Tag: ಉದ್ಯೋಗಿಗಳು

  • ಬರೋಬ್ಬರಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

    ವಾಷಿಂಗ್ಟನ್: ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನ (Facebook) ಮಾತೃ ಕಂಪನಿ ಮೆಟಾ (Meta) ತನ್ನ ಕಂಪನಿಯ ಶೇ.13 ರಷ್ಟು ಅಂದರೆ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಳನ್ನು (Employees) ವಜಾಗೊಳಿಸಿದೆ (layoffs).

    ಈ ಬಗ್ಗೆ ತಿಳಿಸಿರುವ ಮೆಟಾದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾರ್ಕ್ ಜುಕರ್‌ಬರ್ಗ್ (Mark Zuckerberg), ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ನಿರ್ಧಾರಕ್ಕೆ ಹೇಗೆ ಬಂದಿದ್ದೇವೆ ಎಂಬುದಕ್ಕೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಈ ನಿರ್ಧಾರ ಎಲ್ಲರಿಗೂ ಕಷ್ಟ ತಂದಿದೆ ಎಂಬುದು ನನಗೆ ತಿಳಿದಿದೆ. ವಜಾಗೊಳಗಾಗುತ್ತಿರುವವರ ಬಗ್ಗೆ ನಾನು ವಿಷಾದಿಸುತ್ತೇನೆ ಎಂದಿದ್ದಾರೆ.

    2004 ರಲ್ಲಿ ಫೇಸ್‌ಬುಕ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕಂಪನಿಯಲ್ಲಿ ನಡೆದಿರುವ ವಜಾದ ಪ್ರಕ್ರಿಯೆಯಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ್ದಾಗಿದೆ. ಸುಮಾರು 87 ಸಾವಿರ ಉದ್ಯೋಗಿಗಳು ಇರುವ ಫೇಸ್‌ಬುಕ್‌ನಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದರೂ, ಹೊಸ ನೇಮಕಾತಿಯನ್ನು ನಡೆಸಲು ಸಿದ್ಧವಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

    ಕಂಪನಿ ಆರ್ಥಿಕ ಕುಸಿತ ಹಾಗೂ ಹೆಚ್ಚಿನ ಸ್ಪರ್ಧೆಗಳಿಂದಾಗಿ ಜಾಹೀರಾತುಗಳ ನಷ್ಟವನ್ನು ಅನುಭವಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ವಜಾ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ. ಆದರೂ ಹೊಸ ಉದ್ಯೋಗಿಗಳಿಗೆ ನೇಮಕಾತಿಯನ್ನು 2023ರ ಮಾರ್ಚ್ ವರೆಗೆ ತಡೆಹಿಡಿಯಲಾಗಿದ್ದು, ಬಳಿಕ ಅದನ್ನು ವಿಸ್ತರಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಬನ್ನಿ

    Live Tv
    [brid partner=56869869 player=32851 video=960834 autoplay=true]

  • ಶುರುವಾಯ್ತು ಸಾಮೂಹಿಕ ವಜಾ ಭೀತಿ – ಟ್ವಿಟ್ಟರ್ ಉದ್ಯೋಗಿಗಳಿಗೆ ಮೇಲ್

    ಶುರುವಾಯ್ತು ಸಾಮೂಹಿಕ ವಜಾ ಭೀತಿ – ಟ್ವಿಟ್ಟರ್ ಉದ್ಯೋಗಿಗಳಿಗೆ ಮೇಲ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೂ ಮೊದಲೇ ಅದರ ಅನಗತ್ಯ ಉದ್ಯೋಗಿಗಳನ್ನು (Employees) ಸಾಮೂಹಿಕವಾಗಿ ವಜಾಗೊಳಿಸುವ (Layoff) ಬಗ್ಗೆ ತಿಳಿಸಿದ್ದರು. ಇದೀಗ ಮಸ್ಕ್ ಟ್ವಿಟ್ಟರ್‌ನ ಮಾಲೀಕನಾಗಿ 1 ವಾರ ಕಳೆದಿದ್ದು, ಉದ್ಯೋಗಿಗಳನ್ನು ವಜಾಗೊಳಿಸಲು ಈಗಿಂದಲೇ ಪ್ರಾರಂಭಿಸುವ ಸುಳಿವು ನೀಡಿದ್ದಾರೆ.

    ಶುಕ್ರವಾರ ಬೆಳಗ್ಗೆ ಈ ಬಗ್ಗೆ ಕಂಪನಿ ತನ್ನ ಉದ್ಯೋಗಿಗಳಿಗೆ ಮೇಲ್ ಮಾಡಿದೆ. ಅದರಲ್ಲಿ ಟ್ವಿಟ್ಟರ್ ಅನ್ನು ಆರೋಗ್ಯಕರ ಹಾದಿಯಲ್ಲಿ ಇರಿಸುವ ಪ್ರಯತ್ನವಾಗಿ ನಾವು ಜಾಗತಿಕವಾಗಿ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದಾಗಿ ತಿಳಿಸಲಾಗಿದೆ.

    ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಮಾಲೀಕರ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಈ ಸಾಮೂಹಿಕ ವಜಾದ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂಬುದು ವರದಿಯಾಗಿದೆ. ಆದರೂ ಟ್ವಿಟ್ಟರ್‌ನ ಎಷ್ಟು ಉದ್ಯೋಗಿಗಳು ವಜಾಗೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿಯಿಲ್ಲವಾದರೂ ಕಂಪನಿಯಲ್ಲಿ ಈಗಾಗಲೇ ಇರುವ ಅರ್ಧದಷ್ಟು ಉದ್ಯೋಗಿಗಳು ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲೂ ಸಂಚಾರ ಆರಂಭಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ – ನ.11ಕ್ಕೆ ಮೋದಿ ಚಾಲನೆ

    _Elon Musk

    ವರದಿಗಳ ಪ್ರಕಾರ ಟ್ವಿಟ್ಟರ್‌ನ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಹಾಗೂ ಉದ್ಯೋಗಿ ಬ್ಯಾಡ್ಜ್ ಪ್ರವೇಶವನ್ನು ಅಮಾನತುಗೊಳಿಸಲಾಗುವುದು ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ. ಇದು ಟ್ವಿಟ್ಟರ್‌ನ ಪ್ರತಿ ಉದ್ಯೋಗಿ, ಟ್ವಿಟ್ಟರ್‌ನ ವ್ಯವಸ್ಥೆ ಹಾಗೂ ಗ್ರಾಹಕರ ಡೇಟಾವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್

    Live Tv
    [brid partner=56869869 player=32851 video=960834 autoplay=true]

  • ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್

    ಬ್ಲೂ ಟಿಕ್ ಪಡೆಯಲು ತಿಂಗಳಿಗೆ 8 ಡಾಲರ್ ಪಾವತಿಸಿ: ಎಲೋನ್ ಮಸ್ಕ್

    ವಾಷಿಂಗ್ಟನ್: ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆಯೇ ಅದರ ಕಾರ್ಯವೈಖರಿ ಸೇರಿದಂತೆ ಹೆಚ್ಚಿನ ವಿಷಯಗಳು ಬದಲಾಗುತ್ತವೆ ಎಂದು ತಿಳಿಸಲಾಗಿತ್ತು. ಅದರಂತೆಯೇ ಇದೀಗ ಮಸ್ಕ್ ಬ್ಲೂ ಟಿಕ್ (Blue Tick) ಮಾರ್ಕ್ ಹೊಂದಿರುವ ಖಾತೆಗಳಿಗೆ ಪಾವತಿ ಮಾಡುವ ಹೊಸ ಯೋಜನೆಯನ್ನು ದೃಢಪಡಿಸಿದ್ದಾರೆ.

    ಹಲವು ಟೀಕೆಗೆ ಒಳಗಾಗಿಯೂ ಮಸ್ಕ್ ಇದೀಗ ಬಳಕೆದಾರರ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಬೇಕೆಂದರೆ ತಿಂಗಳಿಗೆ 8 ಡಾಲರ್ (ಸುಮಾರು 661 ರೂ.) ಪಾವತಿಸಬೇಕು ಎಂದಿದ್ದಾರೆ. ಒಂದು ವೇಳೆ ಇಲ್ಲಿಯವರೆಗೆ ಬ್ಲೂ ಟಿಕ್ ಹೊಂದಿದ್ದ ಬಳಕೆದಾರರು ಪ್ರತಿ ತಿಂಗಳು ನಿಗದಿತ ಪಾವತಿಯನ್ನು ಮಾಡದೇ ಹೋದಲ್ಲಿ ತಮ್ಮ ಬ್ಲೂ ಟಿಕ್ ಅನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಪ್ರಸ್ತುತ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಅಥವಾ ಹೊಂದದೇ ಇರುವ ಬಳಕೆದಾರರ ವ್ಯವಸ್ಥೆ ಮೂರ್ಖತನವಾಗಿದೆ. ಈಗ ಎಲ್ಲಾ ಶಕ್ತಿ ಜನರಿಗೆ! ಬ್ಲೂ ಟಿಕ್ ಬೇಕೆಂದರೆ ತಿಂಗಳಿಗೆ 8 ಡಾಲರ್ ಪಾವತಿಸಿ ಎಂದು ಬರೆದಿದ್ದಾರೆ.

    ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಬಳಕೆದಾರರ ಪರಿಶೀಲಿಸಿದ ಖಾತೆಯಲ್ಲಿ ಕಾಣಿಸಿಕೊಳ್ಳುವ ಬ್ಲೂ ಟಿಕ್‌ಗೆ ತಿಂಗಳಿಗೆ 19.99 ಡಾಲರ್ (ಸುಮಾರು 1,600 ರೂ.) ಪಾವತಿಸಬೇಕಾಗಬಹುದು ಎಂದು ವರದಿಯಾಗಿತ್ತು. ಈ ವರದಿಗೆ ಇದೀಗ ಮಸ್ಕ್ ಉತ್ತರಿಸಿ, ತಿಂಗಳಿಗೆ 8 ಡಾಲರ್ ಅನ್ನು ನಿಗದಿಪಡಿಸಿದ್ದಾರೆ. ಇದನ್ನೂ ಓದಿ: ಪರಾಗ್ ಸ್ಥಾನಕ್ಕೆ ಶ್ರೀರಾಮ್ – ಮತ್ತೆ ಭಾರತೀಯನಿಗೆ ಒಲಿಯುತ್ತಾ ಟ್ವಿಟ್ಟರ್ ಪಟ್ಟ?

    ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ:
    ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಆಪ್‌ನಲ್ಲಿ ಮಾತ್ರವೇ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ತನ್ನ ಉದ್ಯೋಗಿಗಳಿಗೂ (Employees) ಬಿಗಿಯಾದ ನಿಯಮಗಳನ್ನು ತಂದಿರುವುದಾಗಿ ವರದಿಯಾಗಿದೆ. ಟ್ವಿಟ್ಟರ್‌ನ ಕೆಲ ಎಂಜಿನಿಯರುಗಳಿಗೆ ದಿನಕ್ಕೆ 12 ಗಂಟೆ ಹಾಗೂ ವಾರದ 7 ದಿನವೂ ಕೆಲಸ ಮಾಡಲು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ

    Live Tv
    [brid partner=56869869 player=32851 video=960834 autoplay=true]

  • ಟ್ವಿಟ್ಟರ್ ಖರೀದಿಸಿದರೆ ಶೇ.75ರಷ್ಟು ಉದ್ಯೋಗಿಗಳ ವಜಾಗೆ ಮಸ್ಕ್ ಪ್ಲಾನ್

    ಟ್ವಿಟ್ಟರ್ ಖರೀದಿಸಿದರೆ ಶೇ.75ರಷ್ಟು ಉದ್ಯೋಗಿಗಳ ವಜಾಗೆ ಮಸ್ಕ್ ಪ್ಲಾನ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಖರೀದಿಸಿದರೆ ಕಂಪನಿಯ ಶೇ.75 ರಷ್ಟು ಉದ್ಯೋಗಿಗಳನ್ನೇ ವಜಾಗೊಳಿಸಲು (Lay Off) ಪ್ಲಾನ್ ಮಾಡಿದ್ದಾರೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

    ಟ್ವಿಟ್ಟರ್ ಈ ವರದಿಯನ್ನು ತಳ್ಳಿಹಾಕಿದೆ. ವರದಿಗೆ ಪ್ರತಿಕ್ರಿಯಿಸಿರುವ ಕಂಪನಿ, ತನ್ನ ಉದ್ಯೋಗಿಳನ್ನು ವಜಾಗೊಳಿಸುವ ಯಾವುದೇ ಯೋಜನೆಗಳನ್ನು ಮಾಡಿಲ್ಲ ಎಂದು ತಿಳಿಸಿದೆ.

    ಕಂಪನಿ ಜುಲೈನಲ್ಲಿ ಟೆಕ್ ಉದ್ಯಮದಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದು, ನೇಮಕಾತಿಯನ್ನು ತಡೆಹಿಡಿಯುವುದಾಗಿ ತಿಳಿಸಿತ್ತು. ಆದರೆ ಶೇ.75 ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುವುದರಿಂದ ಕಂಪನಿ ಮುಂದೆ ಅಪಾಯವನ್ನು ಎದುರಿಸುವ ಸಾಧ್ಯತೆ ಇದೆ. ಈ ಹಿಂದೆ ಎಲೋನ್ ಮಸ್ಕ್, ಟ್ವಿಟ್ಟರ್ ಅನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಸ್ಪ್ಯಾಮ್ ಬಾಟ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿರುವುದಾಗಿ ಹೇಳಿದ್ದರು. ಇದನ್ನೂ ಓದಿ: ವಿಯೆಟ್ನಾಂದಲ್ಲೂ ನಡೆಯುತ್ತಿದೆ ʻಕಾಂತಾರʼ ವಿಶೇಷ ಪ್ರದರ್ಶನ

    ಟ್ವಿಟ್ಟರ್ ಖರೀದಿಸಲು ಮಸ್ಕ್ ಈ ವರ್ಷ ಏಪ್ರಿಲ್‌ನಲ್ಲಿಯೇ ಒಪ್ಪಿಗೆ ನೀಡಿದ್ದರು. ಆದರೆ ಬಳಿಕ ನಕಲಿ ಹಾಗೂ ಸ್ಪ್ಯಾಮ್ ಬಾಟ್ ಖಾತೆಗಳ ಸಂಖ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಮಸ್ಕ್ ಒಪ್ಪಂದವನ್ನು ನಿರಾಕರಿಸಿದರು. ಆದರೂ ಕಂಪನಿ ಮಸ್ಕ್‌ನೊಂದಿಗಿನ ಒಪ್ಪಂದವನ್ನು ಮರಳಿ ಜಾರಿಗೆ ತರುವ ಸಲುವಾಗಿ ಅವರ ವಿರುದ್ಧ ಮೊಕದ್ದಮೆ ಹೂಡಿತ್ತು.

    ಮಸ್ಕ್ ಇದೀಗ ಟ್ವಿಟ್ಟರ್ ಅನ್ನು ಷೇರಿಗೆ 54.20 ಡಾಲರ್‌ಗೆ ಖರೀದಿಸಲು ಒಪ್ಪಿಕೊಂಡಿದ್ದಾರೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ನೀಡಲು ಎರಡೂ ಕಡೆಯವರಿಗೆ ನ್ಯಾಯಾಲಯ ಅಕ್ಟೋಬರ್ 28ರ ವರೆಗೆ ಕಾಲಾವಕಾಶ ನೀಡಿದೆ. ವಿವರಗಳನ್ನು ನೀಡಲು ಎರಡೂ ಕಡೆಯವರು ವಿಫಲವಾದರೆ ನವೆಂಬರ್‌ನಲ್ಲಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    Live Tv
    [brid partner=56869869 player=32851 video=960834 autoplay=true]

  • ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

    ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ

    ನವದೆಹಲಿ: ತೂಕ ಇಳಿಸಿಕೊಳ್ಳಿ ಹಾಗೂ 10 ಲಕ್ಷ ರೂ. ಯನ್ನು ಬಹುಮಾನವಾಗಿ ಗೆಲ್ಲಿ! ಹೀಗೊಂದು ಫಿಟ್‌ನೆಸ್ ಚ್ಯಾಲೆಂಜ್ (Fitness Challenge) ಅನ್ನು ಕಂಪನಿಯೊಂದರ ಸಿಇಒ (CEO) ತನ್ನ ಉದ್ಯೋಗಿಗಳಿಗೆ (Employees) ನೀಡಿದ್ದಾರೆ.

    ಹೌದು, ಆನ್‌ಲೈನ್ ಬ್ರೋಕರೇಜ್ ಕಂಪನಿ Zerodha ತನ್ನ ಉದ್ಯೋಗಿಗಳಿಗೆ ಹೊಸ ಫಿಟ್‌ನೆಸ್ ಸವಾಲನ್ನು ನೀಡಿದೆ. ಕಂಪನಿಯ ಸಿಇಒ ನಿತಿನ್ ಕಾಮತ್ (Nithin Kamath), ಈ ಸವಾಲನ್ನು ಪೂರ್ಣಗೊಳಿಸುವುದರಿಂದ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಮಾತ್ರವಲ್ಲದೇ ಒಬ್ಬ ಅದೃಷ್ಟಶಾಲಿ ಉದ್ಯೋಗಿ 10 ಲಕ್ಷ ರೂ. ಬಹುಮಾನವನ್ನು (Reward) ಗೆಲ್ಲಬಹುದು ಎಂದಿದ್ದಾರೆ.

    ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚು ಸಕ್ರಿಯರಾಗಿರುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದು, ಇದರಿಂದ ಅವರು ಹೆಚ್ಚು ಸಕ್ರಿಯರಾಗದೇ ಇರಲು ಕಾರಣವಾಗಿದೆ. ಇದೀಗ ನಾವು ನಮ್ಮ ಉದ್ಯೋಗಿಗಳನ್ನು ಆಶಾದಾಯಕವಾದ ಮಾರ್ಗದಿಂದ ಸಕ್ರಿಯರನ್ನಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ನಿತಿನ್ ಕಾಮತ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ: ಕಾಂಗ್ರೆಸ್

    ಕೋವಿಡ್ ಪ್ರಾರಂಭವಾದಾಗಿನಿಂದ ನನ್ನ ತೂಕ ದಿನೇ ದಿನೆ ಹೆಚ್ಚಾಗಲಾರಂಭಿಸಿತು. ಬಳಿಕ ನಾನು ಫಿಟ್‌ನೆಸ್ ಟ್ರ್ಯಾಕರ್ ಆಪ್ ಬಳಸಿ ಹಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡೆ. ಡಯಟ್ ಬಗೆಗೂ ಹೆಚ್ಚಿನ ಕಾಳಜಿ ವಹಿಸಿದೆ. ನಿಧಾನವಾಗಿ ಪ್ರತಿ ದಿನ ಕಡಿತಗೊಳಿಸಬೇಕಾದ ಕ್ಯಾಲರಿಯನ್ನು 1,000ಕ್ಕೆ ಏರಿಸಿದೆ. ನನ್ನ ಫಿಟ್‌ನೆಸ್ ಪ್ರಯಾಣ ಹೀಗಿತ್ತು. ಇದೀಗ ಈ ಚಟುವಟಿಕೆಯ ಟ್ರ್ಯಾಕರ್‌ಗಳನ್ನು ಬಳಸುವ ನನ್ನ ಉದ್ಯೋಗಿಗಳ ಫಲಿತಾಂಶವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಕಾಮತ್ ಹೇಳಿದ್ದಾರೆ. ಇದನ್ನೂ ಓದಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗಾಗಿತ್ತು, ಇದೀಗ ಮತ್ತೆ? – ಏನಿದು ಧೋನಿ ಲಾಜಿಕ್

    Live Tv
    [brid partner=56869869 player=32851 video=960834 autoplay=true]

  • ಏರ್ ಇಂಡಿಯಾದ 4,500 ಉದ್ಯೋಗಿಗಳು ಸ್ವಯಂ ನಿವೃತ್ತಿ – ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್

    ಏರ್ ಇಂಡಿಯಾದ 4,500 ಉದ್ಯೋಗಿಗಳು ಸ್ವಯಂ ನಿವೃತ್ತಿ – ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್

    ಮುಂಬೈ: ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಮರಳಿ ಸ್ವಾಧೀನಪಡಿಸುತ್ತಿದ್ದಂತೆಯೇ ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್)ಯನ್ನು ಪರಿಚಯಿಸಿದೆ. ಹೊಸ ಪ್ರತಿಭೆಗಳನ್ನು ಕಂಪನಿಗೆ ಆಹ್ವಾನಿಸುವ ಸಲುವಾಗಿ ಟಾಟಾ ಗ್ರೂಪ್ ಈ ಯೋಜನೆಯನ್ನು ಮಾಡಿದ್ದು, ಇದರ ಅಡಿಯಲ್ಲಿ 4,500 ಉದ್ಯೋಗಿಗಳು ನಿವೃತ್ತಿಯನ್ನು ಆಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಕಂಪನಿ ಮೊದಲ ಬಾರಿಗೆ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಕೆಲವು ಖಾಯಂ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಹೊರತಂದಿದೆ. ವಿಆರ್‌ಎಸ್ ಮಾರ್ಗಸೂಚಿ ಪ್ರಕಾರ 55 ವರ್ಷ ಮೇಲ್ಪಟ್ಟ ಅಥವಾ 20 ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಮಾತ್ರವೇ ಈ ಯೋಜನೆ ಅನ್ವಯವಾಗುತ್ತದೆ. ಇದನ್ನೂ ಓದಿ: 5ಜಿ ನೆಟ್‌ ಭಾರತದಲ್ಲಿ ಬೆಲೆ ಎಷ್ಟಿರಬಹುದು?

    ಟಾಟಾ ಗ್ರೂಪ್ ಏರ್‌ಲೈನ್‌ನ ಕಾರ್ಯಾಚರಣೆಗೆ, ಸಂಸ್ಥೆಯ ಪರಿಷ್ಕರಣೆಗೆ, ಉತ್ಪಾದಕತೆಯನ್ನು ಸುಧಾರಿಸಲು ಹಾಗೂ ಹಳೆಯ ವ್ಯವಸ್ಥೆಗಳನ್ನು ತೆಗೆದು ಡಿಜಿಟಲೀಕರಣವಾಗಿ ಅಪ್‌ಡೇಟ್ ಮಾಡಲು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಲ್‌ಗೇಟ್ಸ್ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

    ಏರ್ ಇಂಡಿಯಾದಲ್ಲಿ 8,000 ಖಾಯಂ ಸಿಬ್ಬಂದಿ ಸೇರಿದಂತೆ ಒಟ್ಟು 12,000 ಉದ್ಯೋಗಿಗಳಿದ್ದಾರೆ. ಕಂಪನಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ದೇಶದ ಪ್ರಮುಖ ನಗರಗಳಲ್ಲಿ ನೇಮಕಾತಿ ಪ್ರಕಿಯೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸುವುದಾಗಿ ಘೋಷಿಸಿದಾಗಿನಿಂದ ಟ್ವಿಟ್ಟರ್ ಉದ್ಯೋಗಿಗಳ ಭವಿಷ್ಯ ಅಪಾಯದಲ್ಲಿದೆ. ಇದೀಗ ಕಂಪನಿ ತನ್ನ ಉದ್ಯೋಗಿಗಳನ್ನು ತೆಗೆದುಹಾಕಲು ಪ್ರಾರಂಭಿಸಿದ್ದು, 100 ಉದ್ಯೋಗಿಗಳನ್ನು ವಜಾಗೊಳಿಸಿರುವುದನ್ನು ಟ್ವಿಟ್ಟರ್ ಖಚಿತಪಡಿಸಿದೆ.

    ಟ್ವಿಟ್ಟರ್ ಆರೋಗ್ಯಕರವಾಗಿರಬೇಕು ಎಂದು ಹೇಳಿಕೆ ನೀಡಿದ ಮಸ್ಕ್, ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುಳಿವು ನೀಡಿದ್ದರು. ಕಂಪನಿಯ ಸ್ವಾಧೀನವನ್ನು ಕೊನೆಗೊಳಿಸಲು ಟ್ವಿಟ್ಟರ್ ಈ ಹಿಂದೆಯೂ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮಾನವ ಸಂಪನ್ಮೂಲ ವಿಭಾಗದ 100 ಉದ್ಯೋಗಿಗಳು ಕಂಪನಿಯಿಂದ ವಜಾಗೊಂಡಿದ್ದಾರೆ. ಇದನ್ನೂ ಓದಿ: ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    ಕಂಪನಿಯಲ್ಲಿ ಅನಗತ್ಯ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಮಸ್ಕ್ ಹಲವು ಬಾರಿ ಸ್ವಾಧೀನದ ಒಪ್ಪಂದದಿಂದ ಹಿಂದೆ ಸರಿದಿದ್ದರು. ಜೂನ್‌ನಲ್ಲಿ ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ಮಾಡಿದ ಮೊದಲ ಸಭೆಯಲ್ಲಿ ಕಂಪನಿ ಆರ್ಥಿಕವಾಗಿ ಆರೋಗ್ಯಕರವಾಗಿರಬೇಕು, ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

    Live Tv
    [brid partner=56869869 player=32851 video=960834 autoplay=true]

  • ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ, ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ತನ್ನ ನಡವಳಿಕೆಯನ್ನು ಟೀಕಿಸಿದ ಉದ್ಯೋಗಿಗಳನ್ನು ಕಂಪನಿಯಿಂದ ಕಿತ್ತೊಗೆದಿದ್ದಾರೆ ಎಂದು ವರದಿಯಾಗಿದೆ.

    ಮಸ್ಕ್ ಅವರ ನಡವಳಿಕೆ ಮುಜುಗರಕ್ಕೀಡು ಮಾಡುತ್ತಿದೆ ಎಂದು ಉದ್ಯೋಗಿಗಳು ಟೀಕಿಸಿದ್ದು, ಈ ಹಿನ್ನೆಲೆ ಟೀಕಿಸಿರುವ ಸ್ಪೇಸ್‌ಎಕ್ಸ್‌ನ ಉದ್ಯೋಗಿಗಳನ್ನೇ ವಜಾ ಮಾಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ. – ಒಂದೇ ವರ್ಷದಲ್ಲಿ ಶೇ. 50ರಷ್ಟು ಏರಿಕೆ

    ಇತ್ತೀಚೆಗೆ ಸ್ಪೇಸ್‌ಎಕ್ಸ್‌ನ ಕೆಲ ಉದ್ಯೋಗಿಗಳು ಮಸ್ಕ್ ಅವರ ನಡವಳಿಕೆ ಆಗಾಗ ಗೊಂದಲ ಹಾಗೂ ಮುಜುಗರಕ್ಕೀಡು ಮಾಡುತ್ತದೆ ಎಂದು ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕಳುಹಿಸುವ ಪ್ರತಿಯೊಂದು ಟ್ವೀಟ್ ಕೂಡಾ ಸಾರ್ವಜನಿಕ ಹೇಳಿಕೆಯಾಗಿದೆ. ಇದು ನಮ್ಮ ಕೆಲಸ, ಧ್ಯೇಯ ಅಥವಾ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಎಂಬುದನ್ನು ನಮ್ಮ ತಂಡಕ್ಕೆ ಸ್ಪಷ್ಟಪಡಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಟ್ಟು 634 ಕೇಸ್, 2 ಸಾವು – ಸಕ್ರಿಯ ಪ್ರಕರಣಗಳ ಸಂಖ್ಯೆ 4,500ಕ್ಕೆ ಏರಿಕೆ

    ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಸ್ಪೇಸ್ ಎಕ್ಸ್ ಅಧ್ಯಕ್ಷ ಗ್ವಿನ್ನೆ ಶಾಟ್‌ವೆಲ್ ಈ ಪತ್ರವನ್ನು ರಚಿಸಿರುವ ಹಲವು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಬಗ್ಗೆ ಸ್ಪೇಸ್‌ಎಕ್ಸ್ ಅಧಿಕೃತ ವಿವರವನ್ನು ನೀಡಿಲ್ಲ. ಯಾರೆಲ್ಲಾ ಹಾಗೂ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದನ್ನೂ ಬಹಿರಂಗ ಪಡಿಸಿಲ್ಲ.

    Live Tv

  • ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ವಾಷಿಂಗ್ಟನ್: ಟೆಕ್ನಾಲಜಿ ಕಂಪನಿ ಐಬಿಎಂ ರಷ್ಯಾದಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಪ್ರಾರಂಭಿಸಿ ತಿಂಗಳುಗಳೇ ಕಳೆದಿವೆ. ಇದೀಗ ಹೆಚ್ಚುವರಿ ಹಂತವಾಗಿ ಕಂಪನಿ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ.

    ಐಬಿಎಂ ಸಿಇಒ ಅರವಿಂದ್ ಕೃಷ್ಣ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ರಷ್ಯಾದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ಕೊನೆಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ಐಬಿಎಂ ಈ ವರ್ಷ ಮಾರ್ಚ್‌ನಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಅಲ್ಲಿನ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಮುಂದುವರಿಸಿದೆ. ಇದೀಗ ನಾವು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ. ಈ ಮೂಲಕ ನಾವು ಇತರ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು, ರಷ್ಯಾದ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಸ್ಥಗಿತಗೊಳಿಸಬಹುದು ಎಂದು ಅರವಿಂದ್ ಕೃಷ್ಣ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

    ಉಕ್ರೇನ್ ರಷ್ಯಾದ ಯುದ್ಧದ ಪರಿಣಾಮ ಹೆಚ್ಚುತ್ತಿರುವ ಅಭದ್ರತೆಯ ಕಾರಣ ನಮ್ಮ ವ್ಯವಹಾರಗಳನ್ನು ಕ್ರಮಬದ್ಧವಾಗಿ ಕೈಬಿಡುವ ನಿರ್ಧಾರ ಮಾಡಿದ್ದೇವೆ. ರಷ್ಯಾದಲ್ಲಿರುವ ನಮ್ಮ ಸಹೋದ್ಯೋಗಿಗಳು ಹಲವು ತಿಂಗಳುಗಳಿಂದ ಒತ್ತಡ ಹಾಗೂ ಅನಿಶ್ಚಿತತೆಯನ್ನು ಸಹಿಸಿಕೊಂಡಿದ್ದಾರೆ. ಕಂಪನಿಯಿಂದ ವಜಾಗೊಳಿಸುವಲ್ಲಿ ಅವರ ಯಾವುದೇ ತಪ್ಪುಗಳಿಲ್ಲ ಎಂದು ಸಿಇಒ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ರಷ್ಯಾದಲ್ಲಿರುವ ನಮ್ಮ ಉದ್ಯೋಗಿಗಳಿಗೆ ಈ ವಿಷಯ ಆಘಾತಕಾರಿಯಾಗಿರುವುದು ನಮಗೆ ತಿಳಿದಿದೆ. ಆದರೆ ಅವರಿಗೆ ಬೆಂಬಲ ನೀಡುವುದನ್ನು ನಾವು ಮುಂದುವರೆಸುತ್ತೇವೆ ಹಾಗೂ ಅವರ ಮುಂದಿನ ವೃತ್ತಿಯ ಬಗ್ಗೆ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

    ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

    ವಾಷಿಂಗ್ಟನ್: ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ತನ್ನ ಕಂಪನಿಯ ಶೇ.10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಬೇಕು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ವಿಶ್ವದ ಶ್ರೀಮಂತ ತನ್ನ ಕಂಪನಿಯ ಆಂತರಿಕ ಮೇಲ್ ಒಂದರಲ್ಲಿ ತಾವು ಪ್ರಸ್ತುತ ಕೆಟ್ಟ ಮನಸ್ಥಿತಿಯಲ್ಲಿರುವುದಾಗಿ ಹೇಳಿ, ತಮ್ಮ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಿಂದ ಶೇ.10 ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಬೇಕಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 14 ವರ್ಷ ಕಾರ್ಯನಿರ್ವಹಿಸಿ ಶೆರಿಲ್ ಸ್ಯಾಂಡ್‌ಬರ್ಗ್ ಮೆಟಾ ಸಿಒಒ ಹುದ್ದೆಗೆ ರಾಜೀನಾಮೆ

    ಮಸ್ಕ್ ಗುರುವಾರ ಟೆಸ್ಲಾ ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಕಂಪನಿಗೆ ವಿಶ್ವದ ಎಲ್ಲಾ ಕಡೆಗಳಿಂದಲೂ ಹೊಸ ನೇಮಕಾತಿಗೆ ವಿರಾಮ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ವಾರದ ಆರಂಭದಲ್ಲಿ ಎಲೋನ್ ಮಸ್ಕ್ ಟೆಸ್ಲಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಬಿಟ್ಟು, ಕಂಪನಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು. ಉದ್ಯೋಗಿಗಳು ಕಂಪನಿಗೆ ಮರಳಲು ಬಯಸದೇ ಹೋದರೆ, ಶಾಶ್ವತವಾಗಿ ಸಂಸ್ಥೆಯನ್ನೇ ತೊರೆಯಬಹುದು ಎಂದಿದ್ದರು. ಇದನ್ನೂ ಓದಿ: ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ಟೆಸ್ಲಾ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿಯೇ ಇರಬೇಕು. ಇನ್ನು ಮುಂದೆ ಮನೆಯಿಂದ ಕೆಲಸ ಮಾಡುವುದು ಸ್ವೀಕಾರ್ಹವಲ್ಲ. ಒಂದು ವೇಳೆ ಉದ್ಯೋಗಿಗಳು ಕಂಪನಿಗೆ ಹಾಜರಾಗದೇ ಹೋದರೆ, ಕೆಲಸವನ್ನೇ ತೊರೆದಿರುವುದಾಗಿ ಪರಿಗಣಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದರು.