Tag: ಉದ್ಯಮಿ

  • ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ

    ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ

    ಬೆಳಗಾವಿ: ಯುವಕರು ಸ್ವಯಂ ಉದ್ಯೋಗದಾತರಾಗಲು ನಡೆಸುತ್ತಿರುವ ಉದ್ಯಮಿಯಾಗ—ಉದ್ಯೋಗ ನೀಡು ಕಾರ್ಯಾಗಾರ ವಿಶೇಷ ಕಾರ್ಯಕ್ರಮವೂ ಮುಂದುವರಿಯಲಿದ್ದು, ಆಯಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ನಿರಾಣಿ (Murugesh Nirani) ತಿಳಿಸಿದ್ದಾರೆ.

    ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ (D.S.Arun) ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯ 3-4 ಕೇಂದ್ರಗಳಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಂಡವಾಳ ಹೂಡಿಕೆ ಸಮಾವೇಶದಿಂದ 6 ಲಕ್ಷ ಹುದ್ದೆ ಸೃಷ್ಟಿ: ಮುರುಗೇಶ್ ನಿರಾಣಿ

    ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲು ಉದ್ಯಮ ಸ್ಥಾಪಿಸಿ ಉದ್ಯೋಗ ಕೊಡುವಂತಾಗಬೇಕು ಎನ್ನುವ ಉದ್ದೇಶದಿಂದ ಕಾರ್ಯಾಗಾರವನ್ನು ನಡೆಸಿ, ಅವಕಾಶಗಳ ಬಗ್ಗೆ ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಲಾಗುತ್ತಿದೆ. ಇದರಲ್ಲಿ 50 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ನಂತರ 40-50 ತಾಸಿನ ಆನ್‌ಲೈನ್‌ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಲಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ ಎಂದು ವಿವರಿಸಿದರು.

    ಇನ್ವೆಸ್ಟ್ ಕರ್ನಾಟಕ ಕುರಿತು
    ಇನ್ವೆಸ್ಟ್ ಕರ್ನಾಟಕದಿಂದ ಎಷ್ಟು ಬಂಡವಾಳ ಬಂದಿದೆ. ಅದರಿಂದ ಆದ ಲಾಭದ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಸಚಿವರು, ನವೆಂಬರ್ 2 ರಿಂದ 4 ರವರೆಗೆ ಮೂರು ದಿನಗಳ ಕಾಲ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಬಗ್ಗೆ ವಿವಿಧ ಯೋಜನೆಗಳನ್ನು ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆದ ಈ ಸಮಾವೇಶದಲ್ಲಿ ಜಪಾನ್, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗೂ ನೆದರ್ಲೆಂಡ್ ಸೇರಿದಂತೆ ಹಲವು ದೇಶಗಳ 15,000 ಪ್ರತಿನಿಧಿಗಳು ಹಾಗೂ ಸುಪ್ರಸಿದ್ಧ ಕಂಪನಿಯ ಸಿಇಓ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಸಚಿವರು ಸಭೆಗೆ ಉತ್ತರಿಸಿದರು. ಇದನ್ನೂ ಓದಿ: CBI ದಾಳಿ – ಡಿಕೆಶಿ ಬೆನ್ನಿಗೆ ನಿಂತ ಲಕ್ಷ್ಮೀ ಹೆಬ್ಬಾಳ್ಕರ್

    ಇನ್ವೆಸ್ಟ್ ಕರ್ನಾಟಕದಲ್ಲಿ ಪ್ರಮುಖವಾಗಿ 57 ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವರು ಉತ್ತರಿಸಿದರು. ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ತೂಕ ಮಾಡುವಾಗ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವಿರೋಧ ಪಕ್ಷಗಳ ಸದಸ್ಯರಿಗೆ ಸಚಿವ ನಿರಾಣಿ, ಎಥೆನಾಲ್ ಹಾಗೂ ಸಕ್ಕರೆ ಉತ್ಪಾದನೆ ಬೆಲೆ, ಆದಾಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಇದೆ. ಹಾಗೇ ಕಬ್ಬು ತೂಕದಲ್ಲಿ ಯಾವುದೇ ಮೋಸ ಆಗುತ್ತಿಲ್ಲ. ಏಕೆಂದರೆ ಬೆಳೆಗಾರರು ಖಾಸಗಿಯಾಗಿಯೂ ತೂಕ ಮಾಡಿಸುತ್ತಾರೆ. ಹಾಗಾಗಿ ಟನ್‌ಗಟ್ಟಲೇ ಮೋಸ ಆಗುವುದಿಲ್ಲ ಎಂದು ಸದನಕ್ಕೆ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ

    GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ

    ಕಾರವಾರ: ಉದ್ಯಮಿಯೊಬ್ಬರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ 50 ಲಕ್ಷ ಹಣ ದೋಚಿದ್ದ ಪ್ರಕರಣವನ್ನು ಶಿರಸಿ ಠಾಣೆ ಪೊಲೀಸರು ಭೇದಿಸಿದ್ದು, 9 ದರೋಡೆಕೋರರನ್ನು ಬಂಧಿಸಿ ಅವರಿಂದ 13.82 ಲಕ್ಷ ಹಣ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರು, 12 ಮೊಬೈಲ್ ಮತ್ತು ಜಿಪಿಎಸ್‌ ಟ್ರ್ಯಾಕರ್ ವಶಕ್ಕೆ ಪಡೆಯಲಾಗಿದೆ.

    ಸಿದ್ದಾಪುರ ತಾಲ್ಲೂಕು ನೆಜ್ಜೂರು ಗ್ರಾಮದ ಜಾವೇದ್ ಖಾನ್ ಎಂಬವರು ಇಬ್ಬರು ಸಂಬಂಧಿಕರೊಂದಿಗೆ ಬೆಳಗಾವಿಯಿಂದ ವಾಪಸ್ಸಾಗುವ ವೇಳೆ ದರೋಡೆಕೋರರು ಅಡ್ಡಗಟ್ಟಿ ಹಣ ದೋಚಿದ್ದರು. ಆರೋಪಿತರಾದ ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಧರ ನಗರದ ಆಸಿಫ್ ಅಬ್ದುಲ್ ಸತ್ತಾರ (29), ಅಬ್ದುಲ್ ಸತ್ತಾರ (32), ಮನ್ಸೂರ್ ಅಲಿಯಾಸ್ ಮಹಮದ್ ಜಾಫರ್ ಖಾನ್ (31), ಸಿದ್ದಾಪುರ ತಾಲ್ಲೂಕು ನೆಜ್ಜೂರಿನ ಅಜಿಮುಲ್ಲಾ ಅನ್ಸರ್ ಸಾಬ್ (29), ಭಟ್ಕಳ ಬದ್ರಿಯಾ ಕಾಲೋನಿಯ ಅಬ್ದುಲ್ ರೆಹಮಾನ್ ವಟರಾಗ (30), ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಮೇಲಿನ‌ ಪೇಟೆಯ ರಿಯಾಜ್ ಫಯಾಜ್ (32), ಕೊಪ್ಪ ತಾಲ್ಲೂಕು ನೇತಾಜಿ ನಗರದವರಾದ ವಿಶ್ವನಾಥ ವಾಸು ಶೆಟ್ಟಿ (41), ಮನೋಹರ ಆನಂದ ಶೆಟ್ಟಿ (36), ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬಾಳೆಬೈಲ್‌ನ ಇಕ್ಬಾಲ್ ಅಬ್ದುಲ್ ಕೆ. (40) ಬಂಧಿತರು. ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಉದ್ಯಮಿ ಜಾವೇದ್ ಹಣಕಾಸು ವ್ಯವಹಾರ ಅರಿತಿದ್ದ ಆಸೀಫ್ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಭೂಮಿ ಖರೀದಿಗೆ ಬೆಳಗಾವಿಗೆ ತೆರಳುವುದನ್ನು ಅರಿತಿದ್ದರಿಂದ ವಾಹನಕ್ಕೆ ಜಿಪಿಎಸ್‌ ಟ್ರ್ಯಾಕರ್ ಅಳವಡಿಸಿದ್ದ. ನಿರಂತರವಾಗಿ ಟ್ರ್ಯಾಕರ್ ಮೂಲಕ ಚಲನವಲನ ಗಮನಿಸುತ್ತಿದ್ದ ಈತ ಸಹಚರರ ಜೊತೆ ಸೇರಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ್ದ ಎಂದು ತನಿಖೆಯ ನೇತೃತ್ವ ವಹಿಸಿದ್ದ ಡಿಎಸ್ಪಿ ರವಿ ನಾಯ್ಕ ಮಾಹಿತಿ ನೀಡಿದ್ದಾರೆ.

