Tag: ಉದ್ಯೋಗ ಮೇಳ

  • ಉದ್ಯೋಗ ನೀಡದ ಮೋದಿಯಿಂದ ಸುಳ್ಳು ಹೇಳಿಕೆ-ಕಲ್ಯಾಣ ಕರ್ನಾಟಕಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಬದ್ಧ: ಸಿಎಂ

    ಉದ್ಯೋಗ ನೀಡದ ಮೋದಿಯಿಂದ ಸುಳ್ಳು ಹೇಳಿಕೆ-ಕಲ್ಯಾಣ ಕರ್ನಾಟಕಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಬದ್ಧ: ಸಿಎಂ

    ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಭಿವೃದ್ದಿಗೆ ಕ್ರಮ ವಹಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು.

    ಕಲಬುರಗಿಯ (Kalaburagi) ಕೆಸಿಟಿ ಕಾಲೇಜು ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳವನ್ನು (Job Fair) ಉದ್ಘಾಟಿಸಿ ಅವರು ಮಾತನಾಡಿದರು. ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಈ ಹತ್ತು ವರ್ಷಗಳ ಅವರ ಅಧಿಕಾವಧಿಯಲ್ಲಿ ಇಪ್ಪತ್ತು ಲಕ್ಷ ಉದ್ಯೋಗ ಕೊಡಲು ಅವರಿಗೆ ಆಗಿಲ್ಲ. ಇದು ಅವರೇ ಹೇಳಿದ ಮಾತು. ಮೋದಿಯವರು ಉದ್ಯೋಗ ನೀಡದೇ ಸುಳ್ಳು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆನೇಕಲ್‌ನಲ್ಲಿ ಅದ್ಧೂರಿಯಾಗಿ ನಡೆದ ಒಣ ಕರಗ ಮಹೋತ್ಸವ

    ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದೆವು. ಯುವನಿಧಿ ಯೋಜನೆಯಡಿಯಲ್ಲಿ ಪದವಿ ನಿರುದ್ಯೋಗಿ ಯುವಕರಿಗೆ 2,000 ರೂ. ಹಾಗೂ ಡಿಪ್ಲೋಮಾ ಪಾಸ್ ಆದವರಿಗೆ 1500 ರೂ. ಗೌರವಧನವನ್ನು ಎರಡು ವರ್ಷದ ಅವಧಿಯವರೆಗೆ ಕೊಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ

    ರಾಜ್ಯ ಸರ್ಕಾರ ಕೌಶಲ್ಯ ತರಬೇತಿ ನೀಡಲು ಕೌಶಲ್ಯಭಿವೃದ್ಧಿ ಇಲಾಖೆ ತೆರೆದು ಅದರಡಿಯಲ್ಲಿ ಮಾರುಕಟ್ಟೆಯ ಬೇಡಿಕೆಯ ಅನ್ವಯ ತರಬೇತಿ ನೀಡಲಾಗುತ್ತಿದೆ. ಇಂದು ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗದಿರುವವರು ನಿರಾಸೆರಾಗಬೇಡಿ ನಿಮಗೆ ಮುಂದೊಂದು ದಿನ ಉದ್ಯೋಗ ಕೊಡಿಸುತ್ತೇವೆ ಭರವಸೆಯ ಮಾತುಗಳನ್ನಾಡಿದರು. ಇದನ್ನೂ ಓದಿ: ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಡಿಗ್ರಿ ಪಾಸಾದವರಲ್ಲಿ 18.9% ಹಾಗೂ ಡಿಪ್ಲೋಮಾ ಪಾಸಾದವರಲ್ಲಿ 17.1% ನಿರುದ್ಯೋಗ ಇದೆ. ನಮ್ಮ ರಾಜ್ಯದಲ್ಲಿ 2.5% ನಿರುದ್ಯೋಗ ಇದೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ. ಇದಕ್ಕೆ ರಾಜ್ಯ ಸರ್ಕಾರ ಉದ್ಯೋಗ ಒದಗಿಸುವಲ್ಲಿ ಕೈಗೊಂಡ ಕ್ರಮಗಳೇ ಸಾಕ್ಷಿ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ಎಫ್‌ಡಿಎ ಹೆಚ್ಚು ಹೆಚ್ಚು ಆದರೆ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳು ಬರಬೇಕೆಂದರೆ ಹೆಚ್ಚುವರಿ 60% ಪ್ರೋತ್ಸಾಹ ಧನ ಕೊಡಬೇಕು ಎಂದು ಖರ್ಗೆ ಅವರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ಮಾಡಿ, ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಅಭಿವೃದ್ದಿಗೆ ಕ್ರಮ ವಹಿಸುತ್ತದೆ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ

    ಈ ವೇಳೆ ಇಂದು ನೇಮಕವಾದ 10 ಮಂದಿ ಯುವಕರಿಗೆ ನೇಮಕಾತಿ ಪತ್ರ ವಿತರಿಸಿ, ಶುಭ ಹಾರೈಸಿದರು.

  • ಕಲಬುರಗಿ ಜಿಲ್ಲಾಡಳಿತದಿಂದ ಉದ್ಯೋಗ ಮೇಳ – 189 ಜನರಿಗೆ ಸ್ಥಳದಲ್ಲೇ ನೇಮಕಾತಿ

    ಕಲಬುರಗಿ ಜಿಲ್ಲಾಡಳಿತದಿಂದ ಉದ್ಯೋಗ ಮೇಳ – 189 ಜನರಿಗೆ ಸ್ಥಳದಲ್ಲೇ ನೇಮಕಾತಿ

    ಕಲಬುರಗಿ: ಇಲ್ಲಿನ ತಾಲೂಕ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ (job Fair) 189 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು.

    ಕಲಬುರಗಿ, ಬೆಂಗಳೂರು (Bengaluru), ಹೈದರಾಬಾದ್‌, ಪುಣೆ ಮೂಲದ ಸುಮಾರು 30 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು, 1,349 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಸ್ಥಳದಲ್ಲಿಯೇ 189 ಜನರು ನೇಮಕವಾಗಿದ್ದು, ಉಳಿದಂತೆ 300 ಅಭ್ಯರ್ಥಿಗಳನ್ನು ಕಂಪನಿಗಳು (Private Company) ಶಾರ್ಟ್ ಲಿಸ್ಟ್ ಮಾಡಿದ್ದು, ಮುಂದೆ ಅವರನ್ನು ಸಂಪರ್ಕಿಸಿ ಅಂತಿಮ ಹಂತದ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದೆಂದು ತಿಳಿಸಿವೆ. ಇದನ್ನೂ ಓದಿ: ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚನೆ ಕೇಸ್ – 2.1 ಕೆಜಿ ಚಿನ್ನಾಭರಣದ ಮೂಲ ಪತ್ತೆ

    ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಇವರ ಸಹಯೋಗದಲ್ಲಿ ನಡೆದ ಬೃಹತ್ ಉದ್ಯೋಗ ಮೇಳವನ್ನು ಜಿಲ್ಲಾ ಪಂಚಾಯ್ ಸಿಇಓ ಭಂವರ್ ಸಿಂಗ್ ಮೀನಾ ಉದ್ಘಾಟಿಸಿದರು.

    ಈ ಸಂದರ್ಭದಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರುದ್ಯೋಗ ಯುವಕ- ಯುವತಿಯರನ್ನು ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 30 ಕಂಪನಿಗಳು ಭಾಗವಹಿಸಿ, ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನ ನಡೆಸಿದ್ದಾರೆ. ಉದ್ಯೋಗ ಪಡೆದುಕೊಂಡವರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದ ಅವರು, ಸಾಂಕೇತಿಕವಾಗಿ 5 ಜನ ಯುವಕ-ಯುವತಿಯರಿಗೆ ಉದ್ಯೋಗದ ಆದೇಶ ಪತ್ರ ನೀಡಿದರು. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್‌? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?

    ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಇಓ ಎಂ.ಡಿ ಸೈಯದ್ ಪಟೇಲ್, ಸ್ಟೇಟ್ ಬ್ಯಾಂಕ್ ಇಂಡಿಯಾದ ಕಲಬುರಗಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ನಂದಕಿಶೋರ ಸೇರಿದಂತೆ ಅನೇಕರು ಇದ್ದರು. ಜಿಲ್ಲಾ ಪಂಚಾಯತಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಲೋಹಿತ್ ಕುಮಾರ್ ನಿರೂಪಿಸಿದರೆ ಅರುಣ್ ಕುಮಾರ್ ವಂದಿಸಿದರು. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು: ಬಿ.ಕೆ ಹರಿಪ್ರಸಾದ್

  • ಸಂಕೇಶ್ವರ | ಜ.11 ರಂದು ಬೃಹತ್ ಉದ್ಯೋಗ ಮೇಳ

    ಸಂಕೇಶ್ವರ | ಜ.11 ರಂದು ಬೃಹತ್ ಉದ್ಯೋಗ ಮೇಳ

    ಚಿಕ್ಕೋಡಿ: ಮಾಜಿ ಸಚಿವ ಹಾಗೂ ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ. ಮಲ್ದಾರಿಗೌಡ ಪಾಟೀಲ್ ಇವರ ಸ್ಮರಣಾರ್ಥ ಜ.11ರಂದು ಸಂಕೇಶ್ವರ (Sankeshwar) ಪಟ್ಟಣದ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಕುಣಾಲ್ ಪಾಟೀಲ್ ತಿಳಿಸಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿಯ ಸಂಕೇಶ್ವರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಶಾಸಕರಾಗಿ, ನೀರಾವರಿ ಸಚಿವರಾಗಿ ಈ ಭಾಗದ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿ, ಗಡಿ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಮಲ್ದಾರಿಗೌಡ ಪಾಟೀಲ್‌ರ ಸೇವೆ ಸ್ಮರಣೀಯವಾಗಿದ್ದು, ಅವರ ಸೇವಾ ಕೈಂಕರ್ಯಗಳನ್ನು ಮುಂದುವರಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಹಾಗೂ ಗಡಿ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಧಾರವಾಡದ ಕರಾವಳಿ ಟೀಚರ್ಸ್ ಹೆಲ್ಸ್ಲೈನ್‌ನವರ ಸಹಯೋಗದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜಾಬ್ ಜಂಕ್ಷನ್, ಯುಥ್, ಅಪ್ಟಿಮಂ, ಮ್ಯಾನ್ ಪವರ್ ಸಂಸ್ಥೆಗಳು ಭಾಗವಹಿಸಲಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಎನ್ ಟಿಸಿ, ಡಿಇಡಿ, ಬಿಇಡಿ, ಬಿಪಿಇಡಿ, ಎಂ.ಕಾಂ, ಬಿಎ, ಬಿಎಸ್ಸಿ, ಎಂಎಸ್ಸಿ , ಎಂಕಾಂ, ಎಂಎಸ್ಸಿ, ಬಿಬಿಎ, ಬಿಸಿಎ, ಐಟಿಐ, ಫಾರ್ಮಸಿ, ಬಿಇ, ಎಂಟೆಕ್, ಎಂಎಸ್‌ಡಬ್ಲ್ಯೂ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದರು.‌

    ಹೆಚ್ಚಿನ ಮಾಹಿತಿಗೆ ಮತ್ತು ಹೆಸರು ನೋಂದಾಯಿಸಲು . 9743218480, 483585840, 8762903585, 9980116526 ಸಂಪರ್ಕಿಸಬಹುದು.

  • 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

    71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

    ನವದೆಹಲಿ: ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ನೇಮಕಗೊಂಡ 71,000 ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ನೇಮಕಾತಿ ಪತ್ರ (Appointment Letter) ವಿತರಿಸಿದರು.

    ಉದ್ಯೋಗ ಮೇಳದ ಭಾಗವಾಗಿ ದೇಶದ 41 ಭಾಗಗಳಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಿಸಿ ಶುಭ ಹಾರೈಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್‌, ಆಟೋ ಸಂಪೂರ್ಣ ಜಖಂ!

    ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಮಾತನಾಡಿ, 71 ಸಾವಿರ ನೇಮಕಾತಿಗಳಲ್ಲಿ 20,901 (29.21%) ಒಬಿಸಿ ಸಮುದಾಯದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ. 11,355 (15.8%) ಪರಿಶಿಷ್ಟ ಜಾತಿ ಮತ್ತು 6,862 (9.59%) ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ನೇಮಕವಾಗಿದ್ದಾರೆ. 2004ರಿಂದ 2014ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಉದ್ಯೋಗದ ಅಂಕಿಅAಶಗಳು 60% ರಿಂದ 70% ರಷ್ಟು ಹೆಚ್ಚಾಗಿದೆ. 2004ರಿಂದ 2014ರವರೆಗೆ 7,22,161 ನೇಮಕಾತಿ ನಡೆದಿದೆ. ಕಳೆದ 10 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ಸಂಖ್ಯೆ ಸುಮಾರು 11 ಲಕ್ಷಕ್ಕೆ ತಲುಪಿದೆ ಎಂದರು. ಇದನ್ನೂ ಓದಿ: Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

    ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಸರ್ಕಾರದ ಎಲ್ಲಾ ನೀತಿಗಳನ್ನು ರೂಪಿಸುವಾಗ ಯುವಕರಿಗೆ ವಿಶೇಷ ಗಮನ ನೀಡಲಾಗುತ್ತದೆ. ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ನೀತಿಗಳನ್ನು ಬದಲಿಸಿದೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಉತ್ತೇಜಿಸಿದೆ. ಇಂದು ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

    ಇಂದು ಭಾರತವು ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ನವೀಕರಿಸಬಹುದಾದ ಇಂಧನದಿAದ ಸಾವಯವ ಕೃಷಿಗೆ, ಬಾಹ್ಯಾಕಾಶದಿಂದ ರಕ್ಷಣಾ ಕ್ಷೇತ್ರಕ್ಕೆ, ಪ್ರವಾಸೋದ್ಯಮದಿಂದ ಸ್ವಾಸ್ಥ್ಯ ಕ್ಷೇತ್ರ ಸೇರಿ ಪ್ರತಿಯೊಂದು ಕ್ಷೇತ್ರದಲ್ಲೂ ಅನುಕೂಲವಾಗಿದೆ. ದೇಶವನ್ನು ಮುನ್ನಡೆಸಲು ಯುವ ಪ್ರತಿಭೆಗಳನ್ನು ಬೆಳೆಸುವ ಅಗತ್ಯವಿದೆ ಎಂದರು. ಇದನ್ನೂ ಓದಿ: ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ – ಆರೋಪಿ ಅಂದರ್‌

    ನವ ಭಾರತವನ್ನು ನಿರ್ಮಿಸಲು ಆಧುನಿಕ ಶಿಕ್ಷಣ ವ್ಯವಸ್ಥೆಯ ಅಗತ್ಯವಿತ್ತು. ಎನ್‌ಇಪಿ ಮೂಲಕ ದೇಶವು ಈಗ ಆ ದಿಕ್ಕಿನತ್ತ ಸಾಗಿದೆ. ಅಧ್ಯಯನದ ಸಮಯದಲ್ಲಿ ಗ್ರಾಮೀಣ, ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಯುವಕರಿಗೆ ಭಾಷೆ ತಡೆಗೋಡೆಯಾಗುತ್ತಿತ್ತು. ಈಗ ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ಪರೀಕ್ಷೆಯ ನೀತಿಯನ್ನು ಮಾಡಿದೆ. ಸರ್ಕಾರವು ಯುವಕರಿಗೆ 13 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಒದಗಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಣ್ಣು ಮಗಳು ಊಹಿಸಿಕೊಂಡು ಈ ರೀತಿಯ ಆರೋಪ ಮಾಡೋಕೆ ಸಾಧ್ಯನಾ? – ಎಂ.ಬಿ ಪಾಟೀಲ್

  • ಮಂಡ್ಯ To ಇಂಡಿಯಾ ಉದ್ಯೋಗ ಮೇಳ ಯಶಸ್ವಿ – 1,100 ಮಂದಿಗೆ ಉದ್ಯೋಗ

    ಮಂಡ್ಯ To ಇಂಡಿಯಾ ಉದ್ಯೋಗ ಮೇಳ ಯಶಸ್ವಿ – 1,100 ಮಂದಿಗೆ ಉದ್ಯೋಗ

    ರಾಮನಗರ/ಮಂಡ್ಯ: ಮಂಡ್ಯ ಟು ಇಂಡಿಯಾ (Mandya To India) ಧ್ಯೇಯದೊಂದಿಗೆ ನಡೆದ ಬೃಹತ್ ಉದ್ಯೋಗ ಮೇಳಕ್ಕೆ (Job Fair) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ ಕಳೆದುಕೊಂಡ ಯುವತಿ, ಎರಡೂ ಕಣ್ಣು ಕಾಣದ ಯುವಕ ಸೇರಿ ಸಾವಿರಾರು ಯುವಕರ ಬದುಕಿಗೆ ಉದ್ಯೋಗ ಮೇಳ ಬೆಳಕಾಗಿದೆ. ಇದೇ ವೇಳೆ ಕುಮಾರಸ್ವಾಮಿಯವರು (HD Kumaraswamy) ಮತ್ತೊಂದು ಭರವಸೆ ನೀಡಿದ್ದು, ಮಂಡ್ಯ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

    ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಮಂಡ್ಯದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೆಚ್‌ಡಿಕೆ ಪಣ ತೊಟ್ಟಿದ್ದಾರೆ. ಮಂಡ್ಯ ಟು ಇಂಡಿಯಾ ಧ್ಯೇಯದೊಂದಿಗೆ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಹಾಗೂ ಇಂದು (ಶನಿವಾರ) ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಬರೋಬ್ಬರಿ 1,100 ಮಂದಿಗೆ ಕೆಲಸ ಸಿಕ್ಕಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರಿಂದಲೇ ನೇಮಕಾತಿ ಪತ್ರ ಪಡೆದ ಯುವಕ, ಯುವತಿಯರು ಕುಮಾರಸ್ವಾಮಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ಭಾರತ ಎಲ್ಲರಿಗಿಂತ ಮೊದಲು 6G ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಿದೆ: ಪಿಯೂಷ್ ಗೋಯಲ್

    ಉದ್ಯೋಗ ಮೇಳದಲ್ಲಿ ಬಿಇಎಮ್‌ಎಲ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ, ಇನ್ಫೋಸಿಸ್, ಹೆಚ್ಎ‌ಎಲ್, ಟೊಯೋಟಾ, ಇಂಡಿಯನ್ ಆರ್ಮಿ, ನೇವಿ, ಏರ್ ಫೋರ್ಸ್, ಹೋಂಡೈ, ಬಜಾಜ್, ಎನ್‌ಎಸ್‌ಐಎಲ್, ಟಿವಿಎಸ್ ಸೇರಿದಂತೆ 159 ಕಂಪನಿಗಳು ಭಾಗಿಯಾಗಿದ್ದವು. ಮಂಡ್ಯ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಹಲವೆಡೆಯಿಂದ 5 ಸಾವಿರಕ್ಕೂ ಅಧಿಕ ಯುವಕ ಹಾಗೂ ಯುವತಿಯರು ಉದ್ಯೋಗ ಅರಸಿ ಬಂದಿದ್ದರು. ಈ ಪೈಕಿ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ ಕಳೆದುಕೊಂಡ ಕೃತಿಕಾ ಎಂಬಾಕೆಗೆ ಬಿಹೆಚ್‌ಇಎಲ್ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು, ಎರಡೂ ಕಣ್ಣು ಕಾಣದ ಅಜೇಯ್ ಕುಮಾರ್ ಎಂಬಾತನಿಗೂ ಉದ್ಯೋಗ ದೊರಕಿದೆ. ಕುಮಾರಸ್ವಾಮಿ ಅವರೇ ನೇಮಕಾತಿ ಪತ್ರ ನೀಡುವ ಜೊತೆಗೆ ಆತ್ಮಸ್ಥೈರ್ಯ ತುಂಬಿದರು. ಅವಳಿ ಸಹೋದರಿಯರಾದ ನವ್ಯ ಹಾಗೂ ನಂದಿತಾ ಟಾಟಾ ಮೋಟರ್ಸ್ ಕಂಪನಿಗೆ ನೇಮಕಗೊಂಡಿದ್ದಾರೆ. ಇನ್ನು ಉದ್ಯೋಗ ಮೇಳದಲ್ಲಿ ಕೆಲಸ ಗಿಟ್ಟಿಸಿಕೊಂಡ ಯುವಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಇದನ್ನೂ ಓದಿ: ಮುಡಾದಲ್ಲಿ ಸಹಕರಿಸಿದ್ದಕ್ಕೆ ಕುಮಾರ್ ನಾಯಕ್‌‌ಗೆ MP ಟಿಕೆಟ್: ವಿಜಯೇಂದ್ರ

    ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಅಂತ್ಯ ಅಲ್ಲ ಆರಂಭ. ಸದ್ಯ 1,100 ಮಂದಿಗೆ ನೇಮಕಾತಿ ಪತ್ರ ನೀಡಲಾಗಿದೆ. ಮೇಳದಲ್ಲಿ ನೋಂದಣಿ ಮಾಡಿಕೊಂಡಿರುವ ಎಲ್ಲರಿಗೂ ಹಂತ ಹಂತವಾಗಿ ಮೂರು ತಿಂಗಳ ಒಳಗಾಗಿ ಕೆಲಸ ಕೊಡಿಸಲಾಗುವುದು. ಮುಂದಿನ ದಿನಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಮಂಡ್ಯಕ್ಕೆ ತರುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯ ಭರವಸೆ ನೀಡಿದರು. ಇದನ್ನೂ ಓದಿ: ಜಾತಿ ಜನಗಣತಿ ವರದಿ ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ: ಪ್ರದೀಪ್ ಈಶ್ವರ್

    ಒಟ್ಟಾರೆ ಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದು, ತಮ್ಮ ಕೆಲಸದ ಮೂಲಕವೇ ರಾಜಕೀಯ ವಿರೋಧಿಗಳಿಗೆ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ

  • ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ ಭಾಗ್ಯ

    ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ ಭಾಗ್ಯ

    – ಯುವತಿಗೆ ನೇಮಕಾತಿ ಪತ್ರ ನೀಡಿದ ಹೆಚ್.ಡಿ.ಕುಮಾರಸ್ವಾಮಿ

    ಮಂಡ್ಯ: ಕಾರವಾರದ ಶಿರೂರು ಗುಡ್ಡ ಕುಸಿತದಲ್ಲಿ (Shiruru Landslide) ಹೆತ್ತವರನ್ನು ಕಳೆದುಕೊಂಡು ಅನಾಥಳಾಗಿದ್ದ ಯುವತಿಗೆ ಮಂಡ್ಯದ ಉದ್ಯೋಗ ಮೇಳದಲ್ಲಿ ಉದ್ಯೋಗ ಭಾಗ್ಯ ಲಭಿಸಿದೆ. ಯುವತಿಗೆ ನೇಮಕಾತಿ ಪತ್ರ ನೀಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅಭಿನಂದಿಸಿದ್ದಾರೆ.

    ಮಂಡ್ಯ ಟೂ ಇಂಡಿಯಾ (Mandya To India) ಘೋಷದೊಂದಿದೆ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಮಂಡ್ಯದಲ್ಲಿ ನಡೆಯಿತು. ಎರಡನೇ ದಿನವೂ ಉದ್ಯೋಗ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ಇದನ್ನೂ ಓದಿ: 2028ರ ವರೆಗೆ ಈ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಸಿಎಂ: ಹೆಚ್‌ಡಿಕೆ

    ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡ ಯುವತಿಯೂ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಮೃತ ಹೋಟಲ್ ಮಾಲೀಕನ ಪುತ್ರಿ ಕೃತಿಗೆ ಬಿಹೆಚ್‌ಇಎಲ್‌ನಲ್ಲಿ ಉದ್ಯೋಗ ಲಭಿಸಿತು. ಆಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೇಮಕಾತಿ ಪತ್ರ ನೀಡಿದರು.

    ಉದ್ಯೋಗ ಮೇಳದಲ್ಲಿ ನವ್ಯ ಹಾಗೂ ನಂದಿತ ಎಂಬ ಅವಳಿ ಸಹೋದರಿಯರಿಗೂ ಉದ್ಯೋಗ ಸಿಕ್ಕಿತು. ಟಾಟಾ ಮೋಟಾರ್ಸ್ನಲ್ಲಿ ಸಹೋದರಿಯರು ಉದ್ಯೋಗಕ್ಕೆ ನೇಮಕಗೊಂಡರು. ಇದನ್ನೂ ಓದಿ: ʻಮಂಡ್ಯ To ಇಂಡಿಯಾʼ – ಮಂಡ್ಯದಲ್ಲಿ ಇಂದಿನಿಂದ 2 ದಿನ ಬೃಹತ್ ಉದ್ಯೋಗ ಮೇಳ

    ಸಾವಿರಾರು ಮಂದಿ ಯುವಕ-ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಉದ್ಯೋಗಕ್ಕೆ ಆಯ್ಕೆ ಆದವರಿಗೆ ಕುಮಾರಸ್ವಾಮಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.

  • ʻಮಂಡ್ಯ To ಇಂಡಿಯಾʼ – ಮಂಡ್ಯದಲ್ಲಿ ಇಂದಿನಿಂದ 2 ದಿನ ಬೃಹತ್ ಉದ್ಯೋಗ ಮೇಳ

    ʻಮಂಡ್ಯ To ಇಂಡಿಯಾʼ – ಮಂಡ್ಯದಲ್ಲಿ ಇಂದಿನಿಂದ 2 ದಿನ ಬೃಹತ್ ಉದ್ಯೋಗ ಮೇಳ

    ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ  ಅವರ ನೇತೃತ್ವದಲ್ಲಿ ಸಕ್ಕರೆ ನಾಡು ಮಂಡ್ಯ ನಗರದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಸುಮಾರು 150ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗಿಯಾಗಿವೆ.

    ಮಂಡ್ಯ ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು (ಅ.18) ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ನಾಳೆಯೂ (ಅ.19) ಇದೇ ಸಮಯದಲ್ಲಿ ಉದ್ಯೋಗ ಮೇಳ ಜರುಗಲಿದೆ. ಆಸಕ್ತ ಯುವಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ನಿರಂತರ ಮಳೆಯಿಂದ ಹೆಚ್ಚಿದ ಒಳಹರಿವು – ತುಮಕೂರಿನ ಮಾರ್ಕೋನಹಳ್ಳಿ ಜಲಾಶಯ ಭರ್ತಿ

    ಉದ್ಯೋಗ ಮೇಳದಲ್ಲಿ ದೇಶದ ಉದ್ದಗಲಕ್ಕೂ ಇರುವ 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳಕ್ಕೆ ಭಾಗಿಯಾಗಿವೆ. ಮಂಡ್ಯ ಭಾಗದ 3,000ಕ್ಕೂ ಹೆಚ್ಚು ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಕೊಡಿಸುವ ಗುರಿಯನ್ನು ಈ ಮೂಲಕ ಹಾಕಿಕೊಳ್ಳಲಾಗಿದೆ. ಇದನ್ನೂ ಓದಿ: ರಾಯಚೂರು | ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣ ಕಳ್ಳತನ

    ʻಮಂಡ್ಯ ಟು ಇಂಡಿಯಾʼ ಎನ್ನುವ ಘೋಷವಾಕ್ಯದೊಂದಿಗೆ ಉದ್ಯೋಗ ಮೇಳ ನಡೆಯುತ್ತಿದ್ದು, ಮಂಡ್ಯದ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು ಆಗಲಿದೆ. ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವುದು ಆಗಿದ್ದು, ಈ ಮೂಲಕ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ

    ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್ ಸೇರಿದಂತೆ 150ಕ್ಕೂ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿವೆ.

  • 71 ಸಾವಿರ ಮಂದಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಮೋದಿ

    71 ಸಾವಿರ ಮಂದಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಮೋದಿ

    ನವದೆಹಲಿ: ಕೇಂದ್ರ ಸರ್ಕಾರದ (Government Of India) ರೋಜ್‌ಗಾರ್ ಮೇಳದ (Rozgar Mela) ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕವಾದ 71 ಸಾವಿರ ಉದ್ಯೋಗಿಗಳಿಗೆ ವರ್ಚುವಲ್ ಆಗಿ ಪ್ರಧಾನಿ ಮೋದಿ (Narendra Modi) ನೇಮಕಾತಿ ಪತ್ರಗಳನ್ನ ವಿತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೇಮಕಾತಿ ವ್ಯವಸ್ಥೆಯ ಬದಲಾವಣೆಗಳು ಭ್ರಷ್ಟಾಚಾರಗಳನ್ನು ಕೊನೆಗೊಳಿಸಿವೆ ಎಂದು ವ್ಯಾಖ್ಯಾನಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ದೇಶಾದ್ಯಂತ ಒಟ್ಟು 45 ಕಡೆ ಉದ್ಯೋಗ ಮೇಳ ನಡೆದಿದೆ. ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದಿದೆ.

    ಬೆಂಗಳೂರು ಕಾರ್ಯಕ್ರಮದ ನೇತೃತ್ವವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮೈಸೂರು ಕಾರ್ಯಕ್ರಮದ ನೇತೃತ್ವವನ್ನು ಸಚಿವೆ ಶೋಭಾ ಕರಂದ್ಲಾಜೆ ವಹಿಸಿಕೊಂಡಿದ್ದರು. ಮೋದಿ ಭಾಷಣದ ವೇಳೆ ಸಂಸದ ತೇಜಸ್ವಿ ಸೂರ್ಯ ನಿದ್ದೆಗೆ ಜಾರಿದ್ದು ಕಂಡುಬಂದಿತು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

  • ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ನಾವು ಹಠವಾದಿಗಳು: ಅನಂತ್ ಕುಮಾರ್ ಹೆಗ್ಡೆ

    ಬೊಗಳುವ ನಾಯಿಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ನಾವು ಹಠವಾದಿಗಳು: ಅನಂತ್ ಕುಮಾರ್ ಹೆಗ್ಡೆ

    ಬಳ್ಳಾರಿ: ನಾವು ನಿಜವಾಗಿಯೂ ಹಠವಾದಿಗಳು. ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಮಣ್ಣಿನ ಬಗ್ಗೆ ನಮ್ಮ ಕಮಿಟ್ಮೆಂಟ್ ಇದೆ. ನಾವೂ ಭಾಷಣ ಮಾಡಲು ಬಂದಿಲ್ಲ. ಬಳ್ಳಾರಿಯಲ್ಲಿ ಕೌಶಲ್ಯ ತರಬೇತಿ ವಿಶ್ವವಿದ್ಯಾಲಯ ಸ್ಪಾಪನೆಗೆ ನಾವೂ ಸಿದ್ಧವಿದ್ದೇವೆ. ಜಮೀನು ನೀಡಲು ಯಾರು ಮುಂದೆ ಬರ್ತಾರೋ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ. ನಾವೂ ನಿಜವಾಗಿಯೂ ಹಠವಾದಿಗಳು. ಬೊಗಳುವ ನಾಯಿಗಳಿಗೆ ನಾವೂ ತೆಲೆಕೆಡಿಸಿಕೊಳ್ಳಲ್ಲ ಅಂತ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ರು.

    ಪ್ರತಿ ವರ್ಷ 2 ಕೋಟಿ ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಭಾರತ ಕೌಶಲ್ಯ ತರಬೇತಿಯ ಹಬ್ ಆಗುತ್ತಿದೆ. ನಮ್ಮ ವ್ಯಕ್ತಿತ್ವವನ್ನು, ಬದುಕನ್ನು ನಾವೂ ರೂಪಿಸಿಕೊಳ್ಳಬೇಕಿದೆ ನಾನು ಮತ ಕೇಳಲು ಬಂದಿಲ್ಲ, ಪ್ರಧಾನ ಮಂತ್ರಿಯವರ ಕನಸು ನನಸು ಮಾಡಬೇಕಿದೆ. ಉದ್ಯೋಗ ಯಾರಿಗೆ ಸಿಗಲ್ಲವೋ ಅವರಿಗೆ ಕೌಶಲ್ಯ ತರಬೇತಿ ಅವಶ್ಯವಾಗಿದೆ ಅಂದ್ರು.

    ಕನ್ನಡದವರು ಕನ್ನಡ ಮಾತನಾಡಿ, ತೆಲಗು ಬಂದವರು ತೆಲುಗಿನಲ್ಲಿ ಮಾತನಾಡಿ, ನಮಗೆ ಇಂಗ್ಲಿಷ್ ಅಮ್ಮ ಯಾಕೆ ಬೇಕು. ಭಾಷೆ ಇರೋದು ಸಂಹವನಕ್ಕೆ, ಸ್ಟೈಲ್ ಹೊಡೆಯಲು ಅಲ್ಲ. ನಮಗೆ ಸ್ಟೈಲ್ ಬೇಕಿಲ್ಲ. ನಮಗೆ ಭಾಷೆ ಅರ್ಥ ಆಗಬೇಕು. ಯಾರಿಗೋ ಅರ್ಥ ಮಾಡಿಸಲು ನಾನು ನನ್ನ ತಾಯಿಯನ್ನು ಬೇವರ್ಸಿ ಮಾಡಲು ಸಿದ್ಧನಿಲ್ಲ. ನಾನು ಇದ್ದುದನ್ನು ಇದ್ದ ಹಾಗೆ ಹೇಳುವ ವ್ಯಕ್ತಿ. ಯಾರಾದ್ರೂ ಒಪ್ಪಿಕೊಳ್ಳಲಿ ಬಿಡಲಿ ನಾನು ಇರೋದೆ ಹೀಗೆ ಅನ್ನೋ ವ್ಯಕ್ತಿ ಅಂತ ಹೇಳಿದ್ರು.

  • ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಕೌಶಲ್ಯ ಉದ್ಯೋಗ ಮೇಳ ಆರಂಭ

    ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಕೌಶಲ್ಯ ಉದ್ಯೋಗ ಮೇಳ ಆರಂಭ

    ಬಳ್ಳಾರಿ: ಜಿಲ್ಲೆಯ ತೋರಣಗಲ್‍ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕೌಶಲ್ಯ ಮತ್ತು ಉದ್ಯೋಗ ಮೇಳ ಆರಂಭವಾಗಿದೆ.

    ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಈ ಮೇಳಕ್ಕೆ ರಾಜ್ಯದ ವಿವಿಧಡೆಯಿಂದ 36 ಸಾವಿರದ 500 ಅಭ್ಯರ್ಥಿಗಳು ಉದ್ಯೋಗ ಬಯಸಿ ನೊಂದಣಿ ಮಾಡಿಕೊಂಡಿದ್ದಾರೆ. 96 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದು 11 ಸಾವಿರದ 218 ಜನರಿಗೆ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಆಫರ್ ಲೆಟರ್ ನೀಡಲಿದ್ದಾರೆಂದು ತಿಳಿಸಿದರು.

    ಉದ್ಯೋಗ ಮೇಳದಲ್ಲಿ ಟಾಟಾ, ಹಿಂದುಜಾ, ಹೊಂಡಾ ಸೇರಿದಂತೆ ಒಟ್ಟು 96 ಕಂಪನಿಗಳು ಭಾಗವಹಿಸಿವೆ. ಉದ್ಯೋಗ ಸಂದರ್ಶನಕ್ಕಾಗಿ 150 ಕೌಂಟರ್‍ಗಳನ್ನು ತೆರೆಯಲಾಗಿದೆ. ಉದ್ಯೋಗಕ್ಕಾಗಿ 7600 ಐಟಿಐ, 7000 ಪಿಯುಸಿ, 3200 ಎಸ್‍ಎಸ್‍ಎಲ್‍ಸಿ, 500 ಬಿಇ, 2500 ಸ್ನಾತೋಕತ್ತರ ಮತ್ತು 5500 ಇತರೆ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇಕಡಾ 82 ರಷ್ಟು ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದಾರೆ.

    ನಿಗಮದಿಂದ ಮುಂದಿನ ದಿನದಲ್ಲಿ ಭಾರತ ಸೈನ್ಯದಲ್ಲಿ ಸೇರಲು ಬಯಸುವ ಒಂದು ಸಾವಿರ ಯುವ ಜನತೆಗೆ ಬೆಳಗಾವಿ ಮತ್ತು ಮಡಿಕೇರಿಯಲ್ಲಿ ಎರೆಡು ತಿಂಗಳು ತರಬೇತಿ ನೀಡಲಿದೆ. ಈ ತಿಂಗಳ 19 ರಂದು ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಹೇಳಿದರು.

    ವಿಧಾನ ಪರಿಷತ್ ಸದಸ್ಯರಾದ ಅಮರನಾಥ್ ಪಾಟೀಲ್, ಅಲ್ಲಂ ವೀರಭದ್ರಪ್ಪ ಹಾಗೂ ಸಂಡೂರು ಶಾಸಕ ತುಕಾರಾಂ ಸೇರಿದಂತೆ ಹಲವು ಗಣ್ಯರು ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.