Tag: ಉದ್ಯಾನ

  • ಬೆಂಗಳೂರು ಜನರಿಗೆ ಗುಡ್‌ ನ್ಯೂಸ್‌ – ಇನ್ಮುಂದೆ ಉದ್ಯಾನಗಳು ರಾತ್ರಿ 8ರ ವರೆಗೂ ಓಪನ್

    ಬೆಂಗಳೂರು ಜನರಿಗೆ ಗುಡ್‌ ನ್ಯೂಸ್‌ – ಇನ್ಮುಂದೆ ಉದ್ಯಾನಗಳು ರಾತ್ರಿ 8ರ ವರೆಗೂ ಓಪನ್

    ಬೆಂಗಳೂರು: ನಗರದ ಜನತೆಗೆ ಬಿಬಿಎಂಪಿ ಗುಡ್‌ ನ್ಯೂಸ್‌ ನೀಡಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನಗಳು ರಾತ್ರಿ 8 ಗಂಟೆ ವರೆಗೂ ಓಪನ್‌ ಇರಲಿವೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳನ್ನು ಬೆಳಗ್ಗೆ 5 ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡುವ ಸಂಬಂಧ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

    ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳನ್ನು ವಾಯು ವಿಹಾರಕ್ಕೆಂದು ಪ್ರತಿದಿನ ಬೆಳಗ್ಗೆ 5 ರಿಂದ 10ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಇನ್ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5 ರಿಂದ ರಾತ್ರಿ 8ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಉದ್ಯಾನಗಳ ನಿರ್ವಹಣೆಗಾಗಿ ಬೆಳಗ್ಗೆ 10 ರಿಂದ ಮದ್ಯಾಹ್ನ 1.30ರ ವರೆಗೆ ಸಮಯವನ್ನು ನಿಗದಿಪಡಿಸಿ ಬಿಬಿಎಂಪಿ ಆದೇಶಿಸಿದೆ. ಉದ್ಯಾನಗಳ ನಿರ್ವಹಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್‌ ಅವರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಹುಟ್ಟುಹಬ್ಬವನ್ನು ಸ್ನೇಹಿತರು ಆಚರಿಸಿದರೆ ಬಿಜೆಪಿಗೆ ಯಾಕೆ ಭಯ?: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್‌

    ಕಾಬೂಲ್‌: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್‌ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್‌ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಫ್ಘಾನಿಸ್ತಾನವು ಸಂಪ್ರದಾಯವಾದಿ ಮತ್ತು ಪಿತೃಪ್ರಭುತ್ವದ ರಾಷ್ಟ್ರವಾಗಿದೆ. ಆದರೆ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಸಾಮಾನ್ಯ ಎನ್ನುವಂತಾಗಿದೆ. ಮುಖ್ಯವಾಗಿ ಆಫ್ಘಾನ್‌ ಮಾನದಂಡಗಳನ್ನು ಮೀರಿ ಉದಾರವಾದಿ ನಗರ ಎನಿಸಿರುವ ಹೆರಾತ್‌ನಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಇಲ್ಲೂ ಸಹ ತಾಲಿಬಾನ್‌ ಕಠಿಣ ನಿಯಮಗಳನ್ನು ವಿಧಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್‌, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ನಿರ್ಬಂಧಗಳನ್ನು ವಿಧಿಸುತ್ತಿದೆ.

    ಹೆರಾತ್‌ನಲ್ಲಿ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಯಮ ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಅಲ್ಲ, ಗಂಡ-ಹೆಂಡತಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಹೆರಾತ್ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ನನಗೆ ಮತ್ತು ನನ್ನ ಪತಿಗೆ ಮ್ಯಾನೇಜರ್‌ ಹೇಳಿದ್ದರು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    ರೆಸ್ಟೋರೆಂಟ್‌ ಮಾಲೀಕ ಸಫೀವುಲ್ಲಾ ಅವರು ತಾಲಿಬಾನ್‌ ಕಠಿಣ ನಿಯಮ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ. ನಾವು ಆದೇಶವನ್ನು ಅನುಸರಿಸಬೇಕು. ಆದರೆ ಇದು ನಮ್ಮ ವ್ಯವಹಾರದ ಮೇಲೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಫೀವುಲ್ಲಾ ತಿಳಿಸಿದ್ದಾರೆ.

  • ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನ- ಇದರಲ್ಲಿದೆ 22 ಬಗೆಯ ತರಕಾರಿ ಬೆಳೆ

    ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನ- ಇದರಲ್ಲಿದೆ 22 ಬಗೆಯ ತರಕಾರಿ ಬೆಳೆ

    ಕ್ಯಾಲಿಫೋರ್ನಿಯಾ: ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನವನ್ನು ಪರಿಚಯಿಸಲಾಗಿದ್ದು, ಇದರಲ್ಲಿದೆ 22 ಬಗೆಯ ತರಕಾರಿ ಬೆಳೆಯಲಾಗಿದೆ.

    ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಸಿಯಕ್ ಗೇಬ್ರಿಯಲ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸಿದ್ದು, ಅದನ್ನು ಬಟ್ಟೆಯಂತೆ ಧರಿಸಬಹುದಾಗಿದೆ. ಇದನ್ನು ವಿಶ್ವದ ಮೊದಲ ಬಟ್ಟೆಯಂತೆ ಧರಿಸುವ ಮೊದಲ ಉದ್ಯಾನ ಎಂದು ಕರೆಯಲಾಗುತ್ತಿದೆ.

    ನಿಮ್ಮ ಆಹಾರವನ್ನು ನೀವೇ ಬೆಳೆಸಿಕೊಳ್ಳಿ ಎಂದು ಪ್ರಾಧ್ಯಾಪಕ, ಉದ್ಯಾನದ ವಿನ್ಯಾಸಕಾರ ಗೇಬ್ರಿಯಲ್ ಹೇಳುತ್ತಾರೆ. ಈ ಉದ್ಯಾನದಲ್ಲಿ ಗೇಬ್ರಿಯಲ್ ಅವರು ಎಲೆಕೋಸು, ಕ್ಯಾರೆಟ್, ಸ್ಟ್ರಾಬೆರಿ, ಕಡಲೆಕಾಯಿ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಬೆಳೆದಿದ್ದು, ಅದನ್ನು ಬಟ್ಟೆಯಾಗಿ ಧರಿಸುತ್ತಾರೆ. ಈ ಎಲ್ಲ ಸಸಿಗಳು ಒಟ್ಟಿಗೆ ಬೆಳೆದಾಗ, ಅವು ಬಟ್ಟೆಯನ್ನು ವರ್ಣಮಯವಾಗಿಸುತ್ತವೆ. ಮತ್ತೊಂದು ವಿಶೇಷವೆಂದರೆ ಗೇಬ್ರಿಯಲ್ ಅವರು ಈ ಸಸ್ಯಗಳನ್ನು ತಮ್ಮ ಮೂತ್ರದಿಂದ ನೀರಾವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

    ಗೇಬ್ರಿಯಲ್ ಅವರ ಈ ಯೋಜನೆಯು ಫ್ರೆಂಚ್ ಸಸ್ಯವಿಜ್ಞಾನಿ ಪ್ಯಾಟ್ರಿಕ್ ಬ್ಲಾಂಕ್ ಅವರ ಸಸ್ಯೋದ್ಯಾನಗಳಿಂದ ಬಲವಾಗಿ ಪ್ರಭಾವಿತವಾಗಿದೆ ಎಂದು ಹೇಳಲಾಗುತ್ತಿದೆ. ಬ್ಲಾಂಕ್ ಅವರು ಸ್ಥಳಾವಕಾಶದ ಕೊರತೆಯಿಂದ ಲಂಬ ಉದ್ಯಾನವನ್ನು ಬೆಳೆಸಿದ್ದರು.

    ಹೇಗಿದೆ ಉದ್ಯಾನ?:
    ಗೇಬ್ರಿಯಲ್ ಅವರು ಬಟ್ಟೆಯ ಪದರವನ್ನು ತಯಾರಿಸಿ, ಅದರ ಮೇಲೆ ಸಸ್ಯಗಳ ಬೀಜಗಳು ಅಂಟಿಸಿದ್ದಾರೆ. ಒದ್ದೆಯಾದ ಬಟ್ಟೆಯ ಪದರದಲ್ಲಿರುವ ಬೀಜಗಳು ಎರಡು ವಾರಗಳ ಬಳಿಕ ಮೊಳಕೆಯೊಡೆಯುತ್ತವೆ. ನಂತರ ಬೆಳೆಯಲು ಆರಂಭಿಸುತ್ತದೆ. ಜೊತೆಗೆ ಮೂತ್ರದಿಂದ ಉಂಟಾಗುವ ತೇವಾಂಶವು ಸಸ್ಯಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಬೆಳೆದು ಒಂದು ಹಂತಕ್ಕೆ ಬಂದ ಸಸ್ಯಗಳು ಹಣ್ಣು, ತರಕಾರಿ ಕೊಡುತ್ತವೆ.