    ಪ್ರಕರಣ ಭೇದಿಸುವಲ್ಲಿ ಸಿಪಿಐ ರಾಮಚಂದ್ರ ನಾಯಕ, ಎಸ್ಐಗಳಾದ ಹನುಮಂತ ಬಿರಾದಾರ, ಭೀಮಾಶಂಕರ ಸಿನ್ನೂರು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ಮಾಡಿ ಪರಾರಿಯಾದ ಉದ್ಯಮಿ ಮಗ

    ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ಮಾಡಿ ಪರಾರಿಯಾದ ಉದ್ಯಮಿ ಮಗ

    ಹುಬ್ಬಳ್ಳಿ: ಸಿನಿಮಾ ಶೈಲಿಯಲ್ಲಿ ಹಿಟ್ ಆ್ಯಂಡ್ ರನ್ ಅಪಘಾತ ಹುಬ್ಬಳ್ಳಿಯಲ್ಲಿ (Hubballi)  ನಡೆದಿದ್ದು, ಅಪಘಾತ (Accident) ಮಾಡಿದ ಉದ್ಯಮಿ ಮಗನನ್ನು ಶಿಕ್ಷೆಯಿಂದ ಪಾರು ಮಾಡುವ ಹುನ್ನಾರ ನಡೆದಿರುವ ಆರೋಪ ಕೇಳಿ ಬರುತ್ತಿದೆ.

    ಗಣೇಶ್ ಬಡಿಗಣ್ಣವರ ಎಂಬಾತ ಅಪಘಾತದಲ್ಲಿ ಮೃತಪಟ್ಟ ಅಮಾಯಕ. ರವಿವಾರ ಮಧ್ಯರಾತ್ರಿ ನಗರದ ಸಿದ್ದೇಶ್ವರ ಸರ್ಕಲ್ ಬಳಿ ಹೋಂಡಾ ಆ್ಯಕ್ಟೀವಾ ವಾಹನದಲ್ಲಿ (Bike) ಗಣೇಶ್ ಮನೆಗೆ ತೆರಳುತ್ತಿದ್ದ. ಈ ವೇಳೆ ವಾಹನಕ್ಕೆ ವೇಗವಾಗಿ ಬಂದ ಕಾರ್ (Car) ಡಿಕ್ಕಿಯಾದ ಪರಿಣಾಮ ಗಣೇಶ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈ ಅಪಘಾತ ಮಾಡಿದ ವ್ಯಕ್ತಿ ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಿತ ಸ್ಟೀಲ್ ವ್ಯಾಪಾರಿ ಮಗ ಎನ್ನಲಾಗುತ್ತಿದೆ. ಪಾರ್ಟಿಯೊಂದಕ್ಕೆ ತೆರಳಿದ್ದ ಉದ್ಯಮಿ ಮಗ ಕುಡಿದ ಮತ್ತಿನಲ್ಲಿ ಈ ಅಪಘಾತ ಮಾಡಿದ್ದು, ಅಪಘಾತ ಬಳಿಕ ಉದ್ಯಮಿಯ ಮಗ ತನ್ನ ಚಾಲಕನಿಗೆ ಕಾರ್ ಕೊಟ್ಟು ಪರಾರಿಯಾಗಿದ್ದಾನೆ.

    ಮೃತ ಗಣೇಶ್ ಹುಬ್ಬಳ್ಳಿಯ ವಿದ್ಯಾನಗರ ಬನಶಂಕರಿ ಬಡವಾಣೆ ನಿವಾಸಿ. ಗಣೇಶ್ ಒಬ್ಬನೇ ಮಗ, ತಂದೆ ತೀರಿ ಹೋಗಿದ್ದು, ತಾಯಿಯನ್ನ ಈತನೇ ನೋಡಿಕೊಳ್ಳುತ್ತಿದ್ದ. ಜೀವನೋಪಾಯಕ್ಕಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್, ಕೆಲಸ ಮುಗಿಸಿ ಬರೋವಾಗ ಅಪಘಾತದಲ್ಲಿ ಮೃತನಾಗಿದ್ದಾನೆ. ಇದ್ದ ಒಬ್ಬನೇ ಮಗನನ್ನ ಕಳೆದುಕೊಂಡು ತಾಯಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು

    ಅಪಘಾತ ಮಾಡಿ ಉದ್ಯಮಿ ಮಗ ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಘಟನೆಗೆ ಸಂಬಂಧಿಸಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದು ಮೂರು ದಿನವಾದರೂ ಪೊಲೀಸರು ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಹೀಗಾಗಿ ಇಡೀ ಪ್ರಕರಣವನ್ನೆ ಪೊಲೀಸರು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಭೇಟಿ – ಪೊಲೀಸರಿಗೆ ವಾರ್ನಿಂಗ್ ನೀಡಿದ ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    ಕೋಲ್ಕತ್ತಾ: ಮೊಬೈಲ್ ಗೇಮಿಂಗ್ ಆ್ಯಪ್ ಮೂಲಕ ವಂಚನೆ ನಡೆಸಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ED) ಕೋಲ್ಕತ್ತಾ(kolkata)ದ ಉದ್ಯಮಿಯೊಬ್ಬರಿಗೆ ಸಂಬಂಧಪಟ್ಟ 6 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿತು. ಈ ವೇಳೆ 12 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ.

    ಇಡಿ ಅಧಿಕಾರಿಗಳ ತಂಡ ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಅಮೀರ್ ಖಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಈವರೆಗೆ ಉದ್ಯಮಿಯ ಮನೆಯಿಂದ 12 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ

    ಭಾರೀ ಮೊತ್ತದ ಹಣವನ್ನು ಎಣಿಕೆ ಮಾಡಲು ಯಂತ್ರಗಳನ್ನು ತರಿಸಲಾಗಿದೆ. ಹಣವನ್ನು ಸಾಗಿಸಲು ಉದ್ಯಮಿಯ ಮನೆಗೆ ಟ್ರಕ್‌ಗಳನ್ನು ತರಲಾಗಿದೆ. ಇಡಿ ದಾಳಿಯ ಹಿನ್ನೆಲೆ ಕೇಂದ್ರದ ಪಡೆಗಳಿಂದ ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಮಳೆ ಅವಾಂತರ: ಭಾರತ-ನ್ಯೂಜಿಲೆಂಡ್ ಟೆಸ್ಟ್ ಇನ್ನಿಂಗ್ಸ್ ರದ್ದು, ನಾಳೆ ಡ್ರಾ ಸಾಧ್ಯತೆ

    ವರದಿಗಳ ಪ್ರಕಾರ ಇ-ನಗ್ಗೆಟ್ಸ್(E-Nuggets) ಎಂಬ ಮೊಬೈಲ್ ಗೇಮಿಂಗ್ ಆ್ಯಪ್‌ನ ಬಳಕೆದಾರರಿಗೆ ವಂಚಿಸಿರುವ ಆರೋಪದ ಮೇಲೆ ಆರೋಪಿ ಅಮೀರ್ ಖಾನ್ ಮತ್ತು ಇತರರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದರು. ಈ ದೂರಿನ ಮೇರೆಗೆ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಯವಿಟ್ಟು ಬೆಂಗಳೂರನ್ನು ಕಾಪಾಡಿ- ಪ್ರಧಾನಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಮನವಿ

    ದಯವಿಟ್ಟು ಬೆಂಗಳೂರನ್ನು ಕಾಪಾಡಿ- ಪ್ರಧಾನಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಮನವಿ

    ಬೆಂಗಳೂರು: ಪ್ರಧಾನಿ ನರೆಂದ್ರ ಮೋದಿ ಅವರು ಕರ್ನಾಟಕಕ್ಕೆ ಬರುವ ಹಿನ್ನೆಲೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಹೇಳಿಕೊಂಡು, ದಯವಿಟ್ಟು ಬೆಂಗಳೂರನ್ನು ಕಾಪಾಡಿ ಎಂದು ಮೋದಿಗೆ ಟ್ವೀಟ್ ಮಾಡಿದ್ದಾರೆ.

    ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆ ಉದ್ಯಮಿ ಬೆಂಗಳೂರಿನ ಬಗ್ಗೆ ದೂರಿನ ಸರಮಾಲೆಯೇ ಮುಂದಿಟ್ಟಿದ್ದಾರೆ. ಮಳೆಗೆ ಕೆರೆಯಂತಾದ ಬೆಂಗಳೂರು. ಅತಿ ಹೆಚ್ಚು ಐಟಿಬಿಟಿ ಕಂಪನಿಗಳು ಇರುವ ಬೆಳ್ಳಂದೂರು, ಮಾರತ್ತಹಳ್ಳಿ, ಔಟರ್ ರಿಂಗ್ ರೋಡ್‌ನಲ್ಲಿ 2 ದಿನವಾದರೂ ಮಳೆ ನೀರು ತಗ್ಗಿಲ್ಲ. ಐಟಿಬಿಟಿಯಲ್ಲಿ ಕೃತಕ ನದಿಗಳು ಸೃಷ್ಟಿಯಾಗಿವೆ. ರಸ್ತೆಗಳು ಕಿತ್ತುಹೋಗಿದ್ದು, ರಾಜಕಾಲುವೆಯ ಹೂಳೆತ್ತದೇ ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಹವಾ

    ಬೆಂಗಳೂರಿನ ಬಗ್ಗೆ ದಯವಿಟ್ಟು ಗಮನಹರಿಸಿ ಪ್ರಧಾನಿಗಳೇ ಎಂದು ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಮೋದಿಗೆ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಮುಂದೆ ಆಟವಾಡುತ್ತಿದ್ದ ಮಗು ಕಿಡ್ನ್ಯಾಪ್ – ಕಾಡಿನೊಳಗೆ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

    ಮನೆ ಮುಂದೆ ಆಟವಾಡುತ್ತಿದ್ದ ಮಗು ಕಿಡ್ನ್ಯಾಪ್ – ಕಾಡಿನೊಳಗೆ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

    ಬೆಂಗಳೂರು: ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿಕೊಂಡು ಕ್ಷಣಾರ್ಧದಲ್ಲಿ ಎಸ್ಕೇಪ್ ಆದ ಘಟನೆ ನಗರದ ಹೊರವಲಯ ಬನ್ನೇರುಘಟ್ಟದ ಕಲ್ಕೆರೆ ಬಳಿ ನಡೆದಿದೆ.

    ಉದ್ಯಮಿ ಮಂಜುನಾಥ್ ರೆಡ್ಡಿ ಎಂಬವರ ಮಗಳು ಮನೆಯ ಮುಂಭಾಗ ಆಟವಾಡುತ್ತಿದ್ದ ವೇಳೆ ಏಕಾಏಕಿ ಬಂದ ದುಷ್ಕರ್ಮಿಗಳ ತಂಡ ಮಗುವನ್ನು ಎತ್ತಿಕೊಂಡು ಪರಾರಿಯಾಗಿದೆ. ಇತ್ತ ಮಗುವನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದ ವೇಳೆ ಮಗು ಕಿರುಚಾಡಿದೆ. ಕೂಡಲೇ ಸ್ಥಳೀಯರು ಮಗುವಿನ ಕಿರುಚಾಟ ಕೇಳಿ ವಾಹನದಲ್ಲಿ ತೆರಳುತ್ತಿದ್ದವರನ್ನು ಹಿಂಬಾಲಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗ ಐಟಿಬಿಪಿ ಶಿಬಿರದಿಂದ ಯೋಧರ ಎರಡು AK-47 ರೈಫಲ್ ಕಳವು – ವಿಶೇಷ ತಂಡದಿಂದ ತಲಾಶ್

    ಸ್ಥಳೀಯರು ಬೆನ್ನಟ್ಟುತ್ತಿದ್ದಂತೆ ಗಾಬರಿಗೊಂಡ ದುಷ್ಕರ್ಮಿಗಳು ಮಗುವನ್ನು ಕಾಡಿನೊಳಗೆ ಹೊತ್ತೊಯ್ದಿದ್ದಾರೆ. ಕಾಡಿನೊಳಗೆ ಸ್ಥಳೀಯರು ನುಗ್ಗುತ್ತಿದ್ದಂತೆ ಜನರನ್ನು ನೋಡಿ ಗಾಬರಿಗೊಂಡು ಮಗುವನ್ನು ಕಾಡಿನೊಳಗೆ ಬಿಟ್ಟು ಅಸಾಮಿಗಳು ಪರಾರಿಯಾಗಿದ್ದಾರೆ.

    ಮಂಜುನಾಥ ರೆಡ್ಡಿ ಇತ್ತೀಚೆಗೆ ಉದ್ಯಮದಲ್ಲಿ ಹೆಸರು ಮಾಡಿದ್ದರು. ಹಣದ ವಿಚಾರವಾಗಿ ಮಗುವನ್ನು ಕಿಡ್ನ್ಯಾಪ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ಪತ್ನಿ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದ ಪತಿ ವಿರುದ್ಧ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿಷ್ಠಿತ ಉದ್ಯಮಿ ಪುತ್ರಿಗೆ ವರದಕ್ಷಿಣೆ ಕಿರುಕುಳ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಉದ್ಯಮಿ ಪುತ್ರಿ ಸಂದೀಪ್ ಎಂಬಾತನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸಂದೀಪ್ ಆಗಾಗ ಮನೆಯಲ್ಲಿ ಸ್ನೇಹಿತರೊಂದಿಗೆ ಡ್ರಗ್ಸ್ ಪಾರ್ಟಿ ಮಾಡಿತ್ತಿರುತ್ತಾನೆ. ಬಳಿಕ ಗೆಳೆಯರ ಮುಂದೇಯೇ ಹಲ್ಲೆ ನಡೆಸಿ ಅಶ್ಲೀಲವಾಗಿ ಬೈಯುತ್ತಾನೆ. ಅಲ್ಲದೆ ತನ್ನ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ ಎಂದು ಪತ್ನಿ ತಿಳಿಸಿದ್ದಾರೆ.

    ದೂರು ನೀಡಿರುವಾಕೆಯ ತಂದೆ ತೆಲಂಗಾಣದಲ್ಲಿ ಪ್ರತಿಷ್ಠಿತ ಬಟ್ಟೆ ಕಂಪನಿ ಹೊಂದಿದ್ದಾರೆ. 2021ರ ಜನವರಿಯಲ್ಲಿ ರಾಮೋಜಿ ಫಿಲಂ ಸಿಟಿಯಲ್ಲಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಈ ವೇಳೆ 4 ಕೆಜಿ ಚಿನ್ನ, 200 ಕೆಜಿ ಬೆಳ್ಳಿ, 50 ಲಕ್ಷ ಹಣ, 55 ಲಕ್ಷದ ಮಿನಿಕೂಪರ್ ಕಾರು ವರದಕ್ಷಿಣೆ ನೀಡಿದ್ದರು. ಇದನ್ನೂ ಓದಿ: ದೇವನಹಳ್ಳಿಯಲ್ಲಿ ಒಂಟಿ ಮಹಿಳೆ ಕೊಲೆ – ಕತ್ತು ಕೊಯ್ದು ನಗದು ದೋಚಿದ್ದ ಕೆಲಸಗಾರನ ಬಂಧನ

    ಇಷ್ಟು ವರದಕ್ಷಿಣೆ ಕೊಟ್ಟಿದ್ರೂ ಸಂದೀಪ್‍ಗೆ ಹಣದಾಹ ನೀಗಿರಲಿಲ್ಲ. ಸಂದೀಪ್ ಹೆಸರಿಗೆ ತೆಲಂಗಾಣದಲ್ಲಿ 2 ಬಟ್ಟೆ ಶಾಪ್ ಮಾಡಿಕೊಡಲಾಗಿತ್ತು. ಇಷ್ಟೆಲ್ಲಾ ವರದಕ್ಷಿಣೆ ಕೊಟ್ಟರೂ ಪತಿ ಡ್ರಗ್ ಸೇವಿಸಿ ಪತ್ನಿಗೆ ಹಿಂಸೆ ನೀಡುತ್ತಿದ್ದನು. ಇದೀಗ ಪತಿಯ ಹಿಂಸೆ ತಾಳಲಾರದೆ ನೊಂದ ಪತ್ನಿ ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉದ್ಯಮಿ ಮನೆಯಲ್ಲಿ 1 ಗಂಟೆವರೆಗೆ ಪಟಾಕಿಗಳ ಸ್ಫೋಟ – 6 ಸಾವು, 8 ಮಂದಿಗೆ ಗಾಯ

    ಉದ್ಯಮಿ ಮನೆಯಲ್ಲಿ 1 ಗಂಟೆವರೆಗೆ ಪಟಾಕಿಗಳ ಸ್ಫೋಟ – 6 ಸಾವು, 8 ಮಂದಿಗೆ ಗಾಯ

    ಪಾಟ್ನಾ: ಪಟಾಕಿ ಸ್ಫೋಟಗೊಂಡ ಹಿನ್ನೆಲೆ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಖುದಾಯಿ ಬಾಗ್ ಗ್ರಾಮದಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದೆ.

    ನಗರದ ಉದ್ಯಮಿ ಶಬೀರ್ ಹುಸೇನ್ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಮನೆಯ ಒಂದು ಭಾಗ ಸ್ಫೋಟಗೊಂಡಿದ್ದು, ಉಳಿದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮನೆ ನದಿಯ ತಟದಲ್ಲಿದ್ದು, ಸ್ಫೋಟದಿಂದಾಗಿ ಮನೆಯ ಬಹುತೇಕ ಭಾಗ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗಿ ಭದ್ರತೆಯಲ್ಲಿ ನಡೆದ ಮೊದಲ ಅಗ್ನಿಪಥ್ ಏರ್‌ಫೋರ್ಸ್ ನೇಮಕಾತಿ ಪರೀಕ್ಷೆ

    ಭಾರೀ ಸಂಖ್ಯೆಯ ಪಟಾಕಿಗಳನ್ನು ಮನೆಯೊಳಗೆ ಇಡಲಾಗಿತ್ತು. ಅದು ಸ್ಫೋಟಿಸಲು ಪ್ರಾರಂಭವಾದಾಗಿನಿಂದ ಸುಮಾರು 1 ಗಂಟೆಯವರೆಗೆ ನಿರಂತರವಾಗಿ ಸಿಡಿದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮುಂದಿನ ಗುರಿ 90 ಮೀ. ಎಸೆತ – ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ: ನೀರಜ್ ಚೋಪ್ರಾ

    ಪಟಾಕಿ ಸಿಡಿದು ಮನೆ ಕುಸಿತವಾಗಿದ್ದರಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಗಾಯಗೊಂಡಿರುವ 8 ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಶರ್ಮಾ ಫೋಟೋ ಅಪ್ಲೋಡ್ ಮಾಡಿದ್ದ ಉದ್ಯಮಿಗೆ ಕೊಲೆ ಬೆದರಿಕೆ – ಮೂವರ ಬಂಧನ

    ನೂಪುರ್ ಶರ್ಮಾ ಫೋಟೋ ಅಪ್ಲೋಡ್ ಮಾಡಿದ್ದ ಉದ್ಯಮಿಗೆ ಕೊಲೆ ಬೆದರಿಕೆ – ಮೂವರ ಬಂಧನ

    ಗಾಂಧೀನಗರ: ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಸೂರತ್ ಮೂಲದ ಉದ್ಯಮಿಗೆ ಶುಕ್ರವಾರ ಕೆಲವು ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಬಂದಿದೆ. ಉದ್ಯಮಿಗೆ ಬೆದರಿಕೆ ಹಾಕಿದ್ದ ಮೂವರನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದರಿಂದ ಉದ್ಯಮಿಗೆ 7 ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬಂದಿವೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ವಿವಾದ – ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ

    ಸೂರತ್ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳು ಮೊಹಮ್ಮದ್ ಅಯಾನ್ ಅತಶ್ಬಾಜಿವಾಲಾ, ರಶೀದ್ ಭುರಾ ಹಾಗೂ ಮಹಿಳಾ ಆರೋಪಿ ಆಲಿಯಾ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಬಂಧಿತ ಎಲ್ಲಾ ಆರೋಪಿಗಳು ಸೂರತ್ ಮೂಲದವರಾಗಿದ್ದು, ಇನ್ನುಳಿದ ನಾಲ್ವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಗದ್ದಲಕ್ಕೆ ಕಾರಣರಾದರು. ನೂಪುರ್ ಅವರನ್ನು ಬೆಂಬಲಿಸಿದ್ದಕ್ಕೆ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆಯೂ ನಡೆಯಿತು. ಅಂದಿನಿಂದ ನೂಪುರ್ ಅವರನ್ನು ಬೆಂಬಲಿಸಿದ ಹಲವರಿಗೆ ಬೆದರಿಕೆ ಕರೆಗಳು ಬಂದಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಾಯಿ ಮಗ ಆತ್ಮಹತ್ಯೆ – ಟಿಆರ್‌ಎಸ್‌ನ 6 ಮುಖಂಡರು ಅರೆಸ್ಟ್

    ತಾಯಿ ಮಗ ಆತ್ಮಹತ್ಯೆ – ಟಿಆರ್‌ಎಸ್‌ನ 6 ಮುಖಂಡರು ಅರೆಸ್ಟ್

    ಹೈದರಾಬಾದ್: ತೆಲಂಗಾಣದ ಉದ್ಯಮಿ ಹಾಗೂ ಆತನ ತಾಯಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ 6 ಮುಖಂಡರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಟಿಆರ್‌ಎಸ್ ಮುಖಂಡರು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ಗಂಗಮ್ ಸಂತೋಷ್ ಹಾಗೂ ಅವರ ತಾಯಿ ಗಂಗಮ್ ಪದ್ಮಾ ಏಪ್ರಿಲ್ 16 ರಂದು ಕಾಮರೆಡ್ಡಿಯ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮೇ 9 ರಂದು ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಖಚಿತ: ಮುತಾಲಿಕ್ ಎಚ್ಚರಿಕೆ

    ಗಂಗಮ್ ಸಂತೋಷ್ ಆತ್ಮಹತ್ಯೆಗೂ ಮುನ್ನ ರಾಮಯಂಪೇಟೆ ಪುರಸಭೆ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ್, ಇತರ 5 ಟಿಆರ್‌ಎಸ್ ಮುಖಂಡರು ಸೇರಿದಂತೆ ಸರ್ಕಲ್ ಇನ್ಸ್ಪೆಕ್ಟರ್ ನಾಗಾರ್ಜುನ ರೆಡ್ಡಿ ಹೆಸರಿನೊಂದಿಗೆ ಫೊಟೋಗಳನ್ನು ತೋರಿಸಿ, ಚಿತ್ರಹಿಂಸೆ ನೀಡಿರುವುದಾಗಿ ಹೇಳಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಕೋವಿಡ್ ಉಲ್ಬಣದಿಂದ ದೆಹಲಿಯಲ್ಲಿ ಶಾಲೆಗಳು ಬಂದ್? – ತಜ್ಞರ ಸಮಿತಿಯ ಸಲಹೆಗಳೇನು?

    ಸಂತೋಷ್ ಹಾಗೂ ಅವರ ತಾಯಿ ಆತ್ಮಹತ್ಯೆ ವೇಳೆ ಡೆತ್ ನೋಟ್ ಕೂಡಾ ಬರೆದಿದ್ದು, ಇವರೆಲ್ಲರೂ ನನ್ನ ವ್ಯವಹಾರಗಳನ್ನು ಹಾಳು ಮಾಡಿ, ನನ್ನ ಜೀವನವನ್ನು ಕಷ್ಟಕರವಾಗಿಸಿದ್ದಾರೆ. ನಾನು ಸತ್ತ ಬಳಿಕವಾದರೂ ನ್ಯಾಯ ಸಿಗಲಿ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.