್ದಾರೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು

    ಅಲ್ಲದೇ ಈ ಪೂಲ್ ಜಲಚರ ಜೀವರಾಶಿಗಳನ್ನು ದಿಗ್ಭ್ರಮೆಗೊಳಿಸುತ್ತದೆ, ಜೊತೆಗೆ ಕೊಲ್ಲಲೂಬಹುದು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕ ಸ್ಯಾಮ್ ಪುರ್ಕಿಸ್, ಈ ಪೂಲ್‌ಗಳು ಭೂಮಿಯ ಮೇಲ್ಮೈಗಿಂತಲೂ ಮಾರಣಾಂತಿಕ ಪರಿಸರ ವಾತಾವರಣವನ್ನು ಒಳಗೊಂಡಿರುತ್ತವೆ. ದಾರಿತಪ್ಪಿದ ಯಾವುದೇ ಪ್ರಾಣಿಗಳು ಅಥವಾ ಜಲಚರಗಳು ಈ ಪೂಲ್‌ಗಳನ್ನು ಪ್ರವೇಶಿಸಿದರೆ ಅವುಗಳ ಸಾವು ನಿಶ್ಚಿತ ಎಂದು ಹೇಳಿದ್ದಾರೆ.

    ಮೀನು, ಸೀಗಡಿ ಹಾಗೂ ಈಲ್‌ಗಳು ತಮ್ಮ ಆಹಾರಕ್ಕಾಗಿ ಭೇಟೆಯಾಡಲು ಈ ಡೆಡ್ಲಿಪೂಲ್‌ಗಳ ಸಮೀಪದ ಸ್ಥಳಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಆಹಾರಕ್ಕಾಗಿ ಕೊಳದ ಬಳಿ ಅಡಗಿಕೊಳ್ಳುತ್ತವೆ. ಆದರೆ ಕೊಳವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಇಂತಹ ಪೂಲ್‌ಗಳು ನಮ್ಮ ಭೂಮಿಯ ಗ್ರಹದಲ್ಲಿ ಮೊದಲು ಸಾಗರಗಳು ಹೇಗೆ ರೂಪು ಗೊಂಡವು? ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಉಪ್ಪು ನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳ ನೆಲೆಯಾಗಿದೆ. ವೈವಿಧ್ಯತೆಗಳಿಂದ ಸಮೃದ್ಧವಾಗಿದೆ. ಆದರೆ ಇದೇ ರೀತಿ ಪ್ರತಿಕೂಲ ಪರಿಸ್ಥಿತಿಯನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂಬುದನ್ನು ನಿರ್ಧರಿಸಲು ಇಂತಹ ಆವಿಷ್ಕಾರಗಳು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.

    ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಗಳಲ್ಲಿ ಸಾಕಷ್ಟು ಮಾರಣಾಂತಿಕ ಕೊಳಗಳನ್ನು ಕಂಡುಹಿಡಿದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

    ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

    -ಮಂಗಳೂರು ಕಡಲಿನಲ್ಲಿ ಹೊಸ ಆವಿಷ್ಕಾರ

    ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು 10ಕ್ಕೂ ಹೆಚ್ಚು ದಿನಗಳ ಕಾಲ ಸಮುದ್ರದಲ್ಲೇ ಇರುತ್ತಾರೆ. ಈ ಸಂದರ್ಭ ಸಮುದ್ರದ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಒಂದು ವಾರದ ಬಳಕೆಗೆ ಬೇಕಾದ ಸಿಹಿ ನೀರನ್ನು ಹೋಗುವಾಗಲೇ ಬೋಟ್‍ನಲ್ಲಿ ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಆದರೆ ಇನ್ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನೇ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದು. ಆಸ್ಟ್ರೇಲಿಯಾದ ಈ ತಂತ್ರಜ್ಞಾನವನ್ನು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಈ ರೀತಿ ಬೋಟ್‍ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಸಚಿವ ಎಸ್.ಅಂಗಾರ ಸಮ್ಮುಖದಲ್ಲೇ ನಡೆಸಲಾಯಿತು.

    ಈ ತಂತ್ರಜ್ಞಾನ ಅಮೇರಿಕಾ, ಯುರೂಪ್‍ನಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‍ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತೆ. ಪೈಪ್‍ನಿಂದ ಬಂದ ಉಪ್ಪು ನೀರು ಶುದ್ದೀಕರಿಸುವ ಯಂತ್ರದ ಒಳಗೆ ಪಂಪ್ ಆಗಿ ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತೆ. ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀ. ನೀರು ಫಿಲ್ಟರ್ ಆಗುತ್ತೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‍ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತೆ ಎಂಬ ಆತಂಕವು ಇರೋದಿಲ್ಲ.

    ಈ ಯಂತ್ರಕ್ಕೆ 4 ಲಕ್ಷದ 60 ಸಾವಿರ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು ಸಿಹಿ ನೀರಿನ ಆಭಾವ ತಪ್ಪಲಿದೆ. ಇದನ್ನೂ ಓದಿ: ಪೂಜೆ ಮಾಡಿಕೊಂಡು ಹೋಗು ಅಂದ್ರೆ ದೇವಾಲಯವೇ ತನ್ನದೆಂದ ಪೂಜಾರಿ – ಗ್ರಾಮಸ್ಥರಿಂದ ಪ್ರತಿಭಟನೆ

  • ಶೀಘ್ರವೇ 5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ

    ಶೀಘ್ರವೇ 5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ

    ಭೋಪಾಲ್: ಶೀಘ್ರದಲ್ಲೇ 5 ಪೈಸೆಗೆ ಒಂದು ಲೀಟರ್ ನೀರನ್ನು ವಿತರಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಮಧ್ಯಪ್ರದೇಶದ ಬಂದ್ರಭಾನ್ ನಲ್ಲಿ ನಡೆಯುತ್ತಿರುವ ನದಿ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿನ ಟ್ಯುಟಿಕೋರನ್ ನಲ್ಲಿ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ನೀರಾಗಿ ಪರಿವರ್ತನೆ ಮಾಡುವ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿ ಹಲವು ರಾಜ್ಯಗಳು ನದಿ ನೀರಿಗಾಗಿ ಜಗಳವಾಡುತ್ತಿದೆ. ಆದರೆ ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹೋಗುವ ನದಿಯ ಬಗ್ಗೆ ಯಾರು ಕಳವಳ ವ್ಯಕ್ತಪಡಿಸುವುದಿಲ್ಲ ಎಂದರು.

    ಭಾರತದ ಮೂರು ನದಿಗಳು ಪಾಕಿಸ್ತಾನಕ್ಕೆ ಹರಿದು ಹೋಗುತ್ತದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುವುದಿಲ್ಲ ಜೊತೆಗೆ ಶಾಸಕರು ನೀರನ್ನು ತಡೆಯಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಹೇಳಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!

  • ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!

    ಇಸ್ರೇಲ್‍ನಲ್ಲಿ ಸಮುದ್ರ ನೀರನ್ನು ಕುಡಿದ ಮೋದಿ!

    ಟೆಲ್ ಅವೀವ್: ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಪ್ಪುನೀರಿನ ಶುದ್ಧೀಕರಣ ಘಟಕವನ್ನು ವೀಕ್ಷಿಸಿದರು.

    ಪ್ರವಾಸದ ಕೊನೆಯ ದಿನ ಮೋದಿ ಅವರು ಡೋರ್ ಬೀಚ್ ಗೆ ಭೇಟಿ ನೀಡಿ ಸಮುದ್ರ ನೀರಿನಿಂದ ಉಪ್ಪಿನಂಶ ತೆಗೆಯುವ ಘಟಕವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಜೊತೆಗಿದ್ದರು.

    ಇಬ್ಬರು ನಾಯಕರು ಸಮುದ್ರ ದಂಡೆಯಲ್ಲಿ ನಿಂತು ಮಾತನಾಡಿದರು. ಇದಾದ ಬಳಿಕ ಎರಡೂ ದೇಶದ ಪ್ರಧಾನಿಗಳು ಶುದ್ಧೀಕರಿಸಿದ ಸಮುದ್ರದ ನೀರನ್ನು ಕುಡಿದರು.

    ಸಮುದ್ರ ನೀರಿನಿಂದ ಉಪ್ಪಿನಂಶ ತೆಗೆದು ಅದನ್ನು ಕುಡಿಯುವ ನೀರಾಗಿ ಪರಿವರ್ತಿಸುವುದಕ್ಕೆ Desalination ಎಂದು ಕರೆಯಲಾಗುತ್ತದೆ. 2005ರಲ್ಲಿ ಇಸ್ರೇಲ್ ಮೊದಲ ಬಾರಿಗೆ ಈ ರೀತಿಯ ಘಟಕವನ್ನು ತೆರೆದಿದೆ. ಇಂದು ಇಸ್ರೇಲ್ ಶೇ.40ರಷ್ಟು ಕುಡಿಯುವ ನೀರಿಗೆ ಸಮುದ್ರವನ್ನೇ ನೆಚ್ಚಿಕೊಂಡಿದೆ.

    ಪ್ರಸ್ತುತ ಅಮೆರಿಕ, ಸಿಂಗಾಪುರ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳು ಈ ರೀತಿಯ ಘಟಕಗಳು ಸ್ಥಾಪನೆಯಾಗಿದೆ.

     

  • ಬೆಂಗ್ಳೂರಿಗೆ ಮಂಗ್ಳೂರು ಸಮುದ್ರದ ನೀರು- ಸರ್ಕಾರದಿಂದ ಸಿಹಿನೀರಿನ ಪ್ಲಾನ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕುಡಿಯುವ ನೀರಿಗೆ ಬರ ಬಂದಿದೆ. ಬೆಂಗಳೂರಿಗರ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಈ ನಡುವೆ ಕರಾವಳಿಯ ಸಮುದ್ರದ ನೀರನ್ನೇ ಬೆಂಗಳೂರಿಗರಿಗೆ ಕುಡಿಯಲು ಸರಬರಾಜು ಮಾಡುವ ಪ್ಲಾನ್ ಫಿಕ್ಸ್ ಆಗಿದೆ. ಇದಕ್ಕಾಗಿ ಈಗಾಗಲೇ ಬಂದರು ನಗರಿ ಮಂಗಳೂರಿನಲ್ಲಿ ಪ್ಲಾನ್ ರೆಡಿಯಾಗ್ತಿದೆ.

    ಎತ್ತಿನಹೊಳೆ ಯೋಜನೆಗೆ ಕೈ ಹಾಕಿದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು ಸರ್ಕಾರದ ಸುತ್ತಾ ಗಿರಕಿ ಹೊಡೆಯುತ್ತಿವೆ. ಕರಾವಳಿಯವರು ಕೊಡಲ್ಲ, ಕೋಲಾರ ಭಾಗದವರು ಬಿಡಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಅದೇ ಸಮುದ್ರದ ನೀರನ್ನ ಸಿಹಿ ಮಾಡಿ ಹರಿಸುವ ಯೋಜನೆ.

    ಹೌದು. ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಸಮುದ್ರದ ಉಪ್ಪು ನೀರನ್ನ ಸಿಹಿ ನೀರಾಗಿಸಿ ಬಳಕೆ ಮಾಡುತ್ತಿವೆ. ಮುಂಬೈ, ವಿಶಾಖಪಟ್ಟಣದಲ್ಲಿ ಯೋಜನೆ ರೆಡಿಯಾಗಿದೆ. ಚೆನ್ನೈನಲ್ಲಿ ಈಗಾಗಲೇ ಪ್ಲಾಂಟ್ ಶುರುವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರಿನ ತಣ್ಣೀರುಬಾವಿ ಭಾಗದಲ್ಲಿ ಪ್ಲಾಂಟ್ ನಿರ್ಮಿಸಿ ಬೆಂಗಳೂರು, ಕೋಲಾರ ಭಾಗಕ್ಕೆ ನೀರು ಹರಿಸಲು ಸರ್ಕಾರ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದ್ರಾಬಾದ್‍ನ ಅಧಿಕಾರಿಗಳ ತಂಡವೂ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ.

    ಈ ಅಧ್ಯಯನ ತಂಡದ ತಜ್ಞರ ಪ್ರಕಾರ, ಈ ಯೋಜನೆಯಡಿ 100 ಎಂಎಲ್‍ಡಿ ನೀರು ಉತ್ಪಾದಿಸಲು 600 ಕೋಟಿ ರೂ. ಖರ್ಚಾಗುತ್ತೆ. 18 ರಿಂದ 20 ಎಕರೆ ಭೂಮಿ ಬೇಕಾಗುತ್ತೆ. ಖುಷಿ ವಿಷಯ ಅಂದ್ರೆ ಮಂಗಳೂರಿನ ಎಂಆರ್‍ಪಿಎಲ್ ಮತ್ತು ಎಂಸಿಎಫ್ ಕೈಗಾರಿಕೆಗಳು ಈ ಯೋಜನೆಗೆ ಕೈ ಜೋಡಿಸಲಿವೆ.