Tag: ಉಪಗ್ರಹ

  • ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

    ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

    ಶ್ರೀಹರಿಕೋಟಾ: ಗಡಿಯಲ್ಲಿ ರಾತ್ರಿಯ ವೇಳೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಭಾರತ (India) ಈಗ ಬೇಹುಗಾರಿಕಾ ಉಪಗ್ರಹವನ್ನು (Spy Satellite) ಉಡಾವಣೆ ಮಾಡುತ್ತಿದೆ.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) EOS-9 ರೇಡಾರ್‌ ಇಮೇಜಿಂಗ್‌ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದು, ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಭಾನುವಾರ ಬೆಳಗ್ಗೆ 5:59ಕ್ಕೆ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಈ ಉಪಗ್ರಹ ನಭಕ್ಕೆ ಚಿಮ್ಮಲಿದೆ.

    ಬೆಂಗಳೂರಿನಲ್ಲಿರುವ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲ್ಮೈಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

    ಇಸ್ರೋ 101ನೇ ದೊಡ್ಡ ರಾಕೆಟ್ ಉಡಾವಣೆ ಇದಾಗಿದ್ದು 1,696 ಕಿಲೋಗ್ರಾಂ ತೂಕದ EOS-9 ರಾಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಲಿದೆ. ಇದನ್ನೂ ಓದಿ: ಪಾಕ್‌ ವಿರುದ್ಧ ‘ಬ್ರಹ್ಮೋಸ್‌’ ಪರಾಕ್ರಮ – ಬ್ರಹ್ಮೋಸ್‌ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ

    ಈಗಾಗಲೇ ಬಾಹ್ಯಾಕಾಶಕ್ಕೆ ಭಾರತ ಹಾರಿಸಿದ 57 ಕ್ಕೂ ಹೆಚ್ಚು ಉಪಗ್ರಹಗಳ ಸಮೂಹಕ್ಕೆ EOS-9 ಸೇರ್ಪಡೆಯಾಗಲಿದೆ. ಇವುಗಳಲ್ಲಿ ಕಕ್ಷೆಯಲ್ಲಿರುವ ನಾಲ್ಕು ರೇಡಾರ್ ಉಪಗ್ರಹಗಳು ಸೇರಿವೆ.

    ಉಪಗ್ರಹದ ವಿಶೇಷತೆ ಏನು?
    ಸಾಧಾರಣವಾಗಿ ಮೋಡಗಳು, ಬಿರುಗಾಳಿ, ರಾತ್ರಿಯ ವೇಳೆ ಹೆಚ್ಚಿನ ಉಪಗ್ರಹಗಳಿಗೆ ಸರಿಯಾಗಿ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ಉಪಗ್ರಹ ಮೋಡಗಳು, ಮಳೆ, ಮಂಜು ಸೇರಿದಂತೆ ಎಲ್ಲಾ ರೀತಿಯ ಹವಾಮಾನದಲ್ಲೂ ಹಗಲು ಮತ್ತು ರಾತ್ರಿ ಸ್ಷಷ್ಟವಾದ ಚಿತ್ರಗಳನ್ನು ಸೆರೆ ಹಿಡಿಯವ ಸಾಮರ್ಥ್ಯ ಹೊಂದಿದೆ.

    EOS-09 ನಲ್ಲಿರುವ Synthetic Aperture Radar ಎಷ್ಟು ಶಕ್ತಿಶಾಲಿ ಎಂದರೆ ಭೂ ಪ್ರದೇಶ, ಸಸ್ಯಗಳು ಮತ್ತು ಮಾನವ ನಿರ್ಮಿತ ಡೇರೆಗಳನ್ನು ಸಹ ವರ್ಗೀಕರಣ ಮಾಡಿ ಫಲಿತಾಂಶ ನೀಡುತ್ತದೆ. ಹೀಗಾಗಿ ಇನ್ನು ಮುಂದೆ ಗಡಿಯಲ್ಲಿ ಯಾವುದೇ ಸಮಯದಲ್ಲಿ ಅನುಮಾನಾಸ್ಪದ ಚಟುಟವಿಕೆ ನಡೆದರೂ ಅದರ ಸಂಪೂರ್ಣ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಲಿದೆ.

    10 ರಿಂದ 225 ಕಿಮೀ ವರೆಗಿನ ವಿಶಾಲವಾದ ಜಾಗಗಳನ್ನು ಸ್ಕ್ಯಾನ್ ಮಾಡುತ್ತದೆ. ದೊಡ್ಡ ಪ್ರಮಾಣದ ವಿಪತ್ತು ನಡೆದಾಗ ಉದಾಹರಣೆ ಪ್ರವಾಹ, ಚಂಡಮಾರುತಗಳು, ಭೂಕುಸಿತ ನಡೆದಾಗ ಅದರ ನೈಜ ಚಿತ್ರಣವನ್ನು ವೀಕ್ಷಿಸಬಹುದು. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ

    ಈ ಉಪಗ್ರಹ ಗಡಿಯನ್ನು ಕಾಯುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಅಕ್ರಮ ಸಮುದ್ರ ಚಟುವಟಿಕೆಯನ್ನು ಮೇಲ್ವಿಚಾರಣೆ, ತೈಲ ಸೋರಿಕೆಗಳನ್ನು ಪತ್ತೆ, ಭಾರತದ 7,500 ಕಿಮೀ ಉದ್ದದ ಕರಾವಳಿಯಲ್ಲಿ ಹಡಗುಗಳನ್ನು ಪತ್ತೆ ಹಚ್ಚುತ್ತದೆ.

  • ಪ್ರತಿನಿತ್ಯ ನೂರು ಸೈಬರ್ ದಾಳಿಗಳ ವಿರುದ್ಧ ಇಸ್ರೋ ಹೋರಾಟ: ಎಸ್.ಸೋಮನಾಥ್

    ಪ್ರತಿನಿತ್ಯ ನೂರು ಸೈಬರ್ ದಾಳಿಗಳ ವಿರುದ್ಧ ಇಸ್ರೋ ಹೋರಾಟ: ಎಸ್.ಸೋಮನಾಥ್

    ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿನಿತ್ಯ ನೂರು ಸೈಬರ್ ದಾಳಿಗಳ (Cyber Attacks) ವಿರುದ್ಧ ಹೋರಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ (S.Somanath) ಹೇಳಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ಸೈಬರ್ ಸಮ್ಮೇಳನದ 16ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಈ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ.

    ಅಲ್ಟ್ರಾ-ಆಧುನಿಕ ಸಾಫ್ಟ್‍ವೇರ್ ಬಳಸುವ ರಾಕೆಟ್ ತಂತ್ರಜ್ಞಾನದಲ್ಲಿ ಸೈಬರ್ ದಾಳಿಯ ಸಾಧ್ಯತೆ ಹೆಚ್ಚು. ಅಂತಹ ದಾಳಿಗಳನ್ನು ಎದುರಿಸಲು ಸಂಸ್ಥೆಯು ದೃಢವಾದ ಸೈಬರ್ ಭದ್ರತೆಯ ನೆಟ್‍ವರ್ಕ್‍ನೊಂದಿಗೆ ಸಜ್ಜುಗೊಂಡಿದೆ. ಇದರ ಸಲುವಾಗಿ ಸಾಫ್ಟ್‍ವೇರ್ ಮಾತ್ರವಲ್ಲದೇ ರಾಕೆಟ್‍ಗಳೊಳಗಿನ ಹಾರ್ಡ್‍ವೇರ್ ಚಿಪ್‍ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ- ಸಾರ್ವಜನಿಕರಲ್ಲಿ ತಾಯಿ ಮನವಿ

    ಉಪಗ್ರಹವನ್ನು ನಿಯಂತ್ರಣ ಮಾಡುವ ವಿಧಾನವು ಒಂದೇ ಸಮಯದಲ್ಲಿ ಅನೇಕ ಉಪಗ್ರಹಗಳನ್ನು ನಿಯಂತ್ರಿಸುವ ಸಾಫ್ಟ್‍ವೇರ್ ವಿಧಾನವಾಗಿ ಬದಲಾಗಿದೆ. ಇದು ಈ ವಲಯದ ಮಹತ್ವದ ಬೆಳವಣಿಗೆಯನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಸಹಾಯ ಮಾಡುವ ಉಪಗ್ರಹಗಳು ಸಹ ಪ್ರಸ್ತುತವಾಗಿವೆ. ಇವೆಲ್ಲವನ್ನೂ ವಿವಿಧ ರೀತಿಯ ಸಾಫ್ಟ್‍ವೇರ್‍ಗಳಿಂದ ನಿಯಂತ್ರಿಸಲಾಗುತ್ತದೆ. ಇವೆಲ್ಲವನ್ನೂ ರಕ್ಷಿಸಲು ಸೈಬರ್ ಸುರಕ್ಷತೆ ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ.

    ಸುಧಾರಿತ ತಂತ್ರಜ್ಞಾನವು ಒಂದು ವರದಾನವಾಗಿದೆ. ಇದೇ ವೇಳೆ ಅದು ಬೆದರಿಕೆಗೂ ಕಾರಣವಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಒಡ್ಡುವ ಸವಾಲುಗಳನ್ನು ನಾವು ಅದೇ ತಂತ್ರಜ್ಞಾನದಿಂದ ಎದುರಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ಆಗಬೇಕಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಕಾಶ ಸಂಸ್ಥೆ (ISRO) ಭಾನುವಾರ ಬೆಳಗ್ಗೆ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ 36 ಉಪಗ್ರಹಗಳನ್ನು ಹೊತ್ತ ರಾಕೆಟ್ (Rocket) ಅನ್ನು ಉಡಾವಣೆ ಮಾಡಿದೆ.

    ಒನ್ ವೆಬ್ ಇಂಡಿಯಾ -2 (OneWeb India-2) ಮಿಷನ್‍ನ ಭಾಗವಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-3 ರಾಕೆಟ್ ಅನ್ನು ಕಕ್ಷೆಗೆ ಹಾರಿಸಿದೆ. ಬ್ರಿಟನ್ ಮೂಲದ ಒನ್‍ವೆಬ್ ಗ್ರೂಪ್‍ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್ – 3 ಉಡಾವಣಾ ನೌಕೆ ನಭಕ್ಕೆ ಹಾರಿತು.

    ಉಪಗ್ರಹ ಉಡಾವಣೆ ಬೆನ್ನಲ್ಲೇ ಒನ್‍ವೆಬ್ ಟ್ವೀಟ್ ಮಾಡಿದೆ. ಯಶಸ್ವಿ ಉಡಾವಣೆಗಾಗಿ ಇಸ್ರೋ ಹಾಗೂ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನಲ್ಲಿರುವ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸಿದೆ. ಇದು ಸರ್ಕಾರಕ್ಕೆ ಹಾಗೂ ಕಂಪನಿಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದೆ.

    ಈ ವರ್ಷ ಇಸ್ರೋ ನಡೆಸಿದ 2ನೇ ರಾಕೆಟ್ ಉಡಾವಣೆ ಇದಾಗಿದೆ. ಈ ಉಡಾವಣೆಯೊಂದಿಗೆ ಒನ್‍ವೆಬ್ ತನ್ನ 616 ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿದೆ. ಈ ಮಿಷನ್ ಭಾರತದಿಂದ ಉಡಾವಣೆ ಮಾಡುತ್ತಿರುವ ಒನ್‍ವೆಬ್‍ನ ಎರಡನೇ ಉಪಗ್ರಹವಾಗಿದೆ. ಬ್ರಿಟನ್ ಮತ್ತು ಭಾರತೀಯ ಬಾಹ್ಯಾಕಾಶ ಉದ್ಯಮಗಳ ನಡುವಿನ ಸಹಯೋಗಕ್ಕೆ ಇದು ಮಾದರಿಯಾಗಿದೆ ಎಂದು ಒನ್‍ವೆಬ್ ಈ ಹಿಂದೆ ಹೇಳಿತ್ತು.

    ಮೊದಲ ಬಾರಿ 2022ರ ಅಕ್ಟೋಬರ್ 23ರಂದು ಇಸ್ರೋನ 36 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದನ್ನೂ ಓದಿ: ದೇಶದಲ್ಲೇ ಮೊದಲ ಉಪಚುನಾವಣೆ ನಡೆದಿದ್ದು ಚಿಕ್ಕಮಗಳೂರಿನ ತರೀಕೆರೆಯಲ್ಲಿ

  • ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬೀಳಿಸಿದ ಇಸ್ರೋ

    ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬೀಳಿಸಿದ ಇಸ್ರೋ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಾಹ್ಯಾಕಾಶದಲ್ಲಿ ಹೊಸತೊಂದು ಇತಿಹಾಸ ನಿರ್ಮಾಣ ಮಾಡಿದೆ. ಅಂತರಿಕ್ಷದಲ್ಲಿ ನಿರುಪಯುಕ್ತವಾಗಿದ್ದ ಉಪಗ್ರಹವನ್ನು (Satellite) ನಿಯಂತ್ರಿತ ವಿಧಾನದ ಮೂಲಕ ಭೂ ವಾತಾವರಣಕ್ಕೆ ತಂದು ಪೆಸಿಫಿಕ್ ಮಹಾಸಾಗರದಲ್ಲಿ (Pacefic Ocean) ಯಾರಿಗೂ ತೊಂದರೇ ಆಗದ ರೀತಿ ಬೀಳಿಸಿ ಸಾಧನೆ ಮಾಡಿದೆ.

    ವಾಸ್ತವದಲ್ಲಿ ಅಂತರಿಕ್ಷದಲ್ಲೇ ಉಪಗ್ರಹವನ್ನು ಉಡಾಯಿಸುವ ಸಾಮರ್ಥ್ಯ ಭಾರತಕ್ಕೆ ಇದೆ. ಆದರೆ ಹಾಗೆ ಮಾಡಿದಲ್ಲಿ ಉಪಗ್ರಹದ ಅವಶೇಷಗಳು ಭವಿಷ್ಯದಲ್ಲಿ ಜಗತ್ತಿಗೆ ಕಂಟಕವಾಗುವ ಸಾಧ್ಯತೆ ಇತ್ತು. ಹೀಗಾಗಿ ಅವಧಿ ಮೀರಿದ ಒಂದು ಉಪಗ್ರಹವನ್ನು ಪೂರ್ಣ ಪ್ರಮಾಣದ ನಿಯಂತ್ರಿತ ವಿಧಾನದ ಮೂಲಕ ಸಮುದ್ರಕ್ಕೆ ಬೀಳುವಂತೆ ಮಾಡುವ ಸವಾಲಿನ ಕೆಲಸಕ್ಕೆ ಇಸ್ರೋ ಮುಂದಾಗಿತ್ತು.

    ಮಂಗಳವಾರ ಸಂಜೆ 4:30ಕ್ಕೆ ಶುರುವಾದ ಪ್ರಕ್ರಿಯೆ ಸಂಜೆ 7:30ರವರೆಗೆ ನಡೆಯಿತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಈ ಆಪರೇಷನ್ ಕೊನೆಗೂ ಯಶಸ್ವಿಯಾಗಿದೆ. ನಿರ್ದೇಶಿತ ಮಾರ್ಗದಲ್ಲೇ ಭೂವಾತಾವರಣ ತಲುಪಿದ ಉಪಗ್ರಹ ನಿರ್ದೇಶಿತ ಪ್ರದೇಶದಲ್ಲೇ ಪತನವಾಗಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ವಿಮಾನ ಅಪಘಾತ- ಭಾರತೀಯ ಮೂಲದ ಮಹಿಳೆ ಸಾವು, ಮಗಳು ಗಂಭೀರ

    ಅದೃಷ್ಟವಶಾತ್ ಉಪಗ್ರಹ ಕೊನೆಯವರೆಗೂ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಯಾರಿಗೂ ಅಪಾಯವಾಗದ ರೀತಿಯಲ್ಲಿ ಇಸ್ರೋ ಬರೋಬ್ಬರಿ 135 ಕೆಜಿ ತೂಕದ ಉಪಗ್ರಹವನ್ನು ಪೆಸಿಫಿಕ್ ಮಹಾಸಾಗರದ ನಿರ್ಜನ ಪ್ರಾಂತ್ಯದಲ್ಲಿ ಕೆಡವಿದೆ.

    2011ರಲ್ಲಿ ಫ್ರಾನ್ಸ್‌ ಜೊತೆಗೂಡಿ ಇಸ್ರೋ ಸಂಸ್ಥೆ ಎಂಐ1 ಉಪಗ್ರಹವನ್ನು ಉಡಾವಣೆ ಮಾಡಿತ್ತು. ಉಷ್ಣಮಂಡಲ ವಾತಾವರಣದ ಬಗ್ಗೆ ಅಧ್ಯಯನ ನಡೆಸಿದ್ದ Megha-Tropiques ಉಪಗ್ರಹ ಮೂರು ವರ್ಷಕ್ಕೆ ತನ್ನಕಾರ್ಯ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ 2021ರವರೆಗೂ ಎಂಐಟಿ ನಿರಂತರ ಸೇವೆ ನೀಡಿತ್ತು. ಇದನ್ನು ಸುರಕ್ಷಿತವಾಗಿ ಕೆಡವಲು ಇಸ್ರೋ 2022ರ ಆಗಸ್ಟ್‌ನಿಂದಲೇ `ಆಪರೇಷನ್ ಮೇಘಾ’ ಕೈಗೊಂಡಿತ್ತು.

  • ಓಷನ್‍ಸ್ಯಾಟ್, 8 ಇತರೆ ಉಪಗ್ರಹಗಳನ್ನು ಹೊತ್ತ PSLV-C54 ರಾಕೆಟ್ ಉಡಾಯಿಸಿದ ಇಸ್ರೋ

    ಓಷನ್‍ಸ್ಯಾಟ್, 8 ಇತರೆ ಉಪಗ್ರಹಗಳನ್ನು ಹೊತ್ತ PSLV-C54 ರಾಕೆಟ್ ಉಡಾಯಿಸಿದ ಇಸ್ರೋ

    ಶ್ರೀಹರಿಕೋಟಾ: ಓಷನ್‍ಸ್ಯಾಟ್ 3 (Oceansat), ಆನಂದ್ ಉಪಗ್ರಹಗಳು ಸೇರಿದಂತೆ ಇತರ 8 ನ್ಯಾನೊ ಉಪಗ್ರಹಗಳನ್ನು (Satellite) ಹೊತ್ತ ಪಿಎಸ್‍ಎಲ್‍ವಿ-ಸಿ 54 ರಾಕೆಟ್ (PSLV-C54 Rocket) ಅನ್ನು ಇಸ್ರೋ (Indian Space Research Organisation) (ISRO) ಯಶಸ್ವಿಯಾಗಿ ಉಡಾಯಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಿದ್ದು, ಉಪಗ್ರಹಗಳನ್ನು ಸನ್-ಸಿಂಕ್ರೋನಸ್ ಧ್ರುವೀಯ ಕಕ್ಷೆಗೆ ಸೇರಿಸಲಾಗುತ್ತದೆ.

    ಎಲ್‍ವಿ-ಸಿ 54 ರಾಕೆಟ್‍ನಲ್ಲಿ ಓಷನ್‍ಸ್ಯಾಟ್ 3, ಆನಂದ್ ಉಪಗ್ರಹಗಳು ಸೇರಿದಂತೆ ಇತರ 8 ನ್ಯಾನೊ ಉಪಗ್ರಹಗಳಿವೆ. ಇವುಗಳ ಪೈಕಿ ಪಿಕ್ಸ್‍ಕ್ಷೆಲ್‍ನ ಭೂತಾನ್‍ಸ್ಯಾಟ್, ಅಮೆರಿಕದ ಸ್ಪೇಸ್‍ಫ್ಲೈಟ್‍ನ ನಾಲ್ಕು ಆ್ಯಸ್ಟ್ರೋಕಾಸ್ಟ್ ಉಪಗ್ರಹಗಳು ಕೂಡ ಸೇರಿವೆ. ಸಾಗರ ವೀಕ್ಷಣೆ, ಭೂ ವೀಕ್ಷಣೆಗಾಗಿ ಇಂಡೊ-ಫ್ರೆಂಚ್ ಸಹಭಾಗಿತ್ವ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಉಪಗ್ರಹಗಳೂ ಇದರಲ್ಲಿ ಸೇರಿವೆ. ಇದನ್ನೂ ಓದಿ: ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದ ದೂರುದಾರನ ತಂದೆ ಹೃದಯಾಘಾತದಿಂದ ಸಾವು

    ಆನಂದ್ ನ್ಯಾನೊ ಉಪಗ್ರಹ ಭೂಮಿಯ ಕೆಳ ಕಕ್ಷೆಯಲ್ಲಿ ಮೈಕ್ರೋಸ್ಯಾಟಲೈಟ್ ಬಳಸಿಕೊಂಡು ಭೂಮಿಯ ವೀಕ್ಷಣೆ ನಡೆಸಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಇದನ್ನೂ ಓದಿ: ಎರಡರ ಮಗ್ಗಿ ಹೇಳದ್ದಕ್ಕೆ ವಿದ್ಯಾರ್ಥಿ ಕೈಗೆ ಡ್ರಿಲ್ ಮಷಿನ್ ಇಟ್ಟ ಶಿಕ್ಷಕ

    Live Tv
    [brid partner=56869869 player=32851 video=960834 autoplay=true]

  • 36 ಉಪಗ್ರಹ ಹೊತ್ತ ಭಾರತದ ಅತ್ಯಂತ ಭಾರವಾದ ರಾಕೆಟ್ ಯಶಸ್ವಿ ಉಡಾವಣೆ

    36 ಉಪಗ್ರಹ ಹೊತ್ತ ಭಾರತದ ಅತ್ಯಂತ ಭಾರವಾದ ರಾಕೆಟ್ ಯಶಸ್ವಿ ಉಡಾವಣೆ

    ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಮಧ್ಯರಾತ್ರಿ 12.07 ಕ್ಕೆ ತನ್ನ ಅತ್ಯಂತ ಭಾರವಾದ ರಾಕೆಟ್ (Rocket) ಬಳಸಿ 36 ಉಪಗ್ರಹಗಳನ್ನು (Satellites) ಉಡಾವಣೆ ಮಾಡಿದೆ.

    LVM3 ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಕೇಂದ್ರದಿಂದ ಹಾರಾಟ ನಡೆಸಲಾಗಿದೆ.

    ಇಸ್ರೋ ಅತ್ಯಂತ ಭಾರವಾದ ರಾಕೆಟ್ LVM3 ಅನ್ನು ವಾಣಿಜ್ಯದ ಉದ್ದೇಶಕ್ಕೆ ಉಡಾವಣೆ ಮಾಡಿದ್ದು, ಇದರಲ್ಲಿ ಸಾಗಿಸಲಾದ ಉಪಗ್ರಹಗಳು ಲಂಡನ್ ಮೂಲದ ಸಂವಹನ ಸಂಸ್ಥೆ ಒನ್‌ವೆಬ್ ಗೆ (OneWeb) ಸೇರಿವೆ. ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ (Bharti Enterprises) ಪ್ರಮುಖ ಹೂಡಿಕೆದಾರರಾಗಿದ್ದಾರೆ.

    ಒಟ್ಟು 5,896 ಕೆಜಿಯ 36 ಉಪಗ್ರಹಗಳನ್ನು ರಾಕೆಟ್ ಹೊತ್ತೊಯ್ದಿದೆ. LVM3 ರಾಕೆಟ್ 8 ಸಾವಿರ ಕೆಜಿ ವರೆಗಿನ ಉಪಗ್ರಹಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್

    ಇದು ವಾಣಿಜ್ಯ ಉದ್ದೇಶದಿಂದ ಇಸ್ರೋ ಉಡಾಯಿಸಿದ ಮೊದಲ ರಾಕೆಟ್ ಆಗಿದೆ. ಒನ್‌ವೆಬ್‌ನ ಇನ್ನೂ 36 ಉಪಗ್ರಹಗಳನ್ನು 2023ರಲ್ಲಿ ಎಲ್‌ವಿಎಂ ರಾಕೆಟ್‌ನಿಂದ ಉಡಾಯಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ, ವಿಜ್ಞಾನಿ ಸೋಮನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಮೋದಿ ದೀಪಾವಳಿ- ರಾಮ ಮಂದಿರ ಕಾಮಗಾರಿ ಪರಿಶೀಲನೆ

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ನವದೆಹಲಿ: ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಟೋಲ್ ಪ್ಲಾಜಾಗಳನ್ನು (Toll Plaza) ನೋಡುತ್ತವೆ. ಅಲ್ಲಿ ಟೋಲ್ (Toll) ಪಾವತಿಗಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಆಗುವುದುಂಟು. ಆದರೆ ಭವಿಷ್ಯದಲ್ಲಿ ಈ ಟೋಲ್ ಪ್ಲಾಜಾಗಳಿಂದ ಕಿರಿಕಿರಿ ಆಗುವುದೇ ಇಲ್ಲ.

    ಈ ಕುರಿತು ಮಾತನಾಡಿರುವ ಕೇಂದ್ರ ನಿತಿನ್ ಗಡ್ಕರಿ (Nitin Gadkari), ಶೀಘ್ರದಲ್ಲೇ ಸ್ವಯಂಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸುವ ವ್ಯವಸ್ಥೆ ಅಳವಡಿಸಲಾಗುವುದು. ಸ್ವಯಂ ಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದೆ. ಇದು ವಾಹನ ಮಾಲೀಕರ ಬ್ಯಾಂಕ್ ಖಾತೆಗಳಿಂದ (Bank Account) ಶುಲ್ಕವನ್ನು ಖಡಿತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಆರಗ ಜ್ಞಾನೇಂದ್ರ

    ಫಾಸ್ಟ್ಯಾಗ್‌ಗಳನ್ನು (FASTags) ಪರಿಚಯಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ಟೋಲ್ ಆದಾಯವು ವರ್ಷಕ್ಕೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಅದಕ್ಕಾಗಿ ಈಗ ಆಟೋ ಮೊಬೈಲ್ ನಂಬರ್‌ಪ್ಲೇಟ್(ಸ್ವಯಂಚಾಲಿನ ನಂಬರ್‌ಪ್ಲೇಟ್ ರೀಡರ್ ಕ್ಯಾಮೆರಾ) (Automatic Number Plate Reader Cameras) ತ್ರಜ್ಞಾನವನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಎದೆ ಮೇಲೆ ಕಾಲಿಟ್ಟು ಸೊಪ್ಪು ತಿಂದ ಆಡು

    2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ (Toll Plaza) ವಾಹನಗಳು ಕಾಯುತ್ತಿದ್ದ ಸಮಯ ಸರಿಸುಮಾರು 8 ನಿಮಿಷಗಳಿತ್ತು. 2020 ರಿಂದ 2022ರ ಅವಧಿಯಲ್ಲಿ ಫಾಸ್ಟ್ಯಾಗ್‌ಗಳನ್ನು ಪರಿಚಯಿಸಿದ ನಂತರ ವಾಹನಗಳ ಸರಾಸರಿ ಸಮಯವು 47 ಸೆಕೆಂಡುಗಳಿಗೆ ಇಳಿಕೆಯಾಯಿತು. ಹೀಗಿದ್ದೂ ಕೆಲವು ನಗರಗಳಲ್ಲಿ ಸಂದಿಗ್ಧ ಸಮಯಗಳಲ್ಲಿ ಹೆಚ್ಚಿನ ವಿಳಂಬವಾಗುತ್ತಿವೆ. ಅದಕ್ಕಾಗಿ ಸಂಪೂರ್ಣ ಬದಲಿ ವ್ಯವಸ್ಥೆ ಕಲ್ಪಿಸಲು ಸ್ವಯಂಚಾಲಿನ ಟೋಲ್ ಸಂಗ್ರಹಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ.

    ಸರ್ಕಾರ ಒಟ್ಟು ಎರಡು ರೀತಿಯ ಆಯ್ಕೆಗಳನ್ನು ಎದುರುನೋಡುತ್ತಿದೆ. ಮೊದಲಿಗೆ ಟೋಲ್ ಅನ್ನು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುವುದು, 2ನೇ ಅಯ್ಕೆಯಾಗಿ ಕಾರಿನಲ್ಲಿ ಜಿಪಿಎಸ್ ಅಳವಡಿಸಿ ಉಪಗ್ರಹ ಆಧಾರಿತವಾಗಿ ಟೋಲ್ ಸಂಗ್ರಹ ಮಾಡುವ ವಿಧಾನವನ್ನು ಎದುರು ನೋಡುತ್ತಿದೆ. ಉಪಗ್ರಹ ವಿಧಾನ ಅನುಸರಿಸಿದರೆ ಫಾಸ್ಟ್ಯಾಗ್‌ ಬದಲಾಗಿ ಜಿಪಿಎಸ್ ಅಳವಡಿಸಬೇಕಾಗುತ್ತದೆ. ಯಾವ ಆಯ್ಕೆಯನ್ನು ಈಗಲೇ ಅಂತಿಮಗೊಳಿಸಿಲ್ಲ. ಆದರೆ ಟೋಲ್ ಪ್ಲಾಜಾಗಳಿಂದ ಮುಕ್ತಿ ನೀಡುವುದು ಖಚಿತ. ಸ್ವಯಂ ಚಾಲಿತ ಟೋಲ್ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸಿರೋ ಪುನೀತ್ ಉಪಗ್ರಹ ಶೀಘ್ರದಲ್ಲೇ ಉಡಾವಣೆ

    ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸಿರೋ ಪುನೀತ್ ಉಪಗ್ರಹ ಶೀಘ್ರದಲ್ಲೇ ಉಡಾವಣೆ

    ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ ಪುನೀತ್ ಉಪಗ್ರಹವನ್ನು ನ.15 ರಿಂದ ಡಿ.31ರ ನಡುವೆ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

    ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಶ್ರೀಹರಿಕೋಟಾಗೆ ಕರೆದುಕೊಂಡು ಹೋಗಲಾಗುವುದು. 75ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಂದಲೇ 75 ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಘೋಷಿಸಿದ್ದರು.

    ಈ ಪೈಕಿ ಬೆಂಗಳೂರು ವಲಯದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು `ಕೆಜಿಎಸ್3ಸ್ಯಾಟ್’ ಉಪಗ್ರಹವನ್ನು 1.90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದಿವಂಗತ ನಟ ಪುನೀತ್ ಸ್ಮರಣಾರ್ಥ ಉಪಗ್ರಹಕ್ಕೆ ಅವರ ಹೆಸರಿಡಲಾಗಿದೆ. ಪ್ರಧಾನಿ ಕಾರ್ಯಕ್ರಮದಡಿ ಉಡಾವಣೆಗೊಳ್ಳುತ್ತಿರುವ ದೇಶದ ಪ್ರಥಮ ಉಪಗ್ರಹ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ: ಇಸ್ರೋ

    ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ: ಇಸ್ರೋ

    ನವದೆಹಲಿ: ಭಾನುವಾರ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿ ಉಡಾವಣೆಗೊಂಡ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ಎಲ್‌ವಿ) ತನ್ನ ಉದ್ದೇಶಿತ ಗುರಿಯನ್ನು ತಲುಪಲಿಲ್ಲ. ಇಒಎಸ್-02 ಉಪಗ್ರಹ ಉಡಾವಣೆ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.

    ವೆಲೋಸಿಟಿ ಟ್ರಿಮ್ಮಿಂಗ್ ಮಾಡ್ಯುಲ್(ವಿಟಿಎಂ) ಉಪಗ್ರಹವನ್ನು ತನ್ನ ಕಕ್ಷೆಗೆ ಸೇರಿಸಬೇಕಿತ್ತು. ಆದರೆ ಅದು ಟರ್ಮಿನಲ್ ಹಂತದಲ್ಲಿ ಉರಿದಿರಲಿಲ್ಲ. ವಿಟಿಎಂ 30 ಸೆಕೆಂಡುಗಳ ಕಾಲ ಉರಿಯಬೇಕಿತ್ತು. ಆದರೆ ಅದು ಸರಿಯಾಗಿ ಉರಿಯದೇ ಇದ್ದುದು ವೈಫಲ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ – 5 ದಿನ ಇಂಟರ್‌ನೆಟ್ ಸ್ಥಗಿತ

    ಇಸ್ರೋ ಮೊದಲಿಗೆ ಉಪಗ್ರಹ ಉಡಾವಣೆ ಹಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಘೋಷಿಸಿತ್ತು. ಆದರೆ ತಾಂತ್ರಿಕ ದೋಷದ ಸುಳಿವು ಮೊದಲೇ ಸಿಕ್ಕಿದ್ದರಿಂದ ಮಿಷನ್ ಯಶಸ್ವಿಯಾಗಿದೆ ಎಂದು ತಕ್ಷಣವೇ ಘೋಷಿಸಿರಲಿಲ್ಲ. ಇದನ್ನೂ ಓದಿ: ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ

    ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ 8 ಕೆಜಿ ತೂಕದ ಆಜಾದಿ ಸ್ಯಾಟ್ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ ಇಂದು ಬೆಳಗ್ಗೆ 9:18ರ ವೇಳೆಗೆ ಉಡಾವಣೆಗೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆ.7 ರಂದು ಗ್ರಾಮೀಣ ಶಾಲೆಯ 750 ಹೆಣ್ಣುಮಕ್ಕಳೇ ತಯಾರಿಸಿರುವ ಅತ್ಯಂತ ಚಿಕ್ಕ ಆಜಾದಿ ಉಪಗ್ರಹಗಳನ್ನು `ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (SSLV) ವಾಹಕದ ಮೂಲಕ ಹಾರಿಬಿಡುತ್ತಿದೆ.

    ಭಾರತ 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೇಜಿ ತೂಕದ `ಆಜಾದಿ ಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ಯಲಿದೆ. ಈ ವಾಹಕವು ತ್ರಿವರ್ಣ ಧ್ವಜವನ್ನೂ ನಭಕ್ಕೆ ಹೊತ್ತೊಯ್ಯಲಿದೆ. ಈ ಹೊಸ ಪ್ರಯತ್ನದ ಮೂಲಕ ವಿಶ್ವದ ಚಿಕ್ಕ ರಾಕೆಟ್‌ಗಳ ಮಾರುಕಟ್ಟೆಗೆ ಅಡಿ ಇಡಲು ಇಸ್ರೋ ಸಜ್ಜಾಗಿದೆ. ಇದು ಎಸ್‌ಎಸ್‌ಎಲ್‌ವಿಯ ಮೊದಲ ಉಡಾವಣೆಯಾಗಿದ್ದು, 145 ಕೆಜಿ ತೂಕದ ಭೂ ಪರಿವೀಕ್ಷಣಾ ಉಪಗ್ರಹ ಹಾಗೂ `ಆಜಾದಿ ಸ್ಯಾಟ್’ಗಳನ್ನು ಹೊತ್ತೊಯ್ಯಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪಕ್ಷ ಗೆದ್ದ ಬಳಿಕವೇ ಮುಖ್ಯಮಂತ್ರಿ ವಿಚಾರ – ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ ಬ್ರೇಕ್

    ಅಲ್ಲದೇ ಎಸ್‌ಎಸ್‌ಎಲ್‌ವಿ ಕಡಿಮೆ ಸುತ್ತುವ ಅವಧಿಯನ್ನು ಹೊಂದಿದ್ದು, ಕಡಿಮೆ ಎತ್ತರದ ಕಕ್ಷೆಗಳಿಗೆ ಉಪಗ್ರಹವನ್ನು ಸೇರಿಸುವ ಬಾಹ್ಯಾಕಾಶ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದರ್ಗಾಕ್ಕೆ ತೆರಳಿ ವಾಪಸ್ಸಾಗ್ತಿದ್ದಾಗ ಅಪಘಾತ- ಒಂದೇ ಕುಟುಂಬದ 6 ಮಂದಿ ದುರ್ಮರಣ

    ಆ.7ರಂದು ಮುಂಜಾನೆ 9.18ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಗುತ್ತದೆ. ಸುಮಾರು 13.2 ನಿಮಿಷಗಳ ಹಾರಾಟದ ಬಳಿಕ ಉಪಗ್ರಹಗಳನ್ನು ಈ ರಾಕೆಟ್ ಕಕ್ಷೆಗೆ ತಲುಪಿಸಲಿದೆ.

    ಆಜಾದಿ ಸ್ಯಾಟ್ ವಿಷೇಷತೆ: ಸ್ವಾತಂತ್ರ‍್ಯ ದೊರಕಿ 75 ವರ್ಷ ಆದ ಕಾರಣ ದೇಶ ಇಂದು ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಶೇಷವಾಗಿ 75 ಪೇಲೋಡ್ ಇರುವ 75 ಗ್ರಾಮೀಣ ಸರ್ಕಾರಿ ಶಾಲೆಗಳ 750 ಮಕ್ಕಳು ಆಜಾದಿ ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದಾರೆ. ಇದು `ಆಜಾದಿ ಸ್ಯಾಟ್’ ವಿಶೇಷತೆ. ಈ ಮೂಲಕ ಬಾಹ್ಯಾಕಾಶ ಅಧ್ಯಯನದಲ್ಲಿ ಬಾಲಕಿಯರಿಗೂ ಪ್ರೇರಣೆ ನೀಡುವುದು ಇದರ ಹಿಂದಿನ ಉದ್ದೇಶ.

    ಎಸ್‌ಎಸ್‌ಎಲ್‌ವಿ ವಿಶೇಷತೆ: ಇಸ್ರೋದ ವರ್ಕ್ಹಾರ್ಸ್ ಎಂದೇ ಖ್ಯಾತಿ ಪಡೆದಿರುವ ಪಿಎಸ್‌ಎಲ್‌ವಿಗಿಂತ ಬರೋಬ್ಬರಿ 10 ಮೀ. ಚಿಕ್ಕದಾಗಿರುವ ಎಸ್‌ಎಸ್‌ಎಲ್‌ವಿ ಕೇವಲ 34 ಮೀ. ಉದ್ದ ಹಾಗೂ 2 ಮೀ. ವ್ಯಾಸವನ್ನು ಹೊಂದಿದೆ. ಈ ರಾಕೆಟ್ ಒಟ್ಟು 120 ಟನ್ ತೂಕವಿದ್ದು, ಸುಮಾರು 500 ಕೇಜಿ ಪೇಲೋಡ್ ಅನ್ನು 500 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

    Live Tv
    [brid partner=56869869 player=32851 video=960834 autoplay=true]