Tag: ಉಪನ್ಯಾಸ

  • ಖ್ಯಾತ ಕಾದಂಬರಿಕಾರ ಸಲ್ಮಾನ್‌ ರಶ್ದಿ ಮೇಲೆ ದುಷ್ಕರ್ಮಿಗಳಿಂದ ಚಾಕು ಇರಿತ

    ಖ್ಯಾತ ಕಾದಂಬರಿಕಾರ ಸಲ್ಮಾನ್‌ ರಶ್ದಿ ಮೇಲೆ ದುಷ್ಕರ್ಮಿಗಳಿಂದ ಚಾಕು ಇರಿತ

    ವಾಷಿಂಗ್ಟನ್‌: ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆದಿದ್ದು, ಚಾಕು ಇರಿತಕ್ಕೆ ಒಳಗಾಗಿದ್ದಾರೆ.

    ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರು ಶುಕ್ರವಾರ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಚೌಟ ಸಂಸ್ಥೆಯ ವೇದಿಕೆಯಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 411 ಕೋಟಿ ರೂ. ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ

    ಸಲ್ಮಾನ್‌ ರಶ್ದಿಯ ಮೇಲೆ ದಾಳಿ ಮಾಡಿದ ನಂತರ ದಾಳಿಕೋರರನ್ನು ತಡೆಹಿಡಿಯಲಾಗಿದೆ. ದಾಳಿ ನಡೆಸಿದ ಕೆಲವೇ ಹೊತ್ತಿನಲ್ಲಿ ಪೊಲೀಸರು ಓರ್ವವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೆ ಪಾಕ್‌ ಸಂಘಟನೆಗ‌ಳಿಂದ ಸುಪಾರಿ ಪಡೆದಿದ್ದ ಉಗ್ರ ಅರೆಸ್ಟ್

    https://twitter.com/NotThatRKelly/status/1558110761217654787

    ಸಲ್ಮಾನ್ ರಶ್ದಿಯವರ ‘ದಿ ಸೈಟಾನಿಕ್ ವರ್ಸಸ್’ ಪುಸ್ತವು ಮುಸ್ಲಿಮರ ಧರ್ಮನಿಂದನೆಯಾಗಿದೆ ಎಂಬ ಕಾರಣದಿಂದ 1988 ರಿಂದ ಇರಾನ್‌ನಲ್ಲಿ ನಿಷೇಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ಮೇ 15ರ ವರೆಗೆ ಪಾಸಿಟಿವಿಟಿ ಅನ್‍ಲಿಮಿಟೆಡ್ ಉಪನ್ಯಾಸ

    ಇಂದಿನಿಂದ ಮೇ 15ರ ವರೆಗೆ ಪಾಸಿಟಿವಿಟಿ ಅನ್‍ಲಿಮಿಟೆಡ್ ಉಪನ್ಯಾಸ

    ಬೆಂಗಳೂರು: ನಾವು ಗೆದ್ದೇ ಗೆಲ್ಲುತ್ತೇವೆ ಕೋವಿಡ್ ರೆಸ್ಪಾನ್ಸ್ ಟೀಮ್ ವತಿಯಿಂದ ‘ಪಾಸಿಟಿವಿಟಿ ಅನ್‍ಲಿಮಿಟೆಡ್’ ಕುರಿತು ಉಪನ್ಯಾಸ ಮಾಲಿಕೆ ಏರ್ಪಡಿಸಿದ್ದು, ಸಂವಾದ ಸಾಮಾಜಿಕ ಜಾಲತಾಣದ ವಾಹಿನಿ ಮೂಲಕ ಶ್ರೀ ಜಗ್ಗಿ ವಾಸುದೇವ್ ಹಾಗೂ ಜೈನ ಮುನಿ ಶ್ರೀ ಪ್ರಮಾಣ ಸಾಗರ ಜೀ ಮಹಾರಾಜ್ ಉಪನ್ಯಾಸ ನೀಡಲಿದ್ದಾರೆ.

    ಮೇ 11ರಿಂದ 15ರ ವರೆಗೆ ಉಪನ್ಯಾಸ ಮಾಲಿಕೆ ನಡೆಯಲಿದ್ದು, ಇಂದು ಸಂಜೆ 4.30ಕ್ಕೆ ಆರಂಭವಾಗಲಿದೆ. ಸದ್ಗುರು ಶ್ರೀ ಜಗ್ಗಿ ವಾಸುದೇವ್ ಹಾಗೂ ಜೈನ ಮುನಿ ಶ್ರೀ ಪ್ರಮಾಣ ಸಾಗರ ಜೀ ಮಹಾರಾಜ್ ಅವರು ಉಪನ್ಯಾಸ ನೀಡಲಿದ್ದಾರೆ.

    ಕೊರೊನಾ ಕಾಲದಲ್ಲಿ ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ 5 ದಿನಗಳ ಕಾಲ ಉಪನ್ಯಾಸ ನೀಡಲಿದ್ದಾರೆ. ಸಂವಾದ ಸಾಮಾಜಿಕ ಜಾಲತಾಣದ ವಾಹಿನಿ ಮೂಲಕ ಉಪನ್ಯಾಸವನ್ನು ಕೇಳಬಹುದಾಗಿದೆ.

  • ಬೀಚ್‍ನಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಉಪನ್ಯಾಸಕನ ಡ್ಯಾನ್ಸ್

    ಬೀಚ್‍ನಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಉಪನ್ಯಾಸಕನ ಡ್ಯಾನ್ಸ್

    ಬಾಗಲಕೋಟೆ: ಇತ್ತೀಚೆಗೆ ಶಿಕ್ಷಕಿಯರು ಡ್ಯಾನ್ಸ್ ಮಾಡಿದ್ದ ಘಟನೆ ಮಾಸುವ ಮುನ್ನವೇ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳ ಜೊತೆ ಸೇರಿ ಅಶ್ಲೀಲ ಅರ್ಥದ ಹಾಡಿಗೆ ಹೆಜ್ಜೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್.ಎಸ್ ನಾಗವಾಡ್ ಎಂಬ ಉಪನ್ಯಾಸಕ, ಶೈಕ್ಷಣಿಕ ಪ್ರವಾಸದ ವೇಳೆ ಬೀಚ್‍ನಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಡ್ಯಾನ್ಸ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಶೈಕ್ಷಣಿಕ ಪ್ರವಾಸದ ವೇಳೆ ಅಶ್ಲೀಲ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.

    ಎರಡು ದಿನಗಳ ಕಾಲ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಕರ ವೃಂದ ಪ್ರವಾಸ ಕಂಡಕ್ಟ್ ಮಾಡಿತ್ತು. ಅದರಂತೆ ಡಿಸೆಂಬರ್ 14ರಿಂದ 16ರವರೆಗೆ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದರು. ಈ ವೇಳೆ ವಿದ್ಯಾರ್ಥಿನಿಯರ ಜೊತೆ ಪ್ರಾಚಾರ್ಯ ನಾಗವಾಡ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗೂ ಅಶ್ಲೀಲ ಅರ್ಥದ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ ಕಾರ್ಯಕರ್ತರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

    ಅಹಿತಕರ ಘಟನೆ ಬಗ್ಗೆ ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಆದರೆ ವಿದ್ಯಾರ್ಥಿ ಶೈಕ್ಷಣಿಕ ಪ್ರವಾಸ ಮುಗಿದು ಒಂದು ತಿಂಗಳಾಗ್ತಾ ಬಂದ್ರೂ ಅಂತಹ ಉಪನ್ಯಾಸಕನ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮಕೈಗೊಂಡಿಲ್ಲ ಎಂದು ಕರವೇ ಕಾರ್ಯಕರ್ತರು ಡಿಡಿಪಿಯು ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.