Tag: ಉಪವಾಸ ಸತ್ಯಾಗ್ರಹ

  • ಸರ್ಕಾರದ ವಿರುದ್ದ ಸಮರ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

    ಸರ್ಕಾರದ ವಿರುದ್ದ ಸಮರ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

    ಬೆಂಗಳೂರು: ವೇತನ ಹೆಚ್ಚಳ (Salary Hike) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು (Transport Staff) ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ (Hunger Strike) ನಡೆಸಲು ಮುಂದಾಗಿದ್ದಾರೆ.

    ಸರ್ಕಾರದ ವಿರುದ್ದ ಸಾರಿಗೆ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಬೆಳಗ್ಗೆ 10:30 ರಿಂದ 5 ಗಂಟೆಯವರೆಗೆ ನೌಕರರ ಉಪವಾಸ ಸತ್ಯಾಗ್ರಹ ನಡೆಯಲಿದೆ.

    ಸಾರಿಗೆ ನೌಕರರಿಗೆ ಜನವರಿ 1ರಿಂದ ಹೊಸ ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಆಗಬೇಕು. ಆದರೆ ಇಲ್ಲಿಯವರೆಗೆ ವೇತನ ಪರಿಷ್ಕರಣೆ ವಿಚಾರವನ್ನು ಸಾರಿಗೆ ನಿಗಮಗಳು ಪ್ರಸ್ತಾಪಿಸಿಲ್ಲ. ಹೀಗಾಗಿ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟು ನೌಕರರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.  ಇದನ್ನೂ ಓದಿ: ಲೋಕಸಭೆಗೆ ಮತ್ತೆ ಒಕ್ಕಲಿಗ ಕಾರ್ಡ್, ಎರಡೂವರೆ ವರ್ಷ ನಂತರ ಡಿಕೆ ಸಿಎಂ ಸಾಧ್ಯತೆ – ಒಕ್ಕಲಿಗ ನಾಯಕರ ಸಭೆಯ ಇನ್‌ಸೈಡ್‌ ಸುದ್ದಿ

    ಸಾರಿಗೆ ನೌಕರರ ಬೇಡಿಕೆಗಳು?
    – ಮೂಲ ವೇತನದ 25% ವೇತನ ಹೆಚ್ಚಿಸಬೇಕು.
    – ಎಲೆಕ್ಟ್ರಿಕ್ ಬಸ್‌ಗಳಲ್ಲಿ ಸಾರಿಗೆ ನಿಗಮದ ನೌಕರರನ್ನೇ  ಚಾಲಕರಾಗಿ ನೇಮಿಸಿಕೊಳ್ಳುವುದು.
    – ನಿವೃತ್ತಿ ನೌಕರರಿಗೆ ಅಂತಿಮವಾಗಿ ಬರಬೇಕಾದ ಹಣ ಕೊಡಬೇಕು ಮತ್ತು 38 ತಿಂಗಳ ವೇತನ ಹೆಚ್ಚಳದ ಬಾಕಿ ನೌಕರರಿಗೆ ನೀಡಬೇಕು.
    – ಎಲ್ಲಾ ನಿಗಮಗಳ ನೌಕರರ ಮುಂಬಡ್ತಿಗೆ ಕ್ರಮವಹಿಸುವುದು. ವಿವಿಧ ಭತ್ಯೆಗಳನ್ನ ಐದು ಪಟ್ಟು ಹೆಚ್ಚಿಸುವುದು.
    – ಉಚಿತ ಔಷಧಿ ಸೇರಿದಂತೆ ವೈದ್ಯಕೀಯ ಸೌಲಭ್ಯ ನೀಡಬೇಕು.

  • ರಾಮನಗರ ಜಿಲ್ಲೆ ಹೆಸರು ಬದಲಾದ್ರೆ ಅಮರಣಾಂತ ಉಪವಾಸ ಮಾಡ್ತೀನಿ: ಹೆಚ್‌ಡಿಕೆ ಪ್ರತಿಜ್ಞೆ

    ರಾಮನಗರ ಜಿಲ್ಲೆ ಹೆಸರು ಬದಲಾದ್ರೆ ಅಮರಣಾಂತ ಉಪವಾಸ ಮಾಡ್ತೀನಿ: ಹೆಚ್‌ಡಿಕೆ ಪ್ರತಿಜ್ಞೆ

    ಬೆಂಗಳೂರು: ರಾಮನಗರ (Ramanagara) ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ (Hunger Strike) ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರತಿಜ್ಞೆ ಮಾಡಿದ್ದಾರೆ.

    ರಾಮನಗರ ಜಿಲ್ಲೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಸವಾಲು ಸ್ವೀಕರಿಸುತ್ತೇನೆ. ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಡಿಕೆ ಶಿವಕುಮಾರ್ ಬೆಂಗಳೂರು ಮೂಲದವರಲ್ಲ. ಬೆಂಗಳೂರು ಇಡೀ ಕರ್ನಾಟಕ ರಾಜ್ಯದ ಭಾಗ. ಬೆಂಗಳೂರಿನ ಆರ್ಥಿಕ ಶಕ್ತಿ ಇಡೀ ಕರ್ನಾಟಕ ಅಭಿವೃದ್ಧಿಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.

    ಎಷ್ಟೆಲ್ಲಾ ಕೆರೆ-ಕಟ್ಟೆ ನುಂಗಿ ಹಾಕಿದ್ದೀರಾ? ಯಾವ್ ಯಾವ್ ಕೆರೆ ನುಂಗಿದ್ದೀರಾ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ? ಈ ಬಗ್ಗೆ ಚರ್ಚೆ ನಡೆಸಲು ಪಾಪ ಅವರು ಬ್ಯುಸಿ ಇದ್ದಾರೆ. ಅವರು ಯಾವಾಗ ಬೇಕಾದರೂ ಸಮಯ ಫಿಕ್ಸ್ ಮಾಡಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

    ನಾನು ಹುಟ್ಟಿದ್ದು ಹಾಸನ ಆದರೂ ನನ್ನ ಜೀವನ ಅಂತ್ಯ ಆಗೋದು ರಾಮನಗರದಲ್ಲೇ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳುತ್ತೇನೆ. ನಮ್ಮ ಸಮಾಜದವರು ಹೇಳಿದ್ರು ಅಂತ ಸುಮ್ಮನೆ ಇದ್ದೆ ಎನ್ನುವ ಡಿಕೆ ಹೇಳಿಕೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲವು ಜನರೇ ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು. ಇದನ್ನೂ ಓದಿ: ಚರ್ಚೆಗೆ ಡೇಟ್‌, ಟೈಮ್ ಫಿಕ್ಸ್ ಮಾಡಿ: ಡಿ.ಕೆ ಶಿವಕುಮಾರ್

    ಕನಕಪುರ ಸ್ಕೂಲ್‌ಗಳಲ್ಲಿ ಎಷ್ಟು ಟೀಚರ್ ಇಲ್ಲ ನೋಡಿ. ಭೂಮಿ ದಾನ ಕೊಟ್ಟಿದ್ದೇವೆ ಅಂತಾರೆ. ನಾನು ನೋಡಿದ್ದೇನೆ ಎಷ್ಟು ಕೊಟ್ಟಿದ್ದಾರೆ ಎನ್ನುವುದನ್ನು. ದಾಖಲಾತಿ ಹೇಗೆ ಮಾಡಿಕೊಂಡಿದ್ದೀರಾ ನಮಗೆ ಗೊತ್ತಿದೆ. ಕನಕಪುರದಲ್ಲಿ ಒಬ್ಬ ಟೀಚರ್ ಜಾಗದಲ್ಲಿ ಡಿಕೆ ಶಿವಕುಮಾರ್ ಪಟಾಲಂ ಇದ್ದ. 10 ವರ್ಷ ಆದರೂ ಬಿಡಿಸಲು ಆಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕನಕಪುರ ಡೈರಿಗೆ ಜಾಗ ಕೊಟ್ಟ ರೈತರಿಗೆ ಎಷ್ಟು ಕೊಟ್ರಿ, ನಿಮ್ಮ ಪಟಾಲಂಗೆ ಎಷ್ಟು ಕೊಟ್ರಿ – ಡಿಕೆಶಿಗೆ ಹೆಚ್‍ಡಿಕೆ ಪ್ರಶ್ನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೆಹ್ಲೋಟ್ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹ – ಕಾಂಗ್ರೆಸ್ ಖಂಡನೆ

    ಗೆಹ್ಲೋಟ್ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹ – ಕಾಂಗ್ರೆಸ್ ಖಂಡನೆ

    ಜೈಪುರ: ಕಾಂಗ್ರೆಸ್ (Congress) ನಾಯಕ ಸಚಿನ್ ಪೈಲಟ್ (Sachin Pilot) ಮಂಗಳವಾರ ಜೈಪುರದಲ್ಲಿ (Jaipur) ಗೆಹ್ಲೋಟ್ ಸರ್ಕಾರವನ್ನು ಗುರಿಯಾಗಿಸಿಟ್ಟುಕೊಂಡು ಉಪವಾಸ ಸತ್ಯಾಗ್ರವನ್ನು (Fasting) ಪ್ರಾರಂಭಿಸಿದ್ದಾರೆ.

    ಬಿಜೆಪಿ ನಾಯಕಿ ಹಾಗೂ ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಚಿನ್ ಪೈಲಟ್ ಭಾನುವಾರ ಏಪ್ರಿಲ್ 11 ರಂದು 1 ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ತಿಳಿಸಿದ್ದರು.

    ಸಚಿನ್ ಪೈಲಟ್ ಪಕ್ಷ ವಿರೋಧಿ ನಡೆಯನ್ನು ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದ್ದು, ಉಪವಾಸ ಸತ್ಯಾಗ್ರಹವನ್ನು ಮಾಡದಂತೆ ಸೋಮವಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಸಚಿನ್ ಪೈಲಟ್ ಜೈಪುರದ ಶಹೀದ್ ಸ್ಮಾರಕ ಸ್ಥಳದಲ್ಲಿ ಕುಳಿತುಕೊಂಡು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಅವರ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಮುಖ್ಯಮಂತ್ರಿ ಪದವಿಗೆ ಸಂಬಂಧಿಸಿದಂತೆ ಗೆಹ್ಲೋಟ್ ಹಾಗೂ ಪೈಲಟ್ ನಡುವೆ ಭಿನ್ನಾಭಿಪ್ರಾಯಗಳು ಎದ್ದಿವೆ. ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕು ಎಂದು 2022ರ ಜುಲೈನಲ್ಲಿ ಆಗ್ರಹಿಸಿ ಪೈಲಟ್ ಹಾಗೂ ಅವರ ಬೆಂಬಲಿಗ 18 ಶಾಸಕರು ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಇದು ರಾಜ್ಯದಲ್ಲಿ 1 ತಿಂಗಳ ಕಾಲ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು.

    ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದ ಗೆಹ್ಲೋಟ್, ನನ್ನ ಸರ್ಕಾರ ಉರುಳಿಸಲು ಪೈಲಟ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಕೆಲ ತಿಂಗಳುಗಳ ಹಿಂದೆಯೂ ಪೈಲಟ್ ನಂಬಿಕೆ ದ್ರೋಹಿ ಎಂದು ಗೆಹ್ಲೋಟ್ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ

  • ತಿಹಾರ್‌ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ – ಯಾಸಿನ್‌ ಮಲಿಕ್‌ ಆಸ್ಪತ್ರೆಗೆ ದಾಖಲು

    ತಿಹಾರ್‌ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ – ಯಾಸಿನ್‌ ಮಲಿಕ್‌ ಆಸ್ಪತ್ರೆಗೆ ದಾಖಲು

    ನವದೆಹಲಿ: ತಿಹಾರ್‌ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಯಾಸಿನ್‌ ಮಲಿಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ರಕ್ತದ ಒತ್ತಡದಲ್ಲಿ ಏರುಪೇರಾದ ಕಾರಣ ಯಾಸಿನ್‌ ಮಲಿಕ್‌ನನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತನಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ ಎಂದು ವೈದ್ಯರಿಗೆ ಯಾಸಿನ್‌ ಪತ್ರ ಬರೆದಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಸದನದಲ್ಲಿ ಕಾಗದ ಎಸೆದ ಆಪ್ ಸಂಸದ ಅಮಾನತು

    ತನ್ನ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಲಿಕ್ ಜುಲೈ 22 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

    ಮಲಿಕ್ ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಐವಿ ಮೂಲಕ ದ್ರವಾಹಾರವನ್ನು ನೀಡಲಾಗುತ್ತಿದೆ. ವೈದ್ಯರು ಮಲಿಕ್‌ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು: ಆಪ್ತೆ ಅರ್ಪಿತಾ

    ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದ ಆರೋಪದಡಿ ಮಲಿಕ್‌ ಜೈಲುಪಾಲಾಗಿದ್ದು, ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಕಾನೂನು ವಿದ್ಯಾರ್ಥಿಗಳಿಂದ ಪ್ರತಿಭಟನೆ- ಮೂವರು ಅಸ್ವಸ್ಥ

    ಕಾನೂನು ವಿದ್ಯಾರ್ಥಿಗಳಿಂದ ಪ್ರತಿಭಟನೆ- ಮೂವರು ಅಸ್ವಸ್ಥ

    ಹುಬ್ಬಳ್ಳಿ: ಕಳೆದ ಒಂದು ವಾರದಿಂದ ವಾಣಿಜ್ಯ ನಗರಿಯಲ್ಲಿ ಕಾನೂನು ವಿದ್ಯಾರ್ಥಿಗಳು ನಡೆಸುತ್ತಿದ್ದು, ಇಂದು ಉಪವಾಸ ನಿರತ ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

    ಹುಬ್ಬಳ್ಳಿಯ ನವನಗರದ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ನಡೆಸುತ್ತಿರುವ ಈ ಪ್ರತಿಭಟನೆಯು ದಿನೇ ದಿನೇ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

    ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೇಡಿಕೆ ಈಡೇರುವವರೆಗೂ ಯಾವುದೇ ರೀತಿ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಉಪವಾಸ ಧರಣಿ ಕುಳಿತ ವಿದ್ಯಾರ್ಥಿಗಳಲ್ಲಿ ಮೂವರು ಅಸ್ವಸ್ಥಗೊಂಡಿದ್ದಾರೆ. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

    ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಮೂರು ದಿನದಿಂದ ಉಪವಾಸ ಸತ್ಯಾಗ್ರಹ ಹೋರಾಟ ಮಾಡುತ್ತಿದ್ದಾರೆ. ಉಪವಾಸ ನಿರತ ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಮೂವರು ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ತವರು ಜಿಲ್ಲೆಯ ಅಧಿವೇಶನಕ್ಕೂ ಬರಲಿಲ್ಲ ರಮೇಶ್ ಜಾರಕಿಹೊಳಿ!

  • ಚೀನಾ: ಕೋವಿಡ್‌ ಬಗ್ಗೆ ವರದಿ ಮಾಡಿ ಅರೆಸ್ಟ್‌ ಆಗಿದ್ದ ಪತ್ರಕರ್ತೆ ಜೈಲಿನಲ್ಲಿ ಸಾವು-ಬದುಕಿನ ನಡುವೆ ಹೋರಾಟ!

    ಚೀನಾ: ಕೋವಿಡ್‌ ಬಗ್ಗೆ ವರದಿ ಮಾಡಿ ಅರೆಸ್ಟ್‌ ಆಗಿದ್ದ ಪತ್ರಕರ್ತೆ ಜೈಲಿನಲ್ಲಿ ಸಾವು-ಬದುಕಿನ ನಡುವೆ ಹೋರಾಟ!

    ಬೀಜಿಂಗ್: ಚೀನಾದ ವುಹಾನ್‌ನಲ್ಲಿ ಕೋವಿಡ್‌-19 ಕುರಿತು ವರದಿ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತೆ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆಂದು ಕುಟುಂಬದ ಮೂಲಗಳು ಹೇಳಿವೆ. ಆಕೆ ಬದುಕುಳಿಯುವ ಸ್ಥಿತಿಯಲ್ಲಿಲ್ಲ. ಕೂಡಲೇ ಬಿಡುಗಡೆ ಮಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

    JAIL

    ಝಾಂಗ್‌ ಜಾನ್‌ (38) ಅವರು ಫೆಬ್ರವರಿ 2020ರಲ್ಲಿ ವುಹಾನ್‌ಗೆ ಭೇಟಿ ನೀಡಿ ಕೋವಿಡ್‌ ಸಾಂಕ್ರಾಮಿಕ ಕುರಿತು ವರದಿ ಮಾಡಿದ್ದರು. ಈ ವೇಳೆ ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಕೇಳಿ ವಿಡಿಯೊ ಮಾಡಿಕೊಂಡಿದ್ದರು. ನಂತರ ಆಕೆಯನ್ನು ಮೇ 2020ರಲ್ಲಿ ಬಂಧಿಸಲಾಗಿತ್ತು. ಡಿಸೆಂಬರ್‌ನಲ್ಲಿ ಪತ್ರಕರ್ತೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಬಂಧನಕ್ಕೊಳಗಾಗಿರುವ ನನ್ನ ಸಹೋದರಿ ಹೆಚ್ಚು ದಿನ ಬದುಕುವಂತೆ ಕಾಣುತ್ತಿಲ್ಲ ಎಂದು ಪತ್ರಕರ್ತೆಯ ಸಹೋದರ ಝಾಂಗ್‌ ಜು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ

    ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಪತ್ರಕರ್ತೆ ಝಾಂಗ್‌ಗೆ ಬಲವಂತವಾಗಿ ಮೂಗಿನಲ್ಲಿ ಪೈಪ್‌ ಹಾಕಿ ದ್ರವರೂಪದ ಆಹಾರ ನೀಡಲಾಗುತ್ತಿದೆ. ಆಕೆಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕೆಯ ಆಪ್ತ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.

    COVID

    ನನ್ನ ಸಹೋದರಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಹಾಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಚೀನಾ ಸರ್ಕಾರ ಕೂಡಲೇ ಆಕೆಯನ್ನು ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಸಹೋದರ ಝಾಂಗ್‌ ಜು ಮನವಿ ಮಾಡಿದ್ದಾರೆ.

  • ಮೇಕೆದಾಟು ಯೋಜನೆಯ ತ್ವರಿತಗತಿಗೆ ಆಗ್ರಹಿಸಿ ಎಎಪಿಯಿಂದ ಉಪವಾಸ ಸತ್ಯಾಗ್ರಹ

    ಮೇಕೆದಾಟು ಯೋಜನೆಯ ತ್ವರಿತಗತಿಗೆ ಆಗ್ರಹಿಸಿ ಎಎಪಿಯಿಂದ ಉಪವಾಸ ಸತ್ಯಾಗ್ರಹ

    ಬೆಂಗಳೂರು: ಮೇಕೆದಾಟು ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಎಎಪಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಪಿಯ ರಾಜಕೀಯ ಚಟುವಟಿಕೆ ವಿಭಾಗದ ಮುಖ್ಯಸ್ಥರಾದ ಫಣಿರಾಜ್ ಎಸ್.ವಿ ಅವರು, ಬೆಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಭವಿಷ್ಯದಲ್ಲಿ ಭಾರೀ ತೊಂದರೆ ಎದುರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಮೇಕೆದಾಟು ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯವನ್ನಾಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಕುಂಟುನೆಪ ಹೇಳಿ ಯೋಜನೆಯನ್ನು ಮುಂದೂಡುವ ಮೂಲಕ ಜನರನ್ನು ವಂಚಿಸಿದವು. ಈಗ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಸಿಕ್ಕಿದ್ದರೂ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಕ್ಷುಲ್ಲಕ ರಾಜಕೀಯ ಹಾಗೂ ಆಡಳಿತ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೇಕೆದಾಟು ಎಂಬ ಅತ್ಯುತ್ತಮ ಯೋಜನೆ ನೆನೆಗುದಿಗೆ ಬಿದ್ದಿರುವುದು ವಿಪರ್ಯಾಸ ಎಂದು ಫಣಿರಾಜ್ ಎಸ್ ವಿ ರವರು ಆಕ್ರೋಶ ವ್ಯಕ್ತಪಡಿಸಿದರು.

    2021ರ ಆಗಸ್ಟ್ 5, ಗುರುವಾರದಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಸಮೀಪದ ಮೌರ್ಯ ಹೋಟೆಲ್ ಹತ್ತಿರವಿರುವ ಗಾಂಧಿ ಪ್ರತಿಮೆ ಎದುರು ನಮ್ಮ ಹೋರಾಟ ನಡೆಯಲಿದೆ. ಪಕ್ಷದ ಸಂಚಾಲಕರಾದ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ಎಎಪಿಯ ನೂರಾರು ಕಾರ್ಯಕರ್ತರು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. 12 ತಿಂಗಳ ಡೆಡ್‍ಲೈನ್ ಇಟ್ಟುಕೊಂಡು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ನಮ್ಮ ಆಗ್ರಹ. ನಾಡಿನ ಒಳಿತಿಗಾಗಿ ನಡೆಯುತ್ತಿರುವ ಹೋರಾಟವನ್ನು ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು. ಇದನ್ನೂ ಓದಿ: ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ

    ಮೇಕೆದಾಟುಗೆ ಅವಕಾಶ ನೀಡುವುದೇ ಇಲ್ಲವೆಂದು ತಮಿಳುನಾಡಿನ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಮೇಕೆದಾಟು ಯೋಜನೆಯ ಅಗತ್ಯವಿಲ್ಲವೆಂದು ಇದರಿಂದಲೇ ತಿಳಿಯುತ್ತದೆ. ದ್ವಂದ್ವನೀತಿಯನ್ನು ಬಿಟ್ಟು, ಮೇಕೆದಾಟು ವಿಷಯದಲ್ಲಿ ತಮ್ಮ ನಿಲುವು ಏನೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ಪಷ್ಟಪಡಿಸಬೇಕು. ಇದೊಂದು ಕೇವಲ ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ. ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಮಿಳುನಾಡಿನ ತಮ್ಮ ಪಕ್ಷದ ಮುಖಂಡರಿಗೆ ಇದನ್ನು ಮನವರಿಕೆ ಮಾಡಿಕೊಡಲಿ ಎಂದು ಪಕ್ಷದ ಮಹಿಳಾ ಘಟಕದ ನಾಯಕಿ ಉಷಾ ಮೋಹನ್ ಹೇಳಿದರು.

  • ಪ್ರಯಾಣಿಕರಿಗೆ ಗುಡ್‍ನ್ಯೂಸ್- ಬಿಎಂಟಿಸಿ ಸಂಚಾರದಲ್ಲಿಲ್ಲ ವ್ಯತ್ಯಯ

    ಪ್ರಯಾಣಿಕರಿಗೆ ಗುಡ್‍ನ್ಯೂಸ್- ಬಿಎಂಟಿಸಿ ಸಂಚಾರದಲ್ಲಿಲ್ಲ ವ್ಯತ್ಯಯ

    ಬೆಂಗಳೂರು: ಬಿಎಂಟಿಸಿ ಸಂಚಾರದಲ್ಲಿ ಇಂದು ಯಾವುದೇ ರೀತಿಯ ವ್ಯತ್ಯಯ ಇಲ್ಲ. ಎಂದಿನಂತೆ ಬಿಎಂಟಿಸಿ ಬಸ್‍ಗಳು ಬೆಳಗ್ಗೆಯಿಂದಲೇ ರಸ್ತೆಗಿಳಿದಿವೆ.

    ಬಿಎಂಟಿಸಿ ನೌಕರರು ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಸರ್ಕಾರ ಪರಿಗಣಿಸಿಬೇಕೆಂದು ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಬಿಎಂಟಿಸಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಆತಂಕದಲ್ಲಿ ಸಾರ್ವಜನಿಕರಿದ್ದರು. ಬಿಎಂಟಿಸಿ ಸಿಬ್ಬಂದಿ ಉಪವಾಸ ಸತ್ಯಾಗ್ರಹದಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರಿಗೆ ತೊಂದರೆ ಆಗದೇ ರೀತಿಯಲ್ಲಿ ಪ್ರತಿಭಟನೆ ಮಾಡಲು ಬಿಎಂಟಿಸಿ ಸಿಬ್ಬಂದಿ ಪ್ಲಾನ್ ಮಾಡಿಕೊಂಡಿದ್ದಾರೆ.

    ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. ಉಪವಾಸ ಸತ್ಯಾಗ್ರಹದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಸೆಕೆಂಡ್ ಶಿಫ್ಟ್ ನಲ್ಲಿರುವವರು ಭಾಗವಹಿಸುತ್ತಾರೆ. ಮಾರ್ನಿಂಗ್ ಶಿಫ್ಟ್ ನಲ್ಲಿ ಕೆಲಸ ಮಾಡಿರುವವರು ಮಧ್ಯಾಹ್ನದ ನಂತರ ಹೋಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆಂದು ಬಿಎಂಟಿಸಿ ಮೂಲಗಳಿಂದ ತಿಳಿದು ಬಂದಿದೆ.

    ಬಿಎಂಟಿಸಿ ನೌಕರರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನ ನೀಡಲಿದ್ದಾರೆ. ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಪತ್ರ ಚಳುವಳಿ ಮಾಡಿ ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದದರು. ಕಳೆದ ಸಮ್ಮಿಶ್ರ ಸರ್ಕಾರ ಬಿಎಂಟಿಸಿ ನೌಕಕರರ ಒತ್ತಾಯಕ್ಕೆ ಮಣಿಯದೇ ಇದ್ದ ಕಾರಣ ಮತ್ತೆ ಬಿಎಂಟಿಸಿ ನೌಕರರು ಉಪವಾಸ ಸತ್ಯಾಗ್ರಹ ಮಾಡುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ಏರಲು ತೀರ್ಮಾನಿಸಿದ್ದಾರೆ.

  • ಶಾಲೆ ಉಳಿಸಲು ವಿದ್ಯಾರ್ಥಿ, ಪೋಷಕರಿಂದ ಉಪವಾಸ ಸತ್ಯಾಗ್ರಹ

    ಶಾಲೆ ಉಳಿಸಲು ವಿದ್ಯಾರ್ಥಿ, ಪೋಷಕರಿಂದ ಉಪವಾಸ ಸತ್ಯಾಗ್ರಹ

    -ಚಳಿಯನ್ನೂ ಲೆಕ್ಕಿಸದೆ ಆಹೋರಾತ್ರಿ ಧರಣಿ

    ತುಮಕೂರು: ಸರ್ಕಾರಿ ಶಾಲೆಯನ್ನು ಉಳಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರು ತುಮಕೂರಿನ ಬಡ್ಡಿಹಳ್ಳಿ ಶಾಲೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹದ ಜೊತೆಗೆ ಆಹೋರಾತ್ರಿ ಧರಣಿ ಮಾಡಿದ್ದಾರೆ.

    ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಸಮಸ್ಯೆ ಒಂದೆರೆಡಲ್ಲ. ಈ ಶಾಲೆ ಸುಮಾರು 50 ವರ್ಷಗಳ ಹಳೆಯದಾಗಿದ್ದು, ಸದ್ಯ ಇಲ್ಲಿ 150ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಮಳೆಗಾಲ ಬಂತೆಂದರೆ ಈ ಶಾಲೆಗೆ ನೀರು ನುಗ್ಗುತ್ತದೆ. ನೀರಿನಿಂದ ಏನಾದರೂ ಕಟ್ಟಡ ಕುಸಿದರೆ ಏನು ಗತಿಯೆಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಶಿಕ್ಷಕರು ವಿಧಿಯಿಲ್ಲದೆ ಇಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಅದೇ ಕಟ್ಟಡದಲ್ಲೇ ಭಯದಿಂದ ಮಕ್ಕಳು ಪಾಠ ಕಲಿಯಬೇಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ಹೀಗಾಗಿ ಶಾಲೆಯ ದುಸ್ಥಿತಿ ನೋಡಿ ಬೇಸತ್ತಿರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಶಾಲೆ ರಿಪೇರಿ ಮಾಡುವವರೆಗೂ ಹೋರಾಟ ಮುಂದುವರೆಸೋದಾಗಿ ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ. ಇಡೀ ರಾತ್ರಿ ಚಳಿಯನ್ನೂ ಲೆಕ್ಕಿಸದೇ ಧರಣಿ ನಡೆಸಿದ್ದಾರೆ. ಪೋಷಕರ ಹೋರಾಟಕ್ಕೆ ವಿವಿಧ ಸಂಘಟನೆಗಳು ಕೂಡ ಸಾಥ್ ಕೊಟ್ಟಿವೆ.

    ಮಕ್ಕಳು ಇಲ್ಲ ಎಂದು ಹಲವು ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಆದರೆ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಶಾಲೆಗಳ ಅಭಿವೃದ್ಧಿ ಮಾಡದೆ, ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ. ಹೀಗಾದರೆ ಪೋಷಕರು ಹೇಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ? ತಮ್ಮ ಮಕ್ಕಳು ಸುರಕ್ಷಿತವಾಗಿ ವಾಪಸ್ಸು ಬರುತ್ತಾರೆ ಎಂದು ಹೇಗೆ ನಂಬಿ ಮಕ್ಕಳನ್ನು ಶಾಲೆಗೆ ಕಳಿಸೋದು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

  • ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

    ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

    ಶಿವಮೊಗ್ಗ: ಪತಿ ತಲಾಕ್ ನೀಡಿರುವುದನ್ನು ವಿರೋಧಿಸಿ ಇದೀಗ ಆತನ ಪತ್ನಿ ಹಾಗು ಮಗಳು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ರದ್ದುಗೊಳಿಸಿ ನೂತನ ಕಾಯ್ದೆ ಜಾರಿಗೆ ತಂದಿದ್ದರೂ ಶಿವಮೊಗ್ಗದಲ್ಲಿ ವಾಟ್ಸಾಪ್ ಮೂಲಕ ಪತಿ ಮಹಾಶಯನೋರ್ವ ಪತ್ನಿಗೆ ಮೂರು ಬಾರಿ ತಲಾಕ್ ಎಂದು ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ.

    ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಹಾಗು ಆಯಿಷಾ ಕಳೆದ 21 ವರ್ಷಗಳ ಹಿಂದೆ ಪರಸ್ವರ ಪ್ರೀತಿಸಿ ವಿವಾಹವಾಗಿದ್ದರು. ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮುಸ್ತಫಾ ಬೇಗ್ ತನ್ನ ಪತ್ನಿಯನ್ನು ಶಿವಮೊಗ್ಗದಲ್ಲಿಯೇ ಉಳಿಸಿದ್ದ. ಆದರೆ ಒಂದು ತಿಂಗಳ ಹಿಂದೆ ಇದ್ದಕಿದ್ದಂತೆ ದುಬೈನಲ್ಲಿಯೇ ಕುಳಿತು ಪತ್ನಿ ಆಯಿಷಾಗೆ ವಾಟ್ಸಾಪ್ ನಲ್ಲಿಯೇ ತಲಾಕ್ ನೀಡಿ ಕೈ ತೊಳೆದುಕೊಂಡಿದ್ದಾನೆ.

    ಪತ್ನಿ ಆಯಿಷಾ ಮಾತ್ರ ನನಗೆ ತಲಾಕ್ ಬೇಡ ಪತಿಯೇ ಬೇಕು ನಾನು ಆತನ ಜೊತೆಯೇ ಸಂಸಾರ ನಡೆಸಬೇಕು. ನನಗೆ ಜೀವನ ಸಾಗಿಸುವುದೇ ಕಷ್ಟಕರವಾಗಿದೆ ನನಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ತಾಯಿ ಮಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ಧರಣಿ ಸ್ಥಳಕ್ಕೆ ಆಗಮಿಸಿ ನೊಂದ ಮಹಿಳೆಯ ಮನವಿ ಆಲಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ನಿಮಗೆ ಕಾನೂನಿನಡಿಯಲ್ಲಿ ನ್ಯಾಯ ಕೊಡಿಸುತ್ತೇನೆ. ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ತಿಳಿಸಿದರೂ ನನಗೆ ನ್ಯಾಯ ಸಿಗುವವರೆಗು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದಾರೆ.