Tag: ಉಪಗ್ರಹ

  • 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್

    750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್

    ನವದೆಹಲಿ: ಭಾರತ ತನ್ನ 75 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗಿದೆ. ಈ ವಿಶೇಷ ಸಂದರ್ಭವನ್ನು ಗುರುತಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ನಿರ್ಮಿಸಿರುವ ಉಪಗ್ರಹವನ್ನು ಉಡಾವಣೆ ಮಾಡಲಿದೆ.

    ಇಸ್ರೋ ತನ್ನ SSLV-D1/EOS-02 ಕಾರ್ಯಾಚರಣೆಯನ್ನು ಆಗಸ್ಟ್ 7 ರಂದು ಭಾನುವಾರ ಬೆಳಗ್ಗೆ 9:18 ಕ್ಕೆ ಪ್ರಾರಂಭಿಸಲಿದೆ. ಆಜಾದಿಸ್ಯಾಟ್(AzadiSAT) ಹೆಸರಿನ ಉಪಗ್ರಹ ಇಸ್ರೋವಿನ ಸಣ್ಣ ಉಪಗ್ರಹ ಉಡಾವಣಾ ವಾಹನದ(ಎಸ್‌ಎಸ್‌ಎಲ್‌ವಿ) ಮೂಲಕ ನಭಕ್ಕೆ ಚಿಮ್ಮಲಿದೆ.

    ಏನಿದರ ವಿಶೇಷತೆ?
    6 ತಿಂಗಳ ಅವಧಿಯ ಈ ಯೋಜನೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಒಂದು ಭಾಗವಾಗಿದೆ. ಈ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ(SDSC) ಉಡಾವಣೆಯಾಗಲಿದೆ. 8 ಕೆಜಿ ತೂಕದ ಉಪಗ್ರಹ ಹಲವು ಪ್ರಯೋಗಗಳನ್ನು ಹೊಂದಿದೆ. ತನ್ನದೇ ಆದ ಸೌರ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಸೆಲ್ಫಿ ಕ್ಯಾಮೆರಾಗಳು ಮತ್ತು ದೀರ್ಘ ಶ್ರೇಣಿಯ ಸಂವಹನ ಟ್ರಾನ್ಸ್ಪಾಂಡರ್‌ಗಳನ್ನು ಹೊಂದಿದೆ. ಇದನ್ನೂ ಓದಿ: ನಾಳೆ ಉಡುಪಿ, ದ. ಕನ್ನಡ, ಉ.ಕನ್ನಡ ಕೊಡಗು, ಚಿಕ್ಕಮಗಳೂರಿಗೆ ರೆಡ್‌ ಅಲರ್ಟ್‌ ಜಾರಿ: ಎಷ್ಟು ಮಳೆಯಾಗಬಹುದು?

    ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳಲ್ಲಿ ವಿದ್ಯಾರ್ಥಿನಿಯರಿಗೆ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಕಲಿಕೆಗೆ ಉತ್ತೇಜನ ನೀಡಲು ಈ ಯೋಜನೆಯನ್ನು ಮಾಡಲಾಗಿದೆ. ಮಾತ್ರವಲ್ಲದೇ ಕೇವಲ ಮಹಿಳೆಯರೇ ಸೇರಿ ತಯಾರಿಸಿರುವ ಮೊದಲ ಉಪಗ್ರಹವೂ ಇದಾಗಿದೆ.

    ಭೂಮಿ ಹಾಗೂ ಪರಿಸರದ ಅಧ್ಯಯನಗಳು, ಅರಣ್ಯ, ಜಲವಿಜ್ಞಾನ, ಕೃಷಿ, ಮಣ್ಣು ಹಾಗೂ ಕರಾವಳಿ ಭಾಗಗಳ ಉಷ್ಣ ವೈಪರೀತ್ಯಗಳ ಬಗ್ಗೆ ಇದು ಮಾಹಿತಿಯನ್ನು ಒದಗಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ರಾಜಾಹುಲಿ ನೀಡಿದ ಫಸ್ಟ್ ರಿಪೋರ್ಟ್ ರಿವೀಲ್ – ಸಿದ್ದರಾಮೋತ್ಸವ ಎಫೆಕ್ಟ್!

    Live Tv
    [brid partner=56869869 player=32851 video=960834 autoplay=true]

  • ಬಾಹ್ಯಾಕಾಶದಿಂದ ನೆಲಕ್ಕೆ ಅಪ್ಪಳಿಸಿದ ಲೋಹದ ಚೆಂಡುಗಳು – ಮೂರು ಗ್ರಾಮದಲ್ಲಿ ಕಂಪನ

    ಬಾಹ್ಯಾಕಾಶದಿಂದ ನೆಲಕ್ಕೆ ಅಪ್ಪಳಿಸಿದ ಲೋಹದ ಚೆಂಡುಗಳು – ಮೂರು ಗ್ರಾಮದಲ್ಲಿ ಕಂಪನ

    ಗಾಂಧಿನಗರ: ಬಾಹ್ಯಾಕಾಶದಿಂದ ಚೆಂಡಿನಾಕಾರದ ಕಪ್ಪು ಲೋಹದ ವಸ್ತುವೊಂದು ನೆಲಕ್ಕೆ ಅಪ್ಪಳಿಸಿದ್ದು, ಗುಜರಾತ್‌ನ ಆನಂದ್ ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಲೋಹದ ವಸ್ತು ಬಿದ್ದ ರಭಸಕ್ಕೆ ಇಲ್ಲಿನ 3 ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಶಬ್ಧದಿಂದ ಉಂಟಾದ ಭಯಕ್ಕೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.

    SPACE BALL 2

    ಈ ಕುರಿತು ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿದ್ದು ಅವರು, ಸ್ಥಳದಲ್ಲಿ ಬಿದ್ದ ವಸ್ತುವನ್ನು ಉಲ್ಕಾಶಿಲೆ (ಉಪಗ್ರಹದ ಅವಶೇಷ) ಎಂದು ಶಂಕಿಸಿದ್ದಾರೆ. ಈ ಲೋಹದ ವಸ್ತುವನ್ನು ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹದ ಆವೇಗವನ್ನು ಕಾಪಾಡಿಕೊಳ್ಳಲು ಬಳಸುವ ಬಾಲ್ ಬೇರಿಂಗ್‌ಗಳು ಎಂದು ತೋರುತ್ತದೆ. ಇದನ್ನೂ ಓದಿ: ಇಂದು 156 ಕೇಸ್ – ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

    ಆನಂದನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಾಜಿಯನ್ ಈ ಕುರಿತು ಮಾಹಿತಿ ನೀಡಿದ್ದು, ಬಾಹ್ಯಾಕಾಶದಿಂದ ನೆಲಕ್ಕೆ ಚೆಂಡಿನಂತಹ ವಸ್ತುಗಳು ಅಪ್ಪಳಿಸಿದ್ದು, ಗ್ರಾಮಸ್ಥರಿಗೆ ಭೂಕಂಪದ ಭೀತಿ ಆವರಿಸಿತ್ತು. ನಿನ್ನೆ ಸಂಜೆ 4:45ರ ಸುಮಾರಿಗೆ, 5 ಕೆಜಿ ತೂಕದ ಮೊದಲ ದೊಡ್ಡ ಕಪ್ಪು ಲೋಹದ ಚೆಂಡು ಭಲೇಜ್‌ನಲ್ಲಿ ಬಿದ್ದಿತು ಮತ್ತು ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಬಿದ್ದಿತು. 3 ಸ್ಥಳಗಳು ಪರಸ್ಪರ 15 ಕಿಲೋಮೀಟರ್ ಪರಿಮಿತಿಯಲ್ಲಿದೆ. ಲೋಹದ ಚೆಂಡುಗಳು ಉಪಗ್ರಹಗಳ ಅವಶೇಷಗಳೆಂದು ತಜ್ಞರು ಶಂಕಿಸಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

    Space ball (1)

    ಮೊದಲ ಲೋಹದ ಚೆಂಡು ಸಂಜೆ 4.45 ರ ಸುಮಾರಿಗೆ ಬಿದ್ದಿತು. ಇದಾದ ಸ್ವಲ್ಪ ಸಮಯದಲ್ಲೇ ಬೇರೆ ಬೇರೆ ಸ್ಥಳಗಳಲ್ಲಿ ಇನ್ನೂ ಎರಡು ಚೆಂಡುಗಳು ಬಿದ್ದಿರುವುದು ತಿಳಿದು ಬಂದಿತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಒಂದು ಗ್ರಾಮದಲ್ಲಿ ಮನೆಗಳಿಂದ ದೂರ ಬಿದ್ದಿದ್ದರೆ, ಉಳಿದ ಎರಡರಲ್ಲಿ ತೆರೆದ ಪ್ರದೇಶದಲ್ಲಿ ಬಿದ್ದಿವೆ. ಇದು ಯಾವ ರೀತಿಯ ಬಾಹ್ಯಾಕಾಶ ಅವಶೇಷ ಎಂದು ನಮಗೆ ಖಚಿತವಾಗಿಲ್ಲ. ಆದರೆ ಗ್ರಾಮಸ್ಥರ ಪ್ರಕಾರ ಆಕಾಶದಿಂದ ಬಿದ್ದಿವೆ ಎಂದು ಕೇಳಿಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ವಸ್ತುಗಳನ್ನು ಗುರುತಿಸಲು ನಾವು ಅಹಮದಾಬಾದ್ ಮತ್ತು ಗಾಂಧಿನಗರದಿಂದ ವಿಧಿವಿಜ್ಞಾನ ತಜ್ಞರನ್ನು ಕರೆಸಿದ್ದೇವೆ ಎಂದು ರಾಜಯಾನ್ ಹೇಳಿದ್ದಾರೆ.

    ನಿಗೂಢ ಘಟನೆ ಹಿಂದೆಯೂ ನಡೆದಿತ್ತು: ವರದಿಗಳ ಪ್ರಕಾರ ಇಲ್ಲಿ ಹಿಂದೆಯೂ ಇಂತಹ ನಿಗೂಢ ಘಟನೆಗಳು ನಡೆದಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ `ಉಲ್ಕಾಶಿಲೆ’ ಆಕಾಶದಲ್ಲಿ ಕಾಣಿಸಿಕೊಂಡ ನಂತರ ಇದೇ ರೀತಿಯ ಘಟನೆ ಸಂಭವಿಸಿತ್ತು. ಏರೋಪ್ಲೇನ್‌ನಂತೆ ಸದ್ದು ಮಾಡಿದ ಶಬ್ದದ ನಂತರ ದೊಡ್ಡ ಸ್ಫೋಟ ಸಂಭವಿಸಿತ್ತು. ಆ ಉತ್ಕಾಶಿಲೆಯನ್ನು ನ್ಯೂಜಿಲೆಂಡ್‌ನಿಂದ ಉಡಾವಣೆಯಾದ ಉಪಗ್ರಹದ ತುಣುಕುಗಳು ಎಂದು ಮೂಲಗಳು ಖಚಿತಪಡಿಸಿದ್ದವು.

  • ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ  ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

    ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

    ಚಿಕ್ಕಮಗಳೂರು: ಅಮೆರಿಕದ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಶಕುಂತಲಾ ಎಂಬ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಆದರೆ, ಈ ಸಾಧನೆಗೆ ಕಾರಣವಾಗಿರುವುದೂ ಒಬ್ಬ ಮುಸ್ಲಿಂ ಯುವಕ.

    ಹೌದು. ಭಾರತ ದೇಶಾದ್ಯಂತ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಬಿತ್ತುವ ಘಟನೆಗಳು ನಡೆಯುತ್ತಿರುವ ನಡುವೆ ಮುಸ್ಲಿಂ ಯುವಕನ ಈ ಸಾಧನೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ  

    SPACE

    ಆಲ್ದೂರಿನ ಶಂಕುತಲಾ ಅಂದರೆ ಈ ಉಪಗ್ರಹದ ಕೇಂದ್ರ ಬಿಂದುವೇ ಆಲ್ದೂರು ಗ್ರಾಮದ ಯುವಕ ಅವೇಜ್ ಅಹಮ್ಮದ್. ಮೂಲತಃ ಚಿಕ್ಕಮಗಳೂರಿನ ಆಲ್ದೂರಿನವರೇ ಆದ ಅವೇಜ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ತಂದೆ ನದೀಪ್ ಅಹಮದ್ ತಮ್ಮದೇ ಮೆಡಿಕಲ್ ಸ್ಟೋರ್ ಇಟ್ಟುಕೊಂಡು ಕುಟುಂಬ ನಡೆಸುತ್ತಿದ್ದಾರೆ.

    ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೇಜ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಇಂದು ತನ್ನ ಬಯಕೆಯಂತೆ 24ನೇ ವಯಸ್ಸಿಗೇ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾನೆ. ಆನಂತರ ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿ ಇಂದು ಏರೋಸ್ಪೇಸ್‌ ಪಿಕ್ಸೆಲ್‌ ಹೆಸರಿನಲ್ಲಿ  ಉಪಗ್ರಹ ತಯಾರಿಕಾ ಸ್ವಂತ ಕಂಪನಿ ಕೂಡ ಆರಂಭಿಸಿದ್ದಾರೆ. ತನ್ನ 24ನೇ ವಯಸ್ಸಿಗೆ ಕಡಲ ದಾಟಿ ಅಮೆರಿಕಾದಲ್ಲಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಇದನ್ನೂ ಓದಿ: 22 ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ ಭಾರತ

    SPACE 3

    ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಶಕುಂತಲಾ ಎಂಬ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾರೆ. ಅವೇಜ್ ಅವರ ಈ ಉಪಗ್ರಹವು ಬೇರೆಲ್ಲಾ ಉಪಗ್ರಹಗಳಿಗಿಣದ ಶೇ.50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆ ಮಾಡುತ್ತದೆ. ಭೂಮಿಯ ಚಲನವಲನದ ಫೊಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.

    ಈ ಮೊದಲು ರಷ್ಯಾದಿಂದ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದ ಅವೇಜ್ ಅಹಮ್ಮದ್ ತನ್ನ ಕನಸಿನ ಯೋಜನೆಯನ್ನು ಪ್ರಧಾನಿ ಮುಂದೆ ಹೇಳಿಕೊಂಡಿದ್ದರು. ಇವರ ಮಾತನ್ನ ಆಲಿಸಿದ ಪ್ರಧಾನಿ, ಮೊದಲ ಉಪಗ್ರಹವನ್ನ ನಮ್ಮ ದೇಶದ ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿರುವ ಇಸ್ರೋದಿಂದಲೇ ಹಾರಿಸುವಂತೆ ಸಲಹೆ ನೀಡಿದ್ದರು. ಅದರಂತೆಯೇ ಇಸ್ರೋದಿಂದಲೇ ಬಾಹ್ಯಾಕಾಶ ಸೇರಲು ಮೊದಲ ಉಪಗ್ರಹ ರೆಡಿಯಾಗಿತ್ತು. ಆದರೆ ಸಮಯ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈ ಮಧ್ಯೆ ಅವೇಜ್ ಅಹ್ಮದ್ ಅವರು 2ನೇ ಉಪಗ್ರಹವನ್ನ ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್

    24ನೇ ವಯಸ್ಸಿಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಯುವಕನಿಗೆ ಎಲ್ಲೆಡೆ ಪ್ರಶಂಸೆಯ ಮಹಪೂರವೇ ಹರಿದುಬರುತ್ತಿದೆ. ಅವೇಜ್ ಓದಿದ ಶಾಲೆಯ ಶಿಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಭವಿಷ್ಯಕ್ಕೆ ಶುಭ ಕೋರಿದ್ದಾರೆ.

  • ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ಬೆಂಗಳೂರಿನ 20 ಸರಕಾರಿ ಶಾಲೆಯ 100 ಮಕ್ಕಳು ಸೇರಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಉಪಗ್ರಹ ತಯಾರಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಹೆಸರಿನ ಈ ಉಪಗ್ರಹ ಉಡಾವಣೆಗೆ ಸ್ವತಃ ರಾಜ್ಯ ಸರ್ಕಾರ ಮುಂದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಈ ಮಹತ್ವದ ನಿರ್ಧಾರವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ಘೋಷಣೆ ಮಾಡಿದ್ದಾರೆ. ಉಪಗ್ರಹ ಉಡಾವಣೆ ಯೋಜನೆಗೆ ಸಚಿವರೇ ಚಾಲನೆ ನೀಡಿದ್ದಾರೆ. ಇದನ್ನೂ ಓದಿ : ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ

    ಸ್ವಾತಂತ್ರ್ಯ ಬಂದು 75 ವರ್ಷ ಆಗುತ್ತಿರೋ ಹಿನ್ನೆಲೆಯಲ್ಲಿ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ 75 ಉಪಗ್ರಹಗಳನ್ನ ಉಡಾವಣೆ ಮಾಡುತ್ತಿದೆ. ಇದರಲ್ಲಿ ಒಂದು ಉಪಗ್ರಹವನ್ನು ರಾಜ್ಯ ಸರ್ಕಾರದ ಸಹಕಾರದಲ್ಲಿ ಕರ್ನಾಟಕ ಸರ್ಕಾರಿ  ಶಾಲಾ ವಿದ್ಯಾರ್ಥಿಗಳು ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ವಿದ್ಯಾರ್ಥಿಗಳು ನಿರ್ಮಾಣ ಮಾಡುತ್ತಿರೋ ಉಪಗ್ರಹಕ್ಕೆ ಪುನೀತ್ ರಾಜ್ ಕುಮಾರ್ ಉಪಗ್ರಹ ಅಂತ ಹೆಸರು ಇಡಲಾಗಿದೆ. ಇದನ್ನೂ ಓದಿ : ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ಉಪಗ್ರಹ ತಯಾರಿಕೆಗಾಗಿ ಬೆಂಗಳೂರಿನ ಸರಕಾರಿ ಶಾಲೆಯ 100 ವಿದ್ಯಾರ್ಥಿಗಳ ಆಯ್ಕೆ ಕೂಡ ವಿಶೇಷವಾಗಿದೆ. ಈ  ವಿದ್ಯಾರ್ಥಿಗಳನ್ನ ವಿವಿಧ ಸ್ಪರ್ಧೆಗಳು, ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ಜೊತೆಗೂ ಉಪಗ್ರಹ ನಿರ್ಮಾಣ ಮಾಡಲಿದ್ದಾರೆ.  ಇದನ್ನೂ ಓದಿ : ನಿಜ ಜೀವನದಲ್ಲಿಯೂ ಹೀರೋಯಿನ್ ಆದ ಶ್ವೇತಾ ಶ್ರೀವಾತ್ಸವ್.

    ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ಹಣ ಖರ್ಚು ಆಗಲಿದ್ದು, ಸುಮಾರು 1.5 ಕೆಜಿ ಉಪಗ್ರಹದ ತೂಕ ಇರಲಿದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಉಪಗ್ರಹ ನಿರ್ಮಾಣ ಕಾರ್ಯ ಮುಕ್ತಾಯ ಅಗಲಿದೆ. ನಂತರ ಉಡಾವಣೆಗೆ ದಿನಾಂಕ ನಿಗಧಿಯಾಗಲಿದೆಯಂತೆ.

  • ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

    ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

    ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ಮುಂಜಾನೆ ಭೂ ವೀಕ್ಷಣಾ ಉಪಗ್ರಹ ಸಿ52 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ 5:59ಕ್ಕೆ ಸರಿಯಾಗಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ) ರಾಕೆಟ್ ಮೂಲಕ ಉಪಗ್ರಹವನ್ನು ಹಾರಿಸಲಾಗಿದೆ. EOS-04 ಜೊತೆ 2 ಸಣ್ಣ ಉಪಗ್ರಹವನ್ನು ರಾಕೆಟ್ ಕಕ್ಷೆಗೆ ಕೊಂಡೊಯ್ದಿದೆ. ಇದು 2022ರ ಇಸ್ರೋವಿನ ಮೊದಲ ಕಾರ್ಯಾಚರಣೆಯಾಗಿದೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್

    EOS-04 ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು ಕೃಷಿ, ಅರಣ್ಯ, ತೋಟಗಳು, ಮಣ್ಣಿನ ತೇವಾಂಶ, ಜಲವಿಜ್ಞಾನ ಹಾಗೂ ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಶನ್‌ಗಳಿಗೆ ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯುವಂತೆ ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ

    EOS-04 ಉಪಗ್ರಹದೊಂದಿಗೆ ಎರಡು ಚಿಕ್ಕ ಉಪಗ್ರಹಗಳನ್ನು ಉಡಾಯಿಸಿದ್ದು, ಇದನ್ನು ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. INSPIREsat-1 ಎಂದು ಕರೆಯಲಾಗುವ ಉಪಗ್ರಹ 8.1 ಕೆಜಿ ತೂಕವಿದೆ. ಇದು ಸೂರ್ಯನ ಶಾಖದ ಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಲಿದ್ದು, ಇದರ ಜೀವಿತಾವಧಿ 1 ವರ್ಷ ಇರಲಿದೆ.

  • ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ವಾಷಿಂಗ್ಟನ್: ಸ್ಟಾರ್‌ಲಿಂಕ್ ಕಂಪನಿ ಅಗ್ಗದ ಇಂಟರ್‍ನೆಟ್ ಒದಗಿಸುವ ನಿಟ್ಟಿನಲ್ಲಿ ಉಡಾಯಿಸಿದ್ದ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ ಎಂದು ಕಂಪನಿ ತಿಳಿಸಿದೆ.

    ವಿಶ್ವದ ಶ್ರೀಮಂತ ಎಲೋನ್ ಮಸ್ಕ್‍ನ ಸ್ಪೇಸ್‍ಎಕ್ಸ್ ಸ್ಟಾರ್‍ಲಿಂಕ್‍ನ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ. ಇವುಗಳನ್ನು ಕಳೆದ ವಾರ ಉಡಾವಣೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್

    ಬಿರುಗಾಳಿಯ ತೀವ್ರತೆ ಹೆಚ್ಚಿದ್ದ ಕಾರಣ ವಾತಾವರಣದ ಸೆಳೆತವನ್ನು ತಡೆಯಲಾರದೇ ಉಪಗ್ರಹಗಳು ಹಾಳಾಗಿವೆ. ಸ್ಟಾರ್‍ಲಿಂಕ್ ತಂಡ ಉಪಗ್ರಹಗಳನ್ನು ರಕ್ಷಿಸಲು ಸುರಕ್ಷಿತ ಮೋಡ್‍ಗೆ ಚಾಲನೆ ನೀಡಿತ್ತು ಎಂದಿದೆ.

    ಈಗಾಗಲೇ ಸ್ಪೇಸ್‍ಎಕ್ಸ್ 2,000 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾಗಿದೆ. ಪ್ರಪಂಚದ ವಿವಿಧ ಭಾಗಗಳಿಗೆ ಅಗ್ಗದ ಇಂಟರ್‍ನೆಟ್ ಸೇವೆ ಒದಗಿಸಲು 12,000 ಉಪಗ್ರಹಗಳನ್ನು ಹಾರಿಸುವ ಯೋಜನೆ ಮಾಡಿದೆ. ಇದನ್ನೂ ಓದಿ: ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಉಪಗ್ರಹಗಳು ಹಾಳಾದರೂ ಅದರ ಭಾಗಗಳು ಭೂಮಿಗೆ ಅಪ್ಪಳಿಸುವ ಭೀತಿ ಇಲ್ಲ. ಏಕೆಂದರೆ ಅವು ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದಲ್ಲಿ ಅವುಗಳ ರೂಪ ಅವನತಿ ಹೊಂದುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

  • ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

    ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

    ನಿನ್ನೆ ರಾತ್ರಿ ಕರ್ನಾಟಕದ ಹಲವೆಡೆ ಆಗಸದಲ್ಲಿ ಅಚ್ಚರಿ ಕಾಣಿಸಿತ್ತು. ಉಡುಪಿ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಗೋಚರಿಸಿದ ಈ ವಿಚಿತ್ರ ಏನು ಎಂಬುದರ ಬಗ್ಗೆ ಹಲವರು ಗೊಂದಲಕ್ಕೊಳಗಾಗಿದ್ದಾರೆ.

    ಇದು ನಕ್ಷತ್ರ ಸಾಲುಗಳಲ್ಲ. ಬದಲಿಗೆ ಅಮೆರಿಕ ಉಡಾಯಿಸಿದ ಉಪಗ್ರಹಗಳ ಸಾಲು. ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಉಡಾಯಿಸಿದ್ದ ಉಪಗ್ರಹಗಳು ಭಾರತದಲ್ಲಿ ಹಲವೆಡೆ ಕಣ್ಣಿಗೆ ಕಾಣಿಸಿದ್ದು, ಜನರು ಆಶ್ಚರ್ಯಪಟ್ಟಿದ್ದಾರೆ.

    ಏನು ಈ ನಕ್ಷತ್ರ ಸಾಲುಗಳು?
    ಇದು ಡಿಸೆಂಬರ್ 18ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಈ ಉಪಗ್ರಹಗಳನ್ನು ಉಡವಾಣೆ ಮಾಡಲಾಗಿತ್ತು. ಸ್ಪೇಸ್ ಎಕ್ಸ್‌ನ 34ನೇ ಉಡಾವಣೆಯಲ್ಲಿ ಒಟ್ಟು 57 ಉಪಗ್ರಹಗಳು ಹಾರಿಸಲಾಗಿತ್ತು. ಇದನ್ನೂ ಓದಿ: ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

    ಏನು ಇದರ ಉದ್ದೇಶ?
    ಇಂಟರ್‌ನೆಟ್‌ ಸೇವೆ ಒದಗಿಸುವ ಉದ್ದೇಶದಿಂದ ಸ್ಪೇಸ್ ಎಕ್ಸ್ ಕಂಪನಿ ಈ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಒಟ್ಟು 12 ಸಾವಿರ ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವಾದ್ಯಂತ ಇಂಟರ್‌ನೆಟ್‌ ಅನ್ನು ಕಡಿಮೆ ಬೆಲೆಗೆ ನೀಡುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಈಗಾಗಲೇ 1,465 ಉಪಗ್ರಹಗಳನ್ನು ಹಾರಿಸಿದ್ದಾರೆ.

    ಎಷ್ಟು ದೂರದಲ್ಲಿ ಈ ಉಪಗ್ರಹಗಳು ಹಾರಾಡುತ್ತಿದೆ?
    ಈ ಉಪಗ್ರಹಗಳು ಭೂಮಿಯಿಂದ ಬಹಳ ಎತ್ತರದ ಕಕ್ಷೆಯಲ್ಲಿಲ್ಲ. ಸ್ಟಾರ್ ಲಿಂಕ್ ನಕ್ಷತ್ರಗಳು ಭೂಮಿಯಿಂದ 540 ಕಿ.ಮೀ. ದೂರದಲ್ಲಿ ಹಾದು ಹೋಗುತ್ತಿದೆ. ಹೀಗಾಗಿ ಇದು ನಕ್ಷತ್ರ ರೀತಿಯಲ್ಲಿ ಗೋಚರಿಸುತ್ತಿದೆ. ಇದನ್ನೂ ಓದಿ: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ತಂತ್ರಗಾರಿಕಾ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಕ್ಸಸ್

    ಇವುಗಳಲ್ಲಿ ಬೆಳಕು ಹೇಗೆ?
    ಭೂಮಿಯಿಂದ ಎತ್ತರದಲ್ಲಿರುವ ಉಪಗ್ರಹಗಳ ಮೇಲೆ ಅಳವಡಿಸಲಾಗಿರುವ ಸೌರ ಫಲಕಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದು ಪ್ರತಿಫಲನಗೊಂಡು ನಕ್ಷತ್ರದಂತೆ ಕಾಣಿಸುತ್ತಿವೆ.

    ಬೇರೆ ಬೇರೆ ಸಮಯದಲ್ಲಿ ಯಾಕೆ ಕಾಣಿಸಿಕೊಳ್ಳುತ್ತದೆ?
    ಇದು ಕರ್ನಾಟಕದ ಮೇಲೆ ಸೋಮವಾರ ಸಂಜೆ ಹಾದು ಹೋಗಿದ್ದರಿಂದ ನಮಗೆ ಗೋಚರವಾಗಿದೆ. ಸೋಮವಾರ ಇದು ಅರಬ್ಬಿ ಸಮುದ್ರದ ಮೇಲೆ ಹಾದು ಹೋಗಿದ್ದರಿಂದ ಪಶ್ಚಿಮ ಭಾಗದಲ್ಲಿ ಕಾಣಿಸಿದೆ. ಎರಡು ದಿನಗಳ ಹಿಂದೆ ದಕ್ಷಿಣ ಭಾರತದಲ್ಲಿ ಕಾಣಿಸಿದರ ಬಗ್ಗೆ ವರದಿಗಳಾಗಿವೆ. ಹೀಗಾಗಿ ಅದು ಕೆಲವೊಂದು ನಿರ್ಧಿಷ್ಟ ಪ್ರದೇಶದಲ್ಲಿ ಮಾತ್ರವೇ ಕಾಣಿಸುತ್ತದೆ.

    ಕೆಲವೆಡೆ ಸ್ಪಷ್ಟವಾಗಿ ಹಾಗೂ ಕೆಲವೆಡೆ ಅಸ್ಪಷ್ಟವಾಗಿ ಕಾಣಿಸಲು ಕಾರಣ ಏನು?
    ವಾತಾವರಣ ಶುದ್ಧವಾಗಿದ್ದರೆ, ಆಕಾಶದಲ್ಲಿ ಮೋಡ ಇಲ್ಲವಾದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಯೇ ಸೂರ್ಯನ ಪ್ರತಿಫಲನದಿಂದಾಗಿ ಅದು ನಮಗೆ ಗೋಚರವಾಗುವುದರಿಂದ ವ್ಯತ್ಯಾಸಗಳು ಕಂಡುಬರುತ್ತದೆ.

    ಉಪಗ್ರಹಗಳು ಸರದಿ ಸಾಲಿನಲ್ಲಿ ಹೋಗಲು ಕಾರಣವೇನು?
    ಸ್ಟಾರ್‌ಲಿಂಕ್‌ ಸಂಸ್ಥೆ ಉಪಗ್ರಹಗಳನ್ನು ಗುಂಪಿನಲ್ಲಿ ಬಿಡುಗಡೆ ಮಾಡುತ್ತಿದೆ. ಇದು ಒಂದೆರಡು ದಿನಗಳ ವರೆಗೆ ನಮಗೆ ಸಾಲಿನಲ್ಲಿಯೇ ತೋರುತ್ತದೆ. ನಂತರದಲ್ಲಿ ಇವುಗಳಿಗೆ ಒದಗಿಸಿದ ಕೋಡ್‍ಗಳ ಪ್ರಕಾರ ಅವುಗಳ ಜಾಗವನ್ನು ಸೇರಿಕೊಂಡು ಕಕ್ಷೆಯಲ್ಲಿ ಸುತ್ತುತ್ತಿರುತ್ತದೆ. ಇದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

    ಇಂದು ಆಕಾಶದ ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ?
    ಸೋಮವಾರ ಇದು ಪಶ್ಚಿಮ ದಿಗಂತಕ್ಕಿತಂಲೂ ಸ್ವಲ್ಪ ಮೇಲೆ ಕಾಣಿಸಿಕೊಂಡಿತ್ತು. ಮಂಗಳವಾರ ಪಶ್ಚಿಮ ದಿಗಂತದ ಬಳಿಯಲ್ಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ ಶುಕ್ರ ಗ್ರಹದ ಬಳಿಯಲ್ಲೇ ಹಾದು ಹೋಗುವ ಸಾಧ್ಯತೆ ಇದೆ. ಇಂದು ಇದು ಕೊನೆಯದಾಗಿ ಕಾಣಿಸಿಕೊಳ್ಳಲಿದ್ದು, ನಾಳೆ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.

    ಕಡಿಮೆ ಬೆಲೆಗೆ ಇಂಟರ್‌ನೆಟ್‌ ಸಿಗುತ್ತಾ?
    ಭಾರತದಲ್ಲಿ ಇನ್ನೂ ಈ ಸೇವೆಗೆ ಭಾರತ ಸರ್ಕಾರ ಅನುಮತಿ ನೀಡಿಲ್ಲ. ಈಗ ಪ್ರಯೋಗಗಳು ನಡೆಯುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ಪ್ರಕಾರ ತಿಂಗಳಿಗೆ 7,425 ರೂ. ದರ ನಿಗದಿಯಾಗುವ ಸಾಧ್ಯತೆಯಿದೆ. ಈಗ ಮೊಬೈಲ್‌ ಟವರ್‌, ಸಮುದ್ರದ ಆಳದಲ್ಲಿ ಹಾಕಲಾದ ಕೇಬಲ್‌ ಮೂಲಕ ಇಂಟರ್‌ನೆಟ್‌ ಸಂಪರ್ಕ ಸಿಗುತ್ತದೆ. ಆದರೆ ದೂರದ ಪ್ರದೇಶ, ಬೆಟ್ಟಗುಡ್ಡಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಈಗಲೂ ಅಲಭ್ಯವಾಗಿದೆ. ಉಪಗ್ರಹ ಆಧಾರಿತ ಈ ಇಂಟರ್‌ನೆಟ್‌ ಸಂಪರ್ಕ ಪಡೆದರೆ ಈ ಪ್ರದೇಶದಲ್ಲೂ ಇಂಟರ್‌ನೆಟ್‌ ಸಂಪರ್ಕವನ್ನು ಪಡೆಯಬಹುದು. ಇದನ್ನೂ ಓದಿ: ಪಿ. ವಿ ಸಿಂಧುಗೆ BWF ಗೌರವ

    ಮನೆಗೆ ಹೇಗೆ ಇಂಟರ್‌ನೆಟ್‌ ಬರುತ್ತೆ?
    ಡಿಟಿಎಚ್‌ ಮೂಲಕ ಹೇಗೆ ವಾಹನಿಗಳನ್ನು ವೀಕ್ಷಿಸಲಾಗುತ್ತದೋ ಅದೇ ರೀತಿಯ ಸ್ಟಾರ್‌ ಲಿಂಕ್‌ ಇಂಟರ್‌ನೆಟ್‌ ಪಡೆಯಲು ಮನೆಯ ಹೊರ ಭಾಗದಲ್ಲಿ ಒಂದು ಡಿಶ್‌ ಆಳವಡಿಸಬೇಕಾಗುತ್ತದೆ. ಈ ಡಿಶ್‌ ಜೊತೆಗೆ ವೈಫ್‌ ರೂಟರ್‌ ಸಹ ಬರುತ್ತದೆ. ಈ ಮೂಲಕ ಇಂಟರ್‌ನೆಟ್‌ ಸಂಪರ್ಕ ಪಡೆಯಬಹುದು. ಈಗಾಗಲೇ ಅಮೆರಿಕ, ಕೆನಡಾದಲ್ಲಿ ಜನ ಈ ಸೇವೆಯನ್ನು ಬಳಸುತ್ತಿದ್ದಾರೆ.

  • ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಮೊದಲ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಿದೆ.

    ತನ್ನ ಪಿಎಸ್‌ಎಲ್‌ವಿ 51 ರಾಕೆಟ್‌ ಮೂಲಕ ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಶ್ರೀಹರಿಕೋಟದಲ್ಲಿರುವ ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:30ಕ್ಕೆ ಉಡಾವಣೆ ಮಾಡಲಾಯಿತು.

    ಒಟ್ಟು 20 ಉಪಗ್ರಹಗಳನ್ನು ಇಂದು ಉಡಾವಣೆ ಮಾಡಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ 2 ಉಪಗ್ರಹಗಳ ಉಡಾವಣೆಯನ್ನು ಕಳೆದ ವಾರ ರದ್ದು ಮಾಡಲಾಗಿತ್ತು.

    ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರು ಇರುವ ಉಪಗ್ರಹವನ್ನು ಇಂದು ಕಳುಹಿಸಲಾಯಿತು.

    ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹ 637 ಕೆಜಿ ತೂಕವನ್ನು ಹೊಂದಿದ್ದು, ಇದು ಬ್ರೆಜಿಲ್‌ ವ್ಯಾಪ್ತಿಯಲ್ಲಿರುವ ಅಮೆಜಾನ್‌ ಪ್ರದೇಶದ ಅರಣ್ಯ ನಾಶದ ಬಗ್ಗೆ ಮಾಹಿತಿ ನೀಡಲಿದೆ.

    ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್  ಉಡಾವಣೆಗೂ ಮೊದಲು ತಿಳಿಸಿದ್ದರು.  ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ, 25 ಸಾವಿರ ದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

    ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

    ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • ಉಪಗ್ರಹ ಆಧಾರಿತ ಸ್ಮಾರ್ಟ್‌ ಗನ್‌ನಿಂದ ಇರಾನ್‌ ಅಣು ವಿಜ್ಞಾನಿ ಹತ್ಯೆ

    ಉಪಗ್ರಹ ಆಧಾರಿತ ಸ್ಮಾರ್ಟ್‌ ಗನ್‌ನಿಂದ ಇರಾನ್‌ ಅಣು ವಿಜ್ಞಾನಿ ಹತ್ಯೆ

    – 25 ಸೆ.ಮೀ ದೂರದಲ್ಲಿದ್ದ ಪತ್ನಿಗೆ ಬಿದ್ದಿಲ್ಲ ಗುಂಡು
    – ಇಸ್ರೇಲ್‌ನಿಂದ ಕೃತ್ಯ ಎಂದ ಇರಾನ್‌

    ಟೆಹರಾನ್‌: ಇರಾನ್‌ನ ಟಾಪ್‌ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆ ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಆದರೆ ಅವರನ್ನು ಉಪಗ್ರಹದಿಂದ ನಿಯಂತ್ರಿಸಲ್ಪಟ್ಟ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌) ತಂತ್ರಜ್ಞಾನ ಆಧರಿತ ಮಷಿನ್ ಗನ್ ಬಳಸಿ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಹೌದು. ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರನ್ನು ಈ ರೀತಿಯಾಗಿ ಹತ್ಯೆ ಮಾಡಿದ್ದು, ತನ್ನ ವಿಜ್ಞಾನಿಯ ಹತ್ಯೆಗೆ ವೈರಿ ದೇಶವಾದ ಇಸ್ರೇಲ್‌ ಕಾರಣ ಎಂದು ಇರಾನ್‌ ಗಂಭೀರ ಆರೋಪ ಮಾಡಿದೆ.

    ಅಂದು ಏನಾಯ್ತು?
    11 ಮಂದಿ ಭದ್ರತಾ ಸಿಬ್ಬಂದಿ ಜೊತೆ ನವೆಂಬರ್‌ 27 ರಂದು 61 ವರ್ಷದ ಮೊಹ್ಸೆನ್ ಇರಾನ್ ರಾಜಧಾನಿ ಟೆಹ್ರಾನ್‌ ಹೊರವಲಯದ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದು ಮೊಹ್ಸೆನ್‌ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.

    ಇಸ್ರೇಲ್‌ ಮೇಲೆ ಆರೋಪ ಯಾಕೆ?
    ಘಟನೆ ನಡೆದ ಸ್ಥಳದಲ್ಲಿ ಮೇಡ್‌ ಇನ್‌ ಇಸ್ರೇಲ್‌ ಶಸ್ತ್ರಾಸ್ತಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೇ ನಿಂತ ವಾಹನದಿಂದ ಈ ದಾಳಿ ನಡೆದಿದೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ನಡೆದ ಸ್ಥಳದಲ್ಲಿ ಭಯೋತ್ಪಾದಕರು ಇರಲಿಲ್ಲ. ಕ್ಯಾಮೆರಾ ಬಳಸಿ ಕಾರಿನಲ್ಲಿ ಬರುತ್ತಿದ್ದಾಗ ಅವರತ್ತ ಗನ್‌ ಕೇಂದ್ರೀಕರಿಸಿ ಈ ಕೃತ್ಯ ಎಸಗಲಾಗಿದೆ. ಉಪಗ್ರಹ-ನಿಯಂತ್ರಿತ ಸ್ಮಾರ್ಟ್ ವ್ಯವಸ್ಥೆ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಇರುವ ಮಷಿನ್‌ ಗನ್‌ ಬಳಸಿ ಹತ್ಯೆ ಮಾಡಲಾಗಿದೆ ಎಂದು ಹಿರಿಯ ಕಮಾಂಡರ್‌ವೊಬ್ಬರ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.

    ಆರಂಭದಲ್ಲಿ 3-4 ಮಂದಿಯಿಂದ ಈ ಕೃತ್ಯ ನಡೆದಿದೆ. ಈ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ ನಂತರ ಯಾರು ಮೃತಪಟ್ಟಿಲ್ಲ ಎಂದು ವರದಿಯಾಗಿತ್ತು. ಈಗ ಸ್ಮಾರ್ಟ್‌ ತಂತ್ರಜ್ಞಾನ ಆಧಾರಿತ ಮಷಿನ್‌ ಗನ್‌ ಟ್ರಕ್‌ನಲ್ಲಿ ಇರಿಸಲಾಗಿತ್ತು. ಗನ್‌ನಿಂದ ಬುಲೆಟ್‌ ಫೈರ್‌ ಆದ ಬಳಿಕ ಟ್ರಕ್‌ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

    ಪತ್ನಿಗೆ ತಾಗಿಲ್ಲ:
    ವಿಶೇಷ ಏನೆಂದರೆ ಮೊಹ್ಸೆನ್‌ ಅವರಿದ್ದ ಕಾರಿನಲ್ಲಿ ಪತ್ನಿಯೂ ಪ್ರಯಾಣಿಸುತ್ತಿದ್ದರು. 25 ಸೆಂಟಿಮೀಟರ್‌ ದೂರದಲ್ಲಿ ಕುಳಿತಿದ್ದ ಅವರ ಪತ್ನಿಗೆ ಒಂದು ಗುಂಡು ಬಿದ್ದಿರಲಿಲ್ಲ. 13 ಗುಂಡುಗಳು ನೇರವಾಗಿ ಮೊಹ್ಸೆನ್‌ ಅವರಿಗೆ ಬಿದ್ದಿದ್ದರೂ ಹತ್ತಿರದಲ್ಲೇ ಇದ್ದ ಪತ್ನಿಗೆ ತಗುಲಿರಲಿಲ್ಲ. ಇಷ್ಟೊಂದು ನಿಖರವಾಗಿ ಅತ್ಯಂತ ವ್ಯವಸ್ಥಿತವಾಗಿ ದಾಳಿ ನಡೆಯಬೇಕಾದರೆ ಅದು ಉಪಗ್ರಹ ಆಧಾರಿತ ಸ್ಮಾರ್ಟ್‌ ವ್ಯವಸ್ಥೆಯಿಂದ ಸಾಧ್ಯ ಎಂಬ ವಾದವನ್ನು ಇರಾನ್‌ ಮುಂದಿಟ್ಟಿದೆ.

    ಇಸ್ರೇಲ್‌ನಿಂದ ಪ್ರತಿಕ್ರಿಯೆ ಇಲ್ಲ:
    ಮೊಹ್ಸೆನ್‌ ಫಖ್ರಿಜಾದೆ ಅವರ ಹತ್ಯೆ ಸಂಬಂಧ ಇರಾನ್‌ ತನ್ನ ಮೇಲೆ ಮಾಡಿರುವ ಆರೋಪಕ್ಕೆ ಇಸ್ರೇಲ್‌ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ತನ್ನ ಶತ್ರು ರಾಷ್ಟ್ರವಾದ ಇರಾನ್‌ನ ಪರಮಾಣು ಕಾರ್ಯಕ್ರಮದ ರಹಸ್ಯ, ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಹೇಳಿತ್ತು.

    ಯಾರು ಮೊಹ್ಸೆನ್‌?
    1958ರಲ್ಲಿ ಜನಿಸಿ ಮೊಹ್ಸೆನ್‌ ಅವರು ಇರಾನ್‌ ಪರಮಾಣು ಯೋಜನೆಯ ರೂವಾರಿಯಾಗಿದ್ದರು. ಇರಾನ್‌ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ಪಾಶ್ಚಿಮಾತ್ಯ ದೇಶಗಳು ʼಫಾದರ್‌ ಆಫ್ ಇರಾನಿಯನ್‌ ಬಾಂಬ್ʼ ಎಂದೇ ಕರೆಯುತ್ತಿದ್ದುವು.

    ಆತಂಕ ಯಾಕೆ?
    ಪ್ರೊಫೆಸರ್ ಸ್ಟೀಫನ್ ಹಾಕಿಂಗ್ ಸೇರಿದಂತೆ 1 ಸಾವಿರ ಮಂದಿ ವಿಜ್ಞಾನಿಗಳು ಮಿಲಿಟರಿ ಕಾರ್ಯಾಚಾರಣೆಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಕೆಯನ್ನು ನಿಷೇಧಿಸಬೇಕೆಂದು ಕೋರಿ ಪತ್ರ ಬರೆದಿದ್ದಾರೆ. ಒಂದು ವೇಳೆ ಇರಾನ್‌ ಆರೋಪವೇ ನಿಜವೇ ಆದಲ್ಲಿ ಮುಂದಿನ ದಿನಗಳಲ್ಲಿ ವಿರೋಧಿ ರಾಷ್ಟ್ರದ ಟಾಪ್‌ ವ್ಯಕ್ತಿಗಳನ್ನು ಇನ್ನೊಂದು ದೇಶ ಸುಲಭವಾಗಿ ಹತ್ಯೆ ಮಾಡಿ ದೇಶ ದೇಶಗಳ ನಡುವೆ ಯುದ್ಧವೇ ಸಂಭವಿಸುವ ಸಾಧ್ಯತೆಯಿದೆ.

  • ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    – ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ
    – ರೆಡ್‍ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್‍ಡ್ರಾಗನ್ ಚಿಪ್

    ಬೆಂಗಳೂರು: ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ ಇಸ್ರೋ ನಿರ್ಮಿತ ಸ್ವದೇಶಿ ಜಿಪಿಎಸ್ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

    ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದ ಫೋನ್ ಗಳು ಅಮೆರಿಕದ ಜಿಪಿಎಸ್(ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್ ಗಳು ನಾವಿಕ್(ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) ಬಳಸಲಿವೆ.

    ಫೋನಿನಲ್ಲಿ ‘ನಾವಿಕ್’ ನೀಡಲಿರುವ ಮೊದಲ ಕಂಪನಿ ಕ್ಸಿಯೋಮಿ ಆಗಿದ್ದು, ಈ ಸಂಬಂಧ ಕ್ಸಿಯೋಮಿ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಮನುಕುಮಾರ್ ಜೈನ್ ಬೆಂಗಳೂರಿನ ಇಸ್ರೋ ಕಂಪನಿಗೆ ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    “ಭಾರತದ ಟೆಕ್ ಲೋಕದಲ್ಲಿ ಹೊಸ ಅಧ್ಯಾಯ. ಇಸ್ರೋ ನಾವಿಕ್ ವಿಶೇಷತೆಯನ್ನು ನೀಡುವ ವಿಶ್ವದ ಮೊದಲ ಫೋನ್ ರೆಡ್ ಮಿ ಆಗಲಿದೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ” ಎಂದು ಮನುಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ.

    ‘ನಾವಿಕ್’ ವಿಶೇಷತೆ ಅಷ್ಟು ಸುಲಭವಾಗಿ ಫೋನಿನಲ್ಲಿ ಬರಲು ಸಾಧ್ಯವಿಲ್ಲ. ಫೋನ್ ತಯಾರಿಕಾ ಕಂಪನಿ ಮತ್ತು ಚಿಪ್ ತಯಾರಿಕಾ ಕಂಪನಿ ಇಸ್ರೋ ಜೊತೆ ಮಾತುಕತೆ ನಡೆಸಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಇಸ್ರೋ ಜೊತೆ ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಕ್ವಾಲಕಂ ಮಾತುಕತೆ ನಡೆಸಿ ಈ ವರ್ಷದ ಜನವರಿಯಲ್ಲಿ ಸ್ನಾಪ್‍ಡ್ರಾಗನ್ ಚಿಪ್ ಬಿಡುಗಡೆ ಮಾಡಿತ್ತು. ಈ ಚಿಪ್ ಬಳಸಿಕೊಂಡು ಕ್ಸಿಯೋಮಿ ಕಂಪನಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಿ ಫೋನ್ ಬಿಡುಗಡೆ ಮಾಡಲಿದೆ.

    2020ರಲ್ಲಿ ಬಿಡುಗಡೆಯಾಗಲಿರುವ ವಿವಿಧ ಬೆಲೆಯ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ ಚಿಪ್ ಬಳಸಿ ನಾವಿಕ್ ಬೆಂಬಲಿಸುವ ಫೋನ್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ಸಿಯೋಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕ್ವಾಲಕಂ ಸ್ನಾಪ್‍ಡ್ರಾಗನ್ 720ಜಿ, 662 ಮತ್ತು 460 ಚಿಪ್ ಗಳು ನಾವಿಕ್ ಬೆಂಬಲಿಸಲಿದೆ. ಮಧ್ಯಮ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್‍ಫೋನ್ ಗಳಲ್ಲಿ ಬಳಸುವ ಉದ್ದೇಶಕ್ಕಾಗಿ ಈ ಚಿಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಚಿಪ್ ಗಳು ವೈಫೈ 6, ಬ್ಲೂಟೂತ್ 5.1 ಜೊತೆಗೆ 4ಜಿ ನೆಟ್‍ವರ್ಕಿಗೆ ಬೆಂಬಲ ನೀಡುತ್ತದೆ. ಕ್ವಾಲಕಂ ಬಿಡುಗಡೆ ಮಾಡಿದ ಚಿಪ್ ನಾವಿಕ್ ಅಲ್ಲದೇ ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೋನಾಸ್’, ಯುರೋಪಿಯನ್ ಒಕ್ಕೂಟದ ‘ಗೆಲಿಲಿಯೊ’, ಚೀನಾದ ‘ಬೈಡೂ’ವನ್ನು ಬೆಂಬಲಿಸುತ್ತದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)7 ಉಪಗ್ರಹಗಳನ್ನು ಹೊಂದಿದೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು.

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿದೆ. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿತ್ತು.