Tag: ಉಪಸಭಾಪತಿ

  • ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

    ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

    ಚಿಕ್ಕಮಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ರೈಲಿಗೆ ತಲೆಕೊಡುವ ಮೂಲಕ ಆತ್ಮಹತ್ಮೆಗೆ ಶರಣಾಗಿದ್ದು, ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರ ನಿಧನಕ್ಕೆ ಇದೀಗ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ.

    ಹುಟ್ಟು ಹಾಗೂ ರಾಜಕೀಯ ಹಿನ್ನೆಲೆ
    ಎಸ್ ಎಲ್ ಧರ್ಮೆಗೌಡ ಅವರು ಮಾಜಿ ಶಾಸಕ ಲಕ್ಷ್ಮಯ್ಯ ಅವರ ಪುತ್ರ. ಧರ್ಮೆಗೌಡ ಅವರ ತಂದೆ ಲಕ್ಷ್ಮಯ್ಯ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದರು. ಲಕ್ಷ್ಮಯ್ಯ 1983, 1985 ಹಾಗೂ 1994 ಹೀಗೆ ಒಟ್ಟು 3 ಬಾರಿ ಬೀರೂರಿನಿಂದ ಶಾಸಕರಾಗಿದ್ದರು.

    ವೈಯಕ್ತಿಕ ಜೀವನ:
    ಧರ್ಮೇಗೌಡ ಅವರಿಗೆ 65 ವರ್ಷವಾಗಿತ್ತು. ಇವರು ಪತ್ನಿ ಹೆಸರು ಮಮತಾ. ಈ ದಂಪತಿಗೆ ಮಗ ಸೋನಾಲ್, ಮಗಳು ಸಲೋನಿ ಇದ್ದಾರೆ. ರಾಜಕೀಯ ಮಾತ್ರವಲ್ಲದೇ ಧರ್ಮೇಗೌಡ ಇತ್ತೀಚೆಗೆ ಕೃಷಿ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದರು. ಕೃಷಿಯ ಕುರಿತಾಗಿ ಹೆಚ್ಚಿನ ಗಮನ ಮತ್ತು ಆಸಕ್ತಿಯನ್ನು ತೋರಿಸುತ್ತಿದ್ದರು.

    ರಾಜಕೀಯ ಬದುಕು:
    ಧರ್ಮೇಗೌಡ ಅವರು ಬಿಳಕಲ್ ಹಳ್ಳಿ ಗ್ರಾಮಪಂಚಾಯತ್ ಸದಸ್ಯರಾಗಿ ರಾಜಕೀಯ ಬದುಕನ್ನು ಆರಂಭಿಸಿದ್ದರು. ನಂತರ ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿಯೂ ಧರ್ಮೇಗೌಡ ಅವರು ಸೇವೆ ಸಲ್ಲಿಸಿದ್ದಾರೆ. ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿದ್ದರು. ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾಗಿದ್ದರು.

    ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ರಾಜ್ಯ ವಿಮಾ ಸಹಕಾರ ಸಂಘದ ನಿರ್ದೇಶಕ, ದೆಹಲಿಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೋಟಾಸ್ ಲಿಮಿಟೆಡ್ ನಿರ್ದೇಶಕ, ತಾಲೂಕು ಪಂಚಾಯತ್ ಸದಸ್ಯ, ಜಿಲ್ಲಾಪಂಚಾಯತ್ 2 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೀರೂರು ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದರು ಹಾಗೂ ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

    ದೇವೆಗೌಡ ಅವರ ಕುಟುಂಬದ ಒಡನಾಟ:
    ಧರ್ಮೇಗೌಡ ಅವರು ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಆಪ್ತ ಸ್ನೇಹಿತರಾಗಿದ್ದರು. ಅದೇ ಕಾರಣಕ್ಕೆ ಅವರನ್ನ ವಿಧಾನಪರಿಷತ್ ಸದಸ್ಯರನ್ನಾಗಿ ಕುಮಾರಸ್ವಾಮಿ ಆಯ್ಕೆ ಮಾಡಿದ್ದರು. ಕುಮಾರಸ್ವಾಮಿ ಜೊತೆಗಿನ ಸ್ನೇಹವೇ ಧರ್ಮೆಗೌಡ ಅವರಿಗೆ ಉಪ ಸಭಾಪತಿ ಸ್ಥಾನವು ಒಲಿಯುವಂತೆ ಮಾಡಿತ್ತು.

    ಮೈತ್ರಿ ಸರ್ಕಾರದಲ್ಲಿ ಒಲಿದಿದ್ದ ಉಪಸಭಾಪತಿ ಸ್ಥಾನ:
    ಮೊದಲು ಸಭಾಪತಿಗೆ ದೇವೇಗೌಡರು ಮತ್ತು ಸಿದ್ದರಾಮಯ್ಯ ಪಟ್ಟು ಹಿಡಿಯುತ್ತಾರೆ. ಇಬ್ಬರ ಹಠ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿತ್ತದೆ. ಸಭಾಪತಿ ಸ್ಥಾನಕ್ಕೆ ಇಬ್ಬರು ನಾಯಕರು ಸೂಚಿಸಿದ ಹೆಸರುಗಳನ್ನ ಹೈಕಮಾಂಡ್ ತಿರಸ್ಕರಿಸುತ್ತಾರೆ. ಆಗ ಇಬ್ಬರ ಹೆಸರು ಬೇಡ, ಕಾಂಗ್ರೆಸ್ಸಿಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟರೆ ಹೈಕಮಾಂಡ್ ಸೂಚಿಸಿದ ವ್ಯಕ್ತಿ ಸಭಾಪತಿ ಆಗ್ತಾರೆ. ಜೆಡಿಎಸ್ ಗೆ ಉಪಸಭಾಪತಿ ಎಂದು ತೀರ್ಮಾನದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಇನ್ನೊಂದು ದಾಳ ಉರುಳಿಸ್ತಾರೆ. ಆಗ ಆಪ್ತ ಸ್ನೇಹಿತ ಧರ್ಮೇಗೌಡರ ಹೆಸರನ್ನು ಉಪಸಭಾಪತಿ ಸ್ಥಾನಕ್ಕೆ ಪ್ರಸ್ತಾಪಿಸ್ತಾರೆ. ಹೀಗಾಗಿ ಅಂತಿಮವಾಗಿ ಹೆಚ್ ಡಿಕೆ ಹೇಳಿದ ಧರ್ಮೇಗೌಡರೇ ಉಪಸಭಾಪತಿ ಆಗಿ ನೇಮಕವಾಗುತ್ತಾರೆ.

    ಪರಿಷತ್ ನಲ್ಲಿ ನಡೆದ ಗಲಾಟೆ :
    ಡಿಸೆಂಬರ್ 16 ರಂದು ಪರಿಷತ್ ನಲ್ಲಿ ನಡೆದ ಹೈಡ್ರಾಮಾದಿಂದ ಧರ್ಮೇಗೌಡ ಬೇಸತ್ತಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಪರಿಷತ್ ಗಲಾಟೆ ಬಳಿಕ ಸಭಾಪತಿ ಮೇಲೆ, ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರ ನಡೆ ಎಲ್ಲರ ಗಮನ ಸೆಳೆದಿತ್ತು. ಆದ್ರೆ ಉಪಸಭಾಪತಿ ಧರ್ಮೇಗೌಡ ಒಬ್ಬಂಟಿಯಾಗಿದ್ದರು. ಅಂದೇ ಮಾನಸಿಕವಾಗಿ ಧರ್ಮೇಗೌಡ ಕುಸಿದಿದ್ದರು. ಉಪಸಭಾಪತಿ ಗೌಜು ಗದ್ದಲದಲ್ಲಿ ಧರ್ಮೇಗೌಡರ ಮಾನಸಿಕ ತುಮುಲಗಳನ್ನು ಯಾರೂ ಗಮನಿಸಲಿಲ್ಲ.

    ಪರಿಷತ್ ಕಲಾಪದ ಅಂದು ನಡೆದಿದ್ದು:
    ವಿಶೇಷ ಅಧಿವೇಶನ ವಿಧಾನಮಂಡಲದ ಇತಿಹಾಸದ ಪುಟಗಳಲ್ಲಿ ಕರಾಳ ಅಧ್ಯಾಯವಾಗಿತ್ತು. ಕಲಾಪದ ಬೆಲ್ ಮುಗಿಯುವ ಮುನ್ನವೇ ಪುಂಡರಂತೆ ಪರಸ್ಪರ ನೂಕಾಟ, ಕೂಗಾಟ, ತಳ್ಳಾಟ, ಎಳೆದಾಟ ಸದಸ್ಯರು ಶುರು ಮಾಡಿದ್ದರು. ಬೆಲ್ ಮುಗಿಯುವ ಮುನ್ನವೇ ಉಪ ಸಭಾಪತಿ ಪೀಠದಲ್ಲಿ ಧರ್ಮೇಗೌಡ ಕುಳಿತಿದ್ದರು. ಉಪಸಭಾಪತಿಯವ್ರನ್ನು ಕೈ ಸದಸ್ಯರು ದರದರನೇ ಎಳೆದು ಹಾಕಲು ಮುಂದಾಗಿದ್ದರು. ಇದನ್ನು ತಡೆದು ಉಪ ಸಭಾಪತಿ ಅವರನ್ನು ಖುರ್ಚಿಯಲ್ಲೇ ಕೂತಿರುವಂತೆ ನೋಡಿಕೊಳ್ಳಲು ಬಿಜೆಪಿ-ಜೆಡಿಎಸ್ ಸದಸ್ಯರು ಕಸರತ್ತು ನಡೆಸಿದ್ದರು. ಈ ವೇಳೆ ಸದಸ್ಯರ ನಡುವೆ ಜಂಗಿ ಕುಸ್ತಿ ಪ್ರಾರಂಭವಾಗಿತ್ತು.

    ಆತ್ಮಹತ್ಯೆಯ ಸುತ್ತ ಅನುಮಾನ:
    ಕಳೆದ 25 ವರ್ಷದಿಂದ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿ ಹಿಡಿತ ಸಾಧಿಸಿದ್ದ ಧರ್ಮೇಗೌಡ, ಚಿಕ್ಕಮಗಳೂರು ಸಹಕಾರಿ ಧುರೀಣ ರಲ್ಲಿ ಪ್ರಮುಖರೆನ್ನಿಸಿಕೊಂಡಿದ್ದವರು ಇಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಭಾಪತಿ ಆತ್ಮಹತ್ಯೆ ಸುತ್ತ ಅನುಮಾನದ ಆವರಿಸಿದೆ. ರಾಜಕೀಯ ಕಾರಣನಾ? ವೈಯಕ್ತಿಕ ಕಾರಣವಾ? ಮೊನ್ನೆ ಪರಿಷತ್ ಗಲಾಟೆ ವೇಳೆಯೂ ಮಾನಸಿಕವಾಗಿ ಕುಸಿದಿದ್ದ ಧರ್ಮೇಗೌಡರು ಯಾರ ಮೇಲೂ ದೂರದೇ ಮೌನಕ್ಕೆ ಶರಣಾಗಿದ್ದರು. ಪರಿಷತ್ ಒಳಗೆ ಗಲಾಟೆ ಆದ ಬಳಿಕ ರಾಜಕೀಯ ಕಿತ್ತಾಟದ ಬಗ್ಗೆ ಅಸಮಾಧಾನಗೊಂಡಿದ್ದರು. ಧರ್ಮೇಗೌಡ ಅವರು 2004 ರಲ್ಲಿ ಬೀರೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ವಿಂಗಡನೆ ನಂತರ ನೀರೂರು ಕ್ಷೇತ್ರ ಇಲ್ಲವಾದ ನಂತರ ಚುನಾವಣಾ ರಾಜಕಾರಣದಿಂದ ದೂರವಾಗಿದ್ದರು. ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿಡಿತ ಕಳೆದುಕೊಂಡ ನಂತರ ಮಾನಸಿಕ ಖಿನ್ನತೆ ಗೆ ಒಳಗಾಗಿದ್ದರು. ಡಿಸಿಸಿ ಬ್ಯಾಂಕ್ ಚುನಾವಣೆ ಸೋಲಿನ ನಂತರ 1 ದಿನ ಒಬ್ಬರೇ ತೋಟದ ಮನೆಯಲ್ಲಿ ಕಳೆದಿದ್ದರು.

  • ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

    ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

    – ಆಸ್ತಿ ವಿಚಾರ, ಪರಿಷತ್‍ನಲ್ಲಿ ನಡೆದಿದ್ದ ಗಲಾಟೆಯಿಂದ ಬೇಸರ
    – ಡೆತ್‍ನೋಟ್ ನಲ್ಲಿ ಪತ್ನಿ, ಮಗ, ಮಗಳಲ್ಲಿ ಕ್ಷಮೆ

    ಚಿಕ್ಕಮಗಳೂರು: ರೈಲಿಗೆ ತಲೆಕೊಟ್ಟು ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರ ಹಾಗೂ ಇತ್ತೀಚೆಗೆ ಪರಿಷತ್ ನಲ್ಲಿ ನಡೆದಿದ್ದ ಗಲಾಟೆಯಿಂದ ಧರ್ಮೇಗೌಡ ನೊಂದಿದ್ದರು ಎಂದು ಹೇಳಳಾಗುತ್ತಿದೆ. ಈ ಎಲ್ಲಾ ವಿಚಾರಗಳನ್ನು ಅವರು ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

    ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಧರ್ಮೇಗೌಡ, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ.

    ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ, ಹಣಕಾಸು ವಿಚಾರ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದಾರೆ.

  • ರೈಲಿಗೆ ತಲೆಕೊಟ್ಟು ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆ

    ರೈಲಿಗೆ ತಲೆಕೊಟ್ಟು ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆ

    – ಇಡೀ ದೇಹ ಛಿದ್ರ ಛಿದ್ರ

    ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕಡೂರು ತಾಲೂಕಿನ ಕಂಸಾಗರ ಬಳಿಯ ಗುಣಸಾಗರದ ಗ್ರಾಮದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಣಸಾಗರ ಸಕ್ಕರಾಯಪಟ್ಟಣದ ಬಳಿಯ ರೈಲು ಹಳಿಯ ಮೇಲೆ ಧರ್ಮೇಗೌಡ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿ 1.30 ಅಥವಾ 2 ಗಂಟೆ ವೇಳೆಯಲ್ಲಿ ಆತ್ಮಹತ್ಯೆ ನಡೆದಿದೆ ಎನ್ನಲಾಗಿದೆ.

    ರೈಲಿಗೆ ತಲೆಕೊಟ್ಟ ಪರಿಣಾಮ ಇಡೀ ದೇಹ ಛಿದ್ರವಾಗಿದೆ. ತಲೆ ಕಟ್ ಆಗಿ ಸುಮಾರು 100 ಮೀಟರ್ ತನಕ ದೂರ ಹೋಗಿದ್ದು, ರುಂಡ ಮುಂಡ ಬೇರ್ಪಟ್ಟಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಂತರ 3-4 ರೈಲುಗಳು ಆ ಟ್ರ್ಯಾಕ್ ನಲ್ಲಿ ಪ್ರಯಾಣ ಮಾಡಿವೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಸಿ.ಟಿ.ರವಿ ಅವರು ಪೊಲೀಸ್ ವರಿಷ್ಠಾಧಿಕಾರಿಯವ್ರಿಗೆ ಸೂಚನೆ ನೀಡಿ ಆದಷ್ಟು ಶೀಘ್ರವಾಗಿ ಮೃತದೇಹ ತೆರವು ಮಾಡಿ ಆಸ್ಪತ್ರೆಗೆ ರವಾನಿಸುವಂತೆ ತಿಳಿಸಿದ್ದಾರೆ. ಜನರ ಸಂಚಾರ ಹಾಗೂ ಜನ ಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಭೋಜೇಗೌಡ, ದತ್ತಾ, ಶ್ರೀಕಂಠೇಗೌಡ, ಶಿವರಾಮೇಗೌಡ, ಬಸವರಾಜ್ ಹೊರಟ್ಟಿ ಸ್ಥಳದಲ್ಲಿದ್ದಾರೆ.

  • ಅಮಾನತು ಸಂಸದರ ಮನವೊಲಿಕೆ ವಿಫಲ – ಉಪವಾಸ ನಿರಶನಕ್ಕೆ ಕೂತ ಉಪಸಭಾಪತಿ

    ಅಮಾನತು ಸಂಸದರ ಮನವೊಲಿಕೆ ವಿಫಲ – ಉಪವಾಸ ನಿರಶನಕ್ಕೆ ಕೂತ ಉಪಸಭಾಪತಿ

    ನವದೆಹಲಿ: ಸೋಮವಾರ ಅಮಾನತುಗೊಂಡ ರಾಜ್ಯಸಭೆಯ ಎಂಟು ಮಂದಿ ಸಂಸದರ ಮನವೊಲಿಕೆ ವಿಫಲವಾದ ಬಳಿಕ ಉಪಸಭಾಪತಿ ಹರಿವಂಶ್ ಉಪವಾಸ ನಿರಶನಕ್ಕೆ ಕೂತಿದ್ದಾರೆ.

    ಉಪವಾಸ ನಿರಶನಕ್ಕೂ ಮುನ್ನ ಇಂದು ಬೆಳಗ್ಗೆ, ಸಂಸತ್ ನ ಗಾಂಧಿ ಪ್ರತಿಮೆ ಬಳಿ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಎಂಟು ಮಂದಿ ಸಂಸದರು ಭೇಟಿ ಮಾಡಿ ಚಹಾ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಸಂಸದರ ಆಕ್ರೋಶ ತಣಿಯದ ಹಿನ್ನಲೆ ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿದರು.

    ಇದಾದ ಬೆನ್ನಲ್ಲೇ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರಿಗೆ ಪತ್ರ ಬರೆದ ಹರಿವಂಶ್, ತಾವು ನಾಳೆ ಬೆಳಗ್ಗೆವರೆಗೂ ಇಡೀ ದಿನ ಉಪವಾಸ ಕೂರುವುದಾಗಿ ಘೋಷಿಸಿದರು. ಮೊನ್ನೆ ಸದನದಲ್ಲಿ ಆದ ಘಟನೆ ಬಗ್ಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿರುವ ಹರಿವಂಶ್, ವಿಪಕ್ಷಗಳ ಸದಸ್ಯರ ವರ್ತನೆಯಿಂದ ಬಹಳ ನೋವಾಗಿದ್ದು, ತನಗೆ ಇಡೀ ರಾತ್ರಿ ನಿದ್ರೆ ಬರಲಿಲ್ಲ. ನಾಳೆ ಬೆಳಗ್ಗೆಯವರೆಗೂ ಉಪವಾಸ ಕೂರುವುದಾಗಿ ಹೇಳಿದ್ದಾರೆ.

    ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಎರಡು ಕೃಷಿ ಮಸೂದೆಗಳನ್ನ ಭಾನುವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ಈ ಹಿನ್ನೆಲೆಯಲ್ಲಿ ನಿನ್ನೆ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಘಟನೆಯನ್ನು ಸದನದಲ್ಲಿ ಪ್ರಸ್ತಾಪಿಸಿ ಸದಸ್ಯರ ದುರ್ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನಾಸಿರ್ ಹುಸೇನ್ ಸೇರಿದಂತೆ ಎಂಟು ಸಂಸದರನ್ನು ಒಂದು ವಾರದ ಕಾಲ ಅಮಾನತು ಮಾಡಿರುವುದಾಗಿ ತಿಳಿಸಿದರು.

  • ಪರಿಷತ್‍ನಲ್ಲಿ ಮಹಾಭಾರತ ಪಾತ್ರಗಳ ಬಗ್ಗೆ ಚರ್ಚೆ

    ಪರಿಷತ್‍ನಲ್ಲಿ ಮಹಾಭಾರತ ಪಾತ್ರಗಳ ಬಗ್ಗೆ ಚರ್ಚೆ

    – ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ
    – ಹಳೆಯದನ್ನು ನೆನೆದು ಭಾವುಕರಾದ ಸಿಎಂ ಇಬ್ರಾಹಿಂ

    ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು, ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಧರ್ಮರಾಯರ ರೀತಿ ಕೆಲಸ ನಿರ್ವಹಣೆ ಮಾಡಬೇಕು. ಸಭಾಪತಿ, ಉಪಸಭಾಪತಿ, ಸ್ಪೀಕರ್ ಹುದ್ದೆಯನ್ನು ಧರ್ಮರಾಯನ ರೀತಿ ನಿರ್ವಹಿಸಿ ಧರ್ಮ ಪಾಲನೆ ಮಾಡುವ ಕೆಲಸವಾಗಬೇಕು. ಧರ್ಮರಾಯನ ಮಾತನ್ನು ಸಭೆಯ ಎಲ್ಲರೂ ಕೇಳಬೇಕು ಎಂದು ಹೇಳಿದರು.

    ಜಯಮಾಲಾ ಅವರು ಮಾತು ಮುಗಿಸುತ್ತಿದ್ದಂತೆ ಧ್ವನಿಗೂಡಿಸಿದ ಸದಸ್ಯ ಶರಣಪ್ಪ ಮಟ್ಟೂರು ಅವರು, ಪರಿಷತ್‍ನ ವಿಪಕ್ಷ ನಾಯಕ, ಸಭಾನಾಯಕಿ, ಉಪಸಭಾಪತಿ, ಸಭಾಪತಿ ಸ್ಥಾನ ಮಲೆನಾಡಿಗೆ ಹೋಗಿದೆ. ನಾವು ಈಗ ಏನೇ ಕೇಳಬೇಕಾದರೂ ಇವರನ್ನು ಕೇಳಬೇಕು ಎಂದು ನಗೆಬೀರಿದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ನಾನು ಹುಟ್ಟಿದ್ದು ಮಂಗಳೂರು, ಬೆಳೆದಿದ್ದು ಚಿಕ್ಕಮಗಳೂರು. ಕೆಲಸ ಮಾಡಿದ್ದು ಬೆಂಗಳೂರು. ನಾನು ಬಾಲ್ಯದ ದಿನಗಳನ್ನು ಕಳೆದಿದ್ದು ಚಿಕ್ಕಮಗಳೂರಿನಲ್ಲಿ. ನಾವು ಕಲಾವಿದರು. ಎಲ್ಲರೂ ನಮ್ಮವರು ಅಂತ ನೋಡುತ್ತೇವೆ. ಆದರೆ ಕರ್ನಾಟಕ ಒಂದೇ ಎಂಬ ಆಸೆ ನಮ್ಮದು ಎಂದು ಹೇಳಿದರು.

    ಈ ಚರ್ಚೆಯ ನಡುವೆ ಪ್ರವೇಶ ಮಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಭೋಜೇಗೌಡ ಇಲ್ಲೇ ಇದ್ದಾರೆ, ಅರ್ಜುನನ ರೀತಿ. ಅವರು ಧರ್ಮರಾಯನ ಮಾತು ಕೇಳೊಲ್ಲ. ಭೋಜೇಗೌಡ ಅವರನ್ನು ಕಟ್ಟಿ ಹಾಕಬೇಕು ಅಂತ ಹಾಸ್ಯ ಮಾಡಿದರು. ಇದಕ್ಕೆ ಮತ್ತಷ್ಟು ನಗೆ ಸೇರಿಸಿದ ಜಯಮಾಲ ಅವರು, ಮಹಾಭಾರತದಲ್ಲಿ ಅರ್ಜುನ ಧರ್ಮರಾಯನ ಮಾತು ಕೇಳುತ್ತಿರಲಿಲ್ಲ. ಆದರೆ ಇಲ್ಲಿ ಧರ್ಮರಾಯನ ಮಾತು ಕೇಳಬೇಕು ಅಂತ ಭೋಜೇಗೌಡರಿಗೆ ಹೇಳಿದರು.

    ಲೆಹರ್ ಸಿಂಗ್ ಮಾತನಾಡಿ, ಧರ್ಮರಾಯನ ಮಾತು ಎಲ್ಲರೂ ಕೇಳುತ್ತಾರೆ. ಆದರೆ ದುರ್ಯೋಧನ ಕೇಳುವುದಿಲ್ಲ. ಈ ಸದನದಲ್ಲಿ ದುರ್ಯೋಧನ ಯಾರು ಮೊದಲು ಹುಡುಕಿ ಅಂತ ಹಾಸ್ಯ ಮಾಡಿದರು. ತಕ್ಷಣವೇ ಭಾವನಾತ್ಮಕರಾದ ಸಿಎಂ ಇಬ್ರಾಹಿಂ, 22 ವರ್ಷದ ಬಳಿಕ ನನಗೆ ಸಮಾಧಾನ ಆಗಿದೆ. ನಾನು ಜನತಾದಳದಲ್ಲಿ ಇದ್ದಾಗ ಧರ್ಮೇಗೌಡ ಅವರ ತಂದೆಯನ್ನು ಮಂತ್ರಿ ಮಾಡಲು ನಾನು ತುಂಬ ಪ್ರಯತ್ನ ಪಟ್ಟಿದ್ದೆ. ಆದರೆ ಅದು ಆಗಿರಲಿಲ್ಲ. ಇಂದು ನೀವು ಉಪ ಸಭಾಪತಿ ಆಗಿರುವುದು ನನಗೆ ನೆಮ್ಮದಿ. ಈ ವಿಚಾರವಾಗಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರ ಪರವಾದ ಕೆಲಸ ಮಾಡಲಿ ಎಂದು ಹಳೇ ನೆನಪು ನೆನಪಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್‍ಡಿಎ ಅಭ್ಯರ್ಥಿಗೆ ಗೆಲುವು, ಬಿಕೆ ಹರಿಪ್ರಸಾದ್‍ಗೆ ಸೋಲು

    ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್‍ಡಿಎ ಅಭ್ಯರ್ಥಿಗೆ ಗೆಲುವು, ಬಿಕೆ ಹರಿಪ್ರಸಾದ್‍ಗೆ ಸೋಲು

    ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಜಯಗಳಿಸಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಕನ್ನಡಿಗ ಬಿ.ಕೆ ಹರಿಪ್ರಸಾದ್ ಸೋತಿದ್ದಾರೆ.

    ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ ಹರಿವಂಶ್ ನಾರಾಯಣ್ ಅವರಿಗೆ 125 ಮತಗಳು ಬಿದ್ದರೆ ಬಿ.ಕೆ ಹರಿಪ್ರಸಾದ್ 105 ಮತಗಳನ್ನು ಗಳಿಸಿದರು.

    ಲೋಕಸಭಾ ಚುನಾವಣೆಗೂ ಮೊದಲು ಪ್ರತಿಷ್ಠೆಯ ಕಣದಂತಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‍ಡಿಎ ಮೇಲುಗೈ ಸಾಧಿಸಿದೆ. ಕೇವಲ 20 ಮತಗಳ ಅಂತರದಿಂದ ಗೆದ್ದ ನೂತನ ಉಪಸಭಾಪತಿ ಹರಿವಂಶ್‍ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ರು. ಫಲಿತಾಂಶದಿಂದ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗಿದೆ.

    ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ಎನ್‍ಡಿಎಗೆ ಬಹುಮತವಿರಲಿಲ್ಲ. ಎನ್‍ಡಿಎಗೆ ಬಹುಮತ ಇಲ್ಲದ ಕಾರಣ ವಿರೋಧ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿ ಹರಿಪ್ರಸಾದ್ ಅವರನ್ನು ಬೆಂಬಲಿಸಿತ್ತು.

    ಶಿವಸೇನೆ, ಅಕಾಲಿ ದಳ, ಬಿಜೆಡಿ, ಎಐಎಡಿಎಂಕೆ, ಟಿಆರ್ ಎಸ್‍ ಎನ್‍ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಟಿಎಂಸಿ, ಡಿಎಂಕೆ, ಎಡ ಪಕ್ಷಗಳು, ಎಸ್‍ಪಿ, ಬಿಎಸ್‍ಪಿ, ಎನ್‍ಸಿಪಿ, ಟಿಡಿಪಿ ಬೆಂಬಲಿಸಿತ್ತು. ವೈಎಸ್‍ಆರ್ ಪಿ, ಪಿಡಿಪಿ ಮತ್ತು ಆಪ್ ಸದಸ್ಯರು ಚುನಾವಣೆಗೆ ಗೈರು ಹಾಜರಿ ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಹೊಸ ಸಂಸ್ಕೃತಿಗೆ ನಾಂದಿ ಹಾಡಿದ ಸಿಎಂ ಎಚ್‍ಡಿಕೆ

    ಹೊಸ ಸಂಸ್ಕೃತಿಗೆ ನಾಂದಿ ಹಾಡಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ಸರ್ಕಾರಿ ಕಾರು ಬಳಸದೆ ಸ್ವಂತ ವಾಹನದಲ್ಲಿ ಓಡಾಡುತ್ತಿರುವ ಸಿಎಂ ಕುಮಾರಸ್ವಾಮಿ, ಈಗ ಹೊಸ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ.

    ತನಗೆ ಮೀಸಲಾಗಿದ್ದ ಕಾರನ್ನು ಉಪಸಭಾಪತಿ ಕೃಷ್ಣಾರೆಡ್ಡಿ ಅವರಿಗೆ ಸಿಎಂ ನೀಡಿದ್ದಾರೆ. ವಿಧಾನಸಭಾ ಉಪಸಭಾಪತಿಯ ಆಪೇಕ್ಷೆಯಂತೆ ಎಚ್‍ಡಿಕೆ ತನ್ನ ಕಾರು ನೀಡಲು ಸೂಚನೆ ನೀಡಿ ಶಿಷ್ಟಾಚಾರವನ್ನ ಬದಿಗೊತ್ತಿದ್ದಾರೆ.

    ನನಗೆ ಕೊಟ್ಟಿರುವ ಕಾರು ಸುಸಜ್ಜಿತವಾಗಿಲ್ಲ. ಕ್ಷೇತ್ರ ಸಂಚಾರಕ್ಕೆ ಕೆಎ 05 ಜಿ.ಎ 6363 ನಂಬರಿನ ಟಯೋಟಾ ಫಾರ್ಚುನರ್ ಕಾರ್ ಸುಸಜ್ಜಿವಾಗಿದೆ. ಹೀಗಾಗಿ, ಇದೇ ಕಾರನ್ನು ಕೊಟ್ಟರೆ ಒಳ್ಳೆಯದು. ಸಂಬಂಧಪಟ್ಟವರಿಗೆ ಸೂಚನೆ ನೀಡಿ ಅಂತ ಸಿಎಂಗೇ ಪತ್ರ ಬರೆದು ಕೃಷ್ಣಾರೆಡ್ಡಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಪಸಭಾಪತಿಯವರ ಅಪೇಕ್ಷೆಯಂತೆ ಈಗ ಅದೇ ಕಾರನ್ನು ಅವರಿಗೆ ಸಿಎಂ ನೀಡಿದ್ದಾರೆ.