Tag: ಉದ್ಯಮಿ

  • ಉದ್ಯಮಿ ರಾಜು ಹತ್ಯೆಗೆ 10 ಲಕ್ಷ ರೂ. ಸುಪಾರಿ ನೀಡಿದ ಎರಡನೇ ಪತ್ನಿ!

    ಉದ್ಯಮಿ ರಾಜು ಹತ್ಯೆಗೆ 10 ಲಕ್ಷ ರೂ. ಸುಪಾರಿ ನೀಡಿದ ಎರಡನೇ ಪತ್ನಿ!

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ ಹತ್ಯೆಗೆ ಆತನ ಎರಡನೇ ಹೆಂಡತಿ ಕಿರಣ ಹಾಗೂ ಇಬ್ಬರು ಬ್ಯುಸಿನೆಸ್ ಪಾರ್ಟ್ನರ್ ಗಳು 10 ಲಕ್ಷ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

    ಬೆಳಗಾವಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಜಯ್ ರಜಪೂತಗೆ ಸುಪಾರಿ ನೀಡಿರುವುದು ಬಯಲಾಗಿದೆ. ಬೆಳಗಾವಿ ಚೆನ್ನಮ್ಮ ನಗರದಲ್ಲಿ 10 ವರ್ಷಗಳ ಹಿಂದೆ ಗ್ಲೋಬಲ್ ಡೆವಲಪರ್ಸ್ ಹೆಸರಿನಲ್ಲಿ ಅಪಾರ್ಟ್‍ಮೆಂಟ್ ನಿರ್ಮಾಣ ಸಂಬಂಧ ಧರ್ಮೇಂದ್ರ, ಶಶಿಕಾಂತ ಹಾಗೂ ರಾಜು ಮಧ್ಯೆ ಪಾರ್ಟ್ನರ್ ಶಿಪ್ ಆಗಿತ್ತು. ಹತ್ತು ವರ್ಷವಾದರೂ ಮೊದಲು ಆರಂಭಿಸಿದ ಪ್ರಾಜೆಕ್ಟ್ ಮುಗಿಯದ ಹಿನ್ನೆಲೆ ವೈಷಮ್ಯವಿತ್ತು.

    ಇನ್ನೊಂದೆಡೆ ಎರಡನೇ ಹೆಂಡತಿ ಕಿರಣ ಹಾಗೂ ಪತಿ ರಾಜು ಮೇಲೆ ದ್ವೇಷವಿತ್ತು. ಮೊದಲ ಮದುವೆಯನ್ನು ಬಚ್ಚಿಟ್ಟು ತನ್ನ ವಿವಾಹವಾಗಿದ್ದನೆಂಬ ದ್ವೇಷವಿತ್ತು. ತನ್ನ ಹಾಗೂ ತನ್ನ ಇಬ್ಬರ ಮಕ್ಕಳ ಹೆಸರಿನಲ್ಲಿ ಆಸ್ತಿ ಮಾಡುವಂತೆ ಪ್ರತಿ ದಿನ ರಾಜುಗೆ ಪತ್ನಿ ಕಿರಣ ಒತ್ತಾಯಿಸುತ್ತಿದ್ದರು. ಆದರೆ ರಾಜು ಯಾವುದೇ ಆಸ್ತಿ ಎರಡನೇ ಹೆಂಡತಿ ಹೆಸರಲ್ಲಿ ಮಾಡದೇ ಇದ್ದಿದ್ದಕ್ಕೆ ಸಿಟ್ಟು ಇತ್ತು. ಹೀಗಾಗಿ ಪತಿಯ ಬ್ಯುಸಿನೆಸ್ ‌ಪಾರ್ಟ್ನರ್ ಗಳ ಜೊತೆಗೂಡಿ ಹತ್ಯೆಗೆ ಸಂಚು ರೂಪಿಸಿದ್ದರು. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್

    ಮಾರ್ಚ್ 15ರ ಬೆಳಗ್ಗೆ 6 ಗಂಟೆ ಸುಮಾರಿಗೆ ರಾಜು ದೊಡ್ಡಬೊಮ್ಮನ್ನವರ ಹತ್ಯೆಗೈದು ಹಂತಕರು ಪರಾರಿಯಾಗಿದ್ದರು. ಕೆಲ ಸಮಯದ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎರಡನೇ ಪತ್ನಿ ಕಿರಣ ಹಾಗೂ ಮತ್ತೋರ್ವ ಆರೋಪಿ ಧರ್ಮೇಂದ್ರ ತಮಗೇನೂ ಗೊತ್ತೇ ಇಲ್ಲದ ರೀತಿ ಸ್ಥಳಕ್ಕೆ ಬಂದು ನಾಟಕವಾಡಿದ್ದರು. ಈ ವೇಳೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೆಳಗಾವಿ ಗ್ರಾಮೀಣ ಪೋಲಿಸರು ಮೊಬೈಲ್ ಕರೆ ವಿವರ ಪರಿಶೀಲಿಸುವ ವೇಳೆ ಬ್ಯುಸಿನೆಸ್ ಪಾರ್ಟ್ನರ್ ಗಳ ಮೇಲೆ ಅನುಮಾನ ಮೂಡಿತ್ತು. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

    ಸದ್ಯ ಸುಪಾರಿ ಹಂತಕರ ಪೈಕಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಜೇಮ್ಸ್ ಚಿತ್ರವನ್ನೂ ಯಾವುದೇ ಕಾರಣಕ್ಕೂ ತೆಗೆಯಬಾರದು: ಡಿಕೆಶಿ

  • ಕೇರಳದ ಮಹಿಳಾ ಉದ್ಯಮಿ ಹತ್ಯೆ – ತಲೆಮರೆಸಿಕೊಂಡ ಆರೋಪಿ

    ಕೇರಳದ ಮಹಿಳಾ ಉದ್ಯಮಿ ಹತ್ಯೆ – ತಲೆಮರೆಸಿಕೊಂಡ ಆರೋಪಿ

    ತಿರುವನಂತಪುರಂ: ಮಹಿಳಾ ಉದ್ಯಮಿಯೊಬ್ಬರನ್ನು ಕೊಲೆ ಮಾಡಿ ಆರೋಪಿಯು ತಲೆಮರೆಸಿಕೊಂಡ ಘಟನೆ ಕೇರಳದ ತ್ರಿಶ್ಯೂರ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

    ಮನ್ನಾರ ಪರಂಬು ಗ್ರಾಮದವರಾದ ರಿನ್ಸಿ ನಾಜರ್ (30) ಕೊಲೆಯಾದ ಮಹಿಳೆ. ರಿನ್ಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್ (25) ಕೊಲೆಗೈದ ಆರೋಪಿ. ಮಹಿಳೆಯು ರಾತ್ರಿ ಅಂಗಡಿ ಮುಚ್ಚಿ ತನ್ನ ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಅಂಗಡಿಯಲ್ಲಿಯೇ ಕೆಲಸ ಮಾಡಿದ್ದ ಮಾಜಿ ನೌಕರ ರಿಯಾಜ್‌, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್‍ಡಿಡಿ

    ರಿಯಾಜ್ ತನ್ನ ಬೈಕ್‍ನಲ್ಲಿ ರಿನ್ಸಿಯನ್ನು ಹಿಂಬಾಲಿಸಿ ಅವರ ಸ್ಕೂಟರ್ ಅನ್ನು ಹಿಂದಿಕ್ಕಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅವರು ಸ್ಕೂಟರ್ ಮೇಲಿಂದ ಬಿದ್ದಿದ್ದಾರೆ. ನಂತರ ಚಾಕು ತೆಗೆದುಕೊಂಡು ಅವರ ಮುಖ ಮತ್ತು ಕೈಯನ್ನು ಕತ್ತರಿಸಿದ್ದಾನೆ. ಅವರ ದೇಹದಿಂದ ಮೂರು ಬೆರಳುಗಳು ಬೇರ್ಪಟ್ಟಿವೆ. ದೇಹದಲ್ಲಿ 30 ಕ್ಕೂ ಹೆಚ್ಚು ಗಾಯಗಳಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

    ಮಕ್ಕಳ ಕೂಗು ಕೇಳಿ ಅಕ್ಕಪಕ್ಕದ ಜನರು ಆಗಮಿಸಿದರು. ಸ್ಥಳಕ್ಕೆ ಧಾವಿಸಿದವರಿಗೆ ರಿಯಾಜ್ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ರಿನ್ಸಿ ನಿವಾಸದ ಮೇಲೆ ದಾಳಿ ಮಾಡಿದ್ದಕ್ಕಾಗಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆರೋಪಿಯು ಜವಳಿ ಅಂಗಡಿಗೆ ಭೇಟಿ ನೀಡಿ ಅಲ್ಲಿಯೂ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

  • ಚಂದ್ರನಲ್ಲಿನ ಜಾಗವನ್ನು ಪ್ರೇಯಸಿಗೆ ಉಡುಗೊರೆ ನೀಡಿದ ಗುಜರಾತ್ ಉದ್ಯಮಿ!

    ಚಂದ್ರನಲ್ಲಿನ ಜಾಗವನ್ನು ಪ್ರೇಯಸಿಗೆ ಉಡುಗೊರೆ ನೀಡಿದ ಗುಜರಾತ್ ಉದ್ಯಮಿ!

    ಗಾಂಧಿನಗರ: ಒಬ್ಬರನ್ನೊಬ್ಬರು ಪ್ರೀತಿಸುವ ಜೋಡಿಗಳು ತಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ಏನೆಲ್ಲಾ ಕಸರತ್ತು ಮಾಡಲ್ಲ? ಇದೀಗ ಗುಜರಾತ್ ಮೂಲದ ಉದ್ಯಮಿಯೊಬ್ಬ ತನ್ನ ಗೆಳತಿಗೆ ಬೇಕೆಂದಾಗ ಕೈಗೂ ಎಟುಕದ ಉಡುಗೊರೆ ನೀಡಿ ಭಾರೀ ಸುದ್ದಿಯಾಗಿದ್ದಾರೆ.

    ಗುಜರಾತ್‌ನ ವಡೋದರಾ ಮೂಲದ ಉದ್ಯಮಿ ಮಯೂರ್ ಪಟೇಲ್ ತನ್ನನ್ನು ಮದುವೆಯಾಗಲಿರುವ ಹುಡುಗಿಗೆ ಚಂದ್ರನಲ್ಲಿನ 1 ಎಕರೆ ಜಾಗವನ್ನು ಉಡುಗೊರೆ ನೀಡಿ ಹುಬ್ಬೇರಿಸುವಂತೆ ಮಾಡಿದ್ದಾನೆ.

    ಹಿಂದಿನಿಂದಲೂ ಪ್ರೇಮಿಗಳು ರಾತ್ರಿ ಹೊತ್ತು ಆಕಾಶದಲ್ಲಿ ಕಾಣಿಸಿಕೊಳ್ಳುವ ಚಂದ್ರ-ನಕ್ಷತ್ರಗಳನ್ನು ಮುಟ್ಟುವ, ಅದನ್ನು ಹಿಡಿದು ತರುವಂತಹ ಮಕ್ಕಳಂತೆ ಕನಸು ಕಾಣುತ್ತಾರೆ. ಆದರೆ ಈ ಉದ್ಯಮಿ ತನ್ನ ಗೆಳತಿಗೆ ಚಂದ್ರನಲ್ಲಿನ ಜಾಗವನ್ನೇ ಬರೆದುಕೊಟ್ಟು ಜನರಿಗೆ ಅಚ್ಚರಿ ಮೂಡಿಸಿದ್ದಾನೆ. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಡೌನ್ಲೋಡಿಂಗ್ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆಗೆ ಕನ್ನ

    ಭೂಮಿಯನ್ನು ಹೊರತುಪಡಿಸಿ ಬಾಹ್ಯ ಗ್ರಹಗಳಲ್ಲಿ ಒಡೆತನವನ್ನು ಸಾಧಿಸುವುದು ನಿಷೇಧಿಸಲಾಗಿದೆ. ದಿ ಔಟರ್ ಸ್ಪೇಸ್ ಟ್ರೀಟಿ ಆಫ್ 1967 ಎಂಬ ಅಂತಾರಾಷ್ಟ್ರೀಯ ಒಪ್ಪಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಯಾವುದೇ ಆಕಾಶಕಾಯದಲ್ಲಿ ಹಕ್ಕು ಪಡೆಯುವುದನ್ನು ನಿಷೇಧಿಸಿದೆ. ಗುಜರಾತ್‌ನ ಉದ್ಯಮಿ ತನ್ನ ಗೆಳತಿಗೆ ಬರೆದುಕೊಟ್ಟಿರುವ ಚಂದ್ರನ ಮೇಲಿನ ಆಸ್ತಿಯನ್ನು ಕೇವಲ ಡಿಜಿಟಲ್ ರೂಪದ ಆಸ್ತಿ ಎಂದು ಮಾತ್ರವೇ ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: 2023ರಲ್ಲಿ ಬರಲಿದೆ ಭಾರತದ ಮೊದಲ RRTS ರೈಲು

    ಉದ್ಯಮಿ ಮಯೂರ್ ಪಟೇಲ್ ತನ್ನ ಗೆಳತಿ ಹೇಮಾಲಿಯೊಂದಿಗೆ ಫೆಬ್ರವರಿ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2 ವರ್ಷ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಹಸೆಮಣೆಏರಲಿದ್ದಾರೆ.

  • ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಮಾಸ್ಕೋ: ಉಕ್ರೇನ್ ಮೇಲಿನ ದಾಳಿಯನ್ನು ವಿಶ್ವದ ಇತರ ದೇಶಗಳು ಮಾತ್ರವಲ್ಲದೇ ರಷ್ಯಾ ಕೂಡಾ ವಿರೋಧಿಸುತ್ತಿದೆ. ಯುದ್ಧ ಘೋಷಿಸಿದ ದೇಶದ ಒಳಗಿನವರೇ ಅಧ್ಯಕ್ಷನ ವಿರುದ್ಧ ಟೀಕೆ ಮಾಡಿದ್ದಾರೆ. ರಷ್ಯಾದ ಸಾಮಾನ್ಯ ಜನರು, ಕ್ರೀಡಾ ಪಟುಗಳು ಸೆಲೆಬ್ರಿಟಿಗಳು ಎನ್ನದೇ ಬಹುತೇಕ ಜನರು ಯುದ್ಧ ಬೇಡ ಎಂದೇ ಹೇಳಿದ್ದಾರೆ.

    ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾರ ಮಾತನ್ನೂ ಕೇಳದೇ ಯುದ್ಧವನ್ನು ಮುಂದುವರಿಸುತ್ತಿರುವಾಗ ರಷ್ಯಾದ ಉದ್ಯಮಿಯೊಬ್ಬರು ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

    ರಷ್ಯಾದ ಮಾಸ್ಕೋ ಮೂಲದ ಉದ್ಯಮಿ ಅಲೆಕ್ಸ್ ಕೋನನಿಖಿನ್ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಪುಟಿನ್ ಅವರನ್ನು ರಷ್ಯಾದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸಿದ ಅಧಿಕಾರಿಗೆ ನಾನು 10 ಲಕ್ಷ ಡಾಲರ್(7.5 ಕೋಟಿ ರೂ.) ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ

    ಪುಟಿನ್ ರಷ್ಯಾದ ಅಧ್ಯಕ್ಷನಲ್ಲ. ಅವರು ವಿಶೇಷ ಕಾರ್ಯಾಚರಣೆಯ ಭಾಗವಾಗಿ ರಷ್ಯಾದಲ್ಲಿ ಅನೇಕ ಅಪಾರ್ಟ್‍ಮೆಂಟ್ ಹಾಗೂ ಕಟ್ಟಡಗಳನ್ನು ಧ್ವಂಸ ಮಾಡಿದ್ದಾರೆ. ಇದಾದ ಬಳಿಕ ಚುನಾವಣೆಗಳನ್ನೂ ನಡೆಸಿಲ್ಲ. ಸಂವಿಧಾನವನ್ನು ಹಾಳುಮಾಡಿದ್ದಾರೆ. ತಮ್ಮ ವಿರೋಧಿಗಳನ್ನೂ ಕೊಂದಿದ್ದಾರೆ ಎಂದು ಬರೆದಿದ್ದಾರೆ.

  • ಲಾಭದ ಆಮಿಷವೊಡ್ಡಿ ಉದ್ಯಮಿಗೆ 32 ಲಕ್ಷ ರೂ. ಪಂಗನಾಮ!

    ಲಾಭದ ಆಮಿಷವೊಡ್ಡಿ ಉದ್ಯಮಿಗೆ 32 ಲಕ್ಷ ರೂ. ಪಂಗನಾಮ!

    ಹುಬ್ಬಳ್ಳಿ: ಲಾಭದ ಆಮಿಷವೊಡ್ಡಿ ಉದ್ಯಮಿ ಒಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಹೆಗ್ಗೇರಿ ಕಾಲೋನಿಯ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬವರೇ ಮೋಸ ಹೋದವರು. ಇವರಿಗೆ ಅಪರಿಚಿತರೊಬ್ಬರು ಪ್ಲಿಪ್‍ಕಾರ್ಟ್ ಕಂಪನಿಯ ಪ್ರಾಜೆಕ್ಟ್‍ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂದು ನಂಬಿಸಿ ಬರೋಬ್ಬರಿ 32 ಲಕ್ಷ ವಂಚನೆ ಮಾಡಿದ್ದಾರೆ.

     

    ದೂರುದಾರರಿಗೆ ಅಪರಿಚಿತ ಮಹಿಳೆ ಲಕ್ಷ್ಮೀ ಮೆಹರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾಳೆ. ಪ್ಲಿಪ್‍ಕಾರ್ಟ್ ಕಂಪನಿಯ ಪ್ರಾಜೆಕ್ಟ್‍ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭ ಗಳಿಸಬಹುದು ಎಂದು ಹೇಳಿ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 32 ಲಕ್ಷ ರೂ.ಗಳನ್ನು ಆನ್‍ಲೈನ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಅಲ್ಲದೇ ಪದೇ ಪದೇ ಹಣ ಹಾಕು ಎಂದು ಕೇಳುತ್ತಿದ್ದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕೆ ಭರ್ಜರಿ ಆಫರ್ ನೀಡಿದ ಓಟಿಟಿ!

    ಈ ಕುರಿತು ಹುಬ್ಬಳ್ಳಿ – ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೋರ್ಟ್‍ಗೆ ಹಾಜರಾಗಿ ವಾಪಸ್ಸಾಗ್ತಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿಯ ಕೊಂದೇ ಬಿಟ್ರು!

    ಕೋರ್ಟ್‍ಗೆ ಹಾಜರಾಗಿ ವಾಪಸ್ಸಾಗ್ತಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿಯ ಕೊಂದೇ ಬಿಟ್ರು!

    ಆನೇಕಲ್: ಕೋರ್ಟ್ ಗೆ ಹಾಜರಾಗಿ ಮನೆಯತ್ತ ತೆರಳುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಬಿ.ಟಿ.ಎಂ.ನಿವಾಸಿ ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಜಮೀನಿನ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಆನೇಕಲ್ ಕೋರ್ಟಿಗೆ ಹಾಜರಾಗಿ ನಿವಾಸದತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.

    ಆನೇಕಲ್ ಪಟ್ಟಣದಲ್ಲಿರುವ ಕೇಂದ್ರ ಸರ್ಕಾರದ ಮಂತ್ರಿ ಎ ನಾರಾಯಣಸ್ವಾಮಿ ನಿವಾಸದ ಮುಂದೆ ರಾಜಶೇಖರ್ ರೆಡ್ಡಿ ತನ್ನ ಸ್ವಿಫ್ಟ್ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ನಂತರ ಮೊದಲಿಗೆ ಗನ್ ಮೂಲಕ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದೂಷಕರ್ಮಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಈ ರಾಜ್ಯದ ಆಸ್ತಿ: ಕೆ.ಎಸ್‌.ಈಶ್ವರಪ್ಪ

  • 100 ಕೋಟಿ ರೂ. ಆಸೆಗೆ ಒಂದು ಮುಕ್ಕಾಲು ಕೋಟಿ ಹಣ ಕಳ್ಕೊಂಡ

    100 ಕೋಟಿ ರೂ. ಆಸೆಗೆ ಒಂದು ಮುಕ್ಕಾಲು ಕೋಟಿ ಹಣ ಕಳ್ಕೊಂಡ

    ಬೆಂಗಳೂರು: ನೂರಾರು ಕೋಟಿ ವ್ಯವಹಾರ ಮಾಡುವ ಉದ್ಯಮಿಯೊಬ್ಬರು ಕಡಿಮೆ ಬಡ್ಡಿಯಲ್ಲಿ ನೂರು ಕೋಟಿ ಸಾಲ ಸಿಗುತ್ತದೆ ಎಂಬ  ಆಸೆಗೆ ಬರೋಬ್ಬರಿ ಒಂದು ಮುಕ್ಕಾಲು ಕೋಟಿ ಹಣ ಕಳೆದುಕೊಂಡಿದ್ದಾರೆ.

    ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಆಂಧ್ರ ಮೂಲದ ಉದ್ಯಮಿ ಮಂತೇನಾ ವರುಣ್ ಗಾಂಧಿ ಅವರಿಗೆ ಹಣದ ಅವಶ್ಯಕತೆ ಇತ್ತು. ಇದೇ ವೇಳೆ ಎಚ್‍ಎಸ್‍ಆರ್ ಲೇಔಟ್ ನಲ್ಲಿರುವ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಕಡಿಮೆ ಬಡ್ಡಿಗೆ ಸಾಲ ನೀಡುವ ವಿಚಾರ ತಿಳಿದ ಉದ್ಯಮಿ ಆ ಕಂಪನಿಯನ್ನು ಭೇಟಿ ಮಾಡಿದರು. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್

    ಈ ವೇಳೆ ನಮ್ಮದು ಇಂಟರ್ ನ್ಯಾಷನಲ್ ಕಂಪನಿ ನೂರು ಕೋಟಿ ಸಾಲ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನೂರು ಕೋಟಿ ಸಾಲ ತೆಗೆದುಕೊಳ್ಳುವ ಮುನ್ನ ಮೂರು ತಿಂಗಳ ಬಡ್ಡಿಯನ್ನು ಮುಂಗಡವಾಗಿ ನೀಡಬೇಕು ಎಂದು ಕಂಡಿಷನ್ ಹಾಕಿತ್ತು. ನೂರು ಕೋಟಿ ಸಾಲ ಕೊಡುತ್ತಿದ್ದಾರೆ, ಕೇವಲ ಮೂರು ತಿಂಗಳ ಬಡ್ಡಿ ತಾನೇ ಅಂತ ಮೂರು ತಿಂಗಳ ಬಡ್ಡಿ ಹಣ ಒಂದು ಕೋಟಿ ಎಂಬತ್ತೊಂದು ಲಕ್ಷ ಹಣವನ್ನು ಉದ್ಯಮಿ ವರುಣ್ ಗಾಂಧಿ ಆ ಕಂಪನಿಗೆ ಕಟ್ಟಿದ್ದರು.  ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ

    POLICE JEEP

    ಹಣ ತೆಗೆದುಕೊಂಡ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕೆಲ ದಿನಗಳ ನಂತರ ಏಕಾಏಕಿ ಬಾಗಿಲು ಹಾಕಿದ್ದು, ಉದ್ಯಮಿಗೆ ಶಾಕ್ ನೀಡಿದೆ. ಈ ಸಂಬಂಧ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

  • ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆ ನೇಮಿಸಿಕೊಂಡ ಉದ್ಯಮಿ

    ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆ ನೇಮಿಸಿಕೊಂಡ ಉದ್ಯಮಿ

    ವಾಷಿಂಗ್ಟನ್: ಉದ್ಯಮಿಯೊಬ್ಬ ತಾನೂ ಫೇಸ್‍ಬುಕ್ ತೆರೆದರೆ ಕೆನ್ನೆಗೆ ಬಾರಿಸಲು ಮಹಿಳೆಯನ್ನು ನೇಮಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಜಗತ್ತಿನಾದ್ಯಂತ 2.85 ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿರುವ ಫೇಸ್‍ಬುಕ್ ಜನಪ್ರಿಯ ಜಾಲತಾಣವಾಗಿದೆ. ಆದರೆ ಈ ಭಾರತೀಯ ಅಮೆರಿಕನ್ ತಾನು ಪತ್ರಿ ಬಾರಿ  ಫೇಸ್‍ಬುಕ್ ತೆರೆದಾಗ ತಮ್ಮ ಕೆನ್ನೆಗೆ ಬಾರಿಸಲು ಮಹಿಳೆಯನ್ನು ನೇಮಿಕೊಂಡಿದ್ದಾರೆ.

    ಪ್ಲಾವೋಕ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಮನೀಶ್ ಸೇಠಿ ತಾವು ಕೆಲಸ ಮಾಡುವಾಗ ಅಪ್ಪಿತಪ್ಪಿ ಫೇಸ್‍ಬುಕ್ ತೆರೆದರೆ ಕೂಡಲೇ ತಮ್ಮ ಕೆನ್ನೆಗೆ ಬಾರಿಸಲು ಕಾರಾ ಎನ್ನುವ ಹೆಸರಿನ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

    ಕರಾಗೆ ಈ ಕೆಲಸಕ್ಕೆ ಪ್ರತಿ ತಿಂಗಳು (8 ಡಾಲರ್)594.78 ರೂಪಾಯಿ ಸಂಬಳ ನಿಗದಿ ಮಾಡಲಾಗಿದೆ. ಇದರಿಂದ ತನ್ನ ಉತ್ಪಾದಕತೆಯ ಶೇ.98 ರಷ್ಟು ಹೆಚ್ಚಿದೆ ಎಂದು ಮನೀಶ್ ಹೇಳಿದ್ದಾರೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡಾ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಾಲಕ ಮದ್ಯಪಾನ ಮಾಡಿದ್ರೆ ಕಾರು ಚಲಿಸಲ್ಲ-ಅಮೆರಿಕಾ ಹೊಸ ವ್ಯವಸ್ಥೆ

  • ಐಟಿ ಅಧಿಕಾರಿಯ ಸೋಗಿನಲ್ಲಿ ಉದ್ಯಮಿ ಕಿಡ್ನಾಪ್‍ಗೆ ಪ್ಲಾನ್ – ಸಿನಿಮಾ ನಿರ್ಮಾಪಕ ಸೇರಿದಂತೆ ನಾಲ್ವರ ಬಂಧನ

    ಐಟಿ ಅಧಿಕಾರಿಯ ಸೋಗಿನಲ್ಲಿ ಉದ್ಯಮಿ ಕಿಡ್ನಾಪ್‍ಗೆ ಪ್ಲಾನ್ – ಸಿನಿಮಾ ನಿರ್ಮಾಪಕ ಸೇರಿದಂತೆ ನಾಲ್ವರ ಬಂಧನ

    ಬೆಂಗಳೂರು: ಐಟಿ ಅಧಿಕಾರಿಯ ಸೋಗಿನಲ್ಲಿ ಉದ್ಯಮಿಯನ್ನು ಕಿಡ್ನಾಪ್ ಮಾಡಿದ್ದ ಸಿನಿಮಾ ನಿರ್ಮಾಪಕ ಶಶಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    2015ರಲ್ಲಿ ಹಾಫ್ ಮೆಂಟಲ್ ಎಂಬ ಸಿನಿಮಾವನ್ನು ನಿರ್ಮಿಸಿದ್ದ ಶಶಿಕುಮಾರ್ ನಷ್ಟ ಅನುಭವಿಸಿದ್ದರು. ಬಡ್ಡಿ, ಚಕ್ರಬಡ್ಡಿ ಎಂದು ಸಾಲಗಾರರ ಕಾಟಕ್ಕೆ ಬೇಸತ್ತು, ಕೊನೆಗೆ ಹೇಗಾದರೂ ದುಡ್ಡು ಮಾಡಬೇಕೆಂದು ಯೋಚಿಸಿ ನಾಲ್ವರು ಆರೋಪಿಗಳೊಂದಿಗೆ ಸೇರಿ ಸಿನಿಮಾ ಸ್ಕ್ರಿಪ್ಟ್ ರೀತಿಯಲ್ಲಿಯೇ ವಾರಗಟ್ಟಲೇ ಕೂತು ಕಿಡ್ನಾಪ್‍ ಮಾಡುವುದರ ಬಗ್ಗೆ ಸ್ಕೇಚ್ ಹಾಕಿದ್ದರು. ಕಿಡ್ನಾಪ್‍ ಮಾಡಿದ್ರೆ ಯಾರನ್ನು ಮಾಡಬೇಕು, ಕಿಡ್ನಾಪ್‍ ಸ್ಟೈಲ್ ಹೇಗಿರಬೇಕು ಎಂದು ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    half mental

    ಈ ವೇಳೆ ಬಸವೇಶ್ವರ ನಗರ ವಾಸಿ ಈರುಳ್ಳಿ ವ್ಯವಹಾರ ಮಾಡುತ್ತಿದ್ದ ಉದ್ಯಮಿ ಶ್ರೀನಿವಾಸನ್ ಬಳಿ ಕೋಟ್ಯಾಂತರ ಹಣ ಇದೆ ಎಂಬ ಮಾಹಿತಿ ಕಲೆಹಾಕಿದ ಆರೋಪಿಗಳು, ನಂತರ ಐಟಿ ಅಧಿಕಾರಿಗಳ ಸೋಗಿನಲ್ಲಿ ಕಿಡ್ನಾಪ್‍ ಮಾಡಬೇಕೆಂದು ಪ್ಲಾನ್ ಮಾಡಿದರು. ಅದರಂತೆ ಸೆಪ್ಟೆಂಬರ್30 ರಂದು ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ಶ್ರೀನಿವಾಸನ್ ಕಾರನ್ನು ಅಡ್ಡಗಟ್ಟಿದ್ದರು. ಐಟಿ ಅಧಿಕಾರಿಗಳ ರೀತಿನೇ ಇನ್ನೊವಾ ಕಾರು, ಟಫ್ ಆಫೀಸರ್‌ಗಳ ರೀತಿ ಡ್ರೆಸ್ ಧರಿಸಿದ್ದ ಆರೋಪಿಗಳು, ನಾವು ಐಟಿ ಅಧಿಕಾರಿಗಳು, ನಿನ್ನ ಬಗ್ಗೆ ತೆರಿಗೆ ವಂಚನೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲಾವಿದರ ಸಾವು ಉದ್ಯಮದಲ್ಲಿ ಸಂಪತ್ತಿನ ಕೊರತೆಯಂತೆ – ಸತ್ಯಜಿತ್ ನಿಧನಕ್ಕೆ ಎಸ್ ನಾರಾಯಣ್ ಕಂಬನಿ

    ನಂತರ ನೀನು ಒಂದುವರೆ ಕೋಟಿ ಟ್ಯಾಕ್ಸ್ ವಂಚನೆ ಮಾಡಿರುವ ಬಗ್ಗೆ ದಾಖಲೆಗಳಿವೆ. 50 ಲಕ್ಷ ಹಣ ನೀಡದೇ ಇದ್ದರೆ, ಕೇಸ್ ಹಾಕಿ ಒಳಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಕೊನೆಗೆ ಇಪ್ಪತ್ತು ಲಕ್ಷಕ್ಕೆ ಡೀಲ್ ಕುದುರಿಸಿ ನಾಳೆ ಹಣ ತಂದು ಕೊಡುವಂತೆ ಶ್ರೀನಿವಾಸನ್‍ನನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಅನುಮಾನಗೊಂಡ ಉದ್ಯಮಿ ಶ್ರೀನಿವಾಸನ್ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಕೂಡಲೇ ಹೋಗಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಹಾಫ್ ಮೆಂಟಲ್ ಸಿನಿಮಾ ನಿರ್ಮಾಪಕ ಶಶಿಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

  • ಐಟಿ ಕಂಪನಿ ಉದ್ಯಮಿ ಅನುಮಾನಾಸ್ಪದ ಸಾವು

    ಐಟಿ ಕಂಪನಿ ಉದ್ಯಮಿ ಅನುಮಾನಾಸ್ಪದ ಸಾವು

    ನೆಲಮಂಗಲ: ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಉದ್ಯಮಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸ್ವಾತಿ ಲಾಡ್ಜಿಂಗ್ ಅಂಡ್ ಬೋರ್ಡಿಂಗ್ ನಲ್ಲಿ ನಡೆದಿದೆ.

    ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಉದ್ಯಮಿ ಪ್ರದೀಪ್ ಸಿಂಗ್ ಶೇಖಾವತ್(38) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ. ಕಳೆದ ಸಂಜೆ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿಕೊಂಡು ಲಾಡ್ಜ್‍ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 104 ರಲ್ಲಿ ತಂಗಿದ್ದ ಪ್ರದೀಪ್ ಸಿಂಗ್, ಬೆಳಗ್ಗೆ 9 ಗಂಟೆಯಾದರೂ ರೂಂ ನಿಂದ ಹೊರಬಾರದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ನೆಲಮಂಗಲ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನೆಲಮಂಗಲ ಪೊಲೀಸರು ಬಾಗಿಲು ಹೊಡೆದು ಒಳಹೋದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್

    ಉಸಿರುಗಟ್ಟಿ ಹಾಗೂ ವಿಷಸೇವನೆ ಮಾಡಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಪ್ರದೀಪ್ ಸಿಂಗ್ ಶೇಖಾವತ್ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲು ಮಾಡಿದ್ದು ಪೊಲೀಸರು ಹುಡುಕಾಟದಲ್ಲಿದ್ದರು. ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ನೆಲಮಂಗಲ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು