Tag: ಉದ್ಯೋಗ

  • ದಯವಿಟ್ಟು ನೇಮಕಾತಿ ಆದೇಶ ನೀಡಿ – ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

    ದಯವಿಟ್ಟು ನೇಮಕಾತಿ ಆದೇಶ ನೀಡಿ – ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

    ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ (Primary Teachers ) ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಅಭ್ಯರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

    ಪರೀಕ್ಷೆ ನಡೆದು ಒಂದು ವರ್ಷ ಕಳೆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ಮತ್ತು ಸ್ಥಳ ನಿಯೋಜನೆ ಆಗಿಲ್ಲ. ಪರೀಕ್ಷೆ ಬರೆದಿದ್ದ 70 ಸಾವಿರ ಅಭ್ಯರ್ಥಿಗಳಲ್ಲಿ 13,352 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆ ಪೈಕಿ ನೇಮಕಾತಿಯಲ್ಲಿ ಕಾನೂನು ಗೊಂದಲವಿದೆ ಎಂದು ಕೆಲವರು ಹೈಕೋರ್ಟ್‌ (High Court) ಮೆಟ್ಟಿಲೇರಿದ್ದಾರೆ. ಇದೇ ಕಾರಣದಿಂದಾಗಿ ಯಾವುದೇ ಕಾನೂನು ತೊಡಕಿಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಸರ್ಕಾರ ಕೂಡಲೇ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಉತ್ತೀರ್ಣರಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

    8 ತಿಂಗಳ ಗರ್ಭಿಣಿ ಯಾದಂತಹ ಕಾವ್ಯಾ ಅವರು ಧರಣಿಯಲ್ಲಿ ಸತತ ಮೂರನೆಯ ದಿನವೂ ಭಾಗವಹಸಿ ದಯವಿಟ್ಟು ಆದೇಶ ಪ್ರತಿ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: Teachers Recruitment: ಪದವೀಧರ ಪ್ರಾಥಮಿಕ ಶಿಕ್ಷಕರಾಗಿ 13,352 ಮಂದಿ ಆಯ್ಕೆ – ಅಂತಿಮ ಪಟ್ಟಿ ಪ್ರಕಟ

    ಅಭ್ಯರ್ಥಿಗಳ ಸಮಸ್ಯೆ/ ಬೇಡಿಕೆ ಏನು?
    ನಾವೆಲ್ಲರೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ನೇಮಕಾತಿ ಆಯ್ಕೆಪಟ್ಟಿಯಲ್ಲಿ ನಮ್ಮ ಹೆಸರುಗಳಿರುವ ಕಾರಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಮ್ಮನ್ನು ಕೆಲಸದಿಂದ ಕೈಬಿಟ್ಟಿವೆ.

    ದಾಖಲಾತಿ ನೈಜತೆ ಪರಿಶೀಲನೆಗಾಗಿ ಮೂಲ ದಾಖಲಾತಿಗಳನ್ನು ಇಲಾಖೆಯ ವಶಕ್ಕೆ ಕೊಟ್ಟಿರುವುದರಿಂದ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಲು ಸಮಸ್ಯೆಯಾಗುತ್ತಿದೆ. ಈ ಕಡೆ ನೇಮಕಾತಿ ಆದೇಶ ಸಿಗದೇ ಆ ಕಡೆ ಇರುವ ಉದ್ಯೋಗವನ್ನು ಕಳೆದುಕೊಂಡ ನಮಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತಿದೆ.

     

    ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಸಂಖ್ಯೆಗಳಲ್ಲಿ ಶಿಕ್ಷಕರು ಇಲ್ಲದೆ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದ್ದು ಇಲಾಖೆ ಮತ್ತು ಸರ್ಕಾರದ ಉದ್ದೇಶ ಸಾಧನೆಯಾಗದಿರುವ ಕುಂಠಿತವಾಗುತ್ತಿದೆ.

    ಹೊಸದಾಗಿ ಆಯ್ಕೆಯಾದ ಶಿಕ್ಷಕರು ಯಾವಾಗ ನೇಮಕಾತಿ ಆದೇಶ ಸಿಗುತ್ತದೆ ಮತ್ತು ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ಆಯ್ಕೆಯಾದ್ದರಿಂದ ತಮ್ಮ ಮಕ್ಕಳನ್ನ ಯಾವ ಊರಿನ ಶಾಲೆಗೆ ದಾಖಲು ಮಾಡಿಸಬೇಕು? ಯಾವ ಸ್ಥಳದಲ್ಲಿ ವಾಸವಾಗಬೇಕು ಎಂಬುದರ ಬಗ್ಗೆ ಗೊಂದಲವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲಿ 3,200 ಕೋಟಿ ಹೂಡಿಕೆ ಮಾಡಲಿದೆ ಸೆಮಿಕಂಡಕ್ಟರ್ ಕಂಪನಿ Applied Materials

    ಬೆಂಗಳೂರಿನಲ್ಲಿ 3,200 ಕೋಟಿ ಹೂಡಿಕೆ ಮಾಡಲಿದೆ ಸೆಮಿಕಂಡಕ್ಟರ್ ಕಂಪನಿ Applied Materials

    ವಾಷಿಂಗ್ಟನ್‌: ಸೆಮಿಕಂಡಕ್ಟರ್ ಉಪಕರಣ ತಯಾರಕ (Semiconductor Equipment Maker) ಕಂಪನಿ Applied Materials ಬೆಂಗಳೂರಿನಲ್ಲಿ (Bengaluru) ಮುಂದಿನ 4 ವರ್ಷದಲ್ಲಿ 400 ದಶಲಕ್ಷ ಡಾಲರ್‌ (ಅಂದಾಜು 3,200 ಕೋಟಿ ರೂ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.

    ಚಿಪ್‌ ಕಂಪನಿ ಮೈಕ್ರಾನ್‌ ಗುಜರಾತಿನಲ್ಲಿ 2.75 ಶತಕೋಟಿ ಡಾಲರ್‌ ಹೂಡಿಕೆ ಪ್ರಕಟವಾದ ಬೆನ್ನಲ್ಲೇ ಅಪ್ಲೈಯ್ಡ್‌ ಮೆಟಿರಿಯಲ್ಸ್‌ ಹೂಡಿಕೆ ಘೋಷಣೆಯಾಗಿದೆ.  ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅಪ್ಲೈಯ್ಡ್‌ ಮೆಟಿರಿಯಲ್ಸ್‌ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಡಿಕರ್ಸನ್ (Gary E. Dickerson), ಇದು ಭಾರತವು ಬೆಳಗುವ ಸಮಯ ಎಂದು ನಾನು ಭಾವಿಸಿದ್ದೇನೆ. ನಾವು ಶೀಘ್ರದಲ್ಲೇ ಭಾರತದಲ್ಲಿ ನಾವೀನ್ಯತೆ ಕೇಂದ್ರವನ್ನು ಘೋಷಿಸಲಿದ್ದೇವೆ. ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವುದರಿಂದ ನಾವು ಅದ್ಭುತ ಯಶಸ್ಸನ್ನು ಗಳಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ 

    ಭಾರತವು ವಿಶ್ವಾಸಾರ್ಹ ಪಾಲುದಾರ ಮತ್ತು ಪ್ರಚಂಡ ಪ್ರತಿಭೆಯನ್ನು ಹೊಂದಿದೆ. ಪ್ರಧಾನಿ ಮೋದಿ ಮತ್ತು ಭಾರತದ ಜನರ ಜೊತೆ ಅದ್ಭುತ ಯಶಸ್ಸನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದೆ ಎಂದು ಹೇಳಿದರು.

    ಈ ಹೂಡಿಕೆಯಿಂದ 500 ಹೊಸ ಸುಧಾರಿತ ಎಂಜಿನಿಯರಿಂಗ್ ಉದ್ಯೋಗಗಳು ಜೊತೆಗೆ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಸಂಭಾವ್ಯವಾಗಿ 2,500 ಉದ್ಯೋಗಗಳು ಸೃಷ್ಟಿಯಾಗಲಿದೆ.

  • ಮಣಿಪುರ ಘರ್ಷಣೆ – ಮೃತರ ಕುಟುಂಬದವರಿಗೆ ಪರಿಹಾರ, ಸರ್ಕಾರಿ ಉದ್ಯೋಗ

    ಮಣಿಪುರ ಘರ್ಷಣೆ – ಮೃತರ ಕುಟುಂಬದವರಿಗೆ ಪರಿಹಾರ, ಸರ್ಕಾರಿ ಉದ್ಯೋಗ

    ಇಂಫಾಲ: ಕಳೆದ ಹಲವು ದಿನಗಳಿಂದ ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರದಲ್ಲಿ (Violence) ಪ್ರಾಣ ಕಳೆದುಕೊಂಡವರಿಗೆ ಕೇಂದ್ರ ಹಾಗೂ ಮಣಿಪುರ ರಾಜ್ಯ ಸರ್ಕಾರ ಮಂಗಳವಾರ ಪರಿಹಾರ (Compensation) ಘೋಷಿಸಿದೆ.

    ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಮಾತ್ರವಲ್ಲದೇ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ (Job) ನೀಡಲಾಗುವುದು. ಪರಿಹಾರದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಭರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಭೆ ನಡೆಸಿದ್ದು, ಈ ವೇಳೆ ಪರಿಹಾರವನ್ನು ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಾವೋವಾದಿಗಳಿಂದ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು – 5 ಬಾಂಬ್ ನಿಷ್ಕ್ರಿಯ

    ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ 1 ತಿಂಗಳಲ್ಲಿ ಸಾವಿನ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಮಣಿಪುರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿರುವುದರಿಂದ ಮೇ 31ರ ವರೆಗೂ ರಾಜ್ಯಾದ್ಯಂತ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಆರನೆಯ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್ ಖರ್ಗೆ

  • IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

    IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

    ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ (IT Sector) ಕಂಪನಿಗಳಿಂದ ಗುತ್ತಿಗೆದಾರರ (Contract Workers) ಮೂಲಕ ನೇಮಕಗೊಂಡ ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.7 ರಷ್ಟು ಕಡಿತಗೊಂಡಿದ್ದು, ಒಂದೇ ವರ್ಷದಲ್ಲಿ ಸುಮಾರು 60,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಸಂಸ್ಥೆ ಮಂಗಳವಾರ ತಿಳಿಸಿದೆ.

    ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ನಡುವೆ ಭಾರತದಲ್ಲಿ ಐಟಿ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಸುಮಾರು 60 ಸಾವಿರ ಹೊರಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವುದಾಗಿ ನೇಮಕಾತಿ ಸಂಸ್ಥೆ ತಿಳಿಸಿದೆ.

    ಐಟಿ ಕ್ಷೇತ್ರದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಕಡಿತಗೊಂಡಿರುವುದರಿಂದ ನೇಮಕಾತಿಗೂ ಹಿನ್ನಡೆಯಾಗಿದೆ ಎಂದು 120ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳನ್ನು ಪ್ರತಿನಿಧಿಸುವ ಭಾರತೀಯ ಸ್ಟಾಫಿಂಗ್‌ ಫೆಡರೇಷನ್‌ ಅಧ್ಯಕ್ಷ ಲೋಹಿತ್‌ ಭಾಟಿಯಾ ತಿಳಿಸಿದ್ದಾರೆ. ಇದರ ಹೊರತಾಗಿಯೂ ಉತ್ಪಾದನಾ ವಲಯ, ಲಾಜಿಸ್ಟಿಕ್ಸ್‌ ಮತ್ತು ಚಿಲ್ಲರೆ ವಲಯಗಳಲ್ಲಿ ದೇಶೀಯ ಗ್ರಾಹಕರ ಬೇಡಿಕೆಯಿಂದ ನೇಮಕಾತಿ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ – ಶೀಘ್ರವೇ ಕೇಂದ್ರ ತರಲಿದೆ ಟ್ರ್ಯಾಕಿಂಗ್ ಸಿಸ್ಟಮ್

    ಸುಮಾರು 194 ಶತಕೋಟಿ ಡಾಲರ್‌ ವ್ಯಾವಹಾರಿಕಾ ವಲಯವು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಚೇತರಿಸಿಕೊಂಡಿದ್ದು. ಆ ಸಮಯದಲ್ಲಿ ಜನ ರಿಮೋರ್ಟ್‌ ಸಿಸ್ಟಮ್‌, ಆನ್‌ಲೈನ್‌ ಶಾಪಿಂಗ್‌ ಹಾಗೂ ಇನ್ನಿತರ ಸಾಫ್ಟ್‌ವೇರ್‌ ಸೇವೆಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದರಿಂದ ಅಭಿವೃದ್ಧಿಗೆ ಸಹಾಯ ಮಾಡಿತ್ತು. ಈ ವರ್ಷ ಉದ್ಯೋಗಿಗಳು ಕಚೇರಿಗಳಿಗೆ ಮರಳುತ್ತಿರುವುದರಿಂದ ಸಾಫ್ಟ್‌ವೇರ್‌ ವಯಲಕ್ಕೆ ಪೆಟ್ಟು ಬಿದ್ದಂತಾಗಿದೆ. ಜೊತೆಗೆ ರಷ್ಯಾ-ಉಕ್ರೇನ್‌ ನಡುವಿನ ಯುದ್ಧವೂ ಐಟಿ ಕ್ಷೇತ್ರ ಬೆಳವಣಿಗೆ ಪೆಟ್ಟು ನೀಡಿರುವುದಾಗಿ ಭಾಟಿಯಾ ಹೇಳಿದ್ದಾರೆ.

    ಐಟಿ ವಲಯದಲ್ಲಿ ಹೊರಗುತ್ತಿಗೆ ನೌಕರರ ನೇಮಕವು ಮಾರ್ಚ್‌ ತ್ರೈಮಾಸಿಕದಿಂದ ಶೇ.6 ರಷ್ಟು ಕಡಿತಗೊಂಡಿದೆ. ಇದರಿಂದಾಗಿ ಏಪ್ರಿಲ್‌ ವೇಳೆಗೆ ದೇಶದಲ್ಲಿ ನಿರುದ್ಯೋಗ ದರವು ಶೇ.7.8 ರಿಂದ ಶೇ.8.11ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ (CMIE) ತಿಳಿಸಿದೆ. ಇದನ್ನೂ ಓದಿ: ವೊಡಾಫೋನ್‌ನಲ್ಲಿ ಶೇ.33ರಷ್ಟು ಕೇಂದ್ರದ ಪಾಲು – ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

  • ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಲೈಸೆನ್ಸ್ ರದ್ದು; ಸಚಿವ ಪರಮೇಶ್ವರ್ ಎಚ್ಚರಿಕೆ

    ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಲೈಸೆನ್ಸ್ ರದ್ದು; ಸಚಿವ ಪರಮೇಶ್ವರ್ ಎಚ್ಚರಿಕೆ

    ತುಮಕೂರು: ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು (Private Company) ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ (Employment) ಕೊಡದಿದ್ದರೇ ಅವರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ನೂತನ ಸಚಿವ ಡಾ.ಜಿ ಪರಮೇಶ್ವರ್ (G Parameshwar) ಎಚ್ಚರಿಕೆ ನೀಡಿದ್ದಾರೆ.

    ತುಮಕೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ನೀಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಬಂದಿದೆ. ಈ ಕುರಿತಂತೆ ಚಿಂತನೆ ನಡೆಸಿ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಯುವಕರು ಉದ್ಯೋಗ ದೊರೆಯುತ್ತಿಲ್ಲ ಎಂದು ಆತಂಕಪಡಬೇಕಿಲ್ಲ. ಕಾಂಗ್ರೆಸ್‌ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿದೆ ಎಂಧು ಅಭಯ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದ 5 ಕೆ.ಜಿ ಜೊತೆಗೆ ಒಟ್ಟು 15 ಕೆ.ಜಿ ಅಕ್ಕಿ ಕೊಡಬೇಕು: ಅಶ್ವಥ್ ನಾರಾಯಣ್ ಒತ್ತಾಯ

    ನಾನು ಯುವಕನಾಗಿದ್ದಾಗ ತುಮಕೂರು ನಗರದ ಜೂನಿಯರ್ ಕಾಲೇಜು ಗ್ರೌಂಡ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ಪಾಲ್ಗೊಳ್ಳಲು ಅಭ್ಯಾಸ ಮಾಡುತ್ತಿದ್ದೆ. ಅಲ್ಲಿಂದ ಬೆಂಗಳೂರಿಗೆ ಹೋದೆ, ನಂತರ ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಹೋದೆ, ಕೊನೆಗೆ ನನ್ನ ಊರು ತುಮಕೂರಿಗೆ ಬಂದು ಸೇರಿದ್ದೇನೆ. ಎಲ್ಲೆಲ್ಲೋ ಹೋಗಿ ಬಂದರೂ ಏನೂ ಮಾಡೋಕೆ ಆಗ್ಲಿಲ್ಲ. ಹಾಗಾಗಿ ವಾಪಸ್ ತುಮಕೂರು ಹೊರವಲಯದ ಗೊಲ್ಲಳ್ಳಿಗೆ ಬಂದು ಸೇರಿದ್ದೇನೆ. ಇಲ್ಲಿನ ಜನರ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸುಮಲತಾರ ಚೊಚ್ಚಲ ತಮಿಳು ಚಿತ್ರದಲ್ಲಿ ನಟಿಸಿದ್ದರು ಶರತ್ ಬಾಬು : ನೆನಪು ಹಂಚಿಕೊಂಡ ಸಂಸದೆ

  • ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ವಾಷಿಂಗ್ಟನ್‌: ನಾವು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯನ್ನು ನಡೆಸುತ್ತಿಲ್ಲ. ಹೀಗಾಗಿ ಶೇ.80 ರಷ್ಟು ಉದ್ಯೋಗಿಗಳನ್ನು ತೆಗೆದರೂ ಕಂಪನಿ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಟ್ವಿಟ್ಟರ್‌ (Twitter) ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಹೇಳಿದ್ದಾರೆ.

    ಅಮೆರಿಕದ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶೇ.20ರಷ್ಟು ಉದ್ಯೋಗಿಗಳನ್ನು ಇಟ್ಟುಕೊಂಡು ಸಂಸ್ಥೆಯನ್ನು ನಡೆಸುವುದಕ್ಕೆ ಕಷ್ಟವಾಗಿಲ್ಲವೇ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಮಸ್ಕ್‌, ನೀವು ವೈಭವೀಕರಿಸಿದ ಕಾರ್ಯಕರ್ತ ಸಂಘಟನೆಯನ್ನು ನಡೆಸಲು ಪ್ರಯತ್ನಿಸದಿದ್ದರೆ ಮತ್ತು ಸೆನ್ಸರ್‌ಶಿಪ್‌ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸದಿದ್ದರೆ ಬಹಳಷ್ಟು ಜನರನ್ನು ಕೈಬಿಡಬಹುದು. ಹೀಗಾಗಿ ಶೇ.80 ರಷ್ಟು ಉದ್ಯೋಗವನ್ನು ಕಡಿತ (Job Cut) ಮಾಡಿದರೂ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಸಾಧ್ಯವಾದಷ್ಟು ನ್ಯಾಯಯುತ ಮತ್ತು ಪಕ್ಷಪಾತವಿಲ್ಲದೇ ಕೆಲಸ ಮಾಡುವುದು ಹೊಸ ಟ್ವಿಟ್ಟರ್‌ನ ಗುರಿ. ಈ ಕಾರಣಕ್ಕೆ ನಾವು ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಒಲವು ತೋರುವುದಿಲ್ಲ ಎಂದರು. ಇದನ್ನೂ ಓದಿ: ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದಾಗ ಸುಮಾರು 8 ಸಾವಿರ ಉದ್ಯೋಗಿಗಳಿದ್ದರು. ಈಗ ಉದ್ಯೋಗಿಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದು ಶೇ.80ರಷ್ಟು ಮಂದಿಗೆ ಗೇಟ್‌ಪಾಸ್‌ ನೀಡಲಾಗಿದೆ.

     

    ನಷ್ಟದಲ್ಲಿರುವ ಕಂಪನಿಯನ್ನು ಮೇಲಕ್ಕೆ ಎತ್ತಲೂ ಉದ್ಯೋಗ ಕಡಿತ ಅನಿವಾರ್ಯ. ಇಲ್ಲದೇ ಇದ್ದರೆ ಕಂಪನಿಯೇ ಮುಳಗಬಹುದು ಎಂದು ಮಸ್ಕ್‌ ತಮ್ಮ ನಿರ್ಧಾರವನ್ನು ಹಿಂದೆ ಸಮರ್ಥಿಸಿಕೊಂಡಿದ್ದರು.

    ಟ್ವಿಟ್ಟರ್‌ ಎಡಚಿಂತನೆಯನ್ನು ಬಲವಾಗಿ ಬೆಂಬಲಿಸುತ್ತದೆ. ನಾನು ಇಲ್ಲಿಯವರೆಗೆ ಡೆಮಾಕ್ರೆಟಿಕ್‌ ಬೆಂಬಲಿಸುತ್ತಿದ್ದೆ ವೋಟು ಹಾಕುತ್ತಿದ್ದೆ. ಆದರೆ ಇನ್ನು ಮುಂದೆ ನಾನು ಡೆಮಾಕ್ರೆಟಿಕ್‌ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ. ರಿಪಬ್ಲಿಕ್‌ಗೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದರು.

  • ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿ: ಬೊಮ್ಮಾಯಿ

    ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿ: ಬೊಮ್ಮಾಯಿ

    ಹಾವೇರಿ: ಕಳೆದ 4 ವರ್ಷಗಳಲ್ಲಿ ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ (Employment) ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಭಾನುವಾರ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕಲ್ಯಾಣ ಗ್ರಾಮದ ಜಿಟಿಟಿಸಿ (GTTC) ನಿವೇಶನದ ಬಳಿ ಆಯೋಜಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂ ಕಲ್ಯಾಣ ಗ್ರಾಮದಲ್ಲಿ ನೂತನ ತರಬೇತಿ ಸಂಕೀರ್ಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ಮಾಹಿತಿ ಪ್ರಾವಿಡೆಂಟ್ ಫಂಡ್ ಮತ್ತು ಇಎಸ್‌ಐನಲ್ಲಿ ದಾಖಲಾಗಿರುವ 18 ರಿಂದ 25 ವರ್ಷಗಳೊಳಗಿನವರು ದಾಖಲಿಸಿಕೊಂಡಿರುವುದನ್ನು ಆಧರಿಸಿ, ಅಧ್ಯಯನ ಮಾಡಿ ಮಾಹಿತಿ ನೀಡಲಾಗಿದೆ ಎಂದರು.

    ಅನುತ್ತೀರ್ಣರಾದವರಿಗೂ ಅವಕಾಶ: ಕೇವಲ ಎಂಜಿನಿಯರಿಂಗ್, ಐಟಿ ಬಿಟಿ ಕಲಿತವರಿಗಷ್ಟೇ ಅಲ್ಲ, ಪಿಯುಸಿ ಅನುತ್ತೀರ್ಣರಾದವರಿಗೆ ಕೆಲಸ ದೊರೆಯಬೇಕು. ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹಲವು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಗ್ಗಾಂವಿ, ಬಂಕಾಪುರ, ಉಡಚೆನ್ನಾಪುರ ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿ ಹಾಗೂ ಸವಣೂರು ಐಟಿಐಗಳು ತಲಾ 3 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೆಎಸ್‌ಆರ್‌ಟಿಐ ಪಾಲಿಟೆಕ್ನಿಕ್ ನಿರ್ಮಾಣವಾಗುತ್ತಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಕೌಶಲ್ಯಾಭಿವೃದ್ಧಿ, ತರಬೇತಿಯನ್ನು ಎಲ್ಲಾ ಸಂಸ್ಥೆಗಳಲ್ಲಿಯೂ ದೊರೆಯುವಂತಾಗಬೇಕೆನ್ನುವ ಕನಸು ನನ್ನದು ಎಂದರು.

    ಸವಣೂರಿನಲ್ಲಿ ಜವಳಿ ತರಬೇತಿಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿಯ ಪಶು ವೈದ್ಯಕೀಯ ಪಾಲಿಟೆಕ್ನಿಕ್ ಅನ್ನು 6 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಲ್ಲಾ ಸಂಸ್ಥೆಗಳು ಸದೃಢವಾಗಿ ಬೆಳೆದು ಸಾವಿರಾರು ಯುವಕರಿಗೆ ತರಬೇತಿ ನೀಡಿದರೆ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಕಳೆದ 4 ವರ್ಷಗಳಲ್ಲಿ ಕೋವಿಡ್ ಇದ್ದರೂ ಕೂಡಾ ಆರ್ಥಿಕತೆ ಕಾಪಾಡಿಕೊಂಡು ಬಂದಿದ್ದರ ಪರಿಣಾಮವಾಗಿ ವಿದೇಶಿ ಬಂಡವಾಳ ಹೆಚ್ಚು ಹರಿದು ಬಂದಿದೆ. ಕರ್ನಾಟಕ ಪ್ರಗತಿಪರ ಆಡಳಿಗಾರರ ಕೈಯಲ್ಲಿ ಇದ್ದುದರಿಂದ ಇದು ಸಾಧ್ಯವಾಗಿದೆ ಎಂದರು.

    ಸ್ವಾಭಿಮಾನದ ಬದುಕು: ಮುಂದಿನ ದಿನಗಳಲ್ಲಿ ಹೆಚ್ಚಿನ ಆರ್ಥಿಕತೆ, ಮೂಲ ಸೌಕರ್ಯ, ತರಬೇತಿ ಕೇಂದ್ರಗಳು ದೊಡ್ಡ ಪ್ರಮಾಣದಲ್ಲಿ ಆದರೆ ಕರ್ನಾಟಕದ ಯುವಕರಿಗೆ ಕೆಲಸ, ಸ್ವಾಭಿಮಾನದ ಬದುಕು ಬದುಕಲು ಸಾಧ್ಯ ಎಂಬ ನಿಟ್ಟಿನಲ್ಲಿ ಪ್ರಗತಿಪರ, ದೂರದೃಷ್ಟಿ ಇರುವ ಯುವಕರ ಭವಿಷ್ಯವನ್ನು ಬರೆಯಲು ಈ ನಿರ್ಣಯಗಳನ್ನು ಮಾಡಲಾಗಿದೆ ಎಂದರು.

    ಜವಳಿ ಪಾರ್ಕ್‌ನಲ್ಲಿ 10 ಸಾವಿರ ಉದ್ಯೋಗ: ಸುಮಾರು 73 ಕೋಟಿ ರೂ.ಗಳ ಜಿಟಿಟಿಸಿ ಇಲ್ಲಿ ಬರಲಿದೆ. 4 ವರ್ಷಗಳ ಡಿಪ್ಲೊಮಾ ಕೋರ್ಸ್, ಅಲ್ಪಾವಧಿ, ಸರ್ಟಿಫೈಡ್ ಕೋರ್ಸ್ಗಳು ಲಭ್ಯವಿದೆ. ಜಗತ್ತಿನ ಆಧುನಿಕ ತರಬೇತಿಯನ್ನು ಇಲ್ಲಿ ಪಡೆಯಬಹುದು. ಜವಳಿ ಪಾರ್ಕ್, ಪಶು ವೈದ್ಯಕೀಯ ಪಾಲಿಟೆಕ್ನಿಕ್ ಬರುತ್ತಿದ್ದು, ಜವಳಿ ಪಾರ್ಕ್‌ನಲ್ಲಿಯೇ 10 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದನ್ನು ಹೊರತುಪಡಿಸಿ 5 ಸಾವಿರ ಜನರಿಗೆ ಗಾರ್ಮೆಂಟ್‌ಗಳಲ್ಲಿ ಕೆಲಸ ದೊರೆಯುತ್ತದೆ. ಯುವಕರಿಗೆ ಉದ್ಯೋಗದ ಭವಿಷ್ಯ ಬರೆಯಲು ಕಾರ್ಯಕ್ರಮ ರೂಪಿಸಿದ್ದು ಇದರ ಪ್ರಯೋಜನವನ್ನು ಯುವಕರು ಪಡೆಯಬೇಕೆಂದರು.

    ಕೆಲಸ ಸಿಗುವ ಗ್ಯಾರಂಟಿ: ಜಿಟಿಟಿಸಿ ಬಹಳ ಪ್ರಮುಖ ಸಂಸ್ಥೆ. ಎಂಜಿನಿಯರಿಂಗ್ ಮುಗಿಸಿದ ನಂತರ ಜಿಟಿಟಿಸಿ ಬೆಂಗಳೂರಿನಲ್ಲಿ 6 ತಿಂಗಳ ತರಬೇತಿ ಪಡೆದಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಒಂದು ಭಾಗ ಎಂಜಿನಿಯರಿಂಗ್‌ನಲ್ಲಿ ಕಲಿತಿದ್ದಾರೆ. ಜಿಟಿಟಿಸಿಯಲ್ಲಿ 10 ಭಾಗ ಕಲಿತೆವು. ಇದರ ಪರಿಣಾಮವಾಗಿ ಟಾಟಾ ಮೋಟರ್ಸ್‌ನಲ್ಲಿ ನೌಕರಿ ಲಭಿಸಿತು. ಇಲ್ಲಿ ತರಬೇತಿ ಪಡೆದವರಿಗೆ ಶೇ.100 ರಷ್ಟು ಕೆಲಸ ಸಿಗುವ ಗ್ಯಾರಂಟಿ ಇದೆ. ಇಲ್ಲಿನ ತರಬೇತಿ ವಿಧಾನ ಬಹಳಷ್ಟು ಉತ್ತಮವಾಗಿದೆ. ಪ್ರಮಾಣಪತ್ರವಿದ್ದರೆ ಶೇ.50 ರಷ್ಟು ಅಂಕಗಳನ್ನು ಉದ್ಯೋಗದಲ್ಲಿ ನೀಡುತ್ತಾರೆ. ಜಿಟಿಟಿಸಿ ಪ್ರವೇಶ ಪಡೆದು ತರಬೇತಿ ಪಡೆದರೆ ಉಜ್ವಲ ಭವಿಷ್ಯವಿರುತ್ತದೆ ಎಂದರು. ಇದನ್ನೂ ಓದಿ: ಮಾನ ಇದ್ದವರು ಮಾನದ ಬಗ್ಗೆ ಯೋಚನೆ ಮಾಡುತ್ತಾರೆ : ಡಿಕೆಶಿ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

    1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ: ಭಾರತಕ್ಕೆ ಕೌಶಲ್ಯವಿರುವ ಯುವಕರು ಅಗತ್ಯ. ನಮ್ಮ ಪ್ರಧಾನಿಗಳು ಜನಸಂಖ್ಯೆಯನ್ನು ಬಂಡವಾಳ ಎಂದು ಪರಿಗಣಿಸಿ, ಶೇ.40 ರಷ್ಟಿರುವ ಯುವಜನಾಂಗಕ್ಕೆ ಕೌಶಲ್ಯ ನೀಡಿದರೆ. ಕೈಗಾರೀಕರಣಕ್ಕೆ ಬಹಳ ದೊಡ್ಡ ಕೊಡುಗೆ ನೀಡಬಹುದು ಎಂದು ಸ್ಕಿಲ್ ಇಂಡಿಯಾ ಯೋಜನೆ ಪ್ರಾರಂಭ ಮಾಡಿದರು. ಇದರಲ್ಲಿ ಹಲವಾರು ವಿಧದ ತರಬೇತಿ ನೀಡಿ ಯುವಕರನ್ನು ತಯಾರು ಮಾಡಬಹುದಾಗಿದೆ. ರಾಜ್ಯದಲ್ಲಿ 1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ ನೀಡಲಾಗಿದೆ ಎಂದರು.

    ಸಂಸ್ಥೆಯಾಗಿ ಪರಿವರ್ತನೆ: ಈ ವರ್ಷ ಜಿಟಿಟಿಸಿ ಒಂದು ಸಂಸ್ಥೆಯನ್ನಾಗಿ ಪರಿವರ್ತನೆ ಮಾಡಲಾಗುತ್ತಿದ್ದು ಹೊಸ ಸಂರಚನೆ ನೀಡಲು ತೀರ್ಮಾನಿಸಿ ಜಿಟಿಟಿಸಿ, ಐಟಿಐ, ಪಾಲಿಟೆಕ್ನಿಕ್ ಮೇಲ್ದರ್ಜೆಗೇರಿಸಲು ಬಹಳಷ್ಟು ಒತ್ತು ನೀಡಲಾಗಿದೆ. ಪಿಯುಸಿ ಅನುತ್ತೀರ್ಣರಾದವರಿಗೂ ವಿಶೇಷ ತರಬೇತಿಗೆ ಪ್ರವೇಶ ದೊರೆಯಲಿದೆ. 3-6 ತಿಂಗಳು ತರಬೇತಿ ನೀಡಿ ಉದ್ಯೋಗ ದೊರೆಯುವವರೆಗೆ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆ ಕಲ್ಪಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯಗೆ ಜ್ಞಾನ ಕಡಿಮೆ ಅನ್ಸುತ್ತೆ : ಆರ್. ಅಶೋಕ್

    ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವ ಶಿವರಾಮ್ ಹೆಬ್ಬಾರ್, ಮೊದಲಾದವರು ಉಪಸ್ಥಿತರಿದ್ದರು.

  • ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    ಮುಂಬೈ: ತ್ವರಿತ ಬಡ್ತಿ ಹಾಗೂ ಇತರೆ ಆರ್ಥಿಕ ಪ್ರಯೋಜನಗಳು ಸಿಗಲು ವ್ಯಕ್ತಿಯೊಬ್ಬ ಪತ್ನಿ (Wife) ಬಳಿ ಬಾಸ್ ಜೊತೆ ಮಲಗಲು ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದಿದೆ.

    ಪುಣೆಯ ಅಮಿತ್ ಛಾಬ್ರಾ ಎಂಬ ವ್ಯಕ್ತಿಯನ್ನು ಮಹಿಳೆ ಮದುವೆ ಆಗಿದ್ದಳು. ಮದುವೆಯ ನಂತರ ಅಮಿತ್ ಛಾಬ್ರಾ ಕೆಟ್ಟ ಸಹವಾಸಗಳಿಗೆ ಸಿಲುಕಿ ಪತ್ನಿಯನ್ನು ಅನೈತಿಕ ಹಾಗೂ ಕಾನೂನುಬಾಹಿರ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ.

    ಅಷ್ಟೇ ಅಲ್ಲದೇ ಅಮಿತ್ ಸಹೋದರನು ಕೂಡ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಜೊತೆಗೆ ಆಕೆಯ ಮಾವ ಕೂಡ 12 ವರ್ಷದ ಮಗಳ ಎದುರೇ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ವಿರೋಧಿಸಿದಾಗ ಆಕೆಗೆ ಥಳಿಸುತ್ತಿದ್ದ.

    ಈ ಹಿನ್ನೆಲೆಯಲ್ಲಿ ಆಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆ ವೇಳೆ ಆಕೆಯ ಪತಿ ಇನ್ನೂ ಮುಂದೆ ಕಿರುಕುಳ ನೀಡುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದ. ಆದರೆ ಕೆಲ ದಿನಗಳ ನಂತರ ಮತ್ತೆ ಕಿರುಕುಳ ಪ್ರಾರಂಭವಾಗಿತ್ತು. ಇದನ್ನೂ ಓದಿ: ಮಂಡ್ಯಕ್ಕೆ ಮೋದಿ ಭೇಟಿಗೂ ಮುನ್ನವೇ ಶಾಕ್- ನಾರಾಯಣ ಗೌಡರಿಂದ ಪಕ್ಷಾಂತರದ ಸುಳಿವು!

    ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಕೋರ್ಟ್ ಮೊರೆ ಹೋಗಿದ್ದಾಳೆ. ನಂತರ ನ್ಯಾಯಾಲಯವು ಮಹಿಳಾ ಕಲ್ಯಾಣ ಅಧಿಕಾರಿಯಿಂದ ತನಿಖೆಗೆ ಆದೇಶಿಸಿತು. ತನಿಖೆಯ ನಂತರ ಮಹಿಳೆಯ ಪತಿ, ಸೋದರ ಮಾವ, ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಜೆಎನ್‍ಯುನಲ್ಲಿ ಹೊಸ ರೂಲ್ಸ್ – ಹಿಂಸಾಚಾರ ನಡೆಸಿದ್ರೇ ವಿದ್ಯಾರ್ಥಿಗಳ ಪ್ರವೇಶ ರದ್ದು

  • ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

    ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

    ನವದೆಹಲಿ: ಜನವರಿ-ಫೆಬ್ರವರಿ ತಿಂಗಳಿನಲ್ಲಿ 417 ಕಂಪನಿಗಳು 1.2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು (Employees) ಜಾಗತಿಕವಾಗಿ ವಜಾಗೊಳಿಸಿದೆ (Lay Off).

    ಬಿಗ್ ಟೆಕ್‌ನಿಂದ ಸ್ಟಾರ್ಟ್ಅಪ್‌ನವರೆಗೆ 1,046 ಕಂಪನಿಗಳು 1.61 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು 2022ರಲ್ಲಿ ವಜಾಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ವರ್ಷದಿಂದ ಈ ಫೆಬ್ರವರಿವರೆಗೆ ಒಟ್ಟು 3 ಲಕ್ಷ ಟೆಕ್ (Tech) ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ವರ್ಗಾವಣೆ, ಅಧಿಕ ನೇಮಕ, ಕಂಪನಿಯ ಆರ್ಥಿಕ ಪರಿಸ್ಥಿತಿ, ಕೋವಿಡ್ 19 ಸಾಂಕ್ರಮಿಕದಿಂದ ಆದ ನಷ್ಟದಿಂದಾಗಿ ಟೆಕ್ ಕಂಪನಿಗಳು (Tech Company) ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದಂತೆಯೇ ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ತಿಂಗಳ ಆರಂಭದಲ್ಲಿ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ತಿಳಿಸಿದೆ. ಇದನ್ನೂ ಓದಿ: ಪುಟಿನ್‌ನನ್ನು ಅವರ ಆಪ್ತ ವಲಯದವರೇ ಕೊಲ್ತಾರೆ: ಝೆಲೆನ್ಸ್ಕಿ ಭವಿಷ್ಯ

    ವೆಚ್ಚವನ್ನು ಕಡಿತಗೊಳಿಸಲು ಸ್ವೀಡಿಷ್ ಟಿಲಿಕಾಂ ಕಂಪನಿ ಎರಿಕ್ಸನ್ ಸುಮಾರು 8,500 ಉದ್ಯೋಗಿಗಳ ಪೈಕಿ 8% ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

    ಜಾಗತಿಕ ಸಲಹಾ ಸಂಸ್ಥೆಯಾದ McKinsey & Co ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಚಿಸುತ್ತಿದೆ. ಮತ್ತೊಂದು ಪ್ರಮುಖ ಸಂಸ್ಥೆಯಾದ ಕೆಪಿಎಮ್‌ಜಿ ತನ್ನ ಉದ್ಯೋಗಿಗಳ ಪೈಕಿ ಶೇ.2ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು ಇದು ಯುಎಸ್ ನಲ್ಲಿ ಸುಮಾರು 700 ಉದ್ಯೋಗಿಗಳ ಮೇಲೆ ಪರಿಣಾಮವನ್ನು ಬೀರಲಿದೆ. ಇದನ್ನೂ ಓದಿ: ನೆಟ್‌ನಲ್ಲಿ ಬೆವರಳಿಸಿದ ಕೊಹ್ಲಿ – ನಿರ್ಣಾಯಕ ಪಂದ್ಯದ ಗೆಲುವಿಗೆ ಭಾರತ ಭರ್ಜರಿ ತಯಾರಿ

  • 3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

    3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

    ಬೆಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ರಾಜ್ಯದಲ್ಲಿ 59 ಯೋಜನೆಗಳ 3,455.39 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

    ಮಂಗಳವಾರ ಬೆಂಗಳೂರಿನ (Bengaluru) ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ಆರ್. ನಿರಾಣಿ (Murugesh Nirani) ಅವರ ಅಧ್ಯಕ್ಷತೆಯಲ್ಲಿ ನಡೆದ 137ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಒಟ್ಟು 59 ಯೋಜನೆಗಳಿಂದ 3,455.39 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 18,567 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ಆರ್. ನಿರಾಣಿ ತಿಳಿಸಿದ್ದಾರೆ. ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಅಧಿಕ ಹೆಚ್ಚು ಬಂಡವಾಳ ಹೂಡಿಕೆಯ 11 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 2186.70 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 10,559 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.

    15 ಕೋಟಿ ರೂ.ನಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 46 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1049.19 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 8,008 ಜನರಿಗೆ ಉದ್ಯೋಗ ಸೃಜನೆಯಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ ಎರಡು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 219.50 ಕೋಟಿ ರೂ. ಹೂಡಿಕೆಯಾಗಲಿದೆ.

    ಅನುಮೋದನೆ ನೀಡಿರುವ ಪ್ರಸ್ತಾವನೆಗಳು:
    * ಮೈಸೂರ್ ಸ್ಟೀಲ್ಸ್ ಲಿಮಿಟೆಡ್- ಮೇಟಗಾನಹಳ್ಳಿ. ಮೈಸೂರು -ಹೂಡಿಕೆ 405.43 ಕೋಟಿ ರೂ., ಉದ್ಯೋಗ 200

    * ಎನ್.ಐ.ಡಿ.ಸಿ ಇಂಡಸ್ಟ್ರೀಯಲ್ ಆಟೋಮೋಷನ್ ಇಂಡಿಯಾ ಲಿಮಿಟೆಡ್- ಕೋಟುರು ಬೇಲೂರು, ಇಎಂಸಿ ಕೈಗಾರಿಕಾ ಪ್ರದೇಶ- ಹೂಡಿಕೆ 350 ಕೋಟಿ ರೂ., ಉದ್ಯೋಗ 730

    * ಸಿಲಾನ್ ಬಿವೆರೇಜ್ ಲಿಮಿಟೆಡ್- ಎಫ್‌ಎಮ್‌ಸಿಜಿ, ಕ್ಲಸ್ಟರ್ ಧಾರವಾಡ- ಹೂಡಿಕೆ 256.3 ಕೋಟಿ ರೂ., ಉದ್ಯೋಗ 200

    * ಬಾಲಾಜಿ ವೇರರ್ಸ್ ಪ್ರೈ ಲಿಮಿಟೆಡ್ -ಕಣಗಲ್, ಕೈಗಾರಿಕಾ ಪ್ರದೇಶ ಬೆಳಗಾವಿ ಜಿಲ್ಲೆ – ಹೂಡಿಕೆ 251.25 ಕೋಟಿ ರೂ., ಉದ್ಯೋಗ 500

    * ಮಂಜುಶ್ರೀ ಟೆಕ್ನೋಪಾರ್ಕ್ ಲಿಮಿಟೆಡ್ – ಬಡಗುಪ್ಪೆ, ಕೆಲ್ಲಂಬಳ್ಳಿ, ಕೈಗಾರಿಕಾ ಪ್ರದೇಶ ಚಾಮರಾಜನಗರ – ಹೂಡಿಕೆ 253 ಕೋಟಿ ರೂ., ಉದ್ಯೋಗ 500

    * ಕ್ಸಿಸೋಡ ಇಂಡಿಯಾ ಪ್ರೈ ಲಿಮಿಟೆಡ್ – ಶಿರಾ ಕೈಗಾರಿಕಾ ಪ್ರದೇಶ ತುಮಕೂರು – ಹೂಡಿಕೆ 138 ಕೋಟಿ ರೂ., ಉದ್ಯೋಗ 160

    * ಮಹಾಮಾನವ್ ಇನ್‍ಸ್ಪಾಟ್ ಪ್ರೈ ಲಿಮಿಟೆಡ್ – ಬೆಳಗಲ್ ಗ್ರಾಮ, ಬಳ್ಳಾರಿ – ಹೂಡಿಕೆ 90 ಕೋಟಿ ರೂ., ಉದ್ಯೋಗ 90

    * ಎ.ಸಿ.ಆರ್ ಪ್ರಾಜೆಕ್ಟ್ – ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ, – ಹೂಡಿಕೆ 85 ಕೋಟಿ ರೂ., ಉದ್ಯೋಗ 350

    * ನಿಯೋಬಿ ಸಲ್ಯೂಷನ್ ಪ್ರೈ ಲಿಮಿಟೆಡ್- ಎಎಲ್‍ಜಿಸಿ ಕ್ಲಸ್ಟರ್, ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶ, ಧಾರವಾಡ, ಹೂಡಿಕೆ -50 ಕೋಟಿ ರೂ., ಉದ್ಯೋಗ 563

    * ಅಭಯ್ ಆಗ್ರೋ ಫುಡ್ ಪ್ರೈಲಿಮಿಟೆಡ್- ಗಬಾರ ಗ್ರಾಮ, ಕೊಪ್ಪಳ ಜಿಲ್ಲೆ- ಹೂಡಿಕೆ 32.65 ಕೋಟಿ ರೂ., ಉದ್ಯೋಗ -35

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k