Tag: ಉದ್ಯಮಿ

  • ಕಾಫಿ ವ್ಯಾಪಾರದಲ್ಲಿ ನಷ್ಟ – ಚಿಕ್ಕಮಗಳೂರು ಮೂಲದ ಉದ್ಯಮಿ ಆತ್ಮಹತ್ಯೆ

    ಕಾಫಿ ವ್ಯಾಪಾರದಲ್ಲಿ ನಷ್ಟ – ಚಿಕ್ಕಮಗಳೂರು ಮೂಲದ ಉದ್ಯಮಿ ಆತ್ಮಹತ್ಯೆ

    ಬೆಂಗಳೂರು: ವ್ಯಾಪಾರದಲ್ಲಿ ನಷ್ಟವಾದ ಪರಿಣಾಮ ಉದ್ಯಮಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಡೆದಿದೆ.

    ಶಾಕೀರ್ ಅಹ್ಮದ್ ಆತ್ಮಹತ್ಯೆಗೆ ಶರಣಾದ ಉದ್ಯಮಿ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಿವಾಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದ ಶಾಕೀರ್ ಅಹ್ಮದ್ ಜುಲೈ 13 ರಿಂದ ನಾಪತ್ತೆಯಾಗಿದ್ದಾರೆಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿಯ ವಜ್ರೇಶ್ವರಿ ಲಾಡ್ಜ್ ನಲ್ಲಿ ತಂಗಿದ್ದ ಶಾಕೀರ್, ಮಧ್ಯಾಹ್ನ ಊಟಕ್ಕೆ ಹೊರ ಬರದಿದ್ದಾಗ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದ್ದರು. ನೇಣುಬಿಗಿದ ಸ್ಥಿತಿಯಲ್ಲಿ ಶಾಕೀರ್ ಅಹ್ಮದ್ ಮೃತದೇಹ ಪತ್ತೆಯಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಕೆಲವು ಅನುಮಾನಗಳು ಇದು ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

     

  • ಗ್ಯಾಬ್ಲಿಂಗ್ ಆರೋಪ – ಹರಿರಾಜ್ ಶೆಟ್ಟಿ, ಉದ್ಯಮಿಗಳ ಪತ್ನಿಯರ ಮೇಲೆ ಚಾರ್ಜ್‍ಶೀಟ್ ಸಲ್ಲಿಕೆ

    ಗ್ಯಾಬ್ಲಿಂಗ್ ಆರೋಪ – ಹರಿರಾಜ್ ಶೆಟ್ಟಿ, ಉದ್ಯಮಿಗಳ ಪತ್ನಿಯರ ಮೇಲೆ ಚಾರ್ಜ್‍ಶೀಟ್ ಸಲ್ಲಿಕೆ

    ಬೆಂಗಳೂರು: ಗ್ಯಾಂಬ್ಲಿಂಗ್ ನಡೆಸ್ತಿದ್ದ ಆರೋಪದ ಮೇಲೆ ಉದ್ಯಮಿ ಹರಿರಾಜ್ ಶೆಟ್ಟಿಯ ಮೇಲೆ ಸಿಸಿಬಿ  ಪೊಲೀಸರು ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

    ಮುಂಗಾರು ಮಳೆ- 2 ಚಿತ್ರದ ನಟಿ ನೇಹಾ ಶೆಟ್ಟಿಯ ತಂದೆ ಹರಿರಾಜ್ ಶೆಟ್ಟಿ ಕನ್ನಿಂಗ್ ಹ್ಯಾಮ್ ರಸ್ತೆಯ ನಂ15ನೇ ಬೇಸ್ಮೆಂಟ್ ನ ಪೂಲ್‍ಎನ್ ರಿ ಕ್ರಿಯೇಷನ್ ಕ್ಲಬ್ ನಲ್ಲಿ ಜೂಜು ನಡೆಸುತ್ತಿದ್ದರು ಎಂಬ ಆರೋಪದಡಿ ಬಂಧನವಾಗಿದ್ದರು. ಇದನ್ನೂ ಓದಿ: ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!

    ಈ ಬಗ್ಗೆ ಸಿಸಿಬಿ ಇನ್ಸ್‍ಪೆಕ್ಟರ್ ಎ.ಪಿ ಕುಮಾರ್ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ಕೇಸ್ ದಾಖಲಾಗಿದೆ. ಪೂಲ್‍ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಗ್ಯಾಂಬ್ಲಿಂಗ್, ಬ್ಯಾನ್ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸ್ತಿದ್ದ ಆರೋಪದಡಿ ಹರಿರಾಜ್ ವಿರುದ್ಧ ಬರೋಬ್ಬರಿ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

    ಹರಿರಾಜ್ ಜೊತೆಗೆ ಬರೋಬ್ಬರಿ 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧವು ಸಿಸಿಬಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ. ಜೂಜು ಆಡಿಸುತ್ತಿದ್ದ ಹರಿರಾಜ್ ಶೆಟ್ಟಿ, ಬೆಂಗಳೂರು, ಚಿಕ್ಕಬಳ್ಲಾಪುರ, ಬಳ್ಳಾರಿ ಹಾಗೂ ಆಂಧ್ರಪ್ರದೇಶ, ತಮಿಳುನಾಡು ರಾಜ್ಯದ ಜೂಜು ಕೋರರಿಂದ ಲಕ್ಷ, ಲಕ್ಷ ಹಣ ಪಡೆಯುತ್ತಿದ್ದರು ಎಂಬ ಅಂಶ ಬಯಲಾಗಿದೆ. ರೇಡ್ ವೇಳೆ ಸಿಸಿಬಿ ಪೊಲೀಸರು ಲಕ್ಷ ಗಟ್ಟಲೇ ಹಣ ಸೀಜ್ ಮಾಡಿ ಆರೋಪಿಗಳನ್ನು ಬಂಧಿಸಿದ್ದರು.

    ವಿಚಾರಣೆ ವೇಳೆ ಮಹಿಳೆಯರನ್ನು ಸಹ ಜೂಜಾಟಕ್ಕೆ ಹರಿರಾಜ್ ಶೆಟ್ಟಿ ಕರೆ ತಂದಿದ್ದ ಬಗ್ಗೆ ತಿಳಿದುಬಂದಿದೆ. ಸಿಸಿಬಿ ಪೊಲೀಸರ ರೇಡ್ ಮಾಡುವ ಸಂದರ್ಭ ಬೆಂಗಳೂರಿನ ಉದ್ಯಮಿಗಳ ಪತ್ನಿಯರು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಸಿಕ್ಕಿಬಿದ್ದಿದ್ದಾರೆ. 5 ಮಂದಿ ಮಹಿಳೆಯರಲ್ಲಿ ಇಬ್ಬರು ಉದ್ಯಮಿಗಳ ಪತ್ನಿಯರು, ಇಬ್ಬರು ಅಧಿಕಾರಿಗಳ ಪತ್ನಿಯರು ಮತ್ತೊಬ್ಬ ಮಹಿಳೆ, ಒರ್ವ ರೌಡಿ ಶೀಟರ್ ತಾಯಿ ಎಂದು ಗುರುತಿಸಲಾಗಿದೆ. ಸದ್ಯ ಪುರುಷರ ಜೊತೆ 5 ಮಹಿಳೆಯರಾದ ಮಂಜುಳ, ಸ್ವಾತಿ, ಲಕ್ಷ್ಮಿ, ಗೀತಾದೇವಿ ಮತ್ತು ಕ್ರಿಸ್ಟೀನ್ ಕುಮಾರಿ ವಿರುದ್ಧ ಮಹಿಳಾ ಗ್ಯಾಂಬ್ಲರ್ ಗಳೆಂದು  ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.

  • ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ- ಮೂವರಿಗೆ ಸಾಯುವವರೆಗೆ ಜೈಲು ಶಿಕ್ಷೆ

    ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ- ಮೂವರಿಗೆ ಸಾಯುವವರೆಗೆ ಜೈಲು ಶಿಕ್ಷೆ

    ಉಡುಪಿ:ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಮೂವರು ಆರೋಪಿಗಳು ದೋಷಿಗಳು ಎಂದಿರುವ  ಜಿಲ್ಲಾ ನ್ಯಾಯಾಲಯ, ದೋಷಿಗಳು ಜೀವಿತಾವಧಿ ಕಂಬಿ ಹಿಂದೆ ಇರಬೇಕು ಎಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    2016 ರ ಜುಲೈ 28 ರಂದು ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಪತ್ನಿ ರಾಜೇಶ್ವರಿ ನವನೀತ್ ಶೆಟ್ಟಿ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ರಾಜೇಶ್ವರಿ ಗೆಳೆಯ ನಿರಂಜನ ಭಟ್ ಜೊತೆ ಸೇರಿ ನಂದಳಿಕೆಯ ಮನೆಯಲ್ಲಿ ಇರುವ ಹೋಮಕುಂಡದಲ್ಲಿ ಸುಟ್ಟು ಹಾಕಿದ್ದರು.

    ಎಲುಬು ಮತ್ತು ಮೂಳೆ ಪಕ್ಕದ ಹೊಳೆಗೆ ಎಸೆದು ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಲಾಗಿತ್ತು. ಭಾಸ್ಕರ್ ಶೆಟ್ಟಿ ತಾಯಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ತನ್ನ ಮಗ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಪತ್ನಿ ಪುತ್ರನ ವಿಚಾರಣೆಗೊಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಿಐಡಿ ತನಿಖೆ ಕೂಡ ಆಗಿತ್ತು. ನಾಲ್ಕು ವರ್ಷ 11 ತಿಂಗಳುಗಳ ಕಾಲ ಸುದೀರ್ಘ ವಾದ-ಪ್ರತಿವಾದ ನಡೆದು ಎಂದು ಕೋರ್ಟು ತೀರ್ಪು ಪ್ರಕಟಿಸಿದೆ.

     

    ಪ್ರಮುಖ ಆರೋಪಿಗಳಾಗಿರುವ ಪತ್ನಿ ರಾಜೇಶ್ವರಿ ಪುತ್ರ ನವನೀತ್ ಶೆಟ್ಟಿ ರಾಜೇಶ್ವರಿ ಗೆಳೆಯ ನಿರಂಜನ ದೋಷಿ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶ ಸುಬ್ರಹ್ಮಣ್ಯ ಜೆ.ಎನ್ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಭಾಸ್ಕರ ಶೆಟ್ಟಿ ಕುಟುಂಬದ ಪರ ವಾದ ಮಂಡಿಸಿದ್ದರು.

  • ಕೋವಿಡ್ -19 ಪರಿಹಾರ ನಿಧಿಗೆ 5 ಕೋಟಿ ದೇಣಿಗೆ ನೀಡಿದ ಸಿಮೆಂಟ್ ಉದ್ಯಮಿಗಳು

    ಕೋವಿಡ್ -19 ಪರಿಹಾರ ನಿಧಿಗೆ 5 ಕೋಟಿ ದೇಣಿಗೆ ನೀಡಿದ ಸಿಮೆಂಟ್ ಉದ್ಯಮಿಗಳು

    – ಸಚಿವ ನಿರಾಣಿ ಮನವಿಗೆ ಸ್ಪಂದಿಸಿದ ಉದ್ದಿಮೆದಾರರು
    – ಅಗತ್ಯ ವೈದ್ಯಕೀಯ ಸೌಲಭ್ಯಕ್ಕೆ ಬಳಕೆ

    ಕಲಬುರಗಿ: ಕೋವಿಡ್ -19 ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಜಿಲ್ಲೆಯ ಸೋಂಕಿತರ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು 5 ಕೋಟಿ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.

    ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು, ಜಿಲ್ಲೆಯ ಸಿಮೆಂಟ್ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದರು.

    ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಸೋಂಕಿನ ಸ್ಥಿತಿಗತಿ, ಸೋಂಕು ತಗಲಿರುವ ಪ್ರಮಾಣ, ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರು, ಹೋಂ ಕ್ವಾರೆಂಟೆನ್ ಗೆ ಒಳಗಾಗಿರುವವರು, ಆಕ್ಸಿಜನ್ ಪೂರೈಕೆ, ಐಸಿಯು ಬೆಡ್ ಸಾಮಾನ್ಯ ಬೆಡ್ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೋಂಕಿತರಿಗೆ ಅಗತ್ಯವಾಗಿರುವ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು ಮುಂದೆ ಬರುವಂತೆ ಸಚಿವ ನಿರಾಣಿ ಅವರು ಮನವಿ ಮಾಡಿಕೊಂಡರು.

    ಇದಕ್ಕೆ ತಕ್ಷಣ ಸ್ಫಂದಿಸಿದ ವಿವಿಧ ಸಿಮೆಂಟ್ ಉದ್ಯಮಿದಾರರು ಸೋಂಕಿತರ ಚಿಕಿತ್ಸಾ ನೆರವಿಗೆ 5 ಕೋಟಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

  • ಉದ್ಯಮಿಯಿಂದ ನಿತ್ಯ 600ಕ್ಕೂ ಹೆಚ್ಚು ಮಂದಿಗೆ ಆಹಾರ ವಿತರಣೆ

    ಉದ್ಯಮಿಯಿಂದ ನಿತ್ಯ 600ಕ್ಕೂ ಹೆಚ್ಚು ಮಂದಿಗೆ ಆಹಾರ ವಿತರಣೆ

    ಚಾಮರಾಜನಗರ: ಉದ್ಯಮಿಯೊಬ್ಬರು ಕಳೆದ 15 ದಿನಗಳಿಂದ ನಿತ್ಯ 600ಕ್ಕೂ ಹೆಚ್ಚು ಮಂದಿಯ ಹೊಟ್ಟೆ ತುಂಬಿಸುತಿದ್ದಾರೆ.

    ತಾಲೂಕಿನ ಹೊನ್ನಳ್ಳಿ ಗ್ರಾಮದ ಉದ್ಯಮಿ ವೃಷಬೇಂದ್ರಪ್ಪ ಹಸಿದವರ ನೆರವಿಗೆ ಧಾವಿಸಿದ್ದು, ಪ್ರತಿನಿತ್ಯ ತಾವೇ ನಿಂತು ಆಹಾರ ತಯಾರಿಸಿ ಪ್ಯಾಕೆಟ್ ಮಾಡಿ, ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ವಿತರಣೆ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಬರುವ ಕೊರೊನಾ ರೋಗಿಗಳ ಸಂಬಂಧಿಕರು, ನಾನ್ ಕೋವಿಡ್ ರೋಗಿಗಳು, ಬಡವರು ಮಧ್ಯಾಹ್ನದ ಊಟ ಸಿಗದೆ ಹಸಿವಿನಿಂದ ಬಳಲುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಹೋಟೆಲ್ ಗಳು ಮುಚ್ಚಿ ಮಧ್ಯಾಹ್ನದ ಊಟ ಸಿಗದೆ ಪರದಾಡುತ್ತಿದ್ದ ಜನರಿಗೆ ಊಟ ವಿತರಿಸುತ್ತಿದ್ದಾರೆ.

    ತಾವೇ ಅಂಗಡಿಯಿಂದ ದಿನಸಿ ತರುವ ವೃಷಬೇಂದ್ರಪ್ಪ, ಖುದ್ದು ತಾವೇ ನಿಂತು ತಯಾರಿಸಿದ ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲಿಗಳನ್ನು ವಾಹನಕ್ಕೆ ತುಂಬಿಕೊಂಡು ಹಸಿದವರಿಗೆ ಹಂಚುತ್ತಾರೆ. ಜಿಲ್ಲಾಸ್ಪತ್ರೆ ಮುಂದೆ ವಾಹನ ನಿಲ್ಲಿಸಿ ಹಸಿದು ಬರುವವರ ಹೊಟ್ಟೆ ತುಂಬಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಸ್ನೇಹಿತರೂ ಸಾಥ್ ಕೊಟ್ಟಿದ್ದಾರೆ.

    ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕೂರುವುದು ಸರಿಯಲ್ಲ. ಮನುಷ್ಯರಾದ ನಾವು ಸಹ ಜವಾಬ್ದಾರಿ ಹೊರಬೇಕು. ದೇವರು ನನಗೆ ಕೊಟ್ಟಿದ್ದಾನೆ, ಆದರಿಂದ ಹಸಿದವರಿಗೆ ನೆರವಾಗಬೇಕು ಎಂಬುದು ನನ್ನ ಉದ್ದೇಶ. ಲಾಕ್‍ಡೌನ್ ಜಾರಿಯಲ್ಲಿರುವ ತನಕ ಈ ಸೇವೆ ಮುಂದುವರಿಸುತ್ತೇನೆ ಎಂದು ವೃಷಬೇಂದ್ರಪ್ಪ ಹೇಳಿದ್ದಾರೆ.

  • ಪೊಲೀಸ್ ಅಧಿಕಾರಿ ಮೇಲೆ ಕಾರು ಹತ್ತಿಸಿ ಹಲ್ಲೆಗೆ ಮುಂದಾದವರ ಬಂಧನ

    ಪೊಲೀಸ್ ಅಧಿಕಾರಿ ಮೇಲೆ ಕಾರು ಹತ್ತಿಸಿ ಹಲ್ಲೆಗೆ ಮುಂದಾದವರ ಬಂಧನ

    – ಟೋಲ್ ಗೇಟ್ ಶುಲ್ಕ ಕಟ್ಟಲು ನಿರಾಕರಣೆ
    – ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕಾರು ಚಲಾಯಿಸಿದ ಉದ್ಯಮಿ

    ಕಾರವಾರ: ಟೋಲ್ ಗೇಟ್ ನಲ್ಲಿ ಶುಲ್ಕ ಕಟ್ಟಲು ಗಲಾಟೆ ಮಾಡಿದ ಉದ್ಯಮಿಯನ್ನು ತಡೆಯಲು ಹೋದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕಾರು ಚಲಾಯಿಸಿ ಹಲ್ಲೆ ನಡೆಸಲು ಮುಂದಾದ ನಾಲ್ವರನ್ನು ಬಂಧಿಸಲಾಗಿದೆ.

    ಅಂಕೋಲಾದ ಉದ್ಯಮಿ ಸುರೇಶ್ ನಾಯ್ಕ, ಅಲಗೇರಿ ಬೊಮ್ಮಯ್ಯ ನಾಯ್ಕ, ಗೋಪಾಲ ನಾಯ್ಕ ಬಂಧಿತರು. ಸುರೇಶ್ ನಾಯ್ಕನ ಅಪ್ರಾಪ್ತ ಪುತ್ರನನ್ನು ರಿಮ್ಯಾಂಡ್ ಹೋಂಗೆ ಶಿಫ್ಟ್ ಮಾಡಲಾಗಿದೆ.

    ಅಂಕೋಲಾ ಟೋಲ್ ಗೇಟ್‍ನಲ್ಲಿ ಹೆದ್ದಾರಿ ಸುಂಕದ ವಿಚಾರವಾಗಿ ನಾಲ್ವರು ಟೋಲ್ ಗೇಟ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ನಿಂತಿದ್ದರು. ಈ ವೇಳೆ ಕಾರವಾರದಿಂದ ಅಂಕೋಲಾಕ್ಕೆ ತೆರಳುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಅವರು ಟೋಲ್ ಗೇಟ್ ಸಿಬ್ಬಂದಿ ಜೊತೆ ನಡೆಯುತ್ತಿದ್ದ ಗಲಾಟೆ ಕಂಡು ನಾಲ್ವರು ಆರೋಪಿಗಳಲ್ಲಿ ಜಗಳ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ಉದ್ಯಮಿ ವಾಹನದ ಎದುರು ನಿಂತಿದ್ದ ಅಧಿಕಾರಿ ಮೇಲೆ ಏಕಾಏಕಿ ಕಾರು ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ.

    ಘಟನೆಯ ಸಂಪೂರ್ಣ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ರಿಕೆಟ್ ಬೆಟ್ಟಿಂಗ್ ದಂಧೆ-ಲಕ್ಷ ಲಕ್ಷ ಡೀಲ್ ಮಾಡಿದ್ರಾ ಸಿಸಿಬಿ ಪೊಲೀಸರು?

    ಕ್ರಿಕೆಟ್ ಬೆಟ್ಟಿಂಗ್ ದಂಧೆ-ಲಕ್ಷ ಲಕ್ಷ ಡೀಲ್ ಮಾಡಿದ್ರಾ ಸಿಸಿಬಿ ಪೊಲೀಸರು?

    ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ಉದ್ಯಮಿಗಳನ್ನು ಫಿಕ್ಸ್ ಮಾಡಿ ಲಕ್ಷ ಲಕ್ಷ ಡೀಲ್ ಮಾಡಿರುವ ಆರೋಪವನ್ನು ಸಿಸಿಬಿ ಪೊಲೀಸರು ಎದುರಿಸುತ್ತಿದ್ದಾರೆ.

    ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಹಣವನ್ನು ಪಡೆದ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯಮಿ ಕರುಣಾಕರ ಭಂಡಾರಿ ಎಂಬವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ಸಿಸಿಬಿ ದಾಳಿ ಮಾಡಿದ್ದರು. ಆಗ ಸಿಸಿಬಿ ಪಿಎಸ್‍ಐ ಕಬ್ಬಾಳ್ ರಾಜ್ 55 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಉದ್ಯಮಿ ಕರುಣಾಕರ ಭಂಡಾರಿ ಮಾತ್ರವಲ್ಕದೇ ನನ್ನ ಮುಂಬೈ ಹೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ ಎಂದು ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಹೇಳಿದ್ದಾರೆ. ಸುಳ್ಳು ಕೇಸ್ ಹಾಕಿ ಮಾನಮರ್ಯಾದೆ ತೆಗೆಯೋದಾಗಿ ಬೆದರಿಸಿದ್ದಾರೆ. ಒಬ್ಬರಿಂದ 35 ಲಕ್ಷ ಹಣ ಇನ್ನೊಬ್ಬರಿಂದ 25 ಲಕ್ಷ ಹಣವನ್ನು ಪಡೆದಿದ್ದಾರೆ. ಹರೀಶ್ ಮತ್ತು ವಿಶ್ವಾಸ್ ಎಂಬವರಿಗೆ ಬೆದರಿಸಿ ಲಕ್ಷ ಲಕ್ಷ ಹಣವನ್ನು ಪಡೆದಿದ್ದಾರೆ. ಎಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಹೆದರಿ ಹಣವನ್ನು ನೀಡಿದ್ದಾರೆ. ಇವರೆಲ್ಲ ಸಿಐಡಿ ಪೊಲೀಸರ ಎದುರು ಬಂದು ಮಾಹಿತಿ ಕೊಡಲು ಸಿದ್ಧರಿದ್ದಾರೆ ಎಂದು ಲಕ್ಷ್ಮೀಶ್ ಹೇಳಿದ್ದಾರೆ.

  • ಮಂಗಳೂರಿನ ಪ್ರತಿಷ್ಠಿತ ಎಜೆ ಶೆಟ್ಟಿ, ಯೆನಪೋಯ ಆಸ್ಪತ್ರೆಗಳ ಮೇಲೆ ಐಟಿ ರೇಡ್

    ಮಂಗಳೂರಿನ ಪ್ರತಿಷ್ಠಿತ ಎಜೆ ಶೆಟ್ಟಿ, ಯೆನಪೋಯ ಆಸ್ಪತ್ರೆಗಳ ಮೇಲೆ ಐಟಿ ರೇಡ್

    ಮಂಗಳೂರು: ಬೆಳ್ಳಬೆಳಗ್ಗೆ ನಗರದ ಪ್ರತಿಷ್ಠಿತ ಆಸ್ಪತ್ರೆಯ ಆಸ್ಪತ್ರೆ ನಡೆಸುತ್ತಿರುವ ಮೂವರು ಉದ್ಯಮಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿದೆ.

    ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎಜೆ ಶೆಟ್ಟಿ, ಯೆನಪೋಯ ಗ್ರೂಪ್ ಸಂಸ್ಥೆಯ ಮಾಲಕ ಅಬ್ದುಲ್ ಕುಂಞ ಹಾಗೂ ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಅವರ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆಸಲಾಗಿದೆ.

    ಮೂರೂ ಸಂಸ್ಥೆಗಳ ಮನೆ,ಆಸ್ಪತ್ರೆ, ಕಚೇರಿ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆದಿದ್ದೂ, ಏಳು ಮಂದಿ ಅಧಿಕಾರಿಗಳ ತಂಡದಿಂದ ಐಟಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

  • ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ- 5 ಮಂದಿ ಅರೆಸ್ಟ್

    ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ- 5 ಮಂದಿ ಅರೆಸ್ಟ್

    – ಇಬ್ಬರು ಮಹಿಳೆಯರು, ಮೂವರು ಪುರುಷರು ಭಾಗಿ
    – ಹಣ ಇದ್ದವರೇ ಇವರ ಟಾರ್ಗೇಟ್

    ಲಕ್ನೋ: ಹನಿಟ್ರ್ಯಾಪ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಲೈಂಗಿಕ ವೀಡಿಯೋಗಳನ್ನು ಮಾಡುವ ಮೂಲಕ ಜನರನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನೊಳಗೊಂಡ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಗ್ಯಾಂಗ್‍ನಲ್ಲಿರುವ ಮಹಿಳೆಯರು ಉದ್ಯಮಿಗಳು, ವೈದ್ಯರು ಸೇರಿದಂತೆ ಹಣ ಇರುವವರೆನ್ನೆ ಗುರಿಯಾಗಿಸಿಕೊಂಡಿದ್ದರು. ನಂತರ ಗ್ಯಾಂಗ್‍ನಲ್ಲಿ ಉಳಿದ ಸದಸ್ಯರು ಅವನಿಗೆ ಬೆದರಿಕೆ ಹಾಕುತ್ತಿದ್ದರು. ವೀಡಿಯೊಗಳನ್ನು ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಭಾರೀ ಮೊತ್ತದ ಹಣವನ್ನು ಈ ಗ್ಯಾಂಗ್ ಸುಲಿಗೆ ಮಾಡುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಲಕ್ನೋದ ಲೋಹಿಯಾ ಇನ್ಸಿಟ್ಯೂಟ್ ವೈದ್ಯರನ್ನು ಬಲಿಪಶುವನ್ನಾಗಿ ಮಾಡಿಕೊಂಡಿತ್ತು. ಹೇಗಾದರೂ ವೈದ್ಯರನ್ನು ಟ್ರ್ಯಾಪ್ ಮಾಡಬೇಕು ಎಂದು ಗ್ಯಾಂಗ್ ಹೊಂಚು ಹಾಕುತ್ತಿರುವಾಗ. ವೈದ್ಯರು ಈ ಗ್ಯಾಂಗ್ ಹಿಡಿತದಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ನಂತರ ಲಕ್ನೋದ ವಿಭೂತಿ ಖಾಂಡ್ ಪೊಲೀಸರು ಹನಿ ಟ್ರ್ಯಾಪ್ ಮಾಡಿ ಲೈಂಗಿಕ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಮಾಡಿದರು. ಬಂಧಿತ ಎಲ್ಲಾ ಆರೋಪಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಈ ಗ್ಯಾಂಗ್‍ನಲ್ಲಿ ಇದುವರೆಗೆ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಆರೋಪಿಗಳಿಂದ ಸಂಗ್ರಹಿಸಲಾಗುತ್ತಿದೆ.

  • ದೇವಸ್ಥಾನದ ಜೀರ್ಣೋದ್ಧಾರಕ್ಕೆ 500 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರು ಉದ್ಯಮಿ

    ದೇವಸ್ಥಾನದ ಜೀರ್ಣೋದ್ಧಾರಕ್ಕೆ 500 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರು ಉದ್ಯಮಿ

    ತಿರುವನಂತಪುರಂ: ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಕೇರಳದ ದೇವಾಲಯವೊಂದರ ಜೀರ್ಣೋದ್ಧಾರಕ್ಕೆ 500 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಕೊಚ್ಚಿ ನಗರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಎರ್ನಾಕುಲಂ ಜಿಲ್ಲೆಯ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ಭಾರೀ ದೇಣಿಗೆ ಲಭಿಸಿದ್ದು, ದೇವಾಲಯದ ನಿರ್ವಹಣೆ ಮಾಡುತ್ತಿರುವ ಕೊಚ್ಚಿಯ ದೇವಸ್ವಂ ಮಂಡಳಿ ದೇಣಿಗೆ ಪಡೆಯಲು ಕೇರಳ ಹೈಕೋರ್ಟ್ ಅನುಮೋದನೆಯನ್ನು ಪಡೆಯಲು ನಿರ್ಧರಿಸಿದೆ.

    ಗಣ ಶ್ರವಣ್ (ಸ್ವಾಮಿಜಿ) ಕಂಪನಿಗಳ ಗಣ ಶ್ರವಣ್ ಅವರು ದೇವಸ್ಥಾನಕ್ಕೆ 500 ಕೋಟಿ ರೂ. ದೇಣಿಗೆ ನೀಡುತ್ತಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ತಮ್ಮ ಜೀವನ ಹಾಗೂ ವ್ಯವಹಾರದಲ್ಲಿ ಒಳ್ಳೆಯದಾಗಿದೆ. ಆದ್ದರಿಂದ ಕಾಣಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ದೇವಸ್ವಂ ಮಂಡಳಿಯ ಕಾರ್ಯದರ್ಶಿ ವಿಎ ಶೀಜಾ ಮಾತನಾಡಿ, ಈ ಕುರಿತು ಮಂಡಳಿ ಇನ್ನೂ ಅಂತಿಮ ತೀರ್ಮಾನ ಮಾಡಬೇಕಿದೆ. ಕಾನೂನು ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಿಯಮಗಳ ಅನ್ವಯ ದೇವಸ್ಥಾನ ಅಭಿವೃದ್ಧಿಗಾಗಿ 20 ಲಕ್ಷ ರೂ. ಹೆಚ್ಚು ದೇಣಿಗೆ ಪಡೆಯಲು ಅನುಮತಿ ಪಡೆಯಬೇಕಿದೆ. ಭವಿಷ್ಯದಲ್ಲಿ ಯಾವುದೇ ಕಾನೂನು ಸಮಸ್ಯೆ ಎದುರಾಗದಂತೆ ಮಂಡಳಿ ನ್ಯಾಯಾಲಯದ ಅನುಮತಿಯನ್ನು ಪಡೆಯಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.

    46 ವರ್ಷದ ಶ್ರವಣ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯರಾಗಿದ್ದು, ಸುಮಾರು 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಆ ವೇಳೆ ಅವರಿಗೆ ವ್ಯವಹಾರದಲ್ಲಿ ಹೆಚ್ಚು ಲಾಭವಿರಲಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ಗುರುಗಳ ಸಲಹೆಯಂತೆ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ನೀಡಿದ್ದರು. ಆ ಬಳಿಕ ಅವರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ.

    ಸದ್ಯ ಶ್ರವಣ್ ಅವರು ಮುಂಬೈ ಮೂಲದ ಸಂಸ್ಥೆಯೊಂದಿಗೆ ಚಿನ್ನ, ವಜ್ರ ಮತ್ತು ಅಪರೂಪದ ಲೋಹಗಳ ವ್ಯಾಪಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಆಭರಣದ ಮಳಿಗೆಯನ್ನು ಹೊಂದಿದ್ದಾರೆ. ಅಲ್ಲದೇ ಕಟ್ಟಣ ನಿರ್ಮಾಣ ಹಾಗು ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲೂ ವ್ಯವಹಾರ ಮಾಡುತ್ತಿದ್ದಾರೆ.

    ದಶಕಗಳಷ್ಟು ಹಳೆಯದಾದ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನ ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪುರಾಣಗಳ ಹಿನ್ನೆಲೆಯನ್ನು ಹೊಂದಿದೆ. ಸದ್ಯ ದೇವಸ್ಥಾನವನ್ನು ಎರಡು ಹಂತಗಳಲ್ಲಿ ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಗಿದ್ದು, ಗೋಪುರ, ಮಂಟಪಗಳ ನವೀಕರಣ, ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಅತಿಥಿ ಗೃಹಗಳ ನಿರ್ಮಾಣ ಕಾರ್ಯ ಮೊದಲ ಹಂತದಲ್ಲಿ ನಡೆಯಲಿದೆ. ಕುರಿತ ವಿವರವಾದ ಮಾಸ್ಟರ್ ಪ್ಲ್ಯಾನ್ ಮತ್ತು ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದ್ದು, 2ನೇ ಹಂತದಲ್ಲಿ ದೇವಸ್ಥಾನದ ಹತ್ತಿರದ ಪ್ರದೇಶಗಳ ರಸ್ತೆ ಅಭಿವೃದ್ಧಿಯನ್ನು ಹೊಂದಿದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳ ಅಗತ್ಯವಿದೆ ಎಂದು ವಾಸ್ತುಶಿಲ್ಪಿ ಅಜಿತ್ ಹೇಳಿದ್ದಾರೆ.