Tag: ಉಪನ್ಯಾಸಕ

  • ಮನೆಗೆ ಊಟಕ್ಕೆ ಅಂತ ಕರೆಸಿ ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಪ್ರೊಫೆಸರ್ ಅರೆಸ್ಟ್

    ಮನೆಗೆ ಊಟಕ್ಕೆ ಅಂತ ಕರೆಸಿ ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಪ್ರೊಫೆಸರ್ ಅರೆಸ್ಟ್

    – ಪರೀಕ್ಷೆಯಲ್ಲಿ ಮಾರ್ಕ್ಸ್ ಕೊಡ್ತೀನಿ, ಅಟೆಂಡೆನ್ಸ್‌ ಕೊಡ್ತೀನಿ ಅಂತ ಮೈಕೈ ಮುಟ್ಟಿ ಕಿರುಕುಳ ನೀಡಿದ್ದ ಕಾಮುಕ

    ಬೆಂಗಳೂರು: ಮನೆಗೆ ಊಟಕ್ಕೆ ಕರೆಸಿ ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಖಾಸಗಿ ಕಾಲೇಜಿನ ಪ್ರೊಫೆಸರ್‌ನನ್ನು ತಿಲಕ್ ನಗರ ಪೊಲೀಸರು (Tilak Nagar Police) ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳ (West Bengal) ಮೂಲದ ಸಂಜೀವ್ ಕುಮಾರ್ ಮಂಡಲ್ ಬಂಧಿತ ಪ್ರೊಫೆಸರ್. ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ಹೆಚ್‌ಓಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯು ಅದೇ ಕಾಲೇಜಿನಲ್ಲಿ ಬಿಸಿಎ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಆಕೆಯು ಪಶ್ಚಿಮ ಬಂಗಾಳ ಮೂಲದವಳಾಗಿದ್ದಳು. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 6 ಮಂದಿ ಸಜೀವ ದಹನ

    ಕಾಲೇಜಿನಲ್ಲಿ ಆಕೆಗೆ ಉಪನ್ಯಾಸಕನಾಗಿದ್ದರಿಂದ ಅ.2 ರಂದು ವಿದ್ಯಾರ್ಥಿನಿಯನ್ನು ಪ್ರೊಫೆಸರ್ ಮನೆಗೆ ಊಟಕ್ಕೆ ಕರೆದಿದ್ದ. ಹೀಗಾಗಿ ವಿದ್ಯಾರ್ಥಿನಿ ಪ್ರೊಫೆಸರ್ ಮನೆಗೆ ಊಟಕ್ಕೆ ಹೋಗಿದ್ದಳು. ಮನೆಯಲ್ಲಿ ಪ್ರೊಫೆಸರ್ ಒಬ್ಬನೇ ಇದ್ದುದ್ದರಿಂದ ವಿದ್ಯಾರ್ಥಿನಿಯು ಗಾಬರಿಗೊಂಡಿದ್ದಳು. ಈ ವೇಳೆ ಆಕೆಗೆ ಕುಡಿಯಲು ನೀರು ಕೊಟ್ಟು, ಆಕೆಯ ಪಕ್ಕದಲ್ಲೇ ಪ್ರೊಫೆಸರ್ ಕುಳಿತುಕೊಂಡಿದ್ದ. ಇದನ್ನೂ ಓದಿ: ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಬಳಿಕ ನಿನಗೆ ಹಾಜರಾತಿ ಕಡಿಮೆ ಇದೆ, ಹಾಜರಾತಿ ಹಾಕಿ ಕೊಡುತ್ತೇನೆ. ಪರೀಕ್ಷೆಯಲ್ಲಿ ಮಾರ್ಕ್ಸ್ ಕೊಡೋದಾಗಿ ಹೇಳಿ ವಿದ್ಯಾರ್ಥಿನಿ ಮೈ, ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಗಾಬರಿಗೊಂಡ ವಿದ್ಯಾರ್ಥಿನಿ ಅಲ್ಲಿಂದ ಎದ್ದು ಬಂದಿದ್ದಳು ಎನ್ನಲಾಗಿದೆ.

    ಬಳಿಕ ವಿದ್ಯಾರ್ಥಿನಿಯು ಮನೆಯವರ ಸಲಹೆ ಮೇರೆಗೆ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರೊಫೆಸರ್‌ನನ್ನು ಬಂಧಿಸಿದ್ದಾರೆ.

  • ಮದುವೆಯಾಗೋದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ – ಉಪನ್ಯಾಸಕ ವಶಕ್ಕೆ

    ಮದುವೆಯಾಗೋದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ – ಉಪನ್ಯಾಸಕ ವಶಕ್ಕೆ

    – ಅರ್ಥವಾಗದ ವಿಷಯದ ಬಗ್ಗೆ ಅರ್ಥ ಮಾಡಿಸುತ್ತೇನೆಂದು ಸ್ನೇಹ ಸಂಪಾದಿಸಿದ್ದ!

    ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಖಾಸಗಿ ಕಾಲೇಜಿನ ಉಪನ್ಯಾಸಕನೋರ್ವ (Lecturer) ವಿದ್ಯಾರ್ಥಿನಿ (Student) ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagara) ಪಟ್ಟಣದಲ್ಲಿ ಕೇಳಿಬಂದಿದೆ.

    ಸಾಗರದ ಖಾಸಗಿ ಕಾಲೇಜಿನ ಉಪನ್ಯಾಸಕ ಪುನೀತ್ ಎಂಬಾತ ವಿದ್ಯಾರ್ಥಿನಿಗೆ ಅರ್ಥವಾಗದ ವಿಷಯದ ಬಗ್ಗೆ ಅರ್ಥ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಿದ್ದಾನೆ. ತದನಂತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ

    ಅತ್ಯಾಚಾರ ನಡೆದಿರುವ ಕುರಿತು ವಿದ್ಯಾರ್ಥಿನಿ ಹಾಗು ಆಕೆಯ ಪೋಷಕರು ಶಿವಮೊಗ್ಗದ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಉಪನ್ಯಾಸಕ ಪುನೀತ್‌ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ರಷ್ಯಾದ Mi-8T ಹೆಲಿಕಾಪ್ಟರ್ ಪತನ – 22 ಮಂದಿ ಸಾವು

  • ಟಿವಿ ನೋಡ್ತಿದ್ದ ವೇಳೆ ಹೃದಯಾಘಾತದಿಂದ ಉಪನ್ಯಾಸಕ ಸಾವು

    ಟಿವಿ ನೋಡ್ತಿದ್ದ ವೇಳೆ ಹೃದಯಾಘಾತದಿಂದ ಉಪನ್ಯಾಸಕ ಸಾವು

    ಹಾಸನ: ಹೃದಯಾಘಾತದಿಂದ (Heart Attack) ಉಪನ್ಯಾಸಕ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತ್ಯಾಗರಾಜ್ ಎಂಟಿ (56) ಮೃತ ಉಪನ್ಯಾಸಕ. ಹಳೇಕೋಟೆ ಹೋಬಳಿ, ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತ್ಯಾಗರಾಜ್ ರಾತ್ರಿ ಮನೆಯಲ್ಲಿ ಕುರ್ಚಿ ಮೇಲೆ ಕುಳಿತು ಟಿವಿ ನೋಡುತ್ತಿದ್ದರು. ಈ ವೇಳೆ ಹೃದಯಾಘಾತವಾಗಿ ಅವರು ಕುಳಿತಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಹೊರಗೆ ನಡೆದುಕೊಂಡು ಹೋಗ್ತಿದ್ದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

    ತ್ಯಾಗರಾಜ್ ಮಾನಸ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ತ್ಯಾಗರಾಜ್ ನಿಧನಕ್ಕೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಬಂದ್ ಆಗುತ್ತಾ 300ಕ್ಕೂ ಹೆಚ್ಚು ಶಾಲೆ..?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

    ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

    ರಾಯಚೂರು: ಕ್ಲಾಸ್ ರೂಂನಲ್ಲಿಯೇ ಉಪನ್ಯಾಸಕರ ಎದುರೇ ರಾಡ್ ಹಿಡಿದು ವಿದ್ಯಾರ್ಥಿಗಳು (Students)  ಹೊಡೆದಾಡಿಕೊಂಡಿರುವ ಘಟನೆ ರಾಯಚೂರಿನ (Raichuru) ನವೋದಯ  (Navoodaya) ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.

    ಶಂಕರ್ ಮತ್ತು ಶಂಭುಲಿಂಗ ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು, ಇಬ್ಬರ ಮೇಲೂ ರಾಡ್‍ನಿಂದ ರೋಹಿತ್ ಹಲ್ಲೆ ನಡೆಸಿದ್ದಾನೆ. ಈ ಮೂವರೂ ಬಿಎಸ್‍ಸಿ ನರ್ಸಿಂಗ್ (BSC Nursing) ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು

    ಆಗಾಗ ಶಂಭುಲಿಂಗ, ಶಂಕರ್ ರೇಗಿಸುತ್ತಿದರೂ ಸಹಿಸಿಕೊಂಡಿದ್ದ ರೋಹಿತ್ ತನ್ನ ತಾಯಿ ಬರ್ತ್‍ಡೇಗೆ ಸ್ಟೇಟಸ್ ಹಾಕಿದ್ದ. ಆದರೆ ರೋಹಿತ್ ತಾಯಿಯ ಫೋಟೋವನ್ನು ಶಂಕರ್ ಮತ್ತು ಶಂಭುಲಿಂಗ ದುರ್ಬಳಕೆ ಮಾಡಿದ ಆರೋಪದಿಂದ ರೊಚ್ಚಿಗೆದ್ದ ರೋಹಿತ್ ಕಾಲೇಜಿನ ಟೆರೆಸ್ ಮೇಲಿದ್ದ ರಾಡ್ (Rod) ತೆಗೆದುಕೊಂಡು ಬಂದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಉಪನ್ಯಾಸಕರ (Lecturer) ಕಣ್ಣೆದುರೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯು ನೇತಾಜಿ ನಗರ ಪೊಲೀಸ್ ಠಾಣಾ (Netaji Nagar Police Station) ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ರಾಯಚೂರು: ಉಪನ್ಯಾಸಕರೊಬ್ಬರನ್ನು ದೇವದುರ್ಗ-ಶಹಾಪೂರ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಕೊಲೆ ಮಾಡಲಾಗಿದೆ.

    CRIME 2

    ಮಾನಪ್ಪ ಗೋಪಳಾಪುರ(59) ಕೊಲೆಯಾದ ವ್ಯಕ್ತಿ ರ್ದುದೈವಿ. ಮಾನಪ್ಪ ಅವರು ದೇವದುರ್ಗದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ನಿರ್ವಯಿಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ 

    POLICE JEEP

    ಕತ್ತು, ತಲೆ ಭಾಗಕ್ಕೆ ಗಂಭೀರಗಾಯಗಳಾಗಿದ್ದು, ಮಾನಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಾದಗಿರಿಯ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಕೊಲೆಯ ಬಗ್ಗೆ ವಿವರಗಳು ಸಿಕ್ಕಿಲ್ಲ. ಈ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

  • ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ – ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿತ

    ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ – ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿತ

    ಬೆಳಗಾವಿ: ಉಪನ್ಯಾಸಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕನಿಗೆ ಕಾಲೇಜಿನ ಸ್ಟಾಫ್ ರೂಮ್‍ನಲ್ಲಿ ಉಪನ್ಯಾಸಕಿಯರೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಏಪ್ರಿಲ್ 12ರಂದು ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಅಮಿತ್ ಬಸವಮೂರ್ತಿ ಎಂದು ಗುರುತಿಸಲಾಗಿದೆ. ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಬಸವಮೂರ್ತಿ ನಿತ್ಯ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸಿ ಉಪನ್ಯಾಸಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಅಲ್ಲದೇ ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಉಪನ್ಯಾಸಕಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 10 ವರ್ಷದಿಂದ ಹೆತ್ತ ತಾಯಿಯನ್ನೇ ಕೂಡಿ ಹಾಕಿದ್ದ ಮಕ್ಕಳು – ಮಹಿಳೆ ರಕ್ಷಣೆ

    ಈ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಉಪನ್ಯಾಸಕಿಯರೆಲ್ಲಾ ಸೇರಿ ಆರೋಪಿಗೆ ಕಾಲಿನಿಂದ ಒದ್ದು, ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು ನೀಡಿದ್ದಾರೆ. ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅತಿಥಿ ಉಪನ್ಯಾಸಕಿಯರು ಖಾಯಂ ಉಪನ್ಯಾಸಕನಿಗೆ ಹಿಗ್ಗಾಮುಗ್ಗ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

  • ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಎಂದು ವಿದ್ಯಾರ್ಥಿಯ ಕೈ ಕಚ್ಚಿದ ಉಪನ್ಯಾಸಕ

    ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಎಂದು ವಿದ್ಯಾರ್ಥಿಯ ಕೈ ಕಚ್ಚಿದ ಉಪನ್ಯಾಸಕ

    ಶಿವಮೊಗ್ಗ: ಪರೀಕ್ಷೆಯಲ್ಲಿ‌ ವಿದ್ಯಾರ್ಥಿಯೊಬ್ಬ ನಕಲು ಮಾಡುತ್ತಿದ್ದ ಎಂಬ ಕಾರಣಕ್ಕೆ ಉಪನ್ಯಾಸಕರೊಬ್ಬರು ವಿದ್ಯಾರ್ಥಿಯ ಕೈ ಕಚ್ಚಿದ ಘಟನೆ ಜಿಲ್ಲೆಯ ಹೊಸನಗರದಲ್ಲಿ ಮಂಗಳವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಅಂತಿಮ‌ ಬಿ.ಎ ಪದವಿ ವಿದ್ಯಾರ್ಥಿ ಕಿರ್ತೇಶ್ ಎಂಬಾತ ಮೊಬೈಲ್ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ. ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕಾಲೇಜಿನ ಉಪನ್ಯಾಸಕ ಅಂಜನ್ ಕುಮಾರ್ ವಿದ್ಯಾರ್ಥಿ ನಕಲು ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೇ ನಕಲು ಮಾಡಲು ಬಳಸಿದ್ದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    ಈ ವೇಳೆ ವಿದ್ಯಾರ್ಥಿ ಹಾಗೂ ಉಪನ್ಯಾಸಕರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ವಿದ್ಯಾರ್ಥಿ, ಉಪನ್ಯಾಸಕರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಉಪನ್ಯಾಸಕ, ವಿದ್ಯಾರ್ಥಿಯ ಕೈ ಕಚ್ಚಿದ್ದಾರೆ.

    ಘಟನೆ ನಂತರ ವಿದ್ಯಾರ್ಥಿ ಉಪನ್ಯಾಸಕರ ವಿರುದ್ದ ಹೊಸನಗರ ಠಾಣೆಗೆ ದೂರು ನೀಡಿದ್ದಾನೆ. ಇದಕ್ಕೆ ಪ್ರತಿಯಾಗಿ ಉಪನ್ಯಾಸಕ ಕೂಡ ವಿದ್ಯಾರ್ಥಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ್ದಾರೆ. ನಂತರ ವಿದ್ಯಾರ್ಥಿಯ ಭವಿಷ್ಯ ಹಾಳಾಗುತ್ತದೆ ಎಂಬುದನ್ನು ಅರಿತ ಕಾಲೇಜು ಆಡಳಿತ ಮಂಡಳಿ ಇಬ್ಬರ ನಡುವೆ ಸಂಧಾನ ನಡೆಸಿ ಪ್ರಕರಣ ಇತ್ಯರ್ಥಗೊಳಿಸಿದೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

  • ಅತಿಥಿ ಉಪನ್ಯಾಸಕರ ಬೇಡಿಕೆ, ಒಂದೆರಡು ದಿನದಲ್ಲಿ ಸಿಹಿಸುದ್ದಿ-ಅಶ್ವಥ್ ನಾರಾಯಣ

    ಅತಿಥಿ ಉಪನ್ಯಾಸಕರ ಬೇಡಿಕೆ, ಒಂದೆರಡು ದಿನದಲ್ಲಿ ಸಿಹಿಸುದ್ದಿ-ಅಶ್ವಥ್ ನಾರಾಯಣ

    ಬೆಂಗಳೂರು: ರಾಜ್ಯದಲ್ಲಿರುವ 14 ಸಾವಿರ ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಸಾಕಷ್ಟು ಚರ್ಚಿಸಿದ್ದು, ಒಂದೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಆದ್ದರಿಂದ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು, ಬೋಧನೆಗೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆಗಳನ್ನು ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಚೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ತಮ್ಮ ನೇತೃತ್ವದಲ್ಲಿ ಮಂಗಳವಾರ ನಡೆದ ಮೂರು ತಾಸುಗಳ ಸಭೆಯ ನಂತರ ಅವರು ಈ ಭರವಸೆ ನೀಡಿದರು. ಸಭೆಯಲ್ಲಿ ಉಪನ್ಯಾಸಕರಿಗೆ ಸಂಬಂಧಿಸಿದ ನಾಲ್ಕೈದು ಸಂಘಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.

    ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ತಿನ ಹಲವು ಸದಸ್ಯರೊಂದಿಗೆ ವಿಷಯವನ್ನು ಕುರಿತು ಚರ್ಚಿಸಲಾಯಿತು. ಜೊತೆಗೆ ಅತಿಥಿ ಉಪನ್ಯಾಸಕರ ಸಂಘಗಳ ಪರವಾಗಿ ಸಲ್ಲಿಸಿದ ಅಹವಾಲುಗಳನ್ನು ಕೂಡ ಪರಿಶೀಲಿಸಲಾಯಿತು. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

    ನಂತರ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು. ಸಿಎಂ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರಣ ಒಂದೆರಡು ದಿನಗಳಲ್ಲಿ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು. ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥದಲ್ಲಿ ಆರ್ಥಿಕ ಹೊರೆ ಮುಂತಾದ ಅಂಶಗಳಿವೆ. ಒಟ್ಟಿನಲ್ಲಿ ವಿಚಾರವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ

  • ಪ್ರೇಮ ವೈಫಲ್ಯ ಶಂಕೆ- ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಉಪನ್ಯಾಸಕ ಆತ್ಮಹತ್ಯೆ

    ಪ್ರೇಮ ವೈಫಲ್ಯ ಶಂಕೆ- ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಉಪನ್ಯಾಸಕ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

    ಗ್ರಾಮದ 30 ವರ್ಷದ ಮುರುಳಿ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡ್ತಿದ್ದ ಮುರುಳಿ, ಪಕ್ಕದ ಗ್ರಾಮದ ಯುವತಿಯನ್ನ ಪ್ರೀತಸುತ್ತಿದ್ದರು ಎನ್ನಲಾಗಿದೆ. ಈ ವಿಚಾರ ಯುವತಿ ಪೋಷಕರಿಗೆ ತಿಳಿದು ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿದ್ರು ಎನ್ನಲಾಗಿದೆ. ಹೀಗಾಗಿ ಇದೇ ವಿಚಾರಕ್ಕೆ ಮನನೊಂದು ಮುರುಳಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಮೃತ ಯುವಕನ ಜೇಬಿನಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದ್ದು, ದಿಬ್ಬೂರಹಳ್ಳಿ ಪೊಲೀಸರು ಮೃತದೇಹ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾಗೆ ಪಿಯು ಉಪನ್ಯಾಸಕ ಬಲಿ

    ಕೊರೊನಾಗೆ ಪಿಯು ಉಪನ್ಯಾಸಕ ಬಲಿ

    ಹಾಸನ: ಕೊರೊನಾ ಸೋಂಕು ತಗುಲಿ ಜಿಲ್ಲೆಯ ಉಪನ್ಯಾಸಕರೊಬ್ಬರು ಸಾವನ್ನಪ್ಪಿದ್ದು, ಇದರಿಂದಾಗಿ ಜಿಲ್ಲೆಯ ಶಿಕ್ಷಕ ಹಾಗೂ ಉಪನ್ಯಾಸಕರಲ್ಲಿ ಆತಂಕ ಹೆಚ್ಚಿದೆ.

    ಜಿಲ್ಲೆಯ ಚನ್ನರಾಯಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಜಯಂತ್‍ಕುಮಾರ್.ಬಿಬಿ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಡಿಸೆಂಬರ್ 4, 2020 ರಂದು ಕಾಲೇಜಿನಿಂದ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕೆಲಸಕ್ಕೆ ಹಾಜರಾಗಿದ್ದರು. ಕರ್ತವ್ಯದ ವೇಳೆಯೇ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿದೆ.

    ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಲತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಉಪನ್ಯಾಸಕನ ಸಾವಿನಿಂದಾಗಿ ಜಿಲ್ಲೆಯ ಶಿಕ್ಷಕರು ಹಾಗೂ ಉಪನ್ಯಾಸಕರಲ್ಲಿ ಆತಂಕ ಹೆಚ್ಚಿದೆ.