Tag: ಉದ್ಯಮಿ

  • ಉದ್ಯಮಿ ಜೊತೆ ಮದ್ವೆ – ಸ್ಪಷ್ಟನೆ ಕೊಟ್ಟ ಕೀರ್ತಿ ಸುರೇಶ್

    ಉದ್ಯಮಿ ಜೊತೆ ಮದ್ವೆ – ಸ್ಪಷ್ಟನೆ ಕೊಟ್ಟ ಕೀರ್ತಿ ಸುರೇಶ್

    ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಸದ್ಯದಲ್ಲೇ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ತಮ್ಮ ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ನಟಿ ಕೀರ್ತಿ ಸುರೇಶ್ ಅವರು ತಮ್ಮ ಮದುವೆ ವದಂತಿಯ ಬಗ್ಗೆ ತಿಳಿದು ಗರಂ ಆಗಿದ್ದು, ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. “ನನ್ನ ಮದುವೆ ಸುದ್ದಿ ಕೇಳಿ ನನಗೆ ಅಚ್ಚರಿಯಾಗಿದೆ. ಸದ್ಯಕ್ಕೆ ನನಗೆ ವಿವಾಹವಾಗುವ ಯೋಚನೆಯೇ ಇಲ್ಲ. ಅಲ್ಲದೇ ಶೀಫ್ರದಲ್ಲಿ ನಾನು ಮದುವೆಯಾಗುವುದಿಲ್ಲ. ಆದರೂ ಮದುವೆ ಸುದ್ದಿ ಹರಿದಾಡಲು ಹೇಗೆ ಪ್ರಾರಂಭವಾಯಿತು ಎಂಬುದು ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.

    “ದೇಶದಲ್ಲಿ ಚರ್ಚಿಸಲು ಅನೇಕ ವಿಚಾರಗಳಿವೆ. ಸುಮ್ಮನೆ ಇಂತಹ ಆಧಾರ ರಹಿತ ವದಂತಿಗಳನ್ನು ಹರಡುವುದಕ್ಕಿಂತ ದೇಶದಲ್ಲಿ ಹರಡುತ್ತಿರುವ ಕೊರೊನಾ ರೋಗದ ಬಗ್ಗೆ ಹೋರಾಡಿ” ಎಂದು ಗರಂ ಆಗಿ ಉತ್ತರಿಸಿದ್ದಾರೆ.

    ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ಅಲ್ಲದೇ ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದರು. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿತ್ತು. ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

    ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅದ್ಭುತ ಅಭಿನಯ, ತಮ್ಮ ಸೌಂದರ್ಯದ ಮೂಲಕವೇ ಅಭಿಮಾನಿಗಳ ಮನ ಕದ್ದವರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಸದ್ಯದಲ್ಲೇ ಮದುವೆ ಆಗಲು ಸಿದ್ಧರಾಗಿದ್ದಾರೆ.

    ಸೂಪರ್ ಹಿಟ್ ಸಿನಿಮಾಗಳ ಯಶಸ್ಸು, ಸಾಲು ಸಾಲು ಸಿನಿಮಾಗಳ ಆಫರ್ ಗಳು ಕೀರ್ತಿ ಅವರ ಕೈಯಲ್ಲಿದೆ. ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ಇಷ್ಟು ಬೇಗ ಮದುವೆ ಆಗಲು ಕೀರ್ತಿ ನಿರ್ಧರಿಸಿದರಾ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿರೋದು ನಿಜ. ಆದರೆ ಪೋಷಕರು ಮದುವೆ ಮಾಡಿಸಲು ನಿರ್ಧರಿಸಿರುವುದರಿಂದ ಕೀರ್ತಿ ವಿವಾಹ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.

    ‘ಮಹಾನಟಿ’ ಸುಂದರಿಯ ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಹುಟ್ಟುಕೊಂಡಿದೆ. ಕೀರ್ತಿ ಅವರು ಮದುವೆ ಆಗುತ್ತಿರೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕೀರ್ತಿ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ. ಆದರೆ ಉದ್ಯಮಿ ಯಾರು ಎನ್ನುವುದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.

    ಸಿನಿಮಾರಂಗದಲ್ಲಿ ಇರುವ ಮಂದಿ ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತಾರೆ. ಆದರೆ ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದಾರೆ. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಅವರು ಮುದ್ದು ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ.

    ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೀರ್ತಿ ಅವರು ಮದುವೆ ಆಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕೀತಿ ಆಗಲಿ, ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ಕೀರ್ತಿ ಮದುವೆ ಖ್ಯಾತ ಉದ್ಯಮಿ ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

    ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ

    ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆ

    ಬೆಂಗಳೂರು: ಉದ್ಯಮಿ ಕಪಾಲಿ ಮೋಹನ್ ಬೆಂಗಳೂರಿನ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಪಾಲಿ ಮೋಹನ್ ಅವರು ತಮ್ಮ ಒಡೆತನದ ಸುಪ್ರೀಂ ಹೋಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋಹನ್ ಅವರು ವರನಟ ಡಾ. ರಾಜ್ ಕುಮಾರ್ ಫ್ಯಾಮಿಲಿಗೆ ತುಂಬಾ ಹತ್ತಿರವಾಗಿದ್ದರು

    ಈ ಹಿಂದೆ ಸಿಸಿಬಿ ಅಧಿಕಾರಿಗಳು ಗ್ಯಾಂಬ್ಲಿಂಗ್ ರೂವಾರಿ ಹಾಗೂ ಮೀಟರ್ ಬಡ್ಡಿ ಆರೋಪದ ಮೇಲೆ ಕಪಾಲಿ ಮೋಹನ್ ಮನೆ ಮೇಲೆ ರೇಡ್ ಮಾಡಿದ್ದರು. ಆಗ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಸದ್ಯ ಮೋಹನ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ವಿಷಯ ತಿಳಿದ ಗಂಗಮ್ಮನಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪ್ರೇಮ್ ಕಹಾನಿ’ ಖ್ಯಾತಿಯ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪ್ರೇಮ್ ಕಹಾನಿ’ ಖ್ಯಾತಿಯ ನಟಿ

    ಚೆನ್ನೈ: ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಅಭಿನಯದ ‘ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಶೀಲಾ ಕೌರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಚೆನ್ನೈನಲ್ಲಿ ಮಾರ್ಚ್ 11ರಂದು ಬುಧವಾರ ಬಹುಭಾಷಾ ನಟಿ ಶೀಲಾ ಕೌರ್ ಉದ್ಯಮಿ ಸಂತೋಷ್ ರೆಡ್ಡಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಶೀಲಾ ತಮ್ಮ ಮದುವೆಯ ಬಗ್ಗೆ ಯಾರಿಗೂ ಅಷ್ಟೇನು ಮಾಹಿತಿ ನೀಡಲಿಲ್ಲ. ಹೀಗಾಗಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

    ತಾವು ಮದುವೆಯಾಗಿರುವ ವಿಚಾರವನ್ನು ನಟಿ ಶೀಲಾ ಕೌನ್ ಫೇಸ್‍ಬುಕ್‍ನಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ನಮಗೆ ಈ ದಿನ ವಿಶೇಷವಾಗಿದೆ. ಇನ್ಮುಂದೆ ನಾವು ಒಟ್ಟಿಗೆ ಹೊಸ ಜೀವನವನ್ನು ಶುರು ಮಾಡುತ್ತಿದ್ದೇವೆ. ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ನಟಿ ಫೋಟೋ ಅಪ್ಲೋಡ್ ಮಾಡಿ ಮದುವೆಯಾಗಿರುವ ಬಗ್ಗೆ ತಿಳಿಸಿದ ತಕ್ಷಣ, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದೆ. ಇದೀಗ ನೆಟ್ಟಿಗರು ನವಜೋಡಿಗೆ ಕಮೆಂಟ್ ಮಾಡುವ ಮೂಲಕ ಶುಭಾಶಯವನ್ನು ಕೋರುತ್ತಿದ್ದಾರೆ.

    ಶೀಲಾ ಕೌರ್ ಬಾಲನಟಿಯಾಗಿ ತಮಿಳು ಸಿನಿಮಾರಂಗವನ್ನು ಪ್ರವೇಶ ಮಾಡಿದ್ದರು. ಬಾಲನಟಿಯಾಗಿಯೇ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ 2006ರಲ್ಲಿ ತೆಲುಗಿನ ‘ಸೀತಕೋಕ ಚಿಲುಕ’ ಸಿನಿಮಾದ ಮೂಲಕ ನಟಿಯಾಗಿ ಅಭಿನಯಿಸಿದ್ದಾರೆ. ರಾಜು ಭಾಯ್, ಮಸ್ಕಾ, ಅದುರ್ಸ್, ಪರುಗು ಸಿನಿಮಾದಲ್ಲಿಯೂ ಶೀಲಾ ನಟಿಸಿದ್ದರು.

    ನಟಿ ಶೀಲಾ ಕನ್ನಡದಲ್ಲೂ ಅಭಿನಯಿಸಿದ್ದು, ನಟ ಅಜಯ್ ರಾವ್ ಅಭಿನಯದ ‘ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಅರ್ಜುನ್ ಆರ್ಯ ಅವರ ‘ಹೈಪರ್’ ಸಿನಿಮಾದಲ್ಲಿ ಶೀಲಾ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರಾದ ಎನ್‍ಟಿಆರ್, ಅಲ್ಲು ಅರ್ಜುನ್, ರಾಮ್, ಬಾಲಕೃಷ್ಣ ಜೊತೆ ಶೀಲಾ ತೆರೆಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲೂ ಅಭಿನಯಿಸಿದ್ದಾರೆ.

    https://www.facebook.com/SheelaActress/posts/3562112623863709

  • ತಂದೆ 98 ಸಾವಿರ ಕೋಟಿ ರೂ. ಒಡೆಯನಾದ್ರೂ ಮಗ ಬಾಡಿಗೆ ಮನೆಯಲ್ಲಿ ವಾಸ

    ತಂದೆ 98 ಸಾವಿರ ಕೋಟಿ ರೂ. ಒಡೆಯನಾದ್ರೂ ಮಗ ಬಾಡಿಗೆ ಮನೆಯಲ್ಲಿ ವಾಸ

    – ಪ್ರತಿದಿನ ಟ್ಯಾಕ್ಸಿ, ಮೆಟ್ರೋದಲ್ಲಿ ಆಫೀಸ್‍ಗೆ ಪ್ರಯಾಣ
    – ತನ್ನದೇ ಹೆಸರು ಮಾಡಬೇಕೆಂಬ ಬಯಕೆ

    ಮಾಸ್ಕೋ: ತಂದೆ 98 ಸಾವಿರ ಕೋಟಿಯ ಒಡೆಯನಾದರೂ ರಷ್ಯಾದ ವ್ಯಕ್ತಿಯೊಬ್ಬ ಬಾಡಿಗೆ ಮನೆಯಲ್ಲಿ ವಾಸಿಸುವ ಮೂಲಕ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ರಷ್ಯಾದ 11ನೇ ಶ್ರೀಮಂತನಾಗಿರುವ ಮಿಖಾಯಿಲ್ ಫ್ರಿಡ್‍ಮ್ಯಾನ್ 13.7 ಬಿಲಿಯನ್ ಡಾಲರ್ (98 ಸಾವಿರ ಕೋಟಿ ರೂ.)ಯ ಒಡೆಯ. ಹೀಗಿದ್ದರೂ ಸಹ ಅವರ 19 ವರ್ಷದ ಮಗ ಅಲೆಕ್ಸಾಂಡರ್ ಫ್ರಿಡ್‍ಮ್ಯಾನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ಅಲೆಕ್ಸಾಂಡರ್ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಎರಡು ರೂಮ್ ಇರುವ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ತಿಂಗಳು ಆ ಮನೆಗೆ 500 ಡಾಲರ್ (35 ಸಾವಿರ ರೂ.) ಬಾಡಿಗೆ ನೀಡುತ್ತಿದ್ದಾರೆ. ಅಲೆಕ್ಸಾಂಡರ್ ಕೋಟ್ಯಧೀಶನ ಮಗನಾಗಿದ್ದು, ದುಬಾರಿ ಕಾರನ್ನು ಖರೀದಿಸಬಹುದಿತ್ತು. ಆದರೆ ಅವರು ಕಾರನ್ನು ಖರೀದಿಸಲಿಲ್ಲ. ಅಲೆಕ್ಸಾಂಡರ್ ಟ್ಯಾಕ್ಸಿ ಅಥವಾ ಮೆಟ್ರೋದಲ್ಲಿ ತಮ್ಮ ಆಫೀಸ್‍ಗೆ ಪ್ರಯಾಣಿಸುತ್ತಾರೆ.

    ನನ್ನ ಸ್ವಂತ ಸಂಪಾದನೆಯಿಂದ ನಾನು ನನ್ನ ಉಡುಪುಗಳನ್ನು ಖರೀದಿಸಿದ್ದೇನೆ. ನಾನು ನನ್ನದೆ ಆದ ಹೆಸರನ್ನು ಮಾಡಬೇಕು ಎಂದು ಬಯಸುತ್ತೇನೆ. ಕಳೆದ ವರ್ಷ ಲಂಡನ್‍ನ ಹೈಸ್ಕೂಲ್‍ವೊಂದರಲ್ಲಿ ಪದವಿ ಪಡೆದು ಮಾಸ್ಕೋಗೆ ಹಿಂತಿರುಗಿದೆ. 5 ತಿಂಗಳ ಹಿಂದೆ ನಾನು ಐವರು ಉದ್ಯೋಗಿಗಳೊಂದಿಗೆ ಸುಮಾರು 3 ಕೋಟಿ ರೂ.ಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದೆ. ನಾನು ಹುಕ್ಕಾ ಉತ್ಪನ್ನಗಳನ್ನು ಪೂರೈಸುವ ವ್ಯವಹಾರವನ್ನು ಹೊಂದಿದ್ದೇನೆ.

    ಅಲೆಕ್ಸಾಂಡರ್ ಅವರ ತಂದೆ ಮಿಖಾಯಿಲ್ ಹಲವು ದೊಡ್ಡ ಮಾಲೀಕರಾಗಿದ್ದು, ಕೆಲವು ಚಿಲ್ಲರೆ ಅಂಗಡಿಗಳನ್ನು ಸಹ ಹೊಂದಿದ್ದಾರೆ. ಬೇರೆ ಗ್ರಾಹಕರಿಗೆ ಹೊರತುಪಡಿಸಿ ಅಲೆಕ್ಸಾಂಡರ್ ತಮ್ಮ ತಂದೆಯ ಚಿಲ್ಲರೆ ಅಂಗಡಿಗೂ ವಸ್ತುಗಳನ್ನು ಸಪ್ಲೈ ಮಾಡುತ್ತಾರೆ. ಜನರು ಅಲೆಕ್ಸಾಂಡರ್ ಅವರ ತಂದೆಯ ಹೆಸರಿನ ಬದಲಾಗಿ ಅವರ ಪರಿಶ್ರಮ ನೋಡಿ ಅವರು ಮಾರಾಟ ಮಾಡುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

    ನಿಮ್ಮ ತಂದೆಯಿಂದ ಏನನ್ನೂ ಕಲಿತ್ತಿದ್ದೀರಾ ಎಂದು ಅಲೆಕ್ಸಾಂಡರ್ ಅವರನ್ನು ಪ್ರಶ್ನಿಸಿದಾಗ, ನಾವು ನಮ್ಮ ವ್ಯವಹಾರವನ್ನು ನ್ಯಾಯಯುತ ರೀತಿಯಲ್ಲಿ ನಡೆಸುತ್ತೇವೆ. ನನ್ನ ತಂದೆ ಯಾವಾಗಲೂ ನನ್ನ ಎಲ್ಲ ಯೋಜನೆಗಳಲ್ಲಿ ಪಾಲುದಾರ ಅಂತಾ ಹೇಳುತ್ತಾರೆ ಎಂದು ಅಲೆಕ್ಸಾಂಡರ್ ತಿಳಿಸಿದ್ದಾರೆ.

  • ಕ್ಯಾಮೆರಾ ಅಳವಡಿಸಿ ಲೈಂಗಿಕ ಕ್ರಿಯೆ ನಡೆಸೋ 182 ವಿಡಿಯೋ ಚಿತ್ರೀಕರಿಸಿದ್ರು!

    ಕ್ಯಾಮೆರಾ ಅಳವಡಿಸಿ ಲೈಂಗಿಕ ಕ್ರಿಯೆ ನಡೆಸೋ 182 ವಿಡಿಯೋ ಚಿತ್ರೀಕರಿಸಿದ್ರು!

    – ಪ್ರೀತಿ ಹೆಸರಲ್ಲಿ ಹಣಕ್ಕಾಗಿ ಬ್ಲ್ಯಾಕ್ ಮೇಲ್

    ಕೋಲ್ಕತ್ತಾ: ಯುವತಿಯರಿಗೆ ನಂಬಿಸಿ ಮೋಸ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಉದ್ಯಮಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳಕ್ಕೆ ಸೇರಿದ ಆದಿತ್ಯ ಅಗರ್ವಾಲ್, ಅನೀಶ್ ಬಂಧಿತ ಆರೋಪಿಗಳು. ಇಬ್ಬರು ಸ್ನೇಹಿತರಾಗಿದ್ದು, ಯುವತಿಯರನ್ನು ನಂಬಿಸಿ ತಮ್ಮೊಂದಿಗೆ ಅವರನ್ನು ರಹಸ್ಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರೀತಿ ಹೆಸರಿನಲ್ಲಿ ನಂಬಿಸಿ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ವೇಳೆ ರಹಸ್ಯ ಸ್ಥಳಗಳಲ್ಲಿ ಮೊದಲೇ ಕ್ಯಾಮೆರಾ ಅಳವಡಿಸಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆ ಬಳಿಕ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದರು.

    2013ರಿಂದಲೇ ಇಂತಹ ಕೃತ್ಯ ನಡೆಸುತ್ತಿದ್ದ ಆರೋಪಿಗಳು 2018 ರಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರು. ಈ ವಿಡಿಯೋಗಳನ್ನು ತೋರಿಸಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಆರೋಪಿಗಳಿಂದ ಬ್ಲ್ಯಾಕ್ ಮೇಲ್ ಗೆ ಒಳಗಾದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಬಳಿ ಮೊದಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಆಕೆ ಹಣವನ್ನು ನೀಡುತ್ತಿದಂತೆ ಮತ್ತೆ 10 ಲಕ್ಷ ರೂ. ನೀಡುವಂತೆ ಒತ್ತಾಯ ಮಾಡಿದ್ದರು.

    ಮಹಿಳೆಯ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಮೊದಲು ಅನೀಶ್‍ನನ್ನು ಬಂಧಿಸಿದ್ದ ಪೊಲೀಸರಿಗೆ ವಿಚಾರಣೆ ವೇಳೆ ಆದಿತ್ಯ ಬಗ್ಗೆ ಮಾಹಿತಿ ಲಭಿಸಿತ್ತು. ಇಬ್ಬರನ್ನು ಬಂಧಿಸಿದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಪೊಲೀಸರು ಬಂಧನದ ವೇಳೆ ಆರೋಪಿಗಳಿಂದ ಲ್ಯಾಪ್‍ಟಾಪ್ ವಶಕ್ಕೆ ಪಡೆದಿದ್ದು, ಇದರಲ್ಲಿ 180ಕ್ಕೂ ಹೆಚ್ಚು ಸೆಕ್ಸ್ ವಿಡಿಯೋಗಳು ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 2019 ನವೆಂಬರ್ ನಿಂದ ಆರೋಪಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಸದ್ಯ ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದನ್ನು ಓದಿ: ಹಳೆ ಗೆಳೆಯನನ್ನು ಮರೆಯಲು 2ನೇ ಲವ್- ಮೋಸ ಹೋಗಿ ವಿಷ ಸೇವಿಸಿದ ಯುವತಿ

  • ಖ್ಯಾತ ಉದ್ಯಮಿಯಿಂದ ಯುವತಿಯರಿಗೆ ಅಶ್ಲೀಲ ಮೆಸೇಜ್‍- ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

    ಖ್ಯಾತ ಉದ್ಯಮಿಯಿಂದ ಯುವತಿಯರಿಗೆ ಅಶ್ಲೀಲ ಮೆಸೇಜ್‍- ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

    ಬೆಂಗಳೂರು: ನಗರದ ಖ್ಯಾತ ಉದ್ಯಮಿಯೊಬ್ಬರು ತನ್ನ ಕೈ ಕೆಳಗೆ ಕೆಲಸ ಮಾಡುವ ಸುಂದರ ಯುವತಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಯುವತಿಯರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯ ಬಯಲಾಗಿದೆ.

    ರಾತ್ರಿ ಆದರೆ ಸಾಕು, ಕೆಟ್ಟ ಪದ ಬಳಕೆ ಮಾಡಿ ಅಶ್ಲೀಲವಾಗಿ ಮೆಸೇಜ್‍ ಮಾಡುತ್ತಿದ್ದರು. ಮಾಲೀಕನೇ ಈ ರೀತಿ ಮೆಸೇಜ್ ಮಾಡುತ್ತಿದ್ದನ್ನು ನೋಡಿ ಯುವತಿಯರು ಕೂಡ ಶಾಕ್ ಆಗಿದ್ದರು. ಯಾವಾಗ ಮೆಸೇಜ್‍ಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಯಿತೋ ಯುವತಿಯರು ಬೇರೆ ದಾರಿ ಇಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದರು. ದೂರು ದಾಖಲಿಸಿಕೊಂಡ ಪೊಲೀಸರು ಉದ್ಯಮಿಯನ್ನು ಠಾಣೆಗೆ ಕರೆದಿದ್ದರು. ಪೊಲೀಸ್ ಠಾಣೆಗೆ ಬಂದ ಉದ್ಯಮಿ ಮಸೇಜ್‍ಗಳ ವಿಚಾರ ತಿಳಿದು, ಅಶ್ಲೀಲ ಮೆಸೇಜ್‍ಗಳ ಹಿಂದಿನ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದರು.

    ಆಗಿದ್ದೇನು?
    ಕಳೆದ 16ರಂದು ಉದ್ಯಮಿ ಹೆಬ್ಬಾಳ ಬಳಿಯ ಕೆಂಪಾಪುರ ಸಿಗ್ನಲ್ ಬಳಿ ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಮತ್ತೊಂದು ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದ್ದರು. ಕೆಳಗಿಳಿದ ಇಂಡಿಕಾ ಕಾರು ಚಾಲಕ ಏಕಾಏಕಿ ಉದ್ಯಮಿ ಬಳಿ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಕೈಯಲ್ಲಿದ್ದ ಮೊಬೈಲ್ ಕಸಿದು ಹೊರಟು ಹೋಗಿದ್ದನು. ಮೊಬೈಲ್ ತಾನೇ ಹೋದರೆ ಮತ್ತೊಂದು ಖರೀದಿಸಬಹುದು ಎಂದು ಉದ್ಯಮಿ ಕೂಡ ಸುಮ್ಮನಾಗಿದ್ದರು.

    ಈ ವಿಚಾರ ತಿಳಿದ ಅಮೃತಹಳ್ಳಿ ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ವಿಚಾರಣೆ ವೇಳೆ ಚಾಲಕ ಮಿಥುನ್ ಮೆಸೇಜ್‍ಗಳ ಹಿಂದಿನ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದನು. ಉದ್ಯಮಿಯಿಂದ ಮೊಬೈಲ್ ಕಸಿದುಕೊಂಡು ಚಾಲಕ ಮನೆಗೆ ಹೋಗಿದ್ದನು. ಈ ವೇಳೆ ಆತ ಉದ್ಯಮಿಯ ಮೊಬೈಲಿನಲ್ಲಿದ್ದ ಸುಂದರ ಯುವತಿಯರ ನಂಬರ್‍ಗಳಿಗೆ ವಾಟ್ಸಪ್ ಹಾಗೂ ಟೆಕ್ಸ್ಟ್ ಮೆಸೇಜ್ ಮಾಡುವುದಕ್ಕೆ ಶುರು ಮಾಡಿದ್ದನು. ಲೈಟ್ ನೈಟ್‍ವರೆಗೂ ಅಶ್ಲೀಲವಾಗಿ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದಾಗಿ ಚಾಲಕ ಮಿಥುನ್ ತಪ್ಪೊಪ್ಪಿಕೊಂಡಿದ್ದಾನೆ.

    ಇತ್ತ ಮಾಡದ ತಪ್ಪಿಗೆ ಉದ್ಯಮಿ ಪೊಲೀಸ್ ಠಾಣಾ ಮೆಟ್ಟಿಲೇರಿದರೆ, ಅತ್ತ ಕಾರು ಚಾಲಕ ಜೈಲು ಸೇರಿದ್ದಾನೆ.

  • ಲೋನ್ ರಿಕವರಿಗೆ ಬಂದವನ ಎದೆ ಸೀಳಿದ ಉದ್ಯಮಿ

    ಲೋನ್ ರಿಕವರಿಗೆ ಬಂದವನ ಎದೆ ಸೀಳಿದ ಉದ್ಯಮಿ

    ಬೆಂಗಳೂರು: ಲೋನ್ ರಿಕವರಿಗೆ ಬಂದವನ ಮೇಲೆ ಉದ್ಯಮಿಯೊಬ್ಬರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಕಲ್ಯಾಣ ನಗರದ ಲಿವಿಂಗ್‍ವಾಲ್ ಅಪಾರ್ಟ್‍ಮೆಂಟ್ ಬಳಿ ನಡೆದಿದೆ.

    ಐಟಿ ಉದ್ಯಮಿ ಮಯೂರೇಶ್ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸುವಾಗ ಹೆಚ್.ಡಿಎ.ಫ್‍ಸಿ ಬ್ಯಾಂಕ್‍ನಲ್ಲಿ ಲೋನ್ ಪಡೆದಿರುತ್ತಾರೆ. ಮಯೂರೇಶ್ ಪಡೆದಿರುವ ಲೋನ್ ಹಣದಲ್ಲಿ ಕೇವಲ 32 ಸಾವಿರ ಮಾತ್ರ ಬಾಕಿ ಉಳಿಸಿಕೊಂಡಿದ್ದರು. 32 ಸಾವಿರ ಲೋನ್ ಕ್ಲೀಯರ್ ಮಾಡುವಂತೆ ಸಯ್ಯದ್ ಅರ್ಪಾದ್ ಮಯೂರೇಶ್ ಜೊತೆ ಫೋನ್ ನಲ್ಲಿ ವಾಗ್ವಾದ ನಡೆಸಿದ್ದಾನೆ.

    ವಾಗ್ವಾದ ವಿಕೋಪಕ್ಕೆ ಹೋದಾಗ ಸಯ್ಯದ್ ಅರ್ಪಾದ್ ಉದ್ಯಮಿ ವಾಸವಿರುವ ಲಿವಿಂಗ್‍ವಾಲ್ ಅಪಾರ್ಟ್‍ಮೆಂಟ್ ಮುಂದೆ ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಅರ್ಪಾದ್ ಸಂಬಂಧಿ ಅಬ್ದುಲ್ ಸಲೀಂ ಅಂಡ್ ಟೀಂನನ್ನ ಅಪಾರ್ಟ್‍ಮೆಂಟ್ ಬಳಿ ಕರೆಸಿಕೊಂಡಿದ್ದಾರೆ. ಮಯೂರೇಶ್ ಸಹಾಯಕ್ಕೆ ಗೆಳೆಯ ಉದ್ಯಮಿ ಅಮರೇಂದರ್ ಬಂದು ಗಲಾಟೆಯನ್ನು ನಿಲ್ಲಿಸಲು ಮುಂದಾಗಿದ್ದಾರೆ. ಅರ್ಪಾದ್ ಮತ್ತು ಸಲೀಂ ಟೀಂ ಉದ್ಯಮಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅರ್ಪಾದ್ ಅಂಡ್ ಟೀಂ ಹಲ್ಲೆಗೆ ಮುಂದಾಗುತ್ತಿದ್ದಂತೆ ಉದ್ಯಮಿ ಅಮರೇಂದರ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

    ಗಾಳಿಯಲ್ಲಿ ಗುಂಡು ಹಾರಿಸಿದ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಅರ್ಪಾದ್ ಸಂಬಂಧಿ ಸೈಯ್ಯದ್ ಸಲೀಂ ಎದೆಯ ಭಾಗಕ್ಕೆ ಅಮರೆಂದರ್ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಸಯ್ಯದ್ ಸಲೀಂ ಎದೆಯ ಭಾಗಕ್ಕೆ ಗುಂಡು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉದ್ಯಮಿಗಳಾದ ಮಯೂರೇಶ್, ಅಮರೇಂದರ್ ಹಾಗೂ ಅರ್ಪಾದ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಪೊಲೀಸರು ಗಲಾಟೆ ಮಾಡಿದ ಎರಡು ಗ್ಯಾಂಗ್ ಅನ್ನು ವಶಕ್ಕೆ ಪಡೆದು ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳು ಮುಂದಾಗಿದ್ದಾರೆ. ಪ್ರಕರಣದ ವಿಶೇಷ ಅಂದರೆ ಸಾಲ ಪಡೆದುಕೊಂಡವನ ಸಹಾಯಕ್ಕೆ ಬಂದ ಅಮರೇಂದರ್ ಬ್ಯಾಂಕ್ ಸಿಬ್ಬಂದಿಯ ಬೆಂಬಲಕ್ಕೆ ಬಂದ ಸಯ್ಯದ್ ಸಲೀಂ ಅನ್ನು ಶೂಟ್ ಮಾಡಿದ್ದಾರೆ.

  • ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಶೈಲೂ’ ನಟಿ

    ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಶೈಲೂ’ ನಟಿ

    ತಿರುವನಂತಪುರಂ: ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಶೈಲೂ’ ಚಿತ್ರದಲ್ಲಿ ನಟಿಸಿದ ನಟಿ ಭಾಮಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕೊಟ್ಟಾಯಂನಲ್ಲಿ ಭಾಮಾ ಅವರು ಉದ್ಯಮಿ ಅವರ ಜೊತೆ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯಲ್ಲಿ ಕೇವಲ ಅವರ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ಮದುವೆಯಲ್ಲಿ ಭಾಮಾ ಕೆಂಪು ಬಣ್ಣದ ಕಾಂಚಿಪುರಂ ಸೀರೆ ಹಾಗೂ ಆ್ಯನ್‍ಟಿಕ್ ಟೆಂಪಲ್ ಜಿವೆಲ್ಲರಿ ಧರಿಸಿ ಮಿಂಚಿದ್ದಾರೆ. ಇತ್ತ ಅರುಣ್ ಕುರ್ತಾ ಹಾಗೂ ದೋತಿ ಧರಿಸಿದ್ದರು.

    ಇತ್ತೀಚಿಗಷ್ಟೇ ಭಾಮಾ ಉದ್ಯಮಿ ಅರುಣ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ನಿಶ್ಚಿತಾರ್ಥದಲ್ಲಿ ಕೇವಲ ಅವರ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಭಾಮಾ ಅವರದ್ದು ಆರಂಜ್ಡ್ ಮ್ಯಾರೇಜ್ ಆಗಿದ್ದು, ಅರುಣ್ ಹಾಗೂ ಅವರು ಸಹಪಾಠಿಗಳು ಎಂದು ಹೇಳಲಾಗುತ್ತಿದೆ. ಅರುಣ್ ಮೂಲತಃ ಕೇರಳದ ಚೆನ್ನಿಥಾಲ, ಆಲಪ್ಪುಳದವರಾಗಿದ್ದು, ಕೆನೆಡಾದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.

    ‘ನಿವೇದಂ’ ಚಿತ್ರದ ಮೂಲಕ ಭಾಮಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಅವರು ‘ಸೈಕಲ್’, ‘ಐವರ್ ವಿವಾಹಿತರಾಯಲ್’, ‘ಜನಪ್ರಿಯನ್’, ‘ಸೆವೆನ್ಸ್’ ಹಾಗೂ ‘ಹಸ್ಬೆಂಡ್ಸ್ ಇನ್ ಗೋವಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮೊದಲಸಲಾ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಭಾಮಾ ಶೈಲೂ, ಅಂಬರ, ಅರ್ಜುನಾ, ಆಟೋರಾಜ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ 60 ವರ್ಷದ ಉದ್ಯಮಿ ಅರೆಸ್ಟ್

    ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ 60 ವರ್ಷದ ಉದ್ಯಮಿ ಅರೆಸ್ಟ್

    ಮುಂಬೈ: ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ ಕಾಮುಕ ಉದ್ಯಮಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಸಲೀಂ ಖುರೇಶಿ(60) ಅರೆಸ್ಟ್ ಆದ ಉದ್ಯಮಿ. ಬಾಂದ್ರಾ ನಿವಾಸಿಯಾಗಿರುವ ಆರೋಪಿ ಸಲೀಂ 25 ವರ್ಷದ ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ್ದಾನೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಾಂದ್ರಾ ಪೊಲೀಸರು ಸೋಮವಾರ ಆತನನ್ನು ಬಂಧಿಸಿದ್ದಾರೆ.

    ಪೊಲೀಸರು ಸೋಮವಾರ ಸಲೀಂನನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಮಹಿಳೆ ಡಿಸೆಂಬರಿನಿಂದ ಸಲೀಂ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲದೆ ಆತನ ಮನೆಯಲ್ಲಿಯೇ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

    ಕಳೆದ ಶನಿವಾರ ಮಹಿಳೆ ಮನೆಯ ಹಾಲ್‍ನಲ್ಲಿ ಮಲಗಿದ್ದಳು. ಈ ವೇಳೆ ಸಲೀಂ ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ್ದಾನೆ. ಈ ಘಟನೆಯಿಂದ ಮಹಿಳೆ ತೀವ್ರ ರಕ್ತಸ್ರಾವ ಆಗಿ ಪ್ರಜ್ಞೆ ತಪ್ಪಿ ಬಿದ್ದಳು. ಮಹಿಳೆಯ ಸ್ಥಿತಿ ನೋಡಿ ಸ್ವತಃ ಸಲೀಂ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ.

    ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಚಿಕಿತ್ಸೆ ನೀಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಮಹಿಳೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ವಿಷಯ ಕೇಳುತ್ತಿದ್ದಂತೆ ತಕ್ಷಣ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಸಲೀಂನನ್ನು ಬಂಧಿಸಿದ್ದಾರೆ.