Tag: ಉಪಾಧ್ಯಕ್ಷೆ

  • ಅರ್ಜೆಂಟೀನಾ ಉಪಾಧ್ಯಕ್ಷೆಗೆ ಗುಂಡಿಕ್ಕಿ ಕೊಲ್ಲಲು ಯತ್ನ – ವೀಡಿಯೋ ವೈರಲ್‌

    ಅರ್ಜೆಂಟೀನಾ ಉಪಾಧ್ಯಕ್ಷೆಗೆ ಗುಂಡಿಕ್ಕಿ ಕೊಲ್ಲಲು ಯತ್ನ – ವೀಡಿಯೋ ವೈರಲ್‌

    ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರನ್ನು ಗುಂಡಿಕ್ಕಿ ಕೊಲ್ಲಲು ವ್ಯಕ್ತಿಯೊಬ್ಬ ಯತ್ನಿಸಿದ ಅಚ್ಚರಿ ಘಟನೆ ನಡೆದಿದೆ.

    ಘಟನೆ ವೀಡಿಯೋ ವೈರಲ್‌ ಆಗಿದೆ. ಕ್ರಿಸ್ಟಿನಾ ಅವರು ಕಾರಿನಿಂದ ಇಳಿದಾಗ ಅವರನ್ನು ಮಾತನಾಡಿಸಲು ಅನೇಕರು ಮುಂದಾಗುತ್ತಾರೆ. ಈ ವೇಳೆ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನ ನೆರೆದಿರುತ್ತಾರೆ. ಜನಸಂದಣಿ ನಡುವೆ ಇದ್ದ ವ್ಯಕ್ತಿಯೊಬ್ಬ ಕ್ರಿಸ್ಟಿನಾ ಅವರ ಹತ್ತಿರಕ್ಕೆ ಬಂದು, ಅವರ ತಲೆಗೆ ಗನ್‌ ಗುರಿಯಿಟ್ಟು ಟ್ರಿಗರ್‌ ಒತ್ತುತ್ತಾನೆ. ಈ ವೇಳೆ ಗುಂಡು ಹಾರಿಲ್ಲ. ತಕ್ಷಣ ಎಚ್ಚೆತ್ತ ರಕ್ಷಣಾ ಸಿಬ್ಬಂದಿ, ಆ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ. ಅದೃಷ್ಟವಶಾತ್‌ ಕ್ರಿಸ್ಟಿನಾ ಅವರು ಅಪಾಯದಿಂದ ಪಾರಾಗಿದ್ದಾರೆ. ದಾಳಿಕೋರನು ಬ್ರೆಜಿಲ್ ಮೂಲದ 35 ವರ್ಷದ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದು, ತಕ್ಷಣ ಆತನನ್ನು ಬಂಧಿಸಿ ಗನ್‌ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಫಿ ದೈತ್ಯ ಸ್ಟಾರ್‌ಬಕ್ಸ್‌ಗೆ ಭಾರತ ಮೂಲದ ಲಕ್ಷ್ಮಣ್ CEO ಆಗಿ ನೇಮಕ

    https://twitter.com/AZmilitary1/status/1565513406181941248?ref_src=twsrc%5Etfw%7Ctwcamp%5Etweetembed%7Ctwterm%5E1565513406181941248%7Ctwgr%5E97dfe4b8c9870fdbbf5a3c9fe4a43713e39e33ce%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-man-tried-to-shoot-argentinas-vice-president-gun-didnt-go-off-3309034

    ಘಟನೆ ಬಗ್ಗೆ ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಆತಂಕ ವ್ಯಕ್ತಪಡಿಸಿದ್ದಾರೆ. ಬಂದೂಕಿನಲ್ಲಿ ಐದು ಗುಂಡುಗಳು ತುಂಬಿದ್ದವು ಎಂದು ಹೇಳಿರುವ ಅವರು, ಅರ್ಜೆಂಟೀನಾ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ನಾವು ಎದುರಿಸಿದ ಗಂಭೀರ ಘಟನೆ ಇದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಉಪಾಧ್ಯಕ್ಷ ಕ್ರಿಸ್ಟಿನಾ ಅವರು ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ದಾಳಿ ನಡೆದಾಗ ನೂರಾರು ಬೆಂಬಲಿಗರು ಆಕೆಯ ಬ್ಯೂನಸ್ ಐರಿಸ್ ಮನೆಯ ಹೊರಗೆ ಜಮಾಯಿಸಿದ್ದರು. ಇದನ್ನೂ ಓದಿ: ರಷ್ಯಾದ ತೈಲ ಸಂಸ್ಥೆ ಅಧ್ಯಕ್ಷ ಆಸ್ಪತ್ರೆಯ ಕಿಟಕಿಯಿಂದ ಬಿದ್ದು ಸಾವು

    2007 ಮತ್ತು 2015ರ ನಡುವೆ ಎರಡು ಅವಧಿಗೆ ಅಧ್ಯಕ್ಷರಾಗಿ ಫೆರ್ನಾಂಡೀಸ್ ಡಿ ಕಿರ್ಚ್ನರ್ ಅರ್ಜೆಂಟೀನಾ ಸೇವೆ ಸಲ್ಲಿಸಿದ್ದರು. ಅರ್ಜೆಂಟೀನಾದಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆ ಪರಿಣಾಮವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ

    ಅಕ್ರಮ ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ

    ಮಂಗಳೂರು: ಬಸವ ವಸತಿ ಯೋಜನೆಯ ಅಕ್ರಮವನ್ನು ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನೊಬ್ಬನ ಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿಸಿ ನೀರು ಎರಚಿ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದಿದೆ.

    ಉಜಿರೆ ಗ್ರಾಮ ಪಂಚಾಯತ್‍ಯ ವಿನುತಾ ರಜತ್ ಗೌಡ ಬಿಸಿ ನೀರು ಎರಚಿದ ಉಪಾಧ್ಯಕ್ಷೆ. ಇಂದು ವಿನುತಾ ಅವರ ಮನೆಗೆ ಅಧಿಕಾರಿಗಳ ಜೊತೆಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಆರ್‌ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್(41) ಅವರ ಹಲ್ಲೆ ಮಾಡಿದ್ದಾರೆ.

    ಬಸವ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ರಾಜೀವ ಗಾಂಧಿ ವಸತಿ ನಿಗಮಕ್ಕೆ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ತಾಲೂಕು ಪಂಚಾಯತ್ ಇಓ ಕುಸುಮಾಧರ್ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆಗೆ ಆಗಮಿಸಿದ್ದರು. ಉಜಿರೆ ಗ್ರಾಮದ ಮಲೆಬೆಟ್ಟಿನಲ್ಲಿರುವ ಉಪಾಧ್ಯಕ್ಷೆಯ ಮನೆಯ ಅಂಗಳದಲ್ಲಿ ವಿಚಾರಣೆ ನಡೆಯುತ್ತಿತು. ಈ ವೇಳೆ ವಿನುತಾ ರಜತ್ ಗೌಡ ಮನೆಯ ಒಳಗಿಂದ ಬಿಸಿನೀರು ತಂದು ಬಾಲಸುಬ್ರಹ್ಮಣ್ಯ ಭಟ್ ಮೇಲೆ ಎರಚಿದ್ದಾರೆ.

    ಬಾಲಸುಬ್ರಹ್ಮಣ್ಯ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚುಕಿತ್ಸೆ ಅಗತ್ಯವಾಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಜಿರೆ ಗ್ರಾಮ ಪಂಚಾಯತ್‍ನಲ್ಲಿ ಅನೇಕ ಅಕ್ರಮಗಳು ನಡೆದಿವೆ. ಈ ಕುರಿತು ನಾನು ದೂರು ನೀಡಿದ್ದರಿಂದ ನನ್ನ ಮೇಲೆ ಬಿಸಿ ನೀರು ಎರಚಿದ್ದಾರೆ. ಬೆನ್ನಿನ ಎಡಭಾಗದಲ್ಲಿ ಗುಳ್ಳೆಗಳಾಗಿದ್ದು, ಉರಿಯಲು ಆರಂಭಿಸಿವೆ ಎಂದು ಬಾಲಸುಬ್ರಹ್ಮಣ್ಯ ಭಟ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv