Tag: ಉದ್ಯೋಗಾಕಾಂಕ್ಷಿ

  • ಉದ್ಯೋಗಾಕಾಂಕ್ಷಿ ಮೇಲೆ DYSP ದರ್ಪ – ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ

    ಉದ್ಯೋಗಾಕಾಂಕ್ಷಿ ಮೇಲೆ DYSP ದರ್ಪ – ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ

    ತುಮಕೂರು: ಬಡಪಾಯಿಗಳ ಮೇಲೆ ತುಮಕೂರು (Tumkuru) ಡಿವೈಎಸ್‍ಪಿ (DYSP) ದರ್ಪ ಮೆರೆದ ಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮುಂದೆಯೇ ನಡೆದಿದೆ.

    ಪೊಲೀಸ್ ಉದ್ಯೋಗಾಕಾಂಕ್ಷಿಗಳು ವಯೋಮಿತಿ ಸಡಿಲಿಸುವಂತೆ ಗೃಹಸಚಿವರಿಗೆ ಮನವಿ ಕೊಡಲು ಬಂದಿದ್ದರು. ಇವರನ್ನು ತಡೆಯುವ ಭರದಲ್ಲಿ ಡಿವೈಎಸ್‍ಪಿ ಶ್ರೀನಿವಾಸ್, ಉದ್ಯೋಗಾಕಾಂಕ್ಷಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ದೂರ ತಳ್ಳಿ ಉದ್ಧಟತನದಿಂದ ವರ್ತಿಸಿದ್ದಾರೆ. ಇದನ್ನೂ ಓದಿ: ಗೋವಿಂದರಾಜನಗರದಲ್ಲಿ ಪುನೀತ್ ಹೆಸ್ರಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ: ಸೋಮಣ್ಣ

    ಇದರ ನಡುವೆಯೂ ವೇದಿಕೆಗೆ ನುಗ್ಗಿದ ಪೊಲೀಸ್ ಆಕಾಂಕ್ಷಿಗಳು, ಆರಗ ಜ್ಞಾನೇಂದ್ರ (Araga Jnanendra)ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ನೇಮಕಾತಿಯ ವಯೋಮಿತಿ ಹೆಚ್ಚಿಸಿ ಎಂದು ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು, ವಯೋಮಿತಿ ಸಡಿಲಿಕೆ ಬಗ್ಗೆ ಚಿಂತನೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಡಿವೈಎಸ್‍ಪಿ ವರ್ತನೆಗೆ ಎಲ್ಲಾ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ದೇಶವ್ಯಾಪಿ ಸುದ್ದಿಯಾಗಿದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಉದ್ಯೋಗಕ್ಕಾಗಿ ಪ್ರತಿಭಟನೆ – ರೈಲಿನ ಭೋಗಿಗೆ ಬೆಂಕಿ ಹಚ್ಚಿ ಆಕ್ರೋಶ

    ರೈಲ್ವೆ ಉದ್ಯೋಗಕ್ಕಾಗಿ ಪ್ರತಿಭಟನೆ – ರೈಲಿನ ಭೋಗಿಗೆ ಬೆಂಕಿ ಹಚ್ಚಿ ಆಕ್ರೋಶ

    ನವದೆಹಲಿ: ದೆಹಲಿ-ಕೋಲ್ಕತ್ತಾ ಮಾರ್ಗದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆ ವೇಳೆ ಕೆಲವು ಪ್ರತಿಭಟನಾಕಾರರು ರೈಲಿನ ಭೋಗಿಗೆ ಬೆಂಕಿ ಹಚ್ಚಿ ರೈಲನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗುತ್ತಿದೆ.

    ರೈಲ್ವೆ ನಿಲ್ದಾಣದ ಫ್ಲಾಟ್‍ಫಾರ್ಮ್‍ನಾದ್ಯಂತ ಆಕ್ರೋಶಗೊಂಡ ಪ್ರತಿಭಟನಾ ನಿರತರು ಕಲ್ಲು ತೂರಾಟ ನಡೆಸಿದ್ದು, ರೈಲಿನ ಕಿಟಕಿಗಳನ್ನು ಒಡೆದು ಹಾಕಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ರೈಲ್ವೇ ನೇಮಕಾತಿ ಪರೀಕ್ಷೆ ಆಯ್ಕೆ ಪ್ರಕ್ರಿಯೆಯನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ

    ಹಿಂಸಾಚಾರದ ಘಟನೆಯ ಬಳಿಕ, ಭಾರತೀಯ ರೈಲ್ವೇಯು ಎನ್‍ಟಿಪಿಸಿ ಮತ್ತು ಹಂತ 1 ಪರೀಕ್ಷೆಗಳನ್ನು ಸ್ಥಗಿತಗೊಳಿಸಿದೆ. ಬಿಹಾರದಲ್ಲಿ ಸೋಮವಾರ ರೈಲ್ವೆ ನೇಮಕಾತಿ ಮಂಡಳಿಯು (RRB) ನಡೆಸಿದ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ (NTPC) ಸ್ಪರ್ಧಾತ್ಮಕ ಪರೀಕ್ಷೆ, 2021ರಲ್ಲಿ ಫಲಿತಾಂಶಗಳು ತಪ್ಪಾಗಿ ಬಂದಿವೆ ಎಂದು ಆರೋಪಿಸಿ ಸೋಮವಾರ ಬಿಹಾರದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು.

    ಇದೀಗ ಉಭಯ ಪಕ್ಷಗಳ ಮಾತುಗಳನ್ನು ಆಲಿಸಿದ ನಂತರ ಸಮಿತಿಯು ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ. ಮಂಗಳವಾರ ರೈಲ್ವೇ ತನ್ನ ಉದ್ಯೋಗಾಕಾಂಕ್ಷಿಗಳಿಗೆ ಜನರಲ್ ನೋಟಿಸ್ ನೀಡಿದ್ದು, ಪ್ರತಿಭಟನೆಯ ಸಮಯದಲ್ಲಿ ವಿಧ್ವಂಸಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ರೈಲ್ವೆಯಲ್ಲಿ ನೇಮಕಾತಿ ನೀಡುವುದನ್ನು ನಿರ್ಬಂಧಿಸಲಾಗುವುದು ಎಂದು ಎಚ್ಚರಿಸಿದೆ. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

    ಬಿಹಾರದ ಹಲವಾರು ಸ್ಥಳಗಳಲ್ಲಿ ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಧರಣಿ ನಡೆಸಿದ ಒಂದು ದಿನದ ನಂತರ ಈ ರೀತಿ ಆದೇಶ ಹೊರಡಿಸಲಾಗಿದೆ.