Tag: ಉಪನ್ಯಾಸಕಿ

  • ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಂಶುಪಾಲ ಶರಣಪ್ಪ ಅಮಾನತು

    ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಂಶುಪಾಲ ಶರಣಪ್ಪ ಅಮಾನತು

    ಬಳ್ಳಾರಿ: ಜಿಲ್ಲೆಯ ಪ್ರತಿಷ್ಠಿತ ಎಎಸ್‌ಎಂ ಮಹಿಳಾ ವಿದ್ಯಾಲಯದ (ASM Womens College) ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲ (College Principal) ಶರಪ್ಪನನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ಮಹಿಳಾ ವಿದ್ಯಾಲಯದ ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಮಾತ್ರವಲ್ಲದೇ, ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದ. ಇದರಿಂದ ನೊಂದ ಉಪನ್ಯಾಸಕಿ ನಗರದ ಮಹಿಳಾ ಪೊಲೀಸ್ ಠಾಣೆಗೆ (Women’s Police Station) ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದ್ದರು. ಇದನ್ನೂ ಓದಿ: ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    ಈ ಬೆನ್ನಲ್ಲೇ ಘಟನೆ ಕುರಿತು ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಆರ್. ರಾಮನಗೌಡ ಅವರ ಅಧ್ಯಕ್ಷತೆಯಲ್ಲಿ ತುರ್ತು ಕಾರ್ಯಕಾರಿ ಸಭೆ ನಡೆಸಿ ಶರಣಪ್ಪ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಕಾಲೇಜು ಉಪನ್ಯಾಸಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ವಿಚಾರಣೆ ಪೂರ್ತಿ ಆಗುವವರೆಗೂ ಶರಣಪ್ಪನನ್ನ ಅಮಾನತಿನಲ್ಲಿಡಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಹಾಗಾಗಿ ಶುಕ್ರವಾರದಿಂದಲೇ (ಜೂನ್‌ 9) ಶರಣಪ್ಪನನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

  • ಯಾರೂ ಯಾಕೆ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ- ನೋವನ್ನು ಅಕ್ಷರ ರೂಪಕ್ಕಿಳಿಸಿದ ಚಂದನಾ ಹೇಳಿದ್ದೇನು..?

    ಯಾರೂ ಯಾಕೆ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ- ನೋವನ್ನು ಅಕ್ಷರ ರೂಪಕ್ಕಿಳಿಸಿದ ಚಂದನಾ ಹೇಳಿದ್ದೇನು..?

    ಚಾಮರಾಜನಗರ: ಖಾಸಗಿ ಕಾಲೇಜಿನ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಚಂದುಳ್ಳಿ ಚೆಲುವೆಯ ಸಾವು ಎಲ್ಲರಿಗೂ ಶಾಕ್ ತಂದುಕೊಟ್ಟಿದೆ. ಈಕೆಯ ಸಾವಿನ ಸುದ್ದಿ ತಿಳಿದು ನೂರಾರು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಎಲ್ಲದಕ್ಕಿಂತ ಹೆಚ್ಚಾಗಿ ಪಾಲಕರು ಮರುಗಿದ್ದಾರೆ.

    ಆಕೆ ಬಾಳಿ ಬದುಕಬೇಕಿದ್ದ ಯುವತಿ. ಆದ್ರೆ ಆಕೆಗೆ ಏನಾಯ್ತೋ ಏನೋ ತನ್ನ ಹುಟ್ಟುಹಬ್ಬದ ದಿನವೇ ತನ್ನ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾಳೆ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಉಪನ್ಯಾಸಕಿ ಚಂದನಾ(26) ಆತ್ಮಹತ್ಯೆ ಮಾಡಿಕೊಂಡ ಚೆಲುವೆ. ಚಂದನಾ ಚಾಮರಾಜನಗರದ ಜೆಎಸ್‍ಎಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೆಎಸ್‍ಎಸ್ ಕಾಲೇಜಿನ ಹಾಸ್ಟೆಲ್‍ನಲ್ಲೇ ವಾಸ್ತವ್ಯ ಹೂಡಿದ್ದಳು. ಇದನ್ನೂ ಓದಿ: ಪಾಕ್ ರಾಜಕಾರಣಿ ಸಂಬಂಧಿ ಕಾರ್ ಓವರ್‌ಟೇಕ್ – ಹಿಂದೂ ಕುಟುಂಬದ ಮೇಲೆ ದಾಳಿ

    ಈಕೆ ಎಲ್ಲರ ಜೊತೆಯಲ್ಲೂ ಉತ್ತಮ ಬಾಂದವ್ಯ ಹೊಂದಿದ್ರು. ಇವತ್ತು ಆಕೆಯ ಹುಟ್ಟುಹಬ್ಬ ಇತ್ತು. ಹೀಗಾಗಿ ಆಕೆಯ ಸ್ನೇಹಿತರು, ವಿದ್ಯಾರ್ಥಿಗಳು ಶುಭಾಶಯ ಕೋರಿದ್ರು. ಆದ್ರೆ ಇದಾದ ನಂತರ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಜೊತೆ ಕೊಠಡಿಯಲ್ಲಿದ್ದ ಸ್ನೇಹಿತರು ಹೊರಹೋದ ನಂತರ ತನ್ನ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಡೆತ್ ನೋಟ್‍ನಲ್ಲಿ ಬಯಲಾದ ಸತ್ಯ
    ಆತ್ಮಹತ್ಯೆಗೂ ಮುನ್ನ ಚಂದನಾ ಡೆತ್‍ನೋಟ್ ಬರೆದಿಟ್ಟಿದ್ದು, ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಾರಂಭಿಸಿದ್ದು, ತನ್ನ ಮನದಾಳದ ನೋವನ್ನು ಅಕ್ಷರ ರೂಪ ನೀಡಿ ಕೊನೆಗೆ ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತನ್ನ ಇಬ್ಬರು ಅಕ್ಕಂದಿರಿಗೆ ಸಾರಿ ಕೇಳಿರುವ ಚಂದನಾ, ತಂಗಿಯನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ಉಪನ್ಯಾಸಕಿ ಹುದ್ದೆಗೆ ಬರಬೇಡ ಎಂದು ತನ್ನ ಕೊನೆಯ ಸಲಹೆಯನ್ನು ಕೊಟ್ಟಿದ್ದಾರೆ.

    ತಂದೆ ಜೊತೆ ಕೊನೆಯ ಬಾರಿ ಪಾನಿಪೂರಿ
    ಇಂದು ಚಂದನಾಳ ಹುಟ್ಟುಹಬ್ಬವಾಗಿದ್ದು, ಆಕೆಯ ತಂದೆ ಕೇಕ್ ಕಟ್ ಮಾಡಿಸಲು ಸಕಲ ಸಿದ್ಧತೆಯನ್ನು ನಡೆಸಿದ್ದರು. ಸೋಮವಾರ ಸಂಜೆ ಅಷ್ಟೇ ಮಗಳೊಟ್ಟಿಗೆ ಪಾನಿಪೂರಿ ಸೇವಿಸಿ ಊರಿಗೆ ಬರುವಂತೆ ಹೇಳಿದ್ದರಂತೆ, ಬೆಳಗ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅವರ ತಂದೆ ಹಾಸ್ಟೆಲ್‍ನ ಸೆಕ್ಯೂರಿಟಿಗೆ ಕರೆ ಮಾಡಿ ಚಂದನಾ ಫೋನ್ ತೆಗೆಯುತ್ತಿಲ್ಲವೆಂದು ತಿಳಿಸಿದ್ದಾರೆ. ಈ ವೇಳೆ ಚಂದನಾ ಕೊಠಡಿ ಬಳಿ ಹೋದ ವಾರ್ಡನ್ ಚಂದನಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇದನ್ನೂ ಓದಿ:  ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ 

    ಕೂಡಲೇ ಆತ ಹಾಸ್ಟೆಲ್‍ನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬದಂದೇ ಡೆತ್‍ನೋಟ್ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ

    ಹುಟ್ಟುಹಬ್ಬದಂದೇ ಡೆತ್‍ನೋಟ್ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ

    ಚಾಮರಾಜನಗರ: ತಮ್ಮ ಹುಟ್ಟುಹಬ್ಬದ ದಿನವೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

    ಚಂದನಾ(26) ಆತ್ಮಹತ್ಯೆ ಮಾಡಿಕೊಂಡವರು. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ:  ಮೈಸೂರು ಉದ್ಯಮಿಯ ಕೊಲೆಗೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!

    ಚಂದನಾ ಅವರು ಜೆಎಸ್‍ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಇವರು ಚಾಮರಾಜನಗರದ ಜೆಎಸ್‍ಎಸ್ ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

    ಡೆತ್ ನೋಟ್‍ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನ ಮದುವೆ ದಿನದಂದೇ ಯುವತಿ ನೇಣಿಗೆ ಶರಣು – ತಾಳಿಕಟ್ಟಿ ಕಲ್ಯಾಣ ಮಂಟಪದಿಂದಲೇ ಕಾಲ್ಕಿತ್ತ ಯುವಕ

    ಪ್ರಿಯಕರನ ಮದುವೆ ದಿನದಂದೇ ಯುವತಿ ನೇಣಿಗೆ ಶರಣು – ತಾಳಿಕಟ್ಟಿ ಕಲ್ಯಾಣ ಮಂಟಪದಿಂದಲೇ ಕಾಲ್ಕಿತ್ತ ಯುವಕ

    ಶಿವಮೊಗ್ಗ: ಅವರದ್ದು ಕಳೆದ ನಾಲ್ಕೈದು ವರ್ಷಗಳ ಪ್ರೇಮ್‍ಕಹಾನಿ. ಜಾತಿ ಬೇರೆಯದ್ದಾದರೂ ಪ್ರೀತಿಗೇನೂ ಕೊರತೆಯಿರಲಿಲ್ಲ. ವೃತ್ತಿಯಲ್ಲೂ ಸಮಾನತೆ ಕಾಯ್ದುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಬ್ಬರ ವಿವಾಹವಾಗಿ ಯುವತಿ, ಪಿಎಚ್‍ಡಿ ಪದವೀಧರೆಯೂ ಆಗಿರುತ್ತಿದ್ದಳು. ಆದರೆ, ಪ್ರೀತಿಸಿದ ಯುವಕ ಕೈಕೊಟ್ಟ ವಿಷಯ ತಿಳಿದ ಯುವತಿ ಅವನ ಮದುವೆ ದಿನದಂದೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಹೌದು. ಪ್ರೀತಿಸಿದ ಯುವಕ ಕೈಕೊಟ್ಟಕಾರಣದಿಂದ ಮನನೊಂದ ಯುವತಿ ಪ್ರಿಯಕರನ ಮದುವೆ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರೂಪ (28) ಎಂಬವರೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮ ಬದುಕಿರುವಾಗ ಮಕ್ಕಳು ಆಸ್ತಿ ಲಾಭ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್

    ಏನಿದು ಕಹಾನಿ?
    ಶಿವಮೊಗ್ಗದವರೇ ಆಗಿದ್ದ ರೂಪಾ ಹಾಗೂ ಮುರಳಿ ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿಯಲ್ಲಿ ಇಬ್ಬರು ಬೇರೆಯಾದರೂ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರು. ಮುರಳಿ ಡಿವಿಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ರೂಪಾ ಸಹ್ಯಾದ್ರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಇದರೊಂದಿಗೆ ಪಿಎಚ್.ಡಿ ಯನ್ನು ಮಾಡುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇನ್ನೆರಡು ತಿಂಗಳಿನಲ್ಲಿ ಪಿಎಚ್‍ಡಿ ಪದವಿಧರೆಯಾಗುತ್ತಿದ್ದರು. ಅಷ್ಟರಲ್ಲೇ ಪ್ರೀತಿಯಲ್ಲಿ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಪಿಎಚ್‍ಡಿ ಡಾಕ್ಟರೇಟ್ ಪಡೆಯುವ ಕನಸೂ ನುಚ್ಚುನೂರಾಗಿದೆ.

    ಹಿಂದೊಮ್ಮೆ ವಿಷ ಸೇವಿಸಿದ್ದ ರೂಪ
    ಹಿಂದೆಯೇ ರೂಪಾಳಿಗೆ ಮದುವೆ ಮಾಡಲು ಪೋಷಕರು ಗಂಡು ಹುಡುಕಲು ಪ್ರಾರಂಭಿಸಿದ್ದರು. ಅಲ್ಲದೇ, ಸಾಕಷ್ಟು ಕಡೆಯಿಂದಲೂ ಸಂಬಂಧಗಳು ಬಂದಿದ್ದವು. ಆದರೆ ರೂಪ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಪಿಎಚ್‍ಡಿ ಮುಗಿದ ಬಳಿಕ ಪ್ರೀತಿಯ ವಿಷಯವನ್ನು ಮನೆಯವರಿಗೆ ತಿಳಿಸಿ, ಮದುವೆಯಾಗೋಣವೆಂದು ಮುಂದೂಡುತ್ತಾ ಬಂದಿದ್ದರು. 2 ತಿಂಗಳ ಹಿಂದೆ ಮಗಳ ಪ್ರೀತಿ ವಿಷಯ ಮನೆಯಲ್ಲಿ ಗೊತ್ತಾಗಿ ಗಲಾಟೆಯೂ ನಡೆದಿತ್ತು. ಇದರಿಂದ ಮನನೊಂದಿದ್ದ ರೂಪಾ ಫೆಬ್ರವರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಳು. ನಂತರ ಚಿಕಿತ್ಸೆ ಪಡೆದು ಆರೋಗ್ಯವಾದರು ಎಂದು ರೂಪಾಳ ಸೋದರಮಾವ ರಾಘವೇಂದ್ರ ಹಾಗೂ ಸಹೋದರ ರಾಕೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ನೋಡಿ ಸ್ಥಳದಿಂದ ಕಾಲ್ಕಿತ್ತ ಪತಿ- ಮಕ್ಕಳ ಮುಂದೆಯೇ ದಲಿತ ಮಹಿಳೆ ಮೇಲೆ ಸಾಮೂಹಿಕ ರೇಪ್

    ನಂತರ ರೂಪಾ ಪೋಷಕರೇ ಜಾತಿ ಬೇರೆಯಾಗಿದ್ದರೂ ಪರವಾಗಿಲ್ಲ. ಮಗಳು ಚೆನ್ನಾಗಿದ್ದರೆ ಸಾಕು ಎಂದು ಮುರಳಿ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದರು. ಆದರೆ ಮುರಳಿ ರೂಪಾಳಿಗೆ ಕೈಕೊಟ್ಟು ಇಂದು (ಭಾನುವಾರ) ಶಿವಮೊಗ್ಗದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಪಲ್ಲವಿ ಎಂಬ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಮನನೊಂದ ರೂಪ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

    ರೂಪ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಪಲ್ಲವಿಗೆ ತಾಳಿ ಕಟ್ಟುತ್ತಿದ್ದಂತೆ ಮುರಳಿ ಕಲ್ಯಾಣ ಮಂಟಪದಿಂದಲೇ ಪರಾರಿಯಾಗಿದ್ದಾನೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರಳಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

     

  • ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    ತುಮಕೂರು: ಹಿಜಬ್ ತೆಗೆದು ತರಗತಿಯೊಳಗೆ ಬರಬೇಕು ಎಂಬ ನಿಯಮ ಜಾರಿಯಾಗಿದ್ದರಿಂದ ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ ಕೊಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ನಗರದ ಪುಟ್ಟಸ್ವಾಮಯ್ಯನ ಪಾಳ್ಯದ ಜೈನ್ ಪಿಯು ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಚಾಂದಿನಿ ನಯಾಜ್ ರಾಜೀನಾಮೆ ಕೊಟ್ಟವರು. ಕಳೆದ ಮೂರು ವರ್ಷಗಳಿಂದ ಜೈನ್ ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ಹಲವು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಹಿಜಬ್ ವಿವಾದದಿಂದಾಗಿ ತಮ್ಮ ಧರ್ಮಕ್ಕೆ ಹೆಚ್ಚು ಅಧ್ಯತೆ ಕೊಟ್ಟು, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇವರು ಮಾತ್ರವಲ್ಲ ಕಾಲೇಜಿನ ವಿದ್ಯಾರ್ಥಿನಿಯರು ಧರ್ಮವೇ ಮುಖ್ಯ ಎಂದು ಕಾಲೇಜನ್ನೆ ಬಿಟ್ಟು ಹೋಗುತ್ತಿದ್ದಾರೆ. ಆದರೆ ನ್ಯಾಯಾಲಯವು ಮಕ್ಕಳಲ್ಲಿ ಒಂದೇ ರೀತಿ ನಿಯಮವಿರಬೇಕು ಎಂದು ಈ ನಿರ್ಧಾರ ಮಾಡಿದ್ದು, ಇದಕ್ಕೆ ಪರ-ವಿರೋಧ ಕೇಳಿಬರುತ್ತಿದೆ.

  • ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ ಉಪನ್ಯಾಸಕಿ

    ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ ಉಪನ್ಯಾಸಕಿ

    ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಬಸಣ್ಣಿ ಬಾ ಹಾಡಿಗೆ ದೈಹಿಕ ಶಿಕ್ಷಣ ಉಪನ್ಯಾಸಕಿ ಶೋಭಾ ಹೆಜ್ಜೆ ಹಾಕಿದ್ದರು. ಉಪನ್ಯಾಸಕಿ ತಮ್ಮ ಜೊತೆ ಡ್ಯಾನ್ಸ್ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಎರಡು ಸ್ಟೆಪ್ಸ್ ಹೆಚ್ಚು ಹಾಕಿ ಸಂಭ್ರಮಿಸಿದ್ದಾರೆ.

    ಸದ್ಯ ಈ ವೀಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಜೊತೆ ಈ ರೀತಿ ಡ್ಯಾನ್ಸ್ ಮಾಡೋದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೊಂದು ವರ್ಗದ ಜನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೋಗಳನ್ನ ಶೇರ್ ಮಾಡಿಕೊಳ್ಳುವ ನಾವು ನಮ್ಮಲ್ಲಿ ಈ ರೀತಿ ನಡೆದ್ರೆ ಪ್ರಶ್ನೆ ಮಾಡೋದು ಎಷ್ಟು ಸರಿ ಎಂದು ಶೋಭಾ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

  • ಉಪನ್ಯಾಸಕಿ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಉಪನ್ಯಾಸಕಿ ಮಗನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಉಪನ್ಯಾಸಕಿ ಮಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

    ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉಪನ್ಯಾಸಕಿ ಮಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಚಂದನ್ ವಿದ್ಯಾರ್ಥಿ ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ. ಯುವಕನ ತಾಯಿ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಅದೇ ಕಾಲೇಜಿನಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಯನ್ನು ಯುವಕ ಪರಿಚಯ ಮಾಡಿಕೊಂಡಿದ್ದ.

    ಉಪನ್ಯಾಸಕಿಯನ್ನು ಭೇಟಿ ಮಾಡಲೆಂದು ಮನೆಗೆ ಆಗಮಿಸಿದಾಗ ವಿದ್ಯಾರ್ಥಿನಿ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಂದನ್ ನನ್ನು ಬಂಧಿಸಲಾಗಿದೆ.

    https://www.youtube.com/watch?v=N3HGQH9Rqk0

  • ಲಿಪ್‍ಸ್ಟಿಕ್ ಹಚ್ಚಂಗಿಲ್ಲ, ಮೇಕಪ್ ಮಾಡಂಗಿಲ್ಲ-ಉಪನ್ಯಾಸಕಿಗೆ ಪ್ರಿನ್ಸಿಪಾಲ್ ಕಿರಿಕ್

    ಲಿಪ್‍ಸ್ಟಿಕ್ ಹಚ್ಚಂಗಿಲ್ಲ, ಮೇಕಪ್ ಮಾಡಂಗಿಲ್ಲ-ಉಪನ್ಯಾಸಕಿಗೆ ಪ್ರಿನ್ಸಿಪಾಲ್ ಕಿರಿಕ್

    ತುಮಕೂರು: ಉಪನ್ಯಾಸಕಿಯೊಬ್ಬರು ಮೇಕಪ್ ಮಾಡಿಕೊಂಡು ಕಾಲೇಜಿಗೆ ಬಂದರೆ ಇಲ್ಲಿನ ಪ್ರಾಂಶುಪಾಲರಿಗೆ ಆಗಲ್ವಂತೆ. ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡ್ರೂ, ಪರಿಚಯದವರ ಬಳಿ ಬೈಕ್‍ನಲ್ಲಿ ಡ್ರಾಪ್ ತೆಗೆದುಕೊಂಡರೂ ಕೆಟ್ಟದಾಗಿ ಕಮೆಂಟ್ ಮಾಡ್ತಾರಂತೆ. ಇದ್ರಿಂದ ರೋಸಿಹೋದ ಉಪನ್ಯಾಸಕಿ ಈಗ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ತುಮಕೂರಿನ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ರಾಜ್ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬಂದಿವೆ. ಕನ್ನಡ ಉಪನ್ಯಾಸಕಿ ಜ್ಯೋತಿ (ಹೆಸರು ಬದಲಾಯಿಸಲಾಗಿದೆ)ಅವರಿಗೆ  ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಎದುರೇ ಡ್ರೆಸ್, ಮೈಮಾಟದ ಬಗ್ಗೆ ಲಘುವಾಗಿ ಮಾತನಾಡಿ ಅವಮಾನಿಸಿದ್ದಾರೆ ಅಲ್ಲದೆ ಲಿಪ್‍ಸ್ಟಿಕ್ ಹಚ್ಚಿ, ಮೇಕಪ್ ಮಾಡಿಕೊಂಡು ಕಾಲೇಜಿಗೆ ಹೋದರೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ ಎಂದು ಜ್ಯೋತಿ ಆರೋಪಿಸುತ್ತಾರೆ.

    ಪ್ರಾಂಶುಪಾಲ ಪ್ರವೀಣ್ ರಾಜ್ ವಿರುದ್ಧ ಜ್ಯೋತಿ ಈಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವಮಾನ, ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಅಂತಾ ದೂರು ನೀಡಿದ್ದಾರೆ. ಆದರೆ ಪೊಲೀಸರು ಎನ್‍ಸಿಆರ್ (Non-Cognizable Report) ಮಾಡಿ ಕೈ ತೊಳೆದುಕೊಂಡಿದ್ದಾರೆ. ದೂರು ನೀಡಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

    ಉಪನ್ಯಾಸಕಿ ಜ್ಯೋತಿ ಮಾಡಿರುವ ಆರೋಪದ ಬಗ್ಗೆ ಪ್ರಾಂಶುಪಾಲ ಪ್ರವೀಣ್ ರಾಜ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸುದ್ದಿ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಅಂತಾ ಮಾಧ್ಯಮಗಳಿಗೂ ಬೆದರಿಸಿದ್ದಾರೆ. ಯಾರದ್ದು ಸತ್ಯ ಯಾರದ್ದು ಸುಳ್ಳು ಅನ್ನೋದು ತನಿಖೆ ನಂತರವಷ್ಟೇ ತಿಳಿಯಬೇಕಿದೆ.

  • ಉಪನ್ಯಾಸಕಿ ಸ್ನಾನ ಮಾಡುತ್ತಿದ್ದ ವೀಡಿಯೋ ಶೂಟ್ ಮಾಡುತ್ತಿದ್ದ ವಿಕೃತ ಕಾಮಿ!

    ಉಪನ್ಯಾಸಕಿ ಸ್ನಾನ ಮಾಡುತ್ತಿದ್ದ ವೀಡಿಯೋ ಶೂಟ್ ಮಾಡುತ್ತಿದ್ದ ವಿಕೃತ ಕಾಮಿ!

    ಹೈದರಾಬಾದ್: ಉಪನ್ಯಾಸಕಿಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬನನ್ನು ಹೈದರಾಬಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಆಗಿದ್ದೇನು?: ಇಲ್ಲಿನ ಕೆಪಿಎಚ್‍ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿಜಿ ಹಾಸ್ಟೆಲ್ ನಲ್ಲಿ ಉಪನ್ಯಾಸಕಿಯೊಬ್ಬರು ವಾಸ್ತವ್ಯ ಹೂಡಿದ್ದರು. ಕಳೆದ ಗುರುವಾರ ಇವರು ಸ್ನಾನ ಮಾಡುತ್ತಿದ್ದಾಗ ಬಾತ್ ರೂಂ ಕಿಟಕಿಯಿಂದ ಮೊಬೈಲ್ ಫೋನೊಂದು ಕಾಣಿಸಿದೆ. ವೆಂಟಿಲೇಟರ್ ಮೂಲಕ ಮೊಬೈಲ್ ಕಾಣಿಸುತ್ತಿದ್ದಂತೆಯೇ ಉಪನ್ಯಾಸಕಿ ಕಿರುಚಾಡಲು ಆರಂಭಿಸಿದ್ದಾರೆ. ತಕ್ಷಣ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಬಳಿಕ ಉಪನ್ಯಾಸಕಿ ಕೆಪಿಎಚ್‍ಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ಸ್ನಾನ ಮಾಡುವಾಗ ಯಾರೋ ಬಾತ್ ರೂಂ ವೆಂಟಿಲೇಟರ್ ಮೂಲಕ ಮೊಬೈಲ್ ನಲ್ಲಿ ವೀಡಿಯೋ ಶೂಟ್ ಮಾಡಿದ್ದಾರೆ. ಆ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಗೋಲ್ಡ್ ಕಲರ್ ನಲ್ಲಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.

    ದೂರು ಸ್ವೀಕರಿಸಿದ ಪೊಲೀಸರು ಪಿಜಿ ಹಾಸ್ಟೆಲ್ ಗೆ ಆಗಮಿಸಿ, ಗೋಲ್ಡನ್ ಬಣ್ಣದ ಮೊಬೈಲ್ ಇರುವವರ ಹುಡುಕಾಟ ಶುರು ಮಾಡಿದ್ದಾರೆ. ಈ ವೇಳೆ ಇದೇ ಹಾಸ್ಟೆಲ್ ಮಾಲೀಕನ ಪುತ್ರ ಚಂದ್ರಹಾಸ್ ಎಂಬಾತನ ಬಳಿ ಚಿನ್ನದ ಬಣ್ಣದ ಮೊಬೈಲ್ ಪತ್ತೆಯಾಗಿದೆ.

    ಇದನ್ನು ಪರಿಶೀಲನೆ ಮಾಡಿದಾಗ ಮೊಬೈಲ್ ನಲ್ಲಿ ಯಾವುದೇ ವೀಡಿಯೋ ಇರಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ಯಾವಾಗ ತಾನಿನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಗೊತ್ತಾಗುತ್ತೋ ಚಂದ್ರಹಾಸ್ ತಪ್ಪೊಪ್ಪಿಕೊಳ್ಳುತ್ತಾನೆ. ‘ನಾನೇ ವೀಡಿಯೋ ಶೂಟ್ ಮಾಡಿದ್ದೆ. ಕೇವಲ 10 ಸೆಕೆಂಡ್ ಮಾತ್ರ ವೀಡಿಯೋ ಶೂಟ್ ಮಾಡಿದ್ದೆ. ಅಷ್ಟರಲ್ಲಿ ಉಪನ್ಯಾಸಕಿಗೆ ವಿಚಾರ ಗೊತ್ತಾಗಿ ಗದ್ದಲ ಶುರು ಮಾಡಿದರು. ಇದರಿಂದಾಗಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಲ್ಲಿ ನಾನು ಆ ವಿಡಿಯೋ ಡಿಲೀಟ್ ಮಾಡಿದೆ’ ಎಂದು ಹೇಳಿದ್ದಾನೆ. ಪೊಲೀಸರು ಆರೋಪಿ ಚಂದ್ರಹಾಸನನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಚಂದ್ರಹಾಸನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

  • ಥೂ ಅಸಹ್ಯ..!, ಉಪನ್ಯಾಸಕಿಯನ್ನು ತಬ್ಕೊಂಡು ಯುವಕನ ಹಸ್ತಮೈಥುನ!

    ಥೂ ಅಸಹ್ಯ..!, ಉಪನ್ಯಾಸಕಿಯನ್ನು ತಬ್ಕೊಂಡು ಯುವಕನ ಹಸ್ತಮೈಥುನ!

    ನವದೆಹಲಿ: ದೆಹಲಿಯ ಮಹಿಳಾ ಪ್ರೊಫೆಸರ್ ಮುಂದೆಯೇ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಕೃತ ಕಾಮಿ ಮಾಡಿದ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜರ್ಕಿನ್ ಜೊತೆಯಿದ್ದ ಟೋಪಿಯನ್ನು ಆತ ಹಾಕಿದ್ದ ಕಾರಣ ಈತನ ಗುರುತು ಪತ್ತೆಯಾಗಿಲ್ಲ. ದೆಹಲಿಯ ಕನೌಟ್ ಪ್ಲೇಸ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ದೂರು ದಾಖಲಿಸಿದ್ದಾರೆ.

    ಪ್ರಕರಣ ನಡೆದಾಗ ಸಂತ್ರಸ್ತೆ ಟೆರೇಸ್ ನಲ್ಲಿ ಫೋನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ 20ರ ಆಸುಪಾಸಿನಲ್ಲಿದ್ದ ಯುವಕನೊಬ್ಬ ತನ್ನನ್ನು ಹಿಂಬಾಲಿಸುತ್ತಿರುವು ಗೊತ್ತಾಗಿದೆ. ಈತನನ್ನು ಪ್ರಶ್ನಿಸಿದಾಗ ಈತ ತನ್ನ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

    ಗುರುವಾರ ಮಧ್ಯಾಹ್ನ 1.30ಕ್ಕೆ ನಾನು ಬ್ರೇಕ್ ಟೈಮಲ್ಲಿ ಟೆರೇಸ್ ಮೇಲೆ ಹೋಗಿದ್ದೆ. ಈ ವೇಳೆ ನಾನು ಫೋನಲ್ಲಿ ಮಾತನಾಡುತ್ತಿದ್ದೆ. ಆಗ ನನ್ನನ್ನು 20ರ ಆಸುಪಾಸಿನ ಯುವಕನೊಬ್ಬ ಹಿಂಬಾಲಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂತು. ನಾನು ಫೋನಲ್ಲಿ ಮಾತನಾಡುತ್ತಿರಬೇಕಾದರೆ ಆತ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಫೋನ್ ಕರೆ ಕಟ್ ಆದ ಬಳಿಕ ನಾನು ಆತನಲ್ಲಿ ಏನಾದ್ರೂ ಸಮಸ್ಯೆ ಇದೆಯಾ ಎಂದು ಕೇಳಿದೆ. ಅದಕ್ಕೆ ಅವನು ಏನೂ ಇಲ್ಲ ಎಂದು ಹೇಳಿದ್ರೂ ಅಲ್ಲಿಂದ ಹೊರಡಲಿಲ್ಲ. ನಾನು ಅಲ್ಲಿಂದ ಹೊರಡಲನುವಾಗುತ್ತಿದ್ದಂತೆ ನನ್ನ ಮುಂದೆ ಬಂದ ಆತ ತನ್ನ ಪ್ಯಾಂಟ್ ಜಿಪ್ ಬಿಚ್ಚಿದ. ಅಲ್ಲೇ ಹಸ್ತಮೈಥುನ ಮಾಡಲು ಶುರು ಮಾಡಿದ ಎಂದು ಪ್ರೊಫೆಸರ್ ಎಎನ್‍ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

    ನಾನು ಅಲ್ಲಿಂದ ಓಡಿಹೋಗಬೇಕು ಎನ್ನುವಷ್ಟರಲ್ಲಿ ಆತ ಮತ್ತೆ ಬಂದು ನನ್ನನ್ನು ಹಿಡಿದುಕೊಂಡು, ನನ್ನ ದೇಹದ ಮೇಲೆಲ್ಲಾ ಕೈಯಾಡಿಸಿದ. ನಾನು ಮತ್ತೆ ಅಲ್ಲಿಂದ ಓಡಿ ಹೋಗಲು ಯತ್ನಿಸಿ ಟೆರೇಸ್‍ನ ಬಾಗಿಲ ಬಳಿ ಬಂದಾಗ ನನ್ನನ್ನು ಬೆನ್ನತ್ತಿ ಬಂದ ಆತ ಬಾಗಿಲಿನ ಚಿಲಕ ಹಾಕಿದ. ಆ ವೇಳೆ ನಾನು ಆತನನ್ನು ತಳ್ಳಿ, ಕೂಗಾಡಲು ಆರಂಭಿಸಿದೆ. ಆಗ ಆತ ಮೊಬೈಲ್ ಫೋನ್ ಕಿತ್ತು ಪಕ್ಕದ ಕಟ್ಟಡದ ಟೆರೇಸ್ ಮೇಲೆ ಹಾರಿ ಪರಾರಿಯಾಗಿದ್ದಾನೆ ಎಂದು ಪ್ರೊಫೆಸರ್ ಹೇಳಿಕೊಂಡಿದ್ದಾರೆ.

    ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.