Tag: ಉಪ್ಪಿಟ್ಟು

  • ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ರೋಗ್ಯಕರ ಮಾತ್ರವಲ್ಲದೇ ರುಚಿಕರವೂ ಆದ ಓಟ್ಸ್‌ನ (Oats) ಅಡುಗೆಯನ್ನು ಮಕ್ಕಳು ಮಾತ್ರವಲ್ಲದೇ ವಯಸ್ಕರೂ ಇಷ್ಟ ಪಡುತ್ತಾರೆ. ಹಾಲು ಅಥವಾ ಮೊಸರಿನೊಂದಿಗೆ ಓಟ್ಸ್ ಅನ್ನು ಹೆಚ್ಚಿನವರು ಸವಿಯಲು ಇಷ್ಟಪಡುತ್ತಾರಾದರೂ ಮಸಾಲೆಯುಕ್ತ ಪಾಕವಿಧಾನವೂ ಅಷ್ಟೇ ರುಚಿಕರವಾಗಿರುತ್ತದೆ. ನಾವಿಂದು ಹೇಳಿಕೊಡುತ್ತಿರುವ ವೆಜ್ ಮಾಸಾಲಾ ಓಟ್ಸ್ ಉಪ್ಪಿಟ್ಟನ್ನು(Veg Masala Oats Upma) ಒಮ್ಮೆ ನೀವೂ ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 2 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸೀಳಿದ ಹಸಿರು ಮೆಣಸಿನಕಾಯಿ – 1
    ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 1
    ಸಣ್ಣಗೆ ಹೆಚ್ಚಿದ ಬೀನ್ಸ್ – 3
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ

    ತಾಜಾ ಬಟಾಣಿ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಗರಂ ಮಸಾಲ ಪುಡಿ – ಅರ್ಧ ಟೀಸ್ಪೂನ್
    ರೋಲ್ಡ್ ಓಟ್ಸ್ – 1 ಕಪ್
    ನೀರು – 2 ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್ ಇದನ್ನೂ ಓದಿ: ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ.
    * ಈಗ ಈರುಳ್ಳಿ ಸೇರಿಸಿ ಮತ್ತು ಚೆನ್ನಾಗಿ ಸಾಟ್ ಮಾಡಿ.
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
    * ಈಗ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.
    * ಬಳಿಕ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಮತ್ತು ಬಟಾಣಿ ಹಾಕಿ 2 ನಿಮಿಷ ಬೇಯಿಸಿ.
    * ಈಗ ಮೆಣಸಿನ ಪುಡಿ, ಗರಂ ಮಸಾಲ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 1 ನಿಮಿಷ ಬೇಯಿಸಿ.
    * ಓಟ್ಸ್ ಸೇರಿಸಿ, 1 ನಿಮಿಷ ಸಾಟ್ ಮಾಡಿ.
    * ಇದೀಗ 2 ಕಪ್ ನೀರು ಸೇರಿಸಿ. ನಿಮಗೆ ಬೇಕಾಗಿರುವ ಸ್ಥಿರತೆಯನ್ನು ಅಂದಾಜಿಸಿ ಹೆಚ್ಚುವರಿ ನೀರು ಸೇರಿಸಬಹುದು.
    * ಈಗ ಎಲ್ಲವನ್ನೂ ನಿಧಾನವಾಗಿ ಮಿಶ್ರಣ ಮಾಡಿ, ಕಡಾಯಿಯನ್ನು ಮುಚ್ಚಿ, 5 ನಿಮಿಷಗಳ ಕಾಲ ಕುದಿಸಿ.
    * ಈಗ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಗೋಡಂಬಿಯನ್ನು ಹಾಕಿದರೆ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು ತಯಾರಾಗುತ್ತದೆ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ

    ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಮಾಡುವ ವಿಧಾನ

    ನರು ಆರೋಗ್ಯವಾಗಿರುವುದು ತಿನ್ನುವ ಆಹಾರದಿಂದ. ಅದರಲ್ಲಿಯೂ ನಾವು ಯಾವ ರೀತಿಯ ಆಹಾರ ತಿನ್ನುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತೆ. ಅದಕ್ಕೆ ಓಟ್ಸ್ ಪಾಕವಿಧಾನಗಳು ಅನೇಕ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಮುಖ್ಯವಾಗಿ ಬೆಳಗ್ಗಿನ ಆಹಾರಕ್ಕಾಗಿ ಸೇವಿಸಲಾಗುತ್ತದೆ. ಆದರೆ ಇದನ್ನು ಹೆಚ್ಚು ಜನರು ಹಾಲು ಅಥವಾ ಹಣ್ಣುಗಳ ಜೊತೆ ತಿನ್ನುತ್ತಾರೆ. ಆದರೆ ಇಂದು ನಾವು ಮಸಾಲೆಯುಕ್ತ ಓಟ್ಸ್ ಮಾಡುವುದು ಹೇಗೆ ಎಂದು ಸರಳ ಉಪಾಯದಲ್ಲಿ ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಓಟ್ಸ್ – 1 ಕಪ್
    * ಎಣ್ಣೆ – 1 ಟೇಬಲ್ಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – ಅರ್ಧ ಟೀಸ್ಪೂನ್
    * ಜೀರಿಗೆ – ಅರ್ಧ ಟೀಸ್ಪೂನ್
    * ಕರಿಬೇವಿನ ಎಲೆ – 5 ರಿಂದ 10
    * ಗೋಡಂಬಿ – 10
    * ಶುಂಠಿ – 1 ಇಂಚು
    * ಮೆಣಸಿನಕಾಯಿ – 2


    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್
    * ಕಟ್ ಮಾಡಿದ ಬೀನ್ಸ್ – ಅರ್ಧ ಕಪ್
    * ಕಟ್ ಮಾಡಿದ ಕ್ಯಾಪ್ಸಿಕಂ – ಕಾಲು ಕಪ್
    * ಬಟಾಣಿ – 2 ಟೇಬಲ್ಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ನೀರು – 1 ಕಪ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
    * ತುರಿದ ತೆಂಗಿನಕಾಯಿ – 2 ಟೇಬಲ್ಸ್ಪೂನ್
    * ನಿಂಬೆ ರಸ – 1 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ಓಟ್ಸ್ ಅನ್ನು 5 ನಿಮಿಷಗಳ ಕಾಲ ಹುರಿಯಿರಿ. ಓಟ್ಸ್ ಗರಿಗರಿಯಾಗುವ ತನಕ ರೋಸ್ಟ್ ಮಾಡಿ. ಪಕ್ಕಕ್ಕೆ ಇರಿಸಿ.
    * ಈಗ ಒಂದು ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಕರಿ ಬೇವು ಮತ್ತು ಗೋಡಂಬಿಗಳನ್ನು ಸೇರಿಸಿ. ಗೋಡಂಬಿಗಳು ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
    * ನಂತರ ಶುಂಠಿ, ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ಅದಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ, ಅರಿಶಿನ ಮತ್ತು ಉಪ್ಪು ಸೇರಿಸಿ. 2 ನಿಮಿಷಗಳ ಕಾಲ ಫ್ರೈ ಮಾಡಿ.
    * ಈಗ ಅದಕ್ಕೆ ನೀರು ಸೇರಿಸಿ, ಮುಚ್ಚಿ ಮತ್ತು 5 ನಿಮಿಷಗಳ ಕಾಲ ಬಿಡಿ. ತರಕಾರಿಗಳನ್ನು ಚೆನ್ನಾಗಿ ಬೇಯುವ ತನಕ ಕುಕ್ ಮಾಡಿ.
    * ತರಕಾರಿಗಳು ಬೆಂದ ಮೇಳೆ ಅದಕ್ಕೆ ಹುರಿದ ಓಟ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಓಟ್ಸ್ ಎಲ್ಲ ನೀರನ್ನು ಹೀರಿಕೊಳ್ಳುವವರೆಗೂ ಮಿಶ್ರಣ ಮಾಡಿ 5 ನಿಮಿಷಗಳ ಕಾಲ ಮುಚ್ಚಿ.
    * ಕೊನೆಗೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ. ಓಟ್ಸ್ ಸಂಪೂರ್ಣವಾಗಿ ಬೇಯಲು ಬಿಡಿ.

    – ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ಹಾವಿನ ಮರಿ ಬೆಂದ ಉಪ್ಪಿಟ್ಟು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

    ಹಾವಿನ ಮರಿ ಬೆಂದ ಉಪ್ಪಿಟ್ಟು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

    ಯಾದಗಿರಿ: ತಾಲೂಕಿನ ಅಬ್ಬೆ ತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ಹಾವಿನ ಮರಿ ಬೆಂದ ಉಪ್ಪಿಟ್ಟು ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಅನಾಹುತಕ್ಕೆ ಅಡುಗೆ ಸಿಬ್ಬಂದಿ ಮತ್ತು ವಾರ್ಡನ್ ನೇರ ಹೊಣೆ ಎಂದು ಪಬ್ಲಿಕ್ ಟಿವಿ ಎದುರು ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಪಾಲಕರು ಬಿಚ್ಚಿಟ್ಟಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಾಲಕರು, ಈ ಪ್ರಕರಣಕ್ಕೆ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ಕಾರಣ. ಮಕ್ಕಳು ಹಾಸ್ಟೆಲ್ ಊಟದ ಬಗ್ಗೆ ನಮ್ಮ ಹತ್ತಿರ ಹೇಳುತ್ತಿದ್ದರು. ಆದರೆ ನಾವು ಹಾಸ್ಟೆಲ್ ನಲ್ಲಿ ಇರಲಾಗದೆ ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದುಕೊಳ್ಳುತ್ತಿದ್ದೆವು. ಅದು ಅಲ್ಲದೇ ಊಟದ ಬಗ್ಗೆ ಸಾಕಷ್ಟು ಬಾರಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದೆವು. ಆದರೆ ಏನು ಪ್ರಯೋಜನವಾಗಿಲ್ಲ ಎಂದು ಶಾಲೆಯ ಅವ್ಯವಸ್ಥೆಗೆ ಕಿಡಿಕಾರಿದರು. ಇದನ್ನೂ ಓದಿ:  21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ

    ಆಸ್ಪತ್ರೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮತ್ತೊಂದು ಕಡೆ ಸುದ್ದಿ ತಿಳಿದು ಆಸ್ಪತ್ರೆಯತ್ತ ಮಕ್ಕಳ ಪಾಲಕರು ಆಗಮಿಸುತ್ತಿದ್ದಾರೆ.

  • ಸಚಿವ ಸಿ.ಎಸ್ ಶಿವಳ್ಳಿ ತಡರಾತ್ರಿ ಆಸ್ಪತ್ರೆಗೆ ದಾಖಲು

    ಸಚಿವ ಸಿ.ಎಸ್ ಶಿವಳ್ಳಿ ತಡರಾತ್ರಿ ಆಸ್ಪತ್ರೆಗೆ ದಾಖಲು

    ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ತಡರಾತ್ರಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಭಾನುವಾರ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದ ಕಾಯಕ್ರಮ ಮುಗಿಸಿ ವಾಪಸ್ ಬರುವಾಗ ಸಚಿವರು ವಾಂತಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾರ್ಯಕ್ರಮದ ನಂತರ ಸಚಿವರು ಉಪ್ಪಿಟ್ಟು ಸೇವಿಸಿದ್ದರು. ಉಪ್ಪಿಟ್ಟು ಸೇವಿಸಿದ್ದರಿಂದಲೇ ವಾಂತಿ ಆರಂಭವಾಗಿದೆ ಎನ್ನಲಾಗಿದೆ. ಸಚಿವರ ಗನ್ ಮ್ಯಾನ್ ಹಾಗೂ ಆಪ್ತಕಾರ್ಯದರ್ಶಿ ಸೇರಿದಂತೆ ನಾಲ್ಕು ಜನರಿಗೆ ವಾಂತಿಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹೊಟ್ಟೆ ಕ್ಲೀನ್ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ರೆ ವೈದ್ಯರು ಯಾವುದೇ ವಿಚಾರವನ್ನು ಇದೂವರೆಗೂ ಸ್ಪಷ್ಟಪಡಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯಾಗಿ ಮಾಡಿ – ಟ್ವಿಟ್ಟರ್‍ನಲ್ಲಿ ಭಾರೀ ಚರ್ಚೆ

    ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯಾಗಿ ಮಾಡಿ – ಟ್ವಿಟ್ಟರ್‍ನಲ್ಲಿ ಭಾರೀ ಚರ್ಚೆ

    ಬೆಂಗಳೂರು: ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರೀಯ ಮರ ಯಾವುದು ಅಂತಾ ಕೇಳಿದ್ರೆ ಥಟ್ ಅಂತಾ ಅನ್ಸರ್ ಮಾಡ್ತೇವೆ. ಆದ್ರೆ ರಾಷ್ಟ್ರೀಯ ತಿಂಡಿ ಯಾವುದು ಅಂತಾ ಕೇಳಿದ್ರೆ ಏನ್ ಹೇಳ್ತೀರಾ?

    ಹೌದು. ಇನ್ಮುಂದೆ ಉಪ್ಪಿಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಆಗಿದೆ. ತಮಿಳು ನಟ, ನಿರ್ದೇಶಕ ಪಾರ್ತೀಬನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಉಪ್ಪಿಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕೆಂದು ಹೇಳಿದ್ದಾರೆ.

    ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಟ್ವಿಟ್ಟರ್‍ನಲ್ಲಿ ಸಂಚಲನ ಮೂಡಿಸುತ್ತಿದ್ದು, ಭಾರೀ ಪರ-ವಿರೋಧ ಚರ್ಚೆಗಳು ಕೂಡ ನಡೆಯುತ್ತಿದೆ.

     

    https://twitter.com/ShantanuChikara/status/877105042167398400

    https://twitter.com/MrTheCHOWDHRY/status/877085082510544896