ಬೆಂಗಳೂರು: ನಟ ಉಪೇಂದ್ರ (Upendra) ಮತ್ತು ಪತ್ನಿ ಪ್ರಿಯಾಂಕಾ (Priyanka Upendra) ಮೊಬೈಲ್ ಹ್ಯಾಕ್ ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್‌ಗಳ (Hack) ಮೂಲ ಪತ್ತೆ ಮಾಡಿದ್ದಾರೆ.
ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, ನಾಲ್ಕು ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ನಾಲ್ಕು ಅಕೌಂಟ್ ಗಳು ಕೂಡ ನಕಲಿ ಆಗಿರುವುದು ಗೊತ್ತಾಗಿದೆ.
ಅದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಕೆಲವರ ಮೊಬೈಲ್ ಗಳನ್ನು ಹ್ಯಾಕ್ ಮಾಡಲಾಗಿದೆ. ಸದ್ಯ ಸದಾಶಿವನಗರ ಪೊಲೀಸರು, ಹ್ಯಾಕರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ವಿಶೇಷ ತಂಡ ಕಳುಹಿಸಲು ಸಿದ್ದತೆ ನಡೆದಿದೆ.
ಹುಚ್ಚ ಸೇರಿದಂತೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರ ‘ಗೆರಿಲ್ಲಾ WAR’. ಈ ಚಿತ್ರದ ನಾಯಕರಾಗಿ ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯಿಸುತ್ತಿದ್ದಾರೆ. ಸೆ.18 ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ‘ಗೆರಿಲ್ಲಾ WAR’ (Guerrilla War) ಚಿತ್ರತಂಡ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಪ್ರಸ್ತುತ ಓಂಪ್ರಕಾಶ್ ರಾವ್ (Om Prakash Rao) ನಿರ್ದೇಶನದ ಬಹು ನಿರೀಕ್ಷಿತ ‘ತ್ರಿಶೂಲಂ’ ಚಿತ್ರದಲ್ಲೂ ಉಪೇಂದ್ರ ಅವರು ನಟಿಸಿದ್ದು, ಇದು ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಾಗಿದೆ. ಬೇಬಿ ಇಂಚರ ಅರ್ಪಿಸುವ, ಎನ್‌ಎಸ್ ರಾವ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಹಾಗೂ ಆರ್ ವಾಸುದೇವ ರೆಡ್ಡಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯೋಪಿಕ್: ಮೋದಿ ಪಾತ್ರದಲ್ಲಿ ಮಲಯಾಳಂ ನಟ
ಡೆನ್ನಿಸಾ ಪ್ರಕಾಶ್ ಅವರು ಬರೆದಿರುವ ಕಥೆಗೆ ಓಂಪ್ರಕಾಶ್ ರಾವ್ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸುತ್ತಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ಗೆರಿಲ್ಲಾ ವಾರ್’ ಚಿತ್ರಕ್ಕೆ ದೀಪು ಪಿ.ಆರ್ ಸಂಭಾಷಣೆ ಬರೆಯುತ್ತಿದ್ದಾರೆ.
ಉಪೇಂದ್ರ ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಅಚ್ಯುತ್ ರಾವ್, ಭಾಸ್ಕರ್ ಶೆಟ್ಟಿ, ಆರಾಧ್ಯ, ಶ್ವೇತ ವೀರೇಶ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಈ ಚಿತ್ರ ಒಂದು ರೀತಿಯ ಯುದ್ಧವಾಗಿದ್ದು, ಅಲ್ಲಿ ಒಂದು ಸಣ್ಣ ಗುಂಪು ದೊಡ್ಡ ಸಂಖ್ಯೆಯ ಶತ್ರುಗಳೊಂದಿಗೆ ವ್ಯವಹರಿಸುವಾಗ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತದೆ. ಹಿಂದೆ ಈ ರೀತಿಯ ಯುದ್ಧಗಳು ಆಗಿರುವ ಅನೇಕ ಉದಾಹರಣೆಗಳಿವೆ. ಹಾಗಂತ ನಮ್ಮದು ಐತಿಹಾಸಿಕ ಚಿತ್ರವಲ್ಲ. ಈ ವಿಷಯವನ್ನಿಟ್ಟುಕೊಂಡು ಪ್ರಸಕ್ತ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈ ಸೈನಿಕ ಗಡಿ ಮಾತ್ರ ಕಾಯುವ ಸೈನಿಕನಲ್ಲ. ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಧೀಮಂತ ನಾಯಕ. ಇನ್ನೂ, ಈಗಿನ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಈ ಚಿತ್ರ ಮೂಡಿಬರಲಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊತ್ತಲವಾಡಿ ನಿರ್ಮಾಪಕರಿಗೆ ಅನ್ಯಾಯವಾಗಿದೆ, ಗೊತ್ತಾಗ್ಲಿ ಅಂದೇ ಇಷ್ಟೆಲ್ಲಾ ಮಾಡಿದ್ದು: ನಟಿ ಸ್ವರ್ಣ
ಇತ್ತೀಚೆಗೆ ಮೊಬೈಲ್ ಹ್ಯಾಕರ್‌ಗಳ ಕಾಟ ಹೆಚ್ಚಾಗಿದೆ. ಈ ಬಿಸಿ ಇದೀಗ ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ತಟ್ಟಿದೆ. ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ ಬೆಳ್ಳಂಬೆಳಗ್ಗೆ ವೀಡಿಯೋ ಮೂಲಕ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಬಹಿರಂಗಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅದಕ್ಕೂ ಮುನ್ನ ಅನೌನ್ಸ್ ಮಾಡ್ತಿದ್ದೇವೆ. ಮುಂದೆ ಪೊಲೀಸರಿಗೆ ದೂರನ್ನೂ ಕೊಡುತ್ತೇವೆ ಎಂದಿದ್ದಾರೆ ದಂಪತಿ.ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್‌ಗೂ `ಕರ್ನಾಟಕ ರತ್ನ’ ನೀಡುವಂತೆ ಮನವಿ
ಫೋನ್ ಹ್ಯಾಕ್ ಆಗಿದ್ದು ಹೇಗೆ?
ಆನ್‌ಲೈನ್‌ನಲ್ಲಿ ವಸ್ತುವೊಂದನ್ನ ಪ್ರಿಯಾಂಕಾ ಆರ್ಡರ್ ಮಾಡಿದ್ರಂತೆ, ಬಳಿಕ ಹ್ಯಾಕರ್ ಒಬ್ಬ ಫೋನ್ ಮಾಡಿ ಹ್ಯಾಶ್ ಒತ್ತಿ, ಆ ನಂಬರ್, ಈ ನಂಬರ್ ಒತ್ತಿ ಎಂದು ಹೇಳಿ ಕನ್‌ಫ್ಯೂಸ್ ಮಾಡಿದ್ದಾರೆ. ಬಳಿಕ ಉಪ್ಪಿ ಮೊಬೈಲ್‌ನಿಂದಲೂ ಕಾಲ್ ಮಾಡಿದಾಗ ಅವರ ಫೋನ್ ಕೂಡ ಹ್ಯಾಕ್ ಆಗಿದೆ. ಹೀಗಾಗಿ ದೂರು ಕೊಡೋದಕ್ಕೂ ಮುನ್ನವೇ ವೀಡಿಯೋ ಮೂಲಕ ಎಲ್ಲರಿಗೂ ವಿಷಯ ತಲುಪಿಸಿದ್ದಾರೆ ಉಪೇಂದ್ರ ದಂಪತಿ.
ನಟ, ನಿರ್ದೇಶಕ ಉಪೇಂದ್ರ ನಿವಾಸದಲ್ಲಿ ಪ್ರತಿ ವರ್ಷವೂ ಗಣೇಶ ಚತುರ್ಥಿ (Ganesha Chaturthi) ಹಬ್ಬ ಬಹಳ ಜೋರಾಗಿರುತ್ತೆ. ಕುಟುಂಬಸ್ಥರು ಇಂಡಸ್ಟ್ರಿಯ ಆಪ್ತರನ್ನ ಕರೆದು ಹಬ್ಬ ಮಾಡ್ತಾರೆ ಉಪೇಂದ್ರ (Upendra). ಈ ಬಾರಿಯೂ ಅಷ್ಟೇ ಜೋರಾಗಿ ಹಬ್ಬ ನಡೆದಿದೆ.
ಮನೆಯ ಮೇಲ್ಛಾವಣಿಯ ಕೊಠಡಿಯಲ್ಲಿ ಗಣೇಶ ಮೂರ್ತಿ ಕೂರಿಸಿ ಅದ್ಧೂರಿ ಮತ್ತು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಈ ಬಾರಿಯೂ ಹಬ್ಬ ವಿಜೃಂಭಣೆಯಿಂದ ನಡೆದಿದೆ. ಈ ಸಂಭ್ರಮದ ಫೋಟೋಗಳನ್ನ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಉಪೇಂದ್ರ-ಪ್ರಿಯಾಂಕ ದಂಪತಿ ಸಮೇತ ಕುಳಿತು ಗಣೇಶ ಪೂಜೆ ಮಾಡ್ತಾರೆ. ಗಣಪತಿ ಹೋಮ ಮಾಡ್ತಾರೆ. ತಂದೆ ತಾಯಿ, ಅಣ್ಣ ಅತ್ತಿಗೆ ಅಣ್ಣನ ಮಕ್ಕಳು ಹಾಗೂ ತಮ್ಮ ಕುಟುಂಬದ ಜೊತೆ ರಿಯಲ್ ಸ್ಟಾರ್ ಉಪ್ಪಿ ಅದ್ಧೂರಿಯಾಗಿ ಹಬ್ಬ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ `ಕೂಲಿ’ ಚಿತ್ರದ ವಿಶೇಷ ಪಾತ್ರದಲ್ಲಿ ಮಿಂಚಿರುವ ಉಪ್ಪಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಇದೀಗ ಉಪ್ಪಿ ಮನೆಯ ಅದ್ದೂರಿ ಸಡಗರ ವೈರಲ್ ಆಗಿದೆ.
ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರನ್ನ (Upendra) ಹಾಡಿ ಹೊಗಳಿದ್ದಾರೆ. ಮುಕ್ತ ವೇದಿಕೆಯಲ್ಲಿ ತಲೈವಾ ಕನ್ನಡದ ಬುದ್ಧಿವಂಥನ್ನ ಕೊಂಡಾಡಿದ್ದಾರೆ. ಈ ಘಟನೆ ನಡೆದಿದ್ದು ಕೂಲಿ (Coolie Movie) ಸಿನಿಮಾ ಪ್ರಿರಿಲೀಸ್ ಇವೆಂಟ್‌ನಲ್ಲಿ. ಚೆನೈನಲ್ಲಿ ನಡೆದ ಇವೆಂಟ್‌ನಲ್ಲಿ ಅದೇ ನೆಲದಲ್ಲೇ ಕನ್ನಡದ ಓಂ ಸಿನಿಮಾ ಕುರಿತಾಗಿ ಒಳ್ಳೆಯ ಮಾತನಾಡಿದ್ದಾರೆ. ಕಾರಣ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡ ಉಪೇಂದ್ರ ಕುರಿತು ತಲೈವಾ ಹೊಗಳಿಕೆಯ ಮಾತನ್ನಾಡಿದ್ದಾರೆ.
ನಟನೆ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡ ಉಪೇಂದ್ರ ವಿಶ್ವಾದ್ಯಂತ ಛಾಪು ಮೂಡಿಸಿರುವ ಕನ್ನಡದ ಪ್ರತಿಭೆ. ವಿವಿಧ ಭಾಷೆಯಲ್ಲಿ ಉಪೇಂದ್ರ ನಟಿಸುತ್ತಾ ಬಂದಿದ್ದಾರೆ. ಇದೀಗ ಉಪೇಂದ್ರ ಜೊತೆ ಕೂಲಿ ಚಿತ್ರದಲ್ಲಿ ತೆರೆಹಂಚಿಕೊಂಡಿರುವ ರಜನಿಕಾಂತ್ ಉಪ್ಪಿ ಗುಣಗಾನ ಮಾಡಿರುವ ಮಾತುಗಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ತಾವು ನಟಿಸಿದ್ದ `ಭಾಷಾ ಸಿನಿಮಾಗಿಂತ ಉಪೇಂದ್ರ ನಿರ್ದೇಶಿಸಿದ್ದ ಸಿನಿಮಾ ಹತ್ತು ಪಟ್ಟು ಉತ್ತಮ ಸಿನಿಮಾ’ ಎಂದಿರುವ ರಜನಿಕಾಂತ್ ಮಾತು ಗಮನಾರ್ಹ. ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ
ಉಪೇಂದ್ರ ಕುರಿತು ರಜನಿಕಾಂತ್ ಮಾತುಗಳೇನು? ಭಾರತದಲ್ಲಿರುವ ಮೋಸ್ಟ್ ಇಂಟಲೆಕ್ಚುವಲ್ ಡೈರೆಕ್ಟರ್‌ಗಳಿಗೆ ಇನ್ಸಿರೇಷನ್ ಅಂದ್ರೆ ಅದು ಉಪೇಂದ್ರ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳಂ, ತಮಿಳು ಎಲ್ಲರೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು, ಕನ್ನಡದಲ್ಲಿ ಶಿವರಾಜ್‌ಕುಮಾರ್ ಆಕ್ಟ್ ಮಾಡಿದ್ದ ಓಂ ಸಿನಿಮಾವನ್ನ ಅವರೇ ನಿರ್ದೇಶನ ಮಾಡಿದ್ರು , ಈ ಸಿನಿಮಾ ಭಾಷಾ ಚಿತ್ರಕ್ಕಿಂತ ಹತ್ತುಪಟ್ಟು ಬೆಟರ್ ಸಿನಿಮಾ, ನನಗೆ ಆಕ್ಟರ್ ಉಪೇಂದ್ರಗಿಂತ ಡೈರೆಕ್ಟರ್ ಉಪೇಂದ್ರ ಇಷ್ಟ. ಈಗ ಲೋಕೇಶ್ ಕನಕರಾಜ್ ನಾನ್‌ಲೀನಿಯರ್ ಸಿನಿಮಾ ಮಾಡ್ತಿದ್ದಾರೆ, ನಾನ್‌ಲೀನಿಯರ್ ಸಿನಿಮಾಗಳನ್ನ ಆಗಲೇ ಮಾಡುತ್ತಿದ್ದವರು ಡೈರೆಕ್ಟರ್ ಉಪೆಂದ್ರ.
ಮೇರು ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನ (Vishnuvardhan Memorial) ನೆಲಸಮ ಮಾಡಿದ ಹಿನ್ನೆಲೆ ಕರ್ನಾಟಕದಾದ್ಯಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕ ಹಾಗೂ ನಿರ್ಮಾಪಕರುಗಳು ಈ ಘಟನೆಯನ್ನ ಖಂಡಿಸಿದ್ದಾರೆ. ಧೀಮಂತ ನಾಯಕನ ವಿಚಾರದಲ್ಲಿ ಈ ವಿವಾದವನ್ನ ಅವರನ್ನ ಪ್ರೀತಿ ಮಾಡುವ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ವಿಷ್ಣುವರ್ಧನ್ ಅವರ ಮೇಲಿನ ಅಪಾರ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಸವಣ್ಣನವರ ವಚನದ ಮೂಲಕ ಈ ಕೃತ್ಯವೆಸಗಿದವರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರ ಸ್ಥಾನ ಎಂತದ್ದು ಎಂದು ಒಂದೇ ವಾಕ್ಯದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ
ಜಾಲತಾಣದಲ್ಲಿ ಬಸವಣ್ಣವರ ವಚನದ ಸಾಲಿನ ಮೂಲಕ ವಿಷ್ಣು ಅಮರರೆಂದು ಉಪ್ಪಿ ಬರೆದುಕೊಂಡಿದ್ದಾರೆ. ʻಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲʼ ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತʼ ಅಂತ ಬರೆದುಕೊಂಡಿದ್ದಾರೆ ನಟ ಉಪೇಂದ್ರ. ಇದನ್ನೂ ಓದಿ: ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದ ದರ್ಶನ್!
ಕಾಟೇರ (Kaatera) ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಮಾಲಾಶ್ರೀ (Malashree) ಪುತ್ರಿ ಆರಾಧನಾ (Aradhana) ಇದೀಗ ಬಹಳ ಗ್ಯಾಪ್ ಬಳಿಕ ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರ ಅಭಿನಯದ ನೆಕ್ಸ್ಟ್ ಲೆವೆಲ್ (Next Level) ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿಯಾಗಿದ್ದಾರೆ
ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದು ಶೀರ್ಷಿಕೆ, ಕಾಂಬಿನೇಷನ್ ಎಲ್ಲವೂ ಘೋಷಣೆಯಾದಾಗಲೇ ಹೊಸ ವೈಬ್ ಸೃಷ್ಟಿಸಿತ್ತು. ಇದೀಗ ನಾಯಕಿ ಆಯ್ಕೆಯಲ್ಲೂ ಆರಂಭದಲ್ಲೇ ಸಿನಿಮಾ ಟೀಮ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?
ಉಪೇಂದ್ರಾಗೂ (Upendra) ಆರಾಧನಾಗೂ ವಯಸ್ಸಿನ ಭಾರೀ ಅಂತರವಿದ್ದು ಈ ಜೋಡಿ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳುತ್ತದೆ ಎನ್ನುವುದೇ ಕುತೂಹಲ. ಈ ಪ್ರಶ್ನೆಗೆ ಉತ್ತರಿಸಿದ ಚಿತ್ರತಂಡ, ಸಿನಿಮಾ ಕಥೆಯಲ್ಲಿ ಇಬ್ಬರ ವಯಸ್ಸಿಗೂ ನ್ಯಾಯ ಕೊಡುವ ಪಾತ್ರ ಹೆಣೆಯಲಾಗಿದ್ದು ಸಿನಿಮಾ ನೋಡಿದ ಬಳಿಕ ಅದರ ರಹಸ್ಯ ತಿಳಿಯಲಿದೆ ಎಂದಿದೆ.
ನೆಕ್ಸ್ಟ್ ಲೆವೆಲ್ ಈ ಚಿತ್ರದ ಶೂಟಿಂಗ್ ಇದೇ ಬರುವ ನವೆಂಬರ್‌ನಿಂದ ಪ್ರಾರಂಭವಾಗಲಿದ್ದು ಸದ್ಯಕ್ಕೆ ಪ್ರೀಪ್ರೊಡಕ್ಷನ್ ತಯಾರಿ ನಡೆಯುತ್ತಿದೆ. ಕಾಟೇರ ಚಿತ್ರದ ಬಳಿಕ ಆ ಪಾತ್ರಕ್ಕಿಂತ ಭಿನ್ನ ಕ್ಯಾರೆಕ್ಟರ್ ಹುಡುಕುತ್ತಿದ್ದ ನಟಿ ಆರಾಧನಾ ಅಪ್ರೋಚ್ ಆಗಿದ್ದ ಬೇರೆಲ್ಲಾ ಆಫರ್‌ಗಳನ್ನ ಫಿಲ್ಟರ್ ಮಾಡಿ ನೆಕ್ಸ್ಟ್ ಲೆವೆಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಇಲ್ಲಿ ಆರಾಧನಾ ಕಾಟೇರದ ನಾಯಕಿ ಪ್ರಭಾ ಪಾತ್ರದ ವಿರುದ್ಧ ಪಾತ್ರದಲ್ಲಿ ನಟಿಸುತ್ತಿದ್ದು ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಲುಕ್‌ಟೆಸ್ಟ್ ಫೋಟೋಶೂಟ್ ಕೂಡ ಮಾಡಿಸಲಾಗಿದ್ದು ಆರಾಧನಾ ಸಖತ್ ಆಗಿ ಮಿಂಚಿದ್ದಾರೆ.
ಸೈಲೆಂಟಾಗೇ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಹೊಸ ಸಿನಿಮಾ ಪ್ಲ್ಯಾನ್ ಆಗಿದೆ, ಟೀಮ್ ಕೂಡ ರಿವೀಲ್ ಆಗಿದೆ. ಇನ್ನುಳಿದ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದ್ದು, ಉಪೇಂದ್ರಗೆ ಈ ಬಾರಿ ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿದ್ದಾರೆ.
ಹಲವು ದಿನಗಳಿಂದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಉಪ್ಪಿ ನಟಿಸುವ ಸುದ್ದಿ ಇತ್ತು. ಇದೀಗ ನಿರ್ಮಾಣ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದ್ದು ಚಿತ್ರಕ್ಕೆ ಶೀರ್ಷಿಕೆಯೇ ಮುಖ್ಯ ಆಕರ್ಷಣೆ ಆಗಿದೆ. ಚಿತ್ರಕ್ಕೆ ʻನೆಕ್ಸ್ಟ್ ಲೆವೆಲ್ʼ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಇನ್ನಷ್ಟು ಸೀಕ್ರೆಟ್‌ಗಳನ್ನ ಹಂತಹಂತವಾಗಿ ರಿವ್ಹೀಲ್ ಮಾಡುವ ಸುದ್ದಿ ಕೊಟ್ಟಿದೆ ಚಿತ್ರತಂಡ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು
‘ಪುಷ್ಪ’ (Pushpa) ಅಥವಾ ನನ್ನ ಇತರೆ ಸಿನಿಮಾಗಳ ಚಿತ್ರಕಥೆ ಚೆನ್ನಾಗಿದೆ ಎಂದರೆ ಅದಕ್ಕೆ ಉಪೇಂದ್ರ (Upendra) ಸಿನಿಮಾಗಳೇ ಸ್ಫೂರ್ತಿ ಎಂದು ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ (Sukumar) ಕೊಂಡಾಡಿದ್ದಾರೆ. ಇದನ್ನೂ ಓದಿ:2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಇಲಿಯಾನಾ
ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸುಕುಮಾರ್ ಮತ್ತು ಉಪೇಂದ್ರ ಅತಿಥಿಗಳಾಗಿ ಭಾಗಿಯಾಗಿದ್ದರು. ಈ ವೇಳೆ ಸುಕುಮಾರ್ ಮಾತನಾಡಿ, ಉಪೇಂದ್ರ ಅವರು ತಮ್ಮ ಚಿತ್ರಗಳಲ್ಲಿ ತರುವ ಮ್ಯಾಡ್‌ನೆಸ್ ಅನ್ನು ನಾನು ಯಾವುದೇ ನಿರ್ದೇಶಕರಲ್ಲಿ ನೋಡಿಲ್ಲ. ನಾನು ಕೂಡ ಅವರಂತೆ ನಿರ್ದೇಶಿಸಿದ್ದರೆ ಖುಷಿಯಿಂದ ನಿವೃತ್ತಿ ಹೊಂದುತ್ತಿದ್ದೆ ಎಂದಿದ್ದಾರೆ. ಇದನ್ನೂ ಓದಿ:ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?
‘ಪುಷ್ಪ’ ಅಥವಾ ನನ್ನ ಇತರೆ ಸಿನಿಮಾಗಳ ಚಿತ್ರಕಥೆ ಚೆನ್ನಾಗಿದೆ ಎಂದರೆ ಅದಕ್ಕೆ ಉಪ್ಪಿ ಸಿನಿಮಾಗಳೇ ಪ್ರೇರಣೆ. ಅದನ್ನು ಯಾವುದೇ ಸಂಕೋಚವಿಲ್ಲದೇ ಹೇಳುತ್ತೇನೆ ಎಂದು ಉಪೇಂದ್ರ ಕುರಿತು ಸುಕುಮಾರ್ ಹೊಗಳಿದ್ದಾರೆ. ನಿರ್ದೇಶಕನ ಮಾತು ಉಪ್ಪಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ತೆಲುಗಿನ ಆಂಧ್ರ ಕಿಂಗ್ ತಾಲೂಕಾ, ಭಾರ್ಗವ, 45 ಸಿನಿಮಾ, ಕೂಲಿ ಸೇರಿದಂತೆ ಹಲವು ಚಿತ್ರಗಳು ಉಪೇಂದ್ರ ಕೈಯಲ್ಲಿವೆ.
ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಕನ್ನಡ ಮಾತ್ರವಲ್ಲ ಪರಭಾಷೆಯ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಯುಐ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕರ್ವ’ ಡೈರೆಕ್ಟರ್ ನವನೀತ್ ನಿರ್ದೇಶನದಲ್ಲಿ ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ನಟಿಸಲು ಉಪೇಂದ್ರ ಓಕೆ ಎಂದಿದ್ದಾರೆ.
ಅಂದಹಾಗೆ, ರಾಮ್ ಪೋತಿನೇನಿ (Ram Pothineni) ನಟನೆಯ ‘ಆಂಧ್ರ ಕಿಂಗ್ ತಾಲೂಕಾ’ ಚಿತ್ರದಲ್ಲಿ ಉಪೇಂದ್ರ ಸೂಪರ್ ಸ್ಟಾರ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ (Rajinikanth) ಜೊತೆ ‘ಕೂಲಿ’ (Coolie) ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭಾರ್ಗವ, 45 ಸಿನಿಮಾಗಳು ನಟನ ಕೈಯಲ್ಲಿವೆ.