Tag: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

  • ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ

    ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ

    ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಇಂದು ಸಂಜೆ ಬೆಂಗಳೂರಿನ ಎಚ್‍ಎಎಲ್ ಏರ್‍ಪೋರ್ಟ್‍ಗೆ ಆಗಮಿಸಲಿರುವ ವೆಂಕಯ್ಯ ನಾಯ್ಡು ಅವರು, 4 ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಸೋಮವಾರ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಬುಧವಾರ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಬುಧವಾರ ಸಂಜೆಯೇ ಹೈದರಾಬಾದ್‍ಗೆ ತೆರಳಲಿದ್ದಾರೆ. ಇದನ್ನೂ ಓದಿ: ದತ್ತಪೀಠಕ್ಕೆ ತೆರಳ್ತಿದ್ದ ಬಸ್ ಮೇಲೆ ಅನ್ಯ ಕೋಮಿನ ಗುಂಪಿನಿಂದ ಕಲ್ಲುತೂರಾಟ

    ‘ಬೆಂಗಳೂರು ಟೆಕ್ ಸಮ್ಮಿಟ್ 2021’ ಕಾರ್ಯಕ್ರಮದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಸಮ್ಮಿಟ್ ನಿಂದಾಗಿ ತಂತ್ರಜ್ಞಾನ ಕ್ಷೇತ್ರ ಇನ್ನಷ್ಟು ವಿಸ್ತರಣೆ ಆಗಲಿದೆ ಮತ್ತು ಉದ್ಯೋಗವಕಾಶಗಳೂ ಕೂಡ ಹೆಚ್ಚಲಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಮೊಬೈಲ್ ಜಪ್ತಿ – ಫೋನ್ ನೋಡಿ ಪೋಷಕರು ಶಾಕ್

  • ಕನ್ನಡಿಗರು ನನ್ನ ಹೃದಯದಲ್ಲಿದ್ದಾರೆ, ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನ ಮರೆಯಬೇಡಿ: ವೆಂಕಯ್ಯ ನಾಯ್ಡು

    ಕನ್ನಡಿಗರು ನನ್ನ ಹೃದಯದಲ್ಲಿದ್ದಾರೆ, ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನ ಮರೆಯಬೇಡಿ: ವೆಂಕಯ್ಯ ನಾಯ್ಡು

    ಚಿಕ್ಕಬಳ್ಳಾಪುರ: ಕನ್ನಡಿಗರನ್ನು ನನ್ನ ಹೃದಯದಲ್ಲಿ ಇರಿಸಿಕೊಂಡಿದ್ದೇನೆ. ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನ ಮರೆಯಬೇಡಿ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮದ ಶ್ರೀ ಸತ್ಯಾ ಸಾಯಿ ವಿದ್ಯಾಸಂಸ್ಥೆಗಳ ಆವರಣದ ಪ್ರೇಮಾಮೃತಂ ಮಹಲ್ ನಲ್ಲಿ ನಡೆದ ಶ್ರೀ ಸತ್ಯಸಾಯಿಬಾಬಾರ 93 ನೇ ಜನ್ಮದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಭಾಗವಹಿಸಿದ್ದರು. ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕಳೆದ 4 ದಶಕಗಳಿಂದ ನನಗೆ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಕನ್ನಡಿಗರನ್ನು ಯಾವಾಗಲೂ ನನ್ನ ಹೃದಯದಲ್ಲಿ ಇರಿಸಿಕೊಂಡಿದ್ದೇನೆ ಎಂದರು.

    ಸತ್ಯ ಸಾಯಿಬಾಬಾರ ಜೀವನ, ಸೇವಾ ಮನೋಭಾವ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇಂದಿನ ಯುವಕರು ತಮ್ಮ ಜೀವನದಲ್ಲಿ ಎಂದಿಗೂ 5 ವಿಷಯಗಳನ್ನ ಮರೆಯಬಾರದು. ಹೆತ್ತ ತಂದೆ-ತಾಯಿ, ತಾವು ಹುಟ್ಟಿದ ಊರು, ತಮ್ಮ ದೇಶ ಹಾಗೂ ವಿದ್ಯೆ ಕಲಿಸುವ ಗುರುಗಳನ್ನ ಎಂದಿಗೂ ಮರೆಯಬಾರದು. ಇದರ ಜೊತೆ ಎಷ್ಟೇ ಭಾಷೆ ಕಲಿತರೂ ಮಾತೃ ಭಾಷೆಯನ್ನು ಮಾತ್ರ ಮರೆಯಬಾರದು ಎಂದು ಹೇಳಿದರು. ಸರ್ವೆಜನ ಸುಖಿನೋಭವಂತು

    ಭಾರತ ದೇಶ ಮಾನವೀಯತೆ, ವಸು ದೈವ ಕುಟುಂಬ, ಸರ್ವೆಜನ ಸುಖಿನೋಭವಂತು ಎಂಬ ತತ್ವಗಳನ್ನು ಅಳವಡಿಸಿಕೊಂಡಿದೆ. ಇಂದು ವಿಶ್ವವಿಡೀ ಭಾರತದತ್ತ ನೋಡುತ್ತಿದೆ. ಅಲ್ಲದೇ ಇಡೀ ವಿಶ್ವಕ್ಕೆ ಭಾರತ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಯೋಗ ಹಾಗೂ ಆಧ್ಯಾತ್ಮದ ಮೂಲಕ ವಿಶ್ವದೆಲ್ಲೆಡೆ ಮಾನವೀಯತೆ ಭೋದನೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯಿರುವ ದೇಶದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು. ನಮ್ಮ ಜೀವಿತಾವಧಿಯಲ್ಲಿ ಮನುಷ್ಯ ಜನಸೇವೆ ಮಾಡಬೇಕು. ಏನಾದರೂ ವಿಶೇಷ ಸಾಧನೆ, ಸೇವೆ ಮಾಡಿದರೆ ಮಾತ್ರ ಸಮಾಜ ನಮ್ಮನ್ನು ನೆನಪಿಸುತ್ತದೆ. ಅದ್ದರಿಂದ ನಮ್ಮ ಸಾಧನೆಗೆ ಕಾರಣವಾಗುವ ಗುರುಗಳನ್ನು ಮರೆಯಬೇಡಿ. ಈಗನ ಗೂಗಲ್ ನಿಂದಲೂ ಗುರುವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹಾಗೂ ಕೃಷಿ ಸಚಿವ ಶಿವಶಂಕರರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸನ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅಶ್ವಿನಿಗೆ 11 ಚಿನ್ನದ ಪದಕ!

    ಹಾಸನ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅಶ್ವಿನಿಗೆ 11 ಚಿನ್ನದ ಪದಕ!

    ಬೀದರ್: ಇಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಯಲದ ಹತ್ತನೇ ಘಟಿಕೋತ್ಸವ ನಡೆಯಿತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ 34 ವಿದ್ಯಾರ್ಥಿಗಳಿಗೆ ಒಟ್ಟು 66 ಚಿನ್ನದ ಪದಕ ಪ್ರದಾನ ಮಾಡಿದರು.

    ಹಾಸನದ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ 11 ಚಿನ್ನದ ಪದಕ ಪಡೆದಿದ್ದಾರೆ. ರೈತನ ಮಗಳಾಗಿರುವ ಅಶ್ವಿನಿ ಸಂತಸ ವ್ಯಕ್ತಪಡಿಸಿದ್ದು, ಪೋಷಕರು, ಸ್ನೇಹಿತರು ಹಾಗೂ ಶಿಕ್ಷಕರ ಮಾರ್ಗದರ್ಶದಿಂದ ನಾನು 11 ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.

    ಘಟಿಕೋತ್ಸವದಲ್ಲಿ 447 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಹಾಗೂ 29 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಬಂಡೆಪ್ಪ ಖಾಶಂಪುರ, ಸಂಸದ ಭಗವಂತ್ ಖೂಬಾ ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv