Tag: ಉಪತಹಶೀಲ್ದಾರ್

  • Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    ಗದಗ: ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಕೇಳಲು ಹೋದ ಯುವಕನ ಮೇಲೆ ಹಲ್ಲೆ ಮಾಡಿದ ಉಪತಹಶೀಲ್ದಾರ್‌ರನ್ನ(Deputy Tahsildar) ಅಮಾನತು ಮಾಡಲಾಗಿದೆ.

    ಮೇ 17ರಂದು ರಾತ್ರಿ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ(D T Valmiki), ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಸಹಚರರು ಒಟ್ಟಾಗಿ ಅಕ್ಷಯ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಅಕ್ಷಯ್ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಕಾರಿನಲ್ಲಿ ಬಂದ ಉಪತಹಶೀಲ್ದಾರ್ ಹಾಗೂ ಅವರ ಸಹಚರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿ ನ್ಯಾಯ ಕೇಳಲು ಹೋದ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗದ ಬೆಟಗೇರಿ ನಾಡಕಚೇರಿಯ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಆದೇಶಿಸಿದ್ದಾರೆ. ಇದನ್ನೂ ಓದಿ: ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಕರ್ನಾಟಕ ನಾಗರಿಕ ಸೇವಾ 1957ರ ನಿಯಮದಡಿ ಕಲ್ಪಿಸಿರುವ ಅವಕಾಶಗಳ ಮೇರೆಗೆ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಿದ್ದು, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ರಸ್ತೆ ದಾಟುವಾಗ ಬೈಕ್ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೇ ಉಪತಹಶೀಲ್ದಾರ್ ಸಾವು

    ರಸ್ತೆ ದಾಟುವಾಗ ಬೈಕ್ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೇ ಉಪತಹಶೀಲ್ದಾರ್ ಸಾವು

    ಮಂಡ್ಯ: ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಉಪತಹಶೀಲ್ದಾರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಪಟ್ಟಣದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬೀರೂರು ಮೂಲದ ಎನ್.ಟಿ.ಸುನೀಲ್ (55) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಏನಿತ್ತು?

    ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅ.19ರಂದು ರಾತ್ರಿ 9:30ಕ್ಕೆ ಕೊಳ್ಳೇಗಾಲ ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಬಳಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿತ್ತು.

    ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ  (Mysuru Private Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಅ.26) ಮೃತಪಟ್ಟಿದ್ದಾರೆ. ಸದ್ಯ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಹಣ ಇರುವ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ನಿರ್ವಾಹಕಿ

  • ನನ್ನ ಸಾವಿಗೆ ತಹಶೀಲ್ದಾರ್ ಕಾರಣ: ವಾಟ್ಸಪ್ ಮೆಸೇಜ್ ಮಾಡಿ ಉಪ ತಹಶೀಲ್ದಾರ್ ನಾಪತ್ತೆ

    ರಾಯಚೂರು: ಅನಧಿಕೃತ ಗೈರು ಹಾಜರಿ ಆರೋಪ ಸಾಬೀತು ಹಿನ್ನೆಲೆ ಸೇವೆಯಿಂದ ವಜಾಗೊಂಡಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ನಾಡಕಚೇರಿಯ ಉಪ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.

    ರಾಜೇಶ್ ದೇವಣಿ ಸೇವೆಯಿಂದ ವಜಾಗೊಂಡಿರುವ ಉಪ ತಹಶೀಲ್ದಾರ್. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಆದ್ರೆ ನನ್ನ ಸಾವಿಗೆ ತಹಶೀಲ್ದಾರ್ ಕಾರಣ ಅಂತ ಸಿಂಧನೂರು ತಹಶೀಲ್ದಾರ್ ಕಚೇರಿಯ ನೌಕರರ ವಾಟ್ಸಪ್ ಗ್ರೂಪ್‍ಗೆ ಮೆಸೇಜ್ ಹಾಕಿ ಈಗ ನಾಪತ್ತೆಯಾಗಿದ್ದಾರೆ.

    ಸದ್ಯ ರಾಜೇಶ್ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. 2013-14 ರಲ್ಲಿ ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಕೊಹಿಸೂರಿನಲ್ಲಿ ಉಪತಹಶೀಲ್ದಾರ್ ಆಗಿದ್ದ ರಾಜೇಶ್ ದೇವಣಿ ಸತತ ಅನಧಿಕೃತ ಗೈರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವಿಚಾರಣೆ ನಡೆಸಿತ್ತು. ಆದ್ರೆ ರಾಜೇಶ್ ವಿಚಾರಣೆಗೂ ಗೈರುಹಾಜರಾಗಿದ್ದರು. ಇದರಿಂದಾಗಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಸೇವೆಯಿಂದ ರಾಜೇಶ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಫೆಬ್ರವರಿ 7 ರಂದು ಆದೇಶ ಪ್ರತಿ ಕೈಗೆ ಸಿಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜೇಶ್ ವಾಟ್ಸಪ್ ಸಂದೇಶ್ ಕಳುಹಿಸಿ ನಾಪತ್ತೆಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸಿಂಧನೂರು ತಹಶೀಲ್ದಾರ್ ಶಂಕರಪ್ಪ, ವಾಟ್ಸಪ್ ಸಂದೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಬೀದರ್ ಜಿಲ್ಲೆಯಲ್ಲಿ ನಡೆದ ಇಲಾಖೆ ವಿಚಾರಣೆಯಿಂದ ವಜಾಗೊಂಡಿದ್ದಾರೆ. ವಾಟ್ಸಪ್ ಕಳುಹಿಸಿದ್ದಾರೆ ಎನ್ನಲಾದ ಆತ್ಮಹತ್ಯೆ ಸಂದೇಶವನ್ನೂ ನಾನು ನೋಡಿಲ್ಲ ಎಂದು ತಿಳಿಸಿದ್ದಾರೆ